• Samvada
Friday, August 12, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ಹಿಜಾಬ್ ರೋಗಕ್ಕೆ ಯುಸಿಸಿ ಮದ್ದು!

Vishwa Samvada Kendra by Vishwa Samvada Kendra
February 5, 2022
in Articles, Blog
250
0
492
SHARES
1.4k
VIEWS
Share on FacebookShare on Twitter

ಇತ್ತೀಚೆಗಷ್ಟೆ ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ತರುವಾಯು ಶಿಕ್ಷಣ ಸಂಸ್ಥೆಗಳು ಆರಂಭವಾಗಿದೆ.ಆದರೆ ಆರಂಭವಾಗುತ್ತಿರುವ ಕಾಲೇಜಿನ ಜತೆಗೆ ಹೊಸದೊಂದು ವಿವಾದವೂ ಆರಂಭವಾಗಿದೆ.

ಮುಸ್ಲಿಮ್ ಹೆಣ್ಣುಮಕ್ಕಳು ಕಾಲೇಜಿನ ಸಮವಸ್ತ್ರದ ಮೇಲೆ ಹಿಜಾಬ್ ಧರಿಸುವ ಕುರಿತಾಗಿ ಕರ್ನಾಟಕದ ಅನೇಕ ಕಡೆಗಳಲ್ಲಿ ವಿವಾದ ಆರಂಭವಾಗಿದೆ.ಇದೀಗ ಕುಂದಾಪುರದ ಸರಕಾರಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಕಾಲೇಜಿನ ಗೇಟಿನಲ್ಲಿ ನಿಂತು ಹಿಜಾಬ್‌ಗೆ ಅವಕಾಶ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.ಆದರೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿದ ನಂತರ ಬೇರೆ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲದಿದ್ದಾಗಿಯೂ ಮುಸಲ್ಮಾನ ವಿದ್ಯಾರ್ಥಿನಿಯರು ಅನವಶ್ಯಕವಾದ ವಿವಾದ ಎಬ್ಬಿಸುತ್ತಿದ್ದಾರೆ‌.ಅವರಿಗೆ ಅವಕಾಶ ಕೊಟ್ಟರೆ ಹಿಂದೂ ವಿದ್ಯಾರ್ಥಿಗಳೂ ಕೇಸರಿ ಶಾಲು ಹಾಕಿ ಕಾಲೇಜಿಗೆ ಬರುವ ಅವಕಾಶ ಮಾಡಿದ್ದಾರೆ‌.

READ ALSO

Amrit Mahotsav – Over 200 tons sea coast garbage removed in 20 days

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ಕಾಲೇಜಿನಲ್ಲಿ ಅಗತ್ಯವಾದ ಶಿಕ್ಷಣ,ಕೋವಿಡ್‌ನಿಂದ ಅನಿಯಮಿತವಾದ ಪಠ್ಯ ಚಟುವಟಿಕೆಗಳಿಗೆ ತಲೆ ಕೊಡಬೇಕಾಗಿದ್ದ ಕಾಲೇಜುಗಳು ಈಗ ಸಮವಸ್ತ್ರದ ವಿವಾದದಲ್ಲಿ ಸಿಲುಕಿದೆ.
ಈ ನಡುವೆ ಆ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ, ಶಿಕ್ಷಣವನ್ನು ಮುಂದುವರೆಸಲು ಕೇಳಿಕೊಂಡಿದ್ದಾರೆ.ಆದರೆ ಈ ರೀತಿಯ ತಾರತಮ್ಯದಿಂದ ಮುಂದೆ ವಿದ್ಯಾರ್ಥಿ ಸಮುದಾಯದ ಒಳಗೆ ಬಹುದೊಡ್ಡ ಸಾಮಾಜಿಕ ಕಂದಕವನ್ನು ನಿರ್ಮಾಣ ಮಾಡುವ ಸಾಧ್ಯತೆಯಿದೆ.

ಕಾಲೇಜುಗಳಲ್ಲಿ ಯಾವ ಯಾವ ವಿವಿಧ ಮತಪಂಥದ ವಿದ್ಯಾರ್ಥಿಗಳೆಲ್ಲಾ ಆಯಾ ಮತಪಂಥದ ಧಾರ್ಮಿಕ ಉಡುಗೆಗಳಿಗೆ ಅನುಮತಿ ಬೇಡುತ್ತಾ ಹೋದರೆ ಕಾಲೇಜಿನಲ್ಲಿ ಶಿಕ್ಷಣಕ್ಕಿಂತ ಹೆಚ್ಚಾಗಿ ಸಾಮಾಜಿಕ ಅಸಮತೋಲನ ಆರಂಭವಾಗಿ ಸಾಮಸರಸ್ಯದಿಂದ ಸಹಬಾಳ್ವೆಯಿಂದ ಕಲಿಯುವ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗುವುದೇ ಇಲ್ಲ.

ಇನ್ನು ಕಾಲೇಜಿನಲ್ಲಿ ಸರಸ್ವತಿ ಪೂಜೆ,ಗಣಪತಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡುವುದಾದರೆ ನಮಗೂ ಹಿಜಾಬ್‌ಗೆ ಅವಕಾಶ ಮಾಡಿಕೊಡಬೇಕು ಎನ್ನುವ ವಾದ ಅತ್ಯಂತ ಹಾಸ್ಯಾಸ್ಪದ.

ಹಿಂದೆ 1938ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲೂ ವಿಶ್ವವಿದ್ಯಾನಿಲಯದ ಲಾಂಛನದಲ್ಲಿದ್ದ ‘ಶ್ರೀ’ ಚಿಹ್ನೆಯನ್ನು ಬದಲಾಯಿಸಲು ಮುಸ್ಲಿಂ ವಿದ್ಯಾರ್ಥಿಗಳು ಅಂದಿನ ಕಲ್ಕತ್ತಾ ವಿಶ್ವವಿದ್ಯಾನಿಲಯದ ಡಾ.ಶ್ಯಾಮಪ್ರಸಾದ್‌ಮುಖರ್ಜಿಯವರ ವಿರುದ್ಧ ಹರತಾಳ ನಡೆಸಿದರು.ಆ ಕುರಿತಾಗಿ ಪ್ರತಿಕ್ರಿಯಿಸುವಾಗ ಡಾ.ಮುಖರ್ಜಿಯವರು – “ಈ ದೇಶದ ಮೂಲಸಂಸ್ಕೃತಿಯಲ್ಲಿ ‘ಶ್ರೀ’ ಗೆ,’ಓಂ’ ಗೆ  ವಿಶೇಷವಾದ ಸ್ಥಾನವಿದೆ‌.ಅದು ಕೇವಲ ಹಿಂದೂ ಅಥವಾ ಯಾವುದೊ ಜಾತಿಗೆ ಸೀಮಿತವಾದುದಲ್ಲ ಬದಲಾಗಿ ಅದೊಂದು ವಿಚಾರ.That is an idea towards enlightenment and harmony.ಯಾವುದೇ ಒಳ್ಳೆಯ ವಿಚಾರಗಳಿಗೆ ತಮ್ಮ ಮನಸ್ಸನ್ನು ತೆರೆದುಕೊಂಡು,ಮತ್ತು ಅನುಚಿತವಾದ ಯಾವುದೇ ಸಂಪ್ರದಾಯಗಳನ್ನು ಪ್ರಶ್ನೆ ಮಾಡದೆ ಒಪ್ಪಿಕೊಳ್ಳದೆ ಇರುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು” ಎಂದಿದ್ದರು.

ಈ ನಿಟ್ಟಿನಲ್ಲಿ ನೋಡುವುದಾದರೆ ಹಿಜಾಬ್ ಧರಿಸುವ ಇಸ್ಲಾಮಿನ ಸಂಪ್ರದಾಯ ಶತಮಾನಗಳಷ್ಟು ಹಿಂದೆ ಹೋಗುತ್ತದೆ.ಆದರೆ ಇವತ್ತಿನ ಆಧುನಿಕ ಯುಗದಲ್ಲಿ ಹಿಜಾಬ್ ಎಷ್ಟು ಉಚಿತ? ಧಾರ್ಮಿಕ ಸಂಪ್ರದಾಯವೇ ಇದ್ದರೂ ಅದರ ವೈಜ್ಞಾನಿಕ ಹಿನ್ನೆಲೆ ಏನು? ಹಿಜಾಬ್ ಇಂದಿನ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಮುಕ್ತವಾಗಿ ಬೆರೆಯುವ,ಮುಖ್ಯವಾಹಿನಿಯಿಂದ ಬೇರ್ಪಡಿಸಿ ಕೇವಲ ತಮ್ಮ ಧಾರ್ಮಿಕ ಕಾರಣದ ಮುನ್ನೆಲೆ ನೀಡುತ್ತಾ ಆಧುನಿಕ ಜಗತ್ತಿನ ಎಲ್ಲ ಓಟಗಳಿಂದ ಹೊರ ದೂಡುತ್ತಿದೆ.

ಉದಾಹರಣೆಗೆ ಕಾಲೇಜಿಗೆ ಬರುವ ಹೆಣ್ಣುಮಕ್ಕಳು ಕೇವಲ ವಿದ್ಯೆಯ ಕುರಿತಾಗಿ ತಮ್ಮ ಧ್ಯಾನವನ್ನು ನೀಡಬೇಕಿತ್ತು ಆದರೆ ಹಿಜಾಬ್‌ನ ಕಾರಣದಿಂದಾಗಿ ಕಾಲೇಜಿನ ಎಲ್ಲ ವಿದ್ಯಾರ್ಥಿಗಳ ನಡುವೆ ಬೇರೆಯಾಗಿ ನಿಲ್ಲಬೆಕಾಯಿತು.ಹೀಗೆ ತಮ್ಮ ಧಾರ್ಮಿಕ ನಡವಳಿಕೆಗಳಿಂದ ಕಾಲೇಜಿನ ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕವಾಗಿ ‘left out’ಆಗುವ ಮಾನಸಿಕ ಅಭದ್ರತೆಯೂ ಸಹ ದೂರಗಾಮಿ ಪರಿಣಾಮ ಬೀರಬಹುದು.ಇದು ಉಳಿದ ವಿದ್ಯಾರ್ಥಿಗಳಿಗೂ ಅವರ ಮೇಲೆ ಸದಭಿಪ್ರಾಯ ಮೂಡದಿರುವಂತೆ ಮಾಡಬಹುದು.ವಿದ್ಯಾರ್ಥಿ ಸಮುದಾಯ ಭವಿಷ್ಯತ್ತಿನಲ್ಲಿ ಮಹಾನ್ ಕನಸುಗಳನ್ನು ಕಾಣಬೇಕು ಆ ಕುರಿತಾಗಿ ತಮ್ಮ ಪ್ರಯತ್ನ ನಡೆಸಬೇಕು ಎನ್ನುವಾಗ ಈ ಧಾರ್ಮಿಕ ಆಚರಣೆಗಳು ಅಡ್ಡಿಯಾಗುತ್ತಿದೆ.

ಇನ್ನು ಹಿಜಾಬ್ ಧರಿಸದೆ ಕಾಲೇಜಿಗೆ ಬಂದರೆ ಅನ್ಯ ಪುರುಷರ ಕೆಟ್ಟ ದೃಷ್ಟಿ ಹಾಗು ಬೇರೆ ರೀತಿಯ ಭಾವನೆ ಕೆರಳಬಹುದು ಎಂಬ ಕಾರಣ ನೀಡುತ್ತಿದ್ದಾರೆ.ಆದರೆ ಕೇವಲ ಮುಸಲ್ಮಾನ ಹುಡುಗಿಯರೇ ಯಾಕೆ ಹಾಗೆ ಯೋಚಿಸುತ್ತಿದ್ದಾರೆ? ಹಿಂದೂ ಕ್ರಿಶ್ಚಿಯನ್ ಹೆಣ್ಣುಮಕ್ಕಳಿಗೆ ಅನ್ನಿಸದೆ ಇರುವ ಅಭದ್ರತೆಯ ಭಾವನೆಗಳು ಮುಸಲ್ಮಾನ ಸಮುದಾಯದ ಹೆಣ್ಣುಮಕ್ಕಳಿಗೆ ಯಾಕೆ ಅನ್ನಿಸುತ್ತಿದೆ? ತಮ್ಮ ಹೆಣ್ಣುಮಕ್ಕಳಿಗೆ ಆರೋಗ್ಯಪೂರ್ಣವಾದ ವಾತಾವರಣ ನೀಡುವಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯದಿರುವಂತೆ ಮಾಡುವಲ್ಲಿ ಮುಸಲ್ಮಾನ ಸಮುದಾಯ ಹಿಂದೆ ಬಿದ್ದಿದೆಯಾ?

ಈಹಿಂದೆ ಮುಸಲ್ಮಾನ ಹೆಣ್ಣುಮಕ್ಕಳ ತ್ರಿವಳಿ ತಲಾಖ್‌ ವಿಚಾರ ಬಂದಾಗಲೂ ಕಟ್ಟಾ ಮುಸಲ್ಮಾನ ಸಮುದಾಯ ಹಿಂದೆ ಸರಿದಿತ್ತು.ಆದರೆ ಆಧುನಿಕ ಭಾರತದಲ್ಲಿ ಎಲ್ಲ ಸಮುದಾಯದ ಹೆಣ್ಣುಮಕ್ಕಳೂ ತಮ್ಮ ವಿದ್ಯಾಭ್ಯಾಸ ಕೆರಿಯರ್ ಎಂದು ನಾಗಾಲೋಟದಿಂದ ಓಡುತ್ತಿರುವಾಗ ಮುಸಲ್ಮಾನ ಸಮುದಾಯದ ಹೆಣ್ಣುಮಕ್ಕಳಿಗೆ ತಮ್ಮ ಹಿಜಾಬ್‌ ಧರಿಸುವಿಕೆಯಷ್ಟೇ ಯಾಕೆ ಮುಖ್ಯವಾಗುತ್ತಿದೆ?

ಕೇವಲ ಕುಂದಾಪುರ, ಕೊಪ್ಪ , ಶಿವಮೊಗ್ಗದಂತಹ ಊರುಗಳಲ್ಲಿ ಮಾತ್ರವಲ್ಲ ಅನೇಕ ಕಡೆಗಳಲ್ಲಿ ಹಿಜಾಬ್‌ನ ವಿವಾದಗಳು ಹುಟ್ಟಿಕೊಳ್ಳತೊಡಗಿದೆ. ಅದನ್ನು ಮುಸಲ್ಮಾನ ಸಮುದಾಯ ಧಾರ್ಮಿಕ ಕಾರಣಗಳನ್ನು ಕೊಟ್ಟು ಸಮರ್ಥಿಸಿಕೊಳ್ಳಲೂಬಹುದು ಆದರೆ ದೇಶದ ನಾಗರೀಕರಾಗಿ,ಸಮಾಜದ ಮುಖ್ಯವಾಹಿನಿಯ ಜತೆಗೆ ಬೆರೆತು ನಡೆಯುವುದು ಅಷ್ಟೇ ಮುಖ್ಯ.ಇಲ್ಲದಿದ್ದರೆ ಆ ಸಮುದಾಯವನ್ನು ಸಮಾಜವೇ ಪ್ರತ್ಯೇಕವಾಗಿ ನೋಡುವ ಸಮಯವೂ ವಿದ್ಯಾರ್ಥಿ ಸಮುದಾಯದಲ್ಲಿ ಆರಂಭವಾಗಬಹುದು.

ಸಮಾನ ನಾಗರೀಕ ಸಂಹಿತೆಯನ್ನು ತರುವುದರಿಂದ ಮಾತ್ರವೇ ಈ ಎಲ್ಲ ವಿವಾದಗಳಿಂದ ಮುಕ್ತವಾಗಲು ಸಾಧ್ಯವಿದೆ.ಮತೀಯ ಚಿಂತನೆಗಳಿಂದ ಕೂಡಿದ ಯುವ ಮನಸ್ಸುಗಳು ಸಮಾಜದ ಪರಿವರ್ತನೆಗೆ ಸುಧಾರಣೆಗೆ ನಿಜಕ್ಕೂ ತಮ್ಮ ಕೊಡುಗೆ ನೀಡಲು ಸಾಧ್ಯವಿದೆಯೆ? ಹೀಗೆ  ಮತೀಯ ಭಾವನೆಗಳನ್ನು ಅಭಿವ್ಯಕ್ತಿಸುವ ವಿದ್ಯಾರ್ಥಿ ಸಮುದಾಯದಿಂದ ಸಾಮರಸ್ಯದ ಹೆಜ್ಜೆಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

ಸಮಾನವಾದ ಹಕ್ಕುಗಳಿಗೆ ಬಾಧ್ಯತೆಯಿರುವಾಗ ಸಮಾನವಾದ ಕರ್ತವ್ಯಗಳಿಗೂ ಒಡ್ಡಿಕೊಂಡು ನಡೆಯುವುದೂ ಅತ್ಯಂತ ಅವಶ್ಯಕವಾಗಿದೆ‌.ಹಿಜಾಬ್‌ನ ಈ ವಿವಾದ ಇಂದು ನಾಳೆ ತಣ್ಣಗಾಗಬಹುದು ಆದರೆ ವಿದ್ಯಾರ್ಥಿ ದೆಸೆಯಲ್ಲಿ ಈ ರೀತಿಯ ಸಾಮರಸ್ಯ ಕದಡುವ ಭಾವನೆಗಳು ನೆಲೆಯೂರದಿದ್ದರೆ ಸಮಾಜದ ಸಾಮರಸ್ಯಕ್ಕೂ ಒಳಿತು.

  • email
  • facebook
  • twitter
  • google+
  • WhatsApp
Tags: collegehijabIslamMuslimstudents

Related Posts

Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Blog

ಸೋತದ್ದು ಪಾಕಿಸ್ತಾನವಲ್ಲ ಕಪಟತನ..! ಗೆದ್ದದು ಭಾರತವಲ್ಲ, ಭರವಸೆ..!

July 26, 2022
ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!
Blog

ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾತಂತ್ರ ವ್ಯವಸ್ಥೆಗೆ ತಂದ ಬಲ!

July 22, 2022
Blog

ವ್ಯಾಸಪೂರ್ಣಿಮವೂ… ಪೂರ್ಣತಮ ಬದುಕೂ..

July 13, 2022
Blog

ಸೆಕ್ಯುಲರ್ ಆಡಳಿತದಲ್ಲಿ ಮತೀಯ ಸಾಮರಸ್ಯ

July 9, 2022
Next Post

ಸಾಧನೆಯ ಸಾಕಾರಮೂರ್ತಿ ಲತಾ ಮಂಗೇಶ್ಕರ್ - ಶ್ರೀ ಮೋಹನ್ ಭಾಗವತ್

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

Sri Sitarama Kedilaya shared his experiences of mega Walkthon ‘Bharat Parikrama Yatra’

Sri Sitarama Kedilaya shared his experiences of mega Walkthon ‘Bharat Parikrama Yatra’

July 23, 2017
RSS Karnataka State level Sangh Shiksha Varg-2016 concludes; 1188 cadres trained

RSS Karnataka State level Sangh Shiksha Varg-2016 concludes; 1188 cadres trained

May 7, 2016
‘RSS is not an organization within the Hindu Society but to organize the entire Hindu Society’: Dattatreya Hosabale at Stanmore, UK

‘RSS is not an organization within the Hindu Society but to organize the entire Hindu Society’: Dattatreya Hosabale at Stanmore, UK

September 26, 2014
‘Nothing anti-India should be tolerated’: RSS Prachar Pramukh Dr Manmohan Vaidya’s interview to Economic Times

The invincible, eternal ‘we’ : Article by Dr. Manmohan Vaidya

June 21, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ
  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In