ಸ್ವಾತಂತ್ರ್ಯ ಸ್ವಾಮಿತ್ವ ಸ್ವಬಲ ಸ್ವಾಧೀನತೆಯ.. ಲೇಖಕರು : ಶ್ರೀ ನಾರಾಯಣ ಶೇವಿರೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವರ್ಷಗಳು ಆದುವೆನ್ನುವುದು ಒಂದು ಮೈಲಿಗಲ್ಲಾಗಬಹುದಾದ ಸಂದರ್ಭ. ವರ್ಷಗಳು ತುಂಬಿದ ಮಾತ್ರಕ್ಕೆ ಮೈಲಿಗಲ್ಲಾಗದು. ಅದಾಗಬೇಕಾದುದು ಸಾಧನೆಯಿಂದ. ಸಂಕಲ್ಪದಿಂದ. ಅಂಥ ಸಂಕಲ್ಪಶಕ್ತಿಯನ್ನು ಹೊಂದಬಲ್ಲ ಮಾನಸಿಕತೆಯಿಂದ. ಸಾಧನೆಯನ್ನು ಸಾಧಿಸಿತೋರಬಲ್ಲ ಸಾಮಾಜಿಕ ವ್ಯಕ್ತಿತ್ವದಿಂದ. ಮತ್ತು ಅಂಥ ಸಾಮಾಜಿಕ ವ್ಯಕ್ತಿತ್ವದ ಅಭಿವ್ಯಕ್ತಿಯಿಂದಾಗಿಯೇ ಸ್ವಾತಂತ್ರ್ಯ ಸಿದ್ಧಿಸಿದ್ದಲ್ಲವೇ! ಅಂಥ ಸಂಕಲ್ಪಶಕ್ತಿಯನ್ನು ಉಳ್ಳ ಉಕ್ಕಿನ ಮನಸ್ಸುಗಳಿಂದಾಗಿಯೇ ಸ್ವಾತಂತ್ರ್ಯದ ಸಾಧನೆ ಸಾಧಿತವಾದದ್ದಲ್ಲವೇ! ಮೈಕೊಡವಿ ಎದ್ದುನಿಂತ ದೇಶಗಳು […]

  ಆಗಸ್ಟ್ 9ನ್ನು ವಿಶ್ವಸಂಸ್ಥೆಯು ವಿಶ್ವ ಮೂಲನಿವಾಸಿಗಳ ದಿನಾಚರಣೆ ಎಂದು ಘೋಷಿಸಿದೆ. ಜಗತ್ತಿನಾದ್ಯಂತ ಎಲ್ಲೆಲ್ಲಿ ಮೂಲನಿವಾಸಿಗಳನ್ನು ದಮನಿಸಿ ಪರಕೀಯರ ಸಾಮ್ರಾಜ್ಯಗಳನ್ನು ಕಟ್ಟಲಾಗಿದೆಯೋ ಅಲ್ಲೆಲ್ಲಾ ಸಂಭ್ರಮದ ಆಚರಣೆಯ ಜೊತೆಗೆ ತಮ್ಮ ಜನಾಂಗ ನೂರಾರು ವರ್ಷಗಳ ಕಾಲ ಅನುಭವಿಸಿದ ಯಾತನೆ, ಅವಮಾನ, ನರಸಂಹಾರದ ಕಥನಗಳನ್ನು ಇಂದಿನ ವಿಶ್ವದೆದುರು ಬಿಚ್ಚಿಡುವ ಪ್ರಯತ್ನಗಳೂ ನಡೆಯುತ್ತಿದೆ. ೧೯೯೪ರಲ್ಲಿ ವಿಶ್ವಸಂಸ್ಥೆಯು ತನ್ನ ಸಾಮಾನ್ಯ ಸಭೆಯಲ್ಲಿ ಈ ದಿಣಾಚರಣೆಯನ್ನು ಆಚರಿಸುವ ನಿರ್ಧಾರವನ್ನು ಪ್ರಕಟಿಸಿತು. ಆ ಮೂಲಕ ವಿಶ್ವದಾದ್ಯಂತ ಸಾಮ್ರಾಜ್ಯಶಾಹಿಗಳಿಂದ , […]

ಕಾರ್ಗಿಲ್ ಹೀರೋಗಳು: ಮಾತೃಭೂಮಿಯನ್ನುಳಿಸಿದ ವೀರಪುತ್ರರು ಹಿಂದೂಸ್ಥಾನದ ಶೌರ್ಯ-ಸಾಹಸವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತುಪಡಿಸಿದ ಕಾರ್ಗಿಲ್ ಕದನದ ಶೌರ್ಯಗಾಥೆಗೆ 22ನೇ ಸಂವತ್ಸರ.ಪಾಕಿಸ್ತಾನ ಎಷ್ಟೇ ಮೋಸ ಕಪಟಗಳಿಂದ ನಮ್ಮನ್ನು ಗೆಲ್ಲಲು ಪ್ರಯತ್ನಿಸಿದರೂ, ಅದರ ವಿರುದ್ಧ ವೀರೋಚಿತವಾದ ಹೋರಾಟಗೈದು, ಅವರನ್ನು ಪರಾಭವಗೊಳಿಸಿ ಮಾತೃಭೂಮಿಯ ರಕ್ಷಣೆ ಮಾಡುತ್ತಿರುವ ನಮ್ಮ ಭಾರತೀಯ ಸೈನ್ಯದ ವೀರಗಾಥೆ ಹಿಂದೂಸ್ಥಾನದ ಶೌರ್ಯದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ನಮ್ಮ-ನಿಮ್ಮ ನಡುವೆಯೇ ಹುಟ್ಟಿ ಬೆಳೆದ 20ರಿಂದ 30 ವರ್ಷದ ತರುಣರು ಹೇಗೆ ಅಷ್ಟು ಪರಾಕ್ರಮದಿಂದ ಯುದ್ಧ […]

ಸ್ಟಾನ್ ಸ್ವಾಮಿಯನ್ನು ಹುತಾತ್ಮನೆಂದು ವೈಭವೀಕರಿಸಲು ಆತ ಮಹಾತ್ಮನಲ್ಲ ಮಾವೋವಾದಿ ಪಾದ್ರಿ ಸ್ಟಾನ್ ಸ್ವಾಮಿಯ ಸಾವಿಗೆ ಅನೇಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಸಾವಿಗೆ ಸಂತಾಪ ವ್ಯಕ್ತಪಡಿಸುವುದು ಅಸಹಜವೇನಲ್ಲ. ಆದರೆ ಸಂತಾಪದ ನೆಪದಲ್ಲಿ ಭಾರತ ಭಂಜಕನೊಬ್ಬನನ್ನು ಹುತಾತ್ಮನನ್ನಾಗಿಸುವ ವ್ಯವಸ್ಥಿತ ಪ್ರಯತ್ನವೊಂದು ನಡೆಯುತ್ತಿದೆ. ಅಲ್ಲಲ್ಲಿ ಕಾಣಿಸುತ್ತಿರುವ ಕ್ಯಾಂಡಲ್ ಮಾರ್ಚ್ಗಳು, ಪೋಸ್ಟರ್‌ಗಳು, ಶ್ರದ್ಧಾಂಜಲಿ ಸಭೆಗಳ ಮೂಲಕ ಅಮಾಯಕರ ಸಾವಿನ ರೂವಾರಿಯನ್ನು ಮಹಾತ್ಮನನ್ನಾಗಿಸುವ ಸಂಚೊಂದು ಕ್ರಿಯಾಶೀಲವಾಗಿದೆ. ಭಾರತ ವಿರೋಧಿಗಳು ಆತನ ಸಾವನ್ನು ವೈಭವೀಕರಿಸುತ್ತಿದ್ದಾರೆ. ಕಾಂಗ್ರೇಸ್, ಕಮ್ಯುನಿಷ್ಠರು, ಸ್ವಘೋಷಿತ ಬುದ್ದಿಜೀವಿಗಳು, […]

ಹಲವು ದಶಕಗಳ ಬಳಿಕ ನಮ್ಮ ದೇಶದಲ್ಲಿ ಸಮಗ್ರ ಸ್ವರೂಪದ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ರೂಪುಗೊಂಡಿದೆ.ಈ ನೀತಿಯು ಭಾರತದ ಬಹುದಿನಗಳ ಬೇಡಿಕೆಯೂ ಆಗಿತ್ತು. ಈ ಹಿಂದೆ ಸರ್ಕಾರಗಳು ಅಂತಹ ಆಸಕ್ತಿಯನ್ನು ತೋರದೇ ಹೋದ ಕಾರಣದಿಂದ ನೀತಿಯನ್ನು ರೂಪಿಸಲಾಗಿರಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಈ ಕುರಿತು ತೋರಿದ ವಿಶೇಷ ಆಸಕ್ತಿಯಿಂದ ಇಂದು ಸಾಕಾರವಾಗಿದೆ. ಶಿಕ್ಷಣ ತಜ್ಞರು ವಿವಿಧ ಸ್ತರಗಳಲ್ಲಿ ಶಿಕ್ಷಣ ರಂಗದ ಎಲ್ಲಾ ಬಾಧ್ಯಸ್ಥರ ಜತೆಗೆ ನಿರಂತರ ಸಂವಹನ, ಮಾಹಿತಿ ವಿನಿಮಯ, […]

ಈಚೆಗೆ ನಿಧನರಾದ ಕವಿ ಸಿದ್ದಲಿಂಗಯ್ಯ ಅವರ ಕುರಿತು ಅನೇಕ ಸಾಹಿತಿಗಳು, ಸಂಘಸಂಸ್ಥೆಗಳು ನುಡಿನಮನ ಸಲ್ಲಿಸಿ ಅವರ ಕುರಿತು ಒಂದು ಚಿತ್ರಣವನ್ನು ಕಟ್ಟಿಕೊಟ್ಟಿವೆ. ಈ ಒಮ್ಮುಖದ  ಚಿತ್ರಣಕ್ಕಿಂತ ಭಿನ್ನವಾಗಿಯೂ ಅವರು ಬದುಕಿದ್ದರು ಅನ್ನುವುದು ಗಮನಿಸತಕ್ಕ ಸಂಗತಿಯೆನಿಸುತ್ತದೆ. ಅವರೇ ಅಲ್ಲಿಲ್ಲಿ ಪದೇಪದೇ ಹೇಳಿಕೊಂಡಿರುವ ಅವರ ಬಾಲ್ಯದ ಕೆಲವು ಪ್ರಸಂಗಗಳನ್ನು ಈ ನಿಟ್ಟಿನಲ್ಲಿ ಇಲ್ಲಿ ಉಲ್ಲೇಖಿಸಬಹುದು. ಮೊದಲೆರಡು ಅನುಭವಗಳು ಆಗ ಅವರಿಗಿನ್ನೂ ನಾಲ್ಕರ ವಯಸ್ಸು. ಮಾಗಡಿಯ ಸಮೀಪದ ಹಳ್ಳಿಯ ಅವರ ಮನೆಯ ಪಕ್ಕದಲ್ಲಿ ಇದ್ದ […]

ಶಿವಾಜಿ ಮಹಾರಾಜರ ಜನನ ಹಾಗೂ ಅವರು ಶೂನ್ಯದಿಂದ ಪ್ರಾರಂಭಿಸಿ ಆಕ್ರಮಣಕಾರಿಗಳ ಅಹಂಕಾರಕ್ಕೆ ಕೊಳ್ಳಿಯಿಟ್ಟು ಹಿಂದವಿ ಸ್ವರಾಜ್ಯ ವನ್ನು ಕಟ್ಟಿ ಬೆಳೆಸಿದ ರೀತಿಯನ್ನು ಇತಿಹಾಸಕಾರರು ‘ಯುಗಾವತಾರ’ ಎಂದೇ ದಾಖಲಿಸಿದರು. ಅವರ ಕಾಲಾನಂತರ ಸುಮಾರು ಇನ್ನೂರ ಹತ್ತು ವರ್ಷಗಳ ನಂತರ ಜನಿಸಿದ ಡಾಕ್ಟರ್ ಕೇಶವ ಬಲಿರಾಮ ಹೆಡಗೆವಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು. ಇವರನ್ನು ‘ಯುಗಪುರುಷ’ ಅಂತ ಕರೆದರು. ಈ ಇಬ್ಬರು ಮಹಾಪುರುಷರು ನಡೆದ ದಾರಿ, ಅವರಿಬ್ಬರ ಗುರಿ ಮತ್ತು ಕಾರ್ಯಶೈಲಿ ಇವುಗಳಲ್ಲಿ […]

ಕರ್ನಾಟಕದ ದಲಿತ ಚಳುವಳಿಯ ಮೊದಲ ಸಾಲಿನ ನಾಯಕರಾಗಿದ್ದ, ಒಳ್ಳೆಯ ಕವಿ, ಲೇಖಕರಾಗಿದ್ದ ಅದೆಲ್ಲಕ್ಕೂ ಮಿಗಿಲಾಗಿ ಹಲವು ವಿಚಾರಧಾರೆಯ ಸಾವಿರಾರು ಕಾರ್ಯಕರ್ತರಿಗೆ ಆತ್ಮೀಯ ಗೆಳೆಯರಾಗಿದ್ದವರು ಡಾ ಸಿದ್ಧಲಿಂಗಯ್ಯ . ವಿದ್ಯಾರ್ಥಿ ದೆಸೆಯಲ್ಲೇ ಮಾರ್ಕ್ಸ್ , ಅಂಬೇಡ್ಕರ್ ಪ್ರಭಾವ ಅವರನ್ನು ಆವರಿಸಿತ್ತು. ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಬಂದಾಗ ಅವರಿನ್ನೂ ಕನ್ನಡ ಎಂ.ಎ ವಿದ್ಯಾರ್ಥಿ. ಅವರ ಹಾಡುಗಳೆ ಹೋರಾಟಕ್ಕೆ ಸಾವಿರಾರು ಯುವಜನರನ್ನು ಸೆಳೆದಿದ್ದವು . ಕೇವಲ ದಲಿತ ಹೋರಾಟವಷ್ಟೆ ಅಲ್ಲ, […]