ಅಯೋಧ್ಯೆಯಲ್ಲಿ ಬಾಬರ್ ಕಟ್ಟಿಸಿದ್ದೆನ್ನಲಾದ ಹಳೆಯ ವಿವಾದಾಸ್ಪದ ಕಟ್ಟಡ ೧೮ ವರ್ಷಗಳ ಹಿಂದೆ ಧ್ವಂಸಗೊಂಡಿದ್ದು, ಇದಕ್ಕೂ ಮುನ್ನ ರಾಮಶಿಲಾ ಯಾತ್ರೆ, ರಾಮ ಜ್ಯೋತಿ ಯಾತ್ರೆಗಳ ಮೂಲಕ ದೇಶಾದ್ಯಂತ ಜನಜಾಗೃತಿಯ ಕೆಲಸ ನಡೆದಿತ್ತು. ರಾಮಜನ್ಮಭೂಮಿಯಲ್ಲಿ ಲಕ್ಷಾಂತರ ಜನರಿಂದ ಕರಸೇವೆಯೂ ನಡೆಯಿತು. ಹಿಂದೂ ಸಮಾಜದ ಶಕ್ತಿಯ ಪರಿಚಯ ವಿಶ್ವಕ್ಕಾಯಿತು. ಈ ಎಲ್ಲಾ ಬೆಳವಣಿಗೆಗಳಿಂದಾಗಿ ದೇಶದಲ್ಲಿ ಅಯೋಧ್ಯಾ ಅಂದೋಲನವು ಸ್ವಾತಂತ್ರ್ಯಾನಂತರ ನಡೆದ ಅತಿ ದೊಡ್ಡ ಆಂದೋಲನ ಎಂಬ ಸ್ಥಾನ ಪಡೆಯಿತು. ಶ್ರೀರಾಮ ಮಂದಿರ ನಿರ್ಮಾಣದ ಬಗ್ಗೆ […]

ನಕ್ಸಲರು ಮತ್ತೆ ತಮ್ಮ ಅಟ್ಟಹಾಸ ಮೆರೆದಿದ್ದಾರೆ. ಛತ್ತೀಸ್‌ಗಢದ ದಂತೇವಾಡದಲ್ಲಿ ಇತ್ತೀಚೆಗೆ ೭೬ ಮಂದಿ ಸಿ.ಆರ್.ಎಫ಼್ ಯೋಧರನ್ನು ಹತ್ಯೆಗೈಯುವ ಮೂಲಕ ಪ್ರಜಾಪ್ರಭುತ್ವದ ವಿರುದ್ಧದ ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದಾರೆ. ಛತ್ತೀಸ್‌ಗಡ್‌ದ ದಾಂತೇವಾಡದ ದಟ್ಟ ಅರಣ್ಯದಲ್ಲಿ ೧೦೦೦ ನಕ್ಸಲರಿದ್ದ ಗುಂಪೊಂದು ಎರಡು ತಂಡಗಳಾಗಿ ಈ ಕಾರ್ಯವನ್ನು ನಡೆಸಿದೆ. ಸಿ.ಆರ್.ಪಿ.ಎಫ್. ಕ್ಯಾಂಪಿನಿಂದ ಸುಮಾರು ಮೂರು ಕಿ.ಮೀ. ಸುತ್ತಳತೆಯಲ್ಲಿನ ಎಲ್ಲಾ ಮರಗಳ ಬುಡಗಳಲ್ಲೂ ಪ್ರಬಲ ಸ್ಫೋಟಕಗಳನ್ನು ತುಂಬಿತ್ತು. ಆ ಮೂರು ಕಿ.ಮೀ. ಸುತ್ತಳತೆಯಲ್ಲಿ ಎಲ್ಲೆಲ್ಲಿ ನಮ್ಮ ಜವಾನರು […]

ಚಂದ್ರಯಾನ -೧ ಎಂಬ ಉಪಗ್ರಹ ಚಂದ್ರನನ್ನು ಸುತ್ತಿ ಚಂದ್ರನ ಬಗೆಗಿನ ಮಾಹಿತಿಯನ್ನು ನಮಗೆ ಕಳುಹಿಸಲು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ನೆಗೆದಿದೆ. ಜೊತೆಗೆ ಭಾರತದ ಮತ್ತು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಬಗೆಗಿನ ಗೌರವವನ್ನು ಅಷ್ಟೇ ಎತ್ತರಕ್ಕೆ ಕೊಂಡೊಯ್ದಿದೆ. ವಿಶ್ವದ ಬಾಹ್ಯಾಕಾಶ ಚರಿತ್ರೆಯಲ್ಲೇ ಇದೊಂದು ಮೈಲಿಗಲ್ಲಾಗಲಿದೆ. ಒಂದೆಡೆ ಸಾಧನೆಯ ಸಂಭ್ರಮ ಕಂಡರೆ ಇನ್ನು ಕೆಲವರಿಗೆ ಆರೋಪ ಮಾಡುವ ಖಯಾಲಿ. ’ಸುಖಾಸುಮ್ಮನೆ ಸಾರ್ವಜನಿಕ ಹಣದ

ಪಾಕಿಸ್ತಾನವನ್ನು ದ್ವೇಷದ ಕೂಸು ಎಂದು ಕರೆಯಲಾಗುತ್ತದೆ. ಏಕೆಂದರೆ ಅದರ ಜನ್ಮದ ಗುಟ್ಟಿರುವುದೇ ಭಾರತ ದ್ವೇಷದಲ್ಲಿ. ಅದರ ಉಳಿವು ಸಹ ಅದರಲ್ಲಿಯೇ. ಅದಕ್ಕಾಗಿಯೇ ಅದು ಭಾರತದ ವಿರುದ್ಧ ಕಿಡಿ ಕಾರುತ್ತಲೇ ಒಂದಲ್ಲ ಒಂದು ಕುತಂತ್ರ ಹೂಡುತ್ತ ಬಂದಿದೆ. ಅಂತಹ ಪಾಕ್‌ನ ದ್ವೇಷದ ಮರಿ ಕೂಸು ಅದೇ  ’ಲಷ್ಕರ್ ಇ ತೊಯ್ಬಾ’ – ಎಲ್‌.ಇ.ಟಿ. ’ಲಷ್ಕರ್ ಇ ತೊಯ್ಬಾ’ ಎಂದರೆ ಶುದ್ಧರ ಸೈನ್ಯ. ಇದರ ಮುಖ್ಯಸ್ಥ ಝಕಿಯಾರ್ ರೆಹಮಾನ್‌ ಲಖ್ವಿ ಅಲಿಯಾಸ್‌ ’ಚಾಚಾಜಿ’. […]

ಪ್ರತಿ ಬಾರಿ ಭಯೋತ್ಪಾದಕರ ದಾಳಿ ನಡೆದಾಗ ನಮ್ಮ ಸುರಕ್ಷಾ ಪಡೆಗಳ ಸಂಖ್ಯೆ ಶಕ್ತಿ ಸಾಮರ್ಥ್ಯಗಳ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಅಂತಹ ಸಂದರ್ಭಗಳಲ್ಲಿ ನಮ್ಮ ಜನಸಂಖ್ಯೆ, ದೇಶದ ವಿಶಾಲತೆ ಇವುಗಳನ್ನು ಮರೆತು ರಕ್ಷಣಾ ಪಡೆಗಳ ವೈಫಲ್ಯ, ಪೊಲೀಸ್ ನಿರ್ಲಕ್ಷ್ಯ ಮುಂತಾದ ಆಪಾದನೆಗಳು ಪುಂಖಾನುಪುಂಖವಾಗಿ ಹೊರಬೀಳುತ್ತವೆ. ಹವಾ ನಿಯಂತ್ರಿತ ವ್ಯವಸ್ಥೆಗಳಲ್ಲೆ ಇರುವ ರಾಜಕಾರಣಿಗಳು ತಮ್ಮ ದೌರ್ಬಲ್ಯವನ್ನು ಕೆಲವೊಮ್ಮೆ ಬಹಳ ಸುಲಭವಾಗಿ ನಮ್ಮ ರಕ್ಷಣಾತಂಡಗಳ ಮೇಲೆ ಆರೋಪ ಹೊರಿಸುತ್ತಾರೆ. ಆದರೆ ಈ ದೇಶದಲ್ಲಿ […]

– ಅರುಣ್ ಕುಮಾರ್ ಅಂದು ೨೬ ನವೆಂಬರ್, ರಾತ್ರಿ ೮.೪೫ರ ಸುಮಾರು. ಮುಂಬೈ ಕಡಲತೀರದಲ್ಲಿ ೧೦ ಯುವಕರು ಭಾರಿ ಬೆನ್ನು ಚೀಲಗಳೊಂದಿಗೆ ಹಳದಿ ಯಾಂತ್ರಿಕ ಬೋಟಿನಿಂದ ಇಳಿಯುತ್ತಾರೆ. ಇವರನ್ನು ಕಂಡ ಭರತ್ ತಾಮೋರ್ ಎಂಬ ಮೀನುಗಾರ ಕೋಲಿ ಜನಾಂಗಕ್ಕೆ ಸೇರಿದ ಯುವಕ ಹತ್ತಿರ ಹೋಗಿ ಮಾತನಾಡಿಸುತ್ತಾನೆ. ಆ ಯುವಕರ ಉತ್ತರ ಇಷ್ಟೇ, “ ಹಮ್ ಅಭಿ ಬಹುತ್ ಟೆನ್ಷನ್ ಮೇ ಹೈ, ಹಮೇ ಔರ್ ಟೆನ್ಷನ್ ನಹೀ ದೇನಾ” ಎಂದು […]