ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಹಿನ್ನೆಲೆಯಲ್ಲಿ ಮೂಡಿಗೆರೆಯ ಮಗ್ಗಲಮಕ್ಕಿಯ ದಿವಿನ್‌ರವರು ತಮ್ಮ ಈಜಿಪ್ಟಿನ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಪೂರ್ಚುಗೀಸರ ನಿದ್ದೆಗೆಡಸಿದ್ದ ರಾಣಿ ಅಬ್ಬಕರ ಕಾಲಘಟ್ಟದಲ್ಲೇ,‌ ವಿದೇಶಿಗರಿಂದಲೇ ರಾಣಿ ಎಲಿಜಿಬೆತ್‌ಳಿಗೆ ಸಮ ಎನಿಸಿಕೊಂಡಿದ್ದ, ಯುದ್ಧಕ್ಕೂ, ಸ್ನೇಹಕ್ಕೂ, ಆಡಳಿತಕ್ಕೂ ಸೈ ಎಂದು ಹೆಸರಾಗಿದ್ದ ನಗಿರೆ ಮತ್ತು ಹಾಡುವಳ್ಳಿಗಳ ರಾಣಿ, ಪ್ರಜೆಗಳ ನೆಚ್ಚಿನ ಅವ್ವರಸಿ, ರಾಣಿ ಚೆನ್ನಭೈರಾದೇವಿ ಇತಿಹಾಸದ ಪುಟಗಳಿಂದ ಮರೆಯಾಗಿ ಎಲ್ಲೋ ಕೆಲವರಿಗಷ್ಟೇ ಆಕೆಯ ಬಗ್ಗೆ ಮಾಹಿತಿ ಇರುವುದು ಅತ್ಯಂತ ದುರದೃಷ್ಟಕರ ಸಂಗತಿ.. ಚೆನ್ನಭೈರಾದೇವಿ ಜಿನೈಕ್ಯರಾದ 17 ವರ್ಷಗಳ ಬಳಿಕ ಆಕೆಯ ಬಗ್ಗೆ,ಆಕೆಯ ಚಾರಿತ್ರ್ಯಕ್ಕೆ ಮಸಿಬಳಿಯುವ ರೀತಿ ಇತಿಹಾಸ ಬರೆದ ಇಟಲಿ […]

ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ಹೆದ್ದಾರಿಯಲ್ಲಿ ಚೆನ್ನಗಿರಿಗಿಂತ ಮುಂಚೆ ಬಲಕ್ಕೆ ತಿರುಗಿ ಹತ್ತು ಕಿ.ಮಿ. ಹೋದರೆ, ಹೊದಿಗೆರೆ ಎಂಬ ಕುಗ್ರಾಮವಿದೆ. ಇದೊಂದು ಪುಟ್ಟ ಹಳ್ಳಿ. ಸಣ್ಣ ಮಾರ್ಗ, ಒಂದು ಕಾರು ಹೋಗುವಷ್ಟು ಜಾಗ, ರೈತಾಪಿ ವರ್ಗವೇ ಅಧಿಕವಾಗಿರುವ ಇಲ್ಲಿ ಹೊಲ-ಗದ್ದೆಗಳು ಸಾಮಾನ್ಯ. ಆದರೆ ನಮ್ಮಲ್ಲಿ ಬಹುತೇಕ ಜನರಿಗೆ ತಿಳಿಯದ ವಿಷಯ – ಈ ಸ್ಥಳವು ಯಾವ ಪುಣ್ಯಕ್ಷೇತ್ರಕ್ಕೂ ಕಡಿಮೆ ಏನಲ್ಲ ಎಂದು. ಏಕೆಂದರೆ ಇಲ್ಲಿದೆ ಹೈಂದವೀ ಸ್ವರಾಜ್ಯದ ಹರಿಕಾರ ಶಹಜಿ ರಾಜೆ […]

ಆಗಸ್ಟ್ 2 1947, ದೆಹಲಿಯ ಯಾರ್ಕ್ ರಸ್ತೆಯಲ್ಲಿರುವ ೧೭ ನಂಬರಿನ ಮನೆ ಕೇವಲ ದೆಹಲಿಯ ಜನರಿಗೆ ಮಾತ್ರವಲ್ಲ, ಇಡೀ ಭಾರತದ ಗಮನವನ್ನು ತನ್ನತ್ತ ಸೆಳೆಯುವಷ್ಟು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಏಕೆಂದರೆ ಕಳೆದ ಕೆಲವು ವರ್ಷಗಳಿಂದ ಇದು ಭವಿಷ್ಯದಲ್ಲಿ ಭಾರತದ ಪ್ರಧಾನಿ ಅಭ್ಯರ್ಥಿ ನಿಯುಕ್ತಿಗೊಂಡಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರ ನಿವಾಸವಾಗಿತ್ತು. ಮತ್ತು ಈ ಪ್ರಧಾನಿ ಪದವನ್ನು ‘ಗೊತ್ತುಪಡಿಸಿದ’ ಹುದ್ದೆಗೇರಲು ಕೇವಲ ೧೩ ದಿನಗಳು ಬಾಕಿ ಇದ್ದವು. ಜವಾಹರಲಾಲ್ ನೆಹರು ಸ್ವತಂತ್ರ ಭಾರತದ […]

೧೯೪೭ರ ಆಗಸ್ಟ್ ೧ ರಿಂದ ೧೫ರವರೆಗಿನ ಘಟನಾವಳಿಗಳು ಇಂದಿನ ಕಾಶ್ಮೀರದ ಸಮಸ್ಯೆಯನ್ನು ಅರ್ಥೈಸಿಕೊಳ್ಳಲು ಸಹಕಾರಿ. ಪ್ರತಿದಿನವೂ ನಡೆದ ಘಟನೆಗಳನ್ನು ವಿಶ್ಲೇಷಿಸುವ ಮೂಲಕ ಲೇಖಕರಾದ ಪ್ರಶಾಂತ್ ಪೋಲ್ ಕಾಶ್ಮೀರ ಸಮಸ್ಯೆಯ ಮೂಲವನ್ನು ಈ ಲೇಖನ ಸರಣಿಯ ಮೂಲಕ ಹುಡುಕಹೊರಟಿದ್ದಾರೆ. ಆ ಹದಿನೈದು ದಿನಗಳು ಹೆಸರಿನ ಸರಣಿ ಲೇಖನವನ್ನು ಸಂವಾದದಲ್ಲಿ ಬ್ಲಾಗ್ ವಿಭಾಗದಲ್ಲಿ ಓದಬಹುದು. ಶುಕ್ರವಾರ. ಆಗಸ್ಟ್ ೧, ೧೯೪೭. ಆ ದಿನ ಇದ್ದಕ್ಕಿದ್ದಂತೆ ಪ್ರಾಮುಖ್ಯತೆ ಪಡೆಯಿತು. ಆ ದಿನ ಕಾಶ್ಮೀರದ ಬಗ್ಗೆ […]