67 ಸಾವಿರ ಸ್ಥಳ, 3.42 ಸ್ವಯಂಸೇವಕರು, 50.5 ಲಕ್ಷ ರೇಷನ್‌ ಕಿಟ್‌: ಇದು ಆರೆಸ್ಸೆಸ್  ಸೇವಾ ಸಾಧನೆ ಕೃಪೆ: ನ್ಯೂಸ್13 ಕೊರೋನಾ ಬಿಕ್ಕಟ್ಟಿನ ನಡುವೆ ಜಗತ್ತು ನಿರಾಳವಾಗಿ ಉಸಿರಾಡುವುದನ್ನೇ ಮರೆತು ಬಿಟ್ಟಿದೆ. ಭಾರತವೂ ಸೇರಿದಂತೆ ಇಡೀ ವಿಶ್ವವೇ ಕೊರೋನಾ ಗೆಲ್ಲಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಇಂತಹ ದುರಂತ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ನಿಯಂತ್ರಣ ನಿಯಮಗಳನ್ನು ಜಾರಿಗೊಳಿಸಿದ್ದರೂ, ಕಣ್ಣಿಗೆ ಕಾಣದ ವೈರಸ್ ಮಾತ್ರ ಎಗ್ಗಿಲ್ಲದೆ ತನ್ನ […]

17ಜುಲೈ 2020, ಮೈಸೂರು:  ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಬದುಕಿನ ಕುರಿತಾದ ಕೃತಿ “ತಾಷ್ಕೆಂಟ್ ಡೈರಿ” ಶುಕ್ರವಾರ, ಕನ್ನಡದ ಖ್ಯಾತ ಕಾದಂಬರಿಕಾರರು, ಸಾಹಿತಿಗಳಾದ ಡಾ. ಎಸ್ ಎಲ್ ಭೈರಪ್ಪನವರ ಮೈಸೂರಿನ ಸ್ವಗೃಹದಲ್ಲಿ  ಲೋಕಾರ್ಪಣೆಗೊಂಡಿದೆ.  ಹಿರಿಯ ಕಾದಂಬರಿಕಾರರೂ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್.ಎಲ್.ಭೈರಪ್ಪನವರು ಲೇಖಕರಾದ ಎಸ್.ಉಮೇಶ್‍ರವರಿಂದ ಪ್ರಥಮ ಕೃತಿಯನ್ನು ಸ್ವೀಕರಿಸುವ ಮೂಲಕ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಅನಂತರ ಕೃತಿ ಮತ್ತು ಶಾಸ್ತ್ರೀಜಿಯವರನ್ನು ಕುರಿತು ಲೇಖಕರ ಜೊತೆ ತಮ್ಮ ಹಳೆಯ […]

ನೈಜ ಅಸ್ಮಿತೆಯ ಪುನರುತ್ಥಾನದತ್ತ ಭಾರತ ಲೇಖನ: ಡಾ. ಮನಮೋಹನ್ ವೈದ್ಯ. ಸಹ ಸರಕಾರ್ಯವಾಹ ರಾಷ್ಟ್ರೀಯ ಸ್ವಯಂಸೇವಕ ಸಂಘ ಈ ಕನ್ನಡ ಲೇಖನ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಲೇಖನದ ಆಂಗ್ಲ ಮೂಲವನ್ನು ಇಲ್ಲಿ ಓದಬಹುದು. ಕೊರೋನಾ ಸಾಂಕ್ರಾಮಿಕ ರೋಗದೊಂದಿಗಿನ ಯುದ್ಧದ ಮಧ್ಯೆಯೇ ಲಡಾಖಿನ ಗಾಲ್ವಾನ್ನಿಲ್ಲಿನ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರ ಬಲಿದಾನದ ಸುದ್ದಿ ದೇಶಾದ್ಯಂತ ಕಳವಳ ಸೃಷ್ಟಿ ಮಾಡಿತು. 1962 ರ ನಂತರ ಮೊದಲ ಬಾರಿಗೆ ಸಂಭವಿಸಿದ ಚೀನಾದೊಂದಿಗಿನ […]

ಮನೆಯಿಂದ ಹೊರ ಜಗತ್ತಿಗೆ ತಲುಪಲು ಬಿದಿರಿನ ಸೇತುವೆ ನಿರ್ಮಿಸಿದ ಸೇವಾಭಾರತಿ ಮೂಲಮಠಂ: ಕೇರಳದ ಇಡುಕ್ಕಿ ಜಿಲ್ಲೆಯ ಆರಪ್ಪುಳಂ‌ ಪಂಚಾಯತ್ ವ್ಯಾಪ್ತಿಯಲ್ಲಿರುವ ಕುಟುಂಬವೊಂದಕ್ಕೆ ಮಳೆಗಾಲದಲ್ಲಿ ಹೊರಜಗತ್ತಿಗೆ ಸಂಪರ್ಕ ಇಲ್ಲದಿರುವುದನ್ನು ತಿಳಿದ ಸೇವಾಭಾರತಿಯ ಕಾರ್ಯಕರ್ತರು ತಾತ್ಕಾಲಿಕವಾದ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ. ವಳಯಂತೊಟ್ಟಿ ಎಂಬಲ್ಲಿರುವ ಸನ್ನಿ ಅವರು ಊರ ಹೊರಭಾಗದ ಸರಕಾರೀ ಭೂಮಿಯಲ್ಲಿ ಸಣ್ಣ ಮನೆ ನಿರ್ಮಿಸಿ ಅವರ ತಾಯಿ ,ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಕಷ್ಟದ ಜೀವನ ಸಾಗಿಸುತ್ತಿದ್ದು ಸೇವಾಭಾರತಿ ನಿರ್ಮಿಸಿದ ತಾತ್ಕಾಲಿಕವಾದ ಸೇತುವೆಯಿಂದ […]

‘100 ವರ್ಷದ  ಮ್ಯಾರಥಾನ್’ ನಲ್ಲಿ ಕಮ್ಯುನಿಸ್ಟ್ ಚೀನಾ ದ ಮೋಸದ ಓಟ ! ಪು . ರವಿವರ್ಮ, ಉಪನ್ಯಾಸಕ, ಹವ್ಯಾಸಿ ಬರಹಗಾರ. (ಈ ಲೇಖನವನ್ನು ಮೊದಲು ಹೊಸ ದಿಗಂತ ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.) ಎಂಬತ್ತರ ದಶಕದ ಚೀನಾದ ಒಂದು ಸಿನಿಮಾ, ಸಿನಿಮಾದುದ್ದಕ್ಕು ಖಳನಾಯಕನ ಪಾತ್ರವನ್ನು ವಿಪರೀತವಾಗಿ ವೈಭವಿಕರಿಸಲಾಗಿತ್ತು, ಒಂದು ಪಾತ್ರವಾಗಿ ಆತನ ಕುತಂತ್ರಗಳು, ನಾಯಕನೆದುರು ಗೆಲುವು ಸಾಧಿಸುವ ಪರಿ ಯಾರಿಗಾದರು ಸಹ್ಯವೆನಿಸಲಾರದು, ಆದರೆ ಆತನ ಜೊತೆಗಿದ್ದ, ಎದುರಿಗಿದ್ದ ಇತರೆ ಪಾತ್ರಗಳು […]

28 ಜೂನ್ 2020, ಬೆಂಗಳೂರು: ಭಾರತೀಯ ಕಿಸಾನ್ ಸಂಘ , ಸ್ವದೇಶಿ ಜಾಗರಣ ಮಂಚ್ ಮತ್ತು ಕೃಷಿ ಪ್ರಯೋಗ ಪರಿವಾರ ಈ 3 ಸಂಘಟನೆಗಳು ಇಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಭೂ ಸುಧಾರಣಾ ತಿದ್ದುಪಡಿ ಬಗ್ಗೆ ತಮ್ಮ ಆಕ್ಷೇಪಣೆ ಸಲ್ಲಿಸದರು. ನಿಯೋಗದ ಅಭಿಪ್ರಾಯ ಆಲಿಸಿದ ಮುಖ್ಯಮಂತ್ರಿಗಳು ನೀರಾವರಿ ಕೃಷಿ ಭೂಮಿ, ಮಳೆ ಆಧಾರಿತ ಕೃಷಿ ಭೂಮಿ ಮತ್ತು ಮುಂದಿನ ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳಿಂದ ಲಾಭ […]

ಭಾರತದ ಭಾಗ್ಯ ವಿಧಾತ ಯಾರು? ಲೇಖನ: ಶೈಲೇಶ್ ಕುಲಕರ್ಣಿ ಅಕ್ಟೋಬರ್ 17, 1949 ರಂದು ಸಂವಿಧಾನ ಸಭೆ ಮಹತ್ವದ ಚರ್ಚೆಗಾಗಿ ಸೇರಿತ್ತು.  ಚರ್ಚೆಯ ಪ್ರಮುಖ ಬಿಂದು ಸಂವಿಧಾನದ ಪೀಠಿಕೆಯ ಕುರಿತಾಗಿತ್ತು. ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಭೆಯ ಎದುರು, “ಭಾರತದ ಜನರಾದ ನಾವು,  ಭಾರತವನ್ನು ಸಾರ್ವಭೌಮ, ಲೋಕತಾಂತ್ರಿಕ, ಗಣರಾಜ್ಯವಾಗಿ ರೂಪಿಸುವ ಸಂಕಲ್ಪವನ್ನು ತಳೆದಿದ್ದೇವೆ” ಎಂಬ ಪೀಠಿಕೆಯನ್ನು ಮುಂದಿರಿಸಿದರು. ಈ ಪೀಠಿಕೆಯ ಕುರಿತಾಗಿ ಹಲವಾರು ಪ್ರಶ್ನೆಗಳೆದ್ದವು […]

ತುರ್ತು ಪರಿಸ್ಥಿತಿಯ ಕಹಿ ನೆನಪುಗಳು, ಕಲಿಯಬೇಕಾದ ಪಾಠಗಳು #Emergency1975HauntsIndia (ಆಧಾರ: ಭುಗಿಲು, ರಾಷ್ಟ್ರೋತ್ಥಾನ ಸಾಹಿತ್ಯದ 39ನೆಯ ಪ್ರಕಟಣೆ) – ಎಸ್ ಎಸ್ ನರೇಂದ್ರ ಕುಮಾರ್, ಲೇಖಕರು ವಿಶ್ವಸ್ತರು ವಿಶ್ವ ಸಂವಾದ ಕೇಂದ್ರ, ಕರ್ನಾಟಕ 1975ನೇ ಇಸವಿ ಜೂನ್ 26 – ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಕರಾಳ ದಿನ. ಭಾರತದ ಮೇಲೆ ಆಂತರಿಕ ತುರ್ತು ಪರಿಸ್ಥಿತಿ ಹೇರಲಾಯಿತು, ಜನರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳಲಾಯಿತು, ಸ್ವಾತಂತ್ರ್ಯದ ಕತ್ತನ್ನು ಹಿಸುಕಿ ಉಸಿರುಗಟ್ಟಿಸಲಾಯಿತು. ಇತಿಹಾಸದ ಇಂತಹ ಕರಾಳ […]

ನಿನ್ನೆಯ ಚೀನಾದ ಅಟಾಟೋಪದಿಂದ ಹುತಾತ್ಮರಾದ ಭಾರತದ ಸೈನಿಕರ ಬಲಿದಾನಕ್ಕೆ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಭೈಯ್ಯಾಜಿ ಜೋಶಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.   “ದೇಶದ ಸಾರ್ವಭೌಮತೆ, ಅಖಂಡತೆ, ಮತ್ತು ಸ್ವಾಭಿಮಾನದ ರಕ್ಷಣೆಗಾಗಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಗಡಿ ರಕ್ಷಣೆ ಮಾಡುವಾಗ ಅತ್ಯುನ್ನತ ಬಲಿದಾನ ನೀಡಿ ಹುತಾತ್ಮರಾದ ಸೈನಿಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಶ್ರದ್ಧೆಯ ನಮನ ಸಲ್ಲಿಸುತ್ತದೆ. ಹುತಾತ್ಮ ಸೈನಿಕರ ಪರಿವಾರಕ್ಕೆ ದೇಶವಾಸಿಗಳ ಪರವಾಗಿ ಸಾಂತ್ವನ ಪ್ರಕಟಿಸುತ್ತದೆ. ಚೀನಾ ಸರ್ಕಾರ […]

ವಿಶ್ವ ಆಹಾರ ಪ್ರಶಸ್ತಿ ಪಡೆದ ಭಾರತೀಯ ಮೂಲದ ಮಣ್ಣಿನ ವಿಜ್ಞಾನಿ ಡಾ.ರತ್ತನ್‌ ಲಾಲ್ ಕೃಪೆ : news13.in ನವದೆಹಲಿ: ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಮತ್ತು ಹವಾಮಾನ ಬದಲಾವಣೆಯನ್ನು ತಗ್ಗಿಸುವಂತಹ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ಮಣ್ಣು ಕೇಂದ್ರಿತ ವಿಧಾನವನ್ನು ಅಭಿವೃದ್ಧಿಪಡಿಸಿದ ಮತ್ತು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ  ಭಾರತೀಯ-ಅಮೆರಿಕದ ಮಣ್ಣಿನ ವಿಜ್ಞಾನಿ ಡಾ. ರತ್ತನ್ ಲಾಲ್ ಅವರು ಈ ವರ್ಷದ ವಿಶ್ವ ಆಹಾರ ಪ್ರಶಸ್ತಿಗೆ ಬಾಜನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿಶ್ವ ಆಹಾರ ಪ್ರಶಸ್ತಿಯನ್ನು ಕೃಷಿ ಕ್ಷೇತ್ರದಲ್ಲಿ […]