ಪೀಡಿತ ಗಿರಿಜನರ ಕಣ್ಣೀರು ಒರಿಸಿ ನೆರವಿಗೆ ನಿಂತ ಪೇಜಾವರ ಶ‍್ರೀಗಳು ಅತ್ಯಡ್ಕ ಒಡೇರಮಠದಲ್ಲಿ ಒಂದು ದಿನ, ಒಡೇರಮಠ ಎನ್‌ಕೌಂಟರ್ ಎಂದೇ ಪ್ರಸಿದ್ಧವಾದ ನಕ್ಸಲ್ ಎನ್‌ಕೌಂಟರ್‌ನಲ್ಲಿ ಐವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಶೃಂಗೇರಿ ಸಮೀಪದ ಮೆಣಸಿನಹಾಡ್ಯದ ದಟ್ಟ ಕಾಡಿನ ನಡುವಿನ ಅತ್ಯಡ್ಕದ ರಾಮೇಗೌಡರ ಒಂಟಿ ಮನೆಯಲ್ಲಿ ಅಂದು ಗೌತಮ್ ಎಂಬ ನಕ್ಸಲ್ ಯುವಕ ತಂಗಿದ್ದ. ಖಚಿತ ಮಾಹಿತಿ ತಿಳಿದ ಪೊಲೀಸ್ ಪಡೆಯೊಂದು ಬೆಳ್ಳಂಬೆಳಿಗ್ಗೆ ಅಲ್ಲಿಗೆ ಧಾವಿಸಿತ್ತು. ಮೇಲೆ ನೂರು ಅಡಿ ಮೇಲೆ ರಸ್ತೆಯಲ್ಲಿ […]

ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ ಕಾವಿಯುಡುಗೆಯನುಟ್ಟು ನಭವೇ ಕಿರಣಹಸ್ತವ ಚಾಚಿದೆ ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ – ಕವಿ ಜಿ.ಎಸ್. ಶಿವರುದ್ರಪ್ಪ ಹಿಂದುತ್ವದ ಪರಮಗುಣವಾದ ಸರ್ವಭೂತಗಳಲ್ಲೂ ತನ್ನನ್ನೇ ಕಾಣುವ, ಎಲ್ಲರೂ ತನ್ನವರೇ ಎನ್ನುವ ಐಕ್ಯಭಾವವೇ ಮೂರ್ತಿವೆತ್ತಂತೆ ಇದ್ದು ಮೆರೆದ ಸಿದ್ಧಗಂಗೆಯ ಪೀಠಾಧ್ಯಕ್ಷರಾದ ಶಿವೈಕ್ಯ ಪರಮಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಜೀ (ಏಪ್ರಿಲ್ 1, 1908 – ಜನವರಿ 21, 2019) […]

ಭಾರತೀಯ ಸೇನೆ ಎಂದಾಕ್ಷಣ ಎಂತವನಿಗಾದರೂ ರೋಮಾಂಚನವಾಗುತ್ತದೆ. ದೇಶ ಭಕ್ತಿಯ ಭಾವ ಸ್ಫುರಿಸುತ್ತದೆ. ಅದರಲ್ಲಿ ತಾನೂ ಕೆಲಸ ಮಾಡಬೇಕೆಂದು ಹಲವಾರು ಜನ ಕನಸು ಕಂಡು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೂ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಭಾರತೀಯ ಸೇನೆ ಯುದ್ಧಕ್ಕೆ ನಿಂತರೆ ಹೇಗೆ‌ ಸುಲಭದ ತುತ್ತಲ್ಲವೋ ಹಾಗೆ ಅದಕ್ಕೆ ಆಯ್ಕೆಯಾಗುವುದು ಕೂಡ ಸುಲಭದ ಮಾತಲ್ಲ. ಅನೇಕ ಪರೀಕ್ಷೆಗಳಿಗೆ ಮೈಮನಸ್ಸನ್ನು ಒಡ್ಡಿ ತೇರ್ಗಡೆಯಾಗುವುದು ಸುಲಭ ಸಾಧ್ಯವೂ ಅಲ್ಲ. ಆದರೆ ಉಡುಪಿ ಜಿಲ್ಲೆಯ […]

ಕೆಲವರ್ಷಗಳ ಹಿಂದೆ ನಾಗರಹೊಳೆ ಅಭಯಾರಣ್ಯದ ಅಧಿಕಾರಿಯೊಬ್ಬರು ನಡು ಮಧ್ಯಾನ್ಹ ಸೋಜಿಗವೊಂದನ್ನು ತೋರಿಸುವೆ ಎಂದು ಕರೆದುಕೊಂಡು ಹೋದರು. ತಿತಿಮತಿ ಎಂಬ ಪುಟ್ಟ ಪೇಟೆಯ ಕಾವಲು ಗೋಪುರದಿಂದ ಚೆನ್ನಂಗಿ ಕಾಡಿನ ದಾರಿಯತ್ತ ಹೊರಟ ಜೀಪು ಕಾಡಿನ ರಸ್ತೆಯೊಳಗೆ ತಿರುಗಿತು. ಅಧಿಕಾರಿ ಇದು ದೇವಮಚ್ಚಿ ಅರಣ್ಯ ಎಂದರು. ದೇವಮಚ್ಚಿ ಕಾಡಿನ ಹತ್ತಾರು ಕಿ.ಮೀ ಉದ್ದಕ್ಕೂ ಅಲ್ಲಲ್ಲಿ ಮರದ ಕೆಳಗೆ ಕಲ್ಲುಗಳು, ಅವುಗಳಿಗೆ ಮೆತ್ತಿದ ಕುಂಕುಮ, ಕೆಲವು ಕಡೆ ಶೂಲಗಳಿದ್ದವು. ಅಧಿಕಾರಿ ಇವೆಲ್ಲವೂ ಕಾಡಿನ ದೇವರು […]

ಇವತ್ತಿನ ಸ್ಥಿತಿಯಲ್ಲಿ ಒಂದು ಕ್ಲಬ್ ನ ಕಾರ್ಯದರ್ಶಿ ಸ್ಥಾನಕ್ಕೆ ಕೋಟ್ಯಂತರ ಖರ್ಚು ಮಾಡಿ ಚುನಾವಣೆಗೆ ನಿಲ್ಲುವವರು ಇರುವಾಗ ತನಗೆ ವಯಸ್ಸಾಗಿದೆ ಯುವಕರು ನನ್ನ ಹುದ್ದೆ ತೆಗೆದು ಕೊಳ್ಳಲಿ ಎಂದು ಭಯ್ಯಾಜಿ ಜೋಶಿ  ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನು ತಂದು ಕೂರಿಸಿರುವುದು ಅಪರೂಪದ ಬೆಳವಣಿಗೆ. ಭಾರತದ ಇತಿಹಾಸದಲ್ಲಿ ಯಾವುದೇ ಸಂಘಟನೆಗಳು ಒಡೆಯದೇ 100 ವರ್ಷ ನಿಂತ ಉದಾಹರಣೆಗಳು ಕಮ್ಮಿ.ಕಾಂಗ್ರೆಸ್ ನಿಂದ ಹಿಡಿದು ಕಮ್ಯುನಿಸ್ಟರ್ ವರೆಗೆ ಸಮಾಜವಾದಿ ಗಳಿಂದ […]

ಭಾರತ ಅನೇಕ ಅಪ್ರತಿಮ ಹೋರಾಟಗಾರರ ದೇಶ. ತನ್ನ ಒಡಲಾಳದ ನೈಜ ಇತಿಹಾಸದಲ್ಲಿ ಅನೇಕ ಜನ ನಾಯಕರ ಹೋರಾಟದ ಜೀವನ ಕಥೆಯನ್ನು ಜೀವಂತವಾಗಿರಿಸಿಕೊಂಡ ದೇಶ ನಮ್ಮ ಭಾರತ. ಇತಿಹಾಸವೊಂದು ವಾಸ್ತವ. ವಾಸ್ತವವೂ ಇತಿಹಾಸವೇ. ವಾಸ್ತವವನ್ನು ಮತ್ತು ಸತ್ಯಸಂಗತಿಗಳನ್ನು ಎದುರಿಸಲು ವಿಫಲವಾಗುವ ಜನಾಂಗಗಳಿಗೆ ವಿನಾಶ ಕಟ್ಟಿಟ್ಟ ಬುತ್ತಿ. ನಮ್ಮ ಪರಂಪರೆ, ನಮ್ಮ ಸಂಸ್ಕೃತಿಗಳಿಗೆ ಅನೇಕ ಸಹಸ್ರವರ್ಷಗಳ ಇತಿಹಾಸವಿದೆ. ನಾವು ಶತ್ರುಗಳನ್ನು ಅರಿಯಲು ವಿಫಲರಾದೆವು. ನಮ್ಮಲ್ಲಿ ಶೌರ್ಯ – ಶಕ್ತಿಗಳಿದ್ದರೂ ಅಪಾತ್ರರಿಗೆ ಕ್ಷಮೆ ನೀಡಿ […]

ಶ್ರೀ. ದತ್ತಾತ್ರೇಯ ಹೊಸಬಾಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ರಾಸ್ವಸಂದ) ಸರಕಾರ್ಯವಾಹರಾಗಿ ಚುನಾಯಿತರಾಗಿದ್ದಾರೆ.  ಸರಕಾರ್ಯವಾಹರೆಂದರೆ ಪ್ರಧಾನ ಕಾರ್ಯದರ್ಶಿ ಎನ್ನಬಹುದು. ಈ ಜವಾಬ್ದಾರಿಯು ಕಾರ್ಯತತ್ಪರ ಮುಖ್ಯಸ್ಥರ ಮಟ್ಟದ್ದಾಗಿದೆ.  ಸರಸಂಘಚಾಲಕರ ನೇತೃತ್ವ-ಮಾರ್ಗದರ್ಶನಗಳಲ್ಲಿ ಈ ಜವಾಬ್ದಾರಿಯುನ್ನು ನಿರ್ವಹಿಸಲಾಗುತ್ತದೆ.  ನೂತನ ಜವಾಬ್ದಾರಿ ಸ್ವೀಕರಿಸಿದ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ (ಅಭಾಪ್ರಸ ಅಥವಾ ಎಬಿಪಿಎಸ್) 2021ರ ಸಾಲಿನ ನಿರ್ಣಯಗಳೆರಡನ್ನೂ ವಿವರಿಸಿದ ನಂತರ, ಮುಂದಿನ ಮೂರು ವರ್ಷಗಳ ಕಾರ್ಯಯೋಜನೆಯು “ಕಾರ್ಯವಿಸ್ತರಣೆ, ಸಾಮಾಜಿಕ ಪರಿವರ್ತನೆ, ಮತ್ತು […]

ಅದು 1927, ಮಾರ್ಚ್ 20. ಈ ದೇಶದ ಚರಿತ್ರೆಯ ಪುಟಗಳಲ್ಲಿ ಅಪೂರ್ವ ಘಟನೆಯೊಂದು ದಾಖಲಾದ ದಿನ. ಆ ಘಟನೆ ಉಂಟು ಮಾಡಿದ ಪರಿಣಾಮ ಊಹಿಸಲಾರದಷ್ಟು ದೊಡ್ಡದು. ಅಸ್ಪೃಶ್ಯರಲ್ಲಿ ನವಚೈತನ್ಯವನ್ನು , ಸ್ವಾಭಿಮಾನದ ಜಾಗೃತಿಯನ್ನು ನಿರ್ಮಾಣ ಮಾಡಿದ ಆ ಘಟನೆಯೇ ಮಹಾಡ್‍ನ ಚವ್‍ದಾರ್ ಕೆರೆಯ ನೀರನ್ನು ಕುಡಿಯಲು ಮಾಡಿದ ಸತ್ಯಾಗ್ರಹ. ಜಾತಿಯ  ಕಾರಣದಿಂದ ಅಸ್ಪೃಶ್ಯರಿಗೆ ನಿಷೇಧಿಸಲ್ಪಟ್ಟ ಕೆರೆಯ ನೀರನ್ನು ಮುಟ್ಟಲು ಹುಟ್ಟಿದ ಆಂದೋಲನ ಪ್ರಾಣಿಗಳಿಗಿಂತ ಕೀಳಾಗಿ ನಡೆಸಲ್ಪಡುತ್ತಿದ್ದವರ ಸಂಘಟಿತ ಧ್ವನಿಯಾಗಿತ್ತು. ನೀರು […]

ನನ್ನ ಅಧ್ಯಯನದ ಮೂಲದ ಪ್ರಕಾರವೂ ಆರ್. ಎಸ್.‌ಎಸ್. ನ ಸ್ಥಾಪಕ ಕೇಶವ ಬಲರಾಮ ಹೆಡಗೆವಾರ್ ಅವರು ಸ್ವಾತಂತ್ರ್ಯ ಹೋರಾಟ ಮಾಡಿದ್ದರು. ಅಸಹಕಾರ ಚಳವಳಿಯಲ್ಲಿ ಅವರಿಗೆ ಜೈಲು ಶಿಕ್ಷೆಯೂ ಆಗಿತ್ತು.‌ಆಗಿನ್ನೂ ಆರ್.‌ ಎಸ್. ಎಸ್.‌ ಸ್ಥಾಪನೆ ಆಗಿರಲಿಲ್ಲ. ಉಪ್ಪಿನ ಸತ್ಯಾಗ್ರಹದಲ್ಲೂ ಹೆಡಗೆವಾರ್ ಭಾಗವಹಿಸಿದ್ದರು. ಆದರೆ ಸರ ಸಂಘ ಸಂಚಾಲಕ ಹುದ್ದೆಯನ್ನು ಪರಾಂಜಪೆಯವರಿಗೆ ವಹಿಸಿ ವೈಯಕ್ತಿಕ ನೆಲೆಯಲ್ಲಿ ಭಾಗವಹಿಸಿದ್ದರು. ಆರ್.‌ಎಸ್.‌ಎಸ್. ಒಂದು ಸಂಘಟನೆಯಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಆರ್. ಎಸ್.‌ಎಸ್. ನ […]

ಪ್ರಪಂಚದ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೂ ಒಂದು ಉದ್ದೇಶವಿರುತ್ತದೆ. ಆ ಉದ್ದೇಶದ ಸಾಧನೆಯಾಗುವವರೆಗೂ ಅದು ಜೀವಿಸಿರುತ್ತದೆ ಎನ್ನುತ್ತಾರೆ. ಉದ್ದೇಶದ ಸಾಧನೆಯಾದೊಡನೆಯೇ ಅದು ತನ್ನ ಅಸ್ತಿತ್ವವನ್ನು ಈ ಪ್ರಕೃತಿಯಲ್ಲಿ ವಿಲೀನಗೊಳಿಸಿಕೊಳ್ಳುತ್ತದೆ. ನಮ್ಮೆಲ್ಲರ ಶರೀರದಲ್ಲಿರುವ ಚೈತನ್ಯ ಅವಿನಾಶಿ, ಮಾತ್ರವಲ್ಲ ವಿಶ್ವದ ನಿಯಾಮಕವಾಗಿರುವ ಆ ಬೃಹತ್ ಚೈತನ್ಯದ ಒಂದು ಅಂಶ. ಅದು ಆ ಬೃಹತ್ ಚೈತನ್ಯದಿಂದಲೇ ಹೊರಟು ಅನೇಕ ಜೀವಯೋನಿಗಳ ಮೂಲಕ ಹಾದು ಕೊನೆಗೆ ಆ ಬೃಹತ್ ಚೈತನ್ಯದಲ್ಲಿಯೇ ಒಂದಾಗುತ್ತದೆ. ಪ್ರತಿ ಜೀವಿಯ ಯಾತ್ರೆಯೂ ಆಯಾ […]