• Samvada
Thursday, August 18, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಹಾಸನದಲ್ಲಿ ಜೀತ ಪದ್ಧತಿಯಿಂದ ಮುಕ್ತರಾದ 50 ಕ್ಕೂ ಅಧಿಕ ಕಾರ್ಮಿಕರು

Vishwa Samvada Kendra by Vishwa Samvada Kendra
April 6, 2022
in News Digest
251
0
493
SHARES
1.4k
VIEWS
Share on FacebookShare on Twitter

21ನೆಯ ಶತಮಾನದಲ್ಲೂ ಕೂಡ ಐವತ್ತಕ್ಕೂ ಅಧಿಕ ಜನರನ್ನು ಕೂಲಿ ಕೆಲಸ ನೀಡುವುದಾಗಿ ಕರೆದುಕೊಂಡು ಹೋಗಿ ಜೀತ ಪದ್ಧತಿಯಂತೆ ಬಳಸಿಕೊಂಡಿರುವ ಅಮಾನವೀಯ ಕೃತ್ಯ ಹಾಸನದಲ್ಲಿ ನಡೆದಿದೆ.ನಿಜಕ್ಕೂ ಮಾನವೀಯ ಸಮಾಜ ತಲೆ ತಗ್ಗಿಸುವ ಘಟನೆಯಾಗಿದ್ದು ತಪ್ಪಿತಸ್ಥ ಮುನೇಶ್‌ನನ್ನು ಹಾಸನದ ಪೋಲೀಸರು ವಶಕ್ಕೆ ತೆಗೆದುಕೊಳ್ಳಲು ಬಲೆ ಬೀಸಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಸಮೀಪದಲ್ಲಿ ಈ ರೀತಿಯ ಪೀಡನೆ ನಡೆದಿದೆ. ಕೆಲಸ ಕೊಡಿಸುವ ಸುಳ್ಳು ಆಶ್ವಾಸನೆ ನೀಡಿ ನಿರ್ಗತಿಕ ಕಾರ್ಮಿಕರನ್ನು ಒಂದು ಶೆಡ್ ನಲ್ಲಿ ಕೂಡಿಹಾಕಿ ಅಗತ್ಯವಾದಷ್ಟು ಊಟ ತಿಂಡಿಯನ್ನು ನೀಡದೆ, ಮೂಲಭೂತ ಸೌಕರ್ಯ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿದ್ದ ಮುನೇಶ್ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ವಿಪರ್ಯಾಸವೆಂದರೆ ಈ ಕೃತ್ಯವನ್ನು ಎಸಗಿದ ಆರೋಪಿ ಎರಡು ವರ್ಷಗಳ ಹಿಂದೆಯೂ ಕೂಡ ಇದೇ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದ. ಆ ಸಂದರ್ಭದಲ್ಲೂ ಕೂಡ ಪೊಲೀಸರು ದಾಳಿ ನಡೆಸಿ ಅಮಾಯಕರನ್ನು ರಕ್ಷಣೆ ಮಾಡಿದ್ದರು. ಆಗಲೂ ಬಂಧಿತನಾಗಿದ್ದ ಮುನೇಶ್ ಕೆಲ ಸಮಯದ ನಂತರ ಜಾಮೀನು ಪಡೆದು ಹೊರಬಂದಿದ್ದ. ಆದರೆ ಹೊರಬಂದ ನಂತರ ಮತ್ತೆ ಇಂಥಹುದೇ ಕೃತ್ಯವನ್ನು ಎಸಗಿದ್ದಾನೆ.

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಅರಸೀಕೆರೆ ಡಿವೈಎಸ್ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸಿ ದಾಳಿ ನಡೆಸಿ ಅಮಾಯಕರನ್ನು ಜೀತದಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಪೊಲೀಸರು ಅಮಾಯಕರ ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು, ಹಾಸನ , ಶಿವಮೊಗ್ಗ , ಮಂಡ್ಯ ಸೇರಿದಂತೆ ಅನೇಕ ಕಡೆಗಳ ಕಾರ್ಮಿಕರು ಪೊಲೀಸರ ಈ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಿದ್ದಾರೆ.

ಬೆಳಗ್ಗೆ 5 ರಿಂದ ಕತ್ತಲಾಗುವವರೆಗೂ ಕಾರ್ಮಿಕರನ್ನು ಶುಂಠಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ ಮುನೇಶ್ ಮಿನಿ ಲಾರಿಯೊಳಗೆ ಕುರಿಮಂದೆಯಂತೆ ಜನರನ್ನು ತುಂಬಿಸಿಕೊಂಡು ಬಂದು ಕೆಲಸ ಮಾಡಿಸಿಕೊಳ್ಳುತ್ತಿದ್ದ.

“ಬೆಳಗ್ಗೆ ಅನ್ನಸಾಂಬಾರ್ ಮಾಡಿದ್ರೆ ಆಯ್ತು, ಅಷ್ಟೇ ಊಟ ಮಾಡಬೇಕಿತ್ತು, ಇಪ್ಪತ್ತು ದಿನ ಮೂರ್ನಾಲ್ಕು ಮಂದಿ ಸೇರಿ ಒಂದೇ ಸೋಪು ಬಳಸಬೇಕಿತ್ತು, ಶೆಡ್ ನಂತಿರೋ ಒಂದೇ ಶೌಚಾಲಯವನ್ನ ಎಲ್ಲರೂ ಬಳಸಬೇಕಿತ್ತು, ನಾವು ಊರಿಗೆ ಹೋಗ್ತೀವಿ ಅಂದ್ರೆ ಮನಸ್ಸೋ ಇಚ್ಚೆ ಥಳಿಸುತ್ತಿದ್ದ, ನೀರನ್ನೂ ಹೆಚ್ಚು ಬಳಸುವಂತಿರಲಿಲ್ಲ.” ಹೀಗೆ ಬಂಧಿಯಾಗಿದ್ದ ಕಾರ್ಮಿಕರು ನರಕಯಾತನೆಯನ್ನು ಅನುಭವಿಸುತ್ತಿದ್ದರು.ಅವರೆಲ್ಲಾ ಸ್ನಾನ ಮಾಡಿಯೇ ಎರಡು ತಿಂಗಳ ಮೇಲಾಗಿದೆ. ಜೀತವಿಮುಕ್ತರು ಅಲ್ಲಿ ನಡೆಯುತ್ತಿದ್ದ ಅಮಾನವೀಯ ಘಟನೆಯನ್ನ ಕಣ್ಣೀರಿಡ್ತಾ ಹೇಳಿಕೊಂಡಿದ್ದಾರೆ‌.

ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಕೆಲಸವನ್ನರಸಿ ನಿರ್ಗತಿಕರಾಗಿ ಕಾಣುವ ಕಾರ್ಮಿಕರು ಮುನೇಶ್‌ನ ಮುಖ್ಯ ಟಾರ್ಗೆಟ್. ಈ ರೀತಿ ಕಾಣುವ ವ್ಯಕ್ತಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅಲ್ಲಿಂದ ಶೆಡ್‌ಗೆ ಕರೆದುಕೊಂಡು ಬಂದು ಅವರನ್ನು ಬಂಧನದಲ್ಲಿರಿಸಿ ಬೇಕಾಬಿಟ್ಟಿಯಾಗಿ ಅವರಿಗೆ ಸಂಬಳ ನೀಡದೆ ಜೀತ ಪದ್ಧತಿಯಂತೆ ಕೆಲಸ ಮಾಡಿಸಿಕೊಳ್ಳುತ್ತಿದ್ದ.

ಈ ಹಿಂದೆಯೂ ಕೂಡ ಇದೇ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದು, ಪೊಲೀಸರ ಅತಿಥಿಯಾಗಿದ್ದವನು ಹೊರಬಂದ ನಂತರವೂ ಕೂಡ ಇದೇ ಕ್ರೌರ್ಯವನ್ನು ಮುಂದುವರಿಸಿ ಅಮಾಯಕರ ಜೀವನದ ಜೊತೆಗೆ ವ್ಯವಹರಿಸಿರುವುದು ಸಾರ್ವಜನಿಕ ವಲಯದಲ್ಲಿ, ಮುಖ್ಯವಾಗಿ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದೆ. ಈ ಕುರಿತು ಅಗತ್ಯ ಕಠಿಣ ಶಿಕ್ಷೆ ಗಳನ್ನು ಜಾರಿಗೊಳಿಸಿ ಈ ರೀತಿಯ ಕೃತ್ಯ ಎಸಗುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಸದ್ಯ ಮುನೇಶ್ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ. ಎಸ್ಪಿ ಶ್ರೀನಿವಾಸ್‌ಗೌಡ ಸೂಚನೆ ಮೇರೆಗೆ ಡಿವೈಎಸ್‌ಪಿ ಅಶೋಕ್, ಸರ್ಕಲ್ ಇನ್ಸಪೆಕ್ಟರ್ ವಸಂತ್ ಕುಮಾರ್‌ ಸಬ್ಇನ್ಸ್ ಪೆಕ್ಟರ್ ಲಕ್ಷ್ಮಣ್ ನೇತೃತ್ವದ ತಂಡ ದಾಳಿ ನಡೆಸಿದೆ.

  • email
  • facebook
  • twitter
  • google+
  • WhatsApp
Tags: bonded labourLabour lawsLabour welfaremigrant labourers plight

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post

ಗಡಿನಾಡ ಹೃದಯ ಬಡಿತದ ಮಿಡಿತವಾದ ಕವಿ ಶಾಂತರಸ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

Pejawar Swamiji visits Dalit colony- call for to stop Dalit religious conversion at Mysore

Pejawar Swamiji visits Dalit colony- call for to stop Dalit religious conversion at Mysore

August 28, 2010
Hindu Swayamsevak Sangh’s SANGH SHIKSHA VARG -2014 concludes in London

Hindu Swayamsevak Sangh’s SANGH SHIKSHA VARG -2014 concludes in London

August 6, 2014
Bharat Niti organised conclave on Good Governance and Social Media held at Bengaluru. Supported by #VSK-Karnataka

Bharat Niti organised conclave on Good Governance and Social Media held at Bengaluru. Supported by #VSK-Karnataka

March 28, 2017
ABVP protests against corruption, ‘Bandh’ observed in 2786 Colleges in Karnataka

ABVP protests against corruption, ‘Bandh’ observed in 2786 Colleges in Karnataka

September 4, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In