By Du Gu Lakshman ಮೇ 16 ಕ್ಕೆಮುನ್ನಎಲ್ಲರೂಅದನ್ನುಅಲೆಎಂದುಕರೆದಿದ್ದರು. ಆದರೆಮೇ16ರರಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡಸುನಾಮಿ ಎಂಬುದು ಎಲ್ಲರಿಗೂ ಅರಿವಾಗಿತ್ತು. ಈ ಸುನಾಮಿಯಲ್ಲಿ ಕೊಚ್ಚಿಹೋದವರೆಷ್ಟೋ ಈಗಲೂ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ! ‘ದೇಶದಲ್ಲಿಯಾವಅಲೆಯೂಇಲ್ಲ, ಅದೆಲ್ಲಾಮಾಧ್ಯಮಗಳಸೃಷ್ಟಿ’ ಎಂದುಉಡಾಫೆಮಾಡುತ್ತಿದ್ದವರೂಈಸುನಾಮಿಯಲ್ಲಿಕೊಚ್ಚಿಹೋದರು. ಸುನಾಮಿಯಹೊಡೆತಕ್ಕೆಸಿಕ್ಕಿದಅವರುಎಲ್ಲಿಗೆಹೋದರೋಏನಾದರೋ, ಮತ್ತೆಜೀವಂತವಾಗಿಎದ್ದುಬರುತ್ತಾರೋಯಾವುದೂನಿಕ್ಕಿಇಲ್ಲ. ಕೆಲವರಂತೂಅಲೆಯವಿರುದ್ಧಭಂಡತನದಧೈರ್ಯತೋರಿಮಾತನಾಡುತ್ತಿದ್ದವರುಉಸಿರುಬಿಗಿಹಿಡಿದವರಂತೆಈಗಮೌನವ್ರತಕ್ಕೆಶರಣಾಗಿದ್ದಾರೆ. ಉಸಿರುತೆಗೆಯುವುದಕ್ಕೂಅವರಿಗೀಗಭಯ! ಈಅಲೆಯಲ್ಲಿತೇಲಿಮೇಲೆದ್ದವರೂಸಾಕಷ್ಟುಮಂದಿ. ಚುನಾವಣೆಗೆಮುನ್ನಅಷ್ಟಾಗಿಮತದಾರರಿಗೆಪರಿಚಯವೇಇರದಿದ್ದಕೆಲವರುಚುನಾವಣೆಗೆಸೀಟುಗಿಟ್ಟಿಸಿಸ್ಪರ್ಧಿಸಿದಾಗಅವರಗೆಲುವನ್ನುಯಾರೂನಿರೀಕ್ಷಿಸಿರಲಿಲ್ಲ. ಠೇವಣಿಉಳಿದರೆಅವರಪುಣ್ಯಎಂದೇಕೆಲವರುನಂಬಿದ್ದರು. ಆದರೆಈಪ್ರಚಂಡಅಲೆಅಂಥವರನ್ನೂದಡಸೇರಿಸಿದೆ. ಜೀವಮಾನದಲ್ಲಿಲೋಕಸಭಾಸದಸ್ಯನಾಗುತ್ತೇನೆಂದುಕನಸುಕೂಡಕಾಣದಿದ್ದವರುಈಗಲೋಕಸಭಾಸದಸ್ಯರಾಗಿಗೆಲುವಿನನಗೆಬೀರುತ್ತಿರುವುದುಈಪ್ರಚಂಡಅಲೆಯಪರಿಣಾಮ. ನಿಜಕ್ಕೂಈಅಲೆಮಾಡಿದಪವಾಡನಿರೀಕ್ಷೆಗೂಮೀರಿದ್ದು. ‘ಅಮಿತ್ಷಾ ಅವರೇ, ನೀವು ಬಿಜೆಪಿಯ ಉತ್ತರಪ್ರದೇಶ ಚುನಾವಣಾಉಸ್ತುವಾರಿಯಾಗಿನೇಮಕಗೊಂಡಿದ್ದೀರಿ. ಅಭಿನಂದನೆಗಳು. ನಿಮ್ಮಪ್ರಕಾರಪಕ್ಷಕ್ಕೆಎಷ್ಟುಸ್ಥಾನಗಳುಬರಬಹುದು?’ – ಹೀಗೆಂದು  ಕೆಲವುದಿನಗಳಹಿಂದೆನಿಯೋಜಿತಪ್ರಧಾನಿನರೇಂದ್ರಮೋದಿಆಪ್ತ  ಅಮಿತ್ಶಾಗೆಹೊಸದಿಲ್ಲಿಯಲ್ಲಿಸುದ್ದಿವಾಹಿನಿಯೊಂದುಪ್ರಶ್ನೆಕೇಳಿತ್ತು. ಅದಕ್ಕೆಅವರುನೀಡಿದಉತ್ತರ – ‘ […]

By Du Gu Lakshman ಅದು 1975 ರ ತುರ್ತುಪರಿಸ್ಥಿತಿಯಕರಾಳದಿನಗಳು. ಆರೆಸ್ಸೆಸ್ಮೇಲೆಸರ್ಕಾರನಿಷೇಧಹೇರಿದ್ದರಿಂದಸಂಘದಕಾರ್ಯಕರ್ತರೆಲ್ಲಭೂಗತರಾಗಿಕಾರ್ಯನಿರ್ವಹಿಸಬೇಕಾದಅನಿವಾರ್ಯಸಂದರ್ಭ. ನಾನುಆಗಷ್ಟೇಪದವಿಮುಗಿಸಿಸಂಘದತಾಲೂಕುಪ್ರಚಾರಕನಾಗಿದಕ್ಷಿಣಕನ್ನಡದಸುಳ್ಯಕ್ಕೆಬಂದಿದ್ದೆ. ಅಲ್ಲಿಗೆಬಂದಒಂದುವಾರದಲ್ಲೇಸಂಘದಮೇಲೆನಿಷೇಧಹೇರಿದ್ದರಿಂದಾಗಿಯಾವುದೇಚಟುವಟಿಕೆಗಳನ್ನುಬಹಿರಂಗವಾಗಿನಡೆಸುವಂತಿರಲಿಲ್ಲ. ಕಾರ್ಯಾಲಯಗಳಿಗೆಬೀಗಮುದ್ರೆಬಿದ್ದಿದ್ದರಿಂದಾಗಿಹಿತೈಷಿಗಳಮನೆಯಲ್ಲೇವಾಸ . ಸಂಘದಕಾರ್ಯಕರ್ತರೆಂದುಅನುಮಾನಬಂದರೆಅಂತಹಮನೆಗಳಮೇಲೂಪೊಲೀಸರುದಾಳಿನಡೆಸಿ, ಅಲ್ಲಿರುತ್ತಿದ್ದಕಾರ್ಯಕರ್ತರನ್ನುಬಂಧಿಸಿಕರೆದೊಯ್ಯುತ್ತಿದ್ದರು. ಸಂಘದಪ್ರಮುಖಕಾರ್ಯಕರ್ತರನ್ನುಮನೆಗೆಸೇರಿಸುವುದೆಂದರೆಬೀದಿಯಲ್ಲಿದ್ದಮಾರಿಯನ್ನುಮನೆಗೆಕರೆತಂದಂತೆಅಥವಾವಿಪತ್ತೆಂಬಕೆಂಡವನ್ನುಸೆರಗಿನಲ್ಲಿಕಟ್ಟಿಕೊಂಡಂತೆಎಂಬುದುಗೊತ್ತಿದ್ದರೂಆಗಆನೇಕಮನೆಗಳುಸಂಘದಕಾರ್ಯಕರ್ತರಸುರಕ್ಷಿತಅಡಗುದಾಣಗಳಾಗಿದ್ದವು. ಮುಖ್ಯವಾಗಿಆಮನೆಗಳತಾಯಂದಿರುಧೈರ್ಯವಹಿಸಿಕಾರ್ಯಕರ್ತರಿಗೆಆಶ್ರಯ, ಊಟತಿಂಡಿ, ಧೈರ್ಯ, ಪ್ರೀತಿ, ಭರವಸೆಎಲ್ಲವನ್ನೂನೀಡಿದ್ದರಿಂದಲೇಸಂಘನಿಷೇಧದಬ್ರಹ್ಮಾಸ್ತ್ರದಿಂದಪಾರಾಗಿಗಟ್ಟಿಯಾಗಿಯೇಬೆಳೆದದ್ದು. ಮನೆಯಗಂಡಸರುಕೊಂಚಹೆದರಿದ್ದರೂತಾಯಂದಿರುಮಾತ್ರಧೈರ್ಯವಹಿಸಿ, ಪೊಲೀಸರಪಾಲಾಗಬೇಕಿದ್ದಕಾರ್ಯಕರ್ತರಿಗೆರಕ್ಷಣೆನೀಡಿದ್ದನ್ನುಎಂದಿಗೂಮರೆಯುವಂತಿಲ್ಲ. ಸುಳ್ಯಸಮೀಪದಜಾಲ್ಸೂರುಉಪೇಂದ್ರಕಾಮತ್ಅವರಪತ್ನಿಪದ್ಮಕ್ಕ, ಸುಬ್ರಹ್ಮಣ್ಯದಅನಂತನಲ್ಲೂರಾಯರಪತ್ನಿ, ಸುಳ್ಯದದಿವಂಗತಪಟ್ಟಪ್ಪಜೋಶಿಯವರಅಕ್ಕ, ಧನಂಜಯವಾಗ್ಲೆ, ಉಮೇಶ್, ಕುಕ್ಕುಜಡ್ಕದರವೀಶ್ಅವರತಾಯಂದಿರುಆಗಸಂಘದಕಾರ್ಯಕರ್ತರಿಗೆಮಾಡಿದಸೇವೆನಿಜಕ್ಕೂಬೆಲೆಕಟ್ಟಲಾಗದಂತಹದು. ರಾತ್ರಿಎಷ್ಟೇಹೊತ್ತಿಗೆಬಂದರೂಬೇಸರವಿಲ್ಲದೆಬಾಗಿಲುತೆಗೆದುಊಟಹಾಕಿ, ಕೆಲವೊಮ್ಮೆಅವರಿಗೆಅಗತ್ಯವಿರುವಬಟ್ಟೆಬರೆಒದಗಿಸಿ, ಹುಷಾರಾಗಿರಿ, ಪೊಲೀಸರಕೈಗೆಸಿಕ್ಕಿಹಾಕಿಕೊಳ್ಳಬೇಡಿಎಂದುಎಚ್ಚರಿಕೆಯಮಾತುಹೇಳುವವರೆಗೂಕಾಳಜಿತೋರಿಸುತ್ತಿದ್ದರು. ಜಾಲ್ಸೂರುಪದ್ಮಕ್ಕಅವರಂತೂನನಗೆ ‘ದುಗು, ಈಊರಿನಪರಿಚಯನಿನಗೆಅಷ್ಟಾಗಿಇಲ್ಲ. ಎಲ್ಲೆಲ್ಲೋತಿರುಗಾಡಿಸಿಕ್ಕಿಹಾಕಿಕೊಳ್ಳಬೇಡ. ಹುಷಾರಾಗಿರಬೇಕು’ ಎಂದುಅದೇಷ್ಟೋಬಾರಿಪ್ರೀತಿಯಿಂದಹೇಳಿದ್ದರು. ಇತ್ತೀಚೆಗೊಮ್ಮೆಅವರಮನೆಗೆಹೋದಾಗ , ಮತ್ತೆ  ಅದೇವಾತ್ಸಲ್ಯಪೂರ್ಣಧ್ವನಿಯಲ್ಲಿ  ‘ದುಗು, ಈಗನೀವೆಲ್ಲ  ದೊಡ್ಡಮನುಷ್ಯರಾಗಿದ್ದೀರಿ. ನಮ್ಮಮನೆಗೇಬರೊದಿಲ್ಲಅಲ್ವಾ? ಬರೀಪೇಪರ್‌ನಲ್ಲೇನಿಮ್ಮಚಿತ್ರನೋಡ್ಬೇಕಾ?’ ಎಂದುಹುಸಿಮುನಿಸುತೋರಿಮಾತನಾಡಿಸಿದ್ದರು. ತುರ್ತುಪರಿಸ್ಥಿತಿಯದಿನಗಳಲ್ಲಿನಾವೆಲ್ಲಅವರಮನೆಗೆಪೊಲೀಸರಿಗೆಗೊತ್ತಾಗದಂತೆಹೋಗಿ  […]

ನೇರನೋಟ: ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ! ಅದೊಂದು ಭಾನುವಾರದ ಸಂಜೆ. ಬಂಧುಗಳೊಬ್ಬರು ಮನೆಗೆ ಬರುವುದಾಗಿ ಫೋನ್ ಮಾಡಿ ಹೇಳಿದ್ದರು. ಬನ್ನಿ ಎಂದು ನಾನೂ ಸ್ವಾಗತಿಸಿದೆ. ಇಡೀ ವಾರ ಕಚೇರಿ ಕೆಲಸದ ಒತ್ತಡ, ಜೊತೆಗೆ ಮನೆಯ ಇನ್ನಿತರ ಅದೂ ಇದೂ ಕೆಲಸಗಳ ಭಾರದಿಂದ ಬಳಲಿದ ಯಾರಿಗೆ ಆದರೂ ಭಾನುವಾರವಾದರೂ ಕೊಂಚ ರಿಲ್ಯಾಕ್ಸ್ ಆಗಬೇಕೆಂದು ಅನಿಸುವುದು ಸಹಜವೇ. ಅದರಲ್ಲೂ ಆತ್ಮೀಯರ ಮನೆಗೆ ಹೋದರೆ, ಅಲ್ಲಿ ಅವರೊಡನೆ ಹರಟೆ ಹೊಡೆದರೆ ಮನಸ್ಸು ಹಗುರಾಗುತ್ತದೆಂಬುದು ಎಲ್ಲರ […]

By  Du Gu Lakshman ಈಬಾರಿಯ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಅತೀ ಹೆಚ್ಚು ನಿಂದನೆಗೊಳಗಾದ ರಾಜಕಾರಣಿ ಯಾರು? ಅದೇ ರೀತಿ ಅತೀ ಹೆಚ್ಚು ಪ್ರಚಾರ ಪಡೆದ ಜನಪ್ರಿಯ ರಾಜಕಾರಣಿ ಯಾರು? – ಈ ಎರಡು ಪ್ರಶ್ನೆಗಳಿಗೂ ಉತ್ತರ ಒಂದೇ. ಅದೆಂದರೆ, ನರೇಂದ್ರ ಮೋದಿ. ಮೋದಿ ನಿಂದನೆಗೊಳಗಾದಷ್ಟು ಇನ್ನಾರೂ ಆಗಿಲ್ಲ. ಅದೇ ರೀತಿ ಮೋದಿಗೆ ದೊರಕಿದಷ್ಟು ಪ್ರಚಾರ ಬೇರೆ ಯಾವ ರಾಜಕಾರಣಿಗೂ ದೊರಕಿಲ್ಲ. ಮೋದಿಯ ರ‍್ಯಾಲಿ, ಸಭೆಗಳಿಗೆ ಕಿಕ್ಕಿರಿದು ಸೇರಿದಷ್ಟು […]

By Du Gu Lakshman ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು ಒಟ್ಟಾರೆ ಶೇ. ೬೭.೨೮ರಷ್ಟು ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಸಲ ಒಟ್ಟಾರೆ ಮತದಾನ ಪ್ರಮಾಣದಲ್ಲಿ ಶೇ.೮.೪೮ರಷ್ಟು ಹೆಚ್ಚಳವಾಗಿದೆ ಎಂಬುದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರ ಅಭಿಮತ. ಬುದ್ಧಿವಂತರ ನಾಡೆಂದು ಹೆಸರಾಗಿರುವ ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ.೭೭.೧೮ರಷ್ಟು ಮತದಾನವಾಗಿದ್ದರೆ  ಅತ್ಯಂತ ಪ್ರಜ್ಞಾವಂತ ಜನರಿರುವ […]

By Du Gu Lakshman ಲೋಕಸಭೆಗೆ ಮೂರನೇ ಹಂತದ ಚುನಾವಣೆ ಮುಗಿದಿದೆ. ಈ ಮೂರು ಹಂತಗಳಲ್ಲೂ ದಾಖಲೆಯ ಮತದಾನ ಆಗಿರುವುದು ಏನನ್ನು ಸೂಚಿಸುತ್ತದೆ? ಮತದಾರರ ಜಾಗೃತಿ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದಲ್ಲವೆ? ಎಲ್ಲೆಡೆ ಇದುವರೆಗೆ ಶೇ. ೬೫ಕ್ಕಿಂತ ಹೆಚ್ಚು ಪ್ರಮಾಣದ ಮತದಾನ ನಡೆದಿರುವುದು ಮತದಾರರ ಜಾಗೃತಿಗೆ  ಸಾಕ್ಷಿಯಾಗಿದೆ. ಇದೊಂದು ಆರೋಗ್ಯಕರ ಬೆಳವಣಿಗೆ.  ದೆಹಲಿಯಂತಹ ಸಾಂಪ್ರದಾಯಿಕವಾಗಿ ಕಡಿಮೆ ಮತದಾನ ಆಗುವಂತಹ ರಾಜ್ಯದಲ್ಲೂ ಈ ಬಾರಿ ಶೇ. ೧೨ರಷ್ಟು  ಮತದಾನ  ಪ್ರಮಾಣ ಹೆಚ್ಚಳವಾಗಿದೆ. ಉಳಿದ […]

By Du Gu Lakshman ಲೋಕಸಭೆಗೆ ಚುನಾವಣೆ ಎಂಬ ಮಹಾ ಕುರುಕ್ಷೇತ್ರ ಕಾಳಗ ದೇಶದಾದ್ಯಂತ ಕಾವು ಪಡೆದಿರುವ ಸನ್ನಿವೇಶದಲ್ಲಿ ಒಂದು ಪ್ರಮುಖ ಘಟನೆ ಅಷ್ಟಾಗಿ ಯಾರ ಗಮನವನ್ನೂ ಸೆಳೆಯಲಿಲ್ಲ. ಅದು ರಾಜಕೀಯಕ್ಕೆ ಸಂಬಂಧಪಟ್ಟಿದ್ದಲ್ಲ. ಆದರೆ ರಾಜಕೀಯ, ಭ್ರಷ್ಟಾಚಾರ ಬೆರೆತ ವಿದ್ಯಮಾನವದು. ಸುಪ್ರೀಂಕೋರ್ಟ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮೇಜರ್ ಸರ್ಜರಿ ಮಾಡಿದ ಪ್ರಸಂಗ ಅದು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮೋಸದಾಟ, ಮ್ಯಾಚ್‌ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮುಂತಾದ ಹತ್ತುಹಲವು ಹಗರಣ, ವಿವಾದಗಳಲ್ಲಿ ಮುಳುಗಿದ್ದ […]

By Du Gu Lakshman ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಂದರೆ ಆರೆಸ್ಸೆಸ್ ಎಂದು ಜನಪ್ರಿಯತೆ ಪಡೆದಿರುವ ಹಿಂದು ಸಂಘಟನೆಯ ಹೆಸರು ಪ್ರಸ್ತಾಪವಾದಾಗಲೆಲ್ಲ ಅಲ್ಲಿ ವಿಜೃಂಭಿಸುವುದು ಕೋಮುವಾದ, ಮುಸ್ಲಿಂ ವಿರೋಧ, ಹಿಂಸೆ ಇತ್ಯಾದಿ ಋಣಾತ್ಮಕ ಸಂಗತಿಗಳು ಮಾತ್ರ.  ಆರೆಸ್ಸೆಸ್‌ನ ಮೂಲ ಉzಶವಾಗಲೀ, ಅದರ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರ ಚಿಂತನೆಗಳಾಗಲೀ ಚರ್ಚೆಗೆ ಒಳಗಾಗುವುದೇ ಇಲ್ಲ.  ಇದೊಂದು ವಿಪರ್ಯಾಸವೇ ಸರಿ.  ಆರೆಸ್ಸೆಸ್‌ಅನ್ನು ಡಾ. ಹೆಡಗೇವಾರ್ ಸ್ಥಾಪಿಸಿದ್ದು ಈಗ ವಿರೋಧಿಗಳು ಟೀಕಿಸುತ್ತಿರುವ ಯಾವುದೇ […]

ಹಿಂದುತ್ವ , ಹಿಂದು ದೇವ-ದೇವತೆಗಳು, ಹಿಂದು ಧರ್ಮಗಳ ಮೇಲಾದಷ್ಟು ಅವ್ಯಾಹತ ಆಕ್ರಮಣ, ಟೀಕೆ, ನಿಂದನೆ, ಭರ್ತ್ಸನೆಗಳು ಜಗತ್ತಿನ ಇನ್ನಾವುದೇ ಧರ್ಮದ ಮೇಲೂ ಖಂಡಿತ ಆಗಿರಲಿಕ್ಕಿಲ್ಲ. ಈಗಲೂ ಈ ಅಪಸವ್ಯ ಮುಂದುವರಿಯುತ್ತಲೇ ಇದೆ. ಸ್ವಯಂಘೋಷಿತ ಬುದ್ಧಿಜೀವಿಗಳೆನಿಸಿಕೊಂಡ ಕೆಲವು ಎಡಪಂಥೀಯ ವಿಚಾರವಾದಿಗಳು ಆಗಾಗ, ಬೇರೆ ಏನೂ ವಿಷಯ ಹೊಳೆಯದಿದ್ದಾಗ ಹಿಂದು ಧರ್ಮ ಟೀಕಿಸುವ ಕಾಯಕಕ್ಕೆ ಕೈ ಹಚ್ಚುತ್ತಾರೆ. ತನ್ಮೂಲಕ ಸಾಕಷ್ಟು ಪ್ರಸಿದ್ಧಿ, ಪ್ರಚಾರವನ್ನು ಗಿಟ್ಟಿಸುತ್ತಾರೆ. ಅವರ ಜಾಯಮಾನವೇ ಅಂತಹುದು. ಇಲ್ಲಷ್ಟೇ ಅಲ್ಲ, ವಿದೇಶಗಳ […]

by Du Gu Lakshman  ಚುನಾವಣೆಗಳು ಸಮೀಪಿಸಿದಾಗಲೆಲ್ಲ ಶತ್ರುಗಳು ಮಿತ್ರರಾಗುತ್ತಾರೆ. ಮಿತ್ರರು ಶತ್ರುಗಳಾಗುತ್ತಾರೆ. ಇದುವರೆಗೆ ಕೋಮುವಾದಿಗಳು ಎನಿಸಿಕೊಂಡವರು ಒಮ್ಮೆಲೆ ಸೆಕ್ಯುಲರ್ ಆಗುತ್ತಾರೆ. ಸೆಕ್ಯುಲರ್ ಎನಿಸಿಕೊಂಡವರು ಕೋಮುವಾದಿಗಳಾಗುವ  ವಿದ್ಯಮಾನವೂ ನಡೆಯುತ್ತದೆ. ನಾವೆಲ್ಲ ಒಂದು, ಒಂದಾಗಿ ರಾಷ್ಟ್ರಹಿತ ಸಾಧಿಸಬೇಕು ಎಂದು ಅದುವರೆಗೆ ವೇದಿಕೆಗಳ ಮೇಲಿನಿಂದ ಪುಂಖಾನುಪುಂಖವಾಗಿ ಕರೆಕೊಟ್ಟ ನಾಯಕರೇ ಚುನಾವಣೆ ಎದುರಾದ ಕೂಡಲೇ ಜಾತಿ, ಮತ, ಪಂಥಗಳೆಂದು ಹರಿದು ಹಂಚಿಹೋಗುವ ವಿದ್ಯಮಾನವಂತೂ ಇನ್ನಷ್ಟು ಸೋಜಿಗ. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರವಿದ್ದಾಗ ಅದರ ಪಾಲುದಾರ ಪಕ್ಷವಾಗಿದ್ದ […]