ಕೊರೊನಾಗೆ ಕಡೆಗೊಂದು ಔಷಧಿ ಬಂದಿದೆ.  ಭದ್ರತಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವೈದ್ಯವಿಜ್ಞಾನಿಗಳು (ಡಿಆರ್‌ಡಿಒ) ಕೊರೊನಾವನ್ನು ಕಟ್ಟಿಹಾಕಲು 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ)ಯನ್ನು ಕಂಡುಹಿಡಿದಿದ್ದಾರೆ. ಈ ಔಷಧವನ್ನು ಮೇ 17ರಂದು ಅಧಿಕೃತವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಬಿಡುಗಡೆಮಾಡಿದ್ದಾರೆ.  ಈ ಔಷಧಿಯ ಅಭಿವೃದ್ಧಿಯಲ್ಲಿ ಡಿಆರ್​ಡಿಒ ಗೆ ಸಹಯೋಗ ನೀಡಿದ್ದ ಡಾ.ರೆಡ್ಡಿಸ್ ಲ್ಯಾಬ್​ ಇದನ್ನು ಮಾರುಕಟ್ಟೆಗೆ ತಂದಿದೆ. ಎರಡು ಮತ್ತು ಮೂರನೇ ಹಂತದ ಪ್ರಯೋಗಗಳಲ್ಲಿಯೂ ಇದು […]

ಇಂದು ಬೆಳಗ್ಗೆ ಬೆಂಗಳೂರಿನ ಜನ ಆಕಾಶದಲ್ಲಿ ವಿಚಿತ್ರ ಸಂಗತಿಯೊಂದನ್ನು ಗಮನಿಸಿದರು. ಇಂತಹದ್ದೇ ಘಟನೆ 2018ರ ಸೆಪ್ಟೆಂಬರ್ 24ರ ಮಧ್ಯಾಹ್ನ 1ರ ಹೊತ್ತಿಗೆ ಶಿವಮೊಗ್ಗದಲ್ಲಿಯೂ ಕಂಡುಬಂದಿತ್ತು. ಅದೇನೆಂದರೆ ಆಕಾಶದಲ್ಲಿ ಸೂರ್ಯನ ಸುತ್ತ ಒಂದು ದೊಡ್ಡ ಬೆಳಕಿನ ವೃತ್ತ ಬರೆಯಲ್ಪಟ್ಟಿತ್ತು. ದೊಡ್ಡದೆಂದರೆ ನಿಜಕ್ಕೂ ದೊಡ್ಡದೇ. ಒಕ್ಕಣ್ಣಿನಲ್ಲಿ ನೋಡಿದರೆ, ಸೂರ್ಯನ ಮೇಲೆ ಹೆಬ್ಬೆರಳಿಟ್ಟು ಅಂಗೈ ಬಿಡಿಸಿದರೆ ಆ ವೃತ್ತದ ಅಂಚನ್ನು ಮುಟ್ಟಲು ಕಿರುಬೆರಳನ್ನು ನೀಳವಾಗಿ ಅಗಲಿಸಬೇಕಿತ್ತು, ಅಷ್ಟು ದೊಡ್ಡದು. ಸೂಕ್ಷ್ಮವಾಗಿ ಗಮನಿಸಿದರೆ ಆ ಬಳೆಯ […]

ಜಗತ್ತನ್ನು ಆವರಿಸಿರುವ ಕಾರ್ಮುಗಿಲಿನ ಅಂಚಿನಲ್ಲೊಂದು ಭರವಸೆಯ ಬೆಳಕು ಮೂಡಿದೆ. ಕೊರೊನಾದಿಂದ ಜನ ತತ್ತರಿಸುತ್ತಿರುವ ಈ ಹಂತದಲ್ಲಿ ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಪರಿಣಿತ ವಿಜ್ಞಾನಿಗಳು ಕೊರೊನಾ ನಿರ್ಮೂಲನೆಗೆಂದು ಔಷಧಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ ಮೂಲಕ ಶಸ್ತ್ರಾಸ್ತ್ರಗಳ ತಂತ್ರಜ್ಞಾನ ಮಾತ್ರವಲ್ಲ ಅವಶ್ಯಕ ಸಂದರ್ಭಗಳಲ್ಲಿ ಆರೋಗ್ಯ ರಕ್ಷಣೆಗೆ ಅಗತ್ಯವಿರುವ ಸಂಶೋಧನೆಯನ್ನೂ ನಾವು ಯಶಸ್ವಿಯಾಗಿ ಮಾಡುತ್ತೇವೆ ಎಂಬುದನ್ನು ಇಲ್ಲಿನ ವಿಜ್ಞಾನಿಗಳು ತಿಳಿಸಿದಂತಾಗಿದೆ. ಈಗಾಗಲೇ ತಾನು ತೇಜಸ್‌ ಲಘು ಯುದ್ಧವಿಮಾನದಲ್ಲಿ ಬಳಸಿದ್ದ […]

ವಿಶ್ವಾದ್ಯಂತ ಮತ್ತು‌ವಿಶೇಷವಾಗಿ ಭಾರತದಲ್ಲೂ ಕೊರೊನಾ‌ ಮಹಾಮಾರಿ ಭೀಕರವಾಗಿ ವ್ಯಾಪಿಸಿ ಮಹಾವಿಪತ್ತನ್ನು ಎದುರಿಸುವಂತಾಗಿದೆ. ಸಹಸ್ರಾರು ಜನ ಈಗಾಗಲೇ ಈ ವ್ಯಾಧಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿರುವುದು ಮತ್ತು ಕೋಟ್ಯಂತರ ಜನ ಈ ವಿಪತ್ತಿನಿಂದ ಸಂಕಷ್ಟವನ್ನು ಎದುರಿಸುವಂತಾಗಿರುವುದು ತೀರಾ ವಿಷಾದನೀಯ . ವಿಶ್ವಾದ್ಯಂತ ಅನೇಕ ದೇಶಗಳು, ನಮ್ಮಲ್ಲೂ ಕೇಂದ್ರ ಸರಕಾರ ಹಾಗೂ ಎಲ್ಲಾ ರಾಜ್ಯ ಸರಕಾರಗಳು, ವಿಜ್ಞಾನಿಗಳು, ವೈದ್ಯರು, ನೂರಾರು ಸಮಾಜ ಸೇವಾ ಸಂಘ ಸಂಸ್ಥೆಗಳು ಕೊರೊನಾ ವಿರುದ್ಧ ನಿಶಿಹಗಲು ಸಮರಸಾರಿ ಅದನ್ನು ಹಿಮ್ಮೆಟ್ಟಿಸಲು ಹೋರಾಟ […]

ಕೊರೋನಾ ವೈರಾಣುವು ಎರಡನೇ ಅಲೆಯಲ್ಲಿ ತನ್ನ ಭೀಕರತೆಯನ್ನು ಹೆಚ್ಚಾಗಿಸಿದೆ. ಸೋಂಕು ಪೀಡಿತರ ಮರಣದ ಸಂಖ್ಯೆಯೂ ಹೆಚ್ಚಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆಕ್ಸಿಜನ್‌ ಕೊರತೆ, ವೆಂಟಿಲೇಟರ್‌ ಕೊರತೆ, ಐಸಿಯು ಬೆಡ್‌ಗಳ ಕೊರತೆ ಕಂಡು ಬರುತ್ತಿದೆ. ಕೊರತೆಯೆಂಬುದು ಭ್ರಷ್ಟರು ಮಾಡಿದ ಕೃತಕ ಸೃಷ್ಟಿಯೋ ಅಥವಾ ನಿಜವೋ ಹೇಗೆ ಆಗಿದ್ದರೂ ಜನಸಾಮಾನ್ಯರಂತೂ ಸೂಕ್ತ ಚಿಕಿತ್ಸೆಗೆಂದು ಒದ್ದಾಡುತ್ತಿದ್ದಾರೆ.  ಒಂದು ವೇಳೆ ಸಂಪನ್ಮೂಲದಲ್ಲಿ ಕೊರತೆ ಇಲ್ಲ ಎಂದಾದರೆ ಅವುಗಳ ನಿರ್ವಹಣೆಯಲ್ಲಿ, ಸಂವಹನದಲ್ಲಿ ಕೊರತೆ ಇದೆಯೆಂಬುದು ಎದ್ದು ಕಾಣುವ ಸಂಗತಿ. […]

Kannada Article by Sri Ravindra Deshmukh, Vijayavani kannada daily is translated to English by Sri Shambu NashipudiWe are in the midst of difficult times, the corona pandemic has exposed the limitations of human ability to deal with difficult situations. The increasing number of infected people and the deaths along with the […]

ಕೊರೊನಾ ರೆಸ್ಪಾನ್ಸ್‌ ಟೀಮ್‌ ಆಶ್ರಯದಲ್ಲಿ “ಪಾಸಿಟಿವಿಟಿ ಅನ್‌ಲಿಮಿಟೆಡ್‌ – ನಾವು ಗೆದ್ದೇ ಗೆಲ್ಲುತ್ತೇವೆ” ಎನ್ನುವ ಶೀರ್ಷಿಕೆಯಲ್ಲಿ ನಡೆಯುತ್ತಿರುವ ಉಪನ್ಯಾಸ ಮಾಲಿಕೆಯ ಐದನೆಯ ಹಾಗೂ ಕೊನೆಯ ಕಂತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನ್‌ ಭಾಗವತ್‌ ಅವರು ಉಪನ್ಯಾಸ ನೀಡಿದರು ಡಾ ಮೋಹನ್‌ ಭಾಗವತ್‌ ಅವರ ಉಪನ್ಯಾಸದ ಕನ್ನಡ ಅನುವಾದ ಹೀಗಿದೆ ಸಕಾರಾತ್ಮಕತೆಯ ಕುರಿತು ಮಾತನಾಡಲು ನನಗೆ ತಿಳಿಸಲಾಗಿದೆ. ಕಠಿಣ ಕಾರ್ಯ, ಏಕೆಂದರೆ ಈಗ ಸಂಕಷ್ಟದ ಸಮಯ ನಡಯುತ್ತಿದೆ. ಅನೇಕ […]