• Samvada
  • Videos
  • Categories
  • Events
  • About Us
  • Contact Us
Friday, January 27, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

Samskrit Bharati’s Cha Mu Krishnashastry to receive Padmashri Award 2017

Vishwa Samvada Kendra by Vishwa Samvada Kendra
January 25, 2017
in Others
247
0
Samskrit Bharati’s Cha Mu Krishnashastry to receive Padmashri Award 2017

Cha Mu Krishnashastry

491
SHARES
1.4k
VIEWS
Share on FacebookShare on Twitter

New Delhi January 25, 2017: RSS inspired forum for upliftment and promotion of Samskrit Language, Samskrita Bharati’s National functionary and veteran Samskrit Scholar Cha Mu Krishnashatry to one among the Padmashri Awardees for the year 2017.

Cha Mu Krishnashastry

About Chamu Krishna Shastry

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

Sri. Chamu Krishna Shastry is an ardent educationist with a unique and path-breaking mission to practice and propagate Sanskrit as a language to restore India’s civilizational status in the comity of nations. He believes that Sanskrit is also the unique glue for social harmony in the society. Chamu Krishna Shastry is a trailblazer in teaching Sanskrit as an active conversational language rather than a grammatical language of the past. Chamu Krishna Shastry and friends started an organization more than three decades ago to promote Samskrit as a spoken language and now “Samskrita Bharati” spans all corners of the country and has presence in many major countries such as the USA, Canada, UK, Australia and West Asia.

Padmashri Award announced for Chamu is in fact for Samskrita Bharati, its works & its dedicated Karyakartas.I am only a representative of SB pic.twitter.com/LHGJGns0MY

— Chamu KrishnaShastry (@ChamuKShastry) January 25, 2017

Chamu Krishna Shastry’s efforts led to the development of the very popular 10 day Spoken Sanskrit Camps of Samskrita Bharati. These camps have now trained more than 90 lakhs of people in Conversational Sanskrit.  His efforts have also led many universities and colleges to adopt the communicative teaching method for Sanskrit.  Few unique experiments like “Samskrit Homes” and “Samskrit mother tongue Children” are popular. He has inspired a dedicated work force for Samskrit across the country which is leading the propagation work at various states. Thousands of people learn Samskrit through various courses offered through Samskrita Bharati.  In USA, SAFL(Samskrit as a Foreign Language) is a popular course among the children of Indian origin.

He has authored 13 books in Samskrit. “Saraswati Seva” is project through which hundreds of books from other Indian & foreign Languages are translated in to Samskrit. To promote young authors and modern books in Samskrit he had conceived events like “Samskrit Book Fair”, & “Sahityotsava”.

His extensive experience in education and teaching methods has led to his being on the Board of Rashtriya Sanskrit Sansthan and many other universities. He was also a member of the Central Government constituted Sanskrit Committee that developed the “Road Map for the Development of Sanskrit – Ten Year Perspective Plan” document in 2016.

Chamu Krishna Shastry is a sought-after speaker and he is very well known for his impressive and fiery oratory in Samskrit. He believes in the dictum of the Bhagavadgita to work towards a goal without expectations and has taken a personal vow of not accepting honors and awards.  He is a prolific writer and has written a dozen books and numerous articles in Samskritam.

श्री चमू कृष्ण शास्त्री वैश्विक समुदाय में भारत की सांस्कृतिक राशि की प्रतीक संस्कृत भाषा के माध्यम से भारतीय सभ्यता को पुनः प्रतिष्ठित करने वाले एक उत्साही शिक्षाविद् हैं। इनका स्पष्ट मानना है कि संस्कृत विश्व में सामाजिक समन्वय स्थापित करने की अद्भुत कुञ्जिका है। संस्कृत शिक्षण को जीवन्त सम्प्रेषण की भाषा का रूप देने वाले श्री चमू कृष्ण शास्त्री ने लगभग तीन दशक पूर्व अपने कुछ साथियों के साथ संस्कृत को दैनिक व्यवहार की भाषा के रूप में ढालने का स्वप्न देखा था। और, इसी स्वप्न को आकार देने हेतु ‘संस्कृत भारती’ संस्था का गठन किया था। आज यह संस्था विश्वव्यापी संस्था के रूप में विश्व को संस्कृत साहित्य में व्याप्त उदात्त वैचारिक जल से सिञ्चित कर रही है। इसकी शाखाएं अमरीका, कनाडा, यू.के., आस्ट्रेलिया एवं पूर्वी एशिया तक व्याप्त हैं।

श्री चमू कृष्ण शास्त्री ने संस्कृत भारती में सम्भाषणात्मक संस्कृत से सम्बद्ध दश दिवसीय संस्कृत शिबिरों को प्रारम्भ कर संस्कृत शिबिरों को एक नई दिशा प्रदान की। ये संस्कृत शिबिर अब तक प्रायः ९० लाख लोगों को संस्कृत सम्भाषण में दक्ष कर चुके हैं। इनके प्रयासों ने अनेकों विद्यालयों एवं विश्वविद्यालयों में सम्भाषणात्मक संस्कृत-शिक्षण सम्बन्धी पाठ्यक्रमों को प्रारम्भ करने की प्रेरणा प्रदान की है। ‘संस्कृत-गृह’ एवं ‘मातृभाषा के रूप में संस्कृत भाषी बच्चों’ सम्बन्धी योजना इनकी अनूठी योजना है। इनके प्रयासों से देश के विभिन्न राज्यों में शताधिक कार्यकर्ता संस्कृत प्रचार-प्रसार के कार्य में अहर्निश संलग्न हैं। संस्कृत भारती के विभिन्न पाठ्यक्रमों के द्वारा सहस्राधिक लोग संस्कृत के अध्ययन-अध्यापन में संलग्न हैं। अमरीका में ‘विदेशी भाषा के रूप में चलने वाला संस्कृत का पाठ्यक्रम’ इन्हीं के प्रयासों का परिणाम है।

इन्होंने संस्कृत सम्बन्धी संस्कृत में १३ पुस्तकों की रचना की है। इनके द्वारा प्रारम्भ की गई ‘सरस्वती योजना’ के अन्तर्गत अनेकों देशी एवं विदेशी भाषाओं की पुस्तकें संस्कृत में अनूदित की गईं। युवा पीढ़ी को लेखन के प्रति प्रेरित करने हेतु इनके द्वारा आयोजित किया गया ‘विश्व संस्कृत पुस्तक मेला’ एवं ‘संस्कृतसाहित्योत्सव’ अपने-आप में एक अनूठे एवं अति उत्साहपूर्ण प्रयास थे।

संस्कृत क्षेत्र में कृत विभिन्न कार्यों के कारण ये ‘राष्ट्रीय संस्कृत संस्थान’ सहित अनेकों विश्वविद्यालयों की विभिन्न समितियों के सदस्य हैं। भारत सरकार द्वारा गठित संस्कृत सम्बन्धी समिति के द्वारा तैयार किए गए ‘Road Map for the Development of Sanskrit- Ten Tear Perspective Plan’ (2016) के ये अभिन्न सदस्य रहे हैं।

श्री चमू कृष्ण शास्त्री संस्कृत में मन्त्रमुग्ध, प्रेरित एवं उत्तेजित करने वाले वक्ता व लेखक हैं। वे श्री मद्भगवद्गीता के सिद्धान्तों के अनुपालन में विश्वास करने वाले निष्कामी कार्यकर्ता हैं।

श्री चमू कृष्ण शास्त्री एक प्रेरणादायी व्यक्तित्व के प्रतीक हैं।

ಹಿರಿಯ ಸಂಸ್ಕೃತ ವಿದ್ವಾಂಸ ಹಾಗೂ ಸಂಸ್ಕೃತ ಭಾರತೀಯ ರಾಷ್ಟ್ರೀಯ ಪದಾಧಿಕಾರಿ ಚ ಮೂ ಕೃಷ್ಣಶಾಸ್ತ್ರಿಯವರು  2017 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶ್ರೀ ಚ ಮು ಕೃಷ್ಣಶಾಸ್ತ್ರಿಯವರು ಸಂಸ್ಕೃತ ಭಾಷೆಯ ಬಳಕೆ ಮತ್ತು ಪ್ರಚಾರಕ್ಕಾಗಿ ಹೊಸ ಹಾದಿಯನ್ನೇ ಹಿಡಿದು ಕೈಗೊಂಡು ವಿಶ್ವದ ಇತರೆ ದೇಶಗಳ ಸಾಲಿನಲ್ಲಿ  ಭಾರತದ ನಾಗರಿಕತೆಯ ಸ್ಥಾನಮಾನವನ್ನು ಮರಳಿ ಸ್ಥಾಪಿಸಿದ ಶಿಕ್ಷಣತಜ್ಞರು. ಸಂಸ್ಕೃತವೇ ಸಮಾಜದಲ್ಲಿ ಸೌಹಾರ್ದತೆಯನ್ನು ಮೂಡಿಸುವ ಅತಿವಿಶಿಷ್ಟ ಬಂಧ ಎಂದು ಅವರು ನಂಬಿದ್ದಾರೆ. ಹಿಂದೆ ಕಲಿಸುತ್ತಿದ್ದ ವ್ಯಾಕರಣಾತ್ಮಕ ಮಾದರಿಯಲ್ಲಿ ಸಂಸ್ಕೃತವನ್ನು ಕಲಿಸುವುದರ ಬದಲಿಯಾಗಿ ಕ್ರಿಯಾರೂಪದಲ್ಲಿ ಸಂಭಾಷಣೆಯ ಭಾಷೆಯಾಗಿ ಕಲಿಸುವ ಅಭಿಯಾನವನ್ನು ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ಯಶಸ್ವಿಯಾಗಿ ರೂಪಿಸಿ ಮುನ್ನಡೆಸಿದರು. ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉತ್ತೇಜಿಸುವುದಕ್ಕೆಂದು ಮೂರು ದಶಕಗಳ ಹಿಂದೆ ಅವರು ಮತ್ತು ಅವರ ಮಿತ್ರರು ಸೇರಿ `ಸಂಸ್ಕೃತ ಭಾರತಿ’ ಸಂಘಟನೆಯನ್ನು ಆರಂಭಿಸಿದರು. ಈಗ ಸಂಸ್ಕೃತ ಭಾರತಿಯು ಭಾರತದ ಮೂಲೆ ಮೂಲೆಗಳಲ್ಲಿ ಹರಡಿದೆ; ಅಮೆರಿಕಾ, ಕೆನಡಾ, ಇಂಗ್‌ಎಂಡ್‌, ಆಸ್ಟ್ರೇಲಿಯಾ ಮತ್ತು ಪಶ್ಚಿಮ ಏಶ್ಯಾ ದೇಶಗಳಲ್ಲಿ ಈ ಸಂಘಟನೆಯು ಪ್ರಬಲ ಅಸ್ತಿತ್ವವನ್ನು ಹೊಂದಿದೆ.

ಶ್ರೀ ಚ ಮು ಕೃಷ್ಣಶಾಸ್ತ್ರಿಯವರ ಪ್ರಯತ್ನಗಳಿಂದ 10 ದಿನಗಳಲ್ಲಿ ಸಂಸ್ಕೃತವನ್ನು ಸಂಭಾಷಣಾ ಭಾಷೆಯಾಗಿ ಕಲಿಸುವ ಶಿಬಿರಗಳು ರೂಪುಗೊಂಡವು. ಈ ಶಿಬಿರಗಳಿಂದ ಈವರೆಗೆ ೯೦ ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತವನ್ನು ಕಲಿಸಲಾಗಿದೆ. ಅವರ ಪ್ರಯತ್ನಗಳಿಂದ ಹಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂಸ್ಕೃತಕ್ಕಾಗಿ ಸಂವಹನಾ  ಶಿಕ್ಷಣ ವಿಧಾನಗಳನ್ನು ರೂಪಿಸಲಾಗಿದೆ. `ಸಂಸ್ಕೃತ ಮನೆಗಳು’, `ಸಂಸ್ಕೃತ ಮಾತೃಭಾಷಾ ಮಕ್ಕಳು’ – ಈ ಪ್ರಯೋಗಗಳೂ ಅಪಾರ ಯಶಸ್ಸನ್ನು ಕಂಡಿವೆ. ಅವರು ಸಂಸ್ಕೃತಪ್ರಚಾರಕ್ಕಾಗಿ ಒಂದು ದೊಡ್ಡ ಕಾರ್ಯಪಡೆಗೇ ಸ್ಫೂರ್ತಿಯಾಗಿದ್ದಾರೆ; ಈ ಕಾರ್ಯಕರ್ತರು ಈಗ ಹಲವು ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಕೃತ ಭಾರತಿಯು ನೀಡುತ್ತಿರುವ ಹಲವು ಸಂಸ್ಕೃತ ಭಾಷಾ ಕಲಿಕೆ ಕೋರ್ಸುಗಳನ್ನು ಸಾವಿರಾರು ಜನರು ಕಲಿಯುತ್ತಿದ್ದಾರೆ. ಅಮೆರಿಕಾದಲ್ಲಿ ಎಸ್‌ಎಎಫ್‌ಎಲ್‌ (SAFL ) ಎಂಬುದು ಅಲ್ಲಿನ ಭಾರತೀಯ ಮೂಲದ ಮಕ್ಕಳಲಿ ತುಂಬಾ ಜನಪ್ರಿಯವಾಗಿರುವ  ಕೋರ್ಸ್‌.

ಶ್ರೀ ಚ ಮು ಕೃಷ್ಣಶಾಸ್ತ್ರಿಯವರು ಸಂಸ್ಕೃತದಲ್ಲಿ 14 ಪುಸ್ತಕಗಳನ್ನು ಬರೆದಿದ್ದಾರೆ. `ಸರಸ್ವತಿ ಸೇವಾ’ ಎಂಬ ಯೋಜನೆಯ ಮೂಲಕ ನೂರಾರು ಭಾರತೀಯ ಮತ್ತು ವಿದೇಶಿ ಭಾಷೆಗಳ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದಿಸಲಾಗುತ್ತಿದೆ. ಸಂಸ್ಕೃತದಲ್ಲಿ ಆಧುನಿಕ ವಿಷಯಗಳ ಪುಸ್ತಕಗಳನ್ನು ಬರೆಯಲು ಮತ್ತು ಯುವ ಲೇಖಕರನ್ನು ಪ್ರೋತ್ಸಾಹಿಸಲು ಅವರು `ಸಂಸ್ಕೃತ ಪುಸ್ತಕ ಮೇಳ’ ಮತ್ತು `ಸಾಹಿತ್ಯೋತ್ಸವ’ಗಳನ್ನು ಸಂಘಟಿಸಿದ್ದಾರೆ.

ಶಿಕ್ಷಣ ಮತ್ತು ಕಲಿಕಾ ವಿಧಾನದಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಹಿನ್ನೆಲೆಯಲ್ಲಿ ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ರಾಷ್ಟ್ರೀಯ ಸಂಸ್ಕೃತ ಪ್ರತಿಷ್ಠಾನ ಮತ್ತು ಹಲವು ವಿಶ್ವವಿದ್ಯಾಲಯಗಳ ಮಂಡಳಿಗಳಲ್ಲಿ ಸದಸ್ಯರಾಗಿದ್ದಾರೆ. `ಸಂಸ್ಕೃತದ ಅಭಿವೃದ್ಧಿಗಾಗಿ ಒಂದು ಮಾರ್ಗಸೂಚಿ – ಹತ್ತು ವರ್ಷಗಳ ದೃಷ್ಟಿಕೋನ ಯೋಜನೆ’ ವರದಿಯನ್ನು ೨೦೧೬ರಲ್ಲಿ ಸಲ್ಲಿಸಿದ ಕೇಂದ್ರ ಸರ್ಕಾರವು ರಚಿಸಿದ್ದ ಸಂಸ್ಕೃತ ಸಮಿತಿಯಲ್ಲಿ ಅವರೂ ಒಬ್ಬ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಶ್ರೀ ಚ ಮು ಕೃಷ್ಣಶಾಸ್ತ್ರಿಯವರು ತುಂಬಾ ಬೇಡಿಕೆಯಲ್ಲಿರುವ ಜನಪ್ರಿಯ ಭಾಷಣಕಾರರು. ಅವರು ಸಂಸ್ಕೃತದಲ್ಲಿ ಎಲ್ಲರಿಗೂ ತಿಳಿಯುವಂತಹ ಮನೋರಂಜನಾತ್ಮಕ, ಶಿಕ್ಷಣಾತ್ಮಕ ಶೈಲಿಯಲ್ಲಿ ನಿರರ್ಗಳವಾಗಿ, ಪ್ರಖರವಾಗಿ ಮಾತನಾಡಬಲ್ಲ ಪರಿಣತರು. ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯ ನಿರ್ವಹಿಸಬೇಕೆಂಬ ಭಗವದ್ಗೀತೆಯ ನೀತಿಯಂತೆಯೇ ನಡೆದುಕೊಳ್ಳುತ್ತಿರುವ ಶ್ರೀ ಚ ಮು ಕೃಷ್ಣಶಾಸ್ತ್ರಿಯವರು ಇಂದು ಭಾರತದಲ್ಲಿ ಸಂಸ್ಕೃತ ಭಾಷೆಯನ್ನು ಜನರತ್ತ ಒಯ್ದ ಭಾಷಾ ಕಾರ್ಯಕರ್ತರಾಗಿದ್ದಾರೆ.

1956ರ ಜನವರಿ 23ರಂದು ಜನಿಸಿದ ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ಮೂಲತಃ ಕರ್ನಾಟಕದ ದಕ್ಷಿಣ ಕನ್ನಡದವರು. ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಶ್‌, ತುಳು ಮತ್ತು ತೆಲುಗು ಮುಂತಾದ ಹಲವು ಭಾಷೆಗಳನ್ನು ಬಲ್ಲ ಶ್ರೀಯತರು ಇತ್ತೀಚಿನವರೆಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

  • ರಾಷ್ಟ್ರೀಯ ಮ್ಯಾನುಸ್ಕ್ರಿಪ್ಟ್ಸ್‌ ಮಿಶನ್‌ನ ಕಾರ್ಯಕಾರಿ ಸಮಿತಿಯ ಸದಸ್ಯ
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಂಸ್ಕೃತ ಪರಿಷತ್ತಿನ ವಿಶೇಷ ಆಹ್ವಾನಿತ ಸದಸ್ಯರು
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಆಡಳಿತ ಮಂಡಳಿ ಸದಸ್ಯರು
  • ಗುಜರಾತ್ ಸರ್ಕಾರದ ವೇರವಲ್‌ನ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಳಯದ ಕಾರ್ಯಕಾರಿ ಸಮಿತಿಯ ಸದಸ್ಯರು
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೊಸದಿಲ್ಲಿಯ ಎಸ್‌ಎಲ್‌ಬಿಎಸ್‌ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು
  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ತಿರುಪತಿಯ ರಾಷ್ಟ್ರೀಯ ಸಂಸ್ಕೃತಿ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು

ಈ ಹಿಂದೆ ಸೇವೆ ಸಲ್ಲಿಸಿದ ವಿವರಗಳು

  • ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಂಸ್ಕೃತ ಭಾಷೆಯ ಜಿಐಎಸಿಯ ಮಾಜಿ ಸದಸ್ಯರು
  • ಭಾರತ ಸರ್ಕಾರದ ಸಂಸ್ಕೃತ ವರ್ಷ ಆಚರಣಾ ಕೇಂದ್ರೀಯ ಸಮಿತಿಯ ಮಾಜಿ ಸದಸ್ಯರು
  • ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿವಿಧ ಸಮಿತಿಗಳ ಮಾಜಿ ಸದಸ್ಯರು
  • ಸಿಬಿಎಸ್‌ಇ ಯ ಸಂಸ್ಕೃತ ಪಠ್ಯಪುಸ್ತಕ ಸಮಿತಿಯ ಮಾಜಿ ಸದಸ್ಯರು
  • ಎನ್‌ಸಿಇಆರ್‌ಟಿಯ ಸಂಸ್ಕೃತದ ಮೂಲಕ ಸಂಸ್ಕೃತ ಸಮಿತಿಯ ಮಾಝಿ ಸದಸ್ಯರು
  • ಯುಜಿಸಿಯ ಸರಲ ಸಂಸ್ಕೃತ ಶಿಕ್ಷಣ ಕೇಂದ್ರಂ ಸಮಿತಿಯ ಮಾಜಿ ಸದಸ್ಯರು
  • ಭಾರತ ಸರ್ಕಾರದ ಕೇಂದ್ರೀಯ ಸಂಸ್ಕೃತ ಮಂಡಳಿಯ ಮಾಜಿ ಸದಸ್ಯರು
  • ವಿವಿಧ ರಾಜ್ಯ ಸರ್ಕಾರಗಳ ಸಂಸ್ಕೃತ ಪಠ್ಯಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯಕ್ರಮಗಳ ಮಾಜಿ ಸಲಹೆಗಾರರು
  • `ಸಂಸ್ಕೃತ ಮತ್ತು ಕಂಪ್ಯೂಟರ್‌’ ಕುರಿತು ೧೯೮೬ರಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯ ಸದಸ್ಯರು
  • ೧೫ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಸಂಸ್ಕೃತದ ಮೂಲಕ ಸಂಸ್ಕೃತ ಶಿಕ್ಷಣ ತಂಡದ ಸಂಚಾಲಕರು

ಕೊಡುಗೆಗಳು

  • 1991ರಿಂದ ಸಂಸ್ಕೃತದ ರಂಗದಲ್ಲಿ ಶಿಕ್ಷಣಕ್ಕಾಗಿ  ಸಂಪೂರ್ಣ ಸಮಯವನ್ನು ನೀಡಿ ಸ್ವಯಂಸೇವಾ ಕಾರ್ಯಕರ್ತರಾಗಿದ್ದಾರೆ; ತನ್ಮೂಲಕ ಸಂಸ್ಕೃತವನ್ನೇ ತಮ್ಮ ಜೀವನಧ್ಯೇಯವನ್ನಾಗಿ ಮಾಡಿಕೊಳ್ಳಲು ಸಾವಿರಾರು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.
  • `ಸರಳ ಸಂಸ್ಕೃತ ಸಂಭಾಷಣಾ ಪದ್ಧತಿ’ ಎಂಬ ಹೊಸ ಸಂಸ್ಕೃತ ಭಾಷಾ ಕಲಿಕಾ ವಿಧಾನವನ್ನು ರೂಪಿಸಿದ್ದಾರೆ.
  • `ಸಂಸ್ಕೃತ ಸಂಭಾಷಣೆ ಚಳವಳಿ’ಯನ್ನು ೧೯೮೧ರಲ್ಲೇ ಆರಂಭಿಸಿ ೧೦ ದಿನಗಳ ಸಂಭಾಷಣಾ ಸಂಸ್ಕೃತ ಶಿಬಿರಗಳ ಮೂಲಕ ಸುಮಾರು ೯೦ ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತದಲ್ಲಿ ತರಬೇತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
  • ೧೯೮೩ರಲ್ಲಿ ಸಂಸತ್‌ ಸದಸ್ಯರಿಗೆ ಸಂಸತ್‌ ಭವನದಲ್ಲಿ ಹಿರಿಯ ಸಂಸದರಾದ ಶ್ರೀ ಎಲ್‌ ಕೆ ಆಡ್ವಾಣಿ, ಡಾ|| ಬಲರಾಂ ಜಾಖಡ್‌, ಡಾ|| ಕರಣ್‌ ಸಿಂಗ್‌ ಮುಂತಾದವರು ಭಾಗವಹಿಸಿದ್ದ ೧೦ ದಿನಗಳ ಸಂಸ್ಕೃತ ಸಂಭಾಷಣಾ ತರಗತಿಗಳನ್ನು ನಡೆಸಿ ಕೊಟ್ಟಿದ್ದಾರೆ.
  • ಸಂಭಾಷಣಾ ಸಂಸ್ಕೃತದಲ್ಲಿ ಪರಿಣತರಾಗುವಂತೆ ಒಂದು ಲಕ್ಷಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರಿಗೆ ತ ರಬೇತಿ ನೀಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
  • ೧೩ ಪುಸ್ತಕಗಳನ್ನು ಬರೆದಿದ್ದಾರಲ್ಲದೆ ಸಮಕಾಲೀನ ಸಂಗತಿಗಳ ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾರೆ.
  • ಸಂಸ್ಕೃತದ ಹಳ್ಳಿಗಳನ್ನು, ಸಂಸ್ಕೃತದ ಮನೆಗಳನ್ನು ರೂಪಿಸುವಲ್ಲಿ ಮತ್ತು ದೇಶದೆಲ್ಲೆಡೆಯ ಸಂಸ್ಕೃತ ಸಂಸ್ಥೆಗಳಲ್ಲಿ ಸಂಸ್ಕೃತದ ವಾತಾವರಣವನ್ನು ಮೂಡಿಸುವಲ್ಲಿ  ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
  • ಅಮೆರಿಕಾದಲ್ಲಿ ಎಸ್‌ಎಎಫ್‌ಎಲ್‌ (ವಿದೇಶಿ ಭಾಷೆಯಾಗಿ ಸಂಸ್ಕೃತ) ಆರಂಭಿಸುವಲ್ಲಿ ಕೊಡುಗೆ ನೀಡಿದ್ದಾರೆ.
  • ಬೆಂಗಳೂರಿನಲ್ಲಿ ನಡೆದ ವಿಶ್ವ ಸಂಸ್ಕೃತ ಪುಸ್ತಕ ಮೇಳ ಮತ್ತು ಉಜ್ಜಯಿನಿಯಲ್ಲಿ ನಡೆದ ಸಂಸ್ಕೃತ ಸಾಹಿತ್ಯೋತ್ಸವದ ಪ್ರಮುಖ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
  • ಸಂಸ್ಕೃತದಲ್ಲಿ `ಸಂಭಾಷಣಾ ಸಂದೇಶ’ ಎಂಬ ಬಹುವರ್ಣದ ಮ್ಯಾಗಜಿನ್‌ನ್ನು ಆರಂಭಿಸಿದ್ದಾರೆ; ಚಂದಮಾಮ ಸಂಚಿಕೆಗಳ ಸಂಸ್ಕೃತ ಆವೃತ್ತಿ ಪ್ರಕಟಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
  • ವಿವಿಧ ಭಾಷೆಗಳಿಂದ ಸುಮಾರು ೧೦೦೦ಕ್ಕೂ ಹೆಚ್ಚು  ಸಮಕಾಲೀನ ಸಾಹಿತ್ಯ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದ   ಮಾಡುವ `ಸರಸ್ವತೀ ಸೇವಾ ಯೋಜನೆ’ಯನ್ನು ಆರಂಭಿಸಿದ್ದಾರೆ.
  • ಸಂಸ್ಕೃತ ವಿಕಿಪೀಡಿಯ ಆರಂಭಿಸಲು ನೆರವಾಗಿ ಇಂಟರ್‌ನೆಟ್‌ನಲ್ಲಿ ಸಂಸ್ಕೃತದ ಪ್ರಮಾಣ ಹೆಚ್ಚುವಲ್ಲಿ ಶ್ರಮಿಸಿದ್ದಾರೆ.
  • ೧೦ ಭಾರತೀಯ ಭಾಷೆಗಳಲ್ಲಿ ಸಂಸ್ಕೃತ ಸಂಭಾಷಣಾ ಕೋರ್ಸ್‌‌ಗಳನ್ನು ಆರಂಭಿಸುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದಾರೆ.
  • ಸಂಸ್ಕೃತದಲ್ಲಿ ಸೃಜನಶೀಲ ಬರವಣಿಗೆ ಮತ್ತು ಅನುವಾದಗಳನ್ನು ಕೈಗೊಳ್ಳುವುದಕ್ಕಾಗಿ ಸುಮಾರು ೨೦ ಕಾರ್ಯಾಗಾರಗಳನ್ನು ನಡೆಸುವಲ್ಲಿ ಶ್ರಮಿಸಿದ್ದಾರೆ.
  • ಅಮೆರಿಕಾ, ಕೆನಡಾ, ಇಂಗ್‌ಎಂಡ್‌, ಆಸ್ಟ್ರೇಲಿಯಾ, ನೇಪಾಳ, ಯುಎಇ, ನೆದರ್‌ಲ್ಯಾಂಡ್‌, ಬೆಲ್ಜಿಯಂ, ಥೈಲ್ಯಾಂಡ್‌ ದೇಶಗಳಲ್ಲಿ ಸರ್ಕಾರದ ನೆರವಿಲ್ಲದೆಯೇಸಂಸ್ಕೃತ ಕಲಿಕೆ ಕುರಿತಂತೆ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಈ ದೇಶಗಳಲ್ಲಿ ಸಂಸ್ಕೃತ ಕಲಿಸುವ ಸ್ವಯಂಸೇವಾ ಗುಂಪುಗಳನ್ನು ಸ್ಥಾಪಿಸಿದ್ದಾರೆ.
  • ೧೯೮೭ರವರೆಗೆ ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರಿಗೆ ಕಾಶಿ ಪಂಡಿತ ಪರಿಷತ್‌ನಿಂದ `ಸಾರಸ್ವತ ಸುಧಾಕರ’ (೧೯೮೪) ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಂತಾರಾಷ್ಟ್ರೀಯ ಯುವ ವರ್ಷಾಚರಣೆ ಸಮಿತಿಯಿಂದ `ರಾಷ್ಟ್ರೀಯ ಯುವ ಪುರಸ್ಕಾರ’ (೧೯೮೫)  ದೊರಕಿದ್ದವು. ಆನಂತರ ಅವರು ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದು ಎಂಬ ನಿಲುವನ್ನು ತಾಳಿದ್ದು ಈವರೆಗೆ ಇನ್ನಾವುದೇ ಪ್ರಶಸ್ತಿಗಳನ್ನೂ ಸ್ವೀಕರಿಸಿರಲಿಲ್ಲ.

ಕೃತಿಗಳು

     
  ಜಾನೇ ಧರ್ಮಃ ಉತ ಪ್ರಯೋಗೇ? ಸಂಭಾಷಣಾ ಸಂಸ್ಕೃತ : ಏಕೆ?
  ಲಾಭಃ ಉತ ಹಾನಿಃ ಚಿಂತನಾಪ್ರದ ಲೇಖನಗಳು
  ನಿಮಿತ್ತಮಾತ್ರಂ ವಿಶ್ವ ಸಂಸ್ಕೃತ ಪುಸ್ತಕ ಮೇಳ ಕುರಿತು
  ನಿಮಿತ್ತಮಾತ್ರಂ (ಹಿಂದಿ) ವಿಶ್ವ ಸಂಸ್ಕೃತ ಪುಸ್ತಕ ಮೇಳ ಕುರಿತು
  ಪರಿಷ್ಕಾರಃ ವ್ಯಕ್ತಿವ ವಿಕಸನ ಕುರಿತ ಪುಸ್ತಕ
  ಪರಿವರ್ತನಂ ತಂಡ ನಾಯಕರಿಗೆ ಕೈದೀವಿಗೆ
  ಸಾವಧಾನಃ ಸ್ಯಾಮ ಇಂದಿನ ಸಂಸ್ಕೃತ ಕುರಿತ ಪ್ರಬಂಧಗಳು
  ಸಂಸ್ಕೃತಭಾರತೀ ಸಂಸ್ಕೃತ ಭಾರತೀ ಕುರಿತು ಪರಿಚಯ
  ಸಂಸ್ಕೃತಂ: ಸ್ವಾಟ್‌ ವಿಶ್ಲೇಷಣೆ ಸಂಸ್ಕೃತದ ಶಕ್ತಿ ಸಾಮರ್ಥ್ಯ ವಿಶ್ಲೇಷಣೆ
  ಸಂಸ್ಕರಣಂ ಸಂಸ್ಕೃತ ಪ್ರಚಾರದ ಬಗ್ಗೆ ಲೇಖನಗಳು
  ಸಪ್ತಾದಶೀ ಸಂಸ್ಕೃತ ಅಭಿವೃದ್ಧಿ ಕುರಿತ ಪ್ರಬಂಧಗಳು
  ಉತ್ತಿಷ್ಠಃ! ಮಾ ಸ್ವಪ್ತ!! ಸಂಸ್ಕೃತ ವಿದ್ವಾಂಸರಿಗೆ ಕರೆ

ವೈಚಾರಿಕಮ್                                                  ವೈಚಾರಿಕ ಲೇಖನಗಳು

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
RSS Celebrates 68th #RepublicDay, Sarasanghachalak hoists National Flag at Jamshedpur, Sarakaryavah at Pune

RSS Celebrates 68th #RepublicDay, Sarasanghachalak hoists National Flag at Jamshedpur, Sarakaryavah at Pune

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Sanghparivar’s Jagruta Mahila Vedike stages huge protest condemning Deralakatte Rape Incident

Sanghparivar’s Jagruta Mahila Vedike stages huge protest condemning Deralakatte Rape Incident

January 9, 2014
ನೇರನೋಟ: ಮತದಾರ ಪ್ರಭುವಿನ ನಾಡಿಮಿಡಿತ ಬಲ್ಲವರಾರು?

ನೇರನೋಟ: ಮತದಾರ ಪ್ರಭುವಿನ ನಾಡಿಮಿಡಿತ ಬಲ್ಲವರಾರು?

April 21, 2014
Pulse Polio Drops: RSS Sah Sarakaryavah Suesh Sony Bangalore Feb-24-2013.

Pulse Polio Drops: RSS Sah Sarakaryavah Suesh Sony Bangalore Feb-24-2013.

August 25, 2019
ABKM Day-1: Press breifing by Dr Manmohan VAIDYA

ABKM Day-1: Press breifing by Dr Manmohan VAIDYA

October 13, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In