• Samvada
  • Videos
  • Categories
  • Events
  • About Us
  • Contact Us
Tuesday, January 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಭಾರತ ಪರಿಕ್ರಮ ಪಾದಯಾತ್ರೆ: ರಾಜಸ್ಥಾನ ಮುಖ್ಯಮಂತ್ರಿಗೆ ಸೀತಾರಾಮ ಕೆದಿಲಾಯರ ಪತ್ರ

Vishwa Samvada Kendra by Vishwa Samvada Kendra
August 25, 2019
in Others
250
0
DAY-365: Bharat Parikrama Yatra Completes ONE YEAR of Successful Campaign aiming ‘Gram Vikas’

FILE Photo: Bharat Parikrama Yatra at Bakrebailu Village Oct-19-2012

491
SHARES
1.4k
VIEWS
Share on FacebookShare on Twitter

ಸನ್ಮಾನ್ಯರಾದ ರಾಜಸ್ಥಾನದ ಮುಖ್ಯಮಂತ್ರಿಯವರಿಗೆ,

ಸಾದರ ಪ್ರಣಾಮಗಳು,

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಕಳೆದ ಜುಲೈ ೩ರಂದು ಭಾರತ ಪರಿಕ್ರಮ ಪಾದಯಾತ್ರೆಯು ತಮ್ಮ ಐತಿಹಾಸಿಕ ರಾಜ್ಯ ರಾಜಸ್ಥಾನವನ್ನು ಪ್ರವೇಶಿಸಿತು. ಈ ಪಾದಯಾತ್ರೆಯು ಕಳೆದ ವರ್ಷ (೨೦೧೨) ಆಗಸ್ಟ್ ೯ರಂದು ಕನ್ಯಾಕುಮಾರಿಯಿಂದ ಆರಂಭವಾಯಿತೆಂಬುದು ತಮಗೆ ತಿಳಿದಿರಬಹುದು. ಆಗಸ್ಟ್ ೯ ’ಭಾರತ ಬಿಟ್ಟು ತೊಲಗಿ’ ಮತ್ತು ‘ಶ್ರೀಕೃಷ್ಣಜನ್ಮಾಷ್ಟಮಿ’ಗಳ ದಿನವಾಗಿತ್ತು. ಆ ದಿನದ ಸಂದೇಶವನ್ನು ನಾವೀಗ ಮರೆತಿದ್ದೇವೆ. ಅದನ್ನು ಪುನಃ ನೆನಪಿಸುವ ಉzಶದಿಂದ ನಾವು ಈ ಯಾತ್ರೆಯನ್ನು ಕೈಗೊಂಡಿzವೆ. ಅಂದು ನಾವು ಇಂಗ್ಲಿಷರ ವಿರುದ್ಧ ಒಕ್ಕೊರಳಿನಿಂದ ಹೀಗೆ ಘೋಷಿಸಿzವು: ’ಇಂಗ್ಲಿಷರೇ, ಭಾರತ ಬಿಟ್ಟು ತೊಲಗಿ’.

FILE Photo: Bharat Parikrama Yatra at Bakrebailu Village Oct-19-2012
FILE Photo: Bharat Parikrama Yatra at Bakrebailu Village Oct-19-2012

ನಮ್ಮ ಹೋರಾಟದ ಪರಿಣಾಮವೆಂಬಂತೆ ಅವರು ಭಾರತವನ್ನು ಬಿಟ್ಟುಹೋದರು; ಆದರೆ ಸ್ವಾತಂತ್ರ್ಯದ ನಂತರದ ದುಃಖದ ವಿಷಯವೆಂದರೆ ನಾವು ಅವರನ್ನು ಬಿಟ್ಟಿಲ್ಲ. ನಮ್ಮ ಭಾಷೆ, ವೇಷಭೂಷಣ, ಜೀವನಶೈಲಿ, ಉಪಯೋಗಿಸುವ ವಸ್ತು – ಇವೆಲ್ಲವು ವಿದೇಶಿಯದ್ದಾಗಿವೆ. ಆದ್ದರಿಂದ ನಾವೀಗ ಸ್ವದೇಶದ ಆ ಬಗ್ಗೆ ಧ್ವನಿ ಎತ್ತಬೇಕಾದ ಅಗತ್ಯ ಕಂಡುಬಂದಿದೆ. ಭಾರತವನ್ನು ತಿಳಿಯಿರಿ, ಭಾರತವನ್ನು ಕಟ್ಟಿ ಮತ್ತು ಭಾರತವನ್ನು ವಿಶ್ವಗುರು ಸ್ಥಾನಕ್ಕೇರಿಸಿ” ಎಂದು ನಾವೀಗ ನೆನಪಿಸಿಬೇಕಾಗಿದೆ. ಜನತೆಯಲ್ಲಿ ಈ ಮನವಿಯನ್ನು ಮಾಡಿಕೊಳ್ಳುತ್ತಿರುವ ನಮ್ಮ ಯಾತ್ರೆ ಮುಂದುವರೆಯುತ್ತಿದೆ. ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್‌ಗಳನ್ನು ಪೂರೈಸಿ, ಈಗ ರಾಜಸ್ಥಾನದ ಯಾತ್ರೆಯನ್ನು ಕೂಡ ಮುಕ್ತಾಯಗೊಳಿಸಿ, ನಮ್ಮ ಪಾದಯಾತ್ರೆ ಈಗ ಹರ್ಯಾಣದತ್ತ ಮುಂದುವರಿಯುತ್ತಿದೆ.

ಕಳೆದ ಜುಲೈ ೩ರಂದು ಜಾಂಜರಿ ಜಿಯ ಉದಯಪುರದಲ್ಲಿ ನಮ್ಮ ಯಾತ್ರೆ ಈ ರಾಜ್ಯವನ್ನು ಪ್ರವೇಶಿಸಿತು. ಅಲ್ಲಿಂದ ರಾಜಸಮಂದ್, ಭೀಲ್‌ವಾಡಾ, ಅಜ್ಮೀರ್, ನಾಗೌರ್, ಸೀತರ್, ಜಾಂಜನೂ ಜಿಗಳ ೮೩ ಹಳ್ಳಿಗಳಲ್ಲಿ ಮೊಕ್ಕಾಂ ಮಾಡಿದೆವು. ಈ ೮೩ ದಿನಗಳಲ್ಲಿ ರಾಜ್ಯದ ೪೦೦ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಮಾಡಲಾಯಿತು; ೧೦ ಸಾವಿರಕ್ಕೂ ಅಧಿಕ ಜನರನ್ನು ವೈಯಕ್ತಿಕವಾಗಿ ಭೇಟಿ ಮಾಡಿದೆವು; ನೂರಕ್ಕೂ ಅಧಿಕ ಶಾಲೆಗಳ ೨೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದವು; ಹಾಗೂ ೫೦೦ಕ್ಕೂ ಅಧಿಕ ಅಧ್ಯಾಪಕರೊಂದಿಗೆ ಮಾತುಕತೆ ನಡೆಸುವುದರೊಂದಿಗೆ ಈ ರಾಜ್ಯದಲ್ಲಿ ಯಾತ್ರೆ ಮುಕ್ತಾಯಗೊಂಡಿತು. ಈ ರಾಜ್ಯದಲ್ಲಿ ಸುಮಾರು ೩ ತಿಂಗಳು ನಡೆದ ಈ ಸುದೀರ್ಘ ಯಾತ್ರೆ ನಿರ್ವಿಘ್ನವಾಗಿ ಪೂರ್ಣಗೊಂಡಿದೆ. ಈ ಯಾತ್ರೆಯು ಸಫಲವಾಗುವಲ್ಲಿ ತಾವು ನೀಡಿದ ಸಹಕಾರಕ್ಕಾಗಿ ತಮ್ಮ ಸುರಕ್ಷಾ ವ್ಯವಸ್ಥೆಗೆ, ತಮ್ಮ ಸರ್ಕಾರಕ್ಕೆ ತಮ್ಮ ಸಹೋದ್ಯೋಗಿಗಳಿಗೆ ಯಾತ್ರೆ ವತಿಯಿಂದ ಕೃತಜ್ಞತೆಯನ್ನೂ ಹಾರ್ದಿಕ ಅಭಿನಂದನೆಯನ್ನೂ ಸಲ್ಲಿಸುತ್ತೇವೆ.

ನಾನು ಈ ರಾಜ್ಯದಲ್ಲಿ ಕಳೆದ ೮೩ ದಿನಗಳಲ್ಲಿ ಹಳ್ಳಿಗಳಲ್ಲಿ ಸುತ್ತಾಡಿ ಜನರೊಂದಿಗೆ ಮಾತುಕತೆ ನಡೆಸಿzನೆ; ಮತ್ತು ಸ್ವತಃ ನಾನು ಕಂಡು ಅನುಭವ ಗಳಿಸಿzನೆ; ಇದು ರಾಜಸ್ಥಾನದ ಸರಿಯಾದ ಅಭಿವೃದ್ಧಿಯ ದೃಷ್ಟಿಯಿಂದ ಪೂರಕವಾಗಲೆಂದು ಆದ್ದರಿಂದ ತಮಗೆ ಕೆಲವು ವಿಷಯಗಳನ್ನು ತಿಳಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ಈ ಪತ್ರವನ್ನು ಬರೆಯುತ್ತಿzನೆ.

ಯಾತ್ರೆಯಲ್ಲಿ ಕಂಡ ಒಳ್ಳೆಯ ಅಂಶಗಳು

ಈ ವರ್ಷ ಆರಂಭದಿಂದ ಕೊನೆಯತನಕ ಒಳ್ಳೆಯ ಮಳೆ ಆಗಿರುವ ಕಾರಣ ಎಲ್ಲ ಕಡೆ ಹಸಿರು ನಳನಳಿಸುತ್ತಿತ್ತು. ಹೊಲಗzಗಳಲ್ಲಿ ಉತ್ತಮ ಫಸಲನ್ನು ಕಾಣಬಹುದಿತ್ತು; ಆದ್ದರಿಂದ ಹಳ್ಳಿಗಳಲ್ಲಿ ಎಲ್ಲ ಜನ ಸಂತೋಷದಿಂದಿದ್ದಾರೆ.

ರಸ್ತೆಯಲ್ಲಿ ಎಲ್ಲ ಕಡೆ ಭಿಕ್ಷುಕರು ಕಾಣಸಿಗಲಿಲ್ಲ. ಇಡೀ ರಾಜಸ್ಥಾನದಲ್ಲಿ ಅಂತಹ ವಾತಾವರಣವಿದ್ದು ಇದು ಭಿಕ್ಷುಕರಿಲ್ಲದ ರಾಜ್ಯವಾಗಿದೆ. ಎಲ್ಲಿ ಯಾರಾದರೂ ಒಬ್ಬ ಭಿಕ್ಷುಕ ಕಂಡುಬಂದರೆ ಆತನಿಗೆ ವಸತಿ, ಆಹಾರ ಮತ್ತು ಗುಡಿಕೈಗಾರಿಕೆಯಲ್ಲಿ ಉದ್ಯೋಗಾವಕಾಶ ಒದಗಿಸಲಾಗುತ್ತದೆ.

ರಾಜ್ಯದ ರಸ್ತೆಗಳ ಬದಿಗಳಗಲಿ ಅಥವಾ ಹಳ್ಳಿಗಳಗಲಿ ಎಲ್ಲೂ ಕೊಳೆಗೇರಿಗಳು ಕಂಡುಬರಲಿಲ್ಲ. ಇಡೀ ರಾಜ್ಯದಲ್ಲಿ ಇದನ್ನು ಸಾಧಿಸಿದರೆ ಇದು ಗುಡಿಸಲುರಹಿತ ರಾಜ್ಯವಾದರೆ ರಾಜ್ಯದ ಘನತೆ ಇನ್ನಷ್ಟು ಹೆಚ್ಚುತ್ತದೆ.

ಹಳ್ಳಿಗಳಲ್ಲಿ ಈಗಲೂ ಅವಿಭಕ್ತ ಕುಟುಂಬಗಳು ಕಂಡುಬರುತ್ತವೆ. ಇದೇ ಹಳ್ಳಿಗಳ ನಿಜವಾದ ಶಕ್ತಿಯಾಗಿದ್ದು ಇದನ್ನು ಉಳಿಸುವುದು ಮತ್ತು ಅದಕ್ಕೆ ಪ್ರೋತ್ಸಾಹ ನೀಡುವುದು ಅಗತ್ಯ.

ಹಳ್ಳಿ-ಹಳ್ಳಿಗಳಲ್ಲಿ ಗೋಮಾತೆಯ ದುರವಸ್ಥೆಯನ್ನು ಕಂಡ ರಾಜ್ಯ ಸರ್ಕಾರ ಅವುಗಳನ್ನು ಅಳಿಸಲು ಭಾರೀ ಪ್ರಮಾಣದ ಅನುದಾನವನ್ನು ನೀಡಿದೆ. ದನಗಳ ರPಣೆಗೆ ವಿಶೇಷ ಗಮನ ನೀಡಲಾಗುತ್ತಿದೆ. ದನಗಳ ರPಣೆ ಮತ್ತು ಪೋಷಣೆ ಬಗ್ಗೆ ಸರ್ಕಾರ ಪ್ರತ್ಯೇಕ ನಿರ್ದೇಶನಾಲಯವನ್ನು ಸ್ಥಾಪಿಸಿ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಇದು ಅಭಿನಂದನೀಯ ಕೆಲಸವಾಗಿದ್ದು, ಇತರ ರಾಜ್ಯಗಳು ಇದನ್ನು ಅನುಸರಿಸಬಹುದಾಗಿದೆ.

ರಾಜಸ್ಥಾನದ ಹಳ್ಳಿಗಳಲ್ಲಿ ತಮ್ಮ ಜನರ ಯಾವ ಶುದ್ಧ, ಮುಗ್ಧ, ನಿಷ್ಕಾಮಪ್ರೇಮದ ಗಂಗೆಯು ಹರಿಯುತ್ತಿದೆಯೋ ನಿಜವಾಗಿ ಅದು ಭಗವಂತನ ಕೊಡುಗೆಯೇ ಆಗಿದೆ.

ಭಾರತದ ಇಂತಹ ಹಳ್ಳಿಗಳ ಆತ್ಮವನ್ನು ರಾಜಸ್ಥಾನ ರಕ್ಷಿಸಿ ಇಟ್ಟುಕೊಂಡಿದೆ. ಇದೇ ಭಾರತದ ಆತ್ಮವಾದ ಹಳ್ಳಿಯಾಗಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಗ್ರಾಮ ಜೀವನದ ಮೇಲೆ ಪಟ್ಟಣದ ಪ್ರಭಾವ ಆಗದಂತೆ ಉಳಿಸಿಕೊಳ್ಳುವುದು ಅವಶ್ಯ.

ಗಮನಕ್ಕೆ ಬಂದ ಸಮಸ್ಯೆಗಳು ಮತ್ತು ಪರಿಹಾರ

ಹಳ್ಳಿಗಳನ್ನು ಪರಸ್ಪರ ಜೋಡಿಸುವ ರಸ್ತೆಗಳು ಚೆನ್ನಾಗಿವೆ. ಆದರೆ ಹಳ್ಳಿಗಳ ಒಳಗಿನ ರಸ್ತೆಗಳು ತುಂಬ ಹಾಳಾಗಿವೆ; ಹೊಂಡ-ಗುಂಡಿಗಳಿಂದ ಕೂಡಿವೆ. ರಸ್ತೆಗಳು ಚೆನ್ನಾಗಿದ್ದರೆ ಗ್ರಾಮಜೀವನ ಉತ್ತಮವಿರಲು ಸಾಧ್ಯ; ಆದ್ದರಿಂದ ಹಳ್ಳಿಗಳ ರಸ್ತೆಗಳು ಸುಧಾರಿಸಬೇಕು.

ಹಳ್ಳಿಗಳಲ್ಲಿ ಕೃಷಿ ರಸಗೊಬ್ಬರ, ಕೀಟನಾಶಕಗಳು ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ; ಸರ್ಕಾರವೇ ಇವುಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದೆ; ಅದರಿಂದಾಗಿ ಕೃಷಿಭೂಮಿ ಬರಡಾಗುತ್ತಿದೆ. ಆಹಾರಧಾನ್ಯ, ಹಣ್ಣು, ತರಕಾರಿಗಳು ವಿಷಮಯವಾಗುತ್ತಿವೆ. ಅವುಗಳ ಸೇವನೆಯಿಂದ ರೋಗಗಳು ಹೆಚ್ಚುತ್ತಿವೆ; ರೋಗಗಳ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ತುಂಬ ವೆಚ್ಚ ಆಗುತ್ತಿದೆ. ಇದು ವಿದೇಶಿ ಕಂಪೆನಿಗಳ ಷಡ್ಯಂತ್ರವಾಗಿದ್ದು, ಇದನ್ನು ನಾವು ಅರ್ಥೈಸಿಕೊಂಡು ಕೃಷಿಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಜನರ ಆರೋಗ್ಯ ರPಣೆಯ ದೃಷ್ಟಿಯಿಂದ ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕು. ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಹೇರಬೇಕು. ಭಾರತೀಯ ಪರಂಪರೆಯ ಗೋಆಧಾರಿತ ಕೃಷಿಯನ್ನು ಹೆಚ್ಚಿಸಬೇಕು. ಇದರಿಂದ ಜಮೀನು ಫಲವತ್ತಾಗುತ್ತದೆ; ಜನರ ಆರೋಗ್ಯ ಉತ್ತಮಗೊಳ್ಳುತ್ತದೆ; ಮತ್ತು ಗೋವುಗಳ ರPಣೆಯಾಗುತ್ತದೆ.

ಹಳ್ಳಿಯ ಜಮೀನುಗಳಲ್ಲಿ ಈಚೆಗೆ ಟ್ರ್ಯಾಕ್ಟರ್ ಎನ್ನುವ ರಾPಸೀ ಯಂತ್ರದ ಬಳಕೆ ವಿಪರೀತವಾಗಿದೆ. ಇದರಿಂದ ಮಣ್ಣಿನಲ್ಲಿರುವ ಜೀವಿಗಳು ನಾಶವಾಗುತ್ತಿವೆ. ಮಣ್ಣಿನ ಶಕ್ತಿ ಕಡಿಮೆಯಾಗುತ್ತಿದೆ; ಟ್ರ್ಯಾಕ್ಟರ್‌ನ ಹೊಗೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ಟ್ರ್ಯಾಕ್ಟರ್‌ನ ಶಬ್ದದಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ. ಟ್ರ್ಯಾಕ್ಟರ್‌ಗಾಗಿ ತೈಲದ ಬಳಕೆ ಹೆಚ್ಚುತ್ತಿದೆ. ಅದರಿಂದ ಭೂಮಾತೆಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದೇವೆ. ಉಳುಮೆ ಇಲ್ಲದ ಕಾರಣ ಎತ್ತುಗಳನ್ನು ಕಸಾಯಿಖಾನೆಗೆ ಕಳುಹಿಸುತ್ತಾರೆ. ಇದಕ್ಕೆ ಬದಲಾಗಿ ಟ್ರ್ಯಾಕ್ಟರ್‌ಗಳನ್ನು ಹಳ್ಳಿಯಿಂದ ಹೊರಗೆ ಹಾಕಿ ಕೃಷಿಯಲ್ಲಿ ಎತ್ತುಗಳನ್ನು ಬಳಸಿದಾಗ ಗೋವಂಶ ಉಳಿಯುತ್ತದೆ. ದನ-ಎತ್ತುಗಳ ಮೂತ್ರ (ಗಂಜಳ) ಮತ್ತು ಸೆಗಣಿಗಳಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಮಣ್ಣಿನ ಜೀವಿಗಳು ಉಳಿದುಕೊಳ್ಳುತ್ತವೆ. ಕೃಷಿಕಾರ್ಮಿಕರಿಗೆ ಉದ್ಯೋಗ ಸಿಗುತ್ತದೆ. ಗ್ರಾಮೀಣ ಪ್ರದೇಶದ ನಿರುದ್ಯೋಗ ನಿವಾರಣೆಯಾಗುತ್ತದೆ; ಕೃಷಿಕಾರ್ಮಿಕರು ಹಳ್ಳಿಬಿಟ್ಟು ಪಟ್ಟಣ ಸೇರುವುದು ನಿಲ್ಲುತ್ತದೆ.

ಸರ್ಕಾರದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಕಾರಣದಿಂದ ಈಗ ಹಳ್ಳಿಗಳಲ್ಲಿ ಕೃಷಿಗೆ ಕೂಲಿಕಾರ್ಮಿಕರು ಸಿಗುತ್ತಿಲ್ಲ. ಅದರಿಂದಾಗಿ ಕೃಷಿಭೂಮಿಗಳನ್ನು ಹಡೀಲು (ಬಂಜರು) ಬಿಡಲಾಗುತ್ತಿದೆ. ಆದ್ದರಿಂದ ನಾವು ತಮ್ಮಲ್ಲಿ ಮಾಡಿಕೊಳ್ಳುವ ಮನವಿ ಎಂದರೆ, ಕೇರಳ ರಾಜ್ಯದಲ್ಲಿ ಮಾಡುವಂತೆ ನರೇಗಾದಲ್ಲಿ ಆದ್ಯತೆಯ ಮೇರೆಗೆ ಮೊದಲಿಗೆ ಕೃಷಿಕಾರ್ಮಿಕರನ್ನು ಬಿಟ್ಟುಕೊಡಬೇಕು. ಕೇರಳದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ನರೇಗಾದ ಕಾರಣದಿಂದ ಗ್ರಾಮೀಣ ಕೈಗಾರಿಕೆಗಳಿಗೆ ಕೂಡ ಕೂಲಿಯಾಳುಗಳು ಸಿಗುತ್ತಿಲ್ಲ. ಗ್ರಾಮೀಣ ಗುಡಿಕೈಗಾರಿಕೆಗಳು ಮುಚ್ಚುತ್ತಿವೆ. ಕೃಷಿಕಾರ್ಮಿಕರಿಗೆ ಪಟ್ಟಣದ ಕಂಪೆನಿಗಳು ಅಧಿಕ ವೇತನದ ಆಮಿಷವೊಡ್ಡಿ ಪಟ್ಟಣದತ್ತ ಸೆಳೆಯುತ್ತಿವೆ. ಅವರನ್ನು ಟ್ರಕ್‌ಗಳಲ್ಲಿ ತುಂಬಿ ನಗರದತ್ತ ಸಾಗಿಸುತ್ತಿವೆ. ಇದನ್ನು ತಡೆಯಬೇಕು; ಕೃಷಿಕಾರ್ಮಿಕರು ಕೃಷಿಯ ಕೆಲಸಗಳಿಗೇನೇ ಲಭ್ಯವಾಗಬೇಕು.

ಕೃಷಿಭೂಮಿಯ ಮೇಲೆ ಬಗೆಬಗೆಯ ಆಕ್ರಮಣಗಳು ನಡೆಯುತ್ತಿವೆ. ಉದಾಹರಣೆಗೆ ದೆಹಲಿಯಿಂದ ಗೋವಾದ ತನಕ ವಿಸ್ತರಿಸಿದ ಕೈಗಾರಿಕಾ ಪಟ್ಟಿ(ಕಾರಿಡಾರ್)ಯ ಯೋಜನೆ. ಇದಕ್ಕಾಗಿ ಎಷ್ಟೋ ಕೃಷಿಭೂಮಿ ನಾಶವಾಗುತ್ತದೆ; ಅದೆಷ್ಟೋ ಹಳ್ಳಿಗಳು ನಾಮಾವಶೇಷಗೊಳ್ಳುತ್ತವೆ; ನಾವು ಈ ಕುರಿತು ಚಿಂತಿಸಿದ್ದೇವೆಯೇ? ಇಂತಹ ಯೋಜನೆಗಳಿಗೆ ತಡೆ ಹಾಕುವುದು ಅವಶ್ಯ: ಕೃಷಿಭೂಮಿಯನ್ನು ಕೃಷಿಯ ಉದ್ದೇಶಕ್ಕೇನೇ ಉಳಿಸಿಕೊಳ್ಳುವುದು ಅಗತ್ಯ. ನಾವೀಗ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್)ದ ಚಿಂತನೆಯನ್ನು ಮಾಡುತ್ತಿದ್ದು, ಅದಕ್ಕೆ ಬದಲಾಗಿ ವಿಶೇಷ ಕೃಷಿ ವಲಯ (ಎಸ್‌ಎಝಡ್)ದ ಕುರಿತು ಕಾರ್ಯಪ್ರವೃತ್ತರಾಗಬೇಕಾಗಿದೆ.

ರಾಜ್ಯದ ಹಳ್ಳಿಗಳಲ್ಲಿ ಕಾಡುಗಳನ್ನು ಸವರುವ ಕಾರ್ಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಹಳ್ಳಿಗಳ ಹಸಿರು ಬರಿದಾಗುತ್ತಿದೆ. ಹಸಿರು ನಷ್ಟವಾಗುವುದರಿಂದ ಹಳ್ಳಿಗಳ ಸಂಪತ್ತು ನಾಶವಾಗುವುದಲ್ಲದೇ ಕಾಡಿನ ಜೀವ ವೈವಿಧ್ಯವು ಇಲ್ಲವಾಗುತ್ತಿದೆ. ಕಾಡು ನಾಶವಾದ ಕಾರಣ ಮಳೆ ಕಡಿಮಯಾಗುತ್ತಿದೆ; ಇದರಿಂದ ನೀರಿನ ಅಭಾವ ತಲೆದೋರುತ್ತಿದೆ. ಕಾಡಿನಿಂದ ಬರುವ ಎಲ್ಲ ಸಂಪತ್ತು ನಾಶವಾಗುತ್ತಿದೆ. ಈ ಕಾರಣದಿಂದ ಭಾರತದ ಗ್ರಾಮೀಣ ಆರೋಗ್ಯ ಪರಂಪರೆಯೇ ನಷ್ಟವಾಗುತ್ತಿದೆ. ನಮ್ಮ ವೈದ್ಯಕೀಯ ಪರಂಪರೆ ನಷ್ಟವಾದ ಕಾರಣ ವಿದೇಶಿ ವೈದ್ಯಕೀಯ ಪದ್ಧತಿಯು ಆಕ್ರಮಣ ನಡೆಸುತ್ತಿದೆ. ಇದರಿಂದ ಮಾನವ ಸಮಾಜದ ಪತನ ಆಗುತ್ತಿದೆ. ಆದ್ದರಿಂದ ಹಳ್ಳಿ-ಹಳ್ಳಿಗಳಲ್ಲಿ ಕಾಡುಗಳನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ನಡೆಯಬೇಕಾಗಿದೆ. ಮರ ಕಡಿದು ಕಾಡಿನ ನಾಶ ಮಾಡುವವರ ವಿರುದ್ಧ ಕಠಿಣ ಶಿಕ್ಷೆ ಜಾರಿಯಾಗಬೇಕು. ಗಿಡ ನೆಡುವವರನ್ನು ಪ್ರೋತ್ಸಾಹಿಸಬೇಕು. ಹೂ ಬಿಡುವ ಜೀವನಾಧಾರವಾದ ಮತ್ತು ಆರೋಗ್ಯಕ್ಕೆ ಪೂರಕವಾದ ಗಿಡಗಳನ್ನು ನೆಡಬೇಕು. ಮರಗಳನ್ನು ಬೆಳೆಸಿ ಜೀವವೈವಿಧ್ಯವನ್ನು ಪೋಷಿಸುವುದು ಶ್ರೇಷ್ಠ ಕಾರ್ಯವಾಗಿದೆ.

ಹಳ್ಳಿಗಳಲ್ಲಿ ಸರ್ಕಾರ ಬಡತನ ರೇಖೆ(ಬಿಪಿಎಲ್)ಯ ಆಧಾರದಲ್ಲಿ ಅಕ್ಕಿ, ಗೋಧಿ ಇತ್ಯಾದಿಗಳನ್ನು ಅತಿಕಡಿಮೆ ಬೆಲೆ ಹಂಚುತ್ತದೆ. ಇದು ಗ್ರಾಮೀಣ ಜೀವನ ವ್ಯವಸ್ಥೆಯ ಮೇಲೆ ಚಪ್ಪಡಿಕಲ್ಲು ಎಳೆಯುವಂತಿದೆ. ಇದರಿಂದ ಜನ ಸೋಮಾರಿಗಳಾಗುತ್ತಾರೆ. ಲಭ್ಯ ಕೃಷಿಭೂಮಿಗಳಲ್ಲಿ ಬೇಸಾಯ ಮಾಡುವುದಿಲ್ಲ. ದುಡಿಮೆಗೆ ಬೆಲೆ ಇರುವುದಿಲ್ಲ. ಆಹಾರ ಭದ್ರತೆ ಮಸೂದೆಯ ಮೂಲಕ ಜನರ ಈ ಸ್ವಭಾವಕ್ಕೆ ಅಧಿಕೃತ ಮುದ್ರೆಯನ್ನು ಒತ್ತಲಾಗುತ್ತದೆ. ನಾವು ಇನ್ನಾದರೂ ಎಚ್ಚೆತ್ತುಕೊಂಡು ಈ ಮಾರ್ಗವನ್ನು ತೊರೆದು ಶ್ರಮಿಕರಾಗಿ ಕೃಷಿ ಮಾಡುವವರನ್ನು ಪ್ರೋತ್ಸಾಹಿಸುವುದು ಅಗತ್ಯ. ಜೈವಿಕ ಕೃಷಿ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ಲಭ್ಯವಾಗಬೇಕು.

ಹಳ್ಳಿಗಳಲ್ಲಿ ಬೆಟ್ಟ-ಗುಡ್ಡ ಜಮೀನುಗಳನ್ನು ಅಗೆಯುವುದು, ಕಲ್ಲು ಕಡಿಯುವುದು, ತೈಲ-ಅನಿಲಗಳನ್ನು ಮೇಲೆತ್ತುವುದು, ಗಣಿಗಾರಿಕೆ ನಡೆಸಿ ವ್ಯಾಪಾರ ಮಾಡುವುದು ಇವೆಲ್ಲ ಅತ್ಯಂತ ಕ್ರೂರ ಮತ್ತು ಅತ್ಯಾಚಾರಕ್ಕೆ ಸಮನಾದ ಕಾರ‍್ಯಗಳಾಗಿವೆ. ಇದು ರಾPಸೀ ಮಾನಸಿಕತೆಗೆ ಉದಾಹರಣೆಯಾಗಿದೆ. ಇದರಿಂದ ಭೂಮಿ ಬಂಜರಾಗುತ್ತದೆ; ಮಾಲಿನ್ಯ ಹೆಚ್ಚುತ್ತದೆ; ಪರಿಸರ ನಷ್ಟವಾಗುತ್ತದೆ. ಕಲ್ಲಿನ ತುಂಡುಗಳ ತ್ಯಾಜ್ಯ ಬೆಟ್ಟದಂತೆ ರಾಶಿ ಬೀಳುತ್ತದೆ; ಇದರ ಒಟ್ಟು ಪರಿಣಾಮವಾಗಿ ಹಳ್ಳಿಯ ವಾತಾವರಣದ ಉಷ್ಣತೆ ಏರುತ್ತದೆ. ಅಂತಹ ಕಲ್ಲುಗಳಿಂದ ಮನೆ ಕಟ್ಟಿ ಅದರಲ್ಲಿ ವಾಸಿಸುವವರಲ್ಲಿ ಹಲವು ರೋಗಗಳು ಕಾಣಿಸುತ್ತಿವೆ. ಆದ್ದರಿಂದ ಈ ಕಲ್ಲುಗಣಿಗಾರಿಕೆಯ ಮೇಲೆ ನಿಷೇಧ ಹೇರುವುದು ತೀರಾ ಆಗತ್ಯ. ಯಾರಾದರೂ ಅನ್ಯಾನ್ಯ ಕಾರಣ ಹೇಳಿ ಆ ವ್ಯವಹಾರ ನಡೆಸಿದರೂ ಕೂಡ ಅವರಿಗೆ ಕಠಿಣ ಶಿಕ್ಷೆ ಆಗಬೇಕು.

ರಾಜ್ಯದ ಹಳ್ಳಿಗಳಲ್ಲಿ ವಿದ್ಯುತ್ತಿನ ಸಮಸ್ಯೆ ತೀವ್ರವಾಗಿದೆ. ಕೃಷಿಗಂತೂ ವಿದ್ಯುತ್ ಸಿಗುವುದು ತುಂಬ ಕಷ್ಟವಾಗಿದೆ; ಅದರಿಂದ ಹಳ್ಳಿಯ ಜನ ಬೇಸರದಲ್ಲಿzರೆ. ಇದಕ್ಕೆ ಪರಿಹಾರವೆಂಬಂತೆ ಸೌರವಿದ್ಯುತ್‌ನ ಆಗಮನವಾಗಿದೆ. ಆದರೆ ಅನೇಕ ಹಳ್ಳಿಗಳಲ್ಲಿ ಅದು ಕೆಲಸ ಮಾಡುವುದಿಲ್ಲ. ಆದ್ದರಿಂದ ಹಳ್ಳಿಗಳಲ್ಲಿ ದಿನದ ೨೪ ತಾಸು ಕೂಡ ವಿದ್ಯುತ್ ಲಭ್ಯವಾಗುವಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕೃಷಿಕರಿಗೆ ಬೇಕಾದಷ್ಟು ವಿದ್ಯುತ್ ನೀಡಬೇಕು. ಸೌರವಿದ್ಯುತ್ ಉತ್ಪಾದನೆಗೆ ವಿಶೇಷ ಗಮನ ನೀಡಬೇಕು. ಸೌರವಿದ್ಯುತ್ ಉತ್ಪಾದನೆಗೆ ವಿಶೇಷ ಗಮನ ನೀಡಿದಲ್ಲಿ ವಿದ್ಯುತ್‌ನ ಸಮಸ್ಯೆ ತಗ್ಗಲು ಸಾಧ್ಯ; ಏಕೆಂದರೆ ಸೌರಶಕ್ತಿ ಪಾರವಿಲ್ಲದ್ದು.

ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದೆ; ಕೃಷಿಕರು ತುಂಬ ಕಷ್ಟಪಟ್ಟು ನೀರನ್ನು ದೊರಕಿಸಿಕೊಳ್ಳುತ್ತಿದ್ದಾರೆ. ನೀರಿನ ಇಷ್ಟೊಂದು ಅಭಾವ ಇzಗಲೂ ಹಳ್ಳಿಯ ಜನ ಮನೆಯಲ್ಲಿ ಬಳಸುವ ನೀರನ್ನು ರಸ್ತೆಯ ಮೇಲೆ ಹರಿಯಬಿಡುತ್ತಾರೆ. ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಸಂತತಿ ಬೆಳೆಯುತ್ತಿದೆ; ಅದು ಜನರ ಆರೋಗ್ಯಹಾನಿಗೆ ದಾರಿಯಾಗುತ್ತಿದೆ. ಅದರಿಂದ ಹಳ್ಳಿಗಳ ನೈರ್ಮಲ್ಯಕ್ಕೆ ಗಮನ ಕೊಡುವ ತೀವ್ರ ಆವಶ್ಯಕತೆ ಇದೆ. ಅನ್ನದಾತನಾದ ರೈತನನ್ನು ಸಂತೋಷದಲ್ಲಿ ಇಡುವ ಸಲುವಾಗಿ ಅವನ ನೀರಿನ ಸಮಸ್ಯೆಯನ್ನು ಹೋಗಲಾಡಿಸಬೇಕೆಂದು ಪ್ರಾರ್ಥಿಸುತ್ತೇನೆ. ಹಳ್ಳಿಗಳಲ್ಲಿ ಜಲಸಂರPಣೆ, ಜಲಸಂಗ್ರಹ (ಜಲಸಂಧಾರಣ)ದಂತಹ ಪ್ರಾಚೀನ ಪದ್ಧತಿಗಳನ್ನು (ಬಾವಿ, ಕೆರೆ, ಕಿಂಡಿ, ಅಣೆಕಟ್ಟು) ಆಧುನಿಕ ತಂತ್ರeನದೊಂದಿಗೆ ಮೇಳವಿಸಿ ಸುಧಾರಿಸಿ ಅನುಸರಿಸುವುದು ಅಗತ್ಯ. ಅಂತಹ ಒಂದು ಕಾರ್ಯವನ್ನು ರಾಜಸಮಂದ ತಾಲೂಕಿನ ಪಿಪಲಾಂತ್ರಿ ಗ್ರಾಮದಲ್ಲಿ ನೋಡಿಬಂದೆ. ಅದೇ ರೀತಿ ಜೈಪುರ-ಅಜ್ಮೀರ್‌ನ ಮಧ್ಯೆ ಲಾಪೋಡಿಯಾ ಎಂಬ ಗ್ರಾಮದಲ್ಲಿ ಕೂಡ ಅಂತಹ ಒಂದು ವಿಧಾನವನ್ನು ರೂಪಿಸಲಾಗಿದೆ; ಈ ಎರಡೂ ಉದಾಹರಣೆಗಳು ಅನುಸರಣೀಯವಾಗಿವೆ. ರೈತನೇ ದೇವರು; ಆದರೆ ನಾವೆಲ್ಲರೂ ಆತಗೆ ಕಷ್ಟವನ್ನೇ ಉಣಿಸುತ್ತಿದ್ದೇವೆ. ಅಂತಹ ದೇವತಾಸ್ವರೂಪಿಯಾದ ರೈತನನ್ನು ಸಂತೋಷದಲ್ಲಿಟ್ಟರೆ ಆತನು ಅದೇ ರೀತಿ ಎಲ್ಲರನ್ನೂ ಸಂತೋಷದಲ್ಲಿ ಇಡಬಲ್ಲನು.

ಹಳ್ಳಿಗಳಲ್ಲಿ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವ ಕಾರಣ ಅವರು ತುಂಬ ದುಃಖಿಗಳಾಗಿದ್ದಾರೆ. ಮಧ್ಯವರ್ತಿಗಳಾದ ದಳಿಗಳು ಲಾಭ ಹೊಡೆಯುವುದೇ ಅದಕ್ಕೆ ಕಾರಣ. ಈ ಸಮಸ್ಯೆಗೆ ಪರಿಹಾರವೆಂದರೆ, ಬೆಳೆಗಾರರು ಮತ್ತು ಗ್ರಾಹಕರ ನಡುವೆ ಇರುವ ಮಧ್ಯವರ್ತಿಗಳನ್ನು ತೊಲಗಿಸಬೇಕು. ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ; ಮತ್ತು ಗ್ರಾಹಕರಿಗೆ ಅಗ್ಗದರಕ್ಕೆ ವಸ್ತುಗಳು ಸಿಗುತ್ತವೆ.

ಹಳ್ಳಿಗಳಲ್ಲಿರುವ ಸರ್ಕಾರಿ ವಿದ್ಯಾಸಂಸ್ಥೆಗಳ ದುರವಸ್ಥೆ ಕಂಡು ತುಂಬ ಬೇಸರವಾಯಿತು. ರಾಜ್ಯದ ಗ್ರಾಮೀಣ ಶಾಲೆಗಳಲ್ಲಿ ಅಧ್ಯಾಪಕರ ಕೊರತೆಯಿದೆ. ಆದ್ದರಿಂದ ಮಕ್ಕಳು ಶಾಲೆಗೆ ಬರುವುದಿಲ್ಲ; ಪರಿಣಾಮವಾಗಿ, ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಸರ್ಕಾರ ಶಿPಕರನ್ನು ಅಟೆಂಡರ್‌ಗಳಂತೆ ಎಲ್ಲ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಶಿPಕರು ತಮ್ಮ ಕೆಲವು ಸ್ವಂತ ಕೆಲಸಗಳಲ್ಲಿ ಕೂಡ ನಿರತರಾಗಿರುತ್ತಾರೆ. ಪರಿಣಾಮವಾಗಿ ವಿದ್ಯಾರ್ಥಿಗಳನ್ನು ಕೇಳುವವರಿಲ್ಲ ಎಂಬಂತಾಗುತ್ತದೆ. ಆದ್ದರಿಂದ ನನ್ನ ಪ್ರಾರ್ಥನೆ ಎಂದರೆ ಶಿPಕರನ್ನು ಕಲಿಸುವ ಕೆಲಸಕ್ಕೆ ಮಾತ್ರ ಉಪಯೋಗಿಸಿಕೊಳ್ಳಬೇಕು; ಅದರಿಂದ ಅವರು ವಿದ್ಯಾರ್ಥಿಗಳತ್ತ ಪೂರ್ಣ ಗಮನ ಕೊಡಲು ಸಾಧ್ಯವಾಗುತ್ತದೆ. ಸರ್ಕಾರಿ ಶಾಲೆಗಳ ಗುಣಮಟ್ಟ ಕುಸಿದಿರುವ ಕಾರಣ ಈಗ ಹಳ್ಳಿಗಳಲ್ಲಿ ಕೂಡ ಖಾಸಗಿ ಶಾಲೆಗಳು ವಿಜೃಂಭಿಸುತ್ತಿವೆ; ಅವು ವಿದ್ಯೆಯ ಮಾರಾಟದಲ್ಲಿ ತೊಡಗಿವೆ. ಮಕ್ಕಳನ್ನು ಹಣ ಸಂಪಾದಿಸುವ ಯಂತ್ರಗಳೆಂಬ ರೀತಿಯಲ್ಲಿ ಬೆಳೆಸಲಾಗುತ್ತಿದೆ. ವ್ಯಕ್ತಿ ನಿರ್ಮಾಣದ ಶಿPಣ(ಒಚಿಟಿ mಚಿಞiಟಿg eಜuಛಿಚಿಣioಟಿ)ದ ಬದಲು ಈಗ ಹಣ ಮಾಡುವ ಶಿPಣ(ಒoಟಿeಥಿ mಚಿಞiಟಿg eಜuಛಿಚಿಣioಟಿ)ವನ್ನು ನೀಡಲಾಗುತ್ತಿದೆ. ಹಣ ಮಾಡುವ ಶಿPಣ ಬುದ್ಧಿಯನ್ನು ಮಲಿನಗೊಳಿಸುತ್ತಿದೆ. ಮಲಿನವಾದ (ಪ್ರದೂಷಿತ) ಬುದ್ಧಿ ಎಲ್ಲವನ್ನೂ ಮಲಿನಗೊಳ್ಳುತ್ತಿದೆ. ಅಂತಹ ಮಾಲಿನ್ಯ ಎಲ್ಲ ಕಡೆಗೂ ಹಬ್ಬುತ್ತಿದೆ. ಮಾಲಿನ್ಯವು ಹಬ್ಬಿದಂತೆ ವಿನಾಶ ಕೂಡ ದಾಂಗುಡಿ ಇಡುತ್ತಿದೆ; ಆದರೆ ನಾವದನ್ನು ಅಭಿವೃದ್ಧಿ (ವಿಕಾಸ) ಎನ್ನುತ್ತಿದ್ದೇವೆ. ದಯಮಾಡಿ ಈ ಕುರಿತು ಚಿಂತಿಸಿ, ವಿದ್ಯೆಗೆ ಅಧ್ಯಾತ್ಮವಿದ್ಯೆಯ ರೂಪವನ್ನು ನೀಡಬೇಕು; ಮಾನವನನ್ನು ಮಾನವತ್ವದಿಂದ ದೇವತ್ವದೆಡೆಗೆ ಒಯ್ಯಲು ಮತ್ತು ವಿಕಾಸಗೊಳಿಸಲು ಅಧ್ಯಾತ್ಮವಿದ್ಯೆಗೆ ಮಾತ್ರ ಸಾಧ್ಯ.

ಹಳ್ಳಿಗಳಲ್ಲಿ ಈಗ ಕೂಡ ಬಗೆಬಗೆಯ ಅಮಲುಪದಾರ್ಥಗಳ ಸೇವನೆ ಕಂಡುಬರುತ್ತಿದೆ. ಅದಕ್ಕೆ ವ್ಯರ್ಥವಾಗಿ ಹಣ ಹಾಳಾಗುತ್ತಿದೆ. ಕುಟುಂಬಗಳು ಬಡತನಕ್ಕೆ ತಳ್ಳಲ್ಪಡುತ್ತಿವೆ. ಆದ್ದರಿಂದ ಸಾರಾಯಿ, ಹೊಗೆಸೊಪ್ಪು, ಗುಟ್ಕಾ, ಬೀಡಿ, ಸಿಗರೇಟು ಮುಂತಾದ ಮಾದಕವಸ್ತು ಮತ್ತು ದುರಭ್ಯಾಸಗಳಿಗೆ ತಡೆಹಾಕುವುದು ಅಗತ್ಯ. ರಾಜ್ಯದಲ್ಲಿ ಗುಟ್ಕಾಕ್ಕೆ ನಿಷೇಧ ಹೇರಲಾಗಿದೆ ಎಂದು ಕೇಳಿದೆ. ಆದರೆ ಕಾನೂನಿನ ತಡೆ ಸಾಲದು; ಕಾನೂನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ಆಗಬೇಕು. ಬೇಸರದ ವಿಷಯವೆಂದರೆ, ಶಿಕ್ಷೆ ನೀಡಬೇಕಾದ ಸರ್ಕಾರವೇ ಅವುಗಳನ್ನು ಇನ್ನೊಂದು ರೀತಿಯಿಂದ ಪ್ರೋತ್ಸಾಹಿಸುತ್ತಿದೆ. ಕಾರಣ, ಹಣದ ಬಗ್ಗೆ ಸರ್ಕಾರದ ದುರಾಸೆ. ಜನರಿಗೆ ಸಾರಾಯಿ ಕುಡಿಸಿ ಸರ್ಕಾರ ಹಣ ಸಂಗ್ರಹಿಸುವುದಾದರೆ ಅದರ ಅಂತಿಮ ಪ್ರಯೋಜನ ಏನಿರಬಹುದು? ಜನರನ್ನು ರಕ್ಷಿಸಬೇಕಾದ ಸರ್ಕಾರವೇ ಜನರನ್ನು ಈ ರೀತಿ ಶೋಷಿಸುವುದೆಂದರೆ ಅದು ಬೇಲಿಯೇ ಹೊಲವನ್ನು ಮೇದಂತಲ್ಲವೆ? ಆದ್ದರಿಂದ ದಯವಿಟ್ಟು ಸಮಾಧಾನವಾಗಿ ಈ ಬಗ್ಗೆ ಚಿಂತಿಸಿ, ಗಟ್ಟಿಯಾದ ನಿರ್ಣಯ ತೆಗೆದುಕೊಳ್ಳಿ. ಅಮಲು ಪದಾರ್ಥಗಳಿಂದ ಮುಂದಿನ ಪೀಳಿಗೆಯನ್ನು ರಕ್ಷಿಸುವ ಸಲುವಾಗಿ ಶಾಲೆ-ಕಾಲೇಜುಗಳಲ್ಲಿ ಆರೋಗ್ಯ ಶಿPಣ, ಯೋಗ ಶಿPಣಗಳನ್ನು ನೀಡಬಹುದು. ಸ್ವಸ್ಥ ಜೀವನಶೈಲಿ ಮತ್ತು ಯೋಗ ಜೀವನಶೈಲಿಗಳ ಮೂಲಕ ನಾವು ಭವಿಷ್ಯದ ಪೀಳಿಗೆಗೆ ಸೂಕ್ತ ಮಾರ್ಗದರ್ಶನ ಮಾಡಲು ಸಾಧ್ಯ.

ಗೋವುಗಳ ಸಂರPಣೆಗಾಗಿ ತಾವು ನಿರ್ದೇಶನಾಲಯವನ್ನು ರಚಿಸುವ ಮೂಲಕ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ. ಇದರೊಂದಿಗೆ ಗೋವಿನ ತಳಿಗಳ ಮಿಶ್ರಣ (ಹೈಬ್ರಿಡ್ ತಳಿ) ಆಗದಂತೆ ಕೂಡ ಗಮನಹರಿಸಿ; ದೇಶೀಯ ಪದ್ಧತಿಯಂತೆ ಪಶುಸಂಗೋಪನೆ, ಪಶುಚಿಕಿತ್ಸೆಗಳು ನಡೆಯುವಂತಾಗಲಿ.

ಕೊನೆಯಲ್ಲಿ ಚಿಂತನೆಗೆ ಕೆಲವು ಅಂಶಗಳು

ಇಂದು ಎಲ್ಲ ಕಡೆ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯುತ್ತಿದೆ; ಒಂದು ಗಾಂಧೀ ವಿಧಾನವಾದರೆ ಇನ್ನೊಂದು ನೆಹರೂ ವಿಧಾನ. ನೆಹರೂ ವಿಧಾನವೆಂದರೆ ಪಾಶ್ಚಾತ್ಯ ಅನುಕರಣೆ. ನಗರಕೇಂದ್ರಿತ, ಧನಕೇಂದ್ರಿತ, ಯಂತ್ರ ಆಧಾರಿತ, ಸುಖ ಆಧಾರಿತ ಅಂದರೆ ಉಪಭೋಗಾದಿ (ಬಳಸಿ ಎಸೆಯುವ ಸಂಸ್ಕೃತಿ). ಆದರೆ ಈ ವಿಧಾನದಲ್ಲಿ ನಾವು ಪ್ರಕೃತಿಯ ಅಪಾರ ನಾಶವನ್ನು ಕಾಣುತ್ತಿzವೆ. ಪ್ರಕೃತಿಯ ನಾಶವೆಂದರೆ ನಮ್ಮದೇ ನಾಶ; ಏಕೆಂದರೆ ನಾವು ಪ್ರಕೃತಿಯಿಂದ ಹೊರತಾಗಿಲ್ಲ; ಆದರ ಒಂದು ಭಾಗವೇ ಆಗಿzವೆ. ಇಂದು ಹಣದ ದುರಾಸೆ, ಎಡೆ ಎಲ್ಲರನ್ನೂ ಆವರಿಸಿದೆ; ಹಣದ ಸಂಪಾದನೆಗಾಗಿ ಇಂದಿನ ಮನುಷ್ಯ ರಾPನಾಗುತ್ತಿದ್ದಾನೆ. ಭೂಮಿ, ನೀರು, ಕಾಡು, ಜೀವಿಗಳು, ಗೋವು ಮುಂತಾಗಿ ಎಲ್ಲದರ ಮೇಲೆ ಅತ್ಯಾಚಾರ ಎಸಗುತ್ತಿzನೆ. ಸುಖ-ಸವಲತ್ತನ್ನು ಬೆಂಬತ್ತಿದ ಮನುಷ್ಯ ಇಂದು ದುಃಖಿಯಾಗಿದ್ದಾನೆ.

ನಗರಗಳಲ್ಲಿ ಪಾಶ್ಚಾತ್ಯ ಜಗತ್ತಿನ ಎಲ್ಲ ರೋಗಗಳು ಹಬ್ಬುತ್ತಿವೆ. ಆತ್ಮಹತ್ಯೆಗಳು ಹೆಚ್ಚುತ್ತಿವೆ; ಚಿಕ್ಕಮಕ್ಕಳು ಮಾನಸಿಕ ರೋಗಿಗಳಾಗುತ್ತಿzರೆ. ವಿವಾಹ ವಿಚ್ಛೇದನಗಳ ಸಂಖ್ಯೆ ಏರುತ್ತಿದೆ. ಮನೆಗಳು ಒಡೆಯುತ್ತಿವೆ. ’ಪುಟ್ಟ ಸಂಸಾರ, ಸುಖೀ ಸಂಸಾರ’ ಎಂಬ ಆದರ್ಶವನ್ನು ಮುಂದಿಟ್ಟುಕೊಂಡು ಮಾನವೀಯ ಸಂಬಂಧಗಳು ಮೊಟಕಾಗುತ್ತಿವೆ; ಇವೆಲ್ಲದರ ಕಾರಣದಿಂದ ಮಾನಸಿಕ ಒತ್ತಡ ಅಧಿಕವಾಗುತ್ತಿದೆ. ಪರಿಣಾಮವಾಗಿ, ಅಧಿಕ ರಕ್ತದೊತ್ತಡ, ಮಧುಮೇಹ, ಮನೋರೋಗ, ಕ್ಯಾನ್ಸರ್, ವಿವಿಧ ಚರ್ಮವ್ಯಾಧಿಗಳು ಕಂಡುಬರುತ್ತಿವೆ. ಟಿವಿ, ಕಂಪ್ಯೂಟರ್ ಮತ್ತು ಮೊಬೈಲ್ ಪೋನ್‌ಗಳ ಅತಿಯಾದ ಬಳಕೆಯಿಂದ ಜಗತ್ತಿನಲ್ಲಿ ಜೀವವೈವಿಧ್ಯಕ್ಕೆ ಹಾನಿಯಾಗುತ್ತಿದೆ. ಆಧುನಿಕ ವೈದ್ಯಕೀಯ ಪ್ರಪಂಚ ಇದನ್ನು ’ಜೀವನ ಶೈಲಿ ಆಧಾರಿತ ಕಾಯಿಲೆಗಳು’ ಎಂದು ವ್ಯಾಖ್ಯಾನಿಸುತ್ತಿದೆ. ಒಟ್ಟಿನಲ್ಲಿ ಭೌತಿಕವಾದಿ, ಭೋಗವಾದಿ ಜೀವನವು ನಮ್ಮನ್ನು ಈ ಹಂತಕ್ಕೆ ತಂದಿದೆ. ಅಮೆರಿಕ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ನಮ್ಮ ನಗರಗಳ ಜನ ಅಮೆರಿಕವನ್ನು ಅನುಕರಿಸುತ್ತಿzರೆ; ಟಿವಿ ನೋಡಿ ಹಳ್ಳಿಯ ಜನ ನಗರಗಳ ಅನುಕರಣೆ ಮಾಡುತ್ತಿzರೆ. ಪರಿಣಾಮವೆಂಬಂತೆ ಹಳ್ಳಿಗಳಲ್ಲಿ ಕೂಡ ಈ ರೋಗಗಳು ಹೆಚ್ಚುತ್ತಿವೆ; ಅದಕ್ಕಾಗಿ ಭಾರೀ ಹಣವನ್ನು ಕೂಡ ವ್ಯಯಿಸಬೇಕಾಗಿದೆ.

ಈ ರೀತಿಯ ಅಭಿವೃದ್ಧಿಯಿಂದ ಜಗತ್ತಿಗೆ ಶಾಂತಿ-ಸಮಾಧಾನ ನೀಡಲು ಸಾಧ್ಯವೆ? ಈಗ ಇಡೀ ಪಾಶ್ಚಾತ್ಯ ಜಗತ್ತು ಇಂತಹ ವಿಲಾಸಿ (ಉಪಭೋಗವಾದಿ) ಜೀವನಶೈಲಿಯಿಂದ ಬಳಲಿ, ಶಾಂತಿ-ಸಮಾಧಾನದ ಜೀವನವನ್ನು ಅರಸುತ್ತಾ, ಭಾರತದ ಕಡೆಗೆ ಆಶೆಯ ಕಣ್ಣಿನಿಂದ ನೋಡುತ್ತಿದೆ. ಪಶ್ಚಿಮದ ಜನ ಭಾರತದ ವೇದ, ಆಯುರ್ವೇದ, ಉಪನಿಷತ್, ಭಗವದ್ಗೀತೆ, ಯೋಗಗಳ ಹಿಂದೆ ಬರುತ್ತಿದ್ದಾರೆ; ನಮ್ಮ ಸಂಸ್ಕೃತದ ಕಡೆಗೆ ನೋಡುತ್ತಿದ್ದಾರೆ. ಆದ್ದರಿಂದ ಈಗ ಭಾರತಕ್ಕೆ ಜಗತ್ತಿನ ದಾಹವನ್ನು ತಣಿಸುವ ಜವಾಬ್ದಾರಿ ಇದೆ. ಆ ಉದ್ದೇಶದಿಂದ ನಮ್ಮ ಯಾತ್ರೆ ಭಾರತವನ್ನು ತಿಳಿಯಿರಿ, ಭಾರತವನ್ನು ಕಟ್ಟಿ, ಭಾರತವನ್ನು ವಿಶ್ವಗುರುಸ್ಥಾನಕ್ಕೇರಿಸಿ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡಿದೆ. ಭಾರತವನ್ನು ಕಟ್ಟಬೇಕಿದ್ದರೆ ಅದನ್ನು ತಿಳಿಯುವುದು ಅವಶ್ಯ. ಭಾರತವನ್ನು ತಿಳಿಯಬೇಕಿದ್ದರೆ ಅದರ ಆತ್ಮದತ್ತ ಹೆಜ್ಜೆ ಇರಿಸಬೇಕು. ಹಳ್ಳಿಗಳೇ ಭಾರತದ ಆತ್ಮ. ಒಟ್ಟಿನಲ್ಲಿ ಭಾರತದ ಅಭಿವೃದ್ಧಿ ಎಂದರೆ ಅದರ ಆತ್ಮದ ವಿಕಾಸ, ಅರ್ಥಾತ್ ಹಳ್ಳಿಗಳ ಅಭಿವೃದ್ಧಿ. ಹಳ್ಳಿಗಳಲ್ಲಿ ರಾಮನಿದ್ದಾನೆ; ಆರಾಮ ಇದೆ. ಗಾಂಧಿಜೀ ಹೀಗೆ ಹೇಳಿದ್ದರು: ಭಾರತವನ್ನು ರಾಮರಾಜ್ಯ ಮಾಡಬೇಕಿದ್ದರೆ ಅದನ್ನು ಗ್ರಾಮರಾಜ್ಯವಾಗಿ ರೂಪಿಸಬೇಕು. ಆದ್ದರಿಂದ ಗ್ರಾಮ ಆಧಾರಿತ, ಕೃಷಿ ಕೇಂದ್ರಿತ, ಪರಿಸರ ಕೇಂದ್ರಿತ, ಪರಿಶ್ರಮ ಆಧಾರಿತ ಮತ್ತು ಅನ್ನ ಆಧಾರಿತ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು. ವೇದಗಳಲ್ಲಿ, ಅನ್ನಂ ಬರ್ಹು ಕುರ್ವೀತ, ಅನ್ನಂ ನ ನಿಂದ್ಯಾತ್ ಎನ್ನುವ ಆದೇಶವಿದೆ; ಅಂದರೆ ಅನ್ನ(ಆಹಾರ ಪದಾರ್ಥ)ವನ್ನು ಹೆಚ್ಚು ಹೆಚ್ಚಾಗಿ ಬೆಳೆಯಬೇಕು; ಅನ್ನವನ್ನು ನಿಂದಿಸಬಾರದು ಎಂದರ್ಥ. ಗೋ ಆಧಾರಿತ ಕೃಷಿ, ಕೃಷಿ ಆಧಾರಿತ ಗ್ರಾಮೋದ್ಯೋಗ (ಗುಡಿ ಕೈಗಾರಿಕೆ), ಆರೋಗ್ಯಕೇಂದ್ರಿತ ಜೀವನಶೈಲಿಯನ್ನು ನಮ್ಮದಾಗಿಸಿಕೊಂಡು, ’ಸರ್ವಜನ ಹಿತಾಯ, ಸರ್ವಜನ ಸುಖಾಯ’ ಜೀವನವನ್ನು ನಡೆಸುತ್ತಾ ಅಂತಹ ಜೀವನವಿದ್ಯೆಯ ಮೂಲಕ ಹಳ್ಳಿಗಳನ್ನು ಒಂದು ಕುಟುಂಬದಂತೆ ಎದ್ದುನಿಲ್ಲಿಸಬೇಕು. ಅಂತಹ ಸ್ವತಂತ್ರ, ಸ್ವಾವಲಂಬಿ ಜೀವನದ ಮೂಲಕ ವಿಶ್ವವನ್ನು ನಮ್ಮ ಕುಟುಂಬವೆಂದು ಭಾವಿಸಬೇಕು. ವಸುಂಧರೆಯೇ ನಮ್ಮ ಕುಟುಂಬ(ವಸುಧೈವ ಕುಟುಂಬಕಮ್) ಎನ್ನುವ ನಮ್ಮ ಪೂರ್ವಿಕರ ಜೀವನಮಂತ್ರದಂತೆ ಜೀವಿಸುವ ನಿರ್ಧಾರವನ್ನು ಕೈಗೊಳ್ಳಬೇಕು. ಇದೇ ಗಾಂಧಿ ಮಾದರಿಯ ಅಭಿವೃದ್ಧಿ; ಸ್ವದೇಶಿ ಜೀವನ ವಿಧಾನ ಎಂದರೂ ಕೂಡ ಇದೇ. ಇದೇ ನಿಜವಾದ ಅಭಿವೃದ್ಧಿ.

ಇದರಲ್ಲೇ ವ್ಯಕ್ತಿ, ಕುಟುಂಬ, ಸಮಾಜ, ರಾಷ್ಟ್ರ ಮತ್ತು ವಿಶ್ವಗಳ ಒಳಿತಿದೆ. ಆದ್ದರಿಂದ ಪ್ರಜೆಗಳಿಗೆ ಸುಖೀಜೀವನವನ್ನು ಕಲ್ಪಿಸುವ ಸಲುವಾಗಿ ಪ್ರಜೆಗಳ ಪ್ರತಿನಿಧಿರೂಪದಲ್ಲಿರುವ ಸರ್ಕಾರ ಇಂದು ತನ್ನ ರಾಜಕೀಯದ ದೃಷ್ಟಿಯಿಂದ ಮೇಲಕ್ಕೇರಿ ಅಧ್ಯಾತ್ಮದ ದೃಷ್ಟಿಯನ್ನು ತನ್ನದಾಗಿಸಿಕೊಳ್ಳಬೇಕು. ರಾಜ್ಯದ ಜನತೆಯನ್ನು ತನ್ನ ಪಾಲಿನ ಜನಾರ್ದನ ಎಂದು ಭಾವಿಸಿ, ಅವರಿಗೆ ನಿಜವಾದ ಆನಂದವನ್ನು ತಲಪಿಸುವ ಸಲುವಾಗಿ ರಾಜ್ಯದ ಎಲ್ಲ ಕ್ಷೇತ್ರಗಳನ್ನು ಅಧ್ಯಾತ್ಮ ನಿಷ್ಠವನ್ನಾಗಿ ಮಾಡಬೇಕು. ರಾಜಕಾರಣ ಕೂಡ ಅಧ್ಯಾತ್ಮನಿಷ್ಠವಾಗುವ ತುರ್ತು ಅಗತ್ಯವಿದೆ. ಆದ್ದರಿಂದ ಈ ಯಾತ್ರೆ ನಮ್ಮ ರಾಜಕೀಯ ನಾಯಕರಲ್ಲಿ ರಾಜಕೀಕರಣ, ವಾಣಿಜ್ಯೀಕರಣ, ಭೋಗವಾದ, ಅಪರಾಧೀಕರಣಗಳನ್ನು ನಿಲ್ಲಿಸಿ ದೇಶದ ಪ್ರತಿಯೊಂದು ಕ್ಷೇತ್ರವನ್ನು ಆಧ್ಯಾತ್ಮಿಕಗೊಳಿಸಿ. ಆಗ ಎಲ್ಲ ಸಮಸ್ಯೆಗಳು ತಾವಾಗಿಯೇ ಇಲ್ಲವಾಗುತ್ತವೆ ಎಂದು ಮನವಿ ಮಾಡಿಕೊಳ್ಳುತ್ತದೆ.

ಅಧ್ಯಾತ್ಮ ನಿಷ್ಠೆ ಎಂದರೇನು? ’ನಾನಲ್ಲ ನೀನು’ ’ನನ್ನದಲ್ಲ ನಿನ್ನದು’ ’ನನಗಲ್ಲ ನಿನಗೆ’ ’ನನ್ನಿಂದ ಅಲ್ಲ ನಿನ್ನಿಂದ’ ಎಂಬುದೇ ಅಧ್ಯಾತ್ಮ ನಿಷ್ಠತೆ. ಇದನ್ನು ಬೆಳೆಸುವುದು ಮಾನವಜೀವನದ ಗುರಿ ಆಗಬೇಕು. ಇಡೀ ಜಗತ್ತು ಇದರ ಮೇಲೆ ನಿಂತಿದೆ. ಇದನ್ನು ಬೆಳೆಸುವುದೇ ಮಾನವ ಜೀವನದ ಗುರಿ ಆಗಬೇಕು. ರಾಮ ಮತ್ತು ಭರತರದ್ದು ಇದಕ್ಕೆ ಉತ್ತಮ ಉದಾಹರಣೆ.

ಭವದೀಯ,

ಸೀತಾರಾಮ್ ಕೆದಿಲಾಯ

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
'Strengthen the confidence of Security forces': RSS Chief Bhagwat at SANGH SANGAM in Jammu

Forgotten Promise or Falling Edifice? A reply for THE HINDU's article 'The Forgotten Promise of 1949'

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

RSS Press Release clarifies 'RSS is Opposed to FDI in Retail'

RSS Press Release: संघ रिटेल में FDI के विरोध में

August 25, 2019

NEWS IN BRIEF – NOV 19, 2011

November 20, 2011

ಒಳ್ಳೆಯ ಕೆಲಸಗಳನ್ನು ಮಾಡುವುದು ನಮ್ಮ ಧರ್ಮ – ಶ್ರೀ ದತ್ತಾತ್ರೇಯ ಹೊಸಬಾಳೆ

January 27, 2022
Day-110: Bharat Parikarama reaches Binaga

Day-110: Bharat Parikarama reaches Binaga

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In