ಮುಂಬೈ ನ.25: ‘ಅಸಹಾಯಕ, ನಿರ್ಗತಿಕ, ರೋಗಿಷ್ಟ, ಮಾನಸಿಕ ಅಸ್ವಸ್ಥ ಮತ್ತು ದೀನರಿಗೆ ಆರೋಗ್ಯಪೂರ್ಣ ಆಹಾರ, ಆರೈಕೆ ಮತ್ತು ಪುನರ್ವಸತಿಯ ಅವಕಾಶಗಳನ್ನು ಕಲ್ಪಿಸಿ ಮಾನವೀಯ ಘನತೆಯನ್ನು ಎತ್ತಿಹಿಡಿದ’ ಗಮನಾರ್ಹ ಕಾರ್ಯಕ್ಕಾಗಿ ತಮಿಳುನಾಡಿನ ಮಧುರೈನಲ್ಲಿರುವ ಅಕ್ಷಯ ಟ್ರಸ್ಟ್‌ನ ನಾರಾಯಣನ್ ಕೃಷ್ಣನ್ ಅವರಿಗೆ 2013 ನೇ ಸಾಲಿನ ಪ್ರತಿಷ್ಠಿತ ಪ್ರೊ. ಯಶವಂತರಾವ್ ಕೇಳ್ಕರ್ ಪುರಸ್ಕಾರ ನೀಡಲು ಆಯ್ಕೆ ಸಮೀತಿಯು ತೀರ್ಮಾನಿಸಿದೆ. ಬೆಂಗಳೂರಿನ ಪ್ರತಿಷ್ಠಿತ ತಾಜ್ ಹೋಟೆಲಿನಲ್ಲಿ ಯಶಸ್ವೀ ಬಾಣಸಿಗ(Chef )ರಾಗಿದ್ದ ನಾರಾಯಣನ್ ಸ್ವಿಟ್ಜರಲ್ಯಾಂಡಿನ ಗಣ್ಯ ಪಂಚತಾರಾ ಹೋಟೆಲೊಂದರಲ್ಲಿ […]

ಮಂಗಳೂರು: ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹಾಗೂ ಅಕ್ಷತಾ ಸಾವಿನ ಬಗ್ಗೆ ಸಿಓಡಿ ತನಿಖೆಗೆ ಆಗ್ರಹಿಸಿ ನಗದರ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಯತೀಶ್ ಕುಮಾರ್. ಪಿ. ‘ಈ ಪ್ರಕರಣವನ್ನು ಆದಷ್ಟು ಬೇಗ ಸರಕಾರ ಸಿಬಿಐ ಮತ್ತು ಸಿಓಡಿಗೆ ವಹಿಸಬೇಕು. ಇವತ್ತು ಸರ್ಕಾರ ದಿಲ್ಲಿಗೊಂದು ಕಾನೂನು ನಮಗೊಂದು ಕಾನೂನು ರೀತಿಯಲ್ಲಿ ವರ್ತಿಸುತ್ತದೆ. ಅಲ್ಲಿಯ ಪ್ರಕರಣವನ್ನು ಅಷ್ಟು […]

ಸನ್ಮಾನ್ಯರಾದ ರಾಜಸ್ಥಾನದ ಮುಖ್ಯಮಂತ್ರಿಯವರಿಗೆ, ಸಾದರ ಪ್ರಣಾಮಗಳು, ಕಳೆದ ಜುಲೈ ೩ರಂದು ಭಾರತ ಪರಿಕ್ರಮ ಪಾದಯಾತ್ರೆಯು ತಮ್ಮ ಐತಿಹಾಸಿಕ ರಾಜ್ಯ ರಾಜಸ್ಥಾನವನ್ನು ಪ್ರವೇಶಿಸಿತು. ಈ ಪಾದಯಾತ್ರೆಯು ಕಳೆದ ವರ್ಷ (೨೦೧೨) ಆಗಸ್ಟ್ ೯ರಂದು ಕನ್ಯಾಕುಮಾರಿಯಿಂದ ಆರಂಭವಾಯಿತೆಂಬುದು ತಮಗೆ ತಿಳಿದಿರಬಹುದು. ಆಗಸ್ಟ್ ೯ ’ಭಾರತ ಬಿಟ್ಟು ತೊಲಗಿ’ ಮತ್ತು ‘ಶ್ರೀಕೃಷ್ಣಜನ್ಮಾಷ್ಟಮಿ’ಗಳ ದಿನವಾಗಿತ್ತು. ಆ ದಿನದ ಸಂದೇಶವನ್ನು ನಾವೀಗ ಮರೆತಿದ್ದೇವೆ. ಅದನ್ನು ಪುನಃ ನೆನಪಿಸುವ ಉzಶದಿಂದ ನಾವು ಈ ಯಾತ್ರೆಯನ್ನು ಕೈಗೊಂಡಿzವೆ. ಅಂದು ನಾವು ಇಂಗ್ಲಿಷರ […]

ತಲಸ್ಸಿಮಿಯಾ ಒಂದು ಶಾಪವಲ್ಲ; ಅದೊಂದು ನ್ಯೂನ್ಯತೆಯಷ್ಟೇ :  ಡಾ|| ಶೋಭಾ ತುಳಿ  ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ನ್ಯೂನ್ಯತೆಗಳಿಗೆ ಒಳಗಾಗಿರುತ್ತಾರೆ. ಹಾಗೆಯೇ ತಲೆಸ್ಸಿಮಿಯಾ ಎಂಬುದು ಒಂದು ನ್ಯೂನ್ಯತೆಯೇ ಹೊರತು ಶಾಪವಲ್ಲ. ಕ್ರಮಬದ್ಧವಾದ ಮತ್ತು ನಿರಂತರ ಚಿಕಿತ್ಸೆಯಿಂದ ಈ ರೋಗವನ್ನು ಗುಣಪಡಿಸಬಹುದು ಎಂದು ತಲಸ್ಸೆಮಿಯಾ ಇಂಟರ್ ನ್ಯಾಷನಲ್ ಫೆಡರೇಷನ್‌ನ ಉಪಾಧ್ಯಕ್ಷೆ ಹಾಗೂ ತಲಸ್ಸೆಮಿಯಾ ಇಂಡಿಯಾದ ಕಾರ್ಯದರ್ಶಿಯಾದ ಡಾ|| ಶೋಭಾ ತುಳಿ ಅವರು ತಿಳಿಸಿದರು. ಅವರು ಆಗಸ್ಟ್ ೨೪ರಂದು ರಾಷ್ಟ್ರೋತ್ಥಾನ […]

ಸಮಾಚಾರ ಸಮೀಕ್ಷೆ  ಆಗಸ್ಟ್ 2013 ತೆಲಂಗಾಣ ರಾಜ್ಯ ರಚನೆ ಸುದ್ದಿ: ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಯು.ಪಿ.ಎ. ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ಸ್ಥಾಪಿಸುವ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಹೈದರಾಬಾದ್ ನಗರವು ತೆಲಂಗಾಣ ಮತ್ತು ಉಳಿದ ಸೀಮಾಂಧ್ರ ರಾಜ್ಯಗಳೆರಡಕ್ಕೂ ಹತ್ತು ವರ್ಷಗಳ ಕಾಲ ರಾಜಧಾನಿಯಾಗಿರುತ್ತದೆ. ಇನ್ನೈದು ತಿಂಗಳಲ್ಲಿ ಪ್ರತ್ಯೇಕ ರಾಜ್ಯ ನಿರ್ಮಾಣ ಸಾಕಾರಗೊಳ್ಳಲಿದೆ. ಸುದ್ದಿಯ ಹಿನ್ನೆಲೆ: ನಿಜ಼ಾಮನ ಆಡಳಿತ ಕೊನೆಗೊಂಡಾಗ (1948) ತೆಲಂಗಾಣದ ಜೊತೆಗೆ ಇನ್ನೂ ಅನೇಕ ಜಿಲ್ಲೆಗಳು ಸೇರಿ ಹೈದರಾಬಾದ್ ಎಂಬ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. […]

ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ # ೭೪, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – ೫೬೦ ೦೦೪ 080-26610081 www.samvada.org, karnatakarss@gmail.com ಪತ್ರಿಕಾ ಪ್ರಕಟಣೆ ಆರೆಸ್ಸೆಸ್ ಕರ್ನಾಟಕ ಘಟಕದಿಂದ ಉತ್ತರಾಖಂಡ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದ ನಂತರ ಕಳೆದ ಜೂನ್ 15 ರಿಂದ ಸತತ 44 ದಿನಗಳಿಂದ ವಿವಿಧ ರೀತಿಯ ಪರಿಹಾರ ಚಟುವಟಿಕೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ತಮ್ಮನ್ನು ಸಕ್ರಿಯವಾಗಿ […]

ಆದಿ ಚುಂಚನಗಿರಿ ಮಠದ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ನಡೆಸಿರುವ ಧಾಳಿಯನ್ನು ಕರ್ನಾಟಕ ‘ಹಿಂದು ಜಾಗರಣ ವೇದಿಕೆ’ ಪ್ರತಿಭಟನೆ ನಡೆಸುವ ಮೂಲಕ ಅತ್ಯುಗ್ರವಾಗಿ ಖಂಡಿಸಿದೆ. “ಹಿಂದು ಮಠಗಳನ್ನು ಗುರಿಯಾಗಿಸಿಕೊಂಡು, ಹಿಂದು ನಂಬಿಕೆಗಳ ಜೊತೆ ಚೆಲ್ಲಾಟ ಆಡುತ್ತಿರುವ, ಹಿಂದು ಧಾರ್ಮಿಕ ಕೇಂದ್ರಗಳ ತೇಜೋವಧೆಗೆ ಪ್ರಯತ್ನಿಸುತ್ತಿರುವ ಶ್ರೀಮತಿ ಸೋನಿಯಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ದುರುದ್ದೇಶದಿಂದ ಕೂಡಿದೆ. ವಿದೇಶಗಳಿಂದ ಚರ್ಚ್‌ಗಳಿಗೆ ಹರಿದು ಬರುತ್ತಿರುವ ಕೋಟ್ಯಾಂತರ ಡಾಲರ್‌ಗಳ ಬಗ್ಗೆ ಚಕಾರ ಎತ್ತದ, […]

ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ #74, ರಂಗರಾವ್‌ರಸ್ತೆ, ಶಂಕರಪರಂ, ಬೆಂಗಳೂರು- 560004 ಪತ್ರಿಕಾ  ಪ್ರಕಟಣೆ ಉತ್ತರಾಖಂಡದ ಮಹಾಪ್ರವಾಹದ ನಂತರದ ಪರಿಹಾರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಹಾಗೂ ಇತರ ಸಾಮಾಜಿಕ ಸಂಘಟನೆಗಳ ಜೊತೆಗೂಡಿ, ಆರೆಸ್ಸೆಸ್ ಸ್ವಯಂಸೇವಕರು ಗಣನೀಯ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತೀಯ ಸೇನೆಯ ಜವಾನರು ಪ್ರಾಣದ ಹಂಗು ತೊರೆದು, ಕೆಲವರು ಪ್ರ್ರಾಣ ಕೊಟ್ಟು ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರಲು ಹಗಲಿರುಳು ಶ್ರಮಿಸುತ್ತಿದಾರೆ. ಈ ಪ್ರಾಕೃತಿಕ ದುರಂತದಲ್ಲಿ ಸತ್ತವರ ಅಥವಾ ಕಾಣೆಯಾದವರ ನಿಖರ […]

ಸುಜಲಾಂ ಸುಫಲಾಂ ಸಾಕಾರಕ್ಕೆ ಸಾವಯವವೇ ದಾರಿ April 10 ತೀರ್ಥಹಳ್ಳಿ: ರಾಸಾಯಿನಿಕದ ಅತಿ ಬಳಕೆಯಿಂದ ಭೂಮಿ ವಿಷಮಯವಾಗುತ್ತಿದೆ. ಭೂಮಿಯ ಪುನಃಶ್ಚೇತನಕ್ಕೆ ಗೋರಕ್ಷಾ ಆಂದೋಲನ ಅನಿವಾರ್ಯ ಎಂದು ಮಧ್ಯಪ್ರದೇಶದ ಪ್ರಯೋಗಶೀಲ ರೈತ ಜಯರಾಮ ಪಾಟೀದಾರ ಹೇಳಿದರು. ಕೃಷಿಋಷಿ ಪುರುಷೋತ್ತಮರಾಯರ ಹೆಸರಿನಲ್ಲಿ ಕುರುವಳ್ಳಿಯ ಕೃಷಿ ಸಂಶೋಧನಾ ಪ್ರತಿಷ್ಠಾನ ನೀಡುವ ‘ಪುರುಷೋತ್ತಮ ಸನ್ಮಾನ’ ಸ್ವೀಕರಿಸಿ ಮಾತನಾಡಿದ ಅವರು, ಸಾವಯವ ವಿಧಾನದಲ್ಲಿ ಬದುಕಿಗೆ ಬೇಕಾದ ಎಲ್ಲ ಆಹಾರ ಉತ್ಪನ್ನಗಳನ್ನು ಬೆಳೆದುಕೊಳ್ಳಬೇಕು. ಆ ಮೂಲಕ ರೈತರು ಸ್ವಾವಲಂಬಿಗಳಾಗಬೇಕು […]

ರಾಜಸ್ಥಾನದ ಜೈಪುರದಲ್ಲಿ ಮಾರ್ಚ್ 15, 16 17, ಮೂರು ದಿನಗಳ ಕಾಲ ನಡೆದ ಆರೆಸ್ಸೆಸ್ಸಿನ ವಾರ್ಷಿಕ ಸಭೆಯಾದ ಅಖಿಲ ಭಾರತ ಪ್ರತಿನಿಧಿ ಸಭಾ ಜರುಗಿತು. ದೇಶದೆಲ್ಲೆಡೆಯಿಂದ ಆಯ್ದ 1300 ಪ್ರತಿನಿಧಿಗಳು ಭಾಗವಹಿಸಿದ್ದರು. ಸರಸಂಘಚಾಲಕ ಮೋಹನ್ ಭಾಗವತ್ ಪ್ರತಿನಿಧಿ ಸಭಾವನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ (ಸರಕಾರ್ಯವಾಹ) ಸುರೇಶ  ಭೈಯ್ಯಾಜಿ ಜೋಷಿ ಆರೆಸ್ಸೆಸ್ಸಿನ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಸಾರಾಂಶವನ್ನು ಇಲ್ಲಿ ನೀಡಲಾಗಿದೆ. 2012-2013 ರ ವರದಿ ಪರಮಪೂಜ್ಯ ಸರಸಂಘಚಾಲಕ್‌ಜೀ, ಗೌರವಾನ್ವಿತ ಅಖಿಲ ಭಾರತ […]