ನೇರನೋಟ – 21.11.2016 ದು ಗು ಲಕ್ಷ್ಮಣ್  ಸೂರೂಜಿ ಅಮರ ; ನೆನಪುಗಳಿಗೆ ಸಾವಿಲ್ಲ ಡಾಕ್ಟರ್‌ಜೀ, ಗುರೂಜಿ ಪ್ರಚಾರಕರು ಹೇಗೆ ಬದುಕಬೇಕು ಎಂಬ ಬಗ್ಗೆ ನಿರ್ಬಂಧಗಳನ್ನೇನಾದರೂ ಹಾಕಿದ್ದರಾ? – ಅಂಥದೇನಿಲ್ಲ. ಒಬ್ಬ ಪ್ರಚಾರಕ ಹೇಗಿರಬೇಕೆಂದರೆ ಆತ ಹಗಲೂರಾತ್ರಿ ನಿರಂತರ ಕೆಲಸಮಾಡಿ ರಾತ್ರಿ ದಿಂಬಿಗೆ ತಲೆಕೊಟ್ಟರೆ ತಕ್ಷಣ ನಿದ್ದೆ ಆವರಿಸಿಕೊಳ್ಳಬೇಕು. ಆ ರೀತಿ ಶ್ರಮಪಡಬೇಕು ಎಂದು ಗುರೂಜಿಯವರು ಹೇಳುತ್ತಿದ್ದುದುಂಟು. ಪ್ರಚಾರಕ ಹಲವು ಬಗೆಯ ಕಷ್ಟಗಳನ್ನು ಸಹಿಸಬೇಕಾಗುತ್ತದೆ. ಮೋಹಗಳನ್ನು ಗೆಲ್ಲಬೇಕಾಗುತ್ತದೆ. ಏಕೆಂದರೆ ಆತ ಕೆಲಸಮಾಡುವುದು ಜನರ […]

ನೇರನೋಟ – ೧೩.೦೪.೨೦೧೫ by Du Gu Lakshman ಹೊಸದಿಲ್ಲಿಯಲ್ಲಿ ಏ.೪ ರಿಂದ ಏ.೬ ರವರೆಗೆ ಸೇವಾಭಾರತಿ ಆಶ್ರಯದಲ್ಲಿ ’ರಾಷ್ಟ್ರೀಯ ಸೇವಾಸಂಗಮ’ ಎಂಬ ೩ ದಿನಗಳ ಬೃಹತ್ ಸಮಾವೇಶ ಜರುಗಿತು. ಸೇವಾಭಾರತಿ ಆರೆಸ್ಸೆಸ್ ಪ್ರೇರಿತ ಸೇವಾ ಚಟುವಟಿಕೆಗಳ ಒಂದು ಒಕ್ಕೂಟ ಸಂಸ್ಥೆ. ಆರೆಸ್ಸೆಸ್ ಬೇರೆ ಬೇರೆ ಹೆಸರಿನಲ್ಲಿ ದೇಶದಾದ್ಯಂತ ನಡೆಸುತ್ತಿರುವ ಸಾವಿರಾರು ಸೇವಾ ಚಟುವಟಿಕೆಗಳಿಗೆ ಸಂಬಂಧಿಸಿದ ೩ ಸಹಸ್ರಕ್ಕೂ ಹೆಚ್ಚು ಪ್ರಮುಖ ಕಾರ್ಯಕರ್ತರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಸಮಾವೇಶವನ್ನು […]

article by ದು ಗು ಲಕ್ಷ್ಮಣ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಗುಹೋಗುಗಳ ಕುರಿತು ಕೆಲವು ಮಾಧ್ಯಮಗಳು ತಮ್ಮದೇ ಊಹೆಗಳನ್ನು ಆಗಾಗ ಪ್ರಕಟಿಸುತ್ತಲೇ ಇರುತ್ತವೆ. ತಮ್ಮ ತಾಳಕ್ಕೆ ತಕ್ಕಂತೆ ಸಂಘ ಹೆಜ್ಜೆ ಹಾಕಬೇಕು ಎಂದೂ ನಿರೀಕ್ಷಿಸುತ್ತವೆ. ಆದರೆ ಮಾಧ್ಯಮಗಳ ನಿರೀಕ್ಷೆಯಂತೆ ಅಥವಾ ಅವುಗಳ ಅಭಿಪ್ರಾಯಕ್ಕೆ ತಕ್ಕಂತೆ  ಸಂಘ ತನ್ನ ಯೋಜನೆ ರೂಪಿಸುವುದಿಲ್ಲ. ಸಂಘಕಾರ್ಯದ ಅಗತ್ಯಕ್ಕೆ ಅನುಗುಣವಾಗಿ ಹಾಗೂ ಸಂಘದ ವರಿಷ್ಠರ ಸಾಮೂಹಿಕ ಚಿಂತನೆಗೆ ಅನುಸಾರವಾಗಿ ಕಾರ್ಯಯೋಜನೆ, ಹುದ್ದೆಗಳ ಬದಲಾವಣೆ ನಡೆಯುತ್ತದೆ ಎನ್ನುವುದು […]

article by Du Gu Lakshman ಸ್ವಾಮಿ ವಿವೇಕಾನಂದರು ವಿದೇಶಗಳಿಗೆ ಹೋಗಿ ಹಿಂದು ಧರ್ಮದ ಮಹತ್ವವನ್ನು ಸಾರುವ ಮೊದಲು, ಭಾರತದಾದ್ಯಂತ ಸಂಚರಿಸಿ, ಕೊನೆಗೆ ಅವರು ತಲುಪಿದ್ದು ದಕ್ಷಿಣದ ತುತ್ತತುದಿಯಲ್ಲಿರುವ  ಕನ್ಯಾಕುಮಾರಿಗೆ. ಅಲ್ಲಿರುವ ಸಾಗರದ ಮಧ್ಯದ ಬಂಡೆಯ ಮೇಲೆ ಕುಳಿತು ಅವರು  ಮೂರು ದಿನಗಳ ಕಾಲ ಧ್ಯಾನಸ್ಥರಾಗಿದ್ದರು.  ಸಾಗರದ ಅಲೆಗಳು ಆ ಬಂಡೆಯನ್ನು  ಅಪ್ಪಳಿಸಿದಂತೆಯೇ ದೇಶದಲ್ಲಿ ತುಂಬಿದ್ದ ಮೌಢ್ಯ, ದಾರಿದ್ರ್ಯ, ವಿದೇಶಗಳಲ್ಲಿ ಹಿಂದು ಧರ್ಮದ  ವಿರುದ್ಧದ ಅಪಪ್ರಚಾರ… ಮೊದಲಾದ ಸಮಸ್ಯೆಗಳು ಅವರ  […]

Neranota: by Du Gu Lakshman ಇಂದುನ. 5 ರಂದು ಸೂರೂಜಿ ಅವರಿಗೆ 90 ತುಂಬಿದ ಸಂದರ್ಭಕ್ಕಾಗಿ ಬೆಂಗಳೂರಿನ ಶಂಕರಪುರಂನ ಶಂಕರಮಠದಲ್ಲಿ ಹೋಮ ಹವನ ಧಾರ್ಮಿಕ ವಿಧಿ ನಡೆಯಲಿದೆ. ಬನ್ನಿ, ನಮಗೆಲ್ಲರಿಗೂ ಸಂಘಗಂಗೆಯ ಅಮೃತ ಉಣಿಸಿದ ಈ ಹಿರಿಯ ಚೇತನಕ್ಕೆ ಶುಭ ಕೋರೋಣ. ಸೂರೂಜಿ, ಸೂರು ಅವರು… ಈ ಹೆಸರು ಕೇಳಿದಾಕ್ಷಣ ಆರೆಸ್ಸೆಸ್ ವಲಯದಲ್ಲಿ ತಕ್ಷಣ ಒಂದು ಗೌರವ ಭಾವನೆ, ಒಂದು ಆಪ್ತತೆ, ಒಂದು ಅನಿರ್ವಚನೀಯ ಆತ್ಮೀಯ ಭಾವ ಸುಳಿಯುತ್ತದೆ. ಹಿರಿ-ಕಿರಿಯರೆನ್ನದೆ […]

ನೇರನೋಟ – ೨೭.೧೦.೨೦೧೪ ಬ್ಯಾಂಗಲೋರ್-ಬೆಂಗಳೂರು, ಮ್ಯಾಂಗಲೋರ್-ಮಂಗಳೂರು, ಹುಬ್ಲಿ -ಹುಬ್ಬಳ್ಳಿ ಆಯ್ತು ಇಂಡಿಯಾ ಭಾರತ ಆಗೋದು ಯಾವಾಗ ? ಆ ಬಾರಿಯ ಕನ್ನಡ ರಾಜ್ಯೋತ್ಸವಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅರ್ಥಪೂರ್ಣ ಕೊಡುಗೆ. ರಾಜಧಾನಿ ಬೆಂಗಳೂರು, ಗಡಿಭಾಗದ ಬೆಳಗಾವಿ ಸೇರಿದಂತೆ ೧೨ ಪ್ರಮುಖ ನಗರಗಳ ಹೆಸರನ್ನು ಕನ್ನಡದ ಉಚ್ಚಾರಣೆಗೆ ಅನುಗುಣವಾಗಿ ಬದಲಾಯಿಸಲು ಈಗ ಉಭಯ ಸರ್ಕಾರಗಳಿಂದ ಹಸಿರು ನಿಶಾನೆ ಕೊನೆಗೂ ದೊರೆತಿದೆ.  ಈ ಹಿಂದೆ ಕೂರ್ಗ್, ಧಾರ್ವಾರ್, ನಾರ್ತ್ ಮತ್ತು ಸೌತ್ […]

ನೇರನೋಟ ೨೦.೧೦.೨೦೧೪  ಹಾಗಿದ್ದರೆ ಇವರೆಲ್ಲ ಕಾನೂನಿಗೆ ಅತೀತರೆ? ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ೪ ವರ್ಷ ಶಿಕ್ಷೆ ಮತ್ತು ೧೦೦ ಕೋಟಿ ರೂ. ದಂಡ ತೆರಬೇಕಾಗಿ ಬಂದು ಜೈಲು ಪಾಲಾಗಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕೊನೆಗೂ ಸುಪ್ರಿಂಕೋರ್ಟ್ ಷರತ್ತುಬದ್ಧ  ಜಾಮೀನು ನೀಡಿದೆ. ಇನ್ನೆರಡು ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆ ಸಲ್ಲಿಸಬೇಕು. ೩ ತಿಂಗಳಲ್ಲಿ ಮೇಲ್ಮನವಿ ಪ್ರಕರಣ ಇತ್ಯರ್ಥವಾಗಬೇಕು ಎಂಬುದು ಜಾಮೀನು ಕರುಣಿಸಿದ ಸುಪ್ರಿಂಕೋರ್ಟ್ […]

ನೇರನೋಟ ೨೨-೦೯-೨೦೧೪ n ಭೂಮಿಯ ಮೇಲಿನ ಸ್ವರ್ಗವೆಂದೇ ಬಣ್ಣಿಸಲಾಗುತ್ತಿದ್ದ ಕಾಶ್ಮೀರ ಕಣಿವೆ ಇಂದು ನರಕಸದೃಶ ಸ್ಥಿತಿಗೆ ತಲುಪಿದೆ.  ಇದಕ್ಕೆ ಕಾರಣ ಇತ್ತೀಚೆಗೆ ಅಲ್ಲಿ ಸಂಭವಿಸಿದ ಭೀಕರ ಪ್ರಳಯದಾಟ.  ಈ ಶತಮಾನದವಧಿಯಲ್ಲೆ ಕಂಡು ಕೇಳರಿಯದ ಭಾರಿ ಮಳೆ ಹಾಗೂ ಭೀಕರ ಪ್ರವಾಹ ಜಮ್ಮು-ಕಾಶ್ಮೀರ ರಾಜ್ಯವನ್ನು ಸಂಪೂರ್ಣ ಕೊಚ್ಚಿ ಹಾಕಿದೆ.  ಇನ್ನೂರಕ್ಕೂ ಹೆಚ್ಚು ಮಂದಿ ಈ ಭೀಕರ ಪ್ರವಾಹದಿಂದ ಸಾವಿಗೀಡಾಗಿದ್ದಾರೆ.  ಆದರೆ ವಾಸ್ತವವಾಗಿ ಸಾವಿಗೀಡಾದವರ  ನಿಖರ ಸಂಖ್ಯೆ ಇನ್ನೂ ಹೆಚ್ಚಿರಬಹುದು.  ೧೫೦೦ ಹಳ್ಳಿಗಳು […]

೦೧.೦೯.೨೦೧೪ by Du Gu Lakshman ಈಚೆಗೆ ಇಬ್ಬರು ಮಹನೀಯರ ಹೇಳಿಕೆಗಳು ತೀವ್ರ ಚರ್ಚೆಗೆ ಒಳಗಾಗಿದ್ದು ಸೋಜಿಗವೇ ಸರಿ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎ.ಆರ್.ದವೆ ಅವರು ಅಹ್ಮದಾಬಾದಿನಲ್ಲಿ ಆ. ೨ರಂದು ‘ಭಗವದ್ಗೀತೆ ಮತ್ತು ಮಹಾಭಾರತವನ್ನು ಶಾಲೆಗಳಲ್ಲಿ ಚಿಕ್ಕ ವಯಸ್ಸಿನಿಂದಲೇ ಕಲಿಸಬೇಕು. ನಾನೇನಾದರೂ ಭಾರತದ ಸರ್ವಾಧಿಕಾರಿಯಾಗಿದ್ದರೆ ಮೊದಲನೇ ತರಗತಿಯಿಂದ ಗೀತೆ ಮತ್ತು ಮಹಾಭಾರತ ಕಲಿಸುವುದನ್ನು ಕಡ್ಡಾಯಗೊಳಿಸುತ್ತಿದ್ದೆ. ನಾನು ಈ ಮಾತು ಹೇಳಿದ್ದಕ್ಕೆ ಯಾರಾದರೂ ನನ್ನನ್ನು ಜಾತ್ಯತೀತನಲ್ಲವೆಂದು ಹೇಳಿದರೆ ಆ ಕುರಿತು ನಾನು […]

by Du Gu Lakshman ಆ ನಾಳೆ ಬರಲೇ ಇಲ್ಲ ಮದುವೆಯಾಗಿ ಇನ್ನೂ ಹತ್ತು ತಿಂಗಳು ಕೂಡ ಕಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೆಚ್ಚಿನ ಮಡದಿಯಿಂದ ಪತ್ರವೊಂದು ಬಂದರೆ ಅದನ್ನು ತತ್‌ಕ್ಷಣ ತೆರೆದೋದಬೇಕೆಂಬ ಕಾತರ ಯಾರಿಗೆ ತಾನೆ ಇರುವುದಿಲ್ಲ? ೨೯ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ ೧೬ ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಲ್ಲಿದ್ದ. ಒಂದು ಕೈಯಲ್ಲಿ ಭೂಪಟ, ಇನ್ನೊಂದರಲ್ಲಿ ಎ.ಕೆ. […]