• Samvada
  • Videos
  • Categories
  • Events
  • About Us
  • Contact Us
Tuesday, March 21, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Blog

ಕನ್ನಡದ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್‌ಕುಮಾರ್

Vishwa Samvada Kendra by Vishwa Samvada Kendra
April 12, 2022
in Blog
253
0
497
SHARES
1.4k
VIEWS
Share on FacebookShare on Twitter

ರಾಜ್‌ಕುಮಾರ್ ಈ ಹೆಸರನ್ನು ಕೇಳದ ಕರ್ನಾಟಕದ ಜನ ಯಾರಾದರೂ ಇರಲು ಸಾಧ್ಯವೆ? ರಾಜ್‌ಕುಮಾರ್ ಕನ್ನಡ ಚಲನಚಿತ್ರಗಳ ಮೇರು ನಟ, ನೂರಾರು ದಾಖಲೆಗಳ ಸರದಾರ, ಚಲನಚಿತ್ರಗಳ ಮೂಲಕ ಕನ್ನಡಿಗರ ಮನೆ ಮನ ಗೆದ್ದು ಮನೆಮಗನೆನಿಸಿಕೊಂಡವರು.ಕನ್ನಡ ಚಲನಚಿತ್ರಗಳಿಗೆ ಸಾಂಸ್ಕೃತಿಕ ಅಡಿಪಾಯ ಹಾಕಿಕೊಟ್ಟವರು ಡಾ.ರಾಜ್‌ಕುಮಾರ್.

ಅಷ್ಟಕ್ಕೂ ರಾಜ್‌ಕುಮಾರ್ ಅವರ ವ್ಯಕ್ತಿತ್ವ, ಅವರ ಸಾತ್ವಿಕತೆ, ಸಜ್ಜನಿಕೆ ಇಡೀ ಕನ್ನಡನಾಡಿಗೆ ಮಾತ್ರವಲ್ಲ ಕಲಾರಂಗದಲ್ಲಿ ಎಂದಿಗೂ ಅಮರವಾದ ಮಾದರಿ.ಕೇವಲ ವೈಯಕ್ತಿಕ ಮಟ್ಟದಲ್ಲಿ, ಅಥವಾ ಕಲೆಯ ವಿಚಾರದಲ್ಲಿ ಮಾತ್ರವಲ್ಲ ನಮ್ಮೆಲ್ಲರಿಗೂ ಸುಳ್ಳು ಇತಿಹಾಸದಿಂದ ದೂರವಿಡುವ,ನಮ್ಮ ಮಣ್ಣಿನ ಬಗೆಗೆ ಹೆಮ್ಮೆಯೆನಿಸುವ,ಸಮಾಜಕ್ಕೆ ಹಿತವೆನಿಸುವ ಕಾರ್ಯವನ್ನು ಮಾಡಲು ಪ್ರೇರಣೆ ನೀಡುವ, ಈ ನೆಲದ ದೇವರು ಧರ್ಮಗಳ ಕುರಿತು ಶ್ರದ್ಧೆಯನ್ನು ರೂಪಿಸುವ ಮಾದರಿಗಳನ್ನು ಅಭಿವ್ಯಕ್ತಿಸುತ್ತಾ ನಮ್ಮ ಮೇಲೆ ಸಾತ್ವಿಕವಾದ ಪ್ರಭಾವ ಬೀರಿದವರು ಡಾ.ರಾಜ್‌ಕುಮಾರ್.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

ಬಾಲಿವುಡ್ಡಿನ ಬಹುತೇಕ ಸಿನೇಮಾಗಳು ದಾಳಿ ಮಾಡಿದ ಮೊಘಲರ ಕುರಿತಾದ ವೈಭವೀಕರಣ,ಧರ್ಮದ ಕುರಿತಾಗಿ ದೇವರ ಕುರಿತಾಗಿ ಅವಹೇಳನ, ಸಾಹಸ ಆಚರಣೆಗಳ ಪರಂಪರೆಗಳ ಕುರಿತಾಗಿ ತುಚ್ಛವಾಗಿ ತೋರಿಸುವಂತಹ ಸಂದರ್ಭದಲ್ಲಿ ರಾಜ‌ಕುಮಾರ್ ಅವರ ಸಿನೇಮಾಗಳಲ್ಲಿ ಈ ರೀತಿಯೆಂದೂ ತೋರಿಸಲಿಲ್ಲ.

ಉದಾಹರಣೆಗೆ 1982ರಲ್ಲಿ ಬಿಡುಗಡೆಯಾದ ಬೆಮಿಸಾಲ್ ಎನ್ನುವ ಅಮಿತಾಭ್ ಬಚ್ಚನ್‌ರ ಸಿನೇಮಾದಲ್ಲಿ ಕಾಶ್ಮೀರವನ್ನು ಮೊಘಲರು ಕಂಡು ಹಿಡಿದರು ಎನ್ನುತ್ತಾ ಮೊಘಲರನ್ನು ಕೊಂಡಾಡುತ್ತಾರೆ‌. ಸಾವಿರಾರು ವರ್ಷಗಳಿಂದ ಜ್ಞಾನದ ಬಂಡಾರವಾಗಿದ್ದ ಕಾಶ್ಮೀರವನ್ನು ನಾಶ ಮಾಡಿ, ಅಲ್ಲಿ ಜಿಹಾದ್ ನಡೆಸಿದ ಮೊಘಲರು ಕಾಶ್ಮೀರವನ್ನು ಹುಡುಕಿದರು ಎಂಬ ಸುಳ್ಳು ನರೇಟಿವ್ ಅನ್ನು ತುಂಬುತ್ತಾರೆ. ಇದಕ್ಕೆ ತದ್ವಿರುದ್ಧವಾಗಿ 1983ರಲ್ಲಿ ಬಿಡುಗಡೆಯಾದ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನನ್ನ, ಅವನ ವಿದ್ವತ್ ಪ್ರತಿಭೆಗಳೇ ತುಂಬಿದ ಆಸ್ಥಾನವನ್ನ, ಅಲ್ಲಿನ ಸಂಸ್ಕೃತಿಯನ್ನು ಬಿಂಬಿಸುವ, ಅದರ ಪ್ರತಿಭೆಯನ್ನು ಜಗತ್ತಿನೆದುರು ತೆರೆದಿಡುವ ಚಿತ್ರವನ್ನು ತೆರೆಯುತ್ತಾರೆ.ಕನ್ನಡ ನಾಡಿನ ಅನೇಕ ಪೀಳಿಗೆಗಳು ಹೀಗೆ ತಿರುಚಿದ ಇತಿಹಾಸವನ್ನು ನಂಬಿಕೊಂಡು, ತಮ್ಮನ್ನು ಹೀಗಳೆದುಕೊಳ್ಳುವುದಕ್ಕಿಂತ ಶ್ರೇಷ್ಠ ಜ್ಞಾನಪರಂಪರೆಯ ವಾರಸುದಾರರು ನಾವು ಎಂದು ಹೆಮ್ಮೆ ಪಡುವಂತಹ ಕಥೆಗಳನ್ನು ಆರಿಸುತ್ತಾರೆ.ಭಾರತೀಯ ಮೂಲದ ರಾಮಾಯಾಣ ಮಹಾಭಾರತದ ಕಥೆಗಳನ್ನು ಆರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಆಧುನಿಕವಾಗಿಯೂ ಮತ್ತು ನೆಲಮೂಲದ ಸಂಸ್ಕೃತಿಯನ್ನು ಎರಡನ್ನೂ ಸಮರ್ಥವಾಗಿ ತೂಗಿಸಿಕೊಂಡು ಕರ್ನಾಟಕದ ಸಾಂಸ್ಕೃತಿಕ ಪಲ್ಲಟಗಳನ್ನು ನಿಭಾಯಿಸಿದವರು ಡಾ.ರಾಜ್‌ಕುಮಾರ್.

ಪೌರಾಣಿಕ ಐತಿಹಾಸಿಕ ಕಥೆಗಳ ಆಯ್ಕೆಯಲ್ಲಿರಬಹುದು ಅಥವಾ ಸಾಮಾಜಿಕ ಸಿನೆಮಾಗಳ ಕಥಾಹಂದರದಲ್ಲಿರಬಹುದು ಎಲ್ಲೆಡೆಯೂ ಅತ್ಯಂತ ಸಾತ್ವಿಕವಾದ ಸಂದೇಶ ನೀಡುತ್ತಾ ಮತ್ತು ಪ್ರಸ್ತುತಿಯಲ್ಲೂ ಕೂಡ ಸಮಾಜಕ್ಕೆ ಮೌಲ್ಯಗಳನ್ನು ನೀಡುತ್ತಾ,ಲೋಕ ಶಿಕ್ಷಣದ ರಹದಾರಿಯಾಗಿ ಕೆಲಸ ಮಾಡಿದ್ದವು ಅವರ ಸಿನೇಮಾಗಳು.ಆ ರೀತಿಯ ಮಾದರಿಯಲ್ಲಿ ರಾಜ್‌ಕುಮಾರ್‌ರವರ ಸಿನೇಮಾಗಳು ಅದ್ಭುತವಾದ ಪರಿಣಾಮ ಬೀರಿದ್ದವೆಂದೇ ಹೇಳಬಹುದು.ಬಂಗಾರದ ಮನುಷ್ಯ ಸಿನೆಮಾದಿಂದ ಕೃಷಿ ಕಡೆಗೆ ಮುಖ ಮಾಡಿದವರು ಅದೆಷ್ಟೋ ಮಂದಿ.ಅಥವಾ ಬಾಳುವಂತೆ ಹೂವೆ ಹಾಡಿನಿಂದ ಪ್ರೇರಣೆ ಪಡೆದು ಕುಡಿತ ಬಿಟ್ಟವರು ಅದೆಷ್ಟೋ ಮಂದಿ.

ಇನ್ನು ಅವರ ಪಾತ್ರದ ಪೋಷಣೆಯೂ ಅತ್ಯಂತ ಸಹಜವಾದ ಜನಸಾಮಾನ್ಯರಿಗೆ ನಿಲುಕುವಂತಿತ್ತು.ಕಾರ್ಮಿಕ,ರೈತ,ಮೇಷ್ಟ್ರು,ಕೂಲಿ,ಬ್ಯಾಂಕಿನ ನೌಕರ ಹೀಗಿನ ಪಾತ್ರಗಳಲ್ಲಿ ನಟಿಸುತ್ತಾ ಸಮಾಜದ ದನಿಯಾಗುವ ಅವರೊಳಗೆ ಒಬ್ಬರಾಗುತ್ತಾ ಮಾದರಿಯನ್ನ ನಿರ್ಮಾಣ ಮಾಡಿಕೊಟ್ಟು ಬದುಕಿದವರು ಡಾ.ರಾಜ್‌ಕುಮಾರರು.

ಅವರ ಸಿನೆಮಾಗಳಲ್ಲಿ ಹೊಯ್ಸಳರ ಶಿಲ್ಪಕಲೆ, ದೇಗುಲಗಳು, ಭಾರತೀಯ ಆಚಾರ ವಿಚಾರಗಳ ಕುರಿತಾದ ಶ್ರದ್ಧೆ ಯಥೇಚ್ಛವಾಗಿ ದೊರೆಯುತ್ತದೆ.ಕನ್ನಡ ನಾಡು ನುಡಿ,ಹೆಣ್ಣುಮಕ್ಕಳ ಕುರಿತಾದ ಗೌರವ ಭಾವ,ಸಾಮರಸ್ಯದ ಹೊಳೆಯೂ ಹರಿಯುತ್ತದೆ.ಇದೇ ಇವತ್ತಿಗೂ ಕನ್ನಡ ಚಿತ್ರರಂಗದ ಅಡಿಪಾಯವಾಗಿ ಮುಂದುವರೆದಿದೆ.

ಅಲ್ಲದೆ ಕನ್ನಡದ ಕವಿ, ಕಾದಂಬರಿಕಾರರು, ಕತೆಗಾರರನ್ನು ಸಾಮಾನ್ಯರಿಗೆ ಪರಿಚಯಿಸುವ ಅವರ ಕವಿತೆಗಳನ್ನು,ವಿಚಾರಗಳನ್ನು ಜನರ ಮುಂದಿಡುವ ಡಾ.ರಾಜ್‌ರ ಆ ಸಂಪ್ರದಾಯ ಸಾಮಾನ್ಯ ಜನರಿಗೂ ಕೂಡ ಅಪರೋಕ್ಷವಾಗಿ ಸಾಹಿತ್ಯದ ಔತಣವನ್ನು ಊಡಿಸಿತ್ತು ಎಂದರೆ ತಪ್ಪಾಗಲಾರದು.

ಅಲ್ಲದೆ ಮಲೆ ಮಹದೇಶ್ವರನ ಕುರಿತಾದ ಹಾಡುಗಳು, ಭಜನೆಗಳು ಇಂದಿಗೂ ಶ್ರಮ ಸಂಸ್ಕೃತಿಯ, ಗ್ರಾಮೀಣ ಸಂಸ್ಕೃತಿಗಳ ದ್ಯೋತಕವಾಗಿ ನಮ್ಮನ್ನು ಮುನ್ನಡೆಸುತ್ತಲೆ ಬಂದಿದೆ. ಹಾಗು ಅವರ ಯೋಗಾಭ್ಯಾಸ ಶಿಸ್ತಿನಿಂದ ಕೂಡಿದ್ದ ದಿನಚರಿಗಳು ಅವರ ಸಾತ್ವಿಕ ನಡತೆಗಳು ಮೇಲ್ಪಂಕ್ತಿಯೇ ಸೈ.

ಆ ಹಿನ್ನೆಲೆಯಲ್ಲಿ ಡಾ.ರಾಜ್‌ಅವರ ಚಿತ್ರಗಳು,ಅವರ ಗುಣ ನಡತೆಗಳು ಇಂದಿಗೂ ಪೀಳಿಗೆಗಳ ನಂತರವೂ ಪ್ರಸ್ತುತವೆನಿಸುತ್ತದೆ.ಇಂದಿಗೂ ಅವರೊಬ್ಬ ಕನ್ನಡದ ಸಾಂಸ್ಕೃತಿಕ ರಾಯಭಾರಿಯಾಗಿ ಕಾಣುತ್ತಾರೆ.

  • email
  • facebook
  • twitter
  • google+
  • WhatsApp
Tags: actorDr.RajkumarKannada cinemasinger

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post

ಬ್ರಿಟೀಷರ ಕ್ರೌರ್ಯದ ಪರಮಾವಧಿ - ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

EDITOR'S PICK

RSS Karnataka’s MouthPiece VIKRAMA’s new office Inaugurated at Bangalore

RSS Karnataka’s MouthPiece VIKRAMA’s new office Inaugurated at Bangalore

July 7, 2013
Veteran RSS Pracharak Sohan Sing ji, 93, passes away in New Delhi

Veteran RSS Pracharak Sohan Sing ji, 93, passes away in New Delhi

July 5, 2015
RSS Sarasanghachalak Mohan Bhagwat to visit Rajasthan from Feb 20 to 24, 2015

RSS Sarasanghachalak Mohan Bhagwat to visit Rajasthan from Feb 20 to 24, 2015

February 19, 2015
23 Italians receive Hindu Diksha at PUDUCHERRY

23 Italians receive Hindu Diksha at PUDUCHERRY

August 10, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In