ಲೇಖನ: ನಿತಿನ್ ಕೊರಳ್ಳಿ, ಯೋಗ ಶಿಕ್ಷಕ. ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿಯನ್ನು ರಥಸಪ್ತಮಿ ಎಂದು ಕರೆಯುತ್ತಾರೆ. ಸೂರ್ಯನು ರಥವನ್ನೆರಿದ ದಿನವನ್ನು ರಥಸಪ್ತಮಿಯನ್ನಾಗಿ ಆಚರಿಸುತ್ತಾರೆ. ಆ ದಿನ ಸೂರ್ಯನು ಕಶ್ಯಪ ಮತ್ತು ಅದಿತಿದೇವಿಯ ಮಗನಾಗಿ ಜನಿಸಿದ ದಿನ, ಆದ್ದರಿಂದ ಆವತ್ತು ಸೂರ್ಯಜಯಂತಿ ಎಂದೂ ಕರೆಯುತ್ತಾರೆ. ಸೂರ್ಯನು ಏಳು ಕುದುರೆಗಳಿರುವ ರಥವನ್ನು ಏರಿ ಅದರ ಪಥವನ್ನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಚಲಿಸುವ ವಿಶೇಷ ದಿನ ರಥ ಸಪ್ತಮಿ. ಸೂರ್ಯನು ಪ್ರತಿವರ್ಷ ರಥ […]

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ ಲೇಖಕರು: ಗಣೇಶ್‌ ವಂದಗದ್ದೆ, ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳು               ಗೋಪಾಲಕೃಷ್ಣ ಅಡಿಗರು ಜನಿಸಿದ್ದು ದಿನಾಂಕ 18/02/1918ರಂದು ದಕ್ಷಿಣಕನ್ನಡ ಜಿಲ್ಲೆಯ ಮೊಗೇರಿ ಎಂಬ ಸಣ್ಣ ಹಳ್ಳಿಯಲ್ಲಿ. ಅಡಿಗರದ್ದು ಪುರೋಹಿತರ ಮನೆತನ. ತಂದೆ ರಾಮಪ್ಪ ಅಡಿಗರು ಮತ್ತು ತಾಯಿ ಗೌರಮ್ಮ. ಜ್ಯೋತಿಷ್ಯ ಹೇಳುವುದು, ಪೌರೋಹಿತ್ಯ ಮತ್ತು ವ್ಯವಸಾಯ ಈ ಕುಟುಂಬದ ಮುಖ್ಯ ಉದ್ಯೋಗಗಳಾಗಿದ್ದವು. ಜೊತೆಜೊತೆಯಲ್ಲಿ ಅಡಿಗರ ಕುಟುಂಬದವರು ಪಂಚಾಂಗವನ್ನು ಕೂಡಾ ರಚನೆ ಮಾಡುತ್ತಾರೆ. […]

ಜಸ್ಟೀಸ್ ರಾಮಾಜೋಯಿಸ್‌: ಸಹೃದಯತೆಯ ಪರಿಪೂರ್ಣ ಜೀವಿಘನತೆ, ಗೌರವ, ಮಾನವೀಯತೆ, ಸಹೃದಯತೆಗಳ ನ್ಯಾಯಮೂರ್ತಿಲೇಖನ : ದು ಗು ಲಕ್ಷ್ಮಣ, ಹಿರಿಯ ಪತ್ರಕರ್ತರು, ಅಂಕಣಕಾರರು ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾಜೋಯಿಸ್‌ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ ಸಂಪತ್ತು ಅನನ್ಯ. ಅವರ ಬದುಕೇ ಒಂದು ಪಾಠ. ಅವರೇ ಒಂದು ಜ್ಞಾನಕೋಶ. ಅಂಥ ಮೇರುವ್ಯಕ್ತಿ ೨೦೨೧ ಫೆಬ್ರವರಿ ೧೬ರಂದು […]

ಹಾಲಿಗೆ ಹುಳಿ ಹಿಂಡುವುದು ನಿಲ್ಲಿಸಲಿ!ಲೇಖಕರು : ಪ್ರವೀಣ್ ಪಟವರ್ಧನ್(೧೮ ಫೆಬ್ರವರಿ ೨೦೨೧ ‘ಹೊಸ ದಿಗಂತ’ ಪತ್ರಿಕೆಯಲ್ಲಿ ಪ್ರಕಟಿತ) ಮಹಾನ್ ಸಂಘಟನಕಾರನೊಬ್ಬ ತಾವು ನಿರ್ಮಿಸಹೊರಟಿದ್ದ ವಿದ್ಯಾ ಸಂಸ್ಥೆಗೆ ದೇಣಿಗೆ ಕೇಳಲು ಇಡಿಯ ದೇಶ ತಿರುಗುತ್ತಿದ್ದರು. ಅಭೂತಪೂರ್ವ ಪ್ರತಿಕ್ರಿಯೆ ಅವರಿಗೆ ದೊರೆಯಲು ಆರಂಭಿಸಿತು. ರಾಜನ ದೇಣಿಗೆ ದೊರೆತರೆ ತನ್ನ ಕಾರ್ಯಕ್ಕೆ ಸಿಂಹಬಲ ದೊರೆತಂತೆ ಎಂದು ಅಂದಾಜಿಸಿ ರಾಜನ ಬಳಿ ಹೋದರು. ಆ ರಾಜ ಜಿಪುಣನಷ್ಟೇ ಅಲ್ಲದೆ ಮತಾಂಧನೂ ಆಗಿದ್ದ. ಆತ ಆ ಸಂಘಟನಾಕಾರನಿಗೆ […]

ಬೆಂಗಳೂರು ವಿವಿಯಲ್ಲಿ ಎಚ್ ಎಸ್ ದೊರೆಸ್ವಾಮಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ. ಈ ಸುದ್ದಿ ಬಿತ್ತರವಾಗುತ್ತಿದ್ದಂತೆ, ಸಾಮಾಜಿಕ ವಲಯದಲ್ಲಿ ಚರ್ಚೆ ಆರಂಭವಾಗಿದ್ದು ತಥಾಕಥಿತ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬಾರದು ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ. ಇದೊಂದು ಆತಂಕಕಾರಿ […]

ಕೇಶವಸೃಷ್ಟಿ: ಆರೆಸ್ಸೆಸ್ ಅಂತಃಶಕ್ತಿಯ ಇನ್ನೊಂದು ಅದ್ಭುತ!ಲೇಖನ: ಶ್ರೀವತ್ಸ ಜೋಶಿ, ಅಂಕಣಕಾರರು. {ವಿಶ್ವವಾಣಿ ಪತ್ರಿಕೆಯ ತಿಳಿರುತೋರಣ ಅಂಕಣದಲ್ಲಿ 14Feb2021 ರಂದು ಮೊದಲು ಪ್ರಕಟವಾದ್ದು} ಕೃಪೆ: ವಿಶ್ವವಾಣಿ ಹಾಗೂ ಲೇಖಕರು ಅಪಪ್ರಚಾರದ ವೇಗ, ವ್ಯಾಪ್ತಿ, ತೀಕ್ಷ್ಣತೆ, ಪರಿಣಾಮ ಎಲ್ಲವೂ ಜಾಸ್ತಿ. ವಿಪರ್ಯಾಸವೆಂದರೆ ಅಂಥದರ ಬಗ್ಗೆ ಜನರಿಗೆ ಆಸಕ್ತಿಯೂ ಜಾಸ್ತಿ. ಎಷ್ಟೋ ಸರ್ತಿ ಅಪ್ಪಟ ಸುಳ್ಳೆಂದು ಗೊತ್ತಿದ್ದರೂ ಯಾವುದೋ ಚೀಪ್ ಗಾಸಿಪ್‌ಅನ್ನು ಚಪ್ಪರಿಸುವ ಚಪಲ. ಆಡಿಕೊಳ್ಳುವವರಿಗೆ ಒಂಥರದ ತೆವಲು, ಕೇಳಿಸಿಕೊಳ್ಳುವವರಿಗೆ ಕೆಟ್ಟ ಕುತೂಹಲ. ಯಾರಾದರೂ […]

ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಒಂದಂತೂ ಖುಷಿಯ ಸಂಗತಿ ನಮಗೆ ಕಂಡು ಬರುತ್ತಿದೆ. ಅದೆಂದರೆ ದೇಶದ ಜನರು ಈಗ ಜಾಗೃತರಾಗುತ್ತಿದ್ದಾರೆ. ಸಮಾಜವು ಈಗ ಯಾವುದನ್ನೇ ಆಗಲಿ ಕುರುಡಾಗಿ ಬೆಂಬಲಿಸುತ್ತಿಲ್ಲ. ಈ ಹಿಂದೆ ದೇಶದ ಹಿತಾಸಕ್ತಿಯನ್ನು ಕುರಿತು ತಾವು ಹೇಳುವುದೇ ಅಂತಿಮ ಸತ್ಯ ಮತ್ತು ತಾವು ಮಾತ್ರವೇ ಜನಗಳ ಕುರಿತು ನಿಜವಾದ ಕಾಳಜಿಯುಳ್ಳವರು ಎಂಬುದಾಗಿ ದೇಶದ ಜನತೆ ಒಪ್ಪಿಕೊಳ್ಳಬೇಕು ಎಂಬ ಭಾವನೆಯನ್ನು ಕೆಲವರು ನಿರ್ಮಿಸಿದ್ದರು. ಇಂತಹವರಲ್ಲಿ ಸಹ ಪ್ರಭಾವಲಯಗಳಿದ್ದವು. ತಾಲ್ಲೂಕು ಮಟ್ಟದಿಂದ […]

“ಆಂದೋಲನ ಜೀವಿ” ಗಳ ರಾಷ್ಟ್ರವಿರೋಧಿ ನಿಲುವನ್ನು ಅನಾವರಣಗೊಳಿಸಲು ಇದು ಸುಸಮಯ. ಲೇಖಕರು : ಸಿಂಚನ.ಎಂ.ಕೆ, ಇಂಜಿನಿಯರಿಂಗ್ ವಿದ್ಯಾರ್ಥಿನಿ, ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಎಬಿವಿಪಿ ಸ್ವಯಂಸೇವಕರು ಎಷ್ಟೊಂದು ವ್ಯವಸ್ಥಿತವಾಗಿ, ಯೋಜನೆಗಳನ್ನು ರೂಪಿಸಿ, ರೈತರ ಚಳುವಳಿಯ ಮುಖವಾಡ ಧರಿಸಿಕೊಂಡು ಬಲಿಷ್ಠವಾಗುತ್ತಿರುವ ಭಾರತದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡವನ್ನು ತಂದು ರಾಷ್ಟ್ರವನ್ನು ಒಡೆಯಬೇಕೆಂದು ಮಾಡಿದ್ದ ಷಡ್ಯಂತ್ರವೊಂದು ಬಯಲಾಗಿದೆ. ಯಾವ ಗ್ರೆಟಾ ಥನ್ಬರ್ಗ್ ಎಂಬ ಪರಿಸರವಾದಿ ಈ ಷಡ್ಯಂತ್ರದಲ್ಲಿ ಸ್ವತಃ ಭಾಗಿಯಾಗಿದ್ದಳೊ ಅವಳ ಚಿಕ್ಕ […]

ಭಾರತ ಇತಿಹಾಸದ ಸಾಹಸಮಯ ಪುಟಗಳಲ್ಲಿ ಒಂದಾಗಿ, ರಾಷ್ಟ್ರಭಕ್ತ ಯುವಜನರ ಮೈ ರೋಮಾಂಚನಗೊಳಿಸುವ ಆ ಘಟನೆ ನಡೆದದ್ದು, 1670ರ ಫೆಬ್ರವರಿ ನಾಲ್ಕರಂದು. ಆ ನಿಮಿತ್ತ  ಈ ನೆನಪು. ಆತ ಸಾವಿರ ಸೈನಿಕರ ನಾಯಕನಾದ ಒಬ್ಬ ಸುಬೇದಾರ, ಶಿವಾಜಿ ಹತ್ತಾರು ಆಪ್ತರಲ್ಲಿ ಅವನೂ ಒಬ್ಬ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಶಿವಾಜಿಯ ಪಡೆದಿದ್ದ ದೇವದುರ್ಲಭ ಕಾರ್ಯಕರ್ತರ ಪಡೆಯಲ್ಲಿ ಅಗ್ರಣಿ. ತಾನಾಜಿ ಮಾಲಸುರೆಯಂತಹ ನಂಬುಗೆ ಭಂಟರ ಬೆಂಬಲದಿಂದಲೇ ಮೊಗಲಾಯಿ ಸಾಮ್ರಾಜ್ಯಕ್ಕೆ ಸೆಡ್ಡು ಹೊಡೆದು ಛತ್ರಪತಿಯೆನಿಸಿಕೊಳ್ಳಲು ಶಿವಾಜಿಗೆ […]

ಅಗ್ನಿದಿವ್ಯವ ಗೆದ್ದ ಸಾಧನಕೇರಿಯ ಸಾಧಕಲೇಖನ: ರಾಹುಲ್ ಅಶೋಕ ಹಜಾರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ) ಮಾತೃಗರ್ಭದಿಂದ ಕೂಸೊಂದು ಕರುಳಬಳ್ಳಿ ಹರಿದು ಬರುವಾಗ ತಾಯ ಸತ್ವವ ಹೀರಿ ಬಂದಂತೆ ಬರವಣಿಗೆ ಅನ್ನುವುದೂ ಕೂಡಾ ಪ್ರಸವ ಕ್ರಿಯೆಯಂತೆ ಅದು ಬರಹಗಾರನ ಪರಿಸರ ಕೊಡುವ ಜೀವನಾನುಭವವನ್ನು ಹೀರಿ ಹುಟ್ಟುತ್ತದೆ. ಬೇಂದ್ರೆಯವರ ಪದ್ಯದ ಜಾಡನ್ನು ಹಿಡಿದು ಅವರ ಬದುಕಿನ ಘಟನೆಗಳೊಂದಿಗೆ ತುಲನೆ ಮಾಡುತ್ತಾ ಅವರ ಸಾಹಿತ್ಯದ ಹುಟ್ಟಿಗೆ […]