• Samvada
  • Videos
  • Categories
  • Events
  • About Us
  • Contact Us
Tuesday, February 7, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ದಲಿತರ ಏಳಿಗೆಗೆ ಮಾನವೀಯ ಕಾಳಜಿ ಹೊಂದಿರುವ ಮೇಲ್ವರ್ಗದವರ ಕೊಡುಗೆ ಅತ್ಯಮೂಲ್ಯ – ಡಾ. ಸಿದ್ದಲಿಂಗಯ್ಯ

Vishwa Samvada Kendra by Vishwa Samvada Kendra
July 7, 2014
in Others
252
0
ದಲಿತರ ಏಳಿಗೆಗೆ ಮಾನವೀಯ ಕಾಳಜಿ ಹೊಂದಿರುವ ಮೇಲ್ವರ್ಗದವರ ಕೊಡುಗೆ ಅತ್ಯಮೂಲ್ಯ – ಡಾ. ಸಿದ್ದಲಿಂಗಯ್ಯ

Dr Siddalingaiah addressing on Dalit issues at Mythic Society

494
SHARES
1.4k
VIEWS
Share on FacebookShare on Twitter

ಬೆಂಗಳೂರು ೦6-೦7-2014: ’ದಲಿತರು ಏಳಿಗೆ ಹೊಂದುವುದರಲ್ಲಿ ಮಾನವೀಯ ಕಾಳಜಿ ಹೊಂದಿರುವ ಮೇಲ್ವರ್ಗದವರ ಪ್ರಯತ್ನ ಅತ್ಯಮೂಲ್ಯವಾಗಿದೆ. ದಲಿತರಲ್ಲಿ ದಲಿತೇತರ ಹಿಂದೂ ಸಮಾಜ ಸುಧಾರಕರ ಬಗ್ಗೆ ಗೌರವವನ್ನು ಬೆಳೆಸಬೇಕಾಗಿದೆ. ಅವರ ಪ್ರಯತ್ನಗಳನ್ನು ಎಂದೂ ಮರೆಯಬಾರದು’ ಎಂದು ಹಿರಿಯ ಕವಿ, ಚಿಂತಕ ಡಾ. ಸಿದ್ದಲಿಂಗಯ್ಯ ಅಭಿಪ್ರಾಯ ಪಟ್ಟರು. ನಗರದ ಮಿಥಿಕ್ ಸೊಸೈಟಿಯ ಆಶ್ರಯದಲ್ಲಿ ದಲಿತಗುರು ದಿ. ಶ್ರೀ ತಲಕಾಡು ರಂಗೇಗೌಡರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದಲಿತ ಸಮಸ್ಯೆಯ ಹೊಸ ಆಯಾಮಗಳು ಎನ್ನುವ ವಿಷಯವನ್ನು ಕುರಿತು ಅವರು ಉಪನ್ಯಾಸ ನೀಡಿದರು.

Dr Siddalingaiah addressing on Dalit issues at Mythic Society
Dr Siddalingaiah addressing on Dalit issues at Mythic Society

’ಆರ್ಯಸಮಾಜ ಥಿಯೋಸೋಫಿಕಲ್ ಸೊಸೈಟಿ, ರಾಮಕೃಷ್ಣ ಆಶ್ರಮ ಮೊದಲಾದ ದಲಿತೇತರ ಸಂಘ ಸಂಸ್ಥೆಗಳು, ಮಹಾತ್ಮಾ ಗಾಂಧಿ, ಜ್ಯೋತಿಬಾ ಫುಲೆಯವರರತಹ ಮೇಲ್ವರ್ಗದ ಹಿಂದೂ ಸಮಾಜ ಸುಧಾರಕರ ಪ್ರಯತ್ನದಿಂದ ಅನೇಕ ದಲಿತರು ಜೀವನದಲ್ಲಿ ಮುಂದೆಬಂದರು. ಕರ್ನಾಟಕದಲ್ಲೂ ಗೋಪಾಲಸ್ವಾಮಿ ಐಯ್ಯರ್ರವರು, ವರದರಾಜ ಅಯ್ಯಂಗಾರರು ಮುಂತಾದವರು ದಲಿತರ ಸುಧಾರಣೆಗೆ ಗಣನೀಯ ಕೊಡುಗೆ ನೀಡಿದ್ದಾರೆ’ ಎಂದು ನುಡಿದ ಸಿದ್ದಲಿಂಗಯ್ಯನವರು, ಗೋಪಾಲಸ್ವಾಮಿ ಐಯ್ಯರ್ರವರು ಬೆಂಗಳೂರಿನಲ್ಲಿ ದಲಿತ ವಿದ್ಯಾರ್ಥಿಗಳ ವಸತಿ ಸಮಸ್ಯೆಯನ್ನು ಸರ್ ಸಿ ವಿ ರಾಮನ್ರಲ್ಲಿ ಪ್ರಸ್ತಾಪಿಸಿದಾಗ ರಾಮನ್ರವರು ದಲಿತ ವಿದ್ಯಾರ್ಥಿಗಳ ಹಾಸ್ಟೆಲ್ಗಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟ ಘಟನೆಯನ್ನು ಸ್ಮರಿಸಿದರು.
ದಲಿತಗುರುವೆಂದೇ ಹೆಸರಾದ ದಿ. ಟಿ ರಂಗೇಗೌಡರು ದಲಿತರ ಶಾಲೆಗೆ ಉಪಾಧ್ಯಾಯರಾಗಿ ಬಂದು ಅನೇಕ ದಲಿತ ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆಗೆ ಕಾರಣರಾಗಿದ್ದನ್ನೂ, ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಹಾಗೆಯೇ ಅವರಿಂದ ಕಲಿತ ವಿದ್ಯಾರ್ಥಿಗಳು ನೀಡಿ ಗೌರವಿಸಿದ ಬಿನ್ನವತ್ತಳೆಯ ಸಾಲುಗಳನ್ನು ವಾಚಿಸುತ್ತ ರಂಗೇಗೌಡರ ಬಗ್ಗೆ ಇರುವ ಗೌರವಾಭಿಮಾನವನ್ನು ಉಲ್ಲೇಖಿಸಿದರು.
’ಗಾಂಧೀಜಿಯವರಿಗೆ ಹರಿಜನರ ಬಗ್ಗೆ ಕಾಳಜಿಯಿದ್ದರೂ ಬ್ರಿಟಿಷರನ್ನು ಭಾರತದಿಂದ ಓಡಿಸಿ ಸ್ವಾತಂತ್ರ್ಯ ಗಳಿಸುವುದೇ ಅವರ ಮೊದಲ ಗುರಿಯಾಗಿದ್ದರಿಂದ ಅಸ್ಪೃಷ್ಯತೆ ನಿವಾರಣೆ, ದಲಿತೋದ್ಧಾರ ಅವರ ಪ್ರಾಥಮಿಕ ಆದ್ಯತೆಯಾಗಿರಲಿಲ್ಲ. ಆದರೆ ಅಂಬೇಡ್ಕರ್ರವರೊಂದಿಗಿನ ಸಂವಾದದ ನಂತರ ದಲಿತೋದ್ಧಾರದ ಬಗ್ಗೆ ಗಾಂಧಿಜಿಯವರ ಕಾಳಜಿ ಹೆಚ್ಚಾಯಿತು. ಪೂನಾ ಒಪ್ಪಂದದ ಸಂಧರ್ಭದಲ್ಲಿ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವ ವಿಷಯದಲ್ಲಿ ಗಾಂಧೀಜಿಯವರು ಉಪವಾಸಕ್ಕೆ ಕುಳಿತಾಗ, ದಲಿತರ ಹಿತ ಮತ್ತು ದೇಶದ ಹಿತದ ಪ್ರಶ್ನೆ ಬಂದಾಗ ಅಂಬೇಡ್ಕರ್ರವರು ದೇಶದ ಹಿತವನ್ನು ಆಯ್ದುಕೊಂಡು ಒಪ್ಪಂದಕ್ಕೆ ಒಪ್ಪಿದರು. ಪ್ರತ್ಯೇಕ ಮತಾಧಿಕಾರವನ್ನು ಕೈಬಿಟ್ಟರು. ಆದರೆ ದುರದೃಷ್ಟದಿಂದ ಇಂದಿನ ದಲಿತರ ರಾಜಕಾರಣವೆಂದರೆ ಮೇಲ್ವರ್ಗದ ರಾಜಕಾರಣಿಗಳನ್ನು ಓಲೈಸುವುದೇ ಆಗಿದೆ. ಅಂಬೇಡ್ಕರ್ರಂತವರೇ ಕಾಂಗ್ರೆಸ್ ನಿಲ್ಲಿಸಿದ ಅನಕರಸ್ಥ ಅಭ್ಯರ್ಥಿಯ ವಿರುದ್ಧ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತಾಯಿತು. ಕರ್ನಾಟಕದಲ್ಲೂ ಆರ್ ಭರಣಯ್ಯನವರು, ಎಲ್ ಶಿವಲಿಂಗಯ್ಯನವರು, ಎನ್ ಸಿ ಬಡಿಗೇರಿಯಂತಹ ಮಹನೀಯರೂ ಚುನಾವಣೆಗಳಲ್ಲಿ ಸೋಲುಂಡರು. ಏಕೆಂದರೆ ಇಂದಿಗೂ ದಲಿತ ಮೀಸಲು ಕ್ಷೇತ್ರಗಳಲ್ಲೂ ಮೇಲ್ವರ್ಗದವರೇ ನಿರ್ಣಾಯಕವಾಗಿದ್ದಾರೆ. ಆದ್ದರಿಂದ ದಲಿತರಿಗೆ ಸ್ವತಂತ್ರವಾಗಿ ರಾಜಕಾರಣದಲ್ಲಿ ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ಈಗಲೂ ಏಕೆ ಹೀಗೆ ಆಗುತ್ತಿದೆಯೆಂದರೆ ಬಹುಶಃ ಗಾಂಧೀಜಿ ಮತ್ತು ಅಂಬೇಡ್ಕರ್ರವರು ಅಂದುಕೊಂಡ ರೀತಿಯಲ್ಲಿ ಸಮಾಜ ಸುಧಾರಣೆಯಾಗಿಲ್ಲ ಅನ್ನಿಸುತ್ತದೆ’ ಎಂದು ಅವರು ನುಡಿದರು.

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

IMG_4750
’ಇಂದು ಸಮಾಜದಲ್ಲಿ ಎರಡು ತರಹದ ಗುಂಪನ್ನು ಕಾಣುತ್ತೇವೆ. ಒಂದು ಗುಂಪು ಜಾತೀಯತೆ ಅಸ್ಪೃಷ್ಯತೆಯನ್ನು ಪಾಲಿಸುತ್ತ ಇನ್ನೂ ಮೌಢ್ಯ ಆಚರಣೆಗಳನ್ನೇ ಮುಂದುವರಿಸುತ್ತಿದೆ. ಇನ್ನೊಂದು ಗುಂಪು ವೇದ ಉಪನಿಷತ್ತುಗಳ ಕಾಲದಿಂದಲೂ ಸಮಾನತೆ ಮಾನವೀಯ ಕಾಳಜಿಗಳನ್ನು ಪೋಷಿಸುತ್ತ ಬಂದಿದೆ. ಇತ್ತೀಚೆಗೆ ದಲಿತರ ಶಿಕ್ಷಣ ಮಟ್ಟದಲ್ಲಿ ಸುಧಾರಣೆಯಾಗಿದೆ. ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ವರ್ಗದವರಿಗಿಂತ ದಲಿತರೇ ಹೆಚ್ಚು ಶಿಕ್ಷಣವಂತರಾಗುತ್ತಿರುವುದನ್ನು ಕಾಣಬಹುದು. ಇದರಲ್ಲಿ ಮೇಲ್ವರ್ಗದ ಸುಧಾರಕರ ಪ್ರಾಮಾಣಿಕ ಪ್ರಯತ್ನವನ್ನು ಮರೆಯುವಂತಿಲ್ಲ. ಆದ್ದರಿಂದ ಮೇಲ್ವರ್ಗದವರೆಲ್ಲ ಕೆಟ್ಟವರು ದಲಿತರೆಲ್ಲ ಒಳ್ಳೆಯವರು ಎಂದು ನಿರ್ಣಯಿಸಲಾಗುವುದಿಲ್ಲ. ಅವರವರ ಹಿನ್ನೆಲೆ, ಸಾಮಾಜಿಕ ಸನ್ನಿವೇಶ, ಸಂಸ್ಕಾರಗಳಿಗನುಗುಣವಾಗಿ ಅವರವರ ವಿಚಾರಗಳು ಬದಲಾಗುತ್ತವೆ. ದಲಿತರ ಸಮಸ್ಯೆಯು ತುಂಬ ಸಂಕೀರ್ಣವಾಗಿದ್ದು ದಲಿರಿಂದ ಮಾತ್ರ ಅವರ ಉದ್ಧಾರ ಸಾಧ್ಯವಿಲ್ಲ. ದಲಿತೇತರರಲ್ಲಿ ಸುಧಾರಣೆಯ ಮಾನಸಿಕತೆ ಹೆಚ್ಚು ಹೆಚ್ಚು ಬೆಳೆದಷ್ಟು ಜಾತೀಯತೆ, ಅಸ್ಪೃಷ್ಯತೆಯಂತಹ ಸಮಸ್ಯೆಗಳು ತೊಲಗುತ್ತವೆ, ದಲಿತರಲ್ಲಿ ಶಿಕ್ಷಣದ ಮಟ್ಟ ಹೆಚ್ಚುತ್ತದೆ, ಸಮಾಜ ಸುಧಾರಣೆಯಾಗುತ್ತದೆ. ಜೊತೆಗೆ ದಲಿತರಲ್ಲೂ ಕೂಡ ನಾವು ಕೀಳು, ಅಸ್ಪೃಷ್ಯರು ಎನ್ನುವುದನ್ನು ಒಪ್ಪದಿರುವ ಭಾವ ಬೆಳಯಬೇಕು, ನಾವು ಸಮಾನರು ಎನ್ನುವ ಮಾನಸಿಕತೆ ಜಾಗೃತವಾಗಬೇಕು. ದಲಿತ ಜಾಗೃತಿಯೆಂದರೆ ಮೇಲ್ವರ್ಗದವರ ದ್ವೇಷವಲ್ಲ. ದಲಿತರ ಬಗ್ಗೆ ಮಾನವೀಯ ಕಾಳಜಿಯ ಜಾಗೃತಿ. ದಲಿತ ಸುಧಾರಣೆಯಲ್ಲಿ ಮೇಲ್ವರ್ಗದವರು ಮಾಡಿದ ಕಾರ್ಯಗಳಿಗೆ ನಮ್ಮ ನಮನ ಸದಾ ಇರಲಿ.’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಆರೆಸ್ಸೆಸ್ ಪ್ರಚಾರಕರೂ, ಸಾಹಿತಿಗಳೂ ಚಿಂತಕರೂ ಆದ ಚಂದ್ರಶೇಖರ ಭಂಡಾರಿಯವರು ’ಸ್ವಾತಂತ್ರ್ಯಾನಂತರ ಇದವರೆಗೂ ಸಮಾಜದಲ್ಲಿ ದಲಿತರ ವಿಷಯದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಸಂವಿಧಾನ ನೀಡಿರುವ ಹಕ್ಕು ಮೀಸಲಾತಿಯಂತಹ ಕಾರ್ಯಕ್ರಮಗಳಿಂದ ದಲಿತರ ಉನ್ನತಿ ಸಾಧ್ಯವಾಗಿದೆ. ಒಂದು ರೀತಿಯಲ್ಲಿ ಈಗ ಅರ್ಧ ಸುಧಾರಣೆಯಾಗಿದೆ ಎನ್ನಬಹುದು’ ಎಂದು ನುಡಿದರು.
’ಸಮಾಜದ ಜಾಗೃತಿಯ ಜೊತೆಗೆ ದಲಿತರಲ್ಲಿ ಆತ್ಮಗೌರವವೂ ಬೆಳೆಯಬೇಕು. ಸರ್ಕಾರ ಸಮಾಜ ನೀಡುವ ಸೌಲಭ್ಯಗಳು ನಡೆಯುತ್ತ ಇರಲಿ, ಆದರೆ ಈ ಸೌಲಭ್ಯಗಳ ಅಗತ್ಯ ನಮಗಿಲ್ಲ ಎಂದು ಹೇಳುವ ಸಾಮರ್ಥ್ಯ ದಲಿತರಲ್ಲಿ ಬೆಳೆಯಬೇಕು. ತಾತ್ಕಾಲಿಕವೆಂದು ನೀಡಲಾಗಿದ್ದ ಮೀಸಲಾತಿಯಂತಹ ಸೌಲಭ್ಯ ನಮಗೆ ಬೇಡ ಎಂದು ಹೇಳುವ ಧೈರ್ಯ ಬೆಳೆಯಬೇಕು. ನಾವು ಎಂದಿಗೂ ದಲಿತರಾಗಿಯೇ ಇರುತ್ತೇವೆ ಎನ್ನುವ ಮಾನಸಿಕತೆಯಿಂದ ದಲಿತರು ಹೊರಬರಬೇಕು. ನಮ್ಮ ಕಾಲ ಮೇಲೆ ನಾವು ನಿಲ್ಲಬಲ್ಲೆವೆನ್ನುವ ಅಭಿಮಾನ ದಲಿತರಲ್ಲಿ ಜಾಗೃತವಾಗಬೇಕು. ಆಗ ಸಮಸ್ಯೆಯ ಪರಿಹಾರ ಸಾಧ್ಯ. ಪ್ರಯತ್ನ ಎರಡೂ ಕಡೆಯಿಂದ ನಡೆಯಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

IMG_4721
ಕಾರ್ಯಕ್ರಮದ ಪ್ರಾರಂಭದಲ್ಲಿ ತಮ್ಮ ಅನುವಾದ, ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೃತಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಶಸ್ತಿಗೆ ಭಾಜನರಾದ ಚಂದ್ರಶೇಖರ ಭಂಡಾರಿಯವರನ್ನು ಸನ್ಮಾನಿಸಲಾಯಿತು.
ಇದೇ ಸಂಧರ್ಭದಲ್ಲಿ ಮಾಜಿ ಸಚಿವ ಲೇಖಕ ಡಾ. ಮಮ್ತಾಜ್ ಅಲೀ ಖಾನರು ರಚಿಸಿರುವ ದಲಿತರು ಅಂದು ಮತ್ತು ಇಂದು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮವನ್ನು ಸ್ವಾಗತಿಸುತ್ತ ಪ್ರಾಸ್ತಾವಿಕ ನುಡಿಗಳನ್ನಾಡಿದ ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿಗಳಾದ ವಿ. ನಾಗರಾಜರವರು ದಿ ಟಿ ರಂಗೇಗೌಡರ ಕಾರ್ಯಗಳನ್ನು ಸ್ಮರಿಸಿದರು.
ಮಿಥಿಕ್ ಸೊಸೈಟಿಯ ಅಧ್ಯಕ್ಷರಾದ ಎಮ್ಎಲ್ಎನ್ಕೆ ಶಾಸ್ತ್ರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ಎಮ್ ಜಿ ನಾಗರಾಜರವರು ವಂದಿಸಿದರು.

DSCN0066a

 

Report by Satyanarayana Shanubhag for VSK Karnataka

 

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
Senior RSS functionaries Ram Madhav and Shiv Prakash to take new responsibility in BJP

Senior RSS functionaries Ram Madhav and Shiv Prakash to take new responsibility in BJP

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Ram Madhav article in today’s Kannada Prabha Dec 28-2011

December 28, 2011
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕಕ್ಕೆ ಕೇಂದ್ರ ಸರ್ಕಾರ ಅನುಮೋದನೆ

April 20, 2021
VHP ಮುಖಂಡ ಪ್ರವೀಣ್ ತೊಗಡಿಯಾ ಧರ್ಮಸ್ಥಳ ಭೇಟಿ :

VHP ಮುಖಂಡ ಪ್ರವೀಣ್ ತೊಗಡಿಯಾ ಧರ್ಮಸ್ಥಳ ಭೇಟಿ :

January 7, 2014
Thank You PranabDa for addressing us at Nagpur : RSS Sahsarkayavah, Dr. Manmohan Vaidya

Thank You PranabDa for addressing us at Nagpur : RSS Sahsarkayavah, Dr. Manmohan Vaidya – Kannada Article

June 25, 2018

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In