ರಾಮ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪರಮ ಪೂಜನೀಯ ಸರಸಂಘಚಾಲಕರಾದ ಡಾ. ಮೋಹನ ಭಾಗವತರ ಉದ್ಬೋಧನ ಶ್ರದ್ಧೇಯ ನೃತ್ಯಗೋಪಾಲ ಜಿ ಮಹಾರಾಜ್ ಸಹಿತ ಸಮಸ್ತ ಸಂತ ಚರಣ, ಭಾರತದ ಆದರಣೀಯ ಮತ್ತು ಜನಪ್ರಿಯ ಪ್ರಧಾನಮಂತ್ರಿಗಳೇ, ಉತ್ತರಪ್ರದೇಶದ ಮಾನ್ಯ ರಾಜ್ಯಪಾಲರೇ, ಉತ್ತರಪ್ರದೇಶದ ಮಾನ್ಯ ಮುಖ್ಯಮಂತ್ರಿಗಳೇ, ಸಮಸ್ತ ನಾಗರೀಕ ಸಜ್ಜನರೇ ಮತ್ತು ಮಾತಾ ಭಗಿನಿಯರೇ,   ಇಂದು ಆನಂದದ ಕ್ಷಣ, ಅನೇಕ ರೀತಿಗಳಲ್ಲಿ ಆನಂದವಿದೆ. ನಾವೆಲ್ಲರೂ ಒಂದು ಸಂಕಲ್ಪವನ್ನು ಸ್ವೀಕರಿಸಿದ್ದೆವು. ನನಗಿನ್ನೂ ನೆನಪಿದೆ. […]

ಸರಯೂ ತಟದಲ್ಲಿ ಭಾರತಕ್ಕೆ ಸಿಕ್ಕಿದ್ದು ಕಳೆದುಹೊಗಿದ್ದ ತನ್ನ ಆತ್ಮ ! ಲೇಖಕರು: ಪ್ರದೀಪ ಮೈಸೂರು ಪ್ರಚಾರಕರು, ಪ್ರಾಂತ ಪ್ರಚಾರ ಪ್ರಮುಖ, ಕರ್ನಾಟಕ ದಕ್ಷಿಣ ಅದು ಹಾಗೆಯೇ. ಇತಿಹಾಸದ ಕೆಲವು ಘಟ್ಟಗಳು, ದಿನಗಳು, ಇಸವಿಗಳು ಶಾಶ್ವತವಾಗಿ ನೆನಪುಳಿದುಬಿಡುತ್ತವೆ. ಅಷ್ಟು ಮಾತ್ರವಲ್ಲ, ಅವು ಚರಿತ್ರೆಯ ಓಟಕ್ಕೆ ಹೊಸ ತಿರುವನ್ನೂ ನೀಡುತ್ತವೆ. ನೀವೇ ನೋಡಿ – ಸಾಮ್ರಾಜ್ಯಗಳನ್ನು ಹುಟ್ಟುಹಾಕಿದ್ದು, ಅವುಗಳನ್ನು ಕೆಡವಿದ್ದು, ಅದೇ ಸಾಮ್ರಾಜ್ಯಗಳ ಅಸ್ಮಿತೆಯನ್ನೇ ಕೆಣಕಿ, ಕೆದಕಿ ಅವುಗಳ ಮೂಲವನ್ನೇ ಅಲುಗಾಡಿಸಿದ ಅವೆಷ್ಟೋ […]

ಭಾರತೀಯತೆಯ ಸಂಕೇತವಾಗಿ ತಲೆ ಎತ್ತಲಿದೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಕೃಪೆ : ರಾಷ್ಟ್ರೋತ್ಥಾನ ಪರಿಷತ್ 2020ರ ಆಗಸ್ಟ್ 5ರಂದು ಭವ್ಯ ಶ್ರೀರಾಮಮಂದಿರ ನಿರ್ಮಾಣದ ಆರಂಭದ ಪೂಜಾಕಾರ್ಯ ನಡೆಯಲಿದೆ. ಸಾಮಾಜಿಕ ಸಮರಸದ, ರಾಷ್ಟ್ರೀಯ ಭಾವೈಕ್ಯ ಸಂಕೇತವಾಗಿ ರಾಷ್ಟ್ರದ ಮೂಲೆಮೂಲೆಗಳಿಂದ ತರಲಾದ ವಿವಿಧ ನದಿಗಳ ತೀರ್ಥಗಳು ಮತ್ತು ವಿವಿಧ ತೀರ್ಥಕ್ಷೇತ್ರಗಳ ಮೃತ್ತಿಕೆಗಳ ಪೂಜೆ-ಸಮರ್ಪಣೆ ನಡೆಯಲಿದೆ. ಇಡೀ ವಿಶ್ವವೇ ಶತಶತಮಾನಗಳಿಂದ ನಿರೀಕ್ಷಿಸುತ್ತಿದ್ದ ಅಮೃತಘಳಿಗೆ ಈಗ ಕೈಗೂಡಿಬಂದಿದೆ. ಕೊರೋನಾ ಕಾರಣದಿಂದಾಗಿ ರಾಮಭಕ್ತರು ಅಯೋಧ್ಯೆಗೆ ಬಂದು ಈ […]

ಸಂಸ್ಕೃತವನ್ನು ಕಾಪಾಡಿಕೊಂಡು ಬರುವುದು ಈ ದೇಶದ ವಿದ್ಯಾವಂತರ ಕರ್ತವ್ಯ (ಶ್ರಾವಣಪೂರ್ಣಿಮೆ ರಕ್ಷಾಬಂಧನ, ಉಪಾಕರ್ಮ ಹಬ್ಬಗಳಿಗೆ ಪ್ರಸಿದ್ಧವಾಗಿರುವಂತೆ ‘ಸಂಸ್ಕೃತ ದಿನ’ವಾಗಿಯೂ ಪ್ರಸಿದ್ಧಿ ಹೊಂದಿದೆ. ಭಾರತೀಯ ಸಭ್ಯತೆಯ ಮೂರ್ತರೂಪವಾದ ಸಂಸ್ಕೃತವು ಈ ದೇಶದ ವಿಭಿನ್ನ ಜನರನ್ನು ಏಕಸೂತ್ರದಲ್ಲಿ ಕಟ್ಟುವ ಶಕ್ತಿ ಹೊಂದಿದೆ. ಇಂತಹ ಸಂಸ್ಕೃತ ಭಾಷೆ ಹಾಗೂ ಇದನ್ನು ಪ್ರಚುರಪಡಿಸಿದ ‘ಸಂಸ್ಕೃತ ಭಾರತೀ’ಕುರಿತು ಈ ಲೇಖನ.)\ ಲೇಖಕರು: ಶ್ರೀ ಲಕ್ಷ್ಮೀನಾರಾಯಣ, ಶೃಂಗೇರಿ, ಸಂಸ್ಕೃತ ಭಾರತೀ ಪ್ರಾಂತ ಸಂಘಟನಾ ಮಂತ್ರಿ, ಉತ್ತರ ಕರ್ನಾಟಕ. “ಗ್ರೀಕ್ […]

ಸಾಮಾಜಿಕ ಸಮರಸತೆಗೆ ಶ್ರೀ ರಾಮ ಜನ್ಮಭೂಮಿಯ ಮಂದಿರ ಅನುಪಮ ಕೇಂದ್ರವಾಗಲಿದೆ: ಮಿಲಿಂದ್ ಪರಾಂಡೆ. ನಾಗಪುರ/ಬೆಂಗಳೂರು, 30 ಜುಲೈ 2020: ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನು ಸಾಮಾಜಿಕ ಸಮರಸತೆ ಹಾಗೂ ಸಶಕ್ತೀಕರಣದ ಸಂದೇಶವನ್ನು ತನ್ನ ಭವ್ಯ ಜೀವನದ ಆಚರಣೆಯಿಂದ ಸಾರಿದ್ದಾನೆ. ಈ ಮಂದಿರದ ಶಿಲಾನ್ಯಾಸಕ್ಕೆ ದೇಶದೆಲ್ಲೆಡೆಯಿಂದ ಸಂಗ್ರಹಿಸಿ ಬಳಸಲಾಗುವ ಮೃತ್ತಿಕೆ, ವಿವಿಧ ನದಿಗಳ ಜಲ ರಾಷ್ಟ್ರಕ್ಕೆ ಏಕಾತ್ಮತೆಯ ದರ್ಶನವನ್ನು ಸಾರುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ನ ಕೇಂದ್ರೀಯ ಮಹಾಮಂತ್ರಿಯಾದ ಶ್ರೀ […]

:: ಕೇರಳ ಕಮ್ಮ್ಯುನಿಸ್ಟ್  ಕುತಂತ್ರ ಕೃತ್ಯ :: ಕೇರಳದಲ್ಲಿರುವ ತ್ರಾವೆಂಕೂರ್ ದೇವಸ್ವಮ್ ಬೋರ್ಡ್ ಸಂಪೂರ್ಣವಾಗಿ ಸರ್ಕಾರದ ಹಿಡಿತದಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆ. ಹಿಂದುಗಳು ಭಕ್ತಿಯಿಂದ ಅರ್ಪಿಸುತ್ತಿರುವ ಕಾಣಿಕೆಗಳಿಂದಲೇ ನಡೆಯುತ್ತಿರುವ ಈ ಸಂಸ್ಥೆ ಹಳೆಯ ತ್ರಾವೆಂಕೂರ್ ಸಂಸ್ಥಾನದ ಎಲ್ಲಾ ಹಿಂದೂ ದೇವಾಲಯಗಳ ಆಡಳಿತವನ್ನು ನಿಯಂತ್ರಿಸುವುದಲ್ಲದೆ ಸ್ವತಃ ಅನೇಕ ಶಾಲೆಗಳನ್ನೂ ನಡೆಸುತ್ತಿದೆ. ಹಿಂದೂ ಭಕ್ತರ ಕಾಣಿಕೆಯಿಂದಲೇ ನಡೆಯುತ್ತಿರುವ ಈ ಶಾಲೆಗಳಲ್ಲಿ ಅತ್ಯಾವಶ್ಯವಾಗಿ ಸಂಸ್ಕೃತವನ್ನು ಕಲಿಸಬೇಕು. ಅದಕ್ಕಾಗಿ ಸಂಸ್ಕೃತ ಪಂಡಿತರನ್ನು ನೇಮಿಸಿಕೊಳ್ಳಬೇಕು. ಆದರೆ, ಇದರ […]

ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ನಡೆಯಲಿರುವ ಶ್ರೀ ರಾಮಮಂದಿರದ ಭೂಮಿಪೂಜೆ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪುಣ್ಯಕ್ಷೇತ್ರದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ‌‌ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿದೆ. ವಿಶ್ವ ಹಿಂದು ಪರಿಷದ್ ನ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹಾಗೂ ಪದಾಧಿಕಾರಿಗಳಾದ ಕೃಷ್ಣಮೂರ್ತಿ ಮತ್ತು ಮುನಿರಾಜು ಅವರು ಪೂಜ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪರವಾಗಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಪೂಜ್ಯ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ […]

ಅವರ ರಕ್ತದಿಂದಾಗಿ ತೀರ್ಥಕ್ಷೇತ್ರವಾಯಿತು ಕಾರ್ಗಿಲ್ #21YearsOfKargilVijay ಲೇಖನ : ಪ್ರಮೋದ್ ನವರತ್ನ ಸರಿಯಾಗಿ 21 ವರ್ಷಗಳ ಹಿಂದೆ, 1999ರ ಮೇ-ಜುಲೈ ಸಮಯ. ಎಲ್ಲ ಪತ್ರಿಕೆಗಳಲ್ಲಿ, ಟಿ.ವಿ. ನ್ಯೂಸ್ ಚಾನೆಲ್‍ಗಳಲ್ಲಿ ಒಂದೇ headlines. ಭಾರತದ ಒಂದು ‘ಸಣ್ಣ’ ಭೂಭಾಗದ ಕುರಿತಾಗಿ ‘ದೊಡ್ಡ’ ಸುದ್ದಿ. ಹೊರದೇಶದಲ್ಲಿಯೂ ಹಲವೆಡೆ ಅದರದೆ ಚರ್ಚೆ. ಎಲ್ಲ ಭಾರತೀಯರ ಮನಸ್ಸಿನ ಕಳವಳಕ್ಕೆ ಕಾರಣವಾಗಿದ್ದ, ಚರ್ಚೆಗೆ ಗ್ರಾಸವಾಗಿದ್ದ ಆ ಭೂಭಾಗವೇ ‘ಕಾರ್ಗಿಲ್’. ಕಾರ್ಗಿಲ್- ವರ್ಷದ ಬಹಳಷ್ಟು ಸಮಯ 4-5 ಅಡಿಗಳಷ್ಟು […]

ಆಗಸ್ಟ್ 1 ರಿಂದ ‘ನನ್ನ ಭಾರತ’ ರಾಜ್ಯಮಟ್ಟದ ಯುವ ಅಭಿಯಾನ ಬೆಂಗಳೂರು, ಜುಲೈ 20, 2020: ರಾಜ್ಯಮಟ್ಟದ ನಮ್ಮ ಭಾರತ (My Bharat) ಆನ್‍ಲೈನ್ ಯುವ ಅಭಿಯಾನವನ್ನು ಖ್ಯಾತ ಯುವ ಅಭಿನೇತ್ರಿ ಪ್ರಣೀತಾ ಸುಭಾಷ್ ಉದ್ಘಾಟಿಸಿದರು. ದಿಶಾ ಭಾರತ್ ಸಂಸ್ಥೆಯ ವಿ ನಾಗರಾಜ್, ಡಾ. ಎನ್. ವಿ. ರಘುರಾಮ್, ರೇಖಾ ರಾಮಚಂದ್ರನ್, ಪರಿಮಳಾ ಮೂರ್ತಿ, ರಾಜೇಶ್ ಪದ್ಮಾರ್ ಉಪಸ್ಥಿತರಿದ್ದರು. ದಿಶಾ ಭಾರತ್ ಸಂಸ್ಥೆಯು ಕಾಲೇಜು ವಿದ್ಯಾರ್ಥಿಗಳಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಪೋಷಿಸಿ […]

‘ನಗುವಂಗೆ ಬಿಡಿಸಿದ ರಂಗೋಲಿ’  ಸಮಚಿತ್ತದ ಸಮದರ್ಶಿ: ಅಶೋಕಪುರಂನಲ್ಲಿ ಆರೆಸ್ಸೆಸ್ ಬೆಳೆದ ಕಥನ  | ಪುಸ್ತಕ ಪರಿಚಯ   ಲೇಖನ: ವಾದಿರಾಜ ಮೈಸೂರಿನ ಅಶೋಕಪುರಂ ಮಹಾಭಾರತದ ಹಸ್ತಿನಾಪುರವಿದ್ದಂತೆ . ಸುಮಾರು ಎರಡು ಕಿ ಮೀ ವ್ಯಾಪ್ತಿಯಲ್ಲಿ ಹದಿಮೂರು ಬೀದಿಗಳ ನಡವೆ ಹರಡಿಕೊಂಡಿರುವ ಅಶೋಕಪುರಂಗೆ ಹಿಂದೆ ದೊಡ್ಡಹೊಲಗೇರಿ ಎಂದು ಕರೆಯಲಾಗುತ್ತಿತ್ತು . ಹಲವು ಚರ್ಚೆ , ಸಂವಾದ , ಪ್ರತಿಭಟನೆ , ಸಂಘರ್ಷ , ತಿಕ್ಕಾಟ , ಬೀದಿರಂಪಗಳ ನಡುವೆ ಇಲ್ಲಿಯ ಜನರ ವ್ಯಕ್ತಿತ್ವಗಳು ರೂಪುಗೊಂಡಿವೆ […]