ಕೋವಿಡ್‌೧೯ ಸಂದರ್ಭದಲ್ಲಿ ಹೆಚ್ಚಿದೆ ಮಾಧ್ಯಮಗಳ ವಿಶ್ವಾಸಾರ್ಹತೆ; ಜವಾಬ್ದಾರಿಯೂ ಹಿರಿದಾಗಿದೆ ಕೊರೊನಾ ನಂತರದಲ್ಲಿ ಭಾರತೀಯ ಪತ್ರಿಕೋದ್ಯಮ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರ ಅನುಭವ ಬೆಂಗಳೂರು 9 ಮೇ 2020: ಆದ್ಯಪತ್ರಕರ್ತ ಮಹರ್ಷಿ ನಾರದ ಜಯಂತಿಯ ಅಂಗವಾಗಿ “ಕೊರೊನಾ (ಕೊವಿಡ್‌-19) ನಂತರದಲ್ಲಿ ಭಾರತೀಯ ಪತ್ರಿಕೋದ್ಯಮ” ಎನ್ನುವ ವಿಷಯದ ಬಗ್ಗೆ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಆನ್‌ಲೈನ್‌ ವಿಚಾರ ಸಂಕಿರಣವನ್ನು ಏರ್ಪಡಿಸಿತ್ತು. ಈ ಗೋಷ್ಠಿಯಲ್ಲಿ ಸುವರ್ಣ ನ್ಯೂಸ್‌ ಸುದ್ದಿ ಮತ್ತು ಕಾರ್ಯಕ್ರಮಗಳ ಮುಖ್ಯಸ್ಥ ಶ್ರೀ ಅಜಿತ್‌ […]

ನಾಡಿನ ಹಿರಿಯ ಕವಿ ನಿಸ್ಸಾರ್ ಅಹಮದ್ ಅವರ ನಿಧನಕ್ಕೆ ಆರೆಸ್ಸೆಸ್ ಸಂತಾಪ. ನಿಸ್ಸಾರ ಅಹಮದ್ ರ ನಿರ್ಗಮನವು ಕನ್ನಡದ ಸಾರಸ್ವತ ಲೋಕಕ್ಕೆ ಶಾಶ್ವತ ಖಾಲಿತನವನ್ನು ನಿರ್ಮಿಸಿದೆ : ವಿ ನಾಗರಾಜ್ ಕನ್ನಡ ಸಾಹಿತ್ಯ, ಕವಿತೆ, ಕಾವ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ ನಾಡಿನ ಹಿರಿಯ ಕವಿ ನಿಸ್ಸಾರ್ ಅಹಮದ್ ಅವರ ನಿಧನವು ಭರಿಸಲಾರದ ನಷ್ಟ. ನಿಸ್ಸಾರರ ನಿರ್ಗಮನವು ಕನ್ನಡದ ಸಾರಸ್ವತ ಲೋಕಕ್ಕೆ ಶಾಶ್ವತ ಖಾಲಿತನವನ್ನು ನಿರ್ಮಿಸಿದೆ. ಕುರಿಗಳು ಸಾರ್ ಕುರಿಗಳು, ಮತ್ತದೇ ಬೇಸರ‌ ಅದೆ […]

ಲಾಕ್​ಡೌನ್: ಏಕಾಂತ ಸಾಧನೆ, ಲೋಕಾಂತ ಸೇವೆ;  ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಪ್ರಕಟವಾದ ಆರೆಸ್ಸೆಸ್ ಸಾಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರ ಲೇಖನ

ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಇಂದು ರಾಷ್ಟ್ರವನ್ನುದ್ದೇಶಿಸಿ ಆನ್ಲೈನ್ ಮೂಲಕ ಭಾಷಣ ಮಾಡಿದರು ಮಹಾರಾಷ್ಟ್ರದ ನಾಗಪುರದಿಂದ ಮಾತನಾಡಿದ ಅವರು ಕೊರೋನಾದಿಂದಾಗಿ ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ಸೇವಾ ಕಾರ್ಯದ ಬಗ್ಗೆ ಮಾತನಾಡಿದರು. ಯೂಟ್ಯೂಬ್, ಫೇಸ್ಬುಕ್ ಮತ್ತು ಟ್ವಿಟರ್ ಮಾಧ್ಯಮಗಳಲ್ಲಿ ನೇರಪ್ರಸಾರ ಆದ ಅವರ ಭಾಷಣದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ. ಭಾಷಣವನ್ನು ಪೂರ್ಣ ಕೇಳಲು ಯೂಟ್ಯೂಬ್ ಲಿಂಕ್ ನೋಡಿರಿ. ಸಂಘ ಮಾಡುತ್ತಿರುವ ಸೇವೆ ಪ್ರಚಾರಕ್ಕೋಸ್ಕರ ಅಲ್ಲ. ನಮ್ಮ ಸಮಾಜ, ನಮ್ಮ ದೇಶಗಳ ಬಗ್ಗೆ ಸಂಘದ ಸ್ವಯಂಸೇವಕರಿಗೆ ಇರುವ ಪ್ರೇಮದಿಂದ ಈ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಜೂನ್ ವರೆಗಿನ ತನ್ನ ಎಲ್ಲ ಕಾರ್ಯಕ್ರಮಗಳನ್ನು ಆರೆಸ್ಸೆಸ್ ನಿಲ್ಲಿಸಿದೆ ರದ್ದುಗೊಳಿಸಿದೆ. ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ನಾಗರಿಕರಾದ ನಾವೆಲ್ಲರೂ ಪಾಲಿಸಲೇಬೇಕು. ಹಾಗೆಯೇ, ಇದು ನಮ್ಮದೇ ಸಮಾಜ. ಸಂಕಷ್ಟದ ಸಂದರ್ಭದಲ್ಲಿ ನಾವು ಸಮಾಜದ ಜೊತೆ ನಿಲ್ಲಬೇಕು. ನಿಜವಾದ ದೇಶಭಕ್ತಿ ಎಂದರೆ ಕಾನೂನನ್ನು ಪಾಲಿಸುವುದು ಎಂಬ ಭಗಿನಿ ನಿವೇದಿತಾರ ಮಾತನ್ನು ನಾವು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಭವಿಷ್ಯದ ಭಾರತವನ್ನು ಕಟ್ಟಬೇಕಾದರೆ, ಶಿಸ್ತುಬದ್ಧವಾದ ಸಮಾಜ ಬಹಳ ಮುಖ್ಯ ಕರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಯಾರಿಗೆ ಆದರೂ ಸೇವೆ ಮಾಡುವುದು ನಮ್ಮ ಧರ್ಮ. ಸೇವೆ ಮಾಡುವಾಗ ನಾವು ವ್ಯಕ್ತಿಗಳ ನಡುವೆ ಭೇದವನ್ನು ಎಣಿಸುವವರಲ್ಲ. ಸೇವಾಕಾರ್ಯದಲ್ಲಿ ನಾವು ಯಾರೊಂದಿಗೂ ಸ್ಪರ್ಧಿಸಬೇಕಾದರೆ ಅರ್ಥವಿಲ್ಲ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಕೋರೋನಾವನ್ನು ತೊಲಗಿಸುವುದೊಂದೇ ನಮ್ಮ ಗುರಿ. ಭಯ, ಕೋಪ, ಆಲಸ್ಯ ಹಾಗೂ ಅನಗತ್ಯವಾದ ವಿಳಂಬ ಇವುಗಳನ್ನು […]

  ಸ್ಮಶಾನ ಕಾಯುವವರು ತಿಂಗಳ ಸಂಬಳ ಪೂರ್ತಿ ಕೊಟ್ಟರು ಲೇಖನ ಕೃಪೆ: ವಾದಿರಾಜ ಬಿಬಿಎಂಪಿ ವ್ಯಾಪ್ತಿಗೆ ಬರುವ ಅರವತ್ತು ರುದ್ರಭೂಮಿ ಹಾಗೂ  ಹತ್ತು ವಿದ್ಯುತ್‌ ಚಿತಾಗಾರಗಳ 148 ನೌಕರರು ತಮ್ಮ ಒಂದು ತಿಂಗಳ ಪೂರ್ತಿ ಸಂಬಳವನ್ನು ಮುಖ್ಯಮಂತ್ರಿಗಳ ಕೊರೊನಾ ಸಂತ್ರಸ್ತರ ಸಹಾಯ ನಿಧಿಗೆ ನೀಡಿದ್ದಾರೆ . ತಲಾ 14 ರಿಂದ 17 ಸಾವಿರದಷ್ಟು ತಿಂಗಳ ವೇತನವನ್ನು ಪಡೆಯುತ್ತಿದ್ದ ಇವರು ತಮ್ಮ ಪೂರ್ತಿ ವೇತನವನ್ನು ಪಾಲಿಕೆಯ ಆಯುಕ್ತರ ಮೂಲಕ ಸರ್ಕಾರಕ್ಕೆ ತಲುಪಿಸಿದ್ದಾರೆ […]

ಚಿಕ್ಕಮಗಳೂರಿನಲ್ಲಿ, ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರ ಓಡಾಟ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಅತ್ಯಂತ ಕಡಿಮೆ ದರದಲ್ಲಿ ರೈತರಿಂದ ತರಕಾರಿ ಹಾಗೂ ಹಣ್ಣುಗಳನ್ನು ಕೊಂಡುಕೊಂಡು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಆರೆಸ್ಸೆಸ್, ಸೇವಾ ಭಾರತಿ ಕಾರ್ಯಕರ್ತರು ನಿರ್ವಾಹಿಸುತ್ತಿದ್ದಾರೆ 80 ಜನ ಕಾರ್ಯಕರ್ತರು ತೊಡಗಿಸಿಕೊಂಡಿದ್ದು, 12 ಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಕೊಳ್ಳುವಾಗ  ಸಾಮಾಜಿಕ ಅಂತರ ಕಾಪಾಡಬೇಕೆಂದು ಸಾರ್ವಜನಿಕರಲ್ಲಿ  ಕಾರ್ಯಕರ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ರೈತರೊಬ್ಬರು […]

At Bhadravati’s Hosa Bullapura, RSS Swayamsevaks had organised for the distribution of groceries to the lockdown affected needy. When approached, the women here humbly turned down to receive the grocery kit. They said, “We thank you for the gesture. Although we are poor, we currently can continue with what we […]

ಯುಗಾದಿ ಉತ್ಸವ ಸಮಾಜದ ಉತ್ಸವವೂ ಹೌದು. ಸಂಘದ ಉತ್ಸವವೂ ಹೌದು. ಸಂಘದ ಸಂಸ್ಥಾಪಕರಾದ ಪ.ಪೂ ಡಾ. ಕೇಶವ ಬಲಿರಾಮ್ ಹೆಡ್ಗೇವಾರ್ ಅವರ ಜನ್ಮದಿನವೂ ಹೌದು. ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಇಂದು ವಿಡಿಯೋ ಮೂಲಕ ತಮ್ಮ ಯುಗಾದಿ ಸಂದೇಶವನ್ನು ಹಂಚಿಕೊಳ್ಳುತ್ತಾ, ಕೊರೊನಾ ವೈಶ್ವಿಕ ಸಂಕಟದಲ್ಲಿ ಭಾರತವೂ ಸಂಕಷ್ಟವನ್ನು ಎದುರಿಸುತ್ತಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ಲಾಕ್ ಡೌನ್ ಅನ್ನು ಸಂಪೂರ್ಣ ಬೆಂಬಲಿಸುತ್ತಾ, ಕರೊನಾ ವೈರಸ್ ನಿಂದ ಸೋಂಕಿತರಾಗದೆ ದೂರ ಉಳಿಯಲು […]

ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್‌ ನಿರ್ಣಯಗಳು – ಯುಗಾಬ್ದ 5121 ಬೆಂಗಳೂರು 14 ಮಾರ್ಚ 2020 ನಿರ್ಣಯ – 1 ಭಾರತದ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಿದ್ದು ಮತ್ತು ಅದರ ಪುನಾರಚನೆ – ಒಂದು ಶ್ಲಾಘನೀಯ ಹೆಜ್ಜೆ ಭಾರತದ ಸಂವಿಧಾನವನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಿದ ಕ್ರಮ ಮತ್ತು ತದನಂತರ ಸಂವಿಧಾನದ ಅನುಚ್ಛೇದ ೩೭೦ ನ್ನು ಸನ್ಮಾನ್ಯ ರಾಷ್ಟ್ರಪತಿಗಳ ಆದೇಶಗಳ ಮೂಲಕ ನಿಷ್ಕ್ರಿಯಗೊಳಿಸಿ, […]

೧೫ ಲಕ್ಷ ಸ್ವಯಂಸೇವಕರನ್ನು ಸಮಾಜ ಕಾರ್ಯದಲ್ಲಿ ತೊಡಗಿಸಲಿರುವ ಆರೆಸ್ಸೆಸ್ : ಅರುಣ್ ಕುಮಾರ್ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮುಂಬರುವ ದಿನಗಳಲ್ಲಿ ತನ್ನ 15 ಲಕ್ಷ ಸ್ವಯಂಸೇವಕರನ್ನು ಸಮಾಜ‌ ಪರಿವರ್ತನೆಯ ಚಟುವಟಿಕೆಗಳಲ್ಲಿ ತೊಡಗಿಸಲಿದೆ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್ ಕುಮಾರ್ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ‌ತಿಳಿಸಿದರು. ಮಾರ್ಚಿ 15 ರಿಂದ ಬೆಂಗಳೂರಿನಲ್ಲಿ ಆರಂಭವಾಗುವ ಆರೆಸ್ಸೆಸ್ ನ ರಾಷ್ಟ್ರೀಯ ಸಭೆ ಅಖಿಲ ಭಾರತ ಪ್ರತಿನಿಧಿ ಸಭಾದ ಹಿನ್ನೆಲೆಯಲ್ಲಿ ಅವರು […]