ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಸ್ತುತ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ, ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ ಎಂದು ಟ್ವಿಟ್ ಮಾಡಿದ್ದಾರೆ. ವಿಶ್ವ […]
News Digest
ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅವರು ಈ ಪ್ರಪಂಚವನ್ನೇ ಬದಲಿಸುತ್ತಾರೆ: ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜೀವನ ಸಂದೇಶ ಲೇಖಕರು: ಸಿಂಚನ.ಎಂ.ಕೆಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ಎಬಿವಿಪಿ ಸ್ವಯಂಸೇವಕರು ‘ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ’ ಎಂಬ ದೈವ ಆದರ್ಶವನ್ನು ಅನುಸರಿಸುತ್ತಿದ್ದ ಪುಣ್ಯಭೂಮಿಯಲ್ಲಿ ಸ್ತ್ರೀಯರ ಶಿಕ್ಷಣಕ್ಕಾಗಿ, ಏಳಿಗೆಗಾಗಿ ಸಂಘರ್ಷ ಮಾಡುವ ದುಃಸ್ಥಿತಿ ನಿರ್ಮಾಣವಾಗಿದ್ದೇಕೆ? ದೇವಕೀನಂದನ, ಗಂಗಾಪುತ್ರ, ಅಂಜನೀಪುತ್ರ, ಕುಂತೀಪುತ್ರ ಯಾವ ಭವ್ಯಭೂಮಿಯಲ್ಲಿ ಹೀಗೆ ವೀರಯೋಧರನ್ನು ಅವರ ತಾಯಿಯ ಹೆಸರಿನಿಂದ ಸಂಭೋದಿಸಲಾಗುತ್ತಿತ್ತೊ […]
ಲೇಖಕರು: ಡಾ.ರೋಹಿಣಾಕ್ಷ ಶಿರ್ಲಾಲು ಭೋಜನ ಮಾಡುವ ರೀತಿಯಿಂದ ಅಥವಾ ಸ್ಥಳದಿಂದ ಯಾರಾದರು ತಾವು ಜಗತ್ತಿನಲ್ಲಿ ಶ್ರೇಷ್ಟರು ಎಂದು ಭಾವಿಸುವುದಾದರೆ ಅಂಥವರ ಅಜ್ಞಾನಕ್ಕೆ ಒಮ್ಮೆ ನಕ್ಕು ಸುಮ್ಮನಾಗಿ ಬಿಡಬೇಕಷ್ಟೇ. ಆದರೆ ಅದೇ ಅಜ್ಞಾನವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿದಾಗ ಖಂಡಿತವಾಗಿಯೂ ಪ್ರಶ್ನಿಸಬೇಕಾಗುತ್ತದೆ. ಯಾಕೆಂದರೆ ಈ ಅಜ್ಞಾನ ಸಮಾಜದ ಆರೋಗ್ಯಕ್ಕೂ ತೊಂದರೆಯನ್ನುಂಟುಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ತನಗೆ ಹಿತವಾಗುವ ರೀತಿಯಲ್ಲಿ, ತನ್ನ ಮನೆಯೊಳಗೆ ಬದುಕುವ ಸ್ವಾತಂತ್ರ್ಯ ಇದ್ದೇ ಇದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ನಾವು ತೋರುವ […]
ಪುಸ್ತಕ ವಿಮರ್ಶೆ ಪರಿಚಯ: ಸತ್ಯನಾರಾಯಣ ಶಾನುಭಾಗ್ ಪೋರ್ಚುಗೀಸರಿಂದ ಆರಂಭಗೊಂಡ ಯೂರೋಪಿಯನ್ ವಸಾಹತು ಕಾಲದಲ್ಲಿ ಆಮದಾದ ಕ್ರೈಸ್ತಮತ ಪ್ರಚಾರ ವಿಷನರಿ’ರಿಗಳ ಚಟುವಟಿಕೆ ದೇಶದೆಲ್ಲೆಡೆ ತನ್ನ ಜಾಲವನ್ನು ವ್ಯವಸ್ಥಿತವಾಗಿ ಹರಡಿದೆ. ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವುದು ಅವರ ಒಂದಂಶದ ಕಾರ್ಯಕ್ರಮವೆಂದು ಕಂಡುಬಂದರೂ ಅದರ ಮೂಲ ಉದ್ದೇಶ ಮತ್ತು ಮತಾಂತರದ ಕುಟಿಲ ಕಾರ್ಯತಂತ್ರಕ್ಕೆ ಇರುವ ಮುಖಗಳು ಅನೇಕ. ಭಾರತದಲ್ಲಿ ನಾನೂರು ವರ್ಷಗಳಿಗೂ ಮಿಕ್ಕಿ ನಡೆದಿರುವ ಕ್ರೈಸ್ತ ವಿಷನರಿ ಚಟುವಟಿಕೆಗಳ ಧೂರ್ತ ಕೆಲಸಗಳು ಮತ್ತು ಅದಕ್ಕೆ […]
Parenting lessons a plenty from Bhgavad Gita – Smitha Rao I was a mother of two little children when I turned to Gita. It was a difficult phase in my life where my conscience was put to test and demanded introspection of my actions. I had to dig deep to […]
ಅಮರ್ತ್ಯಸೇನ್ ದೇಶದ ಪ್ರತಿಷ್ಠಿತ ಯೋಜನೆಗಳಿಗೆ ಹಳ್ಳ ಹಿಡಿಸಿರುವುದಕ್ಕೇ ಹೆಸರುವಾಸಿ. ಯಾವುದೇ ಅರ್ಹತೆ ಇಲ್ಲದಿದ್ದರೂ ಪ್ರತಿಷ್ಠಿತ ಹುದ್ದೆಗಳು ಅಮರ್ತ್ಯಸೇನ್ ಗೆ ದೊರಕುತ್ತಿದ್ದವು. ಅಮರ್ತ್ಯಸೇನ್ ಅವರಿದ್ದ ಏಕೈಕ ಅರ್ಹತೆ ಅವರು ಗಾಂಧಿ ಕುಟುಂಬ ಅದರಲ್ಲಿಯೂ ಮುಖ್ಯವಾಗಿ ಸೋನಿಯಾ ಗಾಂಧಿಯವರಿಗೆ ನಿಕಟವರ್ತಿಯಾಗಿದ್ದರು ಎಂಬುದು. ಇದಕ್ಕೆ ತಾಜಾ ಉದಾಹರಣೆ ನಾಲಂದಾ ವಿಶ್ವವಿದ್ಯಾಲಯದ ಪುನರುಜ್ಜೀವನದಂತಹ ಉದಾತ್ತ ಯೋಜನೆ ಅಮರ್ತ್ಯಸೇನರಂತಹ ಅಡಕಸಬಿಗಳ ಕೈಯಲ್ಲಿ ಸಿಲುಕಿ ನಲುಗುತ್ತಿರುವುದು. ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜಿ. ಅಬ್ದುಲ್ ಕಲಾಂ ಅವರ ಕನಸಿನ […]
ಪುಸ್ತಕ ಪರಿಚಯ : ಸಚಿನ್ ಪಾರ್ಶ್ವನಾಥ್ ಈ ಪುಸ್ತಕದ ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ ಮಾಲೆ. ಬದುಕಿನಲ್ಲಿ ಎಷ್ಟೇ ವೈರುಧ್ಯವಿರಲಿ, ವ್ಯಸ್ತತೆಯಿರಲಿ ಎಲ್ಲವನ್ನೂ ಬದಿಗೆ ಸರಿಸಿ ಒಮ್ಮೆ ಅವರ ಯಾವುದಾದರೊಂದು ಪುಸ್ತಕ ತೆರೆಯಿರಿ. ತುಟಿಯ ಮೇಲೆ ಒಂದು ಪುಟ್ಟ ನಗು, ಕಣ್ಣುಗಳಲ್ಲಿ ನಿಲ್ಲದೇ ಓಡುವ ಕಾತುರ […]
ದೇಶದ ಕೃಷಿ ಮಾರುಕಟ್ಟೆಯಲ್ಲಿ ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಹಳೆಯ ಹಾಗೂ ಅಪ್ರಸ್ತುತ ಮತ್ತು ಈಗಿನ ಸಮೃದ್ಧ ಉತ್ಪಾದನೆಯ ಕಾಲಕ್ಕೆ ಸೂಕ್ತವಲ್ಲದ ಕಾಯಿದೆಗಳನ್ನು ಬದಲಿಸಿ, ಕೃಷಿ ಮಾರುಕಟ್ಟೆಯ ಚಾರಿತ್ರಿಕ ಸುಧಾರೆಣೆಗೆ ಕೇಂದ್ರ ಸರಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಗಳು ಸಂಚಲನ ಸೃಷ್ಟಿಸಿವೆ. ಇವುಗಳ ಪರ-ವಿರೋಧ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಹಾಗಾದರೆ ಕಾಯಿದೆಯಲ್ಲಿ ಏನಿದೆ? ಇದರ ಪ್ರಯೋಜನವೇನು? ಇಲ್ಲಿದೆ ವಿವರ.===================ಲೇಖಕರು: ಕೇಶವ ಪ್ರಸಾದ್ ಬಿ., ಪತ್ರಕರ್ತರು ಹಾಲಿಗೆ ಕನಿಷ್ಠ ಬೆಂಬಲ ಬೆಲೆ ಇಲ್ಲ, […]
ಪುಸ್ತಕ ಪರಿಚಯ: ಪ್ರವೀಣ್ ಪಟವರ್ಧನ್ “ಇದ್ದರಿಂಥವರೆಮ್ಮ ನಡುವಲಿ” ಎಂಬುದು ಹಿರಿಯ ಸಂಸ್ಕೃತ ವಿದ್ವಾಂಸರು ಹಾಗೂ ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ನಾನಾ ಪುಸ್ತಕಗಳ ಕರ್ತೃ ಡಾ. ಎಚ್ ಆರ್ ವಿಶ್ವಾಸ ಅವರ ನೂತನ ಕೃತಿ. ತಮ್ಮನ್ನು ಹಲವು ರೀತಿಯಲ್ಲಿ ಪ್ರೇರೇಪಿಸಿರುವ ಮಹನೀಯರ ಬಗೆಗಿನ ಬರಹಗಳುಳ್ಳ ಕೃತಿ “ಇದ್ದರಿಂಥವರೆಮ್ಮ ನಡುವಲಿ” ಆಗಿದೆ. ಪ್ರಸ್ತುತ, ಡಾ. ವಿಶ್ವಾಸರು ಸಂಸ್ಕೃತ ಭಾರತೀಯ ಅಖಿಲ ಭಾರತೀಯ ಶಿಕ್ಷಣ ಪ್ರಮುಖ್ ಜವಾಬ್ದಾರಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಸಂಸ್ಕೃತ ಭಾರತಿ, ಹಿಂದೂ […]
ಜಪಾನಿ ಭಾಷೆಯಲ್ಲಿ ಸುಂದೋಕು(Tsundoku) ಎಂಬ ಪದ ಬಳಕೆ ಇದೆಯಂತೆ. ಪುಸ್ತಕಗಳನ್ನು ರಾಶಿ ರಾಶಿ ಕೊಂಡು ಪೇರಿಸಿಟ್ಟುಕೊಂಡು ಯಾವುದನ್ನೂ ಓದದ ಅಭ್ಯಾಸಕ್ಕೆ ಸುಂದೋಕು ಎಂಬ ಹೆಸರು. ಹಾಗೆ ಮಾರುಕಟ್ಟೆಗೆ ಬರುವ ಎಲ್ಲಾ ಪುಸ್ತಕಗಳು ಒಂದೆಡೆಯಾದರೆ ಅವುಗಳಲ್ಲಿ ಓದಲೇಬೇಕಾದ ಪುಸ್ತಕ ಯಾವುದು? ಓದಿ ತಿಳಿದುಕೊಳ್ಳಲು ಯಾವುದರಿಂದ ಆರಂಭಿಸಬೇಕು? ಎಂಥಹ ಪುಸ್ತಕ ನನಗಿಷ್ಟವಾಗಬಹುದು ಎಂದು ತಿಳಿಸಲು ಮಾರ್ಗೋಪಾಯಗಳಿವೆಯೇ?…. ಹೀಗೆ ಪ್ರಶ್ನೆಯ ಸುರಿಮಳೆಯೇ ಆದೀತು. ಸುಕೃತಿ ಯವರ ಪುಸ್ತಕ ಪರಿಚಯದ ಕೆಲಸದ ಬಗ್ಗೆ ತಿಳಿಯಿರಿ. ಕನ್ನಡ […]