ಮೇ ೧ ೨೦೧೮, ಬೆಂಗಳೂರು: ಹಿಂದುತ್ವವೇ ಆರೆಸ್ಸೆಸ್ಸಿನ ಹೆಗ್ಗುರುತು. ಹಿಂದುತ್ವ ಎನ್ನುವುದು ಒಂದು ಪೂಜಾ ಪದ್ಧತಿಯಲ್ಲ, ಇದೊಂದು ಜೀವನ ಪದ್ಧತಿ. ತನ್ನದೇ ಸರಿ ಎಂಬ ಸಂಕುಚಿತ ವಿಚಾರದ ಒಂದು ರಿಲಿಜನ್‌ ಇದಲ್ಲ. ಬದಲಿಗೆ, ದೇವನೊಬ್ಬ ನಾಮ ಹಲವು ಎಂಬುದು ಹಿಂದುತ್ವದ ವಿಚಾರ ಎಂದು ಪ್ರಜ್ಞಾಪ್ರವಾಹದ ಕರ್ನಾಟಕ, ಆಂಧ್ರ, ತೆಲಂಗಾಣಗಳ ಕ್ಷೇತ್ರೀಯ ಸಂಯೋಜಕ ರಘುನಂದನ್‌ ಅಭಿಪ್ರಾಯಪಟ್ಟರು. ಚನ್ನೇನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ 21 ದಿನಗಳ ಅವಧಿಯ ಸಂಘ ಶಿಕ್ಷಾ ವರ್ಗದ ಸಮಾರೋಪ […]

15 ಆಕ್ಟೊಬರ್, ಮುಳುಬಾಗಿಲು ನೇತಾಜಿ ಕ್ರೀಡಾಂಗಣದಲ್ಲಿ ರಾ.ಸ್ವ. ಸಂ ದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭ ಏರ್ಪಾಟಾಗಿತ್ತು. ಅದರ ಆಯ್ದ ಚಿತ್ರಗಳು ಇಲ್ಲಿವೆ.

ಹಾವೇರಿ ಜಿಲ್ಲೆಯ ರಾ.ಸ್ವ.ಸಂ ದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಹಿರಿಯ ಪ್ರಚಾರಕರು, ಭಾಜಪದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಅವರು ಮಾರ್ಗದರ್ಶನ ಮಾಡಿದರು.

ವಿರಾಜಪೇಟೆ ತಾಲ್ಲೂಕಿನ ಅರಮೇರಿ ಶ್ರೀ ಕಳಂಚೇರಿ ಮಠದಲ್ಲಿ ನಡೆಯುತ್ತಿದ್ದ ವರ್ಗದ ಸಮಾರೋಪ ಸಮಾರಂಭ ಇಂದು ನೆರವೇರಿತು. ವಿಭಾಗ ಪ್ರಚಾರಕ್ ಶ್ರೀ ಕೃಷ್ಣಪ್ರಸಾದ್ ಸಮಾರೋಪ ಬೌದ್ಧಿಕ್ ನಡೆಸಿಕೊಟ್ಟರು. ಜಿಲ್ಲಾ ಸಂಘಚಾಲಕ್ ಚಕ್ಕೇರ ಮನುಕಾವೇರಪ್ಪ, ವರ್ಗಾಧಿಕಾರಿ ಮುಂಡಚಾಂಡಿರ ನಂದ ಉಪಸ್ಥಿತರಿದ್ದರು.

15 ಆಕ್ಟೊಬಾರ್: ಚಿಕ್ಕಮಗಳೂರು ಜಿಲ್ಲೆಯ ದೇವನೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಾರ್ವಜನಿಕ ಸಮಾರೋಪ ಸಮಾರಂಭ ಇಂದು ನಡೆಯಿತು. ಶ್ರೀ ದಿನೇಶ್ ಭಾರತೀಪುರ, ಶಿವಮೊಗ್ಗ ವಿಭಾಗ ಕಾರ್ಯವಾಹ ಇವರು ಮಾರ್ಗದರ್ಶನ ಮಾಡಿದರು. ಗ್ರಾಮದ ಹಿರಿಯರಾದ ಶ್ರೀ ನಿಂಗಯ್ಯನವರು ಅಧ್ಯಕ್ಷತೆವಹಿಸಿದ್ದರು.