• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಹಿಪ್ಪೋಕ್ರೇಟ್ ಶಪಥದಿಂದ ಚರಕ ಶಪಥದವರೆಗೆ….

Vishwa Samvada Kendra by Vishwa Samvada Kendra
February 16, 2022
in Articles
251
0
ಹಿಪ್ಪೋಕ್ರೇಟ್ ಶಪಥದಿಂದ ಚರಕ ಶಪಥದವರೆಗೆ….
494
SHARES
1.4k
VIEWS
Share on FacebookShare on Twitter

ಇತ್ತೀಚೆಗೆ ಭಾರತದ ವೈದ್ಯಕೀಯ ಶಿಕ್ಷಣವನ್ನು ರೂಪಿಸುವ ಮತ್ತು ಮೇಲ್ವಿಚಾರಿಸುವ ನಿಯಂತ್ರಕ ಸಂಸ್ಥೆ ಎನ್ ಎಂ ಸಿ ವೈದ್ಯಕೀಯ ಕಾಲೇಜಿಗಳಲ್ಲಿ ಪದವಿಪ್ರಾಪ್ತಿಯ ದಿನ ವಿದ್ಯಾರ್ಥಿಗಳಿಗೆ ವಿದೇಶೀ ಮೂಲದ ಹಿಪ್ಪೋಕ್ರೇಟ್ಸ್ ಶಪಥವನ್ನು ಬೋಧಿಸುವ ಬದಲು ಭಾರತದ ಚರಕ ಶಪಥವನ್ನು ಬೋಧಿಸಬಹುದೆನ್ನುವ ಸಲಹೆಯನ್ನು ನೀಡಿತು.ಅನೇಕ ರಾಷ್ಟ್ರಗಳು ಆಧೂನಿಕ ವೈದ್ಯ ವಿಜ್ಞಾನದ ವಿಧ್ಯಾರ್ಥಿಗಳಿಗೆ ತಮ್ಮ ನೆಲದ ಶಪಥವನ್ನು ಬೋಧಿಸುತ್ತದೆ. ಭಾರತದಲ್ಲಿಯೂ ಈ ಪದ್ಧತಿ ಅನುಷ್ಠಾನವಾಗಬೇಕೆಂಬುದು ಎನ್.ಎಂ.ಸಿಯ ಆಶಯ.ಹಿಪ್ಪೋಕ್ರೇಟ್ ಶಪಥದ ಜಗದ್ವ್ಯಾಪಿ ಮಾಡುವಲ್ಲಿ ಅಮೆರಿಕ, ಬ್ರಿಟಿಷ್ ಜನರ ಮೆಡಿಕಲ್ ಕೌನ್ಸಿಲ್ ಸೇರಿದಂತೆ ಅನೇಕ ಪಾಶ್ಚಿಮಾತ್ಯ ಸಂಸ್ಥೆಗಳ ಕೈವಾಡವಿದೆ.ತಮ್ಮ ವಸಾಹತು ರಾಷ್ಟ್ರಗಳಲ್ಲಿ ಐರೋಪ್ಯರು ಹಿಪ್ಪೋಕ್ರೇಟ್ ಶಪಥದಂತಹ ಅನೇಕ ವಸಾಹತುಶಾಹಿ ಕುರುಹುಗಳನ್ನು ಉಳಿಸಿಹೋಗಿರುವುದು ನಮಗೆಲ್ಲ ತಿಳಿದಿರುವ ವಿಷಯವೇ.

ಸಹಜವಾಗಿ ಎನ್.ಎಂ.ಸಿಯ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಯಿತು.ಎನ್.ಎಂ.ಸಿ ಆಧುನಿಕ ವೈದ್ಯ ಪದ್ಧತಿಯನ್ನು ನಾಶ ಮಾಡುತ್ತಿದೆ ಎಂಬ ಆರೋಪವೂ ವ್ಯಕ್ತವಾಯಿತು.ಭಾರತೀಯ ವೈದ್ಯರು,ಭಾರತ ಮೂಲದ ಶಪಥವನ್ನು ಸ್ವೀಕರಿಸುವುದರಿಂದ ಆಧುನಿಕ ವೈದ್ಯ ಪದ್ಧತಿಯ ನಾಶ ಹೇಗಾಗುತ್ತದೆ? ಆಧುನಿಕ ವೈದ್ಯ ವಿಜ್ಞಾನದ ಬೆಳವಣಿಗೆಯಲ್ಲಿ ಭಾರತೀಯ ವೈದ್ಯರ ಕೊಡುಗೆಯಿಲ್ಲವೆ? ತಮ್ಮದೇ ನೆಲ ವೈದ್ಯಕೀಯ ಶಪಥವನ್ನು ವಿದ್ಯಾರ್ಥಿಗಳಿಗೆಬೋಧಿಸುತ್ತಿರುವ ಚೀನಾ ಜಪಾನ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಆಧುನಿಕ ವೈದ್ಯ ಪದ್ಧತಿ ನಾಶವಾಗಿ ಹೋಗಿದೆಯೇ? ಒಂದನ್ನು ನಾವೆಲ್ಲರೂ ನೆನಪಿನಲ್ಲಿ ಇಡಬೇಕು,ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಜಗತ್ತಿನ ಎಲ್ಲಾ ಭಾಗದ ವಿಜ್ಞಾನಿಗಳೂ ಶ್ರಮಿಸಿದ್ದಾರೆ.ಅನಾದಿ ಕಾಲದಿಂದಲೂ ಜಗತ್ತಿನ ಎಲ್ಲಾ ಭಾಗದ ವಿಜ್ಞಾನಿಗಳ ನಿರಂತರ ಸಂಶೋಧನೆಗಳ ಫಲವಾಗಿ ಇವತ್ತಿನ ವೈದ್ಯಕೀಯ ಕ್ಷೇತ್ರ ಬೆಳೆದುನಿಂತಿದೆ, ಮತ್ತು ಬೆಳೆಯುತ್ತಿದೆ.ಇದಕ್ಕೆ ಭಾರತದ ಕೊಡುಗೆಯೂ ಸಾಕಷ್ಟಿದೆ.ಕೇವಲ ೈರೋಪ್ಯರು ಮಾತ್ರ ವೈದ್ಯ ವಿಜ್ಞಾನಕ್ಕೆ ಅಪಾರವಾದ ಕೊಡುಗೆಯನ್ನು ಕೊಟ್ಟಿದ್ದಾರೆಂದು ಬಿಂಬಿಸಿ ಇಡೀ ವೈದ್ಯಕೀಯ ಕ್ಷೇತ್ರವನ್ನು ಪರಿಗಣಿಸಿ,ಹಿಪ್ಪೋಕ್ರೇಟ್ಸ್ ಗೆ “ಫಾದರ್ ಆಫ್ ಮೆಡಿಸಿನ್” ಎಂಬ ಬಿರುದನ್ನಿತ್ತು ಅವನ ಹೆಸರಿನ ಶಪಥವನ್ನು ಜಗತ್ತಿನಾದ್ಯಂತ ವೈದ್ಯ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ.ಹಿಪ್ಪೋಕ್ರೇಟ್ಸ್ ನ ವಿಜ್ಞಾನ ತಪ್ಪು ಅಥವಾ ಸುಳ್ಳು ಎಂದಲ್ಲ.ಅಥವಾ ಹಿಪ್ಪೋಕ್ರೇಟ್ ಶಪಥ ಸರಿಯಿಲ್ಲವೆಂದೂ ಅಲ್ಲ.ನಮ್ಮದೆ ಆದ ಭವ್ಯ ವೈದ್ಯ ಪರಂಪರೆಯಿದೆ.ಸುಶ್ರುತ,ಚರಕ,ಅಗ್ನಿವೇಷ ಮುಂತಾದವರಿಂದ ಹಿಡಿದು ಡಾ.ಬಿಧನ್ ಚಂದ್ರರಾಯ್,ಡಾ.ಆನಂದಿಬಾಯಿ ಜೋಷಿ,ಡಾ.ಉಪೇಂದ್ರನಾಥ ಬ್ರಹ್ಮಚಾರಿ,ಡಾ.ಇಂದಿರಾ ಇಂದುಜಾ,ಡಾ.ಎಂ.ಸಿ.ಮೋದಿ,ಡಾ.ಗಗನ್ ದೀಪ್,ಡಾ.ದೇವಿಶೆಟ್ಟಿ,ಸೇರಿದಂತೆ ಸಾವಿರಾರಿ ಮಹನೀಯರ ಶ್ರಮದಿಂದ ಬೆಳೆದಬಂದ, ಬರುತ್ತಿರುವ, ಭವ್ಯ ವೈದ್ಯ ಪರಂಪರೆ ನಮ್ಮದು.ಈ ಶ್ರೇಷ್ಠ ಪರಂಪರೆಯ ಸಂಕೇತದಂತಿರುವ ಚರಕ ಶಪಥವನ್ನು ಭಾರತೀಯ ವೈದ್ಯ ವಿಧ್ಯಾರ್ಥಿಗಳಿಗೆ ಬೋಧಿಸಬಹುದೆಂದೇ ಎನ್.ಎಂ.ಸಿ.ಸಲಹೆ ನೀಡಿದ್ದು.

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಹಾಗಾದರೆ ಹಿಪ್ಪೋಕ್ರೇಟ್ಸ್ ಯಾರು ? ಅವನ ಹೆಸರಿನ ಶಪಥವನನ್ನು ಯಾಕಾಗಿ ಜಗತ್ತಿನಾದ್ಯಂತ ನವ ವೈದ್ಯರಿಗೆ ಬೋಧಿಸಲಾಗುತ್ತದೆ? ಹಿಪ್ಪೋಕ್ರೇಟ್ಸ್ ಪ್ರಾಚೀನ ಗ್ರೀಸ್ನಲ್ಲಿ ವಾಸವಿದ್ದ ವೈದ್ಯ.ವೈದ್ಯಕೀಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನೂ ಕೊಟ್ಟಿದ್ದಾನೆ.’ಏನ್ಷಿಯಂಟ್ ಗ್ರೀಕ್  ಮೆಡಿಸಿನ್’ಅನ್ನು ವೃತ್ತಿಯನ್ನಾಇ ಮಾಡಿದ ಕೀರ್ತಿಯೂ ಇವನದ್ದೇ.ಯೂರೋಪಿನಲ್ಲಿ ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹರಿದು ಹಂಚಿಹೋಗಿದ್ದ ವೈದ್ಯ ವಿಜ್ಞಾನವನ್ನು ಸಂಘಟಿಸಿ, ರೂಪಿಸಿ ಆರೋಗ್ಯ ಕ್ಷೇತ್ರದ ಬೆಳವಣಿಗೆಗೆಮಹತ್ತರವಾದ ಕೊಡುಗೆಯನ್ನು ಕೊಟ್ಟವರಲ್ಲಿ ಮೊದಲಿಗ.ಹಾಗೆಯೇ ಅವನು ಪ್ರತಿಪಾದಿಸಿದ ಅನೇಕ ವಿಚಾರಗಳು ಪ್ರಸ್ತುತವಲ್ಲವೆಂದೂ ಆಧುನಿಕ ವಿಜ್ಙಾನ ಈಗ ತಿರಸ್ಕರಿಸಿದೆ.ಇವನ ಹಾಗೆ ಜಗತ್ತಿನಾದ್ಯಂತ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ಕೊಟ್ಟಂತಹ ಅನೇಕ ಮಂದಿ ಅಜ್ಞಾತ ಮಹನೀಯರಿದ್ದಾರೆ.ಭಾರತದ ಕೊಡುಗೆಯ ಬಗೆಗೆ ನಮಗೆಲ್ಲಾ ತಿಳಿದೇ ಇದೆ.ಹಿಪ್ಪೋಕ್ರೇಟ್ಸ್ ಗಿಂತಲೂ ಮುನ್ನ ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರೆದ, ಪ್ರಸ್ತುತತೆ ಇರುವ ವಿಚಾರಗಳನ್ನು ಮಂಡಿಸಿದ ಅನೇಕ ವೈದ್ಯರಿದ್ದಾರೆ.

ಹೌದು! ಯೂರೋಪಿನವರು ಮಾತ್ರ ಕಟ್ಟಿದ್ದಲ್ಲ ವಿಜ್ಞಾನ. ಯೂರೋಪಿನಲ್ಲಿ ಬಹುಶಃ ಹಿಪ್ಪೋಕ್ರೇಟ್ಸ್ ಮೊದಲಿಗನಿರಬಹುದೇನೋ,(ಅಲ್ಲವೆಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತಿದೆ)ಆದರೆ ಜಗತ್ತಿನಲ್ಲಂತೂ ಅಲ್ಲವೇ ಅಲ್ಲ. ಈಜಿಪ್ಟಿನ ಅಮೋಟೆಪ್ ಇರಬಹುದು,ಕಶ್ಯಪ, ಅಗ್ನಿವೇಷ,ಚರಕ,ಸುಶ್ರುತ ಹೀಗೆ ಅನೇಕ ಮಂದಿ ಸಂಘಟಿತ, ವ್ಯವಸ್ಥಿತ ವೈದ್ಯ ವಿಜ್ಞಾನವನ್ನು ಪ್ರತಿಪಾದಿಸಿದ್ದಾರೆ,ಇದನ್ನು ಯೂರೋಪಿನ ಇತಿಹಾಸಕಾರರೇ ದಾಖಲಿಸಿದ್ದಾರೆ.

ಹಾಗಾದರೆ ಹಿಪ್ಪೋಕ್ರೇಟ್ಸ್ ಗಿಂತಲೂ ಮುನ್ನ ವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆಯನ್ನು ಕೊಟ್ಟಂತಹ ಅನೇಕರನ್ನು ಕಡೆಗಣಿಸಿ, ದಾಖಲಿತ ಇತಿಹಾಸವಿದ್ದೂ ಕೂಡ ಹಿಪ್ಪೋಕ್ರೇಟ್ಸ್ ಗೆ ಫಾದರ್ ಆಫ್ ಮೆಡಿಸಿನ್ ಸ್ಥಾನವನ್ನು ಕೊಟ್ಟು, ಅವನೇ ಶ್ರೇಷ್ಠ ಎಂದು ಅವನ ಶಪಥವನ್ನು ಜಗತ್ತಿನಾದ್ಯಂತ ಬೋಧಿಸುವ ವಸಾಹತುಶಾಹಿ ಮನಸ್ಥಿತಿ ಯಾತಕ್ಕಾಗಿ? ನಮ್ಮದೇ ಇರಬೇಕಾದರೆ ಯೂರೋಪಿನದ್ದು ಯಾಕೆ? ನಮ್ಮಲ್ಲಿ ಚಿನ್ನದ ೊಡವೆಗಳನ್ನು ಇಟ್ಟುಕೊಂಡು ಇತರರ ಬೆಳ್ಳಿಯ ಮೇಲೆ ಆಸೆ ಯಾಕೆ? ಅವನ ಶಪಥದಲ್ಲೂ ಸದ್ವಿಚಾರಗಳಿವೆ,ನಮ್ಮದರಲ್ಲೂ ಇವೆ.ನಾವು ನಮ್ಮದನ್ನ ಯಾಕೆ ಅಪ್ಪಿಕೊಳ್ಳಬಾರದು,ಯೂರೋಪಿನವರು ತಮ್ಮ ಶ್ರೇಷ್ಠತೆಯನ್ನ ಜಗತ್ತಿನಾದ್ಯಂತ ಸಾರಲು ಅವಿರತ ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ ಅದು ಒಳ್ಳೆಯ ಮಾರ್ಗದಲ್ಲಿ ಆದರೂ ಸರಿ,ಅಥವಾ ವಾಮಮಾರ್ಗದಲ್ಲಾದರೂ ಸರಿ.1638-40ರಲ್ಲಿ ಪೆರುವಿನ ಪಾರಂಪರಿಕ ವೈದ್ಯ ವಿಜ್ಞಾನದಲ್ಲಿ ಬಳಕೆಯಲ್ಲಿದ್ದ quinine ಎಂಬ ಮಲೇರಿಯಾ ಔಷಧಿಯನ್ನು ಪೆರುವಿನ ವೈಸರಾಯ್ ಹೆಂಡತಿ ಕೌಂಟೆಸ್ ಸಿಮ್ ಕಾನ್ ಯೂರೋಪಿಗೆ ಪರಿಚಯಿಸಿದ್ದಳು.ಅದನ್ನು ಐರೋಪ್ಯರೇ ಕಂಡು ಹಿಡಿದದ್ದು ಎಂದು ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು.ಅದರ ಮೇಲೆ ಸಂಶೋಧನೆಯನ್ನೇನೋ ಮಾಡಿದ್ದರು. ಆದರೆ ಕಂಡುಹಿಡಿದದ್ದು ಮಾತ್ರ ಅವರಲ್ಲ.ಪೆರುವಿನ ನತದೃಷ್ಠ ಆದಿವಾಸಿಗಳು, ಆ ಔಷಧಿಯನ್ನು ಸಂಸ್ಕರಿಸಲಾಗಿದ್ದ ಮರಕ್ಕೆ ಸಿಂಕಾನ್ ಟ್ರೀ ಎಂದೇ ಹೆಸರಿಡಲಾಗಿದೆ. ಐರೋಪ್ಯರೇ ಪಾಶ್ಚಿಮಾತ್ಯರೇ ಶ್ರೇಷ್ಠ ಬಿಡಿ!

ಹಿಪ್ಪೋಕ್ರೇಟ್ಸ್ ಗಿಂತ ಮುಂಚೆ ಇಂದಿಗೂ ಪ್ರಸ್ತುತವಿರುವ (ಕೆಲವು ವಿಚಾರಗಳನ್ನು ಹೊರತುಪಡಿಸಿ)ವೈದ್ಯಕೀಯ ವಿಜ್ಞಾನವನ್ನು ಶಸ್ತ್ರ ವಿದ್ಯೆಯನ್ನು ಸುಶ್ರುತ ಅಭ್ಯಸಿಸಿದ್ದ,ಸುಶ್ರತನ ಗೌರವಾರ್ಥ ಆಸ್ಟ್ರೇಲಿಯಾದ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ನಲ್ಲಿ ಅವನ ಪ್ರತಿಮೆಯನ್ನ ಫಾದರ್ ಆಫ್ ಸರ್ಜರಿ ಎಂಬ ಅಡಿಬರಹದೊಂದಿಗೆ ಸ್ಥಾಪಿಸಲಾಗಿದೆ.ಅನೇಕ ಪ್ಲಾಸ್ಟಿಕ್ ಸರ್ಜನ್ ಕಾನ್ಫರನ್ಸ್ಗಳಲ್ಲಿ  ಅವನ ಶ್ಲೋಕವನ್ನು ಉಚ್ಛರಿಸಿ ಗೌರವ ಸೂಚಿಸಲಾಗುತ್ತದೆ.ಹಿಪ್ಪೋಕ್ರೇಟ್ಸ್ಗಿಂತ ಮುಂಚೆ ಸರ್ಜರಿಯೇ ಇತ್ತು ಎನ್ನುವುದಾದರೆ ಸಂಘಟಿತ ವೈದ್ಯಕೀಯ ಇದ್ದಿರಲೇಬೇಕಲ್ವ? ಅದರ ಬಗ್ಗೆ ದಾಖಲಿತ ಇತಿಹಾಸವೇಇದೆ. ಬ್ರಿಟೀಷರೇ ದಾಖಲಿಸಿ ಸಂಗ್ರಹಿಸಿ ಯೂರೋಪಿಗೆ ಕೊಂಡೊಯ್ದು ಅಧ್ಯಯನವನ್ನು ಮಾಡಿ ನಮಗೆ ಹೊಸದೆಂದು ಪರಿಚಯಿಸಿದ್ದಾರೆ.ಎಲ್ಲರ ಕೊಡುಗೆಯಿಂದ ವೈದ್ಯಕೀಯ ಕ್ಷೇತ್ರ ಬೆಳೆದುಬರುತ್ತಿದೆ.ಐರೋಪ್ಯರ ಕೊಡುಗೆಯೂ ಇದೆ,ಗೌರವಿಸೋಣ,ಆದರೆ ನಮ್ಮದನ್ನ ಮರೆಯದಿರೋಣ.ಟ್ಯಾಗೋರರೂ ಶ್ರೇಷ್ಠ ,ಷೇಕ್ಸಪಿಯರ್ ಕೂಡ ಶ್ರೇಷ್ಠ.ಆದರೆ ನಾವು ಪ್ರೇರಣೆಯನ್ನು ಪಡೆಯಬೇಕಾದದ್ದು ಟ್ಯಾಗೋರರಿಂದ, ನಮ್ಮವರಿಂದ.ನಮ್ಮ ಸಂಸ್ಕೃತಿ,ವಿಚಾರಗಳಿಂದ.ಇದನ್ನೇ ಎನ್.ಎಂ.ಸಿ ಹೇಳಿದ್ದು.ಇದು ವಿಜ್ಞಾನದ ನಾಶವೂ ಅಲ್ಲ,ಅಳಲೇಕಾಯಿ ಪಾಂಡಿತ್ಯವೂ ಅಲ್ಲ.ಯೂರೋಪಿನದ್ದೆಲ್ಲವೂ ಶ್ರೇಷ್ಠ,ನಮ್ಮದೆಲ್ಲವೂ ಕನಿಷ್ಠ ಅನ್ನುವ ದಾಸ್ಯದ ಮನಸ್ಥಿತಿಯಿಂದ ಹೊರಬರಬೇಕು ಎನ್ನುವ ನಿಟ್ಟಿನಲ್ಲಿ ಎನ್.ಎಂ.ಸಿ ಅನೇಕ ಯೋಜನೆಗಳನ್ನು ರೂಪಿಸಿದೆ.ಯೋಗ,ಪ್ರಾಣಾಯಾಮಗಳ ಕಡೆಗೂ ಇದೇ ರೀತಿಯ ಕೀಳರಿಮೆ ನಮ್ಮಲ್ಲಿತ್ತು ಆದರೆ ಇವತ್ತು,ಅವುಗಳು ಜಗದ್ವ್ಯಾಪಿಯಾಗಿದೆ.ಎಲ್ಲ ವೈದ್ಯ ಪದ್ಧತಿಯೂ ವಿಭಿನ್ನ ಮತ್ತು ಶ್ರೇಷ್ಠ. ಆಧುನಿಕತೆಯ ಹೆಸರಿನಲ್ಲಿ ಪಾರಂಪರಿಕ ವೈದ್ಯ ಪದ್ಧತಿಗಳನ್ನು ಕಡೆಗಣಿಸುವುದು ಸಲ್ಲ.ಎಲ್ಲ ನದಿಗಳೂ ಸಮುದ್ರಕ್ಕೆ ಸೇರುವಂತೆ,ಎಲ್ಲಾ ವೈದ್ಯಕೀಯ ಪದ್ಧತಿಗಳ ಗುರಿ ಸ್ವಸ್ಥ ಸಮಾಜದ ನಿರ್ಮಾಣವೇ ಆಗಿದೆ.ಭಾರತದ ಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಾಂಸ್ಕೃತಿಕ ಪುನರುತ್ಥಾನವಾಗುತ್ತಿದೆ.ವೈದ್ಯಕೀಯ ಕ್ಷೇತ್ರದಲ್ಲೂ ಆಗುತ್ತದೆ.ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಲಿ. “ಶ್ರೇಯೋ ಭೂಯಾತ್ ಸಕಲ ಜನಾನಃ”.

  • email
  • facebook
  • twitter
  • google+
  • WhatsApp
Tags: charakaeuropeindiaindian medical systemmedicine

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಚಿರನಿದ್ರೆಗೆ ತೆರಳಿದ ಚೆಂಬೆಳಕಿನ ಕವಿ

ಚಿರನಿದ್ರೆಗೆ ತೆರಳಿದ ಚೆಂಬೆಳಕಿನ ಕವಿ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

RSS Sahsarkaryavah Suresh Sony awards ‘Dr Vishnu Shridhar Wakankar Puraskar’ to Prof Satishchandra

RSS Sahsarkaryavah Suresh Sony awards ‘Dr Vishnu Shridhar Wakankar Puraskar’ to Prof Satishchandra

January 21, 2014

UDUPI: Advani says ‘Enough is Enough’ to PM

October 31, 2011

ಅಂಬೇಡ್ಕರ್ ದೂರದೃಷ್ಟಿತ್ವ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನವನ್ನು ಸ್ಮರಿಸೋಣ

August 5, 2019
Kolar Court declares Jail for 11 accused for charges on forcible Conversion of Villagers

Kolar Court declares Jail for 11 accused for charges on forcible Conversion of Villagers

March 31, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In