ಶಿವಮೊಗ್ಗ June 27: ಹಿಂದೂ ಸೇವಾ ಪ್ರತಿಷ್ಠಾನ ಚಿಂದಿ ಆಯುವ ಮಕ್ಕಳಿಗಾಗಿ ರೂಪಿಸಿರುವ ಮಾಧವ ನೆಲೆಯ ನೂತನ ಕಟ್ಟಡದ ಲೋಕಾರ್ಪಣೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಕೃ.ಸೂರ್ಯನಾರಾಯಣರಾವ್ ಬುಧವಾರ  ಲೋಕಾರ್ಪಣೆ ಮಾಡಿದರು. ಬೀದಿ ಬೀದಿಗಳಲ್ಲಿ ಚಿಂದಿ ಆಯ್ದು ಜೀವನ ಮಾಡುತ್ತಿದ್ದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಹಿಂದೂ ಸೇವಾ ಪ್ರತಿಷ್ಠಾನದ ಕಲ್ಪನೆಯಲ್ಲಿ ಮೂಡಿ ಬಂದ ಮಾಧವ ನೆಲೆ ಕಳೆದ ೬ ವರ್ಷಗಳಿಂದ ಕಾರ್ಯ ಪ್ರವೃತ್ತವಾಗಿದ್ದು, ಅದಕ್ಕೊಂದು ಸ್ವಂತ ಕಟ್ಟಡ ಒದಗಿಸಿ ಸಂಸ್ಥೆ ತನ್ನ ಕಾಲ […]

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕಾರ‍್ಯ ಚಟುವಟಿಕೆ ಮತ್ತಷ್ಟು ವಿಸ್ತಾರಗೊಂಡಿದ್ದು ಆರೆಸ್ಸೆಸ್ ಶಾಖೆಗಳ ಸಂಖ್ಯೆ ಹೆಚ್ಚಳವಾಗಿದೆ. ಆರೆಸ್ಸೆಸ್ ಇತ್ತೀಚೆಗೆ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಂತೆ 2011 ರ ಜನವರಿಯಲ್ಲಿ 1698 ಸ್ಥಾನಗಳಲ್ಲಿ 2597 ರಷ್ಟು ಇದ್ದ ಶಾಖೆಗಳ ಸಂಖ್ಯೆಯು 2012 ರ ಜನವರಿ ವೇಳೆಗೆ 1788 ಸ್ಥಾನಗಳಲ್ಲಿ 2715ಕ್ಕೆ ಏರಿದೆ. ಇದೇ ರೀತಿ ವಾರಕ್ಕೊಮ್ಮೆ ನಡೆಯುವ ಮಿಲನ್‌ಗಳ ಸಂಖ್ಯೆ 2011 ರಲ್ಲಿ 248 ಇದ್ದಿದ್ದು ಇದೀಗ […]

ಗೋಪಾಲ್ ಬಾಕ್ರೆ ವಿಧಿವಶ ಸ್ವಾತಂತ್ರ್ಯ ಪೂರ್ವದಲ್ಲೇ ಮಂಗಳೂರಿನ ಸಂಘದ ಪ್ರಚಾರಕರಾಗಿ ಕಡಲತಡಿಯಲ್ಲಿ ಆರೆಸ್ಸೆಸ್‌ನ ಬೇರುಗಳನ್ನ ಬಲಪಡಿಸಿದ್ದ ಹಿರಿಯ ಪ್ರಚಾರಕರಾದ ಗೋಪಾಲ್ ಬಾಕ್ರೆ (90) ನಿನ್ನೆ ವಿಧಿವಶರಾಗಿದ್ದಾರೆ. 1922ರಲ್ಲಿ ನಾಗಪುರದಲ್ಲಿ ಜನಿಸಿದ್ದ ಗೋಪಾಲ ಬಾಕ್ರೆಯವರು ಸಂಘದ ಪ್ರಾರಂಭದ ವರ್ಷಗಳ ಕಿಶೋರ ಸ್ವಯಂಸೇವಕರಲ್ಲೊಬ್ಬರಾಗಿದ್ದವರು. ಮಂಗಳೂರಿನ ಜಿಲ್ಲಾ ಪ್ರಚಾರಕರ ಹೊಣೆಯನ್ನು ೧೯೪೫ರ ಜೂನ್‌ನಲ್ಲಿ ಶ್ರೀ ಗೋಪಾಲ ಬಾಕ್ರೆಯವರು ವಹಿಸಿದರು. ನಾಗಪುರ ಮೂಲದವರಾದ ಇವರು ಮ್ಯಾಟ್ರಿಕ್ ನಂತರ ಎಲ್.ಎಂ.ಪಿ. ಶಿಕ್ಷಣಕ್ಕಾಗಿ ಸೇರಿದ್ದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ […]

ಆರೆಸ್ಸೆಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪರಿವರ್ತನೆಗಾಗಿ ಸಂಘಕಾರ್ಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೀತಿ-ನಿರ್ಧಾರಗಳನ್ನು ನಿರೂಪಿಸುವ 3 ದಿನಗಳ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಿತು. ಮಾರ್ಚ್ ೧೬, ೧೭ ಮತ್ತು ೧೮ರಂದು ನಡೆದ ಈ ರಾಷ್ಟ್ರೀಯ ಸಭೆಯಲ್ಲಿ ಆರೆಸ್ಸೆಸ್‌ನ ಆಯ್ದ ಪ್ರತಿನಿಧಿಗಳು ಹಾಗೂ ಪರಿವಾರ ಸಂಘಟನೆಗಳ ರಾಷ್ಟ್ರೀಯ ಪ್ರಮುಖರು ಸೇರಿದಂತೆ ೧೨೦೦ ಪ್ರತಿನಿಧಿಗಳು ಪಾಲ್ಗೊಂಡರು. ಸರಸಂಘಚಾಲಕ ಮೋಹನ್ ಭಾಗವತ್‌ರಿಂದ ಉದ್ಘಾಟನೆಗೊಂಡ ಈ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ […]

ನಾವು ನಮ್ಮನ್ನು ಪ್ರೀತಿಸುವಂತೆ, ಗೌರವಿಸುವಂತೆ ಇತರರನ್ನೂ ಸಮಾನವಾಗಿ ಪ್ರೀತಿಸುವ ಹಾಗೂ ಗೌರವಿಸುವ ಗುಣವೇ ಸಾಮರಸ್ಯ. ಜಾತಿಯ ಕಾರಣಕ್ಕಾಗಿ ಸಾಮಾಜಿಕ – ಧಾರ್ಮಿಕ ವ್ಯವಸ್ಥೆಗಳಲ್ಲಿ ತಾರತಮ್ಯ ತೋರುವುದು ಸರಿಯಲ್ಲ. ವ್ಯಕ್ತಿಯ ಗುಣ, ಪ್ರತಿಭೆ, ಔನ್ನತ್ಯಕ್ಕೆ ಮೊದಲ ಮನ್ನಣೆ. ಆತನ ಜಾತಿಗಾಗಲೀ, ಆರ್ಥಿಕ ಸ್ಥಿತಿಗಾಗಲೀ ಅಲ್ಲ. ‘ಅಸ್ಪೃಶ್ಯತೆಗೆ ಶಾಸ್ತ್ರಗಳ ಸಮ್ಮತಿ ಇಲ್ಲ, ವೇದಪುರಾಣಗಳಲ್ಲಿ ಇರಲಿಲ್ಲ, ಅದಕ್ಕೆ ಧರ್ಮದ ಮಾನ್ಯತೆ ಇಲ್ಲ ಎಂದ ಮೇಲೆ ಇನ್ನೂ ಸಮಾಜದಲ್ಲಿ ಅಸ್ಪೃಶ್ಯತೆ ಯಾಕೆ ಬೇರೂರಿದೆ? ಪೂರ್ತಿಯಾಗಿ ಈ […]

ಒಟ್ಟಿನಲ್ಲಿ, ಸಾಫ್ಟ್‌ವೇರಿಗರ ಕನ್ನಡ ಕಾಳಜಿಗೆ, ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಂತಿತ್ತು ಈ ವಿನೂತನ ಪ್ರಯೋಗ ಎಂದರೆ ತಪ್ಪಾಗಲಾರದು! ‘ನನ್ನ ಹೆಸರು ಅರ್ಪಿತಾ. ನಿಮ್ಮ ಹೆಸರು ಏನು?’ ಎಂಬ ಪ್ರಶ್ನೆಗೆ ’ನನ್ನ ಹೆಸರು ನಿಖಿಲ್ ಲಾಡ್’ ಎಂದು ಅಲ್ಲಿ ಕುಳಿತವರೊಬ್ಬರು ಉತ್ತರ ಕೊಡುತ್ತಿದ್ದರು. ’ನನ್ನ ಮನೆ ಜಯನಗರದಲ್ಲಿದೆ. ನಿಮ್ಮ ಮನೆ ಎಲ್ಲಿ ಇದೆ?’ ಎಂಬ ಪ್ರಶ್ನೆಗೂ ಥಟ್ಟನೇ ಉತ್ತರ ಬರುತ್ತಿತ್ತು. ಅರೇ! ಇದರಲ್ಲೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ?! ವಿಶೇಷವಿದೆ. ಪ್ರಶ್ನೆ ಕೇಳುತ್ತಿದ್ದವರು […]

ಸಂಕ್ರಾಂತಿ ಬೌದ್ಧಿಕ ಬಿಂದುಗಳು ಸಂಕ್ರಾಂತಿ ಹಬ್ಬದ ಹಿನ್ನೆಲೆ: ಭಾರತೀಯ ಸಮಾಜದಲ್ಲಿ ಪ್ರತಿ ದಿನವೂ ಹಬ್ಬವೇ ! ಪ್ರತಿಯೊಂದು ಹಬ್ಬಕ್ಕೂ ವಿಶೇಷ ಅರ್ಥವಿದೆ ಮತ್ತು ಪ್ರತೀ ಹಬ್ಬವೂ ಪ್ರಕೃತಿಗೆ ಜೋಡಿಕೊಂಡಿದೆ. ಉದಾಹರಣೆಗೆ ಹಿಂದುಗಳಿಗೆ ಹೊಸ ವರುಷ ಜನವರಿ 1 ಅಲ್ಲ- ಬದಲಾಗಿ ನಮ್ಮ ಪ್ರಕೃತಿಯಲ್ಲಿ ಹೊಸ ಚೈತನ್ಯ-ಚಿಗುರು ತರುವ ಯುಗಾದಿ ಹಬ್ಬ. ನಮ್ಮ ಹೊಸ ವರುಷ ಬರಿಯ ಕ್ಯಾಲೆಂಡರ್ ಬದಲಾಯಿಸುವ ದಿನವಲ್ಲ- ಅದು ಯಗದ ಆದಿ. ಹಿರಿಯರು ನಮ್ಮ ಹಬ್ಬಗಳಿಗೆ ಎಂಥಹಾ […]