• Samvada
  • Videos
  • Categories
  • Events
  • About Us
  • Contact Us
Saturday, April 1, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಹಿಂದು ಶರಣಾರ್ಥಿಗಳಿಗೆ ಶಾಶ್ವತ ಆಸರೆ ಏಕಿಲ್ಲ?

Vishwa Samvada Kendra by Vishwa Samvada Kendra
August 25, 2019
in Articles
250
0
ಹಿಂದು ಶರಣಾರ್ಥಿಗಳಿಗೆ ಶಾಶ್ವತ ಆಸರೆ ಏಕಿಲ್ಲ?
491
SHARES
1.4k
VIEWS
Share on FacebookShare on Twitter

ನೇರ ನೋಟ: Du Gu Lakshman

Pungava Lead-1

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಪಾಕಿಸ್ಥಾನದ ನಿರಾಶ್ರಿತ ಹಿಂದುಗಳಿಗೆ ಭಾರತ ಬಿಟ್ಟರೆ ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ. ಭಾರತವೇ ಅವರ ತವರು ನೆಲ. ಪಾಕ್‌ನಿಂದ ಶರಣಾರ್ಥಿಗಳಾಗಿ ಬಂದ ಅವರೆಲ್ಲರಿಗೂ ಸೂಕ್ತ, ಶಾಶ್ವತ ನೆಲೆ ಕಲ್ಪಿಸಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯ. ಇದಕ್ಕಾಗಿ ಕಾಯ್ದೆಗಳನ್ನು ಸರಳೀಕರಣಗೊಳಿಸಬೇಕು. ಕಾನೂನಿನ ಸಮ್ಮತಿಯಿಲ್ಲ ಎಂಬ ಸಬೂಬು ಹೇಳಿ ಶರಣಾರ್ಥಿಗಳನ್ನು ಮತ್ತೆ ಪಾಕಿಸ್ಥಾನಕ್ಕೆ ಅಟ್ಟುವುದು ಖಂಡಿತ ಮಾನವೀಯತೆ ಎನಿಸಿಕೊಳ್ಳುವುದಿಲ್ಲ.

ಪೂಜಾ, ದಿವ್ಯಾ ಮತ್ತು ಸನ್ನಿ ಮೂವರು ಸೋದರ ಸೋದರಿಯರು. ಪೂಜಾಳ ವಯಸ್ಸು ೧೪, ದಿವ್ಯಾಳದ್ದು ೧೨ ಮತ್ತು ಸನ್ನಿ ೧೦ ವರ್ಷದ ಪೋರ. ಈ ಮೂವರು ಕಿಶೋರರು ಕಳೆದ ಮಾರ್ಚ್ ೧೦ರಂದು ಪಾಕಿಸ್ಥಾನದಿಂದ ದಿಲ್ಲಿಗೆ ಬಂದಿದ್ದಾರೆ. ಅವರು ಅಲ್ಲಿಗೆ ಬಂದಿರುವುದು ದಿಲ್ಲಿಯ ಸೌಂದರ್ಯವನ್ನು ಸವಿಯುವುದಕ್ಕಲ್ಲ. ಪಾಕಿಸ್ಥಾನದ ತಮ್ಮ ಮನೆಯಲ್ಲಿ ಬದುಕು ಕಟ್ಟಿಕೊಳ್ಳಲಾಗದೆ ದಿಲ್ಲಿಗೆ ಬಂದಿದ್ದಾರೆ. ಆದರೆ ಈ ಮೂವರು ಮಕ್ಕಳ ತಂದೆ-ತಾಯಿ ಮಾತ್ರ ಪಾಕಿಸ್ಥಾನದಲ್ಲೇ ಇದ್ದಾರೆ. ತಂದೆ-ತಾಯಿ ನೆನಪಾದೊಡನೆ ಈ ಮೂವರು ಮಕ್ಕಳು ಕಣ್ಣೀರಿಡುತ್ತಾರೆ. ಅಮ್ಮ-ಅಪ್ಪನನ್ನು ನೋಡುವುದು ಯಾವಾಗ ಎಂದು ಹಂಬಲಿಸುತ್ತಾರೆ. ಆ ಮಕ್ಕಳ ಕಣ್ಣೀರನ್ನು ನೋಡಿ ಅವರ ಜೊತೆಗೆ ಬಂದಿರುವ ಅವರ ಚಿಕ್ಕಮ್ಮನಿಗೂ ಹೃದಯ ಕರಗುತ್ತದೆ. ಮಕ್ಕಳನ್ನು ಸಮಾಧಾನಪಡಿಸಲು ಹೆಣಗುತ್ತಾರೆ. ಮಕ್ಕಳು ಮಾತ್ರ ತಮ್ಮ ಅಪ್ಪ-ಅಮ್ಮನನ್ನು ತಕ್ಷಣ ದಿಲ್ಲಿಗೆ ಕರೆಸುವಂತೆ ಮೊರೆಯಿಡುತ್ತಾರೆ. ಅವರು ಅಲ್ಲೇ (ಪಾಕಿಸ್ಥಾನ) ಇದ್ದರೆ ಮುಸಲ್ಮಾನರು ಅವರನ್ನು ಕೊಚ್ಚಿ ಹಾಕುತ್ತಾರೆ ಎಂಬುದು ಈ ಮಕ್ಕಳಿಗೆ ಚೆನ್ನಾಗಿ ಗೊತ್ತು.

ಇಷ್ಟಕ್ಕೂ ಹಾಲುಗಲ್ಲದ ಈ ಕಂದಮ್ಮಗಳನ್ನು ಪಾಕಿಸ್ಥಾನದಿಂದ ಬಹುದೂರದ ದಿಲ್ಲಿಗೆ ಅವರ ತಂದೆ-ತಾಯಿ ಸಾಗಹಾಕಿದ್ದಾದರೂ ಏಕೆ? ತಮ್ಮ ಹೃದಯದ ಮೇಲೆ ಕಲ್ಲಿಟ್ಟು, ಕರುಳುಬಳ್ಳಿಯ ಪ್ರೀತಿಯನ್ನು ಮುಚ್ಚಿಟ್ಟು ಅವರು ಪಾಕಿಸ್ಥಾನದ ಹೈದರಾಬಾದ್‌ನಿಂದ ತಮ್ಮ ಮಕ್ಕಳನ್ನು ದಿಲ್ಲಿಗೆ ಕಳಿಸಿದ್ದಾರೆ. ಅದಕ್ಕಾಗಿ ನಾನಾ ಬಗೆಯ ಕಿರುಕುಳ ಸಹಿಸಿ, ಕಷ್ಟಪಟ್ಟು ದುಡಿದು ಹಣ ಸಂಗ್ರಹಿಸಿ ಆ ಮೂವರಿಗೆ ವೀಸಾ, ಪಾಸ್‌ಪೋರ್ಟ್ ಮಾಡಿಸಿದ್ದಾರೆ. ಆದರೆ ಮಕ್ಕಳೊಂದಿಗೆ ತಮಗೂ ದಿಲ್ಲಿಗೆ ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಅವರ ಬಳಿ ವೀಸಾಕ್ಕೆ ಆಗುವಷ್ಟು ಹಣ ಮಿಕ್ಕಿಲ್ಲ. ಕೊನೇ ಪಕ್ಷ ಮಕ್ಕಳಾದರೂ ಭಾರತದಲ್ಲಿ ಬದುಕಿಕೊಳ್ಳಲಿ. ಮುಸಲ್ಮಾನರಾಗದೆ ಹಿಂದುಗಳಾಗಿಯೇ ಉಳಿಯಲಿ ಎಂಬುದು ಈ ತಂದೆ – ತಾಯಿಗಳ ಹೆಬ್ಬಯಕೆ.

***

ಪಾಕಿಸ್ಥಾನದ ಹೈದರಾಬಾದ್‌ನ ಫಕೀರ್ ಕಾ ಪೇಡ್ ವೃತ್ತದಲ್ಲಿ ಪುಟ್ಟದೊಂದು ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ಅವರ ವಯಸ್ಸು ೪೫. ಆದರೆ ಅವರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಈಗ ಸಂಪೂರ್ಣ ಕೆಟ್ಟಿದೆ. ಕಣ್ಣು ಕಾಣಿಸುತ್ತಿಲ್ಲ. ಒಂದು ಕೈಯಲ್ಲಿ ಊರುಗೋಲು ಹಿಡಿದು ಇನ್ನೊಂದು ಕೈಯನ್ನು ಇನ್ನೊಬ್ಬರ ಹೆಗಲ ಮೇಲಿಟ್ಟು ಹೆಜ್ಜೆ ಹಾಕಬೇಕಾದ ದುಃಸ್ಥಿತಿ. ‘ಅದು ೪ ವರ್ಷಗಳ ಹಿಂದಿನ ಮಾತು. ಒಂದು ದಿನ ಕೆಲವು ಮುಸಲ್ಮಾನರು ನನ್ನ ಅಂಗಡಿಗೆ ಬಂದು, ಅಲ್ಲಿಂದ ತಕ್ಷಣ ಅಂಗಡಿ ಖಾಲಿ ಮಾಡಿ ಓಡಿಹೋಗುವಂತೆ ಧಮಕಿ ಹಾಕಿದರು. ನೀನು ಖಾಫಿರ, ಆದ್ದರಿಂದ ಅಂಗಡಿ ನಡೆಸುವಂತಿಲ್ಲ. ಗುಲಾಮನಾಗುವುದಕ್ಕೇ ನೀನು ಲಾಯಕ್ಕು. ಇಲ್ಲೇ ಇದ್ದರೆ ನೀನು ಸಾಯುತ್ತೀಯ ಎಂದವರು ಬೆದರಿಕೆ ಹಾಕಿದರು. ಆದರೆ ನಾನು ಅವರ ಗೊಡ್ಡು ಬೆದರಿಕೆ ಮಣಿಯಲಿಲ್ಲ. ಪರಿಣಾಮವಾಗಿ ಒಂದು ದಿನ ಮುಸ್ಲಿಂ ದುಷ್ಕರ್ಮಿಗಳ ಗುಂಪು ನನ್ನ ಅಂಗಡಿಗೆ ನುಗ್ಗಿ ಅಲ್ಲಿದ್ದ ಎಲ್ಲ ವಸ್ತುಗಳನ್ನು ಹೊರಗೆಸೆದು ಲೂಟಿ ಮಾಡಿತು. ನನ್ನ ತಲೆಯ ಮೇಲೆ ದೊಣ್ಣೆಗಳಿಂದ ಹೊಡೆಯಲಾಯಿತು. ಪ್ರಜ್ಞೆ ತಪ್ಪಿ ಕೆಳಗೆ ಬಿದ್ದೆ. ಒಂದು ವಾರದ ಬಳಿಕ ಮರಳಿ ಜ್ಞಾನ ಬಂದಾಗ ನಾನು ಆಸ್ಪತ್ರೆಯಲ್ಲಿದ್ದೆ. ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ನನ್ನ ಸ್ಥಿತಿ ಸುಧಾರಿಸಿಲ್ಲ. ಬಹುಶಃ ಇನ್ನು ಸುಧಾರಿಸುವುದೂ ಇಲ್ಲ. ದುಷ್ಕರ್ಮಿಗಳು ಕೊಟ್ಟ ಏಟಿಗೆ ನನ್ನ ಕಣ್ಣಿನ ದೃಷ್ಟಿಯೇ ಹೊರಟು ಹೋಗಿದೆ. ನಾನೀಗ ಬದುಕಿದ್ದರೂ ಸತ್ತ ಹೆಣದಂತಿರುವೆ. ಹಿಂದುವಾಗಿದ್ದಕ್ಕೆ ಮುಸಲ್ಮಾನರು ನನಗೆ ಈ ಶಿಕ್ಷೆಯನ್ನು ನೀಡಿದ್ದಾರೆ. ಪಾಕಿಸ್ಥಾನದಲ್ಲಿ ಹಿಂದುಗಳು ಕುರಿಗಳಂತೆ ಜೀವಿಸಬೇಕು. ಮುಸಲ್ಮಾನರು ಬಯಸಿದಾಗಲೆಲ್ಲ ನಮ್ಮನ್ನು ಕೊಲ್ಲುತ್ತಾರೆ. ಹಿಂದು ಮಕ್ಕಳು ಅಲ್ಲಿ ಶಾಲೆಗೆ ಹೋಗುವಂತಿಲ್ಲ. ಹಿಂದುಗಳಿಗೆ ಪಾಕ್ ಸರ್ಕಾರಿ ಕಚೇರಿಗಳಲ್ಲಿ ಕನಿಷ್ಠ ಗುಮಾಸ್ತನ ಕೆಲಸವನ್ನೂ ನೀಡುವುದಿಲ್ಲ. ಹೀಗಿರುವಾಗ ನಾವು ಅಲ್ಲಿ ಬದುಕುವುದು ಹೇಗೆ? ಅದಕ್ಕೇ ನಾನೀಗ ಭಾರತಕ್ಕೆ ಬಂದಿರುವೆ. ಭಾರತ ಸರ್ಕಾರ ನಮಗೆ ನೆರವು ನೀಡಲಿ’. ದಿಲ್ಲಿಗೆ ಹೇಗೋ ವೀಸಾ ಹೊಂದಿಸಿಕೊಂಡು ಬಂದಿಳಿದಿರುವ ಲಕ್ಷ್ಮಣ್ ತಮ್ಮ ವ್ಯಥೆಯ ಕಥೆಯನ್ನು ಬಣ್ಣಿಸುವುದು ಹೀಗೆ.

***

ದಿಲ್ಲಿಯ ಇಕ್ಕmದ ಒಂದು ಚಿಕ್ಕ ಕೊಠಡಿಯಲ್ಲಿ ತಲೆತಗ್ಗಿಸಿ ಕುಳಿತಿರುವ ೧೪ರ ಹರೆಯದ ರಾಮ್‌ಕಲೀ ಯಾರೊಂದಿಗೂ ಮಾತನಾಡುತ್ತಿಲ್ಲ. ಆದರೆ ಅವಳ ಕಥೆಯನ್ನು ಆಕೆಯ ಮೈದುನ ಲಕ್ಷ್ಮಣ್ ಹೇಳಿದ್ದು ಹೀಗೆ : ‘೫ ದಿನಗಳ ಮೊದಲು ರಾಮ್‌ಕಲೀಯ ಮಗಳು ತೀರಿಹೋದಳು. ಆ ದುಃಖ ತಡೆಯಲಾರದೆ ಅವಳೀಗ ಮೌನಕ್ಕೆ ಶರಣಾಗಿದ್ದಾಳೆ. ನಿಮಗೆ ಆಶ್ಚರ್ಯವಾಗಬಹುದು – ೧೪ರ ಹರೆಯದ ಕಿಶೋರಿಯೊಬ್ಬಳು ತಾಯಿ ಆಗುವುದು ಸಾಧ್ಯವೆ? ಆದರೆ ಪಾಕಿಸ್ಥಾನದಲ್ಲಿ ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸುವುದು ಅನಿವಾರ್ಯ. ಅಕಸ್ಮಾತ್ ಚಿಕ್ಕ ವಯಸ್ಸಿಗೆ ಅವರ ಮದುವೆಯಾಗದಿದ್ದರೆ ಯಾವನೋ ಒಬ್ಬ ಮುಸಲ್ಮಾನ ಗೂಂಡಾ ಜಬರ್ದಸ್ತಿ ಮಾಡಿ ಎತ್ತಿಕೊಂಡು ಹೋಗುತ್ತಾನೆ. ತನ್ನೊಂದಿಗೆ ನಿಕಾಹ್ ಮಾಡಿಕೊಳ್ಳುತ್ತಾನೆ’. ಪಾಕಿಸ್ಥಾನದಲ್ಲಿ ಕಟ್ಟರ್‌ವಾದಿಗಳz ಕಾನೂನು. ಅವರು ಹೇಳಿz ನ್ಯಾಯ. ಅಲ್ಲಿ ಯಾವುದೇ ಹಿಂದುಗಳು ತಮ್ಮ ಮಕ್ಕಳನ್ನು ರಾಮನ ಹೆಸರಿನಲ್ಲಿ ಕರೆಯುವಂತಿಲ್ಲ. ಸರ್ಕಾರಿ ದಾಖಲೆಯಲ್ಲಿ ಹಿಂದೂ ಹೆಸರನ್ನು ದಾಖಲಿಸುವುದಿಲ್ಲ. ಭಾರತಕ್ಕೆ ಬಂದಿಳಿದ ರಾಮ್‌ಕಲೀಯ ಹೆಸರು ಪಾಸ್‌ಪೋರ್ಟ್‌ನಲ್ಲಿ ಅನಾರ್ಕಲಿ ಎಂದು ಬದಲಾಗಿರುವುದು ಇದೇ ಕಾರಣಕ್ಕೆ.

***

೩೮ ವರ್ಷ ವಯಸ್ಸಿನ ಭಾರತಿ ತನ್ನ ಮೂರು ದಿನದ ಮಗುವನ್ನು ಪಾಕಿಸ್ಥಾನದಲ್ಲೆ ಬಿಟ್ಟು ಉಳಿದ ೪ ಮಕ್ಕಳೊಂದಿಗೆ ಈಗ ಭಾರತಕ್ಕೆ ಬಂದಿದ್ದಾಳೆ. ಅವಳು ಬಂದಿದ್ದು ಯಾತ್ರಿಕರ ವೀಸಾ ಬಳಸಿ. ಪ್ರಯಾಗದ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಅರ್ಜಿ ಹಾಕಿದ ಭಾರತಕ್ಕೆ ಬಂದಿರುವ ಭಾರತಿ ಮರಳಿ ಪಾಕಿಸ್ಥಾನಕ್ಕೆ ಹೋಗದಿರಲು ನಿರ್ಧರಿಸಿದ್ದಾಳೆ. ಆದರೆ ತನ್ನ ಎಳೆಯ ಕಂದನ ಬಗ್ಗೆಯೇ ಆಕೆಗೆ ಚಿಂತೆ. ಆ ಕಂದನ ವೀಸಾ ಮತ್ತು ಪಾಸ್‌ಪೋರ್ಟ್ ವ್ಯವಸ್ಥೆಗಾಗಿ ಆಕೆ ಕಾದಿದ್ದರೆ ಭಾರತಕ್ಕೆ ಬರುವುದಕ್ಕೆ ಅವಳಿಗೆ ಸಾಧ್ಯವೇ ಆಗುತ್ತಿರಲಿಲ್ಲ. ಕೊನೇಪಕ್ಷ ತನ್ನ ನಾಲ್ಕು ಮಕ್ಕಳಾದರೂ ಹಿಂದುಗಳಾಗಿ ಉಳಿದರಲ್ಲ ಎಂಬುದೇ ಈಗ ಆಕೆಗಿರುವ ಸಮಾಧಾನ.

೬೦ ವರ್ಷ ಇಳಿವಯಸ್ಸಿನ ಖೈರಾ ತನ್ನ ಜನ್ಮಭೂಮಿ ತೊರೆದು ಭಾರತಕ್ಕೆ ಬಂದಿದ್ದಾರೆ. ಈಕೆಯ ಮೂವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಪಾಕಿಸ್ಥಾನದಲ್ಲಿದ್ದಾರೆ. ಖೈರಾಗೆ ಮಾತ್ರ ವೀಸಾ ಲಭಿಸಿದ್ದರಿಂದ ಅವರೊಬ್ಬರೇ ಭಾರತಕ್ಕೆ ಬರಬೇಕಾಯಿತು. ‘ಪಾಕಿಸ್ಥಾನದಲ್ಲಿ ಹಿಂದುವೊಬ್ಬ ಸತ್ತರೆ ಆತನನ್ನು ಸುಡಲು ಬಿಡುವುದಿಲ್ಲ. ದಫನ್ ಮಾಡಬೇಕೆಂದು ಒತ್ತಾಯಿಸುತ್ತಾರೆ. ನಾನು ಸತ್ತ ನಂತರ ನನ್ನ ಶವವನ್ನು ಅಗ್ನಿಯಲ್ಲಿ ಸುಡಬೇಕು, ಅಸ್ಥಿಯನ್ನು ಗಂಗಾ ನದಿಯಲ್ಲಿ ವಿಸರ್ಜಿಸಬೇಕೆಂಬ ಬಯಕೆ ನನ್ನದು. ಅದಕ್ಕೇ ಈ ಇಳಿವಯಸ್ಸಿನಲ್ಲಿ ನಾನು ಭಾರತಕ್ಕೆ ಬಂದಿರುವೆ’ ಎನ್ನುತ್ತಾರೆ ಖೈರಾ.

ಪಾಕಿಸ್ಥಾನದಿಂದ ಭಾರತಕ್ಕೆ ತಂಡೋಪತಂಡವಾಗಿ ಹೀಗೆ ಧಾವಿಸಿಬರುತ್ತಿರುವ ಹಿಂದೂ ಶರಣಾರ್ಥಿಗಳ ಇಂತಹ ಒಂದೊಂದು ಕಥೆಯೂ ಕಣ್ಣೀರು ಉಕ್ಕಿಸುವಂತಹದು. ಪಾಕಿಸ್ಥಾನದಲ್ಲಿ ತಮಗೆ ಬದುಕು ದುಸ್ಸಾಧ್ಯ. ಮುಸಲ್ಮಾನರ ಮರ್ಜಿಯ ಮೇರೆಗೆ ಅಲ್ಲಿ ಬದುಕು ಸಾಗಿಸಬೇಕು. ಮುಕ್ತವಾಗಿ ಅಲ್ಲಿ ನಾವು ಹಿಂದೂ ಹಬ್ಬ ಆಚರಿಸುವಂತಿಲ್ಲ. ಯಾವುದಾದರೂ ಸಂಘರ್ಷ ನಡೆದರೆ ಹಿಂದುಗಳಿಗೆ ನ್ಯಾಯ ಎನ್ನುವುದು ಮರೀಚಿಕೆ. ಪೊಲೀಸರು, ಕೋರ್ಟ್ ಎಲ್ಲವೂ ಅಲ್ಲಿ ಮುಸಲ್ಮಾನರ ಪರ – ಇದು ಪಾಕಿಸ್ಥಾನದಲ್ಲಿರುವ ಬಹುತೇಕ ಹಿಂದುಗಳ ಮನದಾಳದ ಮಾತು. ಪಾಕಿಸ್ಥಾನದಲ್ಲಿ ಹಿಂದು ಹಾಗೂ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ , ಲೂಟಿ, ಅತ್ಯಾಚಾರಗಳಿಗೆ ಕೊನೆ ಮೊದಲೇ ಇಲ್ಲ. ೨೦೧೩ರ ಮಾ. ೭ರಂದು ಲಾಹೋರ್‌ನ ಬಾದಾಮಿಬಾದ್‌ನ ಪ್ರದೇಶದಲ್ಲಿರುವ ಕ್ರೈಸ್ತರ ಜೋಸೆಫ್ ಕಾಲೋನಿಯಲ್ಲಿರುವ ಸುಮಾರು ೩೦೦ ಜನರ ಮೇಲೆ ತೀವ್ರ ಹಲ್ಲೆ ನಡೆಸಲಾಯಿತು. ೨೦೧೩ರ ಜ. ೧೦ರಂದು ೧೧೮ ಹಾಗೂ ಜ. ೧೬ರಂದು ೯೮ ಶಿಯಾ ಮುಸ್ಲಿಂ ಜಿಹಾದಿಗಳ ಕೈಗೆ ಸಿಲುಕಿ ಸತ್ತರು. ೨೦೧೨ರ ಡಿ. ೧ರಂದು ಕರಾಚಿಯ ಸೋಲ್ಜರ್ ಬಾಜಾರ್‌ನಲ್ಲಿ ಶ್ರೀರಾಮ್‌ಪೀರ್ ಮಂದಿರ ಮತ್ತು ಅದರ ಸಮೀಪದಲ್ಲಿರುವ ಹಿಂದು ಮನೆಗಳನ್ನು ಬೆಂಕಿ ಹಚ್ಚಿ ಸುಡಲಾಯಿತು. ಅನೇಕ ಹಿಂದೂ ಕುಟುಂಬಗಳು ಅನಾಥವಾದವು. ೨೦೧೨ರ ಆಗಸ್ಟ್‌ನಲ್ಲಿ ಸಿಂಧ್ ಪ್ರಾಂತದ ಸಖ್ಖರ್‌ನಲ್ಲಿ ಮನೀಷಾ ಎಂಬ ಹಿಂದೂ ಹುಡುಗಿಯನ್ನು ಮುಸ್ಲಿಂ ಮತಕ್ಕೆ ಬಲವಂತವಾಗಿ ಮತಾಂತರಿಸಿ ಅವಳ ಹೆಸರನ್ನು ಮಹ್‌ವಿಷ್ ಎಂದು ಬದಲಾಯಿಸಲಾಯಿತು. ಇದಾದ ಮೇಲೆ ಗುಲಾಂ ಮುಸ್ತಫ ಎಂಬುವನೊಂದಿಗೆ ಆಕೆಯ ನಿಕಾಹ್ ನೆರವೇರಿತು. ೨೦೧೨ ಆಗಸ್ಟ್‌ನಲ್ಲಿ ೧೧ ವರ್ಷದ ಕ್ರೈಸ್ತ ಯುವತಿ ರಿಂಶಾಳನ್ನು ಆಕೆ ಕುರಾನ್ ಪುಸ್ತಕವನ್ನು ಹರಿದಳೆಂಬ ಆರೋಪ ಹೊರಿಸಿ ಬಂಧಿಸಲಾಯಿತು. ೨೦೧೨ರ ಫೆ. ೨೧ರಂದು ರಿಂಕಲ್ ಕುಮಾರಿ ಎಂಬ ಹಿಂದೂ ಯುವತಿಯನ್ನು ಬಲವಂತದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿ, ಒಬ್ಬ ಮುಸ್ಲಿಂ ಜೊತೆಗೆ ಆಕೆಯ ಮದುವೆ ಮಾಡಲಾಯಿತು. ಇದರ ವಿರುದ್ಧ ನ್ಯಾಯಾಲಯಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ರಿಂಕಲ್ ಕುಮಾರಿಗೆ ಪಾಕಿಸ್ಥಾನದ ಸರ್ವೋನ್ನತ ನ್ಯಾಯಾಲಯದಲ್ಲೂ ನ್ಯಾಯ ದೊರಕಲಿಲ್ಲ. ಈ ಘಟನೆ ನಡೆದ ಬಳಿಕ ಪಾಕಿಸ್ಥಾನದಿಂದ ಭಾರತಕ್ಕೆ ನಿರಾಶ್ರಿತರಾಗಿ ಬರುವ ಹಿಂದುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.

ಪಾಕಿಸ್ಥಾನ ಜನರು ವಾಸಿಸಲು ಯೋಗ್ಯವಾದ ಸ್ಥಳವಲ್ಲ. ಅದೊಂದು ಭೂಮಿಯ ಮೇಲಿನ ನರಕ ಎನ್ನುವುದು ಅಲ್ಲಿ ವಾಸಿಸುತ್ತಿರುವ ಬಹುತೇಕ ಮಂದಿಯ ಅಭಿಪ್ರಾಯ. ಕೇವಲ ಹಿಂದುಗಳಷ್ಟೇ ಅಲ್ಲದೆ ಅಹಮ್ಮದೀಯ ಮುಸ್ಲಿಮರು, ಸುನ್ನಿಗಳು, ಕ್ರೈಸ್ತರೂ ಕೂಡ ಅಲ್ಲಿ ಮತಾಂಧ ಮುಸ್ಲಿಮರ ದ್ವೇಷಕ್ಕೆ ಬಲಿಯಾಗುತ್ತಿದ್ದಾರೆ. ಮನೆಗೆ ನುಗ್ಗುವ ಜಿಹಾದಿ ಅಮಲೇರಿಸಿಕೊಂಡ ಮುಸ್ಲಿಂ ಗೂಂಡಾಗಳು ತಂದೆ – ತಾಯಿಗಳ ಎದುರಲ್ಲೇ ಅವರ ಹರೆಯದ ಹೆಣ್ಣು ಮಕ್ಕಳ ಮಾನಭಂಗ ಮಾಡುತ್ತಿರುವುದು ಅಲ್ಲಿ ಸಾಮಾನ್ಯ ದೃಶ್ಯ. ಇದರ ವಿರುದ್ಧ ಯಾರೂ ಕೂಡ ತುಟಿ ಪಿಟಕ್ಕೆನ್ನುವುದಿಲ್ಲ. ಹೆಚ್ಚೆಂದರೆ, ಅತ್ಯಾಚಾರಕ್ಕೊಳಗಾದ ಹಿಂದೂ ಯುವತಿಯರನ್ನು ಮುಸ್ಲಿಮರಿಗೆ ಕೊಟ್ಟು ಮದುವೆ ಮಾಡಿ ಕೈತೊಳೆದುಕೊಂಡು ಬಿಡಿ ಎಂಬ ಬಿಟ್ಟಿ ಸಲಹೆಯನ್ನು ಮುಸ್ಲಿಂ ಮುಖಂಡರು ಕೊಡುತ್ತಾರೆ.

ಅಖಂಡವಾಗಿದ್ದ ಭಾರತ, ಕೆಲವು ರಾಜಕೀಯ ನಾಯಕರ ಕುತಂತ್ರ ವೈಯಕ್ತಿಕ ಪ್ರತಿಷ್ಠೆ ಹಾಗೂ ತೆವಲಿನಿಂದಾಗಿ ಇಬ್ಭಾಗವಾಯಿತು. ಮುಖ್ಯವಾಗಿ ನೆಹರು, ಗಾಂಧಿ, ಜಿನ್ನಾ ಇವರೇ ಅಖಂಡ ಭಾರತ ತುಂಡಾಗಲು ಬಹುಮುಖ್ಯ ಕಾರಣ ಎಂಬುದು ಇತಿಹಾಸ ಸಾರುವ ಕಟುಸತ್ಯ. ೧೯೪೭ರಲ್ಲಿ ಭಾರತ ಇಬ್ಭಾಗವಾದಾಗ ಪಾಕಿಸ್ಥಾನದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂ ಶರಣಾರ್ಥಿಗಳು ಮುಸ್ಲಿಮರ ದೌರ್ಜನ್ಯ ಸಹಿಸಲಾಗದೆ ಭಾರತಕ್ಕೆ ಓಡಿಬಂದರು. ಹೀಗೆ ಓಡಿ ಬಂದವರೆಲ್ಲರೂ ಶ್ರೀಮಂತರು ಹಾಗೂ ಮಧ್ಯಮ ವರ್ಗದವರು. ಆದರೆ ಕೆಳಜಾತಿಗೆ ಸೇರಿದ ಸಾಮಾನ್ಯ ಹಿಂದುಗಳು ಪಾಕಿಸ್ಥಾನದಲ್ಲೇ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಉಂmಯಿತು. ಅದು ಮಾತ್ರ ದುಸ್ಸಾಧ್ಯವೆಂಬುದು ಇಷ್ಟು ವರ್ಷಗಳ ಅನುಭವದಿಂದ ಅವರಿಗೆ ವೇದ್ಯವಾಗಿದೆ. ದೇಶ ವಿಭಜನೆಯಾದ ಸಂದರ್ಭದಲ್ಲಿ ಪಾಕಿಸ್ಥಾನದಲ್ಲಿದ್ದ ಹಿಂದುಗಳ ಸಂಖ್ಯೆ ೨ ಕೋಟಿ. ಈಗ ಅಲ್ಲಿರುವ ಹಿಂದುಗಳ ಸಂಖ್ಯೆ ಕೇವಲ ೨೦ ಲಕ್ಷ ಮಾತ್ರ. ಹಾಗಿದ್ದರೆ ೧ ಕೋಟಿ ೮೦ ಲಕ್ಷ ಹಿಂದುಗಳು ಎಲ್ಲಿ ಹೋದರು? ಏನಾದರು? ಒಂದೋ ಅವರೆಲ್ಲರೂ ಬಲವಂತ ಮತಾಂತರಕ್ಕೊಳಗಾಗಿ ಮುಸಲ್ಮಾನರಾಗಿರಬಹುದು. ಇಲ್ಲವೇ ಅವರೆಲ್ಲರೂ ಮುಸ್ಲಿಂ ಜಿಹಾದಿಗಳ ಬಂದೂಕಿಗೆ ಬಲಿಯಾಗಿರಬಹುದು. ಇವೆರಡೇ ಸಾಧ್ಯತೆಗಳು. ೧೯೫೧ರಲ್ಲಿ ಪಾಕಿಸ್ಥಾನದ ಒಟ್ಟು ಜನಸಂಖೆಯಲ್ಲಿ ಹಿಂದುಗಳ ಪ್ರಮಾಣ ಶೇ.೨೨ರಷ್ಟಿತ್ತು. ಆದರೆ ಈಗ ಅಲ್ಲಿ ಹಿಂದುಗಳ ಜನಸಂಖ್ಯೆ ಶೇ.೨ರಷ್ಟಕ್ಕಿಂತಲೂ ಕಡಿಮೆ. ಇದೇ ರೀತಿ ಹಿಂದುಗಳ ಮೇಲೆ ಅಲ್ಲಿ ದೌರ್ಜನ್ಯ, ಅತ್ಯಾಚಾರ ಮುಂದುವರಿದರೆ ಪಾಕಿಸ್ಥಾನ ಹಿಂದೂರಹಿತ ದೇಶವಾಗುವುದರಲ್ಲಿ ಸಂಶಯವೇ ಇಲ್ಲ. ಭಾರತದಲ್ಲಿ ಮಾತ್ರ ಸಂಪೂರ್ಣ ತದ್ವಿರುದ್ಧ ಚಿತ್ರಣ. ಸ್ವಾತಂತ್ರ್ಯ ಬಂದಾಗ ಭಾರತದಲ್ಲಿ ಶೇ. ೮ರಷ್ಟು ಮುಸಲ್ಮಾನರ ಜನಸಂಖ್ಯೆ ಇದ್ದಿದ್ದು ಇದೀಗ ಶೇ.೧೮ಕ್ಕೇರಿದೆ ! ಅಲ್ಪಸಂಖ್ಯಾತರೆಂದು ಅವರಿಗೆ ನಾನಾ ಬಗೆಯ ಸರ್ಕಾರಿ ಸವಲತ್ತುಗಳು, ಪ್ರತ್ಯೇಕ ಶಿಕ್ಷಣ ವ್ಯವಸ್ಥೆ, ಪ್ರತ್ಯೇಕ ವಿವಾಹ ಕಾಯ್ದೆ… ಹೀಗೆ ಹಲವಾರು ಬಗೆಯ ಸೌಕರ್ಯಗಳು. ಬೇರೆ ಯಾವ ದೇಶದಲ್ಲೂ ಮುಸಲ್ಮಾನರಿಗೆ ಭಾರತದಲ್ಲಿರುವಷ್ಟು ಸರ್ಕಾರಿ ಸೌಲಭ್ಯಗಳಿಲ್ಲ. ಅಷ್ಟೇ ಅಲ್ಲ, ರಾಷ್ಟ್ರಪತಿಯ ಉನ್ನತ ಪದವಿಯಿಂದ ಹಿಡಿದು ಸರ್ವೋನ್ನತ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಹುದ್ದೆ, ಇನ್ನಿತರ ಉನ್ನತ ಸರ್ಕಾರಿ ಹುದ್ದೆಗಳು, ಕೊನೆಗೆ ಭಾರತ ಕ್ರಿಕೆಟ್ ತಂಡದ ಕಪ್ತಾನ ಹುದ್ದೆಯವರೆಗೂ ಮುಸಲ್ಮಾನರಿಗೆ ಆದ್ಯತೆ ನೀಡಲಾಗಿದೆ. ಪಾಕಿಸ್ಥಾನದಲ್ಲಿ ಮಾತ್ರ ಯಾವ ಉನ್ನತ ಸರ್ಕಾರಿ ಹುದ್ದೆಗಳೂ ಅಲ್ಲಿನ ಹಿಂದುಗಳ ಪಾಲಿಗೆ ಲಭಿಸಿಲ್ಲ. ಚಪರಾಸಿ ಹುದ್ದೆ ಬಿಟ್ಟರೆ ಬೇರೆ ಸರ್ಕಾರಿ ಹುದ್ದೆಗಳನ್ನು ಪಡೆಯುವ ಭಾಗ್ಯ ಹಿಂದುಗಳಿಗಿಲ್ಲ. ಪಾಕಿಸ್ಥಾನದ ಸಂವಿಧಾನದಲ್ಲಿ ಅಲ್ಪಸಂಖ್ಯಾತ ಹಿಂದುಗಳ ಒಳಿತಿಗಾಗಿ ಯಾವ ಕಾಯ್ದೆಗಳನ್ನೂ ಅಳವಡಿಸಿಲ್ಲ. ಮೇಲ್ನೋಟಕ್ಕೆ ಒಂದಿಷ್ಟು ಅಂತಹ ಹಿಂದೂಪರ ಕಾಯ್ದೆಗಳಿದ್ದರೂ ಅವೆಲ್ಲ ಪುಸ್ತಕದಲ್ಲಿ ಮಾತ್ರ ಇವೆ, ಕೃತಿಗಿಳಿದಿಲ್ಲ.

ದೌರ್ಜನ್ಯ, ಅತ್ಯಾಚಾರ, ಹಿಂಸಾಚಾರ ಸಹಿಸಲಾಗದೆ ಭಾರತಕ್ಕೆ ಹಿಂದೂ ಶರಣಾರ್ಥಿಗಳು ಧಾವಿಸಿ ಬರುತ್ತಿದ್ದಾರೆ. ಆದರೆ ಇಲ್ಲಿಯೂ ಅವರ ಬದುಕು ಸುರಕ್ಷಿತವಲ್ಲ. ಏಕೆಂದರೆ ಪಾಕ್‌ನಿಂದ ಬರುವ ಹಿಂದೂ ಶರಣಾರ್ಥಿಗಳಿಗೆ

ಇಲ್ಲೇ ಶಾಶ್ವತವಾಗಿ ನೆಲೆಸುವಂತಹ ಯಾವುದೇ ಕಾಯ್ದೆಗಳಿಲ್ಲ. ಇರುವ ಕಾಯ್ದೆಗಳಿಗೆ ತಿದ್ದುಪಡಿಯನ್ನೂ ತಂದಿಲ್ಲ. ಬಂಗ್ಲಾ ದೇಶದ ಅಕ್ರಮ ನುಸುಳುಕೋರರು, ಪಾಕ್‌ನಿಂದ ಅಕ್ರಮವಾಗಿ ಬರುವ ಮುಸಲ್ಮಾನರು, ಟಿಬೆಟ್ ನಿರಾಶ್ರಿತರು… ಹೀಗೆ ಇವರೆಲ್ಲರಿಗೂ ಇಲ್ಲಿ ಶಾಶ್ವತವಾಗಿ ನೆಲೆಸಲು ನಮ್ಮ ಕೇಂದ್ರ ಸರ್ಕಾರ ಕಾಳಜಿವಹಿಸಿ ಕಾಯ್ದೆಗಳ ಮೂಲಕ ವ್ಯವಸ್ಥೆ ಮಾಡಿದೆ. ಆದರೆ ಬೇರೆ ದೇಶಗಳಿಂದ ನಿರಾಶ್ರಿತರಾಗಿ ಬರುವ ಹಿಂದುಗಳಿಗೆ ಮಾತ್ರ ಇಲ್ಲಿ ತ್ರಿಶಂಕು ಸ್ಥಿತಿ! ವೀಸಾ ಅವಧಿ ಮುಗಿದ ಕೂಡಲೇ ಸರ್ಕಾರ ಅವರಿಗೆ ಪಾಕಿಸ್ಥಾನಕ್ಕೆ ಹಿಂತಿರುಗುವಂತೆ ಸೂಚನೆ ನೀಡುತ್ತದೆ. ಕೊಂಚ ಪ್ರತಿರೋಧ ತೋರಿದರೆ ವೀಸಾ ಅವಧಿಯನ್ನು ಸ್ವಲ್ಪ ಕಾಲ ವಿಸ್ತರಿಸುವ ‘ಸೌಜನ್ಯ’ ತೋರುತ್ತದೆ. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರ ಏನನ್ನೂ ಮಾಡುವುದಿಲ್ಲ. ತಮಾಷೆಯೆಂದರೆ, ಪ್ರಧಾನಿ ಡಾ.ಮನಮೋಹನ್‌ಸಿಂಗ್ ಕೂಡ ಪಾಕಿಸ್ಥಾನದಿಂದ ಓಡಿಬಂದು ಭಾರತದಲ್ಲಿ ನೆಲೆಸಿದವರೇ! ಬಿಜೆಪಿಯ ಹಿರಿಯ ನಾಯಕ ಆಡ್ವಾಣಿ ಕೂಡ ಪಾಕಿಸ್ಥಾನದಿಂದ ಶರಣಾರ್ಥಿಯಾಗಿ ಬಂದವರು. ಆದರೆ ಮನಮೋಹನ್‌ಸಿಂಗ್ ಪಾಕಿಸ್ಥಾನದಲ್ಲಿ ದೌರ್ಜನ್ಯಕ್ಕೀಡಾದ ಹಿಂದೂ ನಿರಾಶ್ರಿತರ ಬಗ್ಗೆ ಇದುವರೆಗೆ ತಮ್ಮ ಮೌನ ಮುರಿದಿಲ್ಲ. ಅವರ ನೆರವಿಗೂ ಧಾವಿಸಿಲ್ಲ. ಅಲ್ಲೆಲ್ಲೋ ಆಸ್ಟ್ರೇಲಿಯಾದಲ್ಲಿ ಬೆಂಗಳೂರಿನ ಹನೀಫ್ ಎಂಬ ಒಬ್ಬ ಭಾರತೀಯ ವೈದ್ಯನ ಬಂಧನವಾದರೆ, ತನಗೆ ಇಡೀ ರಾತ್ರಿ ನಿದ್ದೆ ಬರಲಿಲ್ಲವೆಂದು ಅಲವತ್ತುಕೊಳ್ಳುವ ಪ್ರಧಾನಿ ಸಿಂಗ್‌ಗೆ ಪಾಕಿಸ್ಥಾನದ ದೌರ್ಜನ್ಯಕ್ಕೀಡಾದ ಹಿಂದುಗಳ ಬಗ್ಗೆ ಒಂದಿಷ್ಟೂ ದುಃಖವಾಗುತ್ತಿಲ್ಲವಲ್ಲ, ಎಂತಹ ಚೋದ್ಯ!

ಪ್ರಧಾನಿಗೇ ಇಂತಹ ಮಾನಸಿಕತೆ ಇರುವಾಗ ಇನ್ನು ಮಾನವ ಹಕ್ಕು ಕಾರ್ಯಕರ್ತರ ಬಗ್ಗೆ ಹೇಳುವುದಕ್ಕೆ ಏನು ಉಳಿದಿದೆ? ಅಫ್ಜಲ್‌ಗೆ ಗಲ್ಲುಶಿಕ್ಷೆಯಾದರೆ ಬೊಬ್ಬೆ ಹೊಡೆಯುವ, ಉಗ್ರರನ್ನು ಬಂಧಿಸಿದಾಗ ಕ್ಯಾತೆ ತೆಗೆಯುವ ಮಾನವಹಕ್ಕು ಪ್ರಭೃತಿಗಳು ಪಾಕಿಸ್ಥಾನದಲ್ಲಿನ ದೌರ್ಜನ್ಯಕ್ಕೀಡಾದ ಹಿಂದೂ ಬಂಧು – ಭಗಿನಿಯರ ಬಗ್ಗೆ ಇದುವರೆಗೂ ಚಕಾರವೆತ್ತಿಲ್ಲ.ಅವರಿಗೆ ಅದೊಂದು ಮಾನವಹಕ್ಕು ಉಲ್ಲಂಘನೆ ಎಂದೆನಿಸಿಯೇ ಇಲ್ಲ.

ಪಾಕ್‌ನಿಂದ ಶರಣಾರ್ಥಿಗಳಾಗಿ ಬಂದ ಹಿಂದುಗಳಿಗೆ ಈಗ ಇಲ್ಲಿನ ಹಿಂದೂ ಸಂಘಟನೆಗಳು, ಸಹೃದಯರೇ ಆಪದ್ಭಾಂದವರಾಗಿದ್ದಾರೆ. ವಿಶ್ವಹಿಂದೂ ಪರಿಷದ್ ಇಂತಹ ಶರಣಾರ್ಥಿಗಳಿಗೆ ಶಾಶ್ವತ ಆಸರೆ ಕಲ್ಪಿಸಲು ಹರಸಾಹಸ ಮಾಡುತ್ತಿದೆ. ದೆಹಲಿಯ ನಹರ್‌ಸಿಂಗ್ ಎಂಬ ಕಸ್ಟಮ್ಸ್ ಅಧಿಕಾರಿ ತನ್ನ ೨ ಮಹಡಿಯ ಕಟ್ಟಡವನ್ನು ಬಾಡಿಗೆದಾರರಿಂದ ಖಾಲಿ ಮಾಡಿಸಿ, ಅಲ್ಲಿನ ೨೮ ಕೋಣೆಗಳನ್ನು ಹಿಂದೂ ಶರಣಾರ್ಥಿಗಳ ವಸತಿಗೆ ನೀಡಿದ್ದಾರೆ. ಆ ಕಟ್ಟಡವೊಂದರಿಂದಲೇ ನಹರ್‌ಸಿಂಗ್‌ಗೆ ೭೦ ಸಾವಿರ ರೂ. ಮಾಸಿಕ ಬಾಡಿಗೆ ಬರುತ್ತಿತ್ತು. ಶರಣಾರ್ಥಿಗಳಿಗೆ ವಸತಿಯಷ್ಟೇ ಅಲ್ಲದೆ, ಅವರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ಕಾನೂನಿನ ನೆರವು ಇತ್ಯಾದಿಗಳಿಗಾಗಿಯೂ ನಹರ್‌ಸಿಂಗ್ ಶ್ರಮಿಸುತ್ತಿರುವುದು ಅವರೆಲ್ಲರ ಪಾಲಿಗೆ ಒಂದು ಆಶಾಕಿರಣ.

ಪಾಕಿಸ್ಥಾನದ ನಿರಾಶ್ರಿತ ಹಿಂದುಗಳಿಗೆ ಭಾರತ ಬಿಟ್ಟರೆ ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ. ಭಾರತವೇ ಅವರ ತವರು ನೆಲ. ಪಾಕ್‌ನಿಂದ ಶರಣಾರ್ಥಿಗಳಾಗಿ ಬಂದ ಅವರೆಲ್ಲರಿಗೂ ಸೂಕ್ತ, ಶಾಶ್ವತ ನೆಲೆ ಕಲ್ಪಿಸಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯ. ಇದಕ್ಕಾಗಿ ಕಾಯ್ದೆಗಳನ್ನು ಸರಳೀಕರಣಗೊಳಿಸಬೇಕು. ಕಾನೂನಿನ ಸಮ್ಮತಿಯಿಲ್ಲ ಎಂಬ ಸಬೂಬು ಹೇಳಿ ಶರಣಾರ್ಥಿಗಳನ್ನು ಮತ್ತೆ ಪಾಕಿಸ್ಥಾನಕ್ಕೆ ಅಟ್ಟುವುದು ಖಂಡಿತ ಮಾನವೀಯತೆ ಎನಿಸಿಕೊಳ್ಳುವುದಿಲ್ಲ.

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
Kriyananda: An American yoga guru who loved India

Kriyananda: An American yoga guru who loved India

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

ಸಮಾಜದ ಮನೋಬಲ ಹೆಚ್ಚಿಸಲು ತನ್ನ ಶಾಲೆಗಳನ್ನೇ ವಿಶೇಷ ಕೋವಿಡ್ ಆರೈಕೆ ಕೇಂದ್ರಗಳನ್ನಾಗಿಸಿದ ರಾಷ್ಟ್ರೋತ್ಥಾನ ಪರಿಷತ್

Story of how their schools were converted to Special Covid Care Centers by Rashtrotthana Parishat

May 12, 2021

NEWS IN BRIEF : OCT 19 – 2011

October 19, 2011
ಪಶ್ಚಿಮ ಘಟ್ಟದ ಮೇಲೀಗ ಬೇಡ್ತಿ-ವರದಾ ನದಿ ಜೋಡಣೆಯ ಕಾರ್ಮೋಡ

ಪಶ್ಚಿಮ ಘಟ್ಟದ ಮೇಲೀಗ ಬೇಡ್ತಿ-ವರದಾ ನದಿ ಜೋಡಣೆಯ ಕಾರ್ಮೋಡ

April 5, 2021
Remembering Dr Ambedkar: ಡಾ ಅಂಬೇಡ್ಕರ್, ಸಾಮರಸ್ಯ ಮತ್ತು ಆರೆಸ್ಸೆಸ್

Remembering Dr Ambedkar: ಡಾ ಅಂಬೇಡ್ಕರ್, ಸಾಮರಸ್ಯ ಮತ್ತು ಆರೆಸ್ಸೆಸ್

April 13, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In