Inbox ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿರುವ ಕವಿಕುಲಗುರು ಕಾಲಿದಾಸ ಸಂಸ್ಕೃತ ವಿಶ್ವವಿದ್ಯಾಲಯವು ಡಾ. ಜನಾರ್ದನ ಹೆಗಡೆ ಅವರಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿದೆ. ವ್ಯಾಕರಣ ವಿಷಯದಲ್ಲಿ ಇವರು ಮಂಡಿಸಿದ “ಶುದ್ಧಿತತ್ವಬೋಧಿನೀ” (ಸಿದ್ಧಾಂತಕೌಮುದ್ಯಾಃ ತತ್ವಬೋಧಿನೀವ್ಯಾಖ್ಯಾಯಾಂ ಸ್ಥಿತಾನಾಂ ಪ್ರಯೋಗಾಣಾಂ ಸಮರ್ಥನಪ್ರಕಾರಾಣಾಂ ಸಂಗ್ರಹಃ) ಎಂಬ ಪ್ರೌಢಪ್ರಬಂಧಕ್ಕೆ ವಿಶ್ವವಿದ್ಯಾಲಯವು ಈ ಪದವಿಯನ್ನು ನೀಡಿ ಗೌರವಿಸಿದೆ.   ವಿದ್ವಾನ್ ಜನಾರ್ದನ ಹೆಗಡೆ ಅವರು “ಸಂಭಾಷಣ ಸಂದೇಶಃ” ಎಂಬ ಸಂಸ್ಕೃತ ಮಾಸಪತ್ರಿಕೆಯ ಸಂಸ್ಥಾಪಕ ಸಂಪಾದಕರು. ವಿದ್ವಾನ್ ಜನಾರ್ದನ ಹೆಗಡೆಯವರು ಸಂಸ್ಕೃತಭಾಷೆಯನ್ನು […]

ಸ್ವರಾಜ್ಯವು ಕೇವಲ ಬ್ರಿಟಿಷರ ವಿರುದ್ಧದ ಹೋರಾಟವಾಗಿರದೆ ಅನೇಕ ಕ್ರಾಂತಿಕಾರಕ ಅಂಶಗಳ ಫಲಶ್ರುತಿ ಎಂದು ಪ್ರಾಧ್ಯಾಪಕರಾದ ಡಾ. ಟಿ. ಏನ್. ಲೊಕೇಶ್ ರವರು ತಿಳಿಸಿದರು . ಹೊಂಬೇಗೌಡ ನಗರ ಮಂಥನ ಭಾಗದ ವತಿಯಿಂದ ಹಮ್ಮಿಕೊಂಡಿದ್ದ ಚಿಂತನ ಮಂಥನದಲ್ಲಿ ಮಾತನಾಡಿದ ಅವರು, ನಮಗೆ ಸಿಕ್ಕ ಸ್ವಾತಂತ್ರ್ಯ ಬ್ರಿಟಿಷರ ಬಳುವಳಿಯಾಗಿರದೆ ಅನೇಕ ರಾಷ್ಟ್ರೀಯ ಮಹಾಪುರುಷರ ತ್ಯಾಗ, ಬಲಿದಾನಗಳಿಂದ ಪಡೆದದ್ದಾಗಿದೆ. ಯೋಗಿ ಅರವಿಂದರು ಯುವಜನರಿಗೆ ತಿಳಿಸಿದ್ದ ಗತಕಾಲದ ವೈಭವದ ಅರಿವು, ವರ್ತಮಾನದ ತಲ್ಲಣ ಮತ್ತು ಭವಿಷ್ಯದ […]

ಬೆಂಗಳೂರಿನ ವಾಸವಿ ಕನ್ವೆನ್ಷನ್ ಹಾಲ್ ನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ್ದ ‘ಅವಿತಿಟ್ಟ ಅಂಬೇಡ್ಕರ್’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಚಿಂತಕ, ನಿರ್ದೇಶಕ ಶ್ರೀ ಪ್ರಕಾಶ್ ಬೆಳವಾಡಿ, ಅ. ಭಾ. ಸಾಹಿತ್ಯ ಪರಿಷತ್ತಿನ ಶ್ರೀ ರಘುನಂದನ್ ಭಟ್, ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಬಾಬು ಹಾಗೂ ಲೇಖಕರಾದ ಡಾ. ಸುಧಾಕರ್ ಹೊಸಳ್ಳಿ , ಪ್ರವೀಣ್ ಕುಮಾರ್ ಮಾವಿನಕಾಡು ಉಪಸ್ಥಿತರಿದ್ದರು. ಪುಸ್ತಕದ ಲೋಕಾರ್ಪಣೆ ಮಾಡಿದ ಚಿಂತಕ, ಸಿನಿಮಾ ನಿರ್ದೇಶಕರಾದ […]

ನವ ಉದ್ಯಮಕ್ಕೆ ಪ್ರೇರಣೆ 5ನೇ ಸ್ತಂಭ ಕಾರ್ಯಕ್ರಮ ನಿರುದ್ಯೋಗ ಸಮಸ್ಯೆಗೆ ಪರಿಹಾರ ‘ಸ್ವಯಂ ಉದ್ಯೋಗ’. ಒಬ್ಬ ವ್ಯಕ್ತಿಯ ಸಾಮರ್ಥ್ಯ, ಕೌಶಲ್ಯ, ಪರಿಣಿತಿ ಸಂಪೂರ್ಣವಾಗಿ ಬೆಳಕಿಗೆ ಬರಲು ಸಾಧ್ಯವಾಗುವುದು ನವ ಉದ್ಯಮದಿಂದ ಅಥವಾ ಸ್ವಯಂ ಉದ್ಯಮದಿಂದ. ಒಂದು ರಾಷ್ಟ್ರದ ಬೆಳವಣಿಗೆಯಲ್ಲಿ ಅನಿಶ್ಚಿತತೆಯಿಂದಾದರೂ ಸರಿಯೇ, ನಿರಂತರವಾಗಿ ತೊಡಗಿಕೊಳ್ಳುವ ಚೈತನ್ಯಶೀಲ ಮಾಧ್ಯಮವೇ ನವ ಉದ್ಯಮ. ಆರ್ಥಿಕ ಕ್ಷೇತ್ರವು ಸದಾ ಚಟುವಟಿಕೆಯಿಂದ ಕೂಡಿರುವಂತೆ ಅಥವಾ ಸದಾ ಚಲನಶೀಲವಾಗಿ ಜಾಗೃತಾವಸ್ಥೆಯಲ್ಲಿರಲು ಸಹಕರಿಸುವ ಆಯಾಮವೇ ನವ ಉದ್ಯಮ. ನಮ್ಮ […]

ಲೇಖಕರು, ಪಂಡಿತರು, ಅಂಕಣಕಾರರಾದ, ಖ್ಯಾತ ವಿದ್ವಾಂಸರೂ ಆದ ಡಾ. ಕೆ. ಎಸ್. ನಾರಾಯಣಾಚಾರ್ಯ ಇನ್ನಿಲ್ಲ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನ ತಮ್ಮ ಮನೆಯಲ್ಲಿ ನಿಧನರಾದರು. ಡಾ. ಕೆ ಎಸ್ ನಾರಾಯಣಾಚಾರ್ಯಯ ನಿಧನಕ್ಕೆ ಆರೆಸ್ಸೆಸ್ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ. ಸುಪ್ರಸಿದ್ಧ ಲೇಖಕರೂ ಮೇರು ವಿದ್ವಾಂಸರೂ ಹಿಂದುತ್ವ-ರಾಷ್ಟ್ರೀಯತೆಯ ಪ್ರಖರ ಪ್ರತಿಪಾದಕರೂ ಆಗಿದ್ದ ಪ್ರೊ। ಕೆ.ಎಸ್. ನಾರಾಯಣಾಚಾರ್ಯರ ನಿಧನ ನಾಡಿಗೆ ಅತೀವ ದುಃಖ ತಂದಿದೆ. ಅವರ ಮರಣದಿಂದಾಗಿ […]

‘ಒಲವೆಂಬ ಹೊತ್ತಿಗೆಯ ಓದ ಬಯಸುವ ನೀನುಬೆಲೆಯೆಷ್ಟು ಎಂದು ಕೇಳುತಿಹೆ ಹುಚ್ಚ;ಹಗಲಿರುಳು ದುಡಿದರೂ ಹಲ ಜನುಮಕಳೆದರೂ ನೀ ತೆತ್ತಲಾರೆ ಬರೀ ಅಂಚೆ ವೆಚ್ಚ’ ಎಂಬ ಅಂಬಿಕಾತನಯದತ್ತರ ವಾಣಿ ನಮಗೆಲ್ಲ ಅರಿವೇ ಇದೆ. ಮೇಲ್ನೋಟದಲ್ಲಿ ಓದಿದಾಕ್ಷಣ ಇದೇನೋ ಓಲವಿನ ಬಗ್ಗೆ ಹೇಳುತ್ತಿದ್ದಾರೇನೋ ಎಂಬ ಭಾವ ಮೂಡಿದರೂ ಆಳಕ್ಕೆ ಇಳಿದಾಗ ಅರಿವಿಗೆ ಬರುವುದು ಇಲ್ಲಿ ನಡೆಯುತ್ತಿರುವುದು ಸು‘ಕೃತಿ’ಯ ಪರಿಚಯ ಎಂದು. ‘ಸುಕೃತಿ’ – ಈಗಾಗಲೇ ಸಾವಿರಾರು ಮಂದಿಯ ಮೆಚ್ಚುಗೆ ಪಡೆದು ಮುನ್ನಡೆಯುತ್ತಿರುವ ಫೇಸ್‍ಬುಕ್ ಪೇಜ್ […]

ಮಾ ಕೃ. ರುಕ್ಮಿಣಿ ಅಕ್ಕ, ಅಧ್ಯಕ್ಷರು,ಸುಕೃಪ ಟ್ರಸ್ಟ್, ಅವರ ಕುರಿತು “ಚೈತನ್ಯ ಮಯಿ” ಎನ್ನುವ ವಿವಿಧ ಲೇಖಕರು ಬರೆದಿರುವ ಪುಸ್ತಕವನ್ನು “ಸುಕೃಪ ಟ್ರಸ್ಟ್” ವತಿಯಿಂದ ನವೆಂಬರ್ 27ನೆ ತಾರೀಖು, ಶನಿವಾರ ಸಂಜೆ ೪ ಗಂಟೆಗೆ ಮಿಥಿಕ್ ಸೊಸೈಟಿ, ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಾನನೀಯ ರುಕ್ಮಿಣಿ ಅಕ್ಕ ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತ ಸಹಕಾರ್ಯವಾಹಿಕಾ ಆಗಿ, ಅಖಿಲ ಭಾರತ ಪ್ರಚಾರಿಕಾ ಪ್ರಮುಕರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದರು. ಪ್ರಸ್ತುತ ಅವರು ರಾಷ್ಟ್ರ ಸೇವಿಕಾ […]

ಪ್ರಸ್ತುತ ಇರುವ ಸಡಿಲ ಕಾನೂನಿನಿಂದಾಗಿ ಆಮಿಷದ ಮೂಲಕ ಮತಾಂತರ ಮಾಡುವ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಾಗುತ್ತಿದ್ದು ಕನ್ನಡ ನೆಲದ ಮೂಲಸಂಸ್ಕೃತಿಯ ಉಳಿವಿಗಾಗಿ ಮತಾಂತರ ನಿಷೇಧ ಕಾನೂನಿನ ಅವಶ್ಯಕತೆ ಇದೆ ಎಂದು ವಿಶ್ವ ಸಂವಾದ ಕೇಂದ್ರದ ವಿಶ್ವಸ್ತರಾದ ರಾಧಾಕೃಷ್ಣ ಹೊಳ್ಳ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಜೆ. ಪಿ. ನಗರ ಮಂಥನ ವೈಚಾರಿಕ ವೇದಿಕೆ ಹಮ್ಮಿಕೊಂಡಿದ್ದ ‘ಕರ್ನಾಟಕಕ್ಕೆ ಮತಾಂತರ ನಿಷೇಧ ಕಾಯ್ದೆ ಅಗತ್ಯವೇ?’ ಎಂಬ ವಿಷಯದ ಮೇಲಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೂರಾರು […]

ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರದಿಂದ ಉನ್ನತಾಧಿಕಾರದ ಸಮಿತಿ ರಚನೆ; ಅಧ್ಯಕ್ಷರಾಗಿ ಪದ್ಮಶ್ರೀ ಪುರಸ್ಕೃತ, ವಿದ್ವಾಂಸ ಶ್ರೀ ಚಮೂ ಕೃಷ್ಣಶಾಸ್ತ್ರೀ ನಿಯುಕ್ತಿ 15 ನವೆಂಬರ್‌ 2021: ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರವು ಇಂದುರಚಿಸಿರುವ ಉನ್ನತಾಧಿಕಾರದ ಸಮಿತಿಗೆ ಪದ್ಮಶ್ರೀ ಪುರಸ್ಕೃತ ಶ್ರೀ ಚಮೂ ಕೃಷ್ಣಶಾಸ್ತ್ರೀ ಅವರು ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಕೇಂದ್ರ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ (ಭಾಷೆಗಳು), ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು ಮತ್ತು ಈ […]

14 ನವೆಂಬರ್, ಚಿಕ್ಕಬಳ್ಳಾಪುರ : ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಪಥಸಂಚಲನ ನೆರವೇರಿತು. ಚಿಕ್ಕಬಳ್ಳಾಪುರ ನಗರ ಮತ್ತು ತಾಲ್ಲೂಕಿನ 134 ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಕೆಎಸ್ಸಾರ್ಟಿಸಿ ಡಿಪೋ ಬಳಿ ಸಂಪತಗೊಂಡು, ಪ್ರಶಾಂತನಗರದ ರಸ್ತೆಗಳಲ್ಲಿ ಸಂಚಲನ ನಡೆಸಲಾಯಿತು. ಪ್ರಶಾಂತನಗರದ ಶನಿಮಹಾತ್ಮ ದೇವಾಲಯದ ಬಳಿಯ ಮುಖ್ಯ ರಸ್ತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸ್ಥಳೀಯ ಮಾನಸ ಆಸ್ಪತ್ರೆಯ ವೈದ್ಯರು/ನಿರ್ದೇಶಕರಾದ ಶ್ರೀ ಡಾ|| ಮಧುಕರ್ ಅವರು ವಹಿಸಿದ್ದರು. ಶ್ರೀ ಗುರುಪ್ರಸಾದ್ ಜೀ, […]