By Du Gu Lakshman ರಾಜಕೀಯ ಕ್ಷೇತ್ರದ ಅಡಿಗಲ್ಲುಗಳಾಗಿ ಪ್ರಜಾಪ್ರಭುತ್ವದ ಸೌಧಕ್ಕೆ ಭದ್ರ ತಳಪಾಯವಾಗಬೇಕಾದವರು ಅದನ್ನೊಲ್ಲದೆ, ತಾವು ಗೋಪುರಗಳಾಗಿಯೇ ಇರುತ್ತೇವೆ ಎಂದರೆ ಅದೆಂತಹ ವೈರುಧ್ಯ? ಅಡಿಗಲ್ಲುಗಳಾಗಬೇಕಾದವರೆಲ್ಲ ಗೋಪುರಗಳಾಗಲು ಹೊರಟರೆ ಪ್ರಜಾಪ್ರಭುತ್ವದ ಕಟ್ಟಡ ಕುಸಿಯದೆ ಇದ್ದೀತೆ? ಇನ್ನು ಎರಡೂವರೆ ತಿಂಗಳು ದೇಶಕ್ಕೆ ಚುನಾವಣಾ ಜ್ವರ. ಮುಂದಿನ ಮೇ ೧೬ರಂದು ಹೊಸ ಸರ್ಕಾರದ ನೊಗಕ್ಕೆ ಯಾರು ಹೆಗಲು ಕೊಡುತ್ತಾರೆ ಎಂಬುದು ಗೊತ್ತಾಗುವವರೆಗೆ ಈ ಜ್ವರಕ್ಕೆ ಪರಿಹಾರವಿಲ್ಲ. ಅದಾದ ಬಳಿಕ ಹೊಸ ಸರ್ಕಾರ ರಚನೆಯ […]

By Du Gu Lakshman ದೆಹಲಿಯಿಂದ ಪ್ರಕಟವಾಗುವ ‘ಕಾರವಾನ್’ ಪತ್ರಿಕೆಯ ಫೆಬ್ರವರಿ ೧ರ ಸಂಚಿಕೆಯಲ್ಲಿ ಪ್ರಕಟವಾದ ಒಂದು ಸಂದರ್ಶನ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಆ ಸಂದರ್ಶನ, ಈಗ ಹರ್ಯಾಣದ ಅಂಬಾಲ ಜೈಲಿನಲ್ಲಿರುವ ಸ್ವಾಮಿ ಅಸೀಮಾನಂದ ಅವರ ಕುರಿತಾದದ್ದು. ಸಂದರ್ಶಿಸಿದವರು ಲೀನಾ ಗೀತಾ ರಘುನಾಥ್ ಎಂಬ ಪತ್ರಕರ್ತೆ-ಕಂ-ನ್ಯಾಯವಾದಿ. ಈ ಸಂದರ್ಶನವನ್ನು ೨ ವರ್ಷಗಳ ಹಿಂದೆಯೇ ಮಾಡಲಾಗಿದ್ದು ಈಗ ಅದನ್ನು ಪ್ರಕಟಿಸಲಾಗುತ್ತಿದೆ ಎಂದು ಪತ್ರಿಕೆ ಹೇಳಿಕೊಂಡಿದೆ. ಈಗ ಅಂಬಾಲಾ ಜೈಲಿನಲ್ಲಿರುವ ಸ್ವಾಮಿ […]

by Du Gu Lakshman ಹಣ ಗಳಿಸುವುದು ಅಥವಾ ಶ್ರೀಮಂತರಾಗುವುದು ಖಂಡಿತ ಅಪರಾಧವಲ್ಲ. ಆದರೆ ಹಣ ಗಳಿಕೆಗೆ ಹಿಡಿದ ಮಾರ್ಗ ಯಾವುದು ಎಂಬುದು ಬಲು ಮುಖ್ಯ. ಪ್ರಾಮಾಣಿಕ ದುಡಿಮೆ ಮೂಲಕ ಹಣ ಗಳಿಸಿದರೆ ಅದನ್ನು ಯಾರೂ ತಪ್ಪು ಎನ್ನಲಾರರು. ಅಡ್ಡ ಹಾದಿಯ ಮೂಲಕ ಹಣ ಗಳಿಸಿದರೆ ಅದು ಖಂಡಿತ ಅಪರಾಧವೇ. ಅದರಲ್ಲೂ ಸೇವೆಯ ಸೋಗಿನಲ್ಲಿ ಸತ್ತವರ ಹೆಸರಲ್ಲಿ ಹಣ ಸಂಗ್ರಹಿಸಿ ಅದನ್ನು ಸ್ವಂತದ ಖಾತೆಗೆ ವರ್ಗಾಯಿಸಿಕೊಂಡು ಮಜಾಮಾಡಿದರೆ ಅದಕ್ಕಿಂತ ದೊಡ್ಡ […]

By Du Gu Lakshman ಹೊಸದಿಲ್ಲಿ ಹಾಗೂ ದೇಶದ ಇತರ ಜನತೆಯ ಪಾಲಿಗೆ ಆಮ್ ಆದ್ಮಿ ಪಕ್ಷದ ವಿದ್ಯಮಾನಗಳೆಲ್ಲವೂ ಅನಿರೀಕ್ಷಿತವೇ ಆಗಿತ್ತು. ಅಣ್ಣಾ ಹಜಾರೆಯವರ ಜನಲೋಕಪಾಲ್ ಕುರಿತ ಸಾಮಾಜಿಕ ಆಂದೋಲನದ ಬೆಂಕಿಯಲ್ಲಿ ಅರಳಿದ ಆಮ್‌ಆದ್ಮಿ ಪಕ್ಷ ಅಷ್ಟೇ ಬೇಗ ದಿಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಚುನಾವಣೆಯಲ್ಲಿ ಭರ್ಜರಿ ೨೮ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಹುಮತ ಇಲ್ಲದಿದ್ದರೂ ಕಾಂಗ್ರೆಸ್‌ನ ೮ ಸದಸ್ಯರ ಬಾಹ್ಯ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದು, ಸರ್ಕಾರ ರಚಿಸಿ ೪೮ […]

by Du Gu Lakshman ಕಳೆದ ವಾರದ ಎರಡು ಮಹತ್ವದ ವಿದ್ಯಮಾನಗಳು ದೇಶದ ಭವಿಷ್ಯದ ಕುರಿತು ನಿರಾಶೆಯ ಪ್ರಪಾತಕ್ಕೆ ತಲುಪಿದವರಿಗೂ ವಿಶ್ವಾಸ, ಭರವಸೆ ಮೂಡಿಸಿವೆ.   ಒಂದು-ಜಗತ್ತಿನ ನಂಬರ್ ಒನ್ ಐಟಿ ಕಂಪೆನಿ ಮೈಕ್ರೋಸಾಫ್ಟ್ ಕಾರ್ಪೊರೇಷನ್‌ಗೆ ಭಾರತೀಯ ಮೂಲದ ಸತ್ಯ ನಾದೆಲ್ಲಾ ಸಿಇಓ ಆಗಿ ನೇಮಕಗೊಂಡಿದ್ದು.  ಎರಡು-ಕಾನ್ಪುರ ನಗರದ ಪಟೇಲ್ ನಗರ ನಿವಾಸಿಗಳು ತಮ್ಮ ಬಡಾವಣೆ ನೈರ್ಮಲ್ಯದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ ಕಾರ್ಪೊರೇಟರ್‌ನನ್ನು ಅನಾಮತ್ತಾಗಿ ತಿಪ್ಪೆಗೆಸೆದು ಬುದ್ಧಿ ಕಲಿಸಿದ್ದು.  ಭಾರತಕ್ಕೆ […]

by Du Gu Lakshman ಅವರಿಗೆ ಕೈಗಳಿವೆ. ಆದರೂ ಎತ್ತಲಾಗುತ್ತಿಲ್ಲ. ನಮ್ಮ – ನಿಮ್ಮ ಹಾಗೆ ಕಾಲುಗಳಿವೆ. ಆದರೆ ನಡೆಯಲಾಗುತ್ತಿಲ್ಲ. ತಾರುಣ್ಯದ ವಯಸ್ಸಿದೆ. ಆದರೂ ಚುರುಕಾಗಿ ಎzಳಲಾಗುತ್ತಿಲ್ಲ. ಸಂತಾನೋತ್ಪತ್ತಿಯಂತೂ ಸಾಧ್ಯವೇ ಇಲ್ಲ. ಅಸ್ತಮಾ, ಕ್ಯಾನ್ಸರ್, ಮಿದುಳಿಗೆ ಆಘಾತ ಮುಂತಾದ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಜೀವಂತವಾಗಿದ್ದರೂ ಜೀವಚ್ಛವದಂತೆ ಬದುಕಬೇಕಾದ ದಯನೀಯ ಸ್ಥಿತಿ. ಆದರೆ ಈ ಸ್ಥಿತಿ ಅವರಿಗೆ ಹುಟ್ಟಿನಿಂದ ಬಂದಿದ್ದಲ್ಲ. ಹುಟ್ಟುವಾಗ ಅವರೆಲ್ಲ ಆರೋಗ್ಯವಂತರಾಗಿಯೇ ಇದ್ದರು. ನಮ್ಮ-ನಿಮ್ಮಂತೆ ಚೈತನ್ಯಪೂರ್ಣ ಶರೀರ ಅವರದಾಗಿತ್ತು. ಆದರೆ […]

by Du Gu Lakshman ಇಡೀ ಜಗತ್ತಿನಲ್ಲಿ, ಅದು ಒಳ್ಳೆಯದಿರಲಿ ಅಥವಾ ಕೆಟ್ಟz ಆಗಿರಲಿ, ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ದೇಶವೆಂದರೆ ಅಮೆರಿಕ. ಅಮೆರಿಕದ ಸುದ್ದಿಗೆ ಪ್ರಚಾರ ಸಿಕ್ಕಿದಷ್ಟು ಇನ್ನಾವ ದೇಶದ ಸುದ್ದಿಗೂ ಮಾಧ್ಯಮಗಳಲ್ಲಿ ಪ್ರಚಾರ ಸಿಗುವುದಿಲ್ಲ. ಅಮೆರಿಕ ಜಗತ್ತಿನ ‘ದೊಡ್ಡಣ್ಣ’ ದೇಶ ಎಂಬ ಹೆಗ್ಗಳಿಕೆ ಪಡೆದಿರುವುದು ಇದಕ್ಕೊಂದು ಕಾರಣವಿರಬಹುದು. ಅದು ಅಮೆರಿಕ ದೇವಯಾನಿ ಖೋಬ್ರಗಡೆ ಬಂಧಿಸಿದ ಸುದ್ದಿ ಇರಲಿ, ಇರಾಕ್‌ಮೇಲೆ ಅಮೆರಿಕ ನಡೆಸಿದ ದಾಳಿಯಿರಲಿ ಅಥವಾ ಪಾಕಿಸ್ಥಾನದ ಅಬೊಟಾಬಾದ್‌ಗೆ […]

By Du Gu Lakshman ಮೊನ್ನೆ ಜನವರಿ ೫ರಂದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಅಳವಡಿಸಿದ್ದ ಜಿಎಸ್‌ಎಲ್‌ವಿ – ಡಿ೫ ಶ್ರೀಹರಿ ಕೋಟಾದಿಂದ ಗಗನಕ್ಕೆ ಜಿಗಿದಾಗ ಸ್ವಾಭಿಮಾನಿ ದೇಶವಾಸಿಗಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಕ್ರಯೋಜೆನಿಕ್ ತಂತ್ರಜ್ಞಾನದಲ್ಲೂ ಸ್ವಾವಲಂಬನೆ ಸಾಧಿಸಿzವೆಂಬ ಹೆಮ್ಮೆಯೇ ಇದಕ್ಕೆ ಕಾರಣ. ಇದೇ ಸಂದರ್ಭದಲ್ಲಿ, ಅತ್ತ ಗಗನಕ್ಕೆ ಜಿಎಸ್‌ಎಲ್‌ವಿ – ಡಿ೫ ರಾಕೆಟ್ ಜಿಗಿದಾಗ ಇತ್ತ ತಿರುವನಂತಪುರದ ಮಲೆಯಾಳಿ ಟಿವಿ ಚಾನೆಲ್ ಒಂದರ ಸ್ಟುಡಿಯೊದಲ್ಲಿ ಕುಳಿತಿದ್ದ ವೃದ್ಧರೊಬ್ಬರ […]

by Du Gu Lakshman 2008ರ ಮಾಲೆಗಾಂವ್ ಬಾಂಬ್‌ಸ್ಫೋಟ ಆರೋಪದ ಹಿನ್ನೆಲೆಯಲ್ಲಿ ಬಂಧಿತರಾಗಿ ಈಗಲೂ ಜೈಲಿನಲ್ಲಿರುವ ಸಾಧ್ವಿ ಪ್ರಜ್ಞಾಸಿಂಗ್ ಠಾಕುರ್ ಎಂಬ ಮಹಿಳೆಯ ಹೃದಯ ಕರಗುವ ಕಥೆ ನಿಮಗಿನ್ನೂ ನೆನಪಿರಬಹುದಲ್ಲವೆ? ಮಾಲೆಗಾಂವ್ ಸ್ಫೋಟ ಪ್ರಕರಣ, ಅನಂತರ ಸುನೀಲ್ ಜೋಶಿ ಎಂಬ ಆರೆಸ್ಸೆಸ್ ಕಾರ್ಯಕರ್ತನ ಹತ್ಯಾಪ್ರಕರಣದ ಹಿನ್ನೆಲೆಯಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಪೊಲೀಸರು ಬಂಧಿಸಿದ್ದರು. ಇವೆರಡೂ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವೇ ವಹಿಸಿಕೊಂಡಿತ್ತು. ಈ ಪ್ರಕರಣಗಳಲ್ಲಿ ಆಕೆಯನ್ನು ಹೇಗಾದರೂ […]

by Du Gu Lakshman ಮಾಧ್ಯಮಗಳಲ್ಲಿ ಈಗ ಕೇಜ್ರಿವಾಲ್ ಅವರz ಪ್ರಚಾರ ಭರಾಟೆ. ದೆಹಲಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇಜ್ರಿವಾಲ್ ಭಾರತಕ್ಕೊಂದು ಆಶಾಕಿರಣ, ಭಾರತವನ್ನು ಉದ್ಧರಿಸಲೆಂದೇ ಧರೆಗಿಳಿದು ಬಂದ ದೇವತೆ ಎಂಬಂತೆ ಕೇಜ್ರಿವಾಲರನ್ನು ಚಿತ್ರಿಸಲಾಗುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕೇಜ್ರಿವಾಲ್ ಮ್ಯಾಜಿಕ್ ನಡೆಯಲಿದೆ ಎಂದು ಮಾಧ್ಯಮಗಳು ಭವಿಷ್ಯ ನುಡಿದಿವೆ! ಆದರೆ ಈ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗಲಿದೆ ಅಥವಾ ಠುಸ್ ಆಗಲಿದೆ ಎಂಬುದು ಚುನಾವಣೆ ಸನ್ನಿಹಿತವಾದಾಗಲಷ್ಟೇ ಗೊತ್ತಾಗಬಹುದು. ನಿಜ, ಸತತ ೧೦ […]