ನಮ್ಮ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅನೇಕರು ಯತ್ನಿಸಿ ವಿಫಲರಾಗಿದ್ದಾರೆ ಹಾಗೂ ಮತ್ತೆ ಕೆಲವರು ಯಶಸ್ವಿ ಕೂಡ ಆಗಿದ್ದಾರೆ. ಇದೇ ಹಾದಿಯಲ್ಲಿರುವ ಇನ್ನೊಂದು ಹೋರಾಟವೇ ‘ಕೃಷಿ ಮಸೂದೆ ವಿರೋಧಿಸಿ ರೈತರ ಮುಖವಾಡ ಧರಿಸಿದವರು ಮಾಡುತ್ತಿರುವ ಹೋರಾಟ’. ರೈತರ ಪರ ಎಂದು ಹೇಳಿಕೊಂಡು ಯಾವುದಾದರೂ ಹೋರಾಟ ಶುರು ಮಾಡಿದರೆ ಅದಕ್ಕೆ ಬಹುಪಾಲು ಜನರ ಬೆಂಬಲವಂತೂ ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಸಿಕ್ಕೇ ಸಿಗುತ್ತದೆ. ಹೀಗೆಯೇ ಶುರುವಾಗಿದ್ದು ಕೇಂದ್ರ ಸರಕಾರ […]

ಎಲ್‌ಟಿಟಿಇ ನಾಯಕರ ಬೆಂಕಿ ಕಾರುವ ಭಾಷಣಗಳು ಇಂಟರ್‌ನೆಟ್ಟಿನಲ್ಲಿ ಈಗಲೂ ಸಿಗುತ್ತವೆ. ಕೋಪೋದ್ರೇಕದ ಅವೆಲ್ಲವೂ ಒಂದೇ ದಾಟಿಯವು. ನೋವಿಗೆ ಪ್ರತಿಕಾರ, ಕ್ರಾಂತಿ, ರಕ್ತಪಾತದ ಮಾತುಗಳಿಂದ ತುಂಬಿರುವ ಅವುಗಳಲ್ಲಿ ತಪ್ಪದೆ ಉಲ್ಲೇಖವಾಗುವ ಮತ್ತೊಂದು ವಾಕ್ಯವಿದ್ದೇ ಇರುತ್ತವೆ. “ನಮ್ಮೆಲ್ಲರಲ್ಲೂ ಒಬ್ಬೊಬ್ಬ ಕುಯಿಲಿಯಿದ್ದಾಳೆ, ನಾವೆಲ್ಲರೂ ಕುಯಿಲಿಗಳಾಗೋಣ”. ಎಲ್ಟಿಟಿಇ ಮಾತ್ರ ಅಲ್ಲ. ಪೆರಿಯಾರ್ ಮತ್ತು ಆತನ ಶನಿ ಸಂತಾನದವರ ಹುಚ್ಚಾಟಗಳಲ್ಲೂ ಈ ಪದಪುಂಜ ಬಿತ್ತರವಾಗುತ್ತದೆ. ದ್ರಾವಿಡ ಪಕ್ಷಗಳ ಉದ್ರೇಕಕಾರಿ ಭಾಷಣಗಳಲ್ಲಿ, ನಕ್ಸಲ್‌ವಾದಿಗಳ ಕರಪತ್ರಗಳಲ್ಲಿ, ತೂತ್ತುಕುಡಿಯ ಗೋಡೆಬರಹಗಳಲ್ಲಿ, ಟಪಾಂಗುಚ್ಚಿ […]

ಭಾರತ ಅನೇಕ ಅಪ್ರತಿಮ ಹೋರಾಟಗಾರರ ದೇಶ. ತನ್ನ ಒಡಲಾಳದ ನೈಜ ಇತಿಹಾಸದಲ್ಲಿ ಅನೇಕ ಜನ ನಾಯಕರ ಹೋರಾಟದ ಜೀವನ ಕಥೆಯನ್ನು ಜೀವಂತವಾಗಿರಿಸಿಕೊಂಡ ದೇಶ ನಮ್ಮ ಭಾರತ. ಇತಿಹಾಸವೊಂದು ವಾಸ್ತವ. ವಾಸ್ತವವೂ ಇತಿಹಾಸವೇ. ವಾಸ್ತವವನ್ನು ಮತ್ತು ಸತ್ಯಸಂಗತಿಗಳನ್ನು ಎದುರಿಸಲು ವಿಫಲವಾಗುವ ಜನಾಂಗಗಳಿಗೆ ವಿನಾಶ ಕಟ್ಟಿಟ್ಟ ಬುತ್ತಿ. ನಮ್ಮ ಪರಂಪರೆ, ನಮ್ಮ ಸಂಸ್ಕೃತಿಗಳಿಗೆ ಅನೇಕ ಸಹಸ್ರವರ್ಷಗಳ ಇತಿಹಾಸವಿದೆ. ನಾವು ಶತ್ರುಗಳನ್ನು ಅರಿಯಲು ವಿಫಲರಾದೆವು. ನಮ್ಮಲ್ಲಿ ಶೌರ್ಯ – ಶಕ್ತಿಗಳಿದ್ದರೂ ಅಪಾತ್ರರಿಗೆ ಕ್ಷಮೆ ನೀಡಿ […]

ಮೀಸಲಾತಿ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ಸಂವಿಧಾನಾತ್ಮಕ ರಕ್ಷಣೆಯೊಂದಿಗೆ ನೀಡಿದ ಅವಕಾಶ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅವಕಾಶವಂಚಿತ ಸಮುದಾಯಗಳು ಪಡೆದ ಬಿಡುಗಡೆಯ ಬೆಳಕನ್ನು ಕಂಡಾಗ ಮೀಸಲಾತಿಯ ಹರಿಕಾರರ ದೂರದೃಷ್ಟಿಗೆ ಶತ ಶತ ಪ್ರಣಾಮಗಳನ್ನು ಸಲ್ಲಿಸಬೇಕಾಗಿದೆ. ಯಾರ ಪಾಲಿಗೆ ಶಾಲೆಗಳ ಬಾಗಿಲು ಮುಕ್ತವಾಗಿ ತೆರೆದಿರಲಿಲ್ಲವೋ, ಉನ್ನತ ಹುದ್ದೆಗಳ ಕನಸು ಕಾಣುವ ಅವಕಾಶಗಳೂ ಇಲ್ಲದಿದ್ದ ಕಾಲದಿಂದ ಮೇಲೆದ್ದು, ಪಾರ್ಲಿಮೆಂಟ್, ರಾಜಭವನಗಳ ಘನಪೀಠಗಳು ಯಾರ ಸ್ಪರ್ಶದಿಂದಲೂ ಮೈಲಿಗೆಯಾಗಲಾರದಂತೆ ಮಾಡಿತೋ ಅಂತಹ […]

ಮುಸ್ಲಿಂ ಮಹಿಳೆಯರಿಗೆ ಸಂಬಂಧಿಸಿದ `ತ್ರಿವಳಿ ತಲಾಖ್’ ಬಗ್ಗೆ ಮಗದೊಮ್ಮೆ ಬಹಳಷ್ಟು ಚರ್ಚೆಗಳು ದೇಶದಾದ್ಯಂತ ನಡೆಯುತ್ತಿವೆ. ತ್ರಿವಳಿ ತಲಾಖ್ ಮುಸ್ಲಿಂ ಪುರುಷರ ಪಾಲಿಗೆ ವರದಾನವೆಂದೇ ಪರಿಗಣಿಸಲಾಗಿರುವ ಒಂದು ಅನಿಷ್ಟ ಪದ್ಧತಿ. ಈ ಪದ್ಧತಿಯಂತೆ ಓರ್ವ ವಿವಾಹಿತ ಮುಸ್ಲಿಂ ಪುರುಷ ತನ್ನ ಪತ್ನಿಯಿಂದ ವಿವಾಹವಿಚ್ಛೇದನ ಪಡೆಯಲು ಬೇರೇನೂ ಮಾಡಬೇಕಾಗಿಲ್ಲ; ಮೂರು ಬಾರಿ ‘ತಲಾಖ್’ ಎಂದು ಹೇಳಿದರೆ ಅಷ್ಟು ಸಾಕು. ನ್ಯಾಯಾಲಯಗಳು ಈ ಪದ್ಧತಿಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿರುವ ಕಾರಣದಿಂದ ಇದು ಮತ್ತೆಮತ್ತೆ […]

ಅವಿನಾಶ್ ವಿ.ಜಿ, ಹವ್ಯಾಸಿ ಬರಹಗಾರರು ಎಂ. ಗೋಪಾಲಕೃಷ್ಣ ಅಡಿಗರ ಬರಹಗಳಲ್ಲಿ ನನ್ನ ಮೆಚ್ಚಿನದು ‘ವಿಜಯನಗರದ ನೆನಪು’. ಈ ಕವನವು ಅಡಿಗರ ‘ಕಟ್ಟುವೆವು ನಾವು’ ಕವನ ಸಂಕಲನದ ಒಂದು ಕವನ. ‘ಅಡಿಗರ ಕವನದಲ್ಲಿ ಯಕ್ಷಗಾನ ಗತ್ತು ಎದ್ದು ತೋರುತ್ತದೆ’ ಎಂದು ಲಂಕೇಶರು ಒಂದು ಕಡೆ ಹೇಳಿದ್ದಾರೆ. ಆ ಮಾತಿಗೆ ಈ ಕವನವು ಒಂದು ಸೂಕ್ತ ಉದಾಹರಣೆ ಎಂದು ಹೇಳಬಹುದು. ಪ್ರತಿ ಕನ್ನಡಿಗನಿಗೂ ತನ್ನ ಉತ್ಕೃಷ್ಟ ಪರಂಪರೆಯ ಬಗ್ಗೆ, ಈ ಕವನ ಓದಿದರೆ […]

ಆವಿಷ್ಕಾರದ ಹರಿಕಾರಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿಪುಸ್ತಕ ಪರಿಚಯ : ಪ್ರವೀಣ್ ಪಟವರ್ಧನ್ ಎಲಿಜರ್ ಬೆನ್ ಯಹುದಾ ಹೀಬ್ರೂ ಭಾಷೆಯನ್ನು ಇಸ್ರೇಲಿಗರ ಜನಭಾಷೆಯನ್ನಾಗಿ ಮಾಡಿದ ಕತೆಯನ್ನು ಡಾ. ಎಚ್ ಆರ್ ವಿಶ್ವಾಸ ‘ಮತ್ತೆ ಹೊತ್ತಿತು ಹೀಬ್ರೂ ಹಣತೆ’ ಪುಸ್ತಕದಲ್ಲಿ ಅತ್ಯದ್ಭುತವಾಗಿ, ಸವಿಸ್ತಾರವಾಗಿ ವಿವರಿಸಿದ್ದಾರೆ. ದೇವ ಭಾಷೆ ಎಂದು ಮೂದಲಿಸಲ್ಪಟ್ಟ ಹೀಬ್ರೂವನ್ನು ಜನಸಾಮಾನ್ಯರು ಬಳಸುವಂತಾಗಿ ಇಂದು ಆ ದೇಶದ ರಾಷ್ಟ್ರಭಾಷೆಯಾಗಿ ಪರಿವರ್ತಿತವಾಗಬೇಕೆಂದರೆ ಬೆನ್ ಯಹುದಾ ಸಾಧನೆಯನ್ನು, ಪರಿಶ್ರಮವನ್ನು ಆ ಪುಸ್ತಕದಿಂದ ಓದಿ […]

‘ವ್ಯಕ್ತಿ ಸಣ್ಣವನು. ಸಂಘಟನೆ, ರಾಷ್ಟ್ರ ದೊಡ್ಡದು’ ಎಂಬ ಧ್ಯೇಯದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತನ್ನ ವ್ಯವಸ್ಥೆಯಾದ ಶಾಖೆಗಳಿಂದ ವ್ಯಕ್ತಿ ನಿರ್ಮಾಣ ಮಾಡುತ್ತಾ, ರಾಷ್ಟ್ರದ ಉನ್ನತಿಗೆ ಶ್ರಮಿಸುವುದು ತಿಳಿದಿರುವ ಸಂಗತಿಯೇ. ಈ ಶಾಖೆಯ ಜವಾಬ್ದಾರಿ ಅಲ್ಲಿನ ಮುಖ್ಯ ಶಿಕ್ಷಕನಿಗೆ, ಕಾರ್ಯವಾಹನಿಗಿವೆಯಾದರೂ ಸದಾ ಕಾಲ ಸಂಘಟನೆಯ ಕೆಲಸದ ಮೂಲಕ ರಾಷ್ಟ್ರದ ಕೆಲಸದ ಬಗ್ಗೆ ಧ್ಯಾನಿಸುವ, ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಸಂನ್ಯಾಸಿಗಳಿರುತ್ತಾರೆಂಬುದು ಹೊರ ವಲಯದಲ್ಲಿದ್ದುಕೊಂಡು ಸಂಘವನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆಂಬುವವರಿಗೆ ಗೋಚರಿಸದು. ಈ […]

ಜನವರಿ 11, 1966 ಲಾಲ್ ಬಹದ್ದೂರ್ ಶಾಸ್ತ್ರಿಗಳು ತಾಷ್ಕೆಂಟ್ ನಲ್ಲಿ ತೀರಿಕೊಂಡರು. ಅವರ ಸಾವಿನ ವಿಷಯದ ಕುರಿತಾಗಿ ಕನ್ನಡದಲ್ಲಿ ಬಂದಿರುವ ಪುಸ್ತಕದ ಪರಿಚಯ ಲೇಖನ: ಪ್ರವೀಣ್ ಪಟವರ್ಧನ್ ನಮ್ಮ ದೇಶದಲ್ಲಿ ಹಲವಾರು ರಾಷ್ಟ್ರೀಯ ನಾಯಕರುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಸಾವಿನ ಆಯಾಮದಲ್ಲಷ್ಟೇ ಅಲ್ಲದೆ, ಅದರ ಸುತ್ತ ಬೆಸೆದಿರುವಂತಹ ಅನೇಕ ವಿಷಯಗಳಲ್ಲಿ ಮೋಸ ವಂಚನೆಗಳನ್ನು ಕಾಣಬಹುದಾಗಿರುತ್ತದೆ. ಕಾಲಕ್ರಮೇಣ ಹೊಸ ಸತ್ಯಗಳು ಬೆಳಕು ಕಂಡಂತೆ ತಪ್ಪಿತಸ್ಥರ ಮುಖವಾಡ ಕಳಚಲಾರಂಭಿಸುತ್ತದೆ.  ಕಾಶ್ಮೀರದಲ್ಲಿ ಜನ ಸಂಘದ […]

ಪುಸ್ತಕ ವಿಮರ್ಶೆ ಪರಿಚಯ: ಸತ್ಯನಾರಾಯಣ ಶಾನುಭಾಗ್ ಪೋರ್ಚುಗೀಸರಿಂದ ಆರಂಭಗೊಂಡ ಯೂರೋಪಿಯನ್ ವಸಾಹತು ಕಾಲದಲ್ಲಿ ಆಮದಾದ ಕ್ರೈಸ್ತಮತ ಪ್ರಚಾರ ವಿಷನರಿ’ರಿಗಳ ಚಟುವಟಿಕೆ ದೇಶದೆಲ್ಲೆಡೆ ತನ್ನ ಜಾಲವನ್ನು ವ್ಯವಸ್ಥಿತವಾಗಿ ಹರಡಿದೆ. ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವುದು ಅವರ ಒಂದಂಶದ ಕಾರ್ಯಕ್ರಮವೆಂದು ಕಂಡುಬಂದರೂ ಅದರ ಮೂಲ ಉದ್ದೇಶ ಮತ್ತು ಮತಾಂತರದ ಕುಟಿಲ ಕಾರ್ಯತಂತ್ರಕ್ಕೆ ಇರುವ ಮುಖಗಳು ಅನೇಕ. ಭಾರತದಲ್ಲಿ ನಾನೂರು ವರ್ಷಗಳಿಗೂ ಮಿಕ್ಕಿ ನಡೆದಿರುವ ಕ್ರೈಸ್ತ ವಿಷನರಿ ಚಟುವಟಿಕೆಗಳ ಧೂರ್ತ ಕೆಲಸಗಳು ಮತ್ತು ಅದಕ್ಕೆ […]