• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ ನಾಗರಾಜ್ ಅವರ ಸ್ಪಷ್ಟೀಕರಣ

Vishwa Samvada Kendra by Vishwa Samvada Kendra
November 21, 2016
in Others
250
0
ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ ನಾಗರಾಜ್ ಅವರ ಸ್ಪಷ್ಟೀಕರಣ

Statement by V Nagaraj-RSS-Nov-21-2016-page-001

491
SHARES
1.4k
VIEWS
Share on FacebookShare on Twitter
ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ ನಾಗರಾಜ್ ಅವರ ಸ್ಪಷ್ಟೀಕರಣ

ನವೆಂಬರ್ 21, 2016, ಬೆಂಗಳೂರು.

ಸ್ಪಷ್ಟೀಕರಣ

ಕಳೆದ ಅಕ್ಟೋಬರ್ 28, 2016 ರಂದು ಬೆಂಗಳೂರಿನಲ್ಲಿ ನಾನು ತೆಗೆದುಕೊಂಡ ಪತ್ರಿಕಾಗೋಷ್ಠಿಯ ನಂತರ ಶ್ರೀರಾಮಚಂದ್ರಾಪುರ ಮಠದ ಭಕ್ತರಲ್ಲಿ ಉಂಟಾದ ಗೊಂದಲ-ಸಂದೇಹಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ –

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

ಕಳೆದ 2 ವರ್ಷಗಳ ಹಿಂದೆ ತುಮಕೂರಿನಲ್ಲಿ ವಿಶ್ವ ಹಿಂದು ಪರಿಷದ್ ಆಯೋಜಿಸಿದ್ದ ‘ಕರ್ನಾಟಕ ರಾಜ್ಯ ಸಂತ ಸಮ್ಮೇಳನ’ದಲ್ಲಿ 400ಕ್ಕೂ ಹೆಚ್ಚು ಸಂತರು,ಮಠಾಧಿಪತಿಗಳು ಪಾಲ್ಗೊಂಡಿದ್ದರು.  ಅಲ್ಲಿನ ಗೋಷ್ಠಿಯೊಂದರಲ್ಲಿ ಸಂತರೊಬ್ಬರು ಸಂಘದ ಸರಸಂಘಚಾಲಕರನ್ನು ‘ಮಠಗಳು ಸಂಕಷ್ಟಕ್ಕೆ ಎದುರಾದಾಗ ಸಂಘವುಮಠಗಳ ಬೆಂಬಲಕ್ಕೆ ನಿಲ್ಲುವುದೇ?’ ಎಂದು ಪ್ರಶ್ನಿಸಿದ್ದರು.

ಆಗ ಸರಸಂಘಚಾಲಕ ಶ್ರೀ ಮೋಹನ್‌ಜೀ ಭಾಗವತರು ಉತ್ತರ ನೀಡುತ್ತ ಸಂಘವು ಅವಶ್ಯವಾಗಿ ಬೆಂಬಲ ನೀಡುತ್ತದೆ.  ಸಮಾಜ ವಿರೋಧಿ ಶಕ್ತಿಗಳಿಂದ, ಸಮಸ್ಯೆ ಎದುರಾದಲ್ಲಿ ಸ್ವಯಂಸೇವಕರು ಮಠದ ಸಹಕಾರಕ್ಕೆ ಬರುತ್ತಾರೆ.  ಆದರೆ ಈ ಮೂರು ಸಂದರ್ಭಗಳಲ್ಲಿ –

(1)     ಮಠದ ಭಕ್ತಾದಿಗಳಲ್ಲಿ ಉತ್ತರಾಧಿಕಾರಿ ಮುಂತಾದ ವಿಷಯಗಳಲ್ಲಿ ಗುಂಪುಗಳಾಗಿ ವಿವಾದ ತಲೆದೋರಿದಾಗ.

(2)     ಭೂಮಿ-ಚಾರಿತ್ರ್ಯ-ಹಣದಂತಹ ವಿಷಯಗಳಲ್ಲಿ ಮಠವು ವಿವಾದಕ್ಕೆ ಒಳಗಾದಾಗ.

(3)     ಸಂವಿಧಾನ ಉಲ್ಲಂಘನೆಯ ಆರೋಪ ಬಂದಾಗ

ಸಂಘವು ‘ತಟಸ್ಥ ನೀತಿ‘ಯನ್ನು ಅನುಸರಿಸುತ್ತದೆ ಎಂದು ಸಂಘದ ನಿಲುವನ್ನು ಸ್ಪಷ್ಟವಾಗಿ ತಿಳಿಸಿದ್ದರು.

ಏಕೆಂದರೆ ಇಂಥ ಆರೋಪಗಳ ಬಗ್ಗೆ ತೀರ್ಮಾನ ನೀಡುವುದು ಸಂಘದ ವ್ಯಾಪ್ತಿಯಲ್ಲಿ ಬರುವುದಿಲ್ಲ.  ಬಹಳಷ್ಟು ಬಾರಿ ನ್ಯಾಯಾಲಯದ ತೀರ್ಮಾನವೇ ಇಂತಹ ವಿಷಯಗಳಲ್ಲಿ ಅಂತಿಮವಾಗುತ್ತದೆ.  ಹಾಗಾಗಿ, ತೀರ್ಮಾನ ಆಗುವವರೆಗೂ ತಟಸ್ಥವಾಗಿಯೇ ಉಳಿಯುತ್ತದೆ.

ದೇಶದ ಬೇರೆ ಬೇರೆ ಭಾಗಗಳಲ್ಲಿ ಮಠ-ಮಂದಿರಗಳು ಈ ರೀತಿ ವಿಷಯಗಳಲ್ಲಿ ವಿವಾದಕ್ಕೆ ಒಳಗಾದಾಗಲೂ ಸಂಘವು ಇದೇ ತಟಸ್ಥ ನಿಲುಮೆಯನ್ನುಅನುಸರಿಸಿದೆ.  ಶ್ರೀರಾಮಚಂದ್ರಾಪುರ ಮಠದ ವಿಷಯದಲ್ಲೂ ಸಂಘದ್ದು ಇದೇ ‘ತಟಸ್ಥ ನೀತಿ’.

ಮಠದ ಬಗ್ಗೆ ಸಂಘಕ್ಕೆ ಗೌರವ-ಶ್ರದ್ಧೆಗಳು ಇದ್ದೇ ಇದೆ.  ಮಠದ ಧಾರ್ಮಿಕ-ಸಾಮಾಜಿಕ-ಸಾಂಸ್ಕೃತಿಕ ಭಾವಜಾಗೃತಿಯ ಕಾರ್ಯಕ್ರಮ-ಅಭಿಯಾನಗಳಲ್ಲಿ ಸಂಘದ ಸ್ವಯಂಸೇವಕರು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸುತ್ತಲೇ ಬಂದಿದ್ದಾರೆ.  ವಿಶ್ವ ಗೋ ಸಮ್ಮೇಳನದಲ್ಲಿ ಅಂದಿನ ಸರಸಂಘಚಾಲಕ ಶ್ರೀಕು.ಸೀ.ಸುದರ್ಶನಜೀಯವರು ಭಾಗವಹಿಸಿದ್ದಷ್ಟೇ ಅಲ್ಲ; ಅನೇಕ ಸಂಘದ ಕಾರ್‍ಯಕರ್ತರು ಅಲ್ಲಿನ ವ್ಯವಸ್ಥಾ ವಿಭಾಗಗಳಲ್ಲಿ ಹೊಣೆ  ಹೊತ್ತು ಪರಿಶ್ರಮಗೈದಿದ್ದಾರೆ.   ವಿಶ್ವ ಮಂಗಲ ಗೋಗ್ರಾಮ ಯಾತ್ರೆಯನ್ನು ಭಾರತದಾದ್ಯಂತ ನಡೆಸಿ ಯಶಸ್ವಿಗೊಳಿಸುವಲ್ಲಿ ಸಂಘದ ಹಲವಾರು ಕಾರ್ಯಕರ್ತರು ಮಹತ್ವದ ಭೂಮಿಕೆಯನ್ನು ನಿಭಾಯಿಸಿದ್ದಾರೆ.  ಇಂಥ ಕಾರ್ಯಗಳಿಗೆ ಸ್ವಯಂಸೇವಕರ ಸಹಕಾರ ಎಂದಿನಂತೆ ಮುಂದುವರಿಯುವುದರಲ್ಲಿ ಯಾವುದೇ ಸಂಶಯಬೇಡ.

ಒಟ್ಟಿನಲ್ಲಿ ಸಂಘದ ನಿಲುವನ್ನು ಸ್ವಷ್ಟಮಾಡಿದ್ದೇನೆ. ನನ್ನ ಮಾತಿನಿಂದ ಯಾರಿಗಾದರೂ ತಪ್ಪು ತಿಳುವಳಿಕೆ ಉಂಟಾಗಿದ್ದಲ್ಲಿ, ನೋವುಂಟಾಗಿದ್ದಲ್ಲಿ ನಾನು ವಿಷಾದ ವ್ಯಕ್ತಪಡಿಸುತ್ತಿದ್ದೇನೆ.

ಇತಿ ನಿಮ್ಮವ,

ವಿ. ನಾಗರಾಜ್

ಕ್ಷೇತ್ರ ಸಂಘಚಾಲಕ್, ಆರೆಸ್ಸೆಸ್

ನವೆಂಬರ್ 21, 2016, ಬೆಂಗಳೂರು

Statement by V Nagaraj-RSS-Nov-21-2016-page-001
Statement by V Nagaraj-RSS-Nov-21-2016-page-001
  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
‘ಸೂರೂಜಿ ಅಮರ ; ನೆನಪುಗಳಿಗೆ ಸಾವಿಲ್ಲ’ : ನೇರನೋಟ – ದು ಗು ಲಕ್ಷ್ಮಣ್

'ಸೂರೂಜಿ ಅಮರ ; ನೆನಪುಗಳಿಗೆ ಸಾವಿಲ್ಲ' : ನೇರನೋಟ - ದು ಗು ಲಕ್ಷ್ಮಣ್

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಏ. 21 ರಿಂದ ಪ್ರಾರಂಭಗೊಳ್ಳಲಿದೆ ಸಂಸ್ಕೃತ ಭಾರತಿಯ ‘ಗೇಹೇ ಗೇಹೇ ರಾಮಾಯಣಮ್’ ಎಂಬ ರಾಮಾಯಣ ಪಾರಾಯಣ ಅಭಿಯಾನ.

ಶ್ರೀರಾಮ ವಿಶ್ವವಂದಿತ; ಭಾರತದ ಅಸ್ಮಿತೆಯ ಪ್ರತೀಕ

April 21, 2021
Akhil Bharatiya Pratinidhi Sabha-2011-Puttur-Karnataka

Akhil Bharatiya Pratinidhi Sabha-2011-Puttur-Karnataka

March 24, 2011
RSS inspired Bharatiya Mazdoor Sangh (BMS) observes 61st Foundation Day across Bharat

RSS inspired Bharatiya Mazdoor Sangh (BMS) observes 61st Foundation Day across Bharat

July 23, 2016
RSS Karnataka Pranth Sharirik Varg held at Channenahalli; Anil Oak addressed Valedictory

RSS Karnataka Pranth Sharirik Varg held at Channenahalli; Anil Oak addressed Valedictory

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In