ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಧಾನ ಕಾರ್ಯಾಲಯ – ಡಾ|| ಹೆಡಗೇವಾರ್ ಭವನ , ಪರಮಶ್ರದ್ಧೆಯ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ವೈಕುಂಠಲೀನರಾದುದು ನಮ್ಮೆಲ್ಲರಿಗೆ ಬಹುದೊಡ್ಡ ನಷ್ಟವಾಗಿದೆ. ದೈವ ಸಂಪದೆಯುಳ್ಳ, ದೇಶ ಮತ್ತು ಧರ್ಮಗಳ ಚಿಂತನೆಯಲ್ಲಿ ನಿತ್ಯ ಪ್ರಯತ್ನರತ ಅವರ ಸೌಮ್ಯ , ಶಾಂತ, ಪ್ರಸನ್ನ ಮತ್ತು ಶೀತಲ ವ್ಯಕ್ತಿತ್ವವು ನಮ್ಮೆಲ್ಲ ಕಾರ್ಯಕರ್ತರಿಗೆ ಬಹುದೊಡ್ಡ ಆಧಾರವಾಗಿತ್ತು. ಅವರ ಸ್ಪಷ್ಟ ಹಾಗು ಸ್ನೇಹಮಯ ಸಲಹೆಗಳು ಎಂತಹುದೇ ಜಟಿಲ ಸಮಸ್ಯೆಗಳನ್ನು ತುಂಬಾ ಸರಳಗೊಳಿಸುತ್ತಿತ್ತು. ವಟವೃಕ್ಷದ ಶೀತಲ […]

29 ಡಿಸೆಂಬರ್ 2019, ಉಡುಪಿ: ಉಡುಪಿಯ ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಇಂದು ದೈವಾಧೀನರಾಗಿದ್ದಾರೆ. ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿದಂತೆ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಅವರು ಪೂಜ್ಯರ ಪಾದಗಳಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಆಧ್ಯಾತ್ಮಿಕ ಸಾಧಕರು ಮತ್ತು ಸಾಮಾಜಿಕ ಜಾಗೃತಿಯ ಹರಿಕಾರರಾಗಿದ್ದ ಉಡುಪಿಯ ಪರಮಪೂಜ್ಯ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ನಮ್ಮ ದೇಶ ಕಂಡ ಓರ್ವ […]

20 ಡಿಸೆಂಬರ್ 2019, ಮತ್ತೂರು:   ಇಂದು ಸಂಜೆ ಸಂಸ್ಕೃತ ಗ್ರಾಮ ಮತ್ತೂರಿನ ಶಾರದಾ ವಿಲಾಸ ಶಾಲೆಯ ಆವರಣದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ ರವರು ಪಾಲ್ಗೊಂಡು ಸಂವಾದ ನಡೆಸಿಕೊಟ್ಟರು. ವೇದ, ವೇದಾಂತ, ಯಜ್ಞ ಪ್ರಯೋಗ, ಸಂಸ್ಕೃತ, ಸಂಗೀತ, ಗಮಕ, ಕೃಷಿ, ಸಹಕಾರಿ, ಜ್ಯೋತಿಷ್ಯ, ಭಜನೆ, ಶಿಕ್ಷಣ, ಸಂಘಟನೆ ಮೊದಲಾದ ಹಿಂದೂ ಸಂಸ್ಕೃತಿಯ ವೈಶಿಷ್ಟ್ಯ ಪೂರ್ಣ ಸಂಗತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಅವಳಿ […]

9 ನವೆಂಬರ್ 2019,ದೆಹಲಿ: ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆ ವಿವಾದದ ಬಗೆಗಿನ ಐತಿಹಾಸಿಕ  ತೀರ್ಪಿತ್ತ ನಂತರ ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪತ್ರಿಕಾ ಪ್ರಕಟಣೆ ಜನರ ಭಾವನೆ, ನಂಬಿಕೆಗಳಿಗೆ ನ್ಯಾಯ ಒದಗಿಸುವ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾಗತಿಸುತ್ತದೆ. ದಶಕಗಳಿಂದ ನಡೆಯುತ್ತಿದ್ದ ಸುದೀರ್ಘ ಕಾನೂನಾತ್ಮಕ ಪ್ರಕ್ರಿಯೆಯು ನ್ಯಾಯಯುತವಾಗಿ ಇಂದು ಪೂರ್ಣಗೊಂಡಿದೆ. ಈ ಸುದೀರ್ಘ ಪ್ರಕ್ರಿಯೆಯಲ್ಲಿ ಶ್ರೀ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ […]

೮ ನವೆಂಬರ್ ೨೦೧೯, ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಇಂದು ನಗರದ ರಾಷ್ಟ್ರೊತ್ಥಾನ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿಯನ್ನು ಕರೆದು ತಾವು ಕೊಡಬಯಸುವ ಎರಡು ಪುರಸ್ಕಾರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿತು. “ಭಾರತದ ಭಾಷಾ ಸಮೃದ್ಧಿ, ಸಾಹಿತ್ಯ ಸಂಪತ್ತು ಅತ್ಯಂತ ವಿಶಿಷ್ಟವಾದುದು. ಭಾರತದ ನೆಲದಲ್ಲಿ ಬೆಳೆದ ಸಂಸ್ಕೃತಿಯಂತೂ ಬಹು ವೈವಿಧ್ಯಮಯವಾಗಿ,ವರ್ಣರಂಜಿತವಾಗಿದೆ. ನುಡಿಯ ಆಂತರ್ಯವನ್ನು ಸಾಹಿತ್ಯದ ಸಾಧ್ಯತೆಗಳನ್ನು ಕಂಡುಕೊಳ್ಳುವಲ್ಲಿ ನಿರಂತರ ಪ್ರಯತ್ನಶೀಲವಾಗಿರುವ ಭಾರತೀಯ ಶಬ್ದ ಸತ್ತ್ವ, ಹೊಸ ಹೊಸ ಆಯಾಮಗಳನ್ನು ಶೋಧಿಸಿದೆ. ಇದರ ಫಲವಾಗಿಯೆ ಮಾತು ಮಂತ್ರವಾಗುವುದಿದ್ದರೆ […]

ಸರ್ವೋಚ್ಛ ನ್ಯಾಯಾಲಯದಲ್ಲಿ ಇಂದು ಅಯೋಧ್ಯೆಯ ತೀರ್ಪು ಹೊರಬರುತ್ತದೆ. ತತ್ಸಂಬಂಧ, ಶ್ರೀ ರಾಮಜನ್ಮಭೂಮಿಗೆ ಸಂಬಂಧಿಸಿದಂತೆ ಆಗಾಗ ಕೇಳಿಬರುವ ಪ್ರಶ್ನೆಗಳು ಹಾಗೂ ಉತ್ತರಗಳನ್ನು ಇಲ್ಲಿ ಕೊಡಲಾಗಿದೆ. ಪ್ರಶ್ನೆ: ಪ್ರಭು ಶ್ರೀ ರಾಮನನ್ನು ಹಿಂದೂಗಳು ಆರಾಧಿಸಿ ಪೂಜಿಸುವುದೇಕೆ? ಹಿಂದೂ ಸಂಪ್ರದಾಯದಂತೆ, ಎರಡನೆಯ ಯುಗವಾದ ತ್ರೇತಾಯುಗದಲ್ಲಿ ಜನಿಸಿದ ಪ್ರಭು ಶ್ರೀ ರಾಮ, ಮಹಾವಿಷ್ಣುವಿನ ಏಳನೆಯ ಅವತಾರ. ಅಧರ್ಮವನ್ನು ತೊಡೆದುಹಾಕಲೆಂದೇ ಜನ್ಮತಾಳಿದವನು ಶ್ರೀ ರಾಮ ಎಂಬುದು ಬಲವಾದ ನಂಬಿಕೆ. ೩೦೦೦ ವರ್ಷಗಳ ಕೆಳಗೆ ಹಿಂದೂಗಳ ನಾಯಕನಾಗಲೆಂದೇ ಜನಿಸಿದವನು […]

ಜಮ್ಮು ಕಾಶ್ಮೀರಕ್ಕಾಗಿ ಜೀವನವನ್ನೇ ತೇಯ್ದ ಮಹನೀಯರನ್ನು ಮರೆಯಲಾದೀತೆ? 31 ಆಕ್ಟೊಬರ್ 2019ರಿಂದ ಜಮ್ಮು ಕಾಶ್ಮೀರ ಮರು ವಿಂಗದನಾ ಮಸೂದೆ ಜಾರಿಗೆ ಬರುವ ದಿನವಾಗಿದೆ. ತನ್ನಿಮಿತ್ತದ ವಿಶೇಷ ಲೇಖನ ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ, ಕರ್ನಾಟಕದ ಶ್ರೀ ಸತ್ಯನಾರಾಯಣ ಶಾನಭಾಗ ಅವರಿಂದ. ಕಳೆದ ಏಳು ದಶಕಗಳಿಂದ ಭಾರತದ ಕಿರೀಟ ಜಮ್ಮು ಕಾಶ್ಮೀರವನ್ನು ಕುರಿತಂತೆ ಆ ನೆಲದಲ್ಲಿ ಮತ್ತು ದೇಶದೆಲ್ಲೆಡೆ ನಡೆದ ಸಂಘರ್ಷ ಇಂದು ಒಂದು ಪ್ರಮುಖ ಮತ್ತು ನಿರ್ಣಾಯಕ ತಿರುವಿನಲ್ಲಿ ಬಂದು […]

ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಧಾರವಾಡ‌ ಜಿಲ್ಲೆಯ ಪ್ರಾಥಮಿಕ ಶಿಕ್ಷಾವರ್ಗ ಸಾರ್ವಜನಿಕ ಕಾರ್ಯಕ್ರಮ ದಿ. 19 ಆಕ್ಟೊಬರ್, ಶನಿವಾರ ಸ೦ಜೆ ಜರುಗಿತು. ಶಿಬಿರಾಥಿ೯ಗಳ ಸ೦ಚಲನದಜೊತೆಗೆ , ಶಾರೀರಿಕ ಪ್ರದಶ೯ನ ಸಾವ೯ಜನಿಕ ಕಾಯ೯ಕ್ರಮ ಯಶಸ್ವಿಯಾಗಿ ನಡಯಿತು.

19 ಅಕ್ಟೋಬರ್ 2019, ಬೆಂಗಳೂರು: ನಗರದಲ್ಲಿ ವಿಜಯದಶಮಿಯ ಪ್ರಯುಕ್ತ ರಾಷ್ಟ್ರ ಸೇವಿಕಾ ಸಮಿತಿಯ 700ಕ್ಕೂ ಹೆಚ್ಚು ಕಾರ್ಯಕರ್ತೆಯರು 4 ಕಡೆಗಳಲ್ಲಿ ಪೂರ್ಣ ಗಣವೇಶದಲ್ಲಿ ಭಾಗವಹಿಸಿದರು. ಪಥಸಂಚಲನವನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ನಾಗರಿಕರು ಸೇರಿದ್ದರು. ನಗರದಲ್ಲಿ ಪಥಸಂಚಲನ ನಡೆಯುತ್ತಿದ್ದ ರಸ್ತೆಗಳಲ್ಲಿ ಸ್ಥಳೀಯರು ರಂಗೋಲಿ ಬಿಡಿಸಿ, ಪುಷ್ಪವೃಷ್ಟಿ ಮಾಡುತ್ತಾ, ಭಾರತ ಮಾತಾ ಕಿ ಜೈ ಎಂಬ ಘೋಷಣೆ ಕೂಗುತ್ತಾ, ಶ್ರದ್ಧೆ ಮೆರೆದರು. 1936ರಲ್ಲಿ ವಿಜಯದಶಮಿ ಹಬ್ಬದಂದು ಪ್ರಾರಂಭವಾದ ರಾಷ್ಟ್ರ ಸೇವಿಕಾ ಸಮಿತಿಗೆ ಈ […]