14 ಫೆಬ್ರವರಿ 2021, ಬೆಂಗಳೂರು: ದೆಹಲಿಯ ವಿಶೇಷ ಪೊಲೀಸ್ ದಳ ಶನಿವಾರದಂದು ನಗರದ ‘ಫ್ರೈಡೇಸ್ ಫಾರ್ ಫ್ಯೂಚರ್’ ಕಾರ್ಯಕರ್ತೆಯನ್ನು ಗ್ರೇಟಾ ಥೂನ್ಬೆರಿ (Greta Thunberg) ಟೂಲ್ ಕಿಟ್ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಗೆ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಗ್ರೇಟಾ ಥೂನ್ಬೆರಿ ರೈತರ ಚಳುವಳಿಯ ಬಗ್ಗೆ ಟ್ವಿಟ್ ಮಾಡಿ, ಟೂಲ್ ಕಿಟ್ ಹಂಚಿಕೊಂಡಿದ್ದು ತಿಳಿದಿರುವ ಸಂಗತಿ. ದಿಶಾ ರವಿ ಎಂಬ 21 ವರ್ಷ ವಯಸ್ಸಿನ ಮೌಂಟ್ ಕಾರ್ಮೆಲ್ ಕಾಲೇಜಿನ ಬಿಬಿಎ ಪದವಿಧರೆಯಾದ ಹಾಗೂ […]

ಕೇಶವಸೃಷ್ಟಿ: ಆರೆಸ್ಸೆಸ್ ಅಂತಃಶಕ್ತಿಯ ಇನ್ನೊಂದು ಅದ್ಭುತ!ಲೇಖನ: ಶ್ರೀವತ್ಸ ಜೋಶಿ, ಅಂಕಣಕಾರರು. {ವಿಶ್ವವಾಣಿ ಪತ್ರಿಕೆಯ ತಿಳಿರುತೋರಣ ಅಂಕಣದಲ್ಲಿ 14Feb2021 ರಂದು ಮೊದಲು ಪ್ರಕಟವಾದ್ದು} ಕೃಪೆ: ವಿಶ್ವವಾಣಿ ಹಾಗೂ ಲೇಖಕರು ಅಪಪ್ರಚಾರದ ವೇಗ, ವ್ಯಾಪ್ತಿ, ತೀಕ್ಷ್ಣತೆ, ಪರಿಣಾಮ ಎಲ್ಲವೂ ಜಾಸ್ತಿ. ವಿಪರ್ಯಾಸವೆಂದರೆ ಅಂಥದರ ಬಗ್ಗೆ ಜನರಿಗೆ ಆಸಕ್ತಿಯೂ ಜಾಸ್ತಿ. ಎಷ್ಟೋ ಸರ್ತಿ ಅಪ್ಪಟ ಸುಳ್ಳೆಂದು ಗೊತ್ತಿದ್ದರೂ ಯಾವುದೋ ಚೀಪ್ ಗಾಸಿಪ್‌ಅನ್ನು ಚಪ್ಪರಿಸುವ ಚಪಲ. ಆಡಿಕೊಳ್ಳುವವರಿಗೆ ಒಂಥರದ ತೆವಲು, ಕೇಳಿಸಿಕೊಳ್ಳುವವರಿಗೆ ಕೆಟ್ಟ ಕುತೂಹಲ. ಯಾರಾದರೂ […]

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದಶ್ರೀ ವಜುಬಾಯ್ ರುಡಬಾಯ್ ವಾಲಾ ಅವರನ್ನು ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ಬಜರಂಗದಳದ ರಾಷ್ಟ್ರೀಯ ಸಹ ಸಂಯೋಜಕರಾದ ಶ್ರೀ ಸೂರ್ಯನಾರಾಯಣ, ಪ್ರಾಂತ ವಿಶೇಷ ಸಂಪರ್ಕ ಪ್ರಮುಖ್ ಮಂಜುನಾಥ ಸ್ವಾಮಿ ಹಾಗೂ ಬೆಂಗಳೂರು ಉತ್ತರ ವಿಭಾಗ ವಿಹಿಂಪ್ ಅಧ್ಯಕ್ಷರಾದ ಮುನಿರಾಜು ಅವರು ಭೇಟಿ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯಪಾಲರು ತಾವು ರಾಮ ಮಂದಿರದ ಕಾರಸೇವೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ವ್ಯಕ್ತಪಡಿಸಿದರು. ಮತ್ತು ಇದೊಂದು […]

ಸಾಮಾಜಿಕ ನ್ಯಾಯಕ್ಕಾಗಿ, ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ತೇಯ್ದ ಶ್ರೀ ಕುದ್ಮಲ್ ರಂಗರಾವ್ (1859 -1928)  ಅವರ ಪುಣ್ಯಸ್ಮರಣೆಯ ಪ್ರಯುಕ್ತ ವಿಶೇಷ ಲೇಖನ. ಹತ್ತೊಂಬತ್ತು ಇಪ್ಪತ್ತನೇ ಶತಮಾನದಲ್ಲಿ ಕರಾವಳಿಯ ದಲಿತ ಸಮುದಾಯದ ಬದುಕು ಅರ್ಥಪೂರ್ಣವಾಗಲು ಶ್ರಮಿಸಿದ ವಿಭೂತಿ ಪುರುಷರು ಕುದ್ಮುಲ್ ರಂಗರಾಯರು.   ಕಾಸರಗೋಡಿನ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದ ಅವರು ಕೈಗೊಂಡಿದ್ದ ದಲಿತೋದ್ಧಾರದ ಕಾರ್ಯಗಳು ಸ್ವತಃ ಮಹಾತ್ಮ ಗಾಂಧೀಜಿ ಅವರಿಗೆ ಮಾರ್ಗದರ್ಶಿಯಾಗಿದ್ದವು. ೧೯೩೪ ರಲ್ಲಿ ಮಂಗಳೂರಿಗೆ ತಮ್ಮ […]

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜನವರಿ 21ನ್ನು ‘ದಾಸೋಹ ದಿನ’ವೆಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ  ಜ. 21 ಇನ್ನು ಪ್ರತೀ ವರ್ಷ ದಾಸೋಹ ದಿನ’ವನ್ನಾಗಿ ಆಚರಿಸಲಾಗುವುದು ಎಂದರು. ಸ್ವಾಮೀಜಿ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದ ಅಭಿವೃದ್ಧಿಗೆ ₹ 80 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಈಗಾಗಲೇ ₹ 25 […]

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಜನವರಿ 15ರಿಂದ ಇಡೀ ದೇಶದಲ್ಲಿ ಆರಂಭವಾಗಿದೆ. ಇದು ಕೊರೊನಾದಿಂದಾಗಿ ಬೇಸತ್ತ ಜನರಿಗೆ ಹೊಸ ಸ್ಫೂರ್ತಿಯನ್ನುಂಟುಮಾಡಿದೆ. ಯುವಕರಿಗೆ ಇನ್ನಷ್ಟು ಕೆಲಸಮಾಡುವ ಉತ್ಸಾಹ ಹಾಗೂ ಹಿರಿಯರಿಗೆ ತಮ್ಮ ಕಾಲದಲ್ಲಿಯೇ ರಾಮ ಮಂದಿರದ ವಿಷಯವಾಗಿ ಘನ ನ್ಯಾಯಾಲಯ ನೀಡಿರುವ ತೀರ್ಪು, ನಂತರದಲ್ಲಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ, ಭವ್ಯ ಮಂದಿರ ಕಾರ್ಯ ನಡೆಯುತ್ತಿರುವುದು ಸಂತೃಪ್ತಿಯನ್ನು ನೀಡಿದೆ. ಅಭಿಯಾನದ ಆರಂಭ ದಿನವಾದ ಜನವರಿ 15ರಂದು ಹಲಸೂರಿನ ಆರೆಸ್ಸೆಸ್ ಸ್ವಯಂಸೇವಕರು ಕರಪತ್ರ […]

ಹರಿನಗರ ಕಾಲೋನಿಯ ಕೌಸಲ್ಯದೇವಿ ಅವರ ಉದಾರ ಕೊಡುಗೆಯಿಂದ ಪ್ರಾರಂಭವಾದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ. ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಮೊದಲ ದಿನ ಬೆಂಗಳೂರಿನ ಪುಟ್ಟೇನಹಳ್ಳಿ ಯ ಹರಿನಗರದ ಕಲೋನಿಯಲ್ಲಿ ಮೊದಲ ಮನೆಗೆ ಶ್ರೀರಾಮ್ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಪ್ರಾಂತ ಕಾರ್ಯದರ್ಶಿ ನಾ.ತಿಪ್ಪೇಸ್ವಾಮಿ ಅವರು ಭೇಟಿ ಕೊಟ್ಟು ನಿಧಿಯನ್ನು ಕೇಳಿದರು. ಮನೆಯ ತಾಯಿ ಅಡುಗೆ ಮನೆಯ ಎಲ್ಲಾ ಡಬ್ಬಗಳನ್ನು […]

ಅರಣ್ಯ ನೆಡುತೋಪುಗಳ ಅಸಲಿಯತ್ತು ———————————————————————————– ಪರಿಸರ, ಅರಣ್ಯ, ಮಲೆನಾಡು, ಪಶ್ಚಿಮ ಘಟ್ಟ… ಮುಂತಾದ ವಿಚಾರಗಳಲ್ಲಿ ಆಸಕ್ತಿ ಇರುವವರೆಲ್ಲರೂ ಗಮನಿಸಿರಬಹುದಾದ ಒಂದು ವಿದ್ಯಮಾನವೆಂದರೆ ಪತ್ರಿಕೆಗಳಲ್ಲಿ ಆಗಾಗ ಬರುವ ಅಕೇಸಿಯಾ ವಿರೋಧಿ ಬರಹಗಳು. ಯಾವಾಗ ಅರಣ್ಯ ಇಲಾಖೆ ಈ ಅಕೇಸಿಯಾ ಸಸ್ಯವನ್ನು (Acacia Auriculiformis/Earpod Wattle) ಭಾರತದಲ್ಲಿ  ನೆಡುತೋಪು ಮಾಡಲು ಪರಿಚಯಿಸಿತೋ ಬಹುಶಃ ಆಗಿಂದಲೇ ಇದಕ್ಕೆ ವಿರೋಧವೂ ಹುಟ್ಟಿಕೊಂಡಿರಬಹುದು. ಆ ವಿರೋಧ ಒಂದು ಮಟ್ಟಿಗೆ ಸಮಂಜಸವೂ ಆಗಿದೆ ಯಾಕೆಂದರೆ ಅರಣ್ಯ ಇಲಾಖೆ ಈ […]

ಬೆಂಗಳೂರು: ಬಸವನಗುಡಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದ (91) ಅವರು ಇಂದು ವಿಧಿವಶರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ (ಜ. 12) ಇಂದು ಮಧ್ಯಾಹ್ನ 1.05ರ ಸುಮಾರಿಗೆ ಸ್ವಾಮಿಜೀ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ.  ರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ತತ್ತ್ವಾದರ್ಶಗಳನ್ನು ಎತ್ತಿಹಿಡಿದ ಸ್ವಾಮಿ ಹರ್ಷಾನಂದ ಅವರು ರಾಮಕೃಷ್ಣ ಆಶ್ರಮದ ಹಿರಿಯ ಸಂನ್ಯಾಸಿಯಾಗಿದ್ದರು. ರಾಮಕೃಷ್ಣ ಆಶ್ರಮದ 6ನೇ ಅಧ್ಯಕ್ಷರಾದ ಸ್ವಾಮಿ ವಿರಜಾನಂದರಿಂದ ಮಂತ್ರ ದೀಕ್ಷೆ ಸ್ವೀಕರಿಸಿ ಮಂಗಳೂರು,ಮೈಸೂರು, ಬೇಲೂರು ಮಠ ಹಾಗೂ […]