ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ಶಾಲಾ ವಿದ್ಯಾರ್ಥಿಗಳಿಗಾಗಿ ‘ನನ್ನ ಹೆಮ್ಮೆಯ ಕರ್ನಾಟಕ’ ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಿತ್ತು. ಈ ಸ್ಪರ್ಧೆಗೆ 5 ದೇಶಗಳು, ಭಾರತದ 6 ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಒಟ್ಟು 2210 ಶಾಲಾ ವಿದ್ಯಾರ್ಥಿಗಳು ತಮ್ಮ ಭಾಷಣವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ವಿವಿಧ ಹಂತಗಳ ಮೌಲ್ಯಮಾಪನದ ನಂತರ ಈ ಕೆಳಗಿನ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.ಬಹುಮಾನ ವಿಜೇತರು ಹಾಗೂ ಭಾಗವಹಿಸಿದ ಎಲ್ಲ […]

ರಾಜ್ಯದಿಂದ ರಾಜ್ಯಕ್ಕೆ ಕೆಲಸದ ಸಲುವಾಗಿ ಜನರು ವಲಸೆ ಹೋಗುವುದು ಸಾಮಾನ್ಯ. ತಮ್ಮ ಹೊಟ್ಟೆ ಪಾಡು, ತಮ್ಮ ಕುಟುಂಬ, ಊರಲ್ಲಿರುವ ತಂದೆ ತಾಯಿಯರನ್ನು ಸಾಕುವುದು ಮತ್ತೆಲ್ಲೋ ಸಾಲ ತೀರಿಸಬೇಕು. ಕಷ್ಟವಾದರೇನಂತೆ ಊರು ಬಿಟ್ಟು ಕೆಲಸ ಹುಡುಕೋಣವೆಂದು, ತಾವಿದ್ದ ಊರಿನಲ್ಲಿ ಕೆಲಸವೂ ಸಿಗದಿದ್ದಾಗ ಧಿಡೀರನೆ ಊರು ಬಿಟ್ಟು ಹೊರಟುಬಿಡುತ್ತಾರೆ. ಹಾಗೆ ಕರ್ನಾಟಕಕ್ಕೂ ವಲಸೆ ಬಂದು ಜೀವನ ಕಟ್ಟಿಕೊಳ್ಳುವವರು ಸಾಕಷ್ಟು ಮಂದಿಯಿದ್ದಾರೆ. ಕೆಲವರು ಹವಾನಿಯಂತ್ರಿತ ಆಫೀಸ್ ಒಳಗೆ ಕುಳಿತು ಕೆಲಸ ಮಾಡಿ ದುಡ್ಡು ಎಣಿಸಿಕೊಳ್ಳುತ್ತಾರೆ; […]

ವಿಶ್ವ ಸಂವಾದ ಕೇಂದ್ರವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಸಮೀಕ್ಷೆ ನಡೆಸುತ್ತಿದೆ. ಆನ್ಲೈನ್ ಮತಗಳ ಮೂಲಕ ನಿಮ್ಮ ಆಯ್ಕೆಗಳನ್ನು ದಾಖಲಿಸಬಹುದಾಗಿತಿದೆ. ಸಾವಿರ ಸಂಖ್ಯೆಯಲ್ಲಿ ಈ ಪ್ರಶ್ನೆಗಳಿಗೆ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ನೆಚ್ಚಿನ ಕನ್ನಡ ಸಿನಿಮಾ, ನೆಚ್ಚಿನ ಸಿನಿಮಾ ಹಾಡು ಎಂಬ ಪ್ರಶ್ನೆಗಳನ್ನು ಮುಂದಿಡದೆ ಯಾವ ಚಿತ್ರ ಕನ್ನಡವನ್ನು ಹೆಚ್ಚು ಪ್ರತಿನಿಧಿಸುತ್ತದೆ, ಯಾವ ಗಾಯಕಿಯ ಹಾಡು ಸರ್ವಕಾಲಕ್ಕೂ ಉಳಿಯುತ್ತದೆ ಎಂಬಂತಹ ಪ್ರಶ್ನೆಗಳು ಈಗಾಗಲೇ ಪ್ರಕಟಿಸಿದ್ದೇವೆ. ಆಯ್ಕೆ ನಿರ್ಧರಿಸುವ ಸಮಯವಾಗಿರುವ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳು ಇಂತಿವೆ. […]

ಒಬ್ಬ ಸ್ವಯಂಸೇವಕ ಇರುವ  ಮನೆ ಆತ ಇರುವ ಇಡೀ  ಬಡಾವಣೆಗೇ ರಕ್ಷಣೆ ನೀಡುತ್ತದೆ ಎಂದು ಧೃಡವಾಗಿ ಹೇಳಬಲ್ಲೆ: ಡಾ.ಸಲ್ಮಾ ಶಿಕ್ಷಣ ತಜ್ಞೆ ಡಾ.ಸಲ್ಮಾ ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಟ್ಟಂಬಿ ಪಟ್ಟಣದ ಆರೆಸ್ಸೆಸ್ ವಿಜಯ ದಶಮಿ ಉತ್ಸವ -2018ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ್ದರು. ಡಾ. ಸಲ್ಮಾ ಭಾಷಣದ ಸಾರಾಂಶ ಇಲ್ಲಿದೆ: ‘ಸಂಘದ ಶಾಖೆಗಳ ಮೂಲಕ ಒಳ್ಳೆಯ ಸಂಸ್ಕಾರ ಸಿಗುತ್ತದೆ, ಆ ಸಂಸ್ಕಾರವು ಸಮಾಜದಲ್ಲಿ ಸ್ವಯಂಸೇವಕರ ನಡವಳಿಕೆಯಲ್ಲಿ ಪ್ರತಿಫಲಿಸುತ್ತದೆ. ಮಹಿಳೆಯರ ಕುರಿತು  […]

VSKSamskritam : @vsksamskritam initiates its operations from Vijayadashami #VSKSamskritam is an initiative of Vishwa Samvada Kendra, Karnataka (@VSKKarnataka) supported by Samskrita Bharati (@sb_bharatiya). A new social media news channel in Samskrita language & Devanagari script @vsksamskritam has initiated its operations on Vijayadashami, the day which marks the victory of good […]

ಭಾನುವಾರ, ಅಕ್ಟೊಬರ್ ೨೫ ೨೦೨೦: ಪರಮಪೂಜನೀಯ ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್ ಅವರ ವಿಜಯದಶಮಿ ಉತ್ಸವ ೨೦೨೦ ರ ಪ್ರಯುಕ್ತದ ಹಿಂದಿ ಭಾಷಣದ ಕನ್ನಡಾನುವಾದದ ಪ್ರಮುಖ ಅಂಶಗಳು 1. ಗೌರವಾನ್ವಿತ ಸರ್ವೋಚ್ಛ ನ್ಯಾಯಾಲಯವು ದೀಪಾವಳಿಯ ಪರ್ವದ ನಂತರ ೯ನೇ ನವೆಂಬರ್ ೨೦೧೯ರಂದು ರಾಮ ಜನ್ಮಭೂಮಿ ವಿವಾದದ ಕುರಿತಾಗಿ ಸ್ಪಷ್ಟವಾದ ಹಾಗೂ ಐತಿಹಾಸಿಕ ತೀರ್ಪುನ್ನು ನೀಡಿತು. ನ್ಯಾಯಾಲಯದ ತೀರ್ಪಿಗಾಗಿ ಭಾರತೀಯರು ಸಂಯಮದಿಂದ ಕಾದು ಆಗಸ್ಟ್ ೫ರಂದು ಅಯೋಧ್ಯೆಯಲ್ಲಿ ಭವ್ಯ ರಾಮ […]

ಸಂಘದ ಸಸಿ ಇದು ಹೆಮ್ಮರವಾಗಿದೆ ಕೇಶವ ನೀನೇ ನೋಡಲು ಬಾ.. ಲೇಖನ: ಚಂದ್ರಶೇಖರ ಆಚಾರ್ಯ(ಅಕ್ಟೊಬರ್ ೨೫ ರಂದು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟಿತ) ಶ್ರೀ ರಾಮ ನಡೆದ ದಾರಿ ರಾಮಾಯಣ. ಸೂರ್ಯನ ಗತಿ ಆದರಿಸಿದ ಚಲನೆ ಉತ್ತರಾಯಣ, ದಕ್ಷಿಣಾಯನ.. ಅದೇ ದೃಷ್ಟಿಯಲ್ಲಿ ಯೋಚಿಸುವುದಾದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ತೊಂಬತ್ತೈದು ವರ್ಷಗಳ ಸುಧೀರ್ಘ ಪಯಣವನ್ನು ಸಂಘಾಯಾನ ಎಂದು ಗುರುತಿಸುವುದಾದರೆ ತಪ್ಪೇನಿಲ್ಲ. ಈ ಸಂಘಾಯಾನ ಒಪ್ಪಿ ಆದರಿಸುವವರಿಗೆ ಹೇಗೆ ಶ್ರದ್ಧೆಯ ವಿಷಯವೋ, […]

ಎಲ್ಲ ಪ್ರಜೆಗಳೂ ರಾಷ್ಟ್ರಭಕ್ತಿಯನ್ನು ಅಂತರ್ಗತ ಹಾಗೂ ಅಭಿವ್ಯಕ್ತಗೊಳಿಸಬೇಕು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಕ್ಟೊಬರ್ 25, ಬೆಂಗಳೂರು: ರಾಷ್ಟ್ರಭಕ್ತಿಯನ್ನು ತಮ್ಮ ಜೀವನದಲ್ಲಿ ಅಂತರ್ಗತಗೊಳಿಸಿಕೊಳ್ಳುವ ಜತೆಗೆ ಅದನ್ನು ಅಭಿವ್ಯಕ್ತಗೊಳಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶೇಷಾದ್ರಿಪುರ ನಗರದ ಸದಾಶಿವನಗರ ವಸತಿಯಿಂದ ಆಯೋಜಿಸಿದ್ದ ವಿಜಯದಶಮಿ ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. […]

ಆ ವಿಜಯದಶಮಿಯಂದು ‘ಸಂಘ’ ಮಾತ್ರವೇ ಪ್ರಾರಂಭವಾಗಲಿಲ್ಲ…ಲೇಖನ : ಪ್ರಕಾಶ್ ಮಲ್ಪೆ, ಮಂಗಳೂರು ವಿಭಾಗದ ಧರ್ಮ ಜಾಗರಣದ ಕಾರ್ಯಕರ್ತರು(ಆಕ್ಟೊಬರ್ 25 ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ) ಕೆಲವು ದಶಕಗಳ ಹಿಂದೆ ಅಂತಾರಾಷ್ಟ್ರೀಯ ಮಟ್ಟದ ವಾರಪತ್ರಿಕೆಯೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಬಾಳಾಸಾಹೇಬ ದೇವರಸರ ಭಾವ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿ ‘ಪ್ರಪಂಚದ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ ಎಂದು ಬಣ್ಣಿಸಿತ್ತು.. ಇದು ಎಪ್ಪತ್ತರ ದಶಕದ ಘಟನೆ. ಸಂಘಟನೆಯೊಂದು ಪ್ರಾರಂಭವಾಗಿ ಕೇವಲ ನಲವತ್ತೈದು […]

ಸೇವೆಯೆಂಬ ಯಜ್ಞದಲ್ಲಿ ಸಂಘವೆಂಬ ಸಮಿಧೆಆರೆಸ್ಸೆಸ್‍ಗೆ 95ರ ಹರೆಯ ಲೇಖನ: ಟಿ. ಎಸ್. ವೆಂಕಟೇಶ್ಕ್ಷೇತ್ರ ಸಂಪರ್ಕ ಪ್ರಮುಖ್, ದಕ್ಷಿಣ ಮಧ್ಯ ಕ್ಷೇತ್ರ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆಕ್ಟೊಬರ್ 25 ರಂದು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಿತ) ವಿಜಯದಶಮಿ ದೇಶದೆಲ್ಲೆಡೆ ಒಂದು ಸಂಭ್ರಮದ ಹಬ್ಬ. ಆರೆಸ್ಸೆಸ್ಸಿನ ಸ್ವಯಂಸೇವಕರಿಗಂತೂ ಅದು ಇನ್ನೂ ಹೆಚ್ಚಿನ ಸಂಭ್ರಮದ ದಿನ. ಏಕೆಂದರೆ, ಆರೆಸ್ಸೆಸ್ ಸ್ಥಾಪನೆಯಾದದ್ದೂ ಇದೇ ವಿಜಯದಶಮಿಯ ಶುಭದಿನದಂದು. 1925ರಲ್ಲಿ ನಾಗಪುರದಲ್ಲಿ ಡಾಕ್ಟರ್ ಹೆಡಗೇವಾರರು ಕೆಲವು ಬಾಲಕರನ್ನು ಒಟ್ಟುಗೂಡಿಸಿ ಆರಂಭಿಸಿದ […]