• Samvada
Tuesday, August 9, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest Hindu Samajotsav

Jayanagar, Bangalore

Vishwa Samvada Kendra by Vishwa Samvada Kendra
December 20, 2010
in Hindu Samajotsav
247
0
Jayanagar, Bangalore
491
SHARES
1.4k
VIEWS
Share on FacebookShare on Twitter

Bangaore South today had an inspiring evenning as thousands of citizens gathered to witness a mammoth Hindu Samajotsav at Shalini Grounds at Jayanagar 5th block. RSS Karnataka South Karyavah Dr.Prabhakar Bhat addressed the event, throughout  the speech he criticised all attempts by few short sighted politicians to dimnish the image of Sangh. He condemned the Vote bank politics which now a days becoming a fashion an all spectrum of politics, to stick to the tactics of appeasement.
Shankarappa, State President of Maadiga Dandora wasthe chief Guest. Sri Nirbhayaananda Swamiji of Krishna Vivekananda Ashrama graced the occassion.
Kolada Matada swamji were present.
RSS Veterans including V Nagaraj, Litterateur  Sumathindra Nadig and many others were present. There was a procession arranged, started from 3 locations of Jayanagar simultaneously which was leading Shalini Grounds.Slogans were common about Save-Kashmir, Ram Mandir and Conspiracy against RSS by few politicians.
Hindu Samajotsav Was organised by Hanuman Shakti Jagaran Samiti, Bangalore South Unit.

READ ALSO

Mangalore

MANGALORE Samajotsav Office Inaugurated

ಕಾರ್ಯಕ್ರಮ ಹೀಗೆ ಸಾಗಿತ್ತು

ನಿರ್ಭಯಾನಂದ ಸ್ವಾಮೀಜಿ, ಕೃಷ್ಣ ವಿವೇಕಾನಂದ ಆಶ್ರಮ ಬೆಂಗಳೂರು: ಭಾರತ ಅತ್ಯಂತ ಪುರಾತನ ದೇಶ. 5000 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ದೇಶ. ಜಗತ್ತಿಗೇ ದಾರಿ ತೋರಿದ ದೇಶ. ಆದರೆ, ದುರ್ದೈವದಿಂದ ನಮ್ಮ ಮಕ್ಕಳಿಗೆ ನಮ್ಮ ಪೂರ್ವಜರ ಇತಿಹಾಸದ ಕುರಿತಾಗಿ ತಿಳಿಸಲಾಗುತ್ತಿಲ್ಲ. “ನಾವು ಸಣ್ಣವರು. ನಮಗೇನೂ ತಿಳಿದಿಲ್ಲ. ಬಿಳಿಚರ್ಮದವರು ಉತ್ತಮರು. ಅವರು ಹೇಳಿದ್ದೇ ಸತ್ಯ. ಅವರಿಂದಲೇ ನಮ್ಮ ಉದ್ದಾರ” ಇತ್ಯಾದಿಗಳನ್ನೇ ಕಲಿಸುತ್ತಾ ಬಂದಿದ್ದೇವೆ. ಇದನ್ನು ಓದಿದ ಯಾವ ಪ್ರಜೆಯೂ ದೇಶದ ಕುರಿತಾಗಿ ಸ್ಫೂರ್ತಿ ತಳೆಯಲಾರ. ವ್ಯಕ್ತಿಯೊಬ್ಬನಿಗೆ ಸ್ಫೂರ್ತಿ ನೀಡಿ. ಅವನು ಏನನ್ನು ಬೇಕಾದರೂ ಮಾಡಬಲ್ಲ, ಏನನ್ನು ಬೇಕಾದರೂ ಜಯಿಸಬಲ್ಲ.  ನಮ್ಮ ಪೂರ್ವಜರ ಸಾಹಸದ ಬಗ್ಗೆ  – ಗ್ರೀಕರನ್ನು ಸೋಲಿಸಿದ, ಜಗದೇಕವೀರನೆನಿಸಿಕೊಂಡ ಅಲೆಗ್ಜಾಂಡರನೂ ಭಾರತವನ್ನು ಗೆಲ್ಲಲಾಗದಿದ್ದ ಕುರಿತಾಗಿ – ತಿಳಿಸಿರಿ. ನಮ್ಮ ಪೂರ್ವಜರ ಅಸಾಧಾರಣ ಪ್ರತಿಭೆ, ಬುದ್ಧಿಮತ್ತೆಗಳ ಕುರಿತಾಗಿ –  ಬೋಧಾಯನನಂತಹ ಮೇದಾವಿಗಳಿಂದಲೇ ಗ್ರೀಕರ ಗಣಿತಜ್ಞಾನ ಹೆಚ್ಚಾಗಿದ್ದರ ಕುರಿತಾಗಿ – ತಿಳಿಸಿರಿ. ಹೀಗೆ ನಾವು ಎಲ್ಲದರಲ್ಲಿಯೂ ಮುಂದಿದ್ದೆವೆಂದು ತಿಳಿದ ವ್ಯಕ್ತಿಗೆ ಸ್ಫೂರ್ತಿ ಸಿಗುತ್ತದೆ. ಈ ರೀತಿ ಸ್ಫೂರ್ತಿಯನ್ನು ಪಡೆದುಕೊಂಡ ವ್ಯಕ್ತಿ ಮಾತ್ರ ದೇಶವನ್ನು ಮೇಲೆತ್ತಲು ಕೆಲಸ ಮಾಡಬಲ್ಲ; ಎಲ್ಲ ರೀತಿಯ ತ್ಯಾಗಕ್ಕೂ ಸಿದ್ಧನಾಗಬಲ್ಲ.

ಚಲನಚಿತ್ರ ವಿಭಾಗದ ಚಂದ್ರ ಶೇಖರ್ ಮಾತನಾಡಿದರು: ಈ ಕಾರ್ಯ ಅಗತ್ಯವಾಗಿ ಆಗಬೇಕಾದದ್ದು. ಇದಕ್ಕಾಗಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು. ಸಂಘಟಿತರಾದಾಗಲೇ ಶಕ್ತಿ ಮತ್ತು ಗೌರವ.

ಶಂಕ್ರಪ್ಪನವರು: ನಾವು ಅಯೋಧ್ಯೆಯಲ್ಲಿ ದೇವಸ್ಥಾನ ಕಟ್ಟುವುದಕ್ಕೋಸ್ಕರ ಈ ಹಿಂದು ಸಮಾಜೋತ್ಸವ ನಡೆಸುತ್ತಿದ್ದೇವೆ. ಅಯೋಧ್ಯೆ ನಮ್ಮ ಸ್ಥಳ. ರಾಮ ನಮ್ಮ ಆದರ್ಶ ಪುರುಷ. ನಾವೇನೂ ಅಮೇರಿಕದಲ್ಲೋ, ಪಾಕಿಸ್ತಾನದಲ್ಲೋ ದೇವಸ್ಥಾನ ನಿರ್ಮಿಸಲು ಪ್ರಯತ್ನಿಸುತ್ತಿಲ್ಲ. ಅಲ್ಲಿ ನಿರ್ಮಿಸಲು ಅಲ್ಲಿನ ಸರಕಾರವನ್ನೂ, ಸಮಾಜವನ್ನೂ ಬೇಡಿದ್ದರೆ ತಪ್ಪೆನ್ನುತ್ತಿರಲಿಲ್ಲ. ನಮ್ಮದೇ ದೇಶವಾದ ಭಾರತದಲ್ಲಿ, ನಮ್ಮದೇ ಆದರ್ಶ ಪುರುಷನ ದೇವಸ್ಥಾನ ನಿರ್ಮಿಸಲು ಬೇಡುವ ಸ್ಥಿತಿಗೆ ಬಂದಿದ್ದೇವೆ. ಈ ರೀತಿಯ ಹೇಡಿ ಮಕ್ಕಳನ್ನು ಕಂಡು ಭಾರತ ಮಾತೆ ದುಃಖಿತಳಾಗಿದ್ದಾಳೆ. ಇಂತಹ ಮಕ್ಕಳೇ ಬೇಡವೆನ್ನುತ್ತಿದ್ದಾಳೆ. ಹಿಂದುಗಳೆಲ್ಲರೂ ಒಂದಾಗಿ. ಮೊದಲು ಹಿಂದುಗಳಾಗಿ, ನಂತರ ನಮ್ಮ ಜಾತಿಗಳ ಕುರಿತಾಗಿ ಚಿಂತಿಸೋಣ. ಹಿಂದು ಎನ್ನುವುದು ನಮ್ಮ ದೇಹವಿದ್ದಂತೆ. ಜಾತಿ-ಉಪಜಾತಿಗಳೆಲ್ಲಾ ಅದರ ಅಂಗಗಳು. ಇವೆಲ್ಲವೂ ಒಟ್ಟಾಗಬೇಕು. ಎಲ್ಲ ರೀತಿಯ ವಿಘಟನೆಯ ಭಾವನೆಗಳನ್ನು ದೂರಗೊಳಿಸಿ ಒಂದಾಗಬೇಕು. ದೀನರಾಗಿ ಬೇಡುವುದು ಸರಿಯಲ್ಲ. ಸಿಂಹದಂತೆ ಘರ್ಜಿಸಬೇಕು, ದೇವಸ್ಥಾನವನ್ನು ಕಟ್ಟಬೇಕು.

ರಾಷ್ಟ್ರ ಸೇವಿಕಾ ಸಮಿತಿಯ ಭಗಿನಿಯರಿಂದ ಸಮೂಹ ಗೀತೆ: ಹಿಂದುತ್ವದ ಜಯಘೋಷವ ಮೊಳಗಿಸಿ ನಾಡನು ಜಾಗ್ರತಗೊಳಿಸೋಣ.

ಡಾ|| ಪ್ರಭಾಕರ ಭಟ್ಟರು: ಸ್ವಾತಂತ್ರ್ಯ ಸಿಕ್ಕು 64 ವರ್ಷಗಳಾಯಿತು. ಇಂದಿಗೂ ನಮ್ಮ ಮಕ್ಕಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕುರಿತಾಗಿ ಗೊತ್ತಿಲ್ಲ. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ – ಇವರುಗಳೇ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದೆಂದು ತಿಳಿಸಲಾಗುತ್ತಿದೆ, ನಮ್ಮ ಮುಗ್ದ ಜನ ನಿಜವೆಂದು ಒಪ್ಪುತ್ತಿದ್ದಾರೆ. ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕಾರಿಗೂ ಸ್ವಾತಂತ್ರ್ಯ ಹೋರಾಟಕ್ಕೂ ಏನು ಸಂಬಂಧ? ರಾಹುಲ್ ಇನ್ನೂ ಬಚ್ಚಾ, ಸ್ವಲ್ಪ ಲುಚ್ಚಾ. ಆತನಿಗೆ ಬೆಂಗಳೂರಿಗೆ ಆಹ್ವಾನಿಸುತ್ತಿದ್ದೇವೆ – ಇಲ್ಲಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು. ಆದರೆ, ಆತನ ಖಾಯಿಲೆ ಬಹಳ ಮುಂದುವರೆದಿದೆ, ಚಿಕಿತ್ಸೆ ಫಲಕಾರಿಯಾಗದೆಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಸ್ವಲ್ಪ ಸಮಯದ ಹಿಂದೆ ರಾಹುಲನು “SIMI ಮತ್ತು  RSS ಎರಡೂ ಒಂದೇ ರೀತಿಯ ಉಗ್ರಗಾಮಿ ಸಂಸ್ಥೆಗಳು” ಎಂದಿದ್ದ. ಇದೀಗ WikiLeaks ನಿಂದ ತಿಳಿದ ಸಂಗತಿಯೆಂದರೆ, “ಜಗತ್ತಿನೆಲ್ಲೆಡೆ ಉಗ್ರಗಾಮಿ ಚಟುವಟಿಕೆ ನಡೆಸುತ್ತಿರುವ ಲಷ್ಕರ್-ಎ-ತೊಯ್ಬಾದಂತಹ ಸಂಘಟನೆಗಳಿಂದ ಹೆಚ್ಚಿನ ಅಪಾಯವಿಲ್ಲ. ಹಿಂದು ಸಂಘಟನೆಗಳೇ ಹೆಚ್ಚು ಅಪಾಯಕಾರಿ” ಎಂಬುದಾಗಿ ಆತ ಅಮೆರಿಕಕ್ಕೆ ತಿಳಿಸಿದ್ದಾನಂತೆ. ಕೇಂದ್ರ ಸರಕಾರದ ಗ್ರಹಮಂತ್ರಿ ಪಿ.ಚಿದಂಬರಂ ಅವರು “ಕೇಸರೀ ಭಯೋತ್ಪಾದನೆ” ಎಂಬ ಹೊಸ ಪದವನ್ನೇ ಹುಟ್ಟುಹಾಕಿದ್ದಾರೆ. ಇಲ್ಲಿ ಕುಳಿತಿರುವ ಎಲ್ಲ ಸಾಧುಸಂತರೂ ಕೇಸರಿ ಧರಿಸಿದ್ದಾರೆ. ಅವರೆಲ್ಲರೂ ಭಯೋತ್ಪಾದಕರೇನು? ಭಾರತದ ಧ್ವಜದಲ್ಲಿಯೂ ಕೇಸರಿ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ, ದೇಶಾದ್ಯಂತ 50,000ಕ್ಕೂ ಹೆಚ್ಚು  ಸೇವಾಚಟುವಟಿಕೆಗಳನ್ನು ನಡೆಸುತ್ತಿರುವ ದೇಶಭಕ್ತ ಸಂಸ್ಥೆ. ಇದೆಂದೂ ಉಗ್ರಗಾಮಿ ಸಂಸ್ಥೆಯಾಗಲು ಸಾಧ್ಯವಿಲ್ಲ. ಹಿಂದುಗಳು ಕಳೆದ 5000 ವರ್ಷಗಳಲ್ಲಿ ಯಾವುದೇ ಆಕ್ರಮಣ ನಡೆಸಿಲ್ಲ. ಯಾರನ್ನೂ ಮತಾಂತರಿಸಿಲ್ಲ. “ಸರ್ವೇ ಜನಾಃ ಸುಖಿನೋ ಭವಂತು” “ವಸುದೈವ ಕುಟುಂಬಕಂ” ಎಂದು ಘೋಷಿಸುವವರು ಹಿಂದುಗಳು. ತಮ್ಮ ಮಾರ್ಗ ಮಾತ್ರ ಸತ್ಯ, ಉಳಿದೆಲ್ಲವೂ ಮಿಥ್ಯ ಎನ್ನುವುದಿಲ್ಲ ಹಿಂದುಗಳು. ಬೇರೆ ದೇವರನ್ನು ಪೂಜಿಸಿದರೆ ಕೊಲ್ಲುತ್ತೇವೆ ಎಂದು ಹಿಂದುಗಳೆಂದೂ ತಿಳಿಸಿಲ್ಲ. ಹಿಂದು ಸಂಘಟಿತನಾದರೆ, ಶಕ್ತಿವಂತನಾದರೆ ಜಗತ್ತಿಗೇ ಶ್ರೇಯಸ್ಸು. ಹಿಂದು ಶಕ್ತ ಎಂದೂ ಯಾರಿಗೂ ಕೇಡುಂಟು ಮಾಡುವುದಿಲ್ಲ.

ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಧ್ವಜವನ್ನು ಮೂರು ಭಾಗ ಮಾಡಿ ಬಣ್ಣಬಣ್ಣದ ಧ್ವಜ ಮಾಡಲಾಯಿತು. ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನೇ ಮೂರಾಗಿ ತುಂಡರಿಸಲಾಯಿತು. ಇದೀಗ ಅಯೋಧ್ಯೆಯ ಸರದಿ. ಅದನ್ನೂ ಮೂರಾಗಿ ತುಂಡರಿಸುವಂತೆ ಕೋರ್ಟ್ ಆದೇಶಿಸಿದೆ. ಸಹಸ್ರಾರು ವರ್ಷಗಳಿಂದ ಕೋಟ್ಯಂತರ ಹಿಂದುಗಳು ಶ್ರೀರಾಮಚಂದ್ರನ ಜನ್ಮಸ್ಥಾನವೆಂದು ತಿಳಿದು ಪೂಜಿಸುತ್ತಾ ಬಂದಿರುವ ಪವಿತ್ರ ಸ್ಥಳ ಅಯೋಧ್ಯೆಯೆಂದು ಮೂವರೂ ನ್ಯಾಯಾಧೀಶರು ಒಪ್ಪಿದ್ದಾರೆ. ಹೀಗಿರುವಾಗ ಅದರಲ್ಲಿ ಮುಸಲ್ಮಾನರಿಗೆ ಪಾಲೇಕೆ? ಇನ್ನು ಬಾಬರ್ ಒಬ್ಬ ಆಕ್ರಮಣಕಾರಿ, ಅತ್ಯಾಚಾರಿ. ಆತನ ವಂಶಜರು ಈ ದೇಶದಲ್ಲಿ ಯಾರೂ ಇಲ್ಲ. ಇಲ್ಲಿರುವ ಪ್ರತಿಯೊಬ್ಬ ಮುಸಲ್ಮಾನನೂ ಹಿಂದೆ ಹಿಂದುವಾಗಿದ್ದವನೇ. ಕಾರಣಾಂತರದಿಂದ ಮುಸಲ್ಮಾನನಾಗಿ ಮತಾಂತರಗೊಂಡಿದ್ದಾನೆ. ಇಂದಿಗೂ ಅವನಲ್ಲಿ ಹರಿಯುತ್ತಿರುವುದು ಹಿಂದು ರಕ್ತವೇ. ಹೀಗಾಗಿ ಅವರಾರೂ ಬಾಬರನ ಸಂತತಿಯವರಲ್ಲವೆಂಬುದನ್ನು ಮನಗಾಣಬೇಕು. ಬಾಬರನ ಹೆಸರಿನಲ್ಲಿ ಮಸೀದಿ ಕಟ್ಟಲು ಅಯೋಧ್ಯ ಮಾತ್ರವಲ್ಲ, ಈ ದೇಶದ ಯಾವುದೇ ಭಾಗದಲ್ಲೂ ಅವಕಾಶ ನೀಡುವುದಿಲ್ಲ. ಬೇರಾರ ಹೆಸರಿನಲ್ಲಿ ಬೇಕಾದರೂ ಬೇರೆಡೆ ಮಸೀದಿ ನಿರ್ಮಿಸಲಿ; ಬಾಬರನ ಹೆಸರಿನಲ್ಲಿ ಮಾತ್ರ ಕೂಡದು.

ಕಾಶ್ಮೀರ ಭಾರತದ ಶಿರ, ಮುಕುಟಸ್ಥಾನದಲ್ಲಿದೆ. ಕಳೆದ ಕೆಲವು ದಶಕಗಳಿಂದ ಅದನ್ನು ಭಾರತದಿಂದ ಬೇರ್ಪಡಿಸುವ ಪ್ರಯತ್ನ ನಡೆದಿದೆ. ಅದಕ್ಕಾಗಿಯೇ ಅಲ್ಲಿದ್ದ ಹಿಂದುಗಳನ್ನು ಅಲ್ಲಿಂದ ಓಡಿಸಲಾಯಿತು. ಹಿಂದು ಅಲ್ಪಸಂಖ್ಯಾತನಾದ ಕಡೆ, ಮುಸಲ್ಮಾನರು ಬಹುಸಂಖ್ಯಾತರಾದ ಕಡೆ ಈ ರೀತಿಯ ಸಮಸ್ಯೆಗಳು ಉದ್ಭವವಾಗುತ್ತಿದೆ. ಪಾಕಿಸ್ತಾನ ನಿರ್ಮಾಣಕ್ಕೂ ಇದೇ ಕಾರಣ. ಕೇರಳದ ಮಲ್ಲಪ್ಪುರಂನಲ್ಲೂ ಮುಸಲ್ಮಾನರು ಹೆಚ್ಚಾಗಿದ್ದಾರೆ – ಅದನ್ನು ಮಿನಿಪಾಕಿಸ್ತಾನವೆನ್ನುತ್ತಾರೆ. ಶಿವಾಜಿನಗರದಂತಹ ಮುಸಲ್ಮಾನ ಬಾಹುಳ್ಯವುಳ್ಳ ಪ್ರದೇಶದಲ್ಲಿ ಹಿಂದುಗಳು ಓಡಾಡಲು ಸಾಧ್ಯವಿಲ್ಲ. ಮುಸಲ್ಮಾನರ ಜನಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಹಿಂದುಗಳಿಗೆ ಮಾತ್ರ ಅನ್ವಯವಾಗುವ ಜನಸಂಖ್ಯಾ ನಿಯಂತ್ರಣದ ಕಾನೂನು-ಘೋಷಣೆಗಳಿಂದ ಹಿಂದುಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಪಶ್ಚಿಮಾಂಚಲದಲ್ಲಿ ಕ್ರೈಸ್ತರದೇ ಜನಬಾಹುಳ್ಯವಾಗಿದೆ. ಅಲ್ಲಿನ ಹೆಚ್ಚಿನ ಜನರನ್ನು ಮತಾಂತರಿಸಿದ್ದಾರೆ. ಸೇವೆಯ ಸೋಗು ಹಾಕುವ ಅವರಿಗೆ, ಸೇವೆ ಮಾಡಲು ಹಣ ನೀಡುವುದು ನಮ್ಮವರೇ. ನಮ್ಮ ಹಣದಿಂದಲೇ ಸೇವೆ ಮಾಡಿ, ನಮ್ಮವರನ್ನೇ ಮತಾಂತರಿಸಿ, ಅವರನ್ನು ದೇಶದಿಂದಲೇ ಬೇರೆ ಮಾಡುವ ಷಡ್ಯಂತ್ರ ಅವರದು. ಇನ್ನು ಅಸ್ಸಾಂನಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತಿದೆ. ಬಂಗಾಳದಲ್ಲಿಯೂ ಇದೇ ಪರಿಸ್ಥಿತಿ. ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರೇ ಇಲ್ಲಿ ಬಹುಸಂಖ್ಯಾತರಾಗುತ್ತಿದ್ದಾರೆ. ಚುನಾವಣೆಗಳಲ್ಲಿಯೂ ಅವರ ಪ್ರಭಾವ ಕಂಡುಬರುತ್ತಿದೆ. ಅಂತಹವರೇ ಮುಂದೆ ಶಾಸಕರಾದರೆ, ಸಚಿವರಾದರೆ ಆಶ್ಚರ್ಯವಿಲ್ಲ. ಅಸ್ಸಾಂ, ಪಶ್ಚಿಮ ಬಂಗಾಲಗಳನ್ನು ಬಾಂಗ್ಲಾದೇಶಕ್ಕೆ ಸೇರಿಸುವ ಷಡ್ಯಂತ್ರ ಇವರದು.

ಕಾಶ್ಮೀರ ಭಾರತಕ್ಕೆ ಸೇರಿದ ಜಾಗ. ಭಾರತದ ಒಂದೊಂದು ಇಂಚಿ ಜಾಗವೂ ನಮಗೆ ಪವಿತ್ರ – ಅದನ್ನು ಭಾರತದಿಂದ ಪ್ರತ್ಯೇಕವಾಗಲು ನಾವು ಬಿಡೆವೆ.

ಹಿಂದುಗಳು ಜಾತಿ-ಮತ-ಸಂಪ್ರದಾಯದ ಹೆಸರಿನಲ್ಲಿ ಕಚ್ಚಾಡುತ್ತಾರೆ. ನಮ್ಮದೇ ಸಮಾಜದ ಒಂದು ಗುಂಪನ್ನು ಮುಟ್ಟಿಸಿಕೊಳ್ಳಬಾರದೆಂದು ದೂರವಿರಿಸಲಾಗಿದೆ. ಇದು ಅಮಾನವೀಯ. ನಮ್ಮ ಇತಿಹಾಸದುದ್ದಕ್ಕೂ ನಮ್ಮ ದೇಶವನ್ನು ಉಳಿಸಲು ಹೋರಾಡಿದವರು ಇವರು. ಇವರನ್ನು ದೂರವಿರಿಸುವುದು ತಪ್ಪು. ಅವರನ್ನು ನಮ್ಮವರೆಂದು ಅಪ್ಪಿ ಜೊತೆಗೆ ಕೊಂಡೊಯ್ಯಬೇಕು. ಹಿಂದುಗಳ ಜಗಳದಿಂದ ಅನ್ಯಮತೀಯರಿಗೆ ಲಾಭ. ಇದನ್ನು ಹಿಂದುಗಳು ಮನಗಾಣಬೇಕು. ಹಿಂದು ಸಂಘಟನೆಯೊಂದೇ ಇಲ್ಲಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ.

ಸ್ವಾಮೀಜಿಯವರಿಂದ ಎಲ್ಲರಿಗೂ “ಸಂಕಲ್ಪ” ಬೋಧನೆ.

ಸಂಸ್ಕಾರ ಭಾರತಿಯ ಮಕ್ಕಳಿಂದ ವಂದೇ ಮಾತರಂ ಗಾಯನ.
















  • email
  • facebook
  • twitter
  • google+
  • WhatsApp

Related Posts

Mangalore
Hindu Samajotsav

Mangalore

January 4, 2011
Mangalore Hindu Samjotsav Office Inauguration
Hindu Samajotsav

MANGALORE Samajotsav Office Inaugurated

December 25, 2010
BANTWALA
Hindu Samajotsav

BANTWALA

December 25, 2010
BELTHANGADY
Hindu Samajotsav

BELTHANGADY

December 25, 2010
Hindu Samajotsav

KATEEL

December 25, 2010
MOODABIDIRE
Hindu Samajotsav

MOODABIDIRE

December 25, 2010
Next Post
HALASUR HINDU SAMAJOTSAV DIAS

Halasur, Bangalore

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

Assam Burning – Does this not signal a larger problem in the near future?

Assam Burning – Does this not signal a larger problem in the near future?

December 9, 2013
Pungava HINDI special issue on Hindu Shakti Sangama-2012

Pungava HINDI special issue on Hindu Shakti Sangama-2012

March 14, 2012
ಭಾರತದ ಪೂರ್ವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ, ಆರೆಸ್ಸೆಸ್ ಸಂತಾಪ

ಭಾರತದ ಪೂರ್ವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ, ಆರೆಸ್ಸೆಸ್ ಸಂತಾಪ

August 31, 2020
ಹೋರಾಟದ ಅಂಗಣದಲ್ಲಿ ರೂಪುಗೊಂಡ ‘ಬಲಿಷ್ಠರ ಮೋಸ’ದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿ

ಹೋರಾಟದ ಅಂಗಣದಲ್ಲಿ ರೂಪುಗೊಂಡ ‘ಬಲಿಷ್ಠರ ಮೋಸ’ದ ಕುರಿತು ಗಂಭೀರ ವಿಮರ್ಶಾತ್ಮಕ ಕೃತಿ

March 6, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In