• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

20 ಎಕರೆಯಲ್ಲಿ ಕಾಡು ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‍ನ ಯೋಜನೆಗೆ ಚಾಲನೆ

Vishwa Samvada Kendra by Vishwa Samvada Kendra
July 11, 2018
in Articles, News Digest, News Photo, Photos
247
0
20 ಎಕರೆಯಲ್ಲಿ ಕಾಡು ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‍ನ ಯೋಜನೆಗೆ ಚಾಲನೆ
491
SHARES
1.4k
VIEWS
Share on FacebookShare on Twitter

20 ಎಕರೆಯಲ್ಲಿ ಕಾಡು ಬೆಳೆಸುವ ರಾಷ್ಟ್ರೋತ್ಥಾನ ಪರಿಷತ್‍ನ ಯೋಜನೆಗೆ ಚಾಲನೆ

ಬೆಂಗಳೂರು: ಭೂಮಿ, ಕಾಡು ಮತ್ತು ದೇಶಿಯ ಗೋವುಗಳ ನಡುವೆ ಅವಿನಾಭಾವ ಸಂಬಂಧ ಇದೆ. ಇದನ್ನು ಅರಿತು ಇಲ್ಲಿ ವೈವಿದ್ಯಮಯ ದೇಶಿಯ ಸಸಿಗಳನ್ನು ಬೆಳೆಸಲು ಒತ್ತು ನೀಡಲಾಗಿದೆ ಎಂದು ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿ ಹೇಳಿದರು.

ಅವರು ದೊಡ್ಡಬಳ್ಳಾಪುರದ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ನಡೆಸಲಾಗುತ್ತಿರುವ ಗೋಶಾಲೆಯ ಆವರಣದ ಸುಮಾರು ಐದು ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು.

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

Vrindavana forests, Ghati

ಕಾಡು ಬೆಳೆಸುವುದೆಂದರೆ ಕೇವಲ ಗಿಡನೆಟ್ಟು ಮರ ಬೆಳೆಸುವುದಷ್ಟೇ ಅಲ್ಲ. ಅದರಿಂದ ಭೂಮಿಯ ಕೆಳಗಿನ ಇಪ್ಪತ್ತು ಅಡಿ ಹಾಗೂ ಮೇಲೀನ ನೂರು ಅಡಿಗಳಿಗೂ ಮಿಕ್ಕಿ ಒಂದು ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು. ರಾಷ್ಟ್ರೋತ್ಥಾನ ಪರಿಷತ್‍ನ‘ವೃಂದಾವನ’ ಯೋಜನೆಯಂತೆ ಅಂತಹ ಒಂದು ವನ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆಯ ಆವರಣದಲ್ಲಿ ಬೆಳೆಸಲಾಗುತ್ತಿರುವ ಸುಮಾರು 150 ಬಗೆಯ ವಿವಿಧಬಗೆಯ ದೇಶಿಯ ತಳಿಗಳನ್ನು ಗುರುತಿಸಿ ಸಸಿಗಳನ್ನು ಬೆಳೆಸಲಾಗುತ್ತದೆ. ಮೊದಲ ಹಂತದಲ್ಲಿ 5 ಎಕರೆಯಲ್ಲಿ ಒಂದು ಸಾವಿರ ಸಸಿಗಳನ್ನು ನಾಟಿ ಮಾಡಲಾಗುವುದು ಎಂದು ಯೋಜನೆಯ ಮಾರ್ಗದರ್ಶಕರೂ ಆದ ಯಲ್ಲಪ್ಪ ರೆಡ್ಡಿ ಅವರು ತಿಳಿಸಿದರು.

ಗೋಶಾಲೆ ಆವರಣದಲ್ಲಿ ನಾಟಿ ಮಾಡಲಾಗಿರುವ ಸಸಿಗಳು ಬೆಳೆದು ದೊಡ್ಡವಾದ ನಂತರ ಇಡೀ ದಿನ ಇಲ್ಲಿನ ಮರಗಳ ಮಧ್ಯದಲ್ಲಿ ಕುಳಿತು ಕಾಲ ಕಳೆದರು ಸಾಕು ಹಲವಾರು ಅನಾರೋಗ್ಯದ ಸಮಸ್ಯೆಗಳು ನಿವಾರಣೆ ಮಾಡುವಂತಹ ಶಕ್ತಿ ಇಲ್ಲಿನ ಗಾಳಿಗೆ ಬರಲಿದೆ. ಇಂತಹ ಒಂದು ವನವನ್ನು ನಿರ್ಮಿಸಬೇಕು ಎನ್ನುವ ನನ್ನ 30 ವರ್ಷಗಳ ಕನಸು ನನಸಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಮಹಾವನದ ಬಳಿಕ ಮುಂದೆ ಇಲ್ಲಿ ತಪೋವನ, ಶ್ರೀವನಗಳನ್ನು ರೂಪಿಸಲಾಗುವುದು. ಇಲ್ಲಿಗೆ ಬಂದವರ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುವಂತಹ ವಾತಾವರಣವನ್ನು ನಿರ್ಮಿಸಲಾಗುವುದು ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಂಗಳೂರಿನ ಐಸಿಆರ್-ಎನ್‍ಡಿಆರ್‍ಐನ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ|| ಕೆ.ಪಿ. ರಮೇಶ್ ಅವರು ‘ಗಾವೋ ವಿಶ್ವಸ್ವ ಮಾತರ:’ (ಗೋವು ಜಗತ್ತಿನ ತಾಯಿ) ಎಂಬ ಮಾತನ್ನು ಬೆಂಬಲಿಸಿ ಮಾತನಾಡಿದರು. ಮುಖ್ಯಮಂತ್ರಿಯವರು ಇತ್ತೀಚೆಗೆ ನಡೆಸಿದ ಸಭೆಗೆ ಆಗಮಿಸಿದ ಆಂಧ್ರಪ್ರದೇಶದ ತಜ್ಞರು ಸಾವಯವ ಕೃಷಿ ಇಂದಿನ ಅಗತ್ಯ ಎಂದರಲ್ಲದೆ ಅದರಲ್ಲಿ ಗೋವಿನ ಪಾತ್ರವನ್ನು ತಿಳಿಸಿದರು. ಹಸುವಿನ ಹೊಟ್ಟೆಯಲ್ಲಿ ನಾಲ್ಕು ಭಾಗಗಳಿದ್ದು, ಅದರಿಂದ ಅನೇಕ ಸೂಕ್ಷ್ಮಜೀವಿಗಳು, ಫಂಗಸ್, ಫಲವತ್ತತೆಯ ಮೈಕ್ರೋಬ್ ಮುಂತಾದವು ನಮಗೆ ಸಿಗುತ್ತವೆ. ಕೃಷಿಗೆ ಕೇವಲ ಎನ್‍ಪಿಕೆ ಗೊಬ್ಬರ ಸಾಲದು. ಮೈಕ್ರೋಬ್ ಬೇಕು. ಅದು ಇರುವುದು ದನದಲ್ಲಿ ಮಾತ್ರ ಎಂದು ಅವರು ತಿಳಿಸಿದರು.

ದೇಶೀ ಹಸುಗಳು ಭುಜ ಮತ್ತು ದೊಗಲಿನಲ್ಲಿರುವ ಉಷ್ಣಗ್ರಂಥಿಗಳು ಉಷ್ಣವನ್ನು ಹೊರಹಾಕುತ್ತವೆ. ವಿದೇಶಿ ಹಸುಗಳಲ್ಲಿ ಅದು ಇಲ್ಲ. ಹೀಗಾಗಿ ಉಷ್ಣತೆ ಹೆಚ್ಚಾದಂತೆ ವಿದೇಶಿ ಹಸುಗಳ ಹಾಲು ಕಡಮೆಯಾಗುತ್ತದೆ. ದೇಶೀ ಹಸುಗಳಲ್ಲಿ ಹಾಗಾಗುವುದಿಲ್ಲ. ನಮ್ಮ ದನಗಳು ಬಿಸಿಲಿಗೆ ಹೆದರುವುದಿಲ್ಲ; ಆದರೆ ವಿದೇಶಿ ಹಸುಗಳು ನೆರಳಿಗೆ ಹೋಗುತ್ತವೆ. ಅದರಿಂದಾಗಿ ಹಾಲಿನಲ್ಲಿ ಪೌಷ್ಟಿಕಾಂಶ ಕಡಮೆಯಾಗಿ ಜನರಲ್ಲಿ ಬೆನ್ನುನೋವಿನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಬುದ್ದಿಶಕ್ತಿ ಬೆಳೆಯಲು ಬೇಕಾದ ಲ್ಯಾಕ್ಟೋಫೆರಿನ್ ಮಲೆನಾಡು ಗಿಡ್ಡದಂತಹ ದನಗಳ ಹಾಲಿನಲ್ಲಿ ಅಧಿಕ ಇರುತ್ತದೆ. ದೇಸೀ ಹಸುಗಳ ಹಾಲಿನಿಂದ ಕರೋಟಿನೈಡ್ ಸಿಗುತ್ತಿದ್ದು, ಅದರಿಂದಾಗಿ ಕನ್ನಡಕಧಾರಿಗಳು ಕಡಮೆ ಇರುತ್ತಿದ್ದರು ಎಂದ ವಿಜ್ಞಾನಿ ಡಾ| ರಮೇಶ್ ಹಸುಗಳನ್ನು ಮೇಯಲು ಕಾಡಿಗೆ ಹೋಗದಂತೆ ತಡೆಯಬಾರದು. ಬಹಳಷ್ಟು ಬೀಜಗಳು ದನದ ಸೆಗಣಿಯಲ್ಲಿ ಹೊರಬಂದಾಗ ಮಾತ್ರ ಗಿಡಹುಟ್ಟಿ ಬೆಳೆಯುತ್ತವೆ ಎಂದು ದೇಶಿಯ ತಳಿಯ ಹಸುಗಳ ಮಹತ್ತ್ವವನ್ನು ತಿಳಿಸಿದರು.

ಪತ್ರಕರ್ತ ಕೆ.ಎನ್. ಚನ್ನೇಗೌಡ ಮಾತನಾಡಿ, ಗೋ ಶಾಲೆ ಆವರಣದಲ್ಲಿ ನಡೆದಿರುವ ಕೆಲಸ ಸಾರ್ಥಕವಾಗಿರುವಂತಹದ್ದು. ಪರಿಸರ ತಜ್ಞರು ರೂಪಿಸಿರುವ ಈ ಯೋಜನೆ ಸಫಲವಾಗಲು ಎಲ್ಲರ ಸಹಕಾರ ಅಗತ್ಯ ಎಂದು ಶ್ಲಾಘಿಸಿದರು.

ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗಡೆ ಮಾತನಾಡಿ, 53 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಾಹಿತ್ಯ, ಗೋಸೇವೆ ಮುಂತಾದ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾದ ರಾಷ್ಟ್ರೋತ್ಥಾನ ಪರಿಷತ್ ಇದೀಗ ಕಾಡು ಬೆಳೆಸಲು ನಿರ್ಧರಿಸಿದೆ. ಘಾಟಿ ಸುಬ್ರಹ್ಮಣ್ಯ ಪರಿಸರದ ದೇಸಿ ಗೋತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ನಡೆಯುತ್ತಿರುವ ಈ ಗೋಶಾಲೆಯಲ್ಲಿ 10 ಬಗೆಯ ದೇಶಿಯ ತಳಿಯ 500ಕ್ಕೂ ಅಧಿಕ ಹಸುಗಳನ್ನು ಸಾಕಲಾಗುತ್ತಿದೆ. ಇದೇ ಪರಿಸರದ 20 ಎಕರೆ ಜಾಗದಲ್ಲಿ ಕಾಡು ಬೆಳೆಸಲಾಗುವುದು. ಡಾ. ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನದಂತೆ ಇಲ್ಲಿನ ಅರಣ್ಯವನ್ನು ಇಡೀ ರಾಜ್ಯಕ್ಕೆ ಮಾದರಿಯನ್ನಾಗಿ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.

ಬೆಂಗಳೂರಿನ ವಿವಿಧ ಐಟಿ ಕಂಪನಿಗಳಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿರುವ ಶ್ರೀರಾಮ್, ಅರ್ಕಾವತಿ ಜಲಾನಯನ ಪ್ರದೇಶ ಸಮಿತಿಯ ರವೀಂದ್ರ,ಬೆಂಗಳೂರಿನ ಅದಮ್ಯ ಚೇತನ ಸಂಸ್ಥೆಯ ಮುರುಳಿಧರ್, ಗೋ ಶಾಲೆಯ ಉಸ್ತುವಾರಿ ಜೀವನ್‍ಕುಮಾರ್ ಉಪಸ್ಥಿತರಿದ್ದರು.

ಸಾರ್ವಜನಿಕರೂ ಈ ಯೋಜನೆಯಲ್ಲಿ ಕೈಜೋಡಿಸಬಹುದು…

ನಮಗೆ ಸರ್ವವನ್ನೂ ನೀಡುವ ಪ್ರಕೃತಿಯ ಸಂರಕ್ಷಣೆಗೆ ಕನಿಷ್ಠ ರೂ. 1000 ನೀಡಿದವರ ಹೆಸರಿನಲ್ಲಿ 2 ಗಿಡಗಳನ್ನು ನೆಟ್ಟು ಹಲವು ವರ್ಷಗಳ ಕಾಲ ಅವುಗಳನ್ನು ಪೋಷಿಸಿ, ಬೆಳೆಸಿ,ಸಂರಕ್ಷಿಸಲಾಗುವುದು.

ಬಾಂಕ್ ಖಾತೆ ವಿವರ

ಹೆಸರು : ರಾಷ್ಟ್ರೋತ್ಥಾನ ಪರಿಷತ್ ಗೋಶಾಲೆ

ಬ್ಯಾಂಕ್ : ಕೆನರಾ ಬ್ಯಾಂಕ್,

ಶಾಖೆ : ಕೆಂಪೇಗೌಡನಗರ, ಬೆಂಗಳೂರು

A/C No. : 0789101078233

IFSc code : CNRB0000789

(ಹಣ ಪಾವತಿಸಿದ ನಂತರ ನಿಮ್ಮ ಮಾಹಿತಿಯನ್ನು ಯೋಜನೆಯ ವ್ಯವಸ್ಥಾಪಕರಿಗೆ (ಮೊಬೈಲ್ ಸಂಖ್ಯೆ: 9902476719/ 9448240610) ಕರೆ ಮಾಡಿ ತಿಳಿಸುವುದನ್ನು ಮರೆಯಬೇಡಿ.)

ಬನ್ನಿ, ಮಣ್ಣಿಗೆ ಮರಳೋಣ… ಮರಗಳನ್ನು ಬೆಳೆಸೋಣ…

 

  • email
  • facebook
  • twitter
  • google+
  • WhatsApp
Tags: 20 acres of forest in ghati subrahmanyaRashtrotthana forest nurturingRashtrotthana ParishatVrindavana rashtrotthana

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post
RSS Leadership connects with the last Swayamsevak of its Cadre: Sri Ratan Sharda, Author RSS 360°

RSS Leadership connects with the last Swayamsevak of its Cadre: Sri Ratan Sharda, Author RSS 360°

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಕವಿಗಳಾದ ‘ಚಕ್ರಧಾರಿ’ ಡಾ. ಪಿ. ನಾರಾಯಣ ಭಟ್ ಇನ್ನಿಲ್ಲ

ಕವಿಗಳಾದ ‘ಚಕ್ರಧಾರಿ’ ಡಾ. ಪಿ. ನಾರಾಯಣ ಭಟ್ ಇನ್ನಿಲ್ಲ

October 25, 2021

Download: Samachara Sameekshe-Sept-2012

September 4, 2012

Bombs hurled, RSS activist injured at Kasargod

February 29, 2012
Founded by Dattopant Thengadi on July 23, 1955 BMS observes Foundation Day today

Founded by Dattopant Thengadi on July 23, 1955 BMS observes Foundation Day today

July 23, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In