ಮಹಾತ್ಮ ಗಾಂಧಿಯವರ ಬಹುಮುಖ್ಯ ಕನಸು ಗ್ರಾಮ ಸ್ವರಾಜ್ಯ. ಅಂದರೆ, ಸ್ವಾವಲಂಬಿಯಾದ, ತನ್ನ ಬೇಕುಬೇಡಗಳನ್ನು ತಾನೇ ನಿರ್ಧರಿಸುವ, ತನ್ನ ಆಡಳಿತವನ್ನು ತಾನೇ ನಡೆಸುವ, ತನಗೆ ಬೇಕಾದ್ದನ್ನು ತಾನೇ ಬೆಳೆಯುವ ಉತ್ಪಾದಿಸುವ ಗ್ರಾಮ. ಇದೇನೂ ಭಾರತಕ್ಕೆ ಹೊಸತಲ್ಲ. ಪ್ರಾಚೀನ ಕಾಲದಿಂದಲೂ ನಮ್ಮ ಗ್ರಾಮಗಳು ಇದ್ದಿದ್ದೇ ಹಾಗೆ. ಆದರೆ, ಬ್ರಿಟಿಷರ ಆಡಳಿತ ಭಾರತದಲ್ಲಿ ಪ್ರಾರಂಭವಾದ ಮೇಲೆ, ಸ್ಥಳೀಯವಾಗಿ ಸಂಗ್ರಹವಾಗಿ ಸ್ಥಳೀಯವಾಗಿಯೇ ವಿನಿಯೋಗವಾಗುತ್ತಿದ್ದ ತೆರಿಗೆಯೆಲ್ಲವೂ, ಬ್ರಿಟಿಷ್ ಸರ್ಕಾರಕ್ಕೆ ಮೊದಲು ಪಾವತಿಯಾಗಿ ಅಲ್ಲಿಂದ ಅನುದಾನರೂಪದಲ್ಲಿ ನಗರ, ಗ್ರಾಮಗಳಿಗೆ […]

ಚುನಾವಣೆ ಎದುರಾಗುತ್ತಿರುವ ಪಶ್ಚಿಮ ಬಂಗಾಳದಲ್ಲಿ ಏಳುತ್ತಿರುವ ರಾಜಕೀಯ ಗಾಳಿ– ದೂಳಿನಲ್ಲಿ ಸಾಮಾಜಿಕ ತರಂಗಗಳಿವೆಯೇ? ವಾದಿರಾಜ್ ಜಾತಿ ಆಧಾರಿತ ಸಾಮಾಜಿಕ ತಲ್ಲಣಗಳಿಂದ ದೂರವಿರುವ ಪಶ್ಚಿಮ ಬಂಗಾಳದಲ್ಲಿ ಜಾತಿ ಲೆಕ್ಕಾಚಾರಗಳು ಅಪ್ರಸ್ತುತ. ಇದರಲ್ಲಿ ಸ್ವಾತಂತ್ರ್ಯಪೂರ್ವದ ಸಮಾಜ ಸುಧಾರಕರದ್ದು, ಕಮ್ಯುನಿಸ್ಟ್‌ ಆಳ್ವಿಕೆಯಲ್ಲಿ ನಡೆದ ಭೂ ಹಂಚಿಕೆಯದ್ದು ದೊಡ್ಡ ಪಾತ್ರ. ಮಂಡಲ್ ಚಳವಳಿಯ ಬಿಸಿಯೂ ಪಶ್ಚಿಮ ಬಂಗಾಳಕ್ಕೆ ತಟ್ಟಲಿಲ್ಲ. ಹಾಗಾಗಿಯೇ, ಅಂದು ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ‘ಭೂ ಸುಧಾರಣೆ ಕಾಯ್ದೆಯ ಪರಿಣಾಮಕಾರಿ ಜಾರಿಯ ನಂತರ ರಾಜ್ಯದಲ್ಲಿ ಜಾತಿ […]

ಲೇಖಕರು :ಕೆ. ವೆಂಕಟಾಚಲಯ್ಯ ಅವರು ಭಾರತೀಯ ಗಣಿತಶಾಸ್ತ್ರ ಸಂಘದ ಅಧ್ಯಕ್ಷರಾಗಿದ್ದರು. ಶ್ರೀನಿವಾಸ ರಾಮಾನುಜರವರು ಇಂಗ್ಲೆಂಡ್ ದೇಶದಲ್ಲಿದ್ದದ್ದು ಐದು ವರ್ಷಗಳ ಕಾಲ (1914-1919). ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಎಚ್. ಹಾರ್ಡಿ(G.H. Hardy)ಯವರ ಕೋರಿಕೆಯನ್ನನುಸರಿಸಿ ಮದ್ರಾಸ್ ವಿಶ್ವವಿದ್ಯಾನಿಲಯ ರಾಮಾನುಜರವರಿಗೆ ಸಂಶೋಧನವೇತನ ನೀಡಿತ್ತು. ರಾಮಾನುಜರ ಪರಿಶೋಧನೆಗಳಲ್ಲಿ ಕೆಲವು ಆ ಕಾಲದಲ್ಲಿ ಪ್ರಕಟಗೊಂಡವು; ಕೆಲವು ಪ್ರಕಟನೆಗಳು ಹಾರ್ಡಿಯವರೊಡನೆ ಕಲೆತು ಮಾಡಿದವು. ಈ ಪ್ರಕಟನೆಗಳ ಸಂಕಲನಗ್ರಂಥವು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ 1927ರಲ್ಲಿ ಪ್ರಚುರಗೊಂಡಿತು. ಇದು ಅವರ ಸಂಶೋಧನೆಗಳ ಅತ್ಯಲ್ಪ […]

ಕ್ರಿ.ಶ. 1590  ಮತ್ತು 1812ರ ನಡುವೆ ಗೋವಾದಲ್ಲಿ ಕ್ರೈಸ್ತರು ನಡೆಸಿದ ತಣ್ಣನೆಯ ಕ್ರೌರ್ಯದ ಚಿತ್ರಣ ಅಂದಿನ ಸಾಮಾಜಿಕ ಸನ್ನಿವೇಶವನ್ನು ಲೇಖಕ ಟಿ.ಎ.ಪಿ. ಶೆಣೈ ಅವರು ಈ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ. ಪುಸ್ತಕ ಪರಿಚಯ: ಉಮೇಶ್ ಕುಮಾರ್ ಶಿಮ್ಲಡ್ಕ, ಪತ್ರಕರ್ತ ಸಾಮಾಜಿಕ, ರಾಜಕೀಯ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಸೂಕ್ಷ್ಮಜೀವಿಗಳ ಮನಸ್ಸಿಗೆ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅವರಲ್ಲಿ ಅನೇಕರು ಅವುಗಳ ದಾಖಲೀಕರಣದ ಕೆಲಸವನ್ನೂ ಮಾಡುತ್ತ ಸಾಗಿದ್ದಾರೆ ಕೂಡ. ಇಂತಹ ದಾಖಲೆಗಳೇ ಮುಂದಿನ […]

ಇತ್ತೀಚೆಗೆ ನಡೆದ ಹೈದರಾಬಾದ್ ಮಹಾನಗರ ಪಾಲಿಕೆ ದೇಶದಾದ್ಯಂತ ಹಲವು ವಿಷಯಗಳಿಗಾಗಿ ಚರ್ಚೆಯಾಯಿತು. ಇದರಲ್ಲಿ ಬಹುಮಖ್ಯ ವಿಷಯಗಳಲ್ಲೊಂದು ಭಾಗ್ಯನಗರ ಎಂದು ಮರುನಾಮಕರಣದ ವಿಷಯ. ಯುವಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿಸೂರ್ಯರ ಟ್ವೀಟ್ ನಿಂದ ಪ್ರಾರಂಭವಾದ ಚರ್ಚೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೈದರಾಬಾದ್‌ನ್ನು ಭಾಗ್ಯನಗರ ಹೆಸರು ಬದಲಾಯಿಸುವುದಾಗಿ ಬಹಿರಂಗವಾಗಿ ಹೇಳುವ ಮೂಲಕ ಚರ್ಚೆ ಮುನ್ನೆಲೆಗೆ ಕಾರಣವಾಯಿತು. ನಮ್ಮ ಜಾತ್ಯತೀತವಾದಿ-ಇಸ್ಲಾಮಿಸ್ಟ್ ಇತಿಹಾಸಕಾರರು, ಮಾಧ್ಯಮಗಳು ಹೈದರಾಬಾದಿನ ಹಿಂದೂ ಇತಿಹಾಸ ಮತ್ತು ಪರಂಪರೆಯನ್ನು […]

‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ ಎಂಬುದು ನಮ್ಮ ಕಡೆಯ ಹಾಗೂ ಮಹತ್ವದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು, ವಿ ಎಸ್ ಕೆ ತಂಡ ಹೀಗೆ ವಿಶ್ಲೇಷಿಸುತ್ತಾರೆ. ಶೇಕಡಾ 92 ಮಂದಿ ‘ಹೌದು’ ಎಂದು ಉತ್ತರಿಸಿದ್ದಾರೆ. ಶೇಕಡಾ 8ರಷ್ಟು ಕೆಲವೇ ಕೆಲವು ಜನ ‘ಇಲ್ಲ’ ಎಂದಿದ್ದಾರೆ. ‘ಇಲ್ಲ’ ಎನ್ನುವವರಲ್ಲೂ ಕೂಡ ‘ಕಡ್ಡಾಯ’ಕ್ಕೆ ಇಲ್ಲ ಎಂದು ಹೇಳಿರಬಹುದೇ ಹೊರತು, […]

ಚಲನಚಿತ್ರ ಹಾಗೂ ಸಂಬಂಧಿತ ವಿಷಯಗಳಿಗೆ ಕೇಳಲಾದ ಪ್ರಶ್ನೆಗಳಿಗೆ ಮತಚಲಾವಣೆಯಾದ ಆಯ್ಕೆಗಳಿಗೆ ಶ್ರೀ ಶ್ರೀರಾಜ ಗುಡಿ, ಮಣಿಪಾಲದ ಸಂವಹನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು ಇವರು ಮಾಡಿರುವ ವಿಶ್ಲೇಷಣೆ ಕನ್ನಡ ಚಲನಚಿತ್ರ ಕುರಿತು ಮಾಧ್ಯಮದಲ್ಲಿ ವಿಸ್ತ್ರತವಾಗಿ ನಡೆದಿರುವ ಸಮೀಕ್ಷೆಗಳು ಬಲು ಅಪರೂಪ ಎನ್ನಬಹುದು.ಸಂವಾದ ನಡೆಸಿರುವ ಈ ಸಮೀಕ್ಷೆ ಚಿತ್ರ ರಂಗದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಬಲ್ಲಷ್ಟು ಸಮರ್ಥವಾಗಿದೆ. ಚಲನಚಿತ್ರ ಹೊಸ ಹೊಳಹುಗಳನ್ನು ಕಂಡು ಕೊಳ್ಳುತ್ತಿರುವ ಈ ನವ ಯುಗದಲ್ಲಿ, […]

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಭಾವಗೀತೆ ಹಾಗೂ ಜಾನಪದ ಗೀತೆಗಳು” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ.) ಕನ್ನಡದ ಭಾವಗೀತೆಗಳಲ್ಲಿ, ಜಾನಪದ ಗೀತೆಗಳಲ್ಲಿ ನಿಮಗೆ ಇಷ್ಟವಾಗುವ ಹಾಗೂ ಕನ್ನಡತನವನ್ನು ಹೆಚ್ಚಿಸುವ ಗೀತೆ ಯಾವುವು ಎಂಬವು ಪ್ರಶ್ನೆಗಳಾಗಿದ್ದವು. ನಮಗೆಲ್ಲರಿಗೂ ತಿಳಿದಂತೆ ಶಾಸ್ತ್ರೀಯ ಸಂಗೀತ, ಸಿನಿಮಾ […]

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮ್ಮ ನೆಚ್ಚಿನ ಕಿರುತೆರೆಯ ಕಾರ್ಯಕ್ರಮ ಯಾವುದು?” ಎಂಬ ಪ್ರಶ್ನೆಯ ಸುತ್ತ ನಮ್ಮ ವಿಶ್ಲೇಷಣೆ (ಪ್ರವೀಣ್ ಪಟವರ್ಧನ್, ವಿ ಎಸ್ ಕೆ ಸಂಯೋಜಕ, ಐ ಟಿ ಉದ್ಯೋಗಿ ಅವರಿಂದ). ಸಿನಿಮಾ ಎಲ್ಲರಿಗೂ ಎಟುಕದ ಸ್ಥಿತಿಯಲ್ಲಿದ್ದ ಸಮಯದಲ್ಲಿ ಕಿರುತೆರೆ ಜನರನ್ನು ಆಕರ್ಷಿಸತೊಡಗಿತು. ದೂರದರ್ಶನವೆಂಬ ಒಂದೇ ವಾಹಿನಿಯಿದ್ದಾಗಿನಿಂದ ಇಲ್ಲಿಯವರೆಗೆ ಹಲವಾರು ಕಾರ್ಯಕ್ರಮಗಳು ಪ್ರಕಟವಾಗಿವೆ. ಧಾರವಾಹಿ ರೂಪಾರಲ್ಲಿ ೧೩ ವಾರಗಳಿಗೆಂದೇ […]

ವಿಶ್ವ ಸಂವಾದ ಕೇಂದ್ರ, ಕರ್ನಾಟಕ ನವೆಂಬರ್ ನಲ್ಲಿ ನಡೆಸಿದ ಸಮೀಕ್ಷೆಯನ್ನು ಕುರಿತು ಹಲವು ಪ್ರಶ್ನೆಗಳಲ್ಲಿ, “ನಿಮಗೆ ಇಷ್ಟವಾದ ಕನ್ನಡ ಸಾಹಿತ್ಯ ಯಾವುದು?” ಎಂಬ ಪ್ರಶ್ನೆಯ ಸುತ್ತ ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು, ಅವರ ವಿಶ್ಲೇಷಣೆ. ಮಲೆಗಳಲ್ಲಿ ಮದುಮಗಳು, ವಂಶ ವೃಕ್ಷ ಮತ್ತು ದುರ್ಗಾಸ್ತಮಾನ ಕಾದಂಬರಿಗಳು ಮೊದಲ ಮೂರು ಸ್ಥಾನ ಗಳಿಸಿವೆ. ಕುವೆಂಪು ಮತ್ತು ಎಸ್.ಎಲ್. ಬೈರಪ್ಪ ಅವರ ಕೃತಿಗಳು ಶೇಕಡಾ 17ಮತಗಳನ್ನು ಗಳಿಸಿ ಮೊದಲ ಸ್ಥಾನದಲ್ಲೇ ಇವೆ. […]