ಅವರು ಮರಳಿ ಬಂದರು, ಏಕೆಂದರೆ ಕೇರಳ ಉಳಿಯಬೇಕಿತ್ತು: ಹಿರಿಯ ಆರೆಸ್ಸೆಸ್ ಪ್ರಚಾರಕ ಪಿ ಪರಮೇಶ್ವರನ್ ಕುರಿತಾದ ಸಂತೋಷ್ ತಮ್ಮಯ್ಯ ಲೇಖನ ಇಂದು ನಮ್ಮನ್ನಗಲಿದ ಶ್ರೀ ಪರಮೇಶ್ವರನ್ ಅವರ ಕುರಿತಾಗಿ ಪತ್ರಕರ್ತ, ಲೇಖಕ ಸಂತೋಷ್ ತಮ್ಮಯ್ಯ ಹಿಂದೊಮ್ಮೆ ಬರೆದ ಲೇಖನವನ್ನು ಮರು ಪ್ರಕಟಿಸಲಾಗಿದೆ. ಇನ್ನು ತಾನು ಕಲಿಸಿದ್ದು ಸಾಕು ಎಂದುಕೊಂಡ ಗುರುವೊಬ್ಬ ಶಿಷ್ಯನನ್ನು ಕರೆದು ಪರೀಕ್ಷೆಗೊಡ್ಡುತ್ತಾನೆ. ಕಠಿಣ ಲಕ್ಷ್ಯಕ್ಕೆ ಗುರಿ ಇಡಲು  ಆತನಿಗೆ ಸೂಚಿಸುತ್ತಾನೆ. ಶಿಷ್ಯ ಆಯಕಟ್ಟಿನ ಜಾಗದಲ್ಲಿ ನಿಂತು ಲಕ್ಷ್ಯಕ್ಕೆ […]

2 ಫೆಬ್ರವರಿ, ತಿರುಪತಿ: ಹಿರಿಯ ಸಂಸ್ಕೃತ ಸಾಹಿತಿಗಳು ಮತ್ತು ವಿದ್ವಾಂಸರಾದ ಡಾ.ಜನಾರ್ದನ ಹೆಗಡೆ ಹಾಗೂ ಡಾ.ಎಚ್ .ಆರ್. ವಿಶ್ವಾಸ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ವಾಚಸ್ಪತಿ ಪುರಸ್ಕಾರ ಘೋಷಿಸಿದೆ. ಸಂಸ್ಕೃತ ಭಾಷೆ, ಸಂಸ್ಕೃತ ಸಾಹಿತ್ಯ, ಭಾರತೀಯ ಸಂಸ್ಕೃತಿ ಮತ್ತು ಸಮಾಜ ಸೇವೆ ಈ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಗೌರವ ಡಾಕ್ಟರೇಟ್ ಪದವಿಯೇ ವಾಚಸ್ಪತಿ ಪುರಸ್ಕಾರ. ಭಾನುವಾರದಂದು ತಿರುಪತಿಯಲ್ಲಿ ಜರುಗಿದ 23ನೇ ಘಟಿಕೋತ್ಸವದಲ್ಲಿ ನಿವೃತ್ತ ಚುನಾವಣಾ ಮುಖ್ಯ […]

‘ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು’ ಪುಸ್ತಕದ ಕುರಿತಾದ ಸಂವಾದ. ಹುಬ್ಬಳ್ಳಿ, 24 ಜನವರಿ 2020: ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಇಂದು ಸಂಜೆ 5 ಗಂಟೆಗೆ ನಿರಾಮಯಾ ಫೌಂಡೇಶನ್ ವತಿಯಿಂದ ಹಮ್ಮಿಕೊಂದಿದ್ದ “ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು” ಪುಸ್ತಕದ ಕುರಿತಾದ ಸಂವಾದ ಕಾರ್ಯಕ್ರಮ ಜರುಗಿತು. ಹೊಸದಿಗಂತ ಪತ್ರಿಕೆಯ ಸಂಪಾದಕರಾದ ವಿನಾಯಕ ಭಟ್, ಅಂಕಣಕಾರರು, ಲೇಖಕರಾದ ರೋಹಿತ್ ಚಕ್ರತೀರ್ಥ, ಪತ್ರಕರ್ತರು, ಅಂಕಣಕಾರರಾದ ಗೀರ್ವಾಣಿ ಭಟ್, ವಿಕ್ರಮ ಪತ್ರಿಕೆಯ ಸಂಪಾದಕರಾದ ವೃಷಾಂಕ ಭಟ್ […]

17 ಜನವರಿ 2020, ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಶಂಕರಪುರ ಭಾಗ, ವಿದ್ಯಾಪೀಠ ನಗರದಲ್ಲಿ ಮಕರ ಸಂಕ್ರಾಂತಿ ಉತ್ಸವದ ಪ್ರಯುಕ್ತ ಶ್ರೀನಿವಾಸನಗರ ಮತ್ತು ಬ್ಯಾಂಕ್ ಕಾಲೋನಿಯ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರು ಪಥಸಂಚಲನ ನಡೆಸಿದರು. ಉತ್ಸವಕ್ಕೆ ಅಧ್ಯಕ್ಷರಾಗಿ ಶ್ರೀಯುತ ಮರಿಯಪ್ಪ, ವಿದ್ಯಾರಣ್ಯ ಯುವಕರ ಸಂಘದ ಅಧ್ಯಕ್ಷರು ಇದ್ದರು. ಮುಖ್ಯ ವಕ್ತಾರರಾಗಿ ರಾ.ಸ್ವ.ಸಂ ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌಧಿಕ್ ಪ್ರಮುಖರಾದ ಶ್ರೀಯುತ ಕೃಷ್ಣ ಪ್ರಸಾದ್ ಇದ್ದರು. “ಕೆಲವು ಹಬ್ಬಗಳು ಮನೆಯೊಳಗೆ ಆಚರಿಸಿದರೆ, […]

ದೆಹಲಿ ಗುಣಮಟ್ಟದ ತರಬೇತಿಯನ್ನು ಹುಬ್ಬಳ್ಳಿಯಲ್ಲಿ ಸೃಷ್ಟಿಸುತ್ತಿರುವ ಸಮುತ್ಕಷ೯: ಡಾ.ವಿಜಯ ಸ೦ಕೇಶ್ವರ ದೆಹಲಿ ಗುಣಮಟ್ಟದ ತರಬೇತಿಯನ್ನು ಹುಬ್ಬಳ್ಳಿಯಲ್ಲಿ ಸೃಷ್ಟಿಸುವ ಮೂಲಕ ಮುಖ್ಯವಾಗಿ ಉತ್ತರಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ‘ಸಮುತ್ಕರ್ಷ’ ಸಂಸ್ಥೆ ಆಶಾಕಿರಣವಾಗಿ ಮಾರ್ಪಾಡಗುತ್ತಿದೆ‌‌. ಅಲ್ಲದೇ ಕಳೆದ ವರ್ಷಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಮುತ್ಕರ್ಷದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ತೇರ್ಗಡೆಯಾಗಿರುವುದು ಸಮುತ್ಕರ್ಷದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿ‌.ಆರ್.ಎಲ್.ಸಮೂಹ ಸಂಸ್ಥೆಗಳ ಅಧ್ಯಕ್ಷ ವಿಜಯ ಸಂಕೇಶ್ವರ ಹೇಳಿದರು‌. ಅವರು ಹುಬ್ಬಳ್ಳಿಯಲ್ಲಿ ನಡೆದ ಸಮುತ್ಕರ್ಷ ಐ.ಎ.ಎಸ್. ಅಕಾಡೆಮಿಯ […]

ಇಂದು ನಮ್ಮನ್ನಾಗಲಿದ ಹಿರಿಯ ಸಾಹಿತಿ ಡಾ. ಚಿದಾನಂದಮೂರ್ತಿ ಅವರನ್ನು ನೆನೆದು ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ     ಅವರು  ಶ್ರದ್ಧಾಂಜಲಿ  ಅರ್ಪಿಸಿದ್ದಾರೆ. ಪ್ರಖರ ರಾಷ್ಟ್ರೀಯ ವಿಚಾರಧಾರೆಯ ಚಿಂತಕರು, ಹಿರಿಯ ಸಂಶೋಧಕರು, ಲೇಖಕರಾದ ಡಾ. ಚಿದಾನಂದ ಮೂರ್ತಿಯವರು ನಮ್ಮನ್ನು ಆಗಲಿರುವುದು ಬಹಳ ದುಃಖದ ಸಂಗತಿ. ನಾಡು, ನುಡಿ, ಭಾಷೆ, ಧರ್ಮ, ಸಂಸ್ಕೃತಿಗಳ ವಿಚಾರವಾಗಿ ಅಧಿಕೃತ ವಕ್ತಾರರಾಗಿ ಸಂಶೋಧನಾ ಬರಹಗಳನ್ನು […]

10 ಜನವರಿ 2020, ಬೆಂಗಳೂರು: ಆದಿಕವಿ ವಾಲ್ಮೀಕಿ  ವಿರಚಿತ ರಾಮಾಯಣದ ಅಖಂಡ ಪಾರಾಯಣ ಸಂಸ್ಕೃತ ಭಾರತಿಯ ಕಾರ್ಯಾಲಯ ಅಕ್ಷರಂನಲ್ಲಿ ಇಂದು ಆರಂಭವಾಯಿತು. ಶತಾವಧಾನಿ ಡಾ. ಆರ್ ಗಣೇಶರವರು, ರಾಮಾಯಣದ ಮೊದಲ ಶ್ಲೋಕವಾದ “ತಪಃಸ್ವಾಧ್ಯಾಯ ನಿರತಂ” ಪಠಿಸಿ ಪಾರಾಯಣವನ್ನು ಉದ್ಘಾಟಿಸಿದರು. ಬೆಂಗಳೂರಿನ ಇತಿಹಾಸದಲ್ಲಿ ಈ ರೀತಿಯ ಅಖಂಡ ಪಾರಾಯಣ ಕಾರ್ಯಕ್ರಮ ಪ್ರಾಯಃ ಪ್ರಥಮ ಬಾರಿ ನಡೆಯುತ್ತಿದೆ. ಹಗಲು-ರಾತ್ರಿ ಭೇದವಿಲ್ಲದೆ ನಿರಂತರವಾಗಿ 56 ಗಂಟೆಗಳ ಕಾಲ ಪಾರಾಯಣ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ […]

ಸೇವಾ ಭಾರತಿ ಮಂಗಲ್ಪಾಡಿ ವತಿಯಿಂದ ಶ್ರೀ ಜನಾರ್ದನ ಪ್ರತಾಪನಗರ ಇವರ ಸ್ಮರಣಾರ್ಥ ರಕ್ತದಾನ ಶಿಬಿರ ಉಪ್ಪಳ: ಶ್ರೀ ಜನಾರ್ದನ ಪ್ರತಾಪನಗರ ಇವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಕೆ ಎಂ ಸಿ ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ದಿನಾಂಕ. 22 ಸೆಪ್ಟೆಂಬರ್ ಆದಿತ್ಯವಾರದಂದು ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಆರ್ […]

ಆರೆಸ್ಸೆಸ್ ಸಹಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ದೈವಾಧೀನರಾದ ಉಡುಪಿಯ ಪೂಜ್ಯ ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇಂಥ ಒಬ್ಬ ಮಹಾಯತಿಗಳನ್ನು ನೋಡುವ, ಅವರ ಮಾತನ್ನು ಕೇಳುವ, ಅವರೊಂದಿಗೆ ಮಾತನಾಡುವ ಮಹಾಭಾಗ್ಯ ನನಗೆ ದೊರೆತದಕ್ಕಾಗಿ ನನ್ನ ಜೀವನ ಧನ್ಯವೆನಿಸಿದೆ. ಪೂಜ್ಯ ವಿಶ್ವೇಶ ತೀರ್ಥರು ಒಬ್ಬ ಯುಗಪುರುಷ, ಆಧ್ಯಾತ್ಮಿಕ ಮೇರುಗಿರಿ, ಸಾಮಾಜಿಕ ಕ್ರಾಂತಿಯ ಹರಿಕಾರ, ರಾಷ್ಟ್ರೀಯತೆಯ ಪರಮ ಆರಾಧಕ, ಮಾನವೀಯತೆಯ ಮಮತಾಮೂರ್ತಿ, ಪರಂಪರೆ-ಆಧುನಿಕತೆಗಳ ಸಮನ್ವಯಕ. ಧರ್ಮದ ಯುಗಾನುಕೂಲ ವ್ಯಾಖ್ಯಾನಕಾರ. ಅವರು ಪರಂಧಾಮಕ್ಕೆ ತೆರಳಿದ್ದರಿಂದ […]