ಸ್ಟಾನ್ ಸ್ವಾಮಿಯನ್ನು ಹುತಾತ್ಮನೆಂದು ವೈಭವೀಕರಿಸಲು ಆತ ಮಹಾತ್ಮನಲ್ಲ ಮಾವೋವಾದಿ ಪಾದ್ರಿ ಸ್ಟಾನ್ ಸ್ವಾಮಿಯ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸಾವಿಗೆ ಸಂತಾಪ ವ್ಯಕ್ತಪಡಿಸುವುದು ಅಸಹಜವೇನಲ್ಲ. ಆದರೆ ಸಂತಾಪದ ನೆಪದಲ್ಲಿ ಭಾರತ ಭಂಜಕನೊಬ್ಬನನ್ನು ಹುತಾತ್ಮನನ್ನಾಗಿಸುವ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ. ಅಲ್ಲಲ್ಲಿ ಕಾಣಿಸುತ್ತಿರುವ ಕ್ಯಾಂಡಲ್ ಮಾರ್ಚ್ಗಳು, ಪೋಸ್ಟರ್‌ಗಳು, ಶ್ರದ್ಧಾಂಜಲಿ ಸಭೆಗಳ ಮೂಲಕ ಅಮಾಯಕರ ಸಾವಿನ ರೂವಾರಿಯನ್ನು ಮಹಾತ್ಮನನ್ನಾಗಿಸುವ ಸಂಚೊಂದು ಕ್ರಿಯಾಶೀಲವಾಗಿದೆ. ಭಾರತ ವಿರೋಧಿಗಳು ಆತನ ಸಾವನ್ನು ವೈಭವೀಕರಿಸುತ್ತಿದ್ದಾರೆ. ಕಾಂಗ್ರೇಸ್, ಕಮ್ಯುನಿಷ್ಠರು, ಸ್ವಘೋಷಿತ ಬುದ್ದಿಜೀವಿಗಳು, […]

ಹಲವು ದಶಕಗಳ ಬಳಿಕ ನಮ್ಮ ದೇಶದಲ್ಲಿ ಸಮಗ್ರ ಸ್ವರೂಪದ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ರೂಪುಗೊಂಡಿದೆ.ಈ ನೀತಿಯು ಭಾರತದ ಬಹುದಿನಗಳ ಬೇಡಿಕೆಯೂ ಆಗಿತ್ತು. ಈ ಹಿಂದೆ ಸರ್ಕಾರಗಳು ಅಂತಹ ಆಸಕ್ತಿಯನ್ನು ತೋರದೇ ಹೋದ ಕಾರಣದಿಂದ ನೀತಿಯನ್ನು ರೂಪಿಸಲಾಗಿರಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಈ ಕುರಿತು ತೋರಿದ ವಿಶೇಷ ಆಸಕ್ತಿಯಿಂದ ಇಂದು ಸಾಕಾರವಾಗಿದೆ. ಶಿಕ್ಷಣ ತಜ್ಞರು ವಿವಿಧ ಸ್ತರಗಳಲ್ಲಿ ಶಿಕ್ಷಣ ರಂಗದ ಎಲ್ಲಾ ಬಾಧ್ಯಸ್ಥರ ಜತೆಗೆ ನಿರಂತರ ಸಂವಹನ, ಮಾಹಿತಿ ವಿನಿಮಯ, […]

ಈಚೆಗೆ ನಿಧನರಾದ ಕವಿ ಸಿದ್ದಲಿಂಗಯ್ಯ ಅವರ ಕುರಿತು ಅನೇಕ ಸಾಹಿತಿಗಳು, ಸಂಘಸಂಸ್ಥೆಗಳು ನುಡಿನಮನ ಸಲ್ಲಿಸಿ ಅವರ ಕುರಿತು ಒಂದು ಚಿತ್ರಣವನ್ನು ಕಟ್ಟಿಕೊಟ್ಟಿವೆ. ಈ ಒಮ್ಮುಖದ  ಚಿತ್ರಣಕ್ಕಿಂತ ಭಿನ್ನವಾಗಿಯೂ ಅವರು ಬದುಕಿದ್ದರು ಅನ್ನುವುದು ಗಮನಿಸತಕ್ಕ ಸಂಗತಿಯೆನಿಸುತ್ತದೆ. ಅವರೇ ಅಲ್ಲಿಲ್ಲಿ ಪದೇಪದೇ ಹೇಳಿಕೊಂಡಿರುವ ಅವರ ಬಾಲ್ಯದ ಕೆಲವು ಪ್ರಸಂಗಗಳನ್ನು ಈ ನಿಟ್ಟಿನಲ್ಲಿ ಇಲ್ಲಿ ಉಲ್ಲೇಖಿಸಬಹುದು. ಮೊದಲೆರಡು ಅನುಭವಗಳು ಆಗ ಅವರಿಗಿನ್ನೂ ನಾಲ್ಕರ ವಯಸ್ಸು. ಮಾಗಡಿಯ ಸಮೀಪದ ಹಳ್ಳಿಯ ಅವರ ಮನೆಯ ಪಕ್ಕದಲ್ಲಿ ಇದ್ದ […]

ಶಿವಾಜಿ ಮಹಾರಾಜರ ಜನನ ಹಾಗೂ ಅವರು ಶೂನ್ಯದಿಂದ ಪ್ರಾರಂಭಿಸಿ ಆಕ್ರಮಣಕಾರಿಗಳ ಅಹಂಕಾರಕ್ಕೆ ಕೊಳ್ಳಿಯಿಟ್ಟು ಹಿಂದವಿ ಸ್ವರಾಜ್ಯ ವನ್ನು ಕಟ್ಟಿ ಬೆಳೆಸಿದ ರೀತಿಯನ್ನು ಇತಿಹಾಸಕಾರರು ‘ಯುಗಾವತಾರ’ ಎಂದೇ ದಾಖಲಿಸಿದರು. ಅವರ ಕಾಲಾನಂತರ ಸುಮಾರು ಇನ್ನೂರ ಹತ್ತು ವರ್ಷಗಳ ನಂತರ ಜನಿಸಿದ ಡಾಕ್ಟರ್ ಕೇಶವ ಬಲಿರಾಮ ಹೆಡಗೆವಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು. ಇವರನ್ನು ‘ಯುಗಪುರುಷ’ ಅಂತ ಕರೆದರು. ಈ ಇಬ್ಬರು ಮಹಾಪುರುಷರು ನಡೆದ ದಾರಿ, ಅವರಿಬ್ಬರ ಗುರಿ ಮತ್ತು ಕಾರ್ಯಶೈಲಿ ಇವುಗಳಲ್ಲಿ […]

ಕರ್ನಾಟಕದ ದಲಿತ ಚಳುವಳಿಯ ಮೊದಲ ಸಾಲಿನ ನಾಯಕರಾಗಿದ್ದ, ಒಳ್ಳೆಯ ಕವಿ, ಲೇಖಕರಾಗಿದ್ದ ಅದೆಲ್ಲಕ್ಕೂ ಮಿಗಿಲಾಗಿ ಹಲವು ವಿಚಾರಧಾರೆಯ ಸಾವಿರಾರು ಕಾರ್ಯಕರ್ತರಿಗೆ ಆತ್ಮೀಯ ಗೆಳೆಯರಾಗಿದ್ದವರು ಡಾ ಸಿದ್ಧಲಿಂಗಯ್ಯ . ವಿದ್ಯಾರ್ಥಿ ದೆಸೆಯಲ್ಲೇ ಮಾರ್ಕ್ಸ್ , ಅಂಬೇಡ್ಕರ್ ಪ್ರಭಾವ ಅವರನ್ನು ಆವರಿಸಿತ್ತು. ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಬಂದಾಗ ಅವರಿನ್ನೂ ಕನ್ನಡ ಎಂ.ಎ ವಿದ್ಯಾರ್ಥಿ. ಅವರ ಹಾಡುಗಳೆ ಹೋರಾಟಕ್ಕೆ ಸಾವಿರಾರು ಯುವಜನರನ್ನು ಸೆಳೆದಿದ್ದವು . ಕೇವಲ ದಲಿತ ಹೋರಾಟವಷ್ಟೆ ಅಲ್ಲ, […]

ಭಾರತೀಯ ವಿಜ್ಞಾನ-ತಂತ್ರಜ್ಞಾನದ ಅಮೋಘ ಸಾಧನೆಗೆ ಬೆಳಕು ಹಿಡಿದ ಸಂಶೋಧನೆ. ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಗಾಗುವ ಪೂರ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆ ಏನು? ಎಂಬ ಪ್ರಶ್ನೆ ಕೆಲವರಿಗೆ ಕುತೂಹಲವಾಗಿ ಕಾಣಬಹುದು. ಅಷ್ಟಕ್ಕೂ 18ನೇ ಶತಮಾನದ ಭಾರತದಲ್ಲಿ ವಿಜ್ಞಾನವಾಗಲೀ ತಂತ್ರಜ್ಞಾನವಾಗಲೀ ಇದ್ದಿತೇ? ಎನ್ನುವ ಕುಹಕದ ಪ್ರಶ್ನೆಯೂ ಕೆಲವರಲ್ಲಿ ಹುಟ್ಟಬಹುದು. ಯಾಕೆಂದರೆ ನಾವು ಬಹುಕಾಲದಿಂದ ಭಾರತದ ಬಗೆಗೆ ನಕಾರಾತ್ಮಕವಾದ ಚಿತ್ರಣಗಳನ್ನು ನೀಡುವ ಚರಿತ್ರೆಯನ್ನೇ ಓದಿಕೊಂಡು ಬಂದಿದ್ದೇವೆ. ಅದರಲ್ಲೂ ಬ್ರಿಟಿಷರು ತಮ್ಮ […]

ಪಶ್ಚಿಮ ಬಂಗಾಳದಲ್ಲಿ ಗೆಲುವಿನಿಂದ ದೂರ ಉಳಿದ ಬಿಜೆಪಿ ಅಸ್ಸಾಂನಲ್ಲಿ ಸತತ ಎರಡನೇ ಸಲ ಗೆದ್ದದ್ದು ‘ ಮತ ಧ್ರುವಿಕರಣ’ ದ ಹಿನ್ನೆಲೆಯಲ್ಲಿ ಗಮನ ಸೆಳದಿದೆ . ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಜನಸಂಖ್ಯೆ ಪ್ರಮಾಣ ಶೇ 70.54 , ಮುಸ್ಲಿಮರದ್ದು ಶೇ 27.1. ಅದೇ ಅಸ್ಸಾಂನಲ್ಲಿ ಹಿಂದುಗಳು ಶೇ 61.47, ಮುಸ್ಲಿಮರು ಶೇ. 34.22. ಕೇವಲ ಹಿಂದುಗಳನ್ನಷ್ಟೆ ಕೇಂದ್ರೀಕರಿಸುತ್ತದೆ ಎನ್ನಲಾಗುವ ಬಿಜೆಪಿಗೆ ಅಸ್ಸಾಂ ಮತ್ತೂ ಕಠಿಣವಾಗಬೇಕಿತ್ತಲವೇ ? ಆದರೆ ಹಾಗೇಕೆ ಆಗಲಿಲ್ಲ […]

ಸಿನಿಮಾ ವಿಮರ್ಶೆ: ಮಹೇಂದ್ರ ಡಿ., ಅಧ್ಯಕ್ಷ – ಕರ್ನಾಟಕ ಲಲಿತಕಲಾ ಅಕಾಡೆಮಿ ಕರ್ಣನ್‌ ಇತ್ತೀಚಿನ ದಲಿತ ಒಡಲಳಾದ ದನಿ ಭೋರ್ಗರಿಸುವ ದೃಶ್ಯರೂಪಕದ ಚಲನಚಿತ್ರವಾಗಿದೆ. ಇದೊಂದು ತಮಿಳುನಾಡಿನ ಗ್ರಾಮವೊಂದರ ನೈಜ ಘಟನೆಯನ್ನು ಆಧಾರಿಸಿದ್ದು ಅಂತ ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಪ್ರಧಾನ ಅಂಶವೇ ಈ ವಿಷಯವಾಗಿದ್ದರೆ ಅದರ ಆಶಯವು ಸ್ವಲ್ಪ ನಮ್ಮನ್ನು ಚಿಂತನೆಯ ಒರೆಗೆ ಹಚ್ಚುತ್ತವೆ. ನಮ್ಮ ದೇಶದಲ್ಲಿ ದಲಿತರ ಮೇಲಿನ ದಬ್ಬಾಳಿಕೆ, ಆಕ್ರಮಣಗಳು ನಿರಂತರವಾಗಿ ನಡೆದುಕೊಂಡು ಬಂದಿದೆ. ಹಾಗೆ ಇನ್ನೊಂದೆಡೆ ಬಹು […]

ಕೊರೊನಾಗೆ ಕಡೆಗೊಂದು ಔಷಧಿ ಬಂದಿದೆ.  ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವೈದ್ಯವಿಜ್ಞಾನಿಗಳು (ಡಿಆರ್‌ಡಿಒ) ಕೊರೊನಾವನ್ನು ಕಟ್ಟಿಹಾಕಲು 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ)ಯನ್ನು ಕಂಡುಹಿಡಿದಿದ್ದಾರೆ. ಈ ಔಷಧವನ್ನು ಮೇ 17ರಂದು ಅಧಿಕೃತವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಿಡುಗಡೆಮಾಡಿದ್ದಾರೆ.  ಈ ಔಷಧಿಯ ಅಭಿವೃದ್ಧಿಯಲ್ಲಿ ಡಿಆರ್​ಡಿಒ ಗೆ ಸಹಯೋಗ ನೀಡಿದ್ದ ಡಾ.ರೆಡ್ಡಿಸ್ ಲ್ಯಾಬ್​ ಇದನ್ನು ಮಾರುಕಟ್ಟೆಗೆ ತಂದಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿಯೂ ಇದು […]