• Samvada
  • Videos
  • Categories
  • Events
  • About Us
  • Contact Us
Tuesday, January 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಕದಡಿದ ಕಣಿವೆಯ ಮರೆಯಲ್ಲಿರುವ ಸತ್ಯ !

Vishwa Samvada Kendra by Vishwa Samvada Kendra
July 19, 2016
in Articles
250
0
ಕದಡಿದ ಕಣಿವೆಯ ಮರೆಯಲ್ಲಿರುವ ಸತ್ಯ !

Three days after militant commander Burhan Wani was killed in south Kashmir, strict restrictions continue to remain inposed across Kashmir valley. .Express Photo by Shuaib Masoodi 11-06-2016

492
SHARES
1.4k
VIEWS
Share on FacebookShare on Twitter

ಕದಡಿದ ಕಣಿವೆಯ ಮರೆಯಲ್ಲಿರುವ ಸತ್ಯ !!
ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನ ಕಮಾಂಡರ್ ಬುರ್ಹಾನ್ ವಾನಿ ಮತ್ತಿಬ್ಬರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ ನಂತರ ಜಮ್ಮು ಮತ್ತು 
 ಕಾಶ್ಮೀರದಲ್ಲಿ ನಡೆದಿರುವ ಘಟನಾವಳಿಗಳು ಎಂದಿನ ರೂಢಿಯಲ್ಲಿ ಮುಂದುವರೆದಿವೆ. ಪ್ರತ್ಯೇಕತಾವಾದಿಗಳಿಂದ ಪ್ರಾಯೋಜಿತ ಅವ್ಯವಸ್ಥೆ, ಹಿಂಸಾಚಾರ, ಕ್ಷೆಭೆಯಿಂದ ಕಣಿವೆಯ ಶಾಂತಿ ಕದಡಿದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಪ್ರತ್ಯೇಕತಾವಾದಿಗಳು ವಿರುದ್ಧ ನಿಂತಿರುವ ರಾಷ್ಟ್ರೀಯತಾವಾದಿಗಳು ಎನ್ನುವ ಎಂದಿನಂತೆ ಸಾಮಾನ ತರ್ಕವನ್ನು ಮುಂದಿರಿಸಿವೆ. ರಾಜಕೀಯ ವಿಶ್ಲೇಶಕರು, ಚಿಂತಕರು, ಅಂಕಣಕಾರರು, ವಿಶ್ವವಿದ್ಯಾಲಯಗಳ ವಿದ್ವಾಂಸರು, ಥಿಂಕ್ ಟ್ಯಾಂಕ್‌ಗಳು ತಮ್ಮ ಜೀವಿತದ ಪೂರ್ವಾಗ್ರಹಗಳನ್ನು ಕಡಾಯಿಯಲ್ಲಿ ಸುರಿಯವುದರಲ್ಲಿ ನಿರತರಾಗಿದ್ದಾರೆ. ಇನ್ನು ರಾಜಕೀಯ ಸಮಯಸಾಧಕರ ಕುರಿತು ವಿಶೇಷವಾಗಿ ಹೇಳಬೇಕಿಲ್ಲ.

Three days after militant commander Burhan Wani was killed in south Kashmir, strict restrictions continue to remain inposed across Kashmir valley. .Express Photo by Shuaib Masoodi 11-06-2016
Three days after militant commander Burhan Wani was killed in south Kashmir, strict restrictions continue to remain inposed across Kashmir valley. .Express Photo by Shuaib Masoodi 11-06-2016

ಕಾಶ್ಮೀರದಿಂದ ಪ್ರಕಟಣೆಗೊಳ್ಳುತ್ತಿರುವ ವೃತ್ತಪತ್ರಿಕೆಗಳು ’ಬುರ್ಹಾನ್ ವಾನಿಯ ಬಲಿದಾನ’, ಕಾಶ್ಮೀರದಲ್ಲಿ ಬೆಳಯುತ್ತಿರುವ ಸ್ಥಾನೀಯ ಉಗ್ರವಾದದ ಕುರಿತು ಕಾಶ್ಮೀರಿಗಳೊಡನೆ ಮಾತುಕತೆಗೆ ಕೇಂದ್ರ ಸರ್ಕಾರದ ಇಚ್ಛಾಶಕ್ತಿಯ ಕೊರತೆ, ಭದ್ರತಾ ಪಡೆಗಳ ದೌರ್ಜನ್ಯ, ಸರ್ಕಾರದ ದಮನಕಾರಿ ನೀತಿ ಇತ್ಯಾದಿಯಾದ ತಮ್ಮ ಪದ್ಧತಿಯ ವಾದಗಳನ್ನು ಮಂಡಿಸುತ್ತಿವೆ. ’ರಕ್ತಸಿಕ್ತ ಬೀದಿಗಳು’, ’ಜರ್ಜರಿತ ದೇಹಗಳು’ ಮುಂತಾದ ಪದಗುಚ್ಛಗಳನ್ನು ಬಳಸಿ ಭಾವನಾತ್ಮಕವಾಗಿ ಹೆಣೆದಿರುವ ಇಂತಹ ಸಮರ್ಥನೆಗಳು ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಸಲುವಾಗಿಯೇ ವಿನ್ಯಾಸಗೊಳಿಸಿದಂತಿವೆ. ಇನ್ನು ಜಮ್ಮುವಿನಿಂದ ಪ್ರಕಾಶನಗೊಳ್ಳುವ ವೃತ್ತಪತ್ರಿಕೆಗಳು ಇಂದಿನ ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬಲ್ಲ ನಾಯಕತ್ವದ ಕೊರತೆ, ಅನಿರ್ದೇಶಿತ ಕ್ಷಿಪಣಿಗಳಂತಾಗುತ್ತಿರುವ ಬುರ್ಹಾನ್ ವಾನಿಯಂತಹ ಭಯೋತ್ಪಾದಕರು, ಶ್ರೀ ಅಮರನಾಥ ಯಾತ್ರೆಯನ್ನು ಹಾಳುಗೆಡಹುವ ಹುನ್ನಾರ ಇತ್ಯಾದಿಯಾಗಿ ಪ್ರತಿವಾದಗಳನ್ನು ಮುಂದಿಡುತ್ತಿವೆ. ರಾಷ್ಟ್ರೀಯ ವೃತ್ತಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳು ರಾಷ್ಟ್ರವಾದಿಗಳು ಮತ್ತು ಪ್ರತ್ಯೇಕತಾವಾದಿಗಳ ನಡುವೆ ಸಮತೋಲನವನ್ನು ತರುವುದರ ಜೊತೆಗೆ ಪಾಕಿಸ್ತಾನದ ಇನ್ನೊಂದು ಕೋನವನ್ನು ಎಳೆತರುವ ನಿರರ್ಥಕ ಕಾರ್ಯದಲ್ಲಿ ತೊಡಗಿವೆ. ಇನ್ನು ಕೆಸರೆರಚಾಟದಲ್ಲೇ ಕಾಲಕಳೆಯುವ ಸುದ್ದಿವಾಹಿನಿಗಳ ಚರ್ಚಾ ಪ್ಯಾನಲಿಸ್ಟ್‌ಗಳು ಇರುವ ಗೊಂದಲವನ್ನು ಹೆಚ್ಚಿಸಲು ಏನೆಲ್ಲಾ ಮಾಡಬೇಕೋ ಅವೆಲ್ಲವನ್ನೂ ಎಳೆತರುವ ಪ್ರಯತ್ನದಲ್ಲಿದ್ದಾರೆ. ಸುದ್ದಿಸಂಸ್ಥೆಗಳ ಸೈದ್ಧಾಂತಿಕ ಒಲವನ್ನು ಅರ್ಥಮಾಡಿಕೊಂಡರೆ ಪ್ರತಿಯೊಂದು ವೃತ್ತಪತ್ರಿಕೆ ಅಥವಾ ಸುದ್ದಿವಾಹಿನಿಯ ನಿಜವಾದ ತರ್ಕ ಏನು? ಎನ್ನುವುದನ್ನು ಸುಲಭವಾಗಿ ಗ್ರಹಿಸಬಹುದು.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

burhan-reu-L
ಈ ಶಬ್ದಾಡಂಬರ ವಾಗಾಡಂಬರದ ಗದ್ದಲದ ನಡುವೆ ನಿಜವನ್ನು ಗ್ರಹಿಸುವ ಹಾಗೂ ಸನ್ನಿವೇಶವನ್ನು ವಾಸ್ತವಿಕತೆಯ ಹಿನ್ನೆಲೆಯಲ್ಲಿ ನೋಡಬೇಕಾದ ತುರ್ತು ಅಗತ್ಯವಿದೆ.
ಸರ್ವಪ್ರಥಮ ಸತ್ಯ ಎಂದರೆ ಬುರ್ಹಾನ್ ವಾನಿ ಓರ್ವ ಉಗ್ರ, ಆತ ಓರ್ವ ರಾಜ್ಯದ ಶತ್ರು, ಅವನ ತಲೆದಂಡಕ್ಕೆ ಹತ್ತು ಲಕ್ಷ ರೂಪಾಯಿಗಳ ಇನಾಮು ಘೋಷಣೆಯಾಗಿತ್ತು. ತೊಡೆದುಹಾಕಬೇಕಾದ ಉಗ್ರನೆಂದು ಅವನನ್ನು ಗುರುತಿಸಲಾಗಿತ್ತು, ಅವನ ಮೃತ್ಯುವು ಅನಿವಾರ್ಯವಾಗಿತ್ತು. ಈ ಸಂಗತಿ ಅವನಿಗೂ ಗೊತ್ತಿತ್ತು, ಆತನ ಪಾಲಕರಿಗೆ ತಿಳಿದಿತ್ತು, ಕಾಶ್ಮೀರದ ಜನರಿಗೂ ಇದರ ಅರಿವಿತ್ತು. ಆತ ಇಷ್ಟೊಂದು ದಿವಸ ಬದುಕಿದ್ದೇ ನಿಜವಾಗಿ ಆಶ್ಚರ್ಯವಾಗುವಂತಹ ವಿಷಯ. ಹೀಗಿರುವಾಗ ಕೆಲವು ಮಾಧ್ಯಮ ಮತ್ತು ಕಾಶ್ಮೀರ ಕಣಿವೆಯ ಪಟ್ಟಭದ್ರರು ಹಿಂದೆಂದೂ ನಡೆಯದ ರೀತಿಯ ಸನ್ನಿವೇಶ ಈಗ ನಿರ್ಮಾಣವಾಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿರುವುದೇಕೆ? ಈಗ ಉನ್ಮತ್ತರಾದವರಂತೆ ಆಡುತ್ತಿರುವವರು ಬುರ್ಹಾನ್ ವಾನಿ ಹೀಗೆ ಸಾಯಬಾರದಿತ್ತು ಎಂದು ಬಯಸಿದ್ದರೆ ಭಯೋತ್ಪಾದನೆಯ ಮಾರ್ಗ ಬಿಟ್ಟು ಶರಣಾಗುವಂತೆ ಆತನನ್ನು ಪ್ರಚೋದಿಸಬಹುದಿತ್ತು. ಒಂದು ವೇಳೆ ಆತ ಶರಾಣಾಗುತ್ತಿರುವ ಸಂದರ್ಭದಲ್ಲಿ ಕೊಲ್ಲಲ್ಪಟ್ಟರೆ ಅವರ ಆಕ್ರೋಶ ಸಮರ್ಥನೀಯವಾಗಿತ್ತು. ಆದರೆ ಈಗಿನ ಸನ್ನಿವೇಶದಲ್ಲಿ ಯಾವ ಸಮರ್ಥನೆಯನ್ನು ಕೊಡಬಹುದು?

ಎರಡನೆಯ ನಿಜಸಂಗತಿಯೆಂದರೆ ಬುರ್ಹಾನ್ ಸೈದ್ಧಾಂತಿಕ ಬದ್ಧತೆಯಿದ್ದ ಉಗ್ರನಾಗಿರಲಿಲ್ಲ. ಆತ ಒಬ್ಬ ದಾರಿತಪ್ಪಿದ ಯುವಕ, ಸಾಮಾಜಿಕ ಮಾಧ್ಯಮದಲ್ಲಿ ಅವನ ವ್ಯಕ್ತಿತ್ವದ ನಿಜ ಪರಿಚಯ ಸಿಗುತ್ತದೆ. ಯಾವ ಕಸುವಿನ ಗೆರಿಲ್ಲಾ ಹೋರಾಟಗಾರನೂ ತನ್ನನ್ನು ತಾನು ಒಡ್ಡಿಕೊಳ್ಳುವುದಿಲ್ಲವೋ ಅಂತಹ ರೀತಿಯಲ್ಲಿ ಆತ ಅತಿ ಆತ್ಮವಿಶ್ವಾಸದಿಂದ ಆತ ತನ್ನನ್ನು ಪ್ರಚಾರಕ್ಕೆ ಒಡ್ಡಿಕೊಂಡಿದ್ದ. ಸಂಕ್ಷಿಪ್ತವಾಗಿ ಹೇಳುವುದಾದರೆ ಬುರ್ಹಾನ್ ಒಂದು ಮಾಧ್ಯಮದ ಸೃಷ್ಟಿ ಹಾಗೇಯೇ ಆತನ ಸಾವೂ ಸಹ ಮಾಧ್ಯಮದಲ್ಲಿ ಈಗ ನಡೆದಿರುವ ಒಂದು ಆಟ.
ಇಲ್ಲಿ ಉಲ್ಲೇಖಿಸಬೇಕಾದ ಇನ್ನೊಂದು ಸಂಗತಿಯೆಂದರೆ, ಆತನ ಚಲನವನಗಳ ಮಾಹಿತಿ ಆತನಿಗೆ ಹತ್ತಿರವಿದ್ದವರಿಂದಲೇ ಸಿಗುತ್ತಿತ್ತು. ಅವನ ಸಂಘಟನೆಯಲ್ಲೇ ಅವನಿಗೆ ಆಗದವರಿದ್ದರು. ಹಾಗೆಯೇ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಿಗೆ ಅವನಿಂದ ಆಗಬೇಕಾದುದು ಏನೂ ಇರಲಿಲ್ಲ. ಆತನ ಅಂತ್ಯಸಂಸ್ಕಾರದಲ್ಲಿ ಯಾವೊಬ್ಬ ಪ್ರತ್ಯೇಕತಾವಾದಿ ಧುರೀಣನೂ ಪಾಲ್ಗೊಳ್ಳಲಿಲ್ಲ, ಪಾಲ್ಗೊಳ್ಳುವ ಪ್ರಯತ್ನವನ್ನೂ ಮಾಡಲಿಲ್ಲ. ಆತನ ಪರವಾಗಿ ಒಬ್ಬರೂ ಮಾತನಾಡುತ್ತಿಲ್ಲ. ಇಲ್ಲಿನ ಕಾರಣ ಸ್ಪಷ್ಟ – ಬುರ್ಹಾನ್ ವಾನಿ ತಮಗಿಂತ ದೊಡ್ಡವನಾಗುವುದು ಅವರಿಗೆ ಬೇಕಿಲ್ಲ. ಆದ್ದರಿಂದ ಬುರ್ಹಾನ್‌ನ ವಿಚಾರ ಆದಷ್ಟು ಬೇಗ ಸಮಾಧಿಯಾಗುವುದನ್ನು ಅವರೆಲ್ಲ ಬಯಸುತ್ತಿದ್ದಾರೆ.
ಆದರೆ ಆತನ ಸಾವು ಗಣನೀಯ ಪ್ರಮಾಣದ ಕ್ಷೆಭೆ ಹಾಗೂ ಹಿಂಸೆಯ ವಾತಾವರಣವನ್ನು ಸೃಷ್ಟಿಸಿದೆ, ದುರದೃಷ್ಟದಿಂದ ಮೂವತ್ತಕ್ಕೂ ಹೆಚ್ಚು ಅಮಾಯಕ ಜೀವಗಳ ಸಾವಿಗೆ ಕಾರಣವಾಗಿದೆ. ಸಂಘರ್ಷದಿಂದ ದೀರ್ಘಕಾಲದ ಆರ್ಥಿಕ ದುಃಷ್ಪರಿಣಾಮವೂ ಉಂಟಾಗಲಿದೆ ಅದರ ಬಿಸಿ ಕಾಶ್ಮೀರಿ ಸಮಾಜ ಕೆಳವರ್ಗದ ಜನರನ್ನು ತಟ್ಟಲಿದೆ. ಈಗಿನ ಪ್ರಕ್ಷುಬ್ಧತೆಯನ್ನು ವಿನ್ಯಾಸಗೊಳಿಸ ನಿರೂಪಿಸವ ಜನರು ಇದರಿಂದ ಲಾಭಗಳಿಸಬಹುದು, ಅವರು ಮಾಡುತ್ತಿರುವ ದುಷ್ಟ ಕಾರ್ಯಕ್ಕೆ ಅವರಿಗೆ ಗಳಿಕೆಯಾಗಬಹುದು. ಆದರೆ ದೊಡ್ಡ ಸಂಖ್ಯೆಯ ಪ್ರವಾಸಿಗರು ಬರುವ ಸಮಯ, ಶ್ರೀ ಅಮರನಾಥ ಸನ್ನಿಧಿ ತೀರ್ಥಯಾತ್ರೆಯ ಋತುವಿನಲ್ಲಿ ಗಳಿಸಿದ ಆದಾಯದ ಮೇಲೆಯೆ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಅಂಗಡಿ ಮಾಲೀಕರು, ಹೋಟೆಲುಗಳ ಕೆಲಸಗಾರರು, ಟ್ಯಾಕ್ಸಿ ಡ್ರೈವರುಗಳು, ಟೂರಿಸ್ಟ್ ಗೈಡ್‌ಗಳು, ದಿನಗೂಲಿಗಳು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅವರು ಅನುಭವಿಸುವ ಸಂಕಟ ನಿಜಕ್ಕೂ ಯಾತನಾಮಯ.
ದುರದೃಷ್ಟದ ಸಂಗತಿಯೆಂದರೆ ಬಂದೂಕು ಹಿಡಿದವರು ತಮಗೆ ತಾವೇ ಹಾಗೂ ತಮ್ಮ ಜನರಿಗೇ ಘಾಸಿಯುಂಟು ಮಾಡುತ್ತಿದ್ದೇವೆ ಹೊರತು ದೆಹಲಿಯಲ್ಲಿ ಕುಳಿತ ಯಾರಿಗೋ ಅಥವಾ ದೇಶದ ಇತರ ಭಾಗದ ಜನರಿಗೆ ಅಲ್ಲ ಎನ್ನುವ ಸಾಮಾನ್ಯ ಸಂಗತಿಯನ್ನು ಅರಿಯುತ್ತಿಲ್ಲ. ಇದೊಂದು ಚಿಕ್ಕ ಅಂಶ ಅವರನ್ನು ತಟ್ಟಿದರೆ ಬಹುತೇಕ ಸಮಸ್ಯೆಗಳು ಬಗೆಹರಿಯಬಲ್ಲವು. ರಾಜ್ಯ ಸರ್ಕಾರವು ಜಮ್ಮು ಕಾಶ್ಮೀರದ ಜನರಿಂದಲೇ ಚುನಾಯಿತವಾಗಿದೆ. ಜೊತೆಗೆ ಆಡಳಿತದ ಆಯಕಟ್ಟಿನ ಸ್ಥಾನಗಳು ಕಾಶ್ಮೀರಿ ಮುಸ್ಲಿಂ ಸಮಾಜದ ಜನರ ಹಿಡಿತದಲ್ಲೇ ಇವೆ. ವಾಸ್ತವದಲ್ಲಿ ಸ್ವಾಯತ್ತ ಆಡಳಿತದಂತಿರುವ ಸನ್ನಿವೇಶ ಹಾಗೂ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೇಂದ್ರದಿಂದ ಆರ್ಥಿಕ ಸಂಪನ್ಮೂಲ ಹರಿದುಬರುತ್ತಿರುವಾಗ ಅತೃಪ್ತಿಯಾಗಲು ಯಾವ ತೋರಿಕೆಯ ಕಾರಣವೂ ಇಲ್ಲ.
ವಿದೇಶಿ ಶಕ್ತಿಗಳ ಧೂರ್ತ ಸಂಚನ್ನು ಕಾಶ್ಮೀರದ ಜನತೆ ಅರ್ಥಮಾಡಿಕೊಳ್ಳಬೇಕು. ಬುರ್ಹಾನ್ ವಾನಿಯ ಹತ್ಯೆ ಕಾಶ್ಮೀರದ ಯುವ ಹುಡುಗರ ತಂದೆತಾಯಿಗಳು ತಮ್ಮ ಮಕ್ಕಳನ್ನು ವಿದೇಶಿ ಪ್ರಾಯೋಜಿತ ಭಯೋತ್ಪಾದನೆಯಿಂದ ದೂರವಿರಿಸಬೇಕೆಂಬ ಜವಾಬ್ದಾರಿಯನ್ನು ನಿರ್ವಹಿಸಲು ಒಂದು ಎಚ್ಚರಿಕೆಯ ಸಂದೇಶವಾಗಿದೆ. ಕಾಶ್ಮೀರದ ಯುವಕರನ್ನು ಹಿಂಸೆಯ ಮಾರ್ಗದಿಂದ ವಿಮುಖರಾಗಿಸಲು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಇದೊಂದು ಪಾಠವಾಗಿದೆ. ಕಾಶ್ಮೀರದ ಹುಡುಗ ಹುಡಗಿಯರ ಯುವಶಕ್ತಿಯನ್ನು ಫಲಪ್ರದ ಕಾರ್ಯಗಳಿಗೆ ನಿಯೋಜಿಸುವ ಅಗತ್ಯತೆಯಿದೆ. ಅವರನ್ನು ಒಂದಲ್ಲ ಒಂದು ಉದ್ಯೋಗದಲ್ಲಿ ತೊಡಗಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗಬಹುದು.
ಇಂತಹ ವಿದೇಶಿ ಪ್ರಾಯೋಜಿತ ಪ್ರಚಾರವನ್ನು ನಿರ್ವಹಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು. ಟಿಆರ್‌ಪಿಗಳ ಹಿಂದೆ ಸುಮ್ಮನೆ ಅಲೆಯುವ ಬದಲು ವಾಸ್ತವಿಕ ಸನ್ನಿವೇಶವನ್ನು ಅರಿತು ಇಂತಹ ಸಂಧರ್ಭದಲ್ಲಿ ಯುವಕರನ್ನು ಸರಿಮಾರ್ಗಕ್ಕೆ ಪ್ರಚೋದಿಸುವ ಕಡೆ ಮಾಧ್ಯiಗಳು ತಮ್ಮ ಸಂಪರ್ಕ ಶಕ್ತಿಯನ್ನು ಬಳಸಬೇಕು. ತಪ್ಪು ಮಾಹಿತಿ ಪ್ರಚಾರವಾಗುತ್ತಿರುವುದನ್ನು ಬಹಿರಂಗಪಡಿಸಿ ವಾಸ್ತವ ಸನ್ನಿವೇಶವನ್ನು ಹೊರಗೆಡವಬೇಕು. ಅಪರಾಧಿಗಳು ಭಯೋತ್ಪದಾಕರನ್ನು ವೈಭವೀಕರಿಸಿ ಯುವಕರ ದಾರಿ ತಪ್ಪಿಸುವುದು ರಾಷ್ಟ್ರಹಿತದ ಯಾವ ಸೇವೆಯೂ ಅಲ್ಲ.
ಕಾಶ್ಮೀರ ಕಣಿವೆಯ ಪ್ರಕ್ಷುಬ್ಧತೆ ಕಾಲ ಕಳೆದಂತೆ ನಿಧಾನವಾಗಿ ತಣ್ಣಗಾಗುತ್ತದೆ, ಎಂದಿನ ವ್ಯವಹಾರ ಪುನರಾರಂಭವಾಗುತ್ತದೆ. ಆದರೆ ಬುರ್ಹಾನ್ ವಾನಿಯಂತಹ ಯುವ ಉಗ್ರರು ಮತ್ತೆ ಮತ್ತೆ ಹುಟ್ಟ ಬರದಂತೆ ಖಚಿತಪಡಿಸುವ ಜವಾಬ್ದಾರಿ ರಾಷ್ಟ್ರದ ಆಡಳಿತದ ಮೇಲಿದ. ಕೇವಲ ಜಮ್ಮು ಮತ್ತು ಕಾಶ್ಮೀರ ಅಥವಾ ಕೇಂದ್ರ ಸರ್ಕಾರದ ಮೇಲಲ್ಲ ಭಾರತದ ಜನತೆಯ ಮೇಲೂ ಅಷ್ಟೇ ಜವಾಬ್ದಾರಿ ಇದೆ.

– ಸತ್ಯನಾರಾಯಣ ಶಾನುಭಾಗ್,  ಜಮ್ಮು ಮತ್ತು ಕಾಶ್ಮಿರ ಅಧ್ಯಯನ ಕೇಂದ್ರ ಕರ್ನಾಟಕ (ಆಧಾರ: ಜೈಬನ್ಸ್ ಸಿಂಗ್ ( http://www.defenceinfo.com,)

ಉಗ್ರನಿಗೆ ಹುತಾತ್ಮ ಪಟ್ಟ; ನಾಚಿಕೆಯಾಗೋಲ್ವೆ?

ದು ಗು ಲಕ್ಷ್ಮಣ್ , ಹಿರಿಯ ಪತ್ರಕರ್ತರು 

ಕಾಶ್ಮೀರ ಕಣಿವೆಯಲ್ಲಿ ಈಚೆಗೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಎಂಬ ಉಗ್ರನೊಬ್ಬನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದರು. ಹತ್ಯೆಗೀಡಾದ ಈ ಉಗ್ರ ವಾನಿ ದಕ್ಷಿಣ ಕಾಶ್ಮೀರದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ. ಈ ಸುಳಿವು ಸಿಕ್ಕಿದ ಹಿನ್ನಲೆಯಲ್ಲಿ ಆತನನ್ನು ವಿಶೇಷ ಕಾರ್ಯಾಚರಣೆ ಮೂಲಕ ಹತ್ಯೆಗೈಯಲಾಯಿತು.

ಆದರೆ ಇದು ಇಡೀ ಕಾಶ್ಮೀರ ಕಣಿವೆಯೇ ಉದ್ವಿಗ್ನಗೊಳ್ಳುವಂತೆ ಮಾಡಿದ್ದು ಮಾತ್ರ ಅತ್ಯಂತ ವಿಪರ್ಯಾಸಕರ. ವಾನಿಯ ಹತ್ಯೆಯಾಗಿದ್ದಕ್ಕೆ ಕಾಶ್ಮೀರ ಕಣಿವೆಯಲ್ಲಿ ಬೆಂಕಿ ಹೊತ್ತಿಕೊಂಡಿತು. ಆ ದಳ್ಳುರಿಯಲ್ಲಿ ಇದುವರೆಗೆ 34ಕ್ಕೂ ಹೆಚ್ಚು ಮಂದಿ ಜೀವಕಳೆದುಕೊಂಡಿದ್ದಾರೆ. ಈ ಪೈಕಿ ಪೊಲೀಸ್ ಸಿಬ್ಬಂದಿಗಳೇ ಹೆಚ್ಚು. ಅನಂತನಾಗ್ ಜಿಲ್ಲೆಯಲ್ಲಿ ವಾನಿ ಬೆಂಬಲಿಗರ ಗುಂಪೊಂದು ಪೊಲೀಸ್ ಸಿಬ್ಬಂದಿಯಿದ್ದ ಕಾರನ್ನು ಝೇಲಂ ನದಿಗೆ ನೂಕಿ, ಕಾರಿನೊಳಗಿದ್ದ ಎಸ್ಪಿ ಫಿರೋಜ್ ಅಹಮದ್ ಅವರನ್ನು ನೀರಿನಲ್ಲಿ ಮುಳುಗಿಸಿ ಸಾಯಿಸಿದ್ದಾರೆ. ಝೇಲಂ ನದಿ ಕಳೆದ ವರ್ಷ ಪ್ರವಾಹದಿಂದ ಉಕ್ಕಿಹರಿದು ಜನರು ಸಂಕಷ್ಟಕ್ಕೀಡಾಗಿದ್ದಾಗ ಅವರನ್ನು ರಕ್ಷಿಸಲು ಧಾವಿಸಿದ್ದು ಇದೇ ಪೊಲೀಸರು. ಆಗ ಜನರಿಗೆ ಬೇಕಾಗಿದ್ದ ಪೊಲೀಸರು ಈಗ ಬೇಡವಾಗಿದ್ದಾರೆ. ಅವರನ್ನು ಝೇಲಂನದಿಯಲ್ಲಿ ಮುಳುಗಿಸಿ ಸಾಯಿಸುವಂತಹ ಕ್ರೌರ್ಯವನ್ನು ಪ್ರತಿಭಟನಾಕಾರರು ಮೆರೆದಿದ್ದಾರೆ.

ಇಷ್ಟಕ್ಕೂ ಎನ್ಕೌಂಟರ್ನಲ್ಲಿ ಹತನಾದ 22ರ ಹರಯದ ಉಗ್ರಗಾಮಿ ಬುರ್ಹಾನ್ ವಾನಿ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ವ್ಯಕ್ತಿ. ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳ ಹೊಸಹುಟ್ಟಿಗೆ ಈ ಬುರ್ಹಾನ್ ವಾನಿ ಕಾರಣನಾಗಿದ್ದ. ಫೇಸ್ಬುಕ್ ಮತ್ತು ವಾಟ್ಸ್ಅ್ಯಪ್ಗಳಲ್ಲಿ ಹರಿದಾಡುತ್ತಿದ್ದ ಆತನ ವಿಡಿಯೋಗಳಲ್ಲಿ ಉಗ್ರಗಾಮಿ ಕೃತ್ಯಗಳಲ್ಲಿ ಪಾಲ್ಗೊಳ್ಳಲು ಆತ ಕಾಶ್ಮೀರದ ಯುವಕರನ್ನು ಪ್ರಚೋದಿಸುತ್ತಿರುವ ಹಸಿಹಸಿ ದೃಶ್ಯ ಕಂಡುಬಂದಿದೆ. ಹೀಗಾಗಿಯೇ ಆತನನ್ನು ಪೊಲೀಸರು ಅನಿವಾರ್ಯವಾಗಿ ಎನ್ಕೌಂಟರ್ನಲ್ಲಿ ಸಾಯಿಸಬೇಕಾಯಿತು. ಆದರೆ ಇಂತಹವನ ಬಗ್ಗೆಯೂ ಸಹಾನುಭೂತಿ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಾರೆಂದರೆ ಅದು ದೇಶವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡಿದಂತೆಯೇ. ಕರ್ಫ್ಯೂ ವಿಧಿಸಿದ್ದರೂ ವಾನಿಯ ಶವಯಾತ್ರೆಗೆ 20 ಸಹಸ್ರಕ್ಕೂ ಹೆಚ್ಚು ಜನ ಸೇರಿದ್ದರೆಂದರೆ ಅದೆಂತಹ ನಾಚಿಕೆಗೇಡಿನ ಸಂಗತಿ!

ಕಾಶ್ಮೀರ ಕಣಿವೆಯ ತಲೆಕೆಟ್ಟ ಯುವಕರನ್ನು ಒತ್ತೊಟ್ಟಿಗೆ ಇಡಿ. ಏಕೆಂದರೆ ಅಲ್ಲಿ ಕೆಲವೊಂದು ಗುಂಪು ಯಾವಾಗಲೂ ಉಗ್ರಗಾಮಿಗಳಿಗೆ ನೇರವಾಗಿ ಬೆಂಬಲ ವ್ಯಕ್ತಪಡಿಸುತ್ತಲೇ ಇರುತ್ತದೆ. ಆದರೆ ನೆರೆಯ ಪಾಕಿಸ್ಥಾನ ಉಗ್ರ ವಾನಿಯ ಹತ್ಯೆಯಾಗಿದ್ದಕ್ಕೆ ಕಣ್ಣೀರು ಹಾಕಿದ್ದು ಮಾತ್ರ ಎಂತಹ ಸೋಜಿಗ. ಬುರ್ಹಾನ್ ವಾನಿಯನ್ನು ಕಾಶ್ಮೀರಿ ನಾಯಕ, ಆತನ ಹತ್ಯೆ ಖಂಡನೀಯ ಎಂದು ಸ್ವತಃ ಪಾಕ್ ಪ್ರಧಾನಿ ನವಾಜ್ ಷರೀಫ್ ಬಣ್ಣಿಸಿರುವುದು ಅತ್ಯಂತ ಆಘಾತಕಾರಿ. ಉಗ್ರಗಾಮಿ ಚಟುವಟಿಕೆಗಳ ತವರೂರೇ ಪಾಕಿಸ್ಥಾನ. ಅದರ ಕಹಿ ಫಲವನ್ನು ಆ ದೇಶ ಸಾಕಷ್ಟು ಅನುಭವಿಸಿದೆ. ಹೀಗಿದ್ದರೂ ಪಾಕ್ ಪ್ರಧಾನಿ ಷರೀಫ್ ಹತ್ಯೆಗೀಡಾದ ವಾನಿಯನ್ನು ‘ಜನಪ್ರಿಯ ಕಾಶ್ಮೀರಿ ನಾಯಕ’ ಎಂದು ಬಣ್ಣಿಸಿರುವುದು ಅವರ ಭಾರತವಿರೋಧಿ ನಿಲುವಿಗೆ ಸಾಕ್ಷಿ. ಇಂತಹ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಕೆಲಸವನ್ನು ಪಾಕ್ ಮಾಡುತ್ತಲೇ ಇರುತ್ತದೆ. ಇದು ಆ ದೇಶದ ಜಾಯಮಾನ. ಅದಕ್ಕೇನೂ ಮಾಡುವಂತಿಲ್ಲ.
ಈಗ್ಗೆ 3 ವರ್ಷಗಳ ಹಿಂದೆ ಇದೇ ಕಾಶ್ಮೀರದ ಅನಂತನಾಗ್ನಲ್ಲಿ ನಡೆದ ಮುಖಾಮುಖಿಯೊಂದರಲ್ಲಿ ಮೇಜರ್ ಮನೀಷ್ ಪಿತಾಂಬರೆ ಎಂಬ ಸೈನ್ಯಾಧಿಕಾರಿಯೊಬ್ಬರು ಹಿಜಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಮೋಸ್ಟ್ ವಾಂಟೆಡ್ ಟೆರರಿಸ್ಟ್ ಶೋಹೆಲ್ ಫೈಸಲ್ನನ್ನು ಕೊಂದುಹಾಕಿದ್ದರು. ಶೋಹೆಲ್ ಫೈಸಲ್ ದೆಹಲಿ ಹೈಕೋರ್ಟ್ ಮೇಲೆ ನಡೆದ ಬಾಂಬ್ ದಾಳಿಯ ರೂವಾರಿ. ಆತನನ್ನು ಪೊಲೀಸರು ಇನ್ನಿಲ್ಲದಂತೆ ಹುಡುಕುತ್ತಿದ್ದರು. ಆದರೆ ಸಿಕ್ಕಿರಲಿಲ್ಲ. ಕೊನೆಗೂ ಆತ ಶವವಾಗಿ ಸಿಕ್ಕಿದ. ಆತನನ್ನು ಕೊಂದು ಹಾಕಬೇಕೆಂಬ ಇರಾದೆಯಂತೂ ಮೇಜರ್ ಮನೀಷ್ಗೆ ಇರಲಿಲ್ಲ. ಜೀವಂತ ಸೆರೆಹಿಡಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಫೈಸಲ್ ತನ್ನ ಎಕೆ-47 ಬಂದೂಕಿನಿಂದ ಒಂದೇ ಸಮನೆ ಗುಂಡುಗಳನ್ನು ಹಾರಿಸಿದಾಗ ಮನೀಷ್ಗೆ ಆತನನ್ನು ಕೊಲ್ಲದೆ ಅನ್ಯಮಾರ್ಗವೇ ಉಳಿದಿರಲಿಲ್ಲ. ಆ ಉಗ್ರಗಾಮಿಯೇನೋ ಸತ್ತ. ಆದರೆ ಈ ಎನ್ಕೌಂಟರ್ ವೇಳೆ ಬಂದೆರಗಿದ ಒಂದು ಗ್ರೆನೇಡ್ ಮೇಜರ್ ಮನೀಷ್ ಪಿತಾಂಬರೆಯನ್ನು ಆಹುತಿ ತೆಗೆದುಕೊಂಡಿತ್ತು.
ಇಂತಹ ಮೈನವಿರೇಳಿಸುವ ಸುದ್ದಿಯನ್ನು ನಮ್ಮ ಮಾಧ್ಯಮಗಳು ತಕ್ಷಣ ಪ್ರಸಾರ ಮಾಡಬೇಕಿತ್ತು. ವಾಹಿನಿಗಳಿಗೆ ಅದೊಂದು ಬ್ರೇಕಿಂಗ್ ನ್ಯೂಸ್ ಆಗಬೇಕಿತ್ತು. ಆದರೆ…? ಅದೇ ಸಮಯದಲ್ಲಿ ಎನ್ಡಿ ಟಿವಿ, ಸಿಎನ್ಎನ್-ಐಬಿಎನ್ ಮೊದಲಾದ ಪ್ರಮುಖ ವಾಹಿನಿಗಳು ಬಲು ಪೈಪೋಟಿಯಿಂದ ಪ್ರಸಾರಮಾಡುತ್ತಿದ್ದ ಮಹತ್ವದ ಸುದ್ದಿ ಯಾವುದು ಗೊತ್ತೆ? ಬಾಲಿವುಡ್ ನಟ ಸಂಜಯ್ದತ್ ನಿರ್ದೋಷಿ ಎಂಬ ನ್ಯಾಯಾಲಯದ ತೀರ್ಪನ್ನು! ಸಂಜಯ್ದತ್ ವಿರುದ್ದ ಪ್ರಬಲ ಸಾಕ್ಷಾ-್ಯಧಾರಗಳು ಇರಲಿಲ್ಲ. ಹಾಗಾಗಿ ನ್ಯಾಯಾಲಯ ಆತನಿಗೆ ನಿರ್ದೋಷಿ ಎಂಬ ಪಟ್ಟ ನೀಡಿತ್ತು. ವಾಹಿನಿಗಳಿಗೆ ಇಷ್ಟೇ ಸಾಕಾಯಿತು. ಸಂಜಯ್ ಪರವಾಗಿ ತುತ್ತೂರಿ ಬಾರಿಸಲು ಶುರುಹಚ್ಚಿಕೊಂಡವು. ಮನೀಷ್ ಪಿತಾಂಬರೆ ಹುತಾತ್ಮನಾದ ಸುದ್ದಿ ಮೂಲೆಗೆ ಹೋಯಿತು. ಮನೀಷ್ ಪಿತಾಂಬರೆ ಕಾರ್ಯಾಚರಣೆಗೆ ಮುನ್ನ ಮುಂದಾಗುವ ಅನಾಹುತದ ಬಗ್ಗೆ ಯೋಚಿಸುತ್ತಾ ಕುಳಿತುಕೊಂಡಿರಲಿಲ್ಲ. ಆತನ ತಕ್ಷಣದ ಗುರಿ – ಮೋಸ್ಟ್ ವಾಂಟೆಡ್ ಉಗ್ರನನ್ನು ಸದೆಬಡಿಯುವುದಾಗಿತ್ತು. ಅಂತಹ ವೇಳೆ ಆತನಿಗೆ ತನ್ನ ಪ್ರಾಣ ಬಹು ಅಮೂಲ್ಯ ಎನಿಸಲಿಲ್ಲ. ದೇಶದ ಹಿತವೇ ಮುಖ್ಯ ಎನಿಸಿತು. ದೇಶಕ್ಕಾಗಿ, ದೇಶದ ರಕ್ಷಣೆಗಾಗಿ ಆ ವೀರಯೋಧ ತನ್ನ ಜೀವವನ್ನೇ ಬಲಿದಾನ ಮಾಡಿದ್ದ. ನಮ್ಮ ವಾಹಿನಿಗಳಿಗೆ ಮಾತ್ರ ಅದೊಂದು ಬ್ರೇಕಿಂಗ್ ನ್ಯೂಸ್ ಆಗಲೇ ಇಲ್ಲ! ಆ ಸುದ್ದಿಯನ್ನು ಮೊಟ್ಟಮೊದಲು ಬಿತ್ತರಿಸಿದ್ದು ಬಿಬಿಸಿ ಎಂಬ ವಿದೇಶಿ ಸುದ್ದಿ ವಾಹಿನಿ.
ಕಾಶ್ಮೀರ ಕಣಿವೆಯಲ್ಲಿ ಪೊಲೀಸ್ ಕಾರನ್ನು ನದಿಗೆ ತಳ್ಳಿ ಎಸ್ಪಿಯನ್ನು ಸಾಯಿಸಿದ ಘಟನೆ ಎಷ್ಟು ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಪ್ರಸಾರವಾಗಿದೆ? ಹಾಗಿದ್ದರೆ ಅದೊಂದು ಪ್ರಮುಖ ಸುದ್ದಿಯಲ್ಲವೆ? ವಾನಿ ಒಬ್ಬ ಉಗ್ರ ಎಂದು ಗೊತ್ತಿದ್ದರೂ ಆತನ ಬಗ್ಗೆ ಏಕೆ ಕರುಣೆ? ಆತ ಸತ್ತನೆಂಬ ಕಾರಣಕ್ಕೆ 34ಕ್ಕೂ ಹೆಚ್ಚು ಅಮಾಯಕರು ಏಕೆ ಬಲಿಯಾಗಬೇಕು? ಇದು ದೇಶದ ಭದ್ರತೆಯ ಪ್ರಶ್ನೆಯಲ್ಲವೇ? ದೇಶದ ಬುದ್ಧಿಜೀವಿಗಳಾಗಲೀ, ವಿಚಾರವಾದಿಗಳಾಗಲೀ ಈ ಬಗ್ಗೆ ಏಕೆ ತುಟಿ ಬಿಚ್ಚಿಲ್ಲ?
ಭಯೋತ್ಪಾದನೆಯ ಭೂತ ಈಗ ಕಾಶ್ಮೀರಕ್ಕೇ ಸೀಮಿತವಾಗಿಲ್ಲ. ನೆರೆಯ ಕೇರಳದಲ್ಲಿ 21 ಮಂದಿ ನಾಪತ್ತೆಯಾಗಿದ್ದು ಅವರೆಲ್ಲ ಐಎಸ್ಐಎಸ್ ಉಗ್ರ ಸಂಘಟನೆಗೆ ಸೇರಿರುವ ಸಾಧ್ಯತೆ ಇದೆ ಎಂದು ಆ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ನಾಪತ್ತೆಯಾದವರ ಪೈಕಿ ಇಬ್ಬರು ಯುವಕರು ಇಸ್ಲಾಮಿಕ್ ವಿದ್ವಾಂಸ ಡಾ. ಝಕೀರ್ ನಾಯ್ಕ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ವಿಚಾರವನ್ನು ಆ ಯುವಕರ ತಂದೆಯೇ ಬಹಿರಂಗಪಡಿಸಿದ್ದಾರೆ. ಕಾಸರಗೋಡಿನ 17ಮಂದಿ ಹಾಗು ಪಾಲಕ್ಕಾಡ್ನ 4ಮಂದಿ ನಾಪತ್ತೆಯಾದವರಲ್ಲಿ ಸೇರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಐಎಸ್ಐಎಸ್ ಮತ್ತು ಜವಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ್ ಉಗ್ರಗಾಮಿ ಸಂಘಟನೆಗಳು ಅಲ್ಲಿನ ಮುಸ್ಲಿಂ ಸಮುದಾಯದ ನಿರುದ್ಯೋಗಿ ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿವೆ ಎಂದು ಸಿಐಡಿ ಅಧಿಕಾರಿಗಳೇ ತಿಳಿಸಿದ್ದಾರೆ. ಹೀಗೆ ಭಯೋತ್ಪಾದನೆ ನಮ್ಮ ನೆರೆಯಲ್ಲಿ, ಅಷ್ಟೇಕೆ ನಮ್ಮ ಕಾಲಬುಡದಲ್ಲೇ ಕಾಣಿಸಿದೆ. ನಿರುದ್ಯೋಗಿ ಯುವಕರು ಭಯೋತ್ಪಾದಕರಾಗುವಂತೆ ಝಕೀರ್ ನಾಯ್ಕ್ ಅವರ ಪ್ರಚೋದನಾಕಾರಿ ಬೋಧನೆಗಳು ಪ್ರೇರಿಸುತ್ತಿವೆ ಎಂಬುದು ಸುಳ್ಳಲ್ಲ.
ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ಖಂಡಿಸಿರುವುದು ಒಂದು ಶ್ಲಾಘನೀಯ ಕ್ರಮ. ಆದರೆ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು, ಬುರ್ಹಾನ್ ವಾನಿಯ ಹತ್ಯೆಯಿಂದಾಗಿ ಕಾಶ್ಮೀರದ ಅಸಂತುಷ್ಟರಿಗೆ ಹೊಸ ಐಕಾನ್ ಸಿಕ್ಕಂತಾಗಿದೆ. ಇನ್ನಷ್ಟು ಯುವಕರು ಉಗ್ರ ಸಂಘಟನೆಗಳಿಗೆ ಸೇರುವ ಸಾಧ್ಯತೆ ಇದೆ ಎಂದಿರುವುದು ಮಾತ್ರ ಆಘಾತಕಾರಿ. ಮಾಜಿ ಮುಖ್ಯಮಂತ್ರಿಯಾಗಿ ಅವರು ಹೀಗೆ ಹೇಳಬಾರದಿತ್ತು. ಈಗೆದ್ದಿರುವ ಹಿಂಸಾಚಾರವನ್ನು ಉಗ್ರಶಬ್ದಗಳಲ್ಲಿ ಖಂಡಿಸಬೇಕಿತ್ತು. ಆ ಕೆಲಸವನ್ನು ಅವರು ಮಾಡಿಲ್ಲ.
ಕಾಶ್ಮೀರದಲ್ಲಿ ಭಯೋತ್ಪಾದನೆ ಮೂಲೋತ್ಪಾಟನೆಯಾಗಬೇಕಾದರೆ ರಾಜಕಾರಣಿಗಳು ಉಗ್ರಗಾಮಿಗಳ ಬಗ್ಗೆ ಸಹಾನುಭೂತಿ ತೋರುವುದನ್ನು ಮೊದಲು ಬಿಡಬೇಕು. ರಾಜಕೀಯದ ಲಾಭನಷ್ಟದ ಲೆಕ್ಕಾಚಾರ ಬದಿಗಿಟ್ಟು ಏಕರೂಪದ ನಿಲುವನ್ನು ಹೊಂದುವುದು ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಅತ್ಯಂತ ಅಗತ್ಯ. ದೇಶ ವಿಭಜನೆಯ ಜೊತೆಜೊತೆಗೇ ಬಳುವಳಿಯಾಗಿ ಬಂದ ಪ್ರತ್ಯೇಕತಾವಾದವನ್ನು ದೂರಮಾಡುವಂತಹ ಪ್ರಬಲ ರಾಜಕೀಯ ಕ್ರಮ ಕೈಗೊಳ್ಳಬೇಕಾಗಿದೆ. ಪ್ರತ್ಯೇಕತಾವಾದಿಗಳಿಗೆ ಪಾಕಿಸ್ಥಾನ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದೆ. ಮೊನ್ನೆ ಕೂಡ ಪಾಕ್ ರಾಯಭಾರಿ ವಿಶ್ವಸಂಸ್ಥೆಯಲ್ಲಿ ವಾನಿ ಹತ್ಯೆಯ ಬಗ್ಗೆ ಪ್ರಸ್ತಾಪಿಸಿ ವಿಶ್ವದ ಗಮನ ಸೆಳೆಯಲು ಪ್ರಯತ್ನಿಸಿದ್ದು ಅತ್ಯಂತ ಖಂಡನೀಯ. ಆತನ ಈ ಕ್ರಮಕ್ಕೆ ಭಾರತ ಕಟುವಾಗಿಯೇ ಉತ್ತರ ನೀಡಿರುವುದು ಶ್ಲಾಘನೀಯ. ಪಾಕಿಸ್ಥಾನಕ್ಕೆ ಅಂತಹ ಭಾಷೆಯಲ್ಲೇ ಉತ್ತರಿಸಬೇಕು. ಬೇರೆ ಭಾಷೆ ಪಾಕಿಸ್ಥಾನಕ್ಕೆ ಅರ್ಥವಾಗುವುದಿಲ್ಲ. ಬಹುಸಂಖ್ಯಾತ ಕಾಶ್ಮೀರಿಗಳು ಉಗ್ರಗಾಮಿತ್ವದ ವಿರುದ್ಧ ಒಗ್ಗಟ್ಟಾಗಿ ಪ್ರತಿಭಟಿಸುವುದು ಇಂದಿನ ತುರ್ತು ಅಗತ್ಯ. ಈ ರಗಳೆಯೆಲ್ಲಾ ನಮಗ್ಯಾಕೆ ಎಂದು ಚಿಂತಿಸುವುದು ಸಂಕುಚಿತ ಮನೋಭಾವದ ಪ್ರದರ್ಶನವಾಗುತ್ತದೆ. ಅಷ್ಟೇ ಅಲ್ಲ, ಅದು ದೇಶವಿರೋಧಿ ನಡುವಳಿಕೆ ಎನಿಸಿಕೊಳ್ಳುತ್ತದೆ.

ಅಂತಿಮವಾಗಿ ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕೆಂದಾದರೆ ಬುರ್ಹಾನ್ ವಾನಿಯಂತಹ ಉಗ್ರರಿಗೆ ಹುತಾತ್ಮ ಪಟ್ಟ ಕಟ್ಟುವುದನ್ನು ಮೊದಲು ಅಲ್ಲಿನ ದಾರಿ ತಪ್ಪಿದ ಯುವಕರು ಕೈ ಬಿಡಬೇಕು. ಇಂತಹ ವಿದ್ಯಮಾನಗಳು ನಡೆದಾಗ ಮೂಗುತೂರಿಸುವ ನೆರೆಯ ಪಾಕಿಸ್ಥಾನದ ಸಹಾನುಭೂತಿಯ ಹೇಳಿಕೆಗಳಿಗೆ ಕಿವಿಗೊಡಬಾರದು.

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
‘Rahul Gandhi must apologise for defamatory remarks on RSS or should face trial’: Supreme Court 

'Rahul Gandhi must apologise for defamatory remarks on RSS or should face trial': Supreme Court 

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Photos: Press Meet by Dr Manmohan Vaidya ahead of ABPS-2014

ಆರೆಸ್ಸೆಸ್ ಪ್ರತಿನಿಧಿ ಸಭಾ ಬೈಠಕ್ಕಿನಲ್ಲಿ ಯಾವುದೇ ರಾಜಕೀಯ ನಿರ್ಣಯಗಳಿಲ್ಲ: ಡಾII ಮನಮೋಹನ ವೈದ್ಯ

March 6, 2014
RSS to pass resolution for avoiding regional hatred: Dr Vaidya ahead of ABPS meet

RSS to pass resolution for avoiding regional hatred: Dr Vaidya ahead of ABPS meet

March 15, 2012
Equality through UCC, exposing Islamic terrorist mindset is the need of the hour

ಬೆಂಗಳೂರು ಗಲಭೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇಸ್ಲಾಂ – ಅಂತರ್ಜಾಲ ಸಂವಾದ ಪೂರ್ಣ ವರದಿ

August 24, 2020
Massive Protest held at Jantar-Mantar by Bajarangadal to Deport Bangla infiltrators

Massive Protest held at Jantar-Mantar by Bajarangadal to Deport Bangla infiltrators

February 25, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In