• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

Vishwa Samvada Kendra by Vishwa Samvada Kendra
March 25, 2022
in Articles
262
0
514
SHARES
1.5k
VIEWS
Share on FacebookShare on Twitter

ಇತ್ತೀಚಿನ ಕೆಲವು ದಿನಗಳಿಂದ ಹಿಂದೂ ಸಮಾಜದಲ್ಲಿ ಒಂದು ಹೊಸ ಬದಲಾವಣೆಯನ್ನು ಗಮನಿಸಬಹುದು ಅದರಲ್ಲಿಯೂ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಈ ಬದಲಾವಣೆ ಹೆಚ್ಚಾಗಿ ಕಾಣಬಹುದು.ಅದು ಮುಸಲ್ಮಾನ ವ್ಯಾಪಾರಿಗಳನ್ನು ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ, ಜಾತ್ರಾ ಮಹೋತ್ಸವದಲ್ಲಿ ಅವರ ಭಾಗವಹಿಸುವಿಕೆಯನ್ನು ಹಿಂದೂ ಸಮಾಜ ಬಹಿಷ್ಕಾರ ಮಾಡಿದೆ.ಅದು ಶಿವಮೊಗ್ಗದ ಮಾರಿ ಜಾತ್ರೆಯಾಗಿರಬಹುದು,ಅಥವಾ ಕರಾವಳಿಯ ಅನೇಕ ಧಾರ್ಮಿಕ ಕ್ಷೇತ್ರಗಳಿರಬಹುದ,ಇಲ್ಲೆಲ್ಲ ಅನ್ಯಮತೀಯರನ್ನ ಬಹಿಷ್ಕಾರ ಮಾಡುವ ಪರಿಪಾಠ ಆರಂಭವಾಗಿದೆ.

ಇದೇನು ಧಿಗ್ಗೆಂದು ರಾತ್ರೋರಾತ್ರಿ ಆದ ಬದಲಾವಣೆಯೂ ಅಲ್ಲ. ಸದ್ಯಕ್ಕೆ ಈ ‘ದ ಕಾಶ್ಮೀರ ಫೈಲ್ಸ್’  ಚಲನಚಿತ್ರ, ಹರ್ಷ ಕೊಲೆ ಪ್ರಕರಣ ಮತ್ತು  ಕರ್ನಾಟಕದಲ್ಲಿ ಭುಗಿಲೆದ್ದ ಹಿಜಾಬ್ ಗಲಭೆ ಈ ಮೂರೂ ವಿಷಯಗಳು ಹಿಂದುಗಳನ್ನು ಎಚ್ಚರಗೊಳಿಸುವಲ್ಲಿ  ಸ್ವಲ್ಪ ಮಟ್ಟಿಗೆ ಸಹಕಾರಿಯಾಗಿದೆ.ಹಿಂದೂಗಳು ಮೈಮರೆವಿನಿಂದ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇಲ್ಲಿ ಯಾರು ಈ ನೆಲದ ಕಾನೂನಿಗೆ ಗೌರವ ನೀಡುವುದಿಲ್ಲವೋ ಅವರನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶದೊಂದಿಗೆ ಸಮಾಜ ಒಂದುಗೂಡುತ್ತಿದೆ‌.ಅದು ಯಾವುದೇ ಸಮುದಾಯದ ಮೇಲಿನ ದ್ವೇಷವಲ್ಲ.ಬದಲಾಗಿ ಒಗ್ಗಟ್ಟಿನ ಮಂತ್ರವನ್ನು ಮುರಿದವರನ್ನು ಬಿಟ್ಟು ಮುಂದೆ ಹೋಗುವ ಪ್ರಯತ್ನ ಅಷ್ಟೆ‌.

READ ALSO

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

ಕರ್ನಾಟಕದ ಬೇಲೂರು ಹಳೆಬೀಡು ಸೋಮನಾಥಪುರ ಇದಲ್ಲದೆ ಸವದತ್ತಿ, ಮಾರಿಕಾಂಬಾ , ಧರ್ಮಸ್ಥಳ  ಹೀಗೆ ಧಾರ್ಮಿಕ ಕ್ಷೇತ್ರಗಳಲ್ಲಿ ದೇವಸ್ಥಾನದ ಕಾರಣಕ್ಕೆ ನಡೆಯುವ ಅಂಗಡಿಗಳು, ಮಳಿಗೆ ಹಾಕುವ ಮುಸಲ್ಮಾನ ಅಂಗಡಿಗಳು ಹಿಜಾಬ್ ಪ್ರಕರಣದ ತೀರ್ಪು ಬಂದಾಗ ಕರ್ನಾಟಕ ಬಂದ್ ಮಾಡಿದ್ದಾರೆ.ಅಂದರೆ ಈ ದೇಶದ ಮೂಲ ಸಂವಿಧಾನವನ್ನೇ ಅವರ ಪರವಾದ ತೀರ್ಪು ಕೊಡದ ಕಾರಣಕ್ಕೆ ಧಿಕ್ಕರಿಸುವ ಸಹಬಾಳ್ವೆಗೆ ಒಗ್ಗದ ಮನಸ್ಥಿತಿಗೆ ಬರುವ ಮೂಲಕ ಸಮಾಜದೊಂದಿಗೆ ಒಟ್ಟಿಗೆ ಬೆರೆಯುವ ರೀತಿಗೆ ಹಿಮ್ಮುಖವಾಗಿದ್ದಾರೆ‌.” ನಾವು ಸಂವಿಧಾನವನ್ನು ನ್ಯಾಯಾಲಯ ಆದೇಶವನ್ನು ಮತ್ತು  ಹಿಂದುಗಳನ್ನು ವಿರೋಧಿಸುತ್ತೇವೆ, ಅಗತ್ಯವಿದ್ದಲ್ಲಿ ಮಾರಣಾಂತಿಕ ಹಲ್ಲೆ ಮಾಡುತ್ತೇವೆ  ಇನ್ನೊಂದು ಕಾಶ್ಮೀರ ಫೈಲ್ಸ್ ಮಾಡಲು ಸಿದ್ದ ” ಎಂದು ಕೆಲವರು ಪರೋಕ್ಷವಾಗಿ ಹೇಳಿದ್ದಾರೆ. ಅಂದರೆ ಸಂವಿಧಾನದ ಕಾರ್ಯದಂತೆ ನಡೆಯುವ ನ್ಯಾಯಾಲಯದಲ್ಲಿ ಅವರ ಪರವಾದ ವಿಚಾರಧಾರೆಗಳಿಲ್ಲದಾಗ ಯಾವ ಹಂತಕ್ಕೆ ಬೇಕಾದರೂ ಹೋಗುವ ಮನಸ್ಥಿತಿ ಮುಂದಿನ ದಿನಗಳಲ್ಲಿ ಬಹಳ ಅಪಾಯಕಾರಿಯಾಗಲಿದೆ.

ಕರ್ನಾಟಕದಲ್ಲಿ ಇತ್ತೀಚಿನ ಕೆಲ ದಿನಗಳಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಹಿಂದುಯೇತರರಿಗೆ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಹಿಂದೂ ಧಾರ್ಮಿಕ ಕ್ಷೇತ್ರಗಳು ಹೇಳುತ್ತಿರುವುದು ಸ್ವಾಗತಾರ್ಹ.ಹಿಂದೂ ಸಮಾಜ ಆರ್ಥಿಕವಾಗಿ ಸಬಲವಾಗಿದೆ‌.ಯಾವುದೇ ಅನ್ಯಮತೀಯರ ಸಹಕಾರವಿಲ್ಲದೆಯೂ ಸಮಾಜ ಅಳುಕಿಲ್ಲದೆ ಬದುಕಬಲ್ಲದು‌.ಅಲ್ಲದೆ ಹೀಗೆ ಮಾಡುವುದರಿಂದ ಹಿಂದೂ ಸಮಾಜದ ಒಳಗೆ ಉದ್ಯೋಗ,ಉದ್ಯಮಗಳನ್ನು ಹೆಚ್ಚುಗೊಳಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ.ಒಂದು ಸಮಾಜವಾಗಿ ನಾವು ನಮ್ಮ ಸಮಾಜದ ಹಿತ ಚಿಂತನೆ ನಡೆಸುವುದರಲ್ಲಿ ತಪ್ಪಿಲ್ಲ.

ಹೀಗೆ ಧಾರ್ಮಿಕ ಕ್ಷೇತ್ರದಲ್ಲಿ ಹಿಂದೂಯೇತರರಿಗೆ ಅವಕಾಶವಿಲ್ಲ ಎಂದಾಗ ಹಿಂದುಯೇತರ ಸಣ್ಣ ವ್ಯಾಪರಿಗಳು “ನಮ್ಮ ಹೊಟ್ಟೆ ಮೇಲೆ ಹೊಡಿಬೇಡಿ ನಾವು ನಿಮ್ಮ ದ್ವೇಷಿಗಳಲ್ಲ” ಎಂದು ಪತ್ರಿಕಾ ಗೋಷ್ಠಿ ನಡೆಸಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ‌. ಆದರೆ ನೆನಪಿರಲಿ, ಈ ಸಣ್ಣ ವ್ಯಾಪಾರಿಗಳು ಮೊನ್ನೆ ನಡೆದ ಕರ್ನಾಟಕ ಬಂದ್ ಗೆ ಪೂರ್ಣ ಬೆಂಬಲ ಸೂಚಿಸಿದ್ದರು, ಈ ಅನ್ಯ ಮತೀಯರ ಕಣ್ಣೀರಿಗೆ ಕರಗದೆ ಪೂರ್ಣ ಪ್ರಮಾಣದಲ್ಲಿ ಆರ್ಥಿಕವಾಗಿ ದೂರವಿಡುವ ಅಗತ್ಯವಿದೆ‌. ನಾವು ತಕ್ಷಣಕ್ಕೆ ಮಾಡಬೇಕಾಗಿರುವುದು, ಅನ್ಯಧರ್ಮಿಯರ ಬಳಿ ನಮ್ಮ  ವ್ಯಾಪಾರ ವ್ಯವಹಾರವನ್ನು ತಕ್ಷಣವಾಗಿ ನಿಲ್ಲಿಸಿ ಹಿಂದೂಗಳೊಟ್ಟಿಗಿನ ವ್ಯವಹಾರವನ್ನು ನಡೆಸುವುದೇ ಆಗಿದೆ. ಇದರಿಂದ ಒಂದು ಸಂವಿಧಾನ ವಿರೋಧಿ ಮನಸ್ತಿತಿಗೆ ಸಾತ್ವಿಕ ಪ್ರತಿಭಟನೆಯನ್ನು ಮತ್ತು ಹಿಂದೂ ಸಮಾಜದ ಆರ್ಥಿಕ ಪರಿಸ್ಥಿತಿಯ ಸುಧಾರಣೆಯನ್ನು ಮಾಡದಂತಾಗುತ್ತದೆ.

ನೆನಪಿರಲಿ, ಬೆಂಗಳೂರು ಮಹಾನಗರದಲ್ಲಿ ಅನೇಕ ಸಣ್ಣ ಪ್ರದೇಶಗಳು ನಮ್ಮ ವ್ಯಾಪಾರದ ಮುಷ್ಠಿಯಿಂದ ಜಾರಿವೆ, ಮಲ್ಲೇಶ್ವರದಲ್ಲಿ ಬೀದಿಬದಿಯ ವ್ಯಾಪಾರಿಗಳು ೯೦%, ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಹೆಚ್ಚಿರುವ ಮುಸಲ್ಮಾನ ವ್ಯಾಪಾರಿಗಳು ಆಗಾಗ ಜೈನ ಸಮುದಾಯದ ಮೇಲೆ ನಡೆಸುವ ದೌರ್ಜನ್ಯಗಳು ಗುಟ್ಟಾಗೇನೂ ಉಳಿದಿಲ್ಲ. ಬೆಂಗಳೂರು ಮಹಾನಗರದ  ಕೆ‌ಆರ್‌ಮಾರುಕಟ್ಟೆಯ ಕತೆಯೂ ಭಿನ್ನವಿಲ್ಲ.ಬರೀ ಬೆಂಗಳೂರು ಮಹಾನಗರದ ಕತೆ ಹೀಗಾದರೆ ಕರ್ನಾಟಕ ತುಂಬಾ ಪರಿಸ್ಥಿತಿಯನ್ನು ಊಹಿಸಿಕೊಳ್ಳಬಹುದು.

ಆರ್ಥಿಕವಾಗಿ ದಿಗ್ಬಂಧನ ಮಾಡುವ ಅಗತ್ಯ ಏನು?

ಒಮ್ಮೆ ಅವಲೋಕಿಸಿ, ತಿರುಮಲ ದೇವಸ್ಥಾನ ಜಗತ್ತಿನ ಅತ್ಯಂತ ಶ್ರೀಮಂತ ದೇವಸ್ಥಾನ, ಆದರೆ ವಾಸ್ತವವಾಗಿ ಅಲ್ಲಿ ಇಂದು ಇರುವ ಸರ್ಕಾರದ ಪ್ರಭಾವದಿಂದ ದೇವಸ್ಥಾನ ಆಡಳಿತ ಜವಾಬ್ದಾರಿಯನ್ನು  ಹಿಂದೂ ಧರ್ಮದಿಂದ ಮತಾಂತರಗೊಂಡವರಿಗೆ ವಹಿಸಿರುವುದು ನಮಗೆಲ್ಲಾ  ಗೊತ್ತಿರದ ವಿಚಾರವೇನಲ್ಲ, ಅಲ್ಲಿ ಇರುವ  ಸರ್ಕಾರ ಮತಾಂತರಕ್ಕೆ ಕ್ಕುಮ್ಮಕ್ಕು ನೀಡುತ್ತಿದೆ. ತಿರುಪತಿಯಲ್ಲಿ ಇರುವ ವಿಶ್ವ ವಿದ್ಯಾನಿಲಯದಲ್ಲಿ ಅನ್ಯಧರ್ಮಿಯರು ತಿಮ್ಮಪ್ಪನ,ಪದ್ಮಾವತಿಯ ಭಾವಚಿತ್ರವನ್ನು ಹಾಕಲು ವಿರೋಧಿಸಿದ್ದಾರೆ.ಅಂದರೆ ಅಲ್ಲೊಂದು ಸಾಂಸ್ಕೃತಿಕ ಪಲ್ಲಟವಾಗಿದೆ.ಇದೇ ಪರಿಸ್ಥಿತಿಯನ್ನು ನೀವು ಯಾವುದಾದರೂ ಮಸೀದಿಯಲ್ಲೋ ಚರ್ಚಿನಲ್ಲೋ ನಡೆಸಲು ಸಾಧ್ಯವಿದೆಯಾ? ಜಾಮಿಯಾ ಇಸ್ಲಾಮಿಯಾ ಯೂನಿವರ್ಸಿಟಿಯಲ್ಲಿ ಗಣಪತಿ ಹಬ್ಬವೋ ಹೋಲಿಯೋ ಆಡಲು ಅವಕಾಶ ದೊರೆಯುತ್ತದೆಯೇ? ಅದನ್ನು ಕಡಿಮೆ ಮಾಡಲು ಪ್ರತಿಭಟಿಸಲು ಇರುವ ಸಾತ್ವಿಕ ಅವಕಾಶ ಆರ್ಥಿಕ ದಿಗ್ಬಂಧನ.ಹಾ! ಇದಕ್ಕೂ ಬಡತನ,ಮಾನವೀಯತೆಯ ಮೊಸಳೆ ಕಣ್ಣೀರು ಅದಾಗಲೇ ಶುರುವಾಗಿದೆ‌

  ಉಡುಪಿಯಲ್ಲಿ ಕೆಲವು ಸಮಯದ ಹಿಂದೆ ಗಂಗೊಳ್ಳಿಯಲ್ಲಿ ಗೋಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು ಎಂಬ ಒಂದೇ ವಿಚಾರಕ್ಕೆ ಬಡ ಹಿಂದೂ ಮೀನು ಮಾರಾಟಗಾರರನ್ನ ಬಹಿಷ್ಕಾರ ಮಾಡಿದ್ದರಲ್ಲ ಆಗ ಈ ಮಾನವೀಯತೆ,ಬಡತನದ ನಾಟಕಗಳು ಯಾಕೆ ಹೊರಬರಲಿಲ್ಲ? ಅವತ್ತು ಬಡ ಮೀನುಗಾರರ ಹೊಟ್ಟೆಯ ಹಸಿವಿನ ಕೂಗು ತಟ್ಟಲಿಲ್ಲ ಯಾಕೆ? ಹಾಗಾದರೆ ಮುಸಲ್ಮಾನರಿಗೊಂದು ಹಿಂದೂಗಳಿಗೊಂದು ನ್ಯಾಯ ಯಾಕೆ?

ಮಾನ್ಯ ಎಸ್.ಎಂ ಕೃಷ್ಣಾ ಅವರು ಮುಖ್ಯ ಮಂತ್ರಿಯಾಗಿದ್ದಾಗ ಮಾಡಿದ್ದ “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮ,2002” ರ ಅನ್ವಯ ಧಾರ್ಮಿಕ ಕ್ಷೇತ್ರಗಳಲ್ಲಿ ಅಲ್ಲಿನ ಸಂಸ್ಥೆಯ ಸುತ್ತಮುತ್ತಲಿನ  ಸ್ವತ್ತುಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂದೂ, ಮತ್ತು ಹಾಗೆ ಗುತ್ತಿಗೆ ತೆಗೆದುಕೊಂಡವರು ದೇವಸ್ಥಾನದ, ಭಕ್ತವೃಂದದ ಭಾವನೆಗಳಿಗೆ ಧಕ್ಕೆ ಬರುವ,ಆವರಣದ ಪಾವಿತ್ರ್ಯತೆಗೆ ಧಕ್ಕೆ ಬರುವ ವ್ಯವಹಾರಗಳನ್ನು ನಡೆಸತಕ್ಕದಲ್ಲ ಎಂದಿದೆ , ಸದ್ಯ ಈಗಿನ ಪರಿಸ್ಥಿತಿಯಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವಾಗಿರುವುದರಿಂದ ಈ ರೀತಿ ಮಾಡಿರುವುದು ಸರಿಯಾಗಿಯೇ ಇದೆ.

ರಸ್ತೆ ಬದಿಯಲ್ಲಿ ಹಣ್ಣು ಮಾರುವ ಬಾಂಧವ ಮೊದಲು ಹಣ್ಣುಗಳ ಮೇಲೆ ಉಗುಳಿ ಆ ಹಣ್ಣುಗಳನ್ನು ನಿಮಗೆ ಮಾರುತ್ತಾನೆ.ಹಲಾಲ್ ಮಾಂಸವನ್ನು ಹಿಂದೂಗಳಿಗೆ ಮಾರುತ್ತಾರೆ.ಅಲ್ಲಾನ ಹೆಸರು ಹೇಳಿ ಮಾಂಸ ತಿನ್ನುವ ದರ್ದು ಹಿಂದೂಗಳಿಗೆ ಖಂಡಿತ ಬೇಡ.ಮುಸಲ್ಮಾನರ ಜೊತೆ ವ್ಯಾಪಾರ ವ್ಯವಹಾರ ಮಾಡದಿದ್ದರೂ ಹಿಂದೂಗಳು ತಮ್ಮ ಜೀವನವನ್ನು ನಡೆಸುವಷ್ಟು ಹಿಂದೂ ಸಮಾಜ ಶಕ್ತವಾಗಿದೆ.

ಬಾಲಿವುಡ್ ನಲ್ಲಿ ತೋರಿಸುವ ಯಾವ ಚಿತ್ರದಲ್ಲಿಯೂ ಜೈ ಶ್ರೀರಾಮ್ ಅನ್ನುವುದಿಲ್ಲ ಅಂದರೂ ಅಲ್ಲೊಂದು ವ್ಯಂಗ್ಯ ತರುತ್ತಾನೆ, ಬದಲಿಗೆ ಆಜಾನ್ ಕೇಳಿಸುತ್ತಾನೆ, ಕನಿಷ್ಠ ನಾಲ್ಕು ಬಾರಿಯಾದರೂ ಇನ್ಶಲ್ಲ  ಅನ್ನುತ್ತಾನೆ,ಅಲ್ಲಿ ಭಗವಂತ ಅನ್ನುವ ಬದಲಿಗೆ ಖುದಾ,ರಬ್ಬಾ ಎನ್ನುತ್ತಾನೆ.ನಮ್ಮೊಳಗೆ ಸಾಫ್ಟ್ ಇಸ್ಲಾಮನ್ನು ಇಂಜೆಕ್ಟ್ ಮಾಡುತ್ತಾರೆ.ಈ ರೀತಿಯಲ್ಲಿ ಸಮ್ಮೋಹನಕ್ಕೆ ಒಳಗಾಗಲು ನಾವು ದುಡ್ಡು ಕೊಟ್ಟು ನೋಡುವ ಅಗತ್ಯತೆ ಇದೆಯೆ? ನಮ್ಮ ದೇವರ, ಆಚರಣೆಗಳ ,ಸಂಸ್ಕಾರಗಳ ಪರಿಧಿಯನ್ನು ವ್ಯಂಗ್ಯವಾಗಿ ತೋರಿಸುವುದಕ್ಕೆ ನಾವೇ ನಾವಾಗಿ ಬ್ರೇನ್ ವಾಶ್ ಆಗದಂತೆ ತಡೆಯಲು ಇರುವ ಏಕೈಕ ಮಾರ್ಗ ಆರ್ಥಿಕ ಬಹಿಷ್ಕಾರ.

ಹುತ್ತಕ್ಕೆ ಹಾಲು, ಅಭಿಷೇಕಕ್ಕೆ ಹಾಲು ಕೊಡುವುದಕ್ಕಿಂತ ಅನಾಥಮಕ್ಕಳಿಗೆ ಕೊಡಿ ಎಂದು ಹೇಳುತ್ತಾರೆ ಆದರೆ ಗೋರಿಯ ಮೇಲೆ ಹಾಕುವ ಚಾದರ್ ಬಡವನಿಗೆ ಕೊಡಿ ಎಂದು ಹೇಳಿದ್ದು ಕೇಳಿದ್ದೀರಾ? ಅಂದರೆ ಹಿಂದೂ ಆಚರಣೆಗಳ ವಿಚಾರಕ್ಕೆ ಬಂದಾಗ ಸೇವೆ ಸಹಾಯ ಅನ್ನುವ ಹಣೆಪಟ್ಟಿ ಬಂದುಬಿಡುತ್ತದೆ.Masjid economy prevails degula economics.

ಈಗಲೂ ಸಮಯ ಮಿಂಚಿಲ್ಲ ಹಿಂದೂಗಳು ಒಟ್ಟಾಗಬೇಕು ಅನ್ಯಧರ್ಮಿಯರಿಗೆ ಆರ್ಥಿಕ ಬಹಿಷ್ಕಾರ ಹಾಕುವುದರಿಂದ ಅವರ ಬಲವನ್ನು ತಗ್ಗಿಸಿದಂತಾಗುತ್ತದೆ, ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದಂತಾಗುತ್ತದೆ.

ಹೀಗೆ ನಮ್ಮ ಧರ್ಮವನ್ನು ನಾವು ಕಾಪಾಡಿಕೊಳ್ಳಲು ನಾವು ಸಾತ್ವಿಕವಾದ ಪ್ರತಿಭಟನೆಯನ್ನೂ ಮಾಡದಿದ್ದರೆ, ನಾವು ಅವರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡದಿದ್ದರೆ, “ನಮ್ಮ ಕುತ್ತಿಗೆ ಅವರ ಕತ್ತಿಗೆ” ಎಂಬ ಸ್ಥಿತಿಗೆ ತಲುಪಬೇಕಾಗುತ್ತದೆ.. ಅದಾಗಲೇ ಪೂರ್ವ ಬಂಗಾಲ,ಕಾಶ್ಮೀರದ ಹಿಂದೂಗಳ ಪರಿಸ್ಥಿತಿ ನಮಗೆ ಪಾಠ ಕಲಿಸಬೇಕು.ಹಿಂದೂಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.

ಕಿಶೋರ್ ಪಟವರ್ಧನ್,ಪ್ರಚಾರ ಪ್ರಮುಖ್,ದಕ್ಷಿಣ ಕರ್ನಾಟಕ,ಸ್ವದೇಶಿ ಜಾಗರಣ ಮಂಚ್

  • email
  • facebook
  • twitter
  • google+
  • WhatsApp
Tags: hinduIndian economyMuslimprotest

Related Posts

Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Articles

ಹಿಂದವಿ ಸಾಮ್ರಾಜ್ಯದ ಗುರಿ,ರಾಮದಾಸರೆಂಬ ಗುರು… ಶಿವಾಜಿ ಮಹಾರಾಜರೆಂಬ ವ್ಯಕ್ತಿತ್ವ!

February 19, 2022
Next Post

WHO establishes the Global Centre for Traditional Medicine in India

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Political parties oppose communal violence bill

September 10, 2011
Raksha Bandhan Greetings to All Swayamsevaks from RSS Vishwa Vibhag

Raksha Bandhan Greetings to All Swayamsevaks from RSS Vishwa Vibhag

August 20, 2013
National Meet of Bajarangadal at Vadodara

National Meet of Bajarangadal at Vadodara

July 11, 2011

ಕನ್ನಡದ ಸಾಂಸ್ಕೃತಿಕ ರಾಯಭಾರಿ ಡಾ.ರಾಜ್‌ಕುಮಾರ್

April 12, 2022

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In