ಭಯ ಬೇಡ, ನಿಶ್ಚಿಂತೆಯಿರಲಿ : ಪೂಜ್ಯ ಪ್ರಮಾಣ ಸಾಗರ್ ಜೀ ಮಹಾರಾಜ್ ರೋಗ ಬಂದವರು ಎಲ್ಲರೂ ಸಾಯುವುದಿಲ್ಲ. ಆದ್ದರಿಂದ ಭಯ ಬೇಡ. ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ನಮಗೂ ಈ ರೋಗ ಬಂದರೆ, ಚಿಕಿತ್ಸೆ ತೆಗೆದುಕೊಂಡು ಗುಣವಾಗುತ್ತೇವೆ ಎಂಬ ವಿಶ್ವಾಸವಿರಲಿ. ದೇಹಕ್ಕೆ ಬರುವ ಈ ರೋಗ ಮನಸ್ಸಿಗೂ ಬಾರದಿರಲಿ. ಯಾರಿಗೆ ಮನೋಬಲ ಗಟ್ಟಿ ಇರುತ್ತದೆಯೋ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಹೋದರೂ ಗುಣವಾಗಿ ಬರುತ್ತಾರೆ. ಇದು ಅನೇಕ ವೈದ್ಯರ ಅನುಭವ. […]

ಪಾಸಿಟಿವಿಟಿ ಅನ್ಲಿಮಿಟೆಡ್ ‘ಉಪನ್ಯಾಸಮಾಲಿಕೆಯಲ್ಲಿ ಜೀವನಶೈಲಿಗಿಂತ ಜೀವನವೇ ಮುಖ್ಯ. ಪರಸ್ಪರ ದೂಷಣೆ ಬಿಟ್ಟು, ಒಂದಾಗಿ ಈ ಸಂಕಷ್ಟವನ್ನು ಎದುರಿಸೋಣ’ : ಶ್ರೀ ಸದ್ಗುರು ಜಗ್ಗಿ ವಾಸುದೇವ್ ಕೋವಿಡ್ ಸಾಂಕ್ರಾಮಿಕದ ಈ ಸವಾಲಿನ ದಿನಗಳಲ್ಲಿ ನಮ್ಮ ದೇಶ ಮಾತ್ರವಲ್ಲ, ಇಡೀ ಮನುಕುಲವೇ ಒಟ್ಟಾಗಿರಬೇಕಾದ ಅಗತ್ಯವಿದೆ. ಯಾರ ನಿಯಂತ್ರಣಕ್ಕೂ ಸಿಗದ ಮಹಾಮಾರಿ ಇದು. ಕಾನೂನು, ಪೊಲೀಸರು, ವೈದ್ಯರು ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ನಮ್ಮೆಲ್ಲರ ಸಹಕಾರ ಬೇಕು. ಸೋಷಿಯಲ್ ಮಿಡಿಯಾದಲ್ಲಿ ಪರಸ್ಪರ ಕಾಲೆಳೆಯುವುದರಿಂದ, […]

ಕೊರೋನಾ ಸವಾಲನ್ನು ಎದುರಿಸಲು ಧನಾತ್ಮಕತೆ ಸೃಷ್ಟಿಸುವ ನಿಟ್ಟಿನಲ್ಲಿ ಕೋವಿಡ್ ರೆಸ್ಪಾನ್ಸ್ ಟೀಮ್ (ಸಿಆರ್‌ಟಿ ಮೇ 11ರಿಂದ  ‘ಪಾಸಿಟಿವಿಟಿ ಅನ್‌ಲಿಮಿಟೆಡ್: ಹಮ್ ಜೀತೆಂಗೆ’ ಕಾರ್ಯಕ್ರಮ ಸರಣಿಯನ್ನು ಆಯೋಜಿಸಿದೆ. ಸಮಾಜದಲ್ಲಿ ಧನಾತ್ಮಕತೆಯನ್ನು ಪಸರಿಸುವ ಮೂಲಕ ಸಮಾಜದ ಮನೋಬಲ ಹೆಚ್ಚಿಸಲು ದೇಶದ ಧಾರ್ಮಿಕ, ಆಧ್ಯಾತ್ಮಿಕತೆ, ಉದ್ಯಮ, ಸಮಾಜಸೇವೆ ಮತ್ತು ಸಾಮಾಜಿಕ ಸಂಘಟನೆಗಳ ಪ್ರಮುಖರನ್ನೊಳಗೊಂಡ ಕೋವಿಡ್ ರೆಸ್ಪಾನ್ಸ್ ಟೀಮ್ (ಸಿಆರ್‌ಟಿ) ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ  ಈ ಆನ್ ಲೈನ್ ಉಪನ್ಯಾಸ ಸರಣಿಯನ್ನು ಆಯೋಜಿಸಿದೆ. ಉಪನ್ಯಾಸ ಸರಣಿಯು […]

ಭೋಪಾಲ್: ಭಾರತೀಯ ಜನತಾ ಪಾರ್ಟಿ ವತಿಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಎರಡನೇ ಸರಸಂಘಚಾಲಕ ಮಾಧವರಾವ್ ಸದಾಶಿವರಾವ್ ಗೋಲ್ವಳ್ಕರ್ ಅವರ ಹೆಸರಿನಲ್ಲಿ ಮಧ್ಯಪ್ರದೇಶದ ಭೋಪಾಲ್‌ ನಲ್ಲಿ 1000 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಈ ಕೇಂದ್ರದಲ್ಲಿ 25 ಆಮ್ಲಜನಕ ಸಾಂದ್ರಕಗಳ ವ್ಯವಸ್ಥೆಯಿದೆ. ಇಲ್ಲಿ 200 ವೈದ್ಯರು ಮತ್ತು ಅರೆವೈದ್ಯರ ಸೇವೆ ಲಭ್ಯವಿರುತ್ತದೆ. ಮನೆಯಲ್ಲಿ ಐಸೋಲೇಷನ್‌ಗೆ ಸ್ಥಳವಿಲ್ಲದ ರೋಗಿಗಳಿಗೆ ಮತ್ತು ಚಿಕಿತ್ಸೆಯ ಸಮಯದಲ್ಲಿ ಆಮ್ಲಜನಕದ ಬೆಂಬಲ ಅಗತ್ಯವಿರುವ ಸೌಮ್ಯ ಮತ್ತು […]

ದಿನಾಂಕ: 08-05-2021 ಮಹಾಮಹಿಮರೇ, ವಿಷಯ: ಪಶ್ಚಿಮ ಬಂಗಾಲದಲ್ಲಿ 2021ರ ವಿಧಾನಸಭಾ ಚುನಾವಣೋತ್ತರದಲ್ಲಿ ನಡೆದ   ಗಲಭೆ, ಹಿಂಸಾಚಾರ ಮತ್ತು ಹತ್ಯಾಕಾಂಡಗಳಿಂದ ಇಡೀ ದೇಶ ದಿಗ್ಭ್ರಮೆ, ಆತಂಕಗೊಂಡಿರುವ ಬಗ್ಗೆ ಭಾರತವು ಪ್ರಜಾಪ್ರಭುತ್ವವನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ರಾಷ್ಟ್ರ. ಇಲ್ಲಿ ಚುನಾವಣೆಗಳು ಹಬ್ಬದ ರೀತಿಯಲ್ಲಿರುತ್ತವೆ. ಇಂತಹ ವ್ಯವಸ್ಥೆಯನ್ನು ಹಾಳುಗೆಡವಲು ವಿಚ್ಚಿದ್ರಕಾರಿ ಶಕ್ತಿಗಳು ಪ್ರಯತ್ನಿಸುತ್ತಾ ಜನರ ಮನದಲ್ಲಿ ಭಯ, ಆತಂಕಗಳನ್ನು ಸೃಷ್ಟಿ ಮಾಡಿ, ಅಪಾರ ಆಸ್ತಿಪಾಸ್ತಿಗಳನ್ನು ಹಾಳುಮಾಡಿ, ಅತ್ಯಾಚಾರ ಮಾಡಿ, ಕೊಲೆಗಳನ್ನು ಮಾಡಿ ಅರಾಜಕತೆಯನ್ನು […]

ನವದೆಹಲಿ: ಕೊರೋನಾ  ರೋಗಿಗಳ ಚಿಕಿತ್ಸೆಗೆ ಆ್ಯಂಟಿ-ಕೋವಿಡ್ ಔಷಧಿ (2-ಡಿಯೋಕ್ಸಿ-ಡಿ-ಗ್ಲೂಕೋಸ್)ಯ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ(ಡಿಸಿಜಿಐ)ಅನುಮೋದನೆ ನೀಡಿದೆ. ಹೈದರಾಬಾದ್‌ನ ಡಾ. ರೆಡ್ಡೀಸ್ ಹಾಗೂ ಡಿಆರ್‌ಡಿಒನ ಪ್ರಯೋಗಾಲಯದಲ್ಲಿ 2-ಡಿಯೋಕ್ಸಿ-ಡಿ-ಗ್ಲೂಕೋಸ್(2-ಡಿಜಿ) ಔಷಧದ ಆ್ಯಂಟಿ ಕೋವಿಡ್ ಚಿಕಿತ್ಸಕವನ್ನು ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್(INMAS) ಅಭಿವೃದ್ಧಿಪಡಿಸಿದೆ. 2-ಡಿಜಿ ಔಷಧ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. 2ಡಿಜಿ ಯೊಂದಿಗೆ ಚಿಕಿತ್ಸೆ ಪಡೆದ […]

ಅದೊಂದು ವಠಾರದಲ್ಲಿ ನಾಲ್ಕು ಜನರಿರುವ ಒಂದು ಸಣ್ಣ ಕುಟುಂಬವೊಂದು ವಾಸವಾಗಿತ್ತು. ಅದೊಮ್ಮೆ ಇದ್ದಕ್ಕಿದ್ದಂತೆಯೇ ಆ ಮನೆಗೆ ದೂರದೂರಿನಿಂದ ಸುಮಾರು ಎಂಟು ಹತ್ತು ನೆಂಟರು ಆಗಮಿಸಿ ಬಿಟ್ಟರು. ಬಂದರವರನ್ನು ನೋಡಿದರೆ ದೂರ ಪ್ರಯಾಣದಿಂದ ಬಹಳ ಹಸಿದಂತೆ ಕಾಣುತ್ತಿದ್ದರು. ಅವರೆಲ್ಲರನ್ನು ಊಟಕ್ಕೆ ಕುಳ್ಳಿರಿಸಬೇಕು.  ಆದರೆ  ಅವರ ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಅಡುಗೆ ಇರಲಿಲ್ಲ. ಅಷ್ಟು ಜನರಿಗೆ  ಅಡುಗೆ ಮಾಡಬೇಕೆಂದರೂ ಕನಿಷ್ಟ ಪಕ್ಷ ಒಂದೆರಡು ಗಂಟೆಯಾದರೂ ಬೇಕಿತ್ತು.  ತಿಂಗಳ ಕೊನೆಯಾಗಿದ್ದರಿಂದ ಹೋಟೇಲ್ಲಿನಿಂದಲೂ ತರುವಷ್ಟು ಹಣ […]

ನಿಮ್ಮ ಜೊತೆಗೆ ಇದೆ ಆಪ್ತ ಸಲಹಾ ಕೇಂದ್ರ ಇಂದಿನ ಕೋವಿಡ್ ವಾತಾವರಣದಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಅನೇಕರು ತಮ್ಮ ಹತ್ತಿರದ ಬಂಧುಗಳನ್ನು ಕಳೆದುಕೊಂಡಿದ್ದಾರೆ ಅಥವಾ ಕೋವಿಡ್ ನ ಕಾರಣದಿಂದ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ತುಂಬಾ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೌಟುಂಬಿಕ ತೊಂದರೆಯನ್ನು ಇನ್ನೂ ಕೆಲವರು ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ನಿಯಮಿತ ಶಾಲೆ – ಕಾಲೇಜಿಗೆ ಹೋಗಲು ಅಸಮರ್ಥರಾಗಿ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅನೇಕರು ಮಾನಸಿಕ […]