ಮಂಗಳೂರು ಜ೧೦: ಮಹಿಳೆಯರ ರಕ್ಷಣೆ ಸರಕಾರದ ಕರ್ತವ್ಯ ಅಸಾಧ್ಯವಾದರೆ ಅಧಿಕಾರ ಬಿಡಿ:ತೇಜಸ್ವಿನಿ ಮಂಗಳೂರು: ಮಹಿಳೆಯರ ಸುರಕ್ಷತೆ ಬಿಕ್ಷೆ ಅಲ್ಲ; ಅದು ನಮ್ಮ ಹಕ್ಕು. ರಕ್ಷಣೆ ನೀಡುವುದು ಸರಕಾರದ ಕರ್ತವ್ಯ. ಅದನ್ನು ಸರ್ಮರ್ಥವಾಗಿ ನಿರ್ವಹಿಸುವುದು ಸಾಧ್ಯವಾಗದಿದ್ದರೆ ಅಧಿಕಾರ ಬಿಡಿ ಎಂದು ಮಾಜಿ ಸಂಸತ್ ಸದಸ್ಯೆ,ಕಾಂಗ್ರೆಸ್ ನಾಯಕಿ ತೇಜಸ್ವಿನಿ ರಮೇಶ್ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.   ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮಂಗಳೂರು ಘಟಕ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ  ಸುರಕ್ಷಿತ ಮಹಿಳೆ-ಸ್ವಾಸ್ಥ್ಯಸಮಾಜ […]

ನಾಗಪುರ ಜ:೧೦: ಟಿಬೇಟಿಯನ್ನರ ಪರಮೋಚ್ಛ ಧಾರ್ಮಿಕ ನಾಯಕ, ನೋಬಲ್ ಪ್ರಶಸ್ತಿ ವಿಜೇತ ದಲಾಯಿ ಲಾಮಾ ಇಂದು ಇಲ್ಲಿನ ರೇಶಮ್ ಭಾಗ್ ಪ್ರದೇಶದಲ್ಲಿನ ಆರೆಸ್ಸೆಸ್ಸ್ ಮುಖ್ಯಾಲಯಕ್ಕೆ ಭೇಟಿ ನೀಡಿ ಇಲ್ಲಿರುವ ಸಂಘ ಸ್ಥಾಪಕ ಡಾ. ಹೆಡಗೇವಾರ ಹಾಗೂ ದ್ವಿತೀಯ ಸರಸಂಘಚಾಲಕರಾದ ಶ್ರೀ ಗುರೂಜೀ ಅವರ ಸಮಾಧಿಗಳಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲಾಯಿ ಲಾಮಾ, ಭಾರತ ಮತ್ತು ಟಿಬೇಟ್ ನಡುವಿನ ಸಂಬಂಧ ಐತಿಹಾಸಿಕ ಹಾಗೂ ಪ್ರಾಚೀನವಾದುದು. ದೇಶಭ್ರಷ್ಟರಾಗಿ […]

Tumkaur January 10: ABVP has launched a new project, ‘Vidyarthi for Vikas’ (Student for Development) in Tumkur in Karnataka. ಪರಿಸರದ ಉಳಿವಿಗಾಗಿ ಗ್ರಾಮಗಳತ್ತ ಮುಖಮಾಡಿ  – ಅ. ಶ್ರೀ. ಆನಂದ್ Tumkur Jan 10: ಪರಿಸರ ಉಳಿಯಬೇಕೆಂದರೆ ಗ್ರಾಮಗಳು ಉಳಿಯಬೇಕು, ಗ್ರಾಮಗಳ ಉಳಿವು ಎಂದರೆ ಕೃಷಿಯ ಉದ್ದಾರ. ಹಾಗಾಗಿ ಕೃಷಿ, ರೈತ ಮತ್ತು ಗ್ರಾಮಗಳ ರಕ್ಷಣೆಯಿಂದ ಪರಿಸರ ಉಳಿಯಲು ಸಾದ್ಯ ಎಂದು ಕರ್ನಾಟಕ […]

ನವದೆಹಲಿ ಜ.೧೦: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ ಭಾಗವತರವರು ಆಮ್ ಆದಮಿ ಪಾರ್ಟಿಯನ್ನು ಸುಲಭವಾಗಿ ಪರಿಗಣಿಸದಂತೆ ಎಚ್ಚರಿಕೆ ನೀಡಿದ್ದಾರೆ ಮತ್ತು ಅದರಿಂದ ಕಲಿಯುವಂತೆ ಸಲಹೆ ನೀಡಿದ್ದಾರೆ ಎನ್ನುವ ಮಾಧ್ಯಮಗಳ ವರದಿಯು ಕಾಲ್ಪನಿಕ, ಅಸತ್ಯ ಮತ್ತು ಆಧಾರರಹಿತ. ಜನರನ್ನು ಗೊಂದಲಕ್ಕೀಡುಮಾಡುವ ಸಲುವಾಗಿ ಇಂತಹ ಊಹಾತ್ಮಕ ಟೇಬಲ್ ಸುದ್ದಿ ವರದಿಯನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ತೋರುತ್ತದೆ ಎಂದು ಆರೆಸ್ಸೆಸ್ಸಿನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಡಾ. ಮನಮೋಹನ ವೈದ್ಯ ಹೇಳಿದರು. […]

ಮಂಗಳೂರು: ಮಹಿಳಾ ಸುರಕ್ಷತೆಯ ಕತ್ತಲು, ಭ್ರಷ್ಟಾಚಾರಯುಕ್ತ ಆರ್ಥಿಕ ಅಸಮಾನತೆ, ಆಂತರಿಕ ಹಾಗೂ ಬಾಹ್ಯ ಗಡಿಸಮಸ್ಯೆ ದೇಶದ ಮುಂದಿರುವ ಸವಾಲುಗಳಾಗಿವೆ. ಈ ನಿಟ್ಟಿನಲ್ಲಿ ದೇಶದ ಭವಿಷ್ಯಕ್ಕಾಗಿ ಯುವಸಮೂಹ ವಿವೇಕಾನಂದರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದು ಎಬಿವಿಪಿಯ ರಾಜ್ಯಾಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಕರೆ ನೀಡಿದ್ದಾರೆ. ಅವರು ಮಂಗಳವಾರ Jan 07, ನಗರದ ಪುರಭವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವತಿಯಿಂದ ಸ್ವಾಮೀ ವಿವೇಕಾನಂದರ 150ನೇ ವರ್ಷಾಚರಣೆಯ ಸಮಾರೋಪದ ನಿಮಿತ್ತ ಆಯೋಜಿಸಿದ್ದ ವಿವೇಕೋತ್ಸವ-2014 ರಲ್ಲಿ ದಿಕ್ಸೂಚಿ […]

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಬನಶಂಕರಿ ಭಾಗದ ‘ಸೇವಾ ಸಾಂಘಿಕ್ ‘ನ ಅಡಿಯಲ್ಲಿ ಭಾನುವಾರದಂದು  “ಸಾರಕ್ಕಿ ಕೆರೆ” ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಸಾಂಘಿಕ್ ನಲ್ಲಿ ಪ್ರಾಂತ ಸೇವಾ ಪ್ರಮುಖರಾದ ಶ್ರೀ ಸದಾಶಿವ್ ಸೇವೆಯ ಮಹತ್ವ ತಿಳಿಸಿದರು. ಸ್ವಚ್ಚತಾ ಕಾರ್ಯಕ್ರಮದಲ್ಲಿ ಸಂಘದ ಸ್ವಯಂ ಸೇವಕರ ಜೊತೆ ಬೆಂಗಳೂರು ಮಹಾನಗರಪಾಲಿಕೆ ಕಾರ್ಮಿಕರು, ಅಧಿಕಾರಿಗಳು, ಬಿ ಜೆ ಪಿ ಯ ಕಾರ್ಯಕರ್ತರು, ಎನ್ ಸಿ ಸಿ ಸ್ವಯಂ ಸೇವಕರು ಭಾಗವಹಿಸಿದ್ದರು. 600  ಕ್ಕೂ ಹೆಚ್ಚು ಜನಭಾಗವಹಿಸಿದ್ದು […]

ಬೆಂಗಳೂರು ಡಿ. ೨: ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಆವರಣದಲ್ಲಿ ಭಾನುವಾರ ಮುಂಜಾನೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ ಹಂದೆಯವರೊಂದಿಗೆ ಸಂವಾದ ನಡೆಸಿದ ತಪಸ್‌ನ ವಿದ್ಯಾರ್ಥಿಗಳಿಗೆ ಅದೊಂದು ಸ್ಮರಣೀಯ ಮತ್ತು ಪ್ರೇರಣಾದಾಯಿ ದಿನವಾಯಿತು. ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಆರಂಭಿಸಿದ ಒಂದು ಪ್ರಕಲ್ಪ ’ತಪಸ್’, ಸಮಾಜದ ಬಡವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸವನ್ನು ಸಾಧ್ಯಗೊಳಿಸುವುದರ ಜೊತೆಗೆ ಅವರನ್ನು ಅಭಿವೃದ್ಧಿಯ ಚಾಲಕರಾಗಲು ಸಮರ್ಥರನ್ನಾಗಿಸುವ ಹಿರಿದಾದ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಹತ್ತನೆಯ ತರಗತಿಯಲ್ಲಿ ಓದುತ್ತಿರುವ ೩೦-೪೦ […]

ಕಣ್ಣೂರು ಡಿ ೨: ಆರೆಸ್ಸೆಸ್ ಸ್ವಯಂಸೇವಕ ಹಾಗೂ ಬಿಜೆಪಿ ಕಾರ್ಯಕರ್ತರಾಗಿದ್ದ ಶ್ರೀ ವಿನೋದ ಕುಮಾರ ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರಿನಲ್ಲಿ ಬರ್ಬರವಾಗಿ ಹತ್ಯೆಗೀಡಾದರು. ನಡೆದಿದ್ದೇನು? ವರ್ಷಗಳ ಹಿಂದೆ ಡಿಸೆಂಬರ್ 1, 1999ರಂದು ಹತ್ಯೆಗೀಡಾದ ಆರೆಸ್ಸೆಸ್ ಮುಖಂಡ ಜಯಕೃಷ್ಣನ್ ಮಾಸ್ಟರ್‌ರವರ ನೆನಪಿನಲ್ಲಿ ಸಂಘ ಪರಿವಾರದ ಸಂಘಟನೆಗಳು ಪ್ರತಿವರ್ಷ ಡಿಸೆಂಬರ 1ನ್ನು ಜಯಕೃಷ್ಣನ್ ಮಾಸ್ಟರ್ ಬಲಿದಾನ ದಿವಸ ಎಂದು ಆಚರಿಸುತ್ತಿವೆ. ಅದರ ನಿಮಿತ್ತ ಕಣ್ಣೂರಿನಲ್ಲಿ ಭಾನುವಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು […]

ಕೊಚ್ಚಿ ನ ೨೮: ಕಂಚೀ ಶ್ರೀಗಳ ವಿರುದ್ಧ ನಡೆದ ಷಡ್ಯಂತ್ರದ ಹಿಂದಿರುವ ಎಲ್ಲ ಶಕ್ತಿಗಳು ಹಾಗೂ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರನ್ನು ಕಟ್ಟುನಿಟ್ಟಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ಚಿಂತಕ ಮತ್ತು ಕೇರಳದ ಭಾರತೀಯ ವಿಚಾರ ಕೇಂದ್ರದ ನಿರ್ದೇಶಕ ಶ್ರೀ ಪಿ ಪರಮೇಶ್ವರನ್‌ರವರು ಆಗ್ರಹಸಿದ್ದಾರೆ. ’ಕಂಚೀ ಶಂಕರಾಚಾರ್ಯ ಶ್ರೀ ಜಯೇಂದ್ರ ಸರಸ್ವತೀ ಮತ್ತು ಇತರರನ್ನು ಪಿತೂರಿ ಮತ್ತು ಕೊಲೆಯ ಆರೋಪದ ಪ್ರಕರಣದಿಂದ ನ್ಯಾಯಾಲಯವು ಮುಕ್ತಗೊಳಿಸಿದೆ. […]

ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪದವಿ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಾ ವರ್ಗ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ನಡೆಯಿತು. ವಿಭಾಗದ ೪೨ ಸ್ಥಾನಗಳಿಂದ ೯೧ ಮಂದಿ ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು. ಗುರುವಾರ ಸಾರ್ವಜನಿಕ ಸಮಾರೋಪ ನಡೆಯಿತು. ಸಮಾರಂಭದಲ್ಲಿ ಬೌದಿಟಛಿಕ್ ನೀಡಿದ ಕುಟುಂಬ ಪ್ರಭೋಧನ್‌ನ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಪರಮವೈಭವದ ನಮ್ಮ ಗುರಿ ಸಾಧಿತವಾಗಲು ಶಕ್ತಿಯ ವರ್ಧನೆಯಾಗಬೇಕಿದೆ. ಸಂಘಟನಾ ಶಕ್ತಿ ಜಗತ್ತಿಗೆ ದಿಕ್ಕು […]