ಅಖಿಲ ಭಾರತೀಯ ಪ್ರತಿನಿಧಿ ಸಭಾ – ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ ಮಹತ್ವದ ಸಭೆ. ಈ ವರ್ಷದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಇದೇ 2014ರ ಮಾರ್ಚ್ 7, 8, 9ರಂದು ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಶಾಲ ಪರಿಸರದಲ್ಲಿ ನಡೆಯಲಿದೆ. ದೇಶಾದ್ಯಂತ ಹರಡಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳ ಮೂಲಕ ಆಯ್ಕೆಯಾದ ಪ್ರತಿನಿಧಿಗಳು, ಸಂಘದ ರಾಜ್ಯಮಟ್ಟದ ಹೊಣೆಗಾರಿಕೆಯ ಪದಾಧಿಕಾರಿಗಳು ಜೊತೆಗೆ ಸಂಘ ಪರಿವಾರದ 40ಕ್ಕೂ ಮಿಕ್ಕ […]

ಹಾಸನ: ರಾಷ್ಟೀಯ ಸ್ವಯ೦ಸೇವಕ ಸ೦ಘದ ಎರಡನೇ ಸರಸ೦ಘಚಾಲಕರಾದ  ಶ್ರೀ ಗುರೂಜೀ ಜನ್ಮದಿನದ ಪ್ರಯುಕ್ತ ‘ಸೇವಾಭಾರತಿ’ ಆಶ್ರಯದಲ್ಲಿ ಹಾಸನದಲ್ಲಿ ರಕ್ತದಾನ ಶಿಬಿರ ನಡೆಯಿತು. ಸುಮಾರು 70ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.

ಬೆಂಗಳೂರು   ಫೆಬ್ರವರಿ 23: ಪ್ರತಿ ವರ್ಷದಂತೆ ಈ ವರ್ಷವೂ ಗೋವಿಂದರಾಜನಗರದಲ್ಲಿ ರಾಷ್ಟೋತ್ಥಾನ ರಕ್ತ ನಿಧಿ ,ಯಾದವ ಸೇವಾ ಸಮಿತಿಯ ಮತ್ತು ನಚಿಕೇತ ಮನೋವಿಕಾಸ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾಗಿದ್ದ  ಶ್ರೀ ಗುರೂಜಿ ಯವರ ಜನ್ಮದಿನ ಹಾಗೂ ಶ್ರೀ ಯಾದವರಾವ್ ಜೋಷಿಯವರ ಜನ್ಮ ಶತಾಬ್ದಿ ಯ ಪ್ರಯುಕ್ತ ಗೋವಿಂದರಾಜನಗರದ ರಾಷ್ಟ್ರೀಯ ಸ್ವಯಂಸೇವಕ ಸಂಘದ  ಘಟಕವು ದಿನಾಂಕ 23-2-2014 ರಂದು ನಚಿಕೆತ ಮನೋ ವಿಕಾಸ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿತ್ತು. ಖ್ಯಾತ […]

ಉದ್ಘಾಟನಾ ಸಮಾರಂಭದ ವರದಿ ಹುಬ್ಬಳ್ಳಿ ಜ 31: ಪರಿವರ್ತನೆಗಾಗಿ ಯುವ ಜನತೆ ಎಂಬ ಘೋಷ ವಾಕ್ಯದೊಂದಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ೩೩ ನೇ ರಾಜ್ಯ ಸಮ್ಮೇಳನಕ್ಕೆ ಇಲ್ಲಿಯ ಬಿವಿಬಿ ಇಂಜೀನಿಯರಿಂಗ್ ಕಾಲೇಜಿನಲ್ಲಿಂದು ಚಾಲನೆ ನೀಡಲಾಯಿತು. ಸುಂದರ ಹಿನ್ನೆಲೆಯ ವಿನ್ಯಾಸದಲ್ಲಿ ಸಜ್ಜುಗೊಂಡಿದ್ದ ದಿ.ಜಿ.ಎಸ್.ಶಿವರುದ್ರಪ್ಪ ವೇದಿಕೆಯಲ್ಲಿ , ಪೂಜ್ಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಡಾ.ಮೀನಾ ಚಂದಾವರಕರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. […]

ಶಿವಮೊಗ್ಗ: ಅಲ್ಲಿ ಮಾತನಾಡಿದ ಪ್ರಮುಖರೆಲ್ಲರೂ ವ್ಯಕ್ತಪಡಿಸಿದ್ದು ಒಂದೇ ಕಾಳಜಿ. ಅದು ಆಧುನಿಕ ಮಕ್ಕಳ ಮಾನಸಿಕತೆಯ ಕುರಿತು. ಇಂದಿನ ಮಕ್ಕಳು ಬೆಳೆಯುತ್ತಿರುವ ವೈಖರಿ ಕುರಿತು ಮಾತನಾಡಿದ ಹಿರಿಯರ ಮಾತುಗಳಲ್ಲಿ ಕಳವಳ, ಕಾಳಜಿ ವ್ಯಕ್ತವಾಗಿತ್ತು. ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ತುಡಿತ ಆ ಮಾತುಗಳಲ್ಲಿತ್ತು. ಸಂದರ್ಭ: ರಾಷ್ಟ್ರೋತ್ಥಾನ ಪರಿಷತ್‌ನ ಭಾರತ-ಭಾರತಿ ಯೋಜನೆಯ ೨ನೇ ಸರಣಿಯ ಪುಸ್ತಕಗಳ ಲೋಕಾರ್ಪಣೆ. ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಜ.೨೮ರಂದು ಭಾರತ-ಭಾರತಿ ೨ನೇ ಸರಣಿಯ ೫೦ ಪುಸ್ತಕಗಳನ್ನು ಹಿರಿಯ ಸಾಹಿತಿ […]

ಕು. ಸೌಮ್ಯಳಿಗೆ ನ್ಯಾಶನಲ್ ಬೆಸ್ಟ್ ಎನ್.ಸಿ.ಸಿ ಕೆಡೆಟ್ ಪ್ರಶಸ್ತಿ ನವದೆಹಲಿ ಜನವರಿ 28, 2014:   ಉತ್ತರ ಕನ್ನಡ ಜಿಲ್ಲೆಯ  ಸಿದ್ದಾಪುರ ತಾಲೂಕಿನ, ಕು.ಸೌಮ್ಯ ಹೆಗಡೆ ಇವರು ಈ ಸಾಲಿನ ಅತ್ಯುತ್ತಮ ಎನ್.ಸಿ.ಸಿ ಕೆಡೆಟ್ ಪ್ರಶಸ್ತಿಯನ್ನು ದಿನಾಂಕ 28.01.2014ರಂದು ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಮಾನ್ಯ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರವರಿಂದ ಪಡೆದಿರುತ್ತಾರೆ. ಕು.ಸೌಮ್ಯ ಹೆಗಡೆಯವರು, ಹೆಗ್ಗರಣೆಯ ಶ್ರೀ ರಾಮಚಂದ್ರ ಹೆಗಡೆ ಮತ್ತು ಶ್ರೀಮತಿ ಶಾರದ ಹೆಗಡೆಯವರ ಮೊಮ್ಮಗಳಾಗಿದ್ದು, ಶ್ರೀ […]

ಜೋಡುಕಲ್ಲು  Kasaragod: ಸ್ವಾಮಿ ವಿವೇಕಾನಂದರ 150 ನೇ ಜನ್ಮ ವರ್ಷಾಚರಣೆಯ ಸಂದರ್ಭದಲ್ಲಿ ಸೇವಾಭಾರತಿ (ರಿ) ಜೋಡುಕಲ್ಲು ಇದರ ವತಿಯಿಂದ “ವಿವೇಕ ಪಥ” ಸಮಾಜ ಜಾಗೃತಿ ಸಮಾವೇಶ ಜನವರಿ 26 ರ ಗಣರಾಜ್ಯೋತ್ಸವದ ದಿನದಂದು ಜೋಡುಕಲ್ಲು  ಸೊಂದಿ ದುರ್ಗಾಲಯದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮೊದಲಿಗೆ ರಾಷ್ಟ್ರಧ್ವಜಾರೋಹಣ ನಡೆಸಿ ಧ್ವಜ ವಂದನೆ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯ ಸಂದರ್ಭದಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೇಶವ […]

by Du Gu Lakshman ಕಥೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಅದರಲ್ಲೂ ಮಕ್ಕಳಿಗೆ ಕಥೆಗಳೆಂದರೆ ಇಷ್ಟವಿಲ್ಲದೆ ಇರಲು ಸಾಧ್ಯವೆ? ರಚ್ಚೆ ಹಿಡಿದ ಪುಟ್ಟ ಮಕ್ಕಳನ್ನು ಸಂತೈಸಲು ತಾಯಿಗೆ ಹೊಳೆಯುವ ಒಳ್ಳೆಯ ಉಪಾಯವೆಂದರೆ ಆ ಮಗುವಿಗೆ ಪುಟ್ಟದೊಂದು ಕಥೆ ಹೇಳುವುದು. ಅದು ಚಂದ ಮಾಮನ ಕಥೆಯಾಗಿರಬಹುದು ಅಥವಾ ಯಾವುದೋ ಅಡುಗೂಲಜ್ಜಿಯ ಕಥೆ ಇರಬಹುದು ಇಲ್ಲವೇ ಬ್ರಹ್ಮ ರಾಕ್ಷಸನೊಬ್ಬನ ಕಥೆಯೂ ಆಗಿರಬಹುದು. ಹೀಗೆ ಕಥೆಗಳನ್ನು ಕೇಳುವುದೆಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಖುಷಿ ಕೊಡುವ […]

ಜನವರಿ 28ರಂದು ಶಿವಮೊಗ್ಗದಲ್ಲಿ ಭಾರತ-ಭಾರತಿ ಪುಸ್ತಕ ಬಿಡುಗಡೆ : 70ರ ದಶಕದಲ್ಲಿ ಮಕ್ಕಳ ಸಾಹಿತ್ಯದಲ್ಲಿ ದಾಖಲೆಯನ್ನೇ ನಿರ್ಮಿಸಿದ್ದ ‘ಭಾರತ-ಭಾರತಿ ಪುಸ್ತಕ ಸಂಪದ’ ಮಾಲೆಯ ಹೊಸ 50 ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ 2014ರ ಜನವರಿ 28ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನೂರಾರು ಮಹಾಪುರುಷರ ಹಾಗೂ ಇತಿಹಾಸದಲ್ಲಡಗಿದ ಬೆಳಕು ಕಾಣದ ಅನೇಕ ಮಂದಿ ಮಹನೀಯರ ಜೀವನ ಚರಿತ್ರೆಯ ಸಂಕಲನವೇ ‘ಭಾರತ-ಭಾರತಿ ಪುಸ್ತಕ ಸಂಪದ’ ಮಾಲೆ. ಈಗಾಗಲೇ 510 ಮಹಾಪುರುಷರ ಜೀವನದ ಮೇಲೆ […]