• Samvada
  • Videos
  • Categories
  • Events
  • About Us
  • Contact Us
Tuesday, June 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ಮೇರಿ ಆವಾಜ್ ಹೀ ಪೆಹಚಾನ್ ಹೈ!!

Vishwa Samvada Kendra by Vishwa Samvada Kendra
February 8, 2022
in Articles, Blog
250
0
491
SHARES
1.4k
VIEWS
Share on FacebookShare on Twitter

“ಮೇರಿ ಆವಾಜ್ ಹೀ ಪೆಹಜಾನ್ ಹೈ” ಎನ್ನುವ ಹಾಡಿಗೆ ದನಿಯಾದ ಕಂಠಕ್ಕೆ ಇದೇ ಸಾಲು ಎಷ್ಟು ಅನ್ವರ್ಥ ಅಲ್ವಾ? ಭಾರತದ ಕೋಗಿಲೆ ಕೂಹೂ ಕೂಹೂ ಎಂದ ಸ್ವರಗಳೆಷ್ಟೋ? ಗೀತೆಗಳೆಷ್ಟೋ , ಭಜನೆಗಳೆಷ್ಟೋ? “ಜಾಗೋ ಮೋಹನ್ ಪ್ಯಾರೇ” ಎಂದು ಸುಪ್ರಭಾತವಾದರೆ “ ಆ ಜಾರಿ ಆ ನಿಂದಿಯೂ ತೂ ಆ” ಲಾಲಿಯಾಗುತ್ತೆ.  (“ಬಚ್ಚೆ ಮನ್ ಕ್ಕೆ ಸಚ್ಚೆ “ ಎಂದು ಹಾಡಿದಾಗ ಮಕ್ಕಳ) ಎದೆಯುಬ್ಬಿಸೆ ನಗುತ್ತಾರೆ, “ ಹವಲ್ ಕೊ ಮನ್ ಕಿ ಶಕ್ತಿ ದೇನಾ” ಎಂದು ಕೊ ಬ್ಯಾಂತರ ಮನನ್ ಮಕ್ಕಳ ಪ್ರಾರ್ಥಿಸುತ್ತಾರೆ. ಅಲ್ಲೆಲ್ಲೊ ಒಂದು ಹರೆಯದ ಮನಸ್ಸು “ ಸೋ ಬರನ್ ಕಿ” ಗುನುಗಿದರೆ, “ ಆಜ್  ಫಿರ್ ಜೀನೆ ಕಿ ತಮನ್ನಾ ಹೈ” ಎಂದು ಸೋತ ಹೃದಯ ಅರಳುತ್ತದೆ.

“ತೇರೆ ಬಿನಾ ಜಿಂದಗಿ ಸೆ ಕೋಯಿ” ಅಂತ ವಿರಹದುರಿಯಲ್ಲಿ ಮನಸ್ಸು ನರಳಿದರೆ “ ಬಾಹೊಂ ಚಲೆ ಆಪ್ಕೊ “ ಅಂತ ಖುಷಿಯಲ್ಲಿ ಮತ್ತೊಂದು ಮನಸ್ಸು ಇಡೀ ದೇಶವೇ “ ಏ ಮೇರೆ ವತನ್ ಕಿ ಲೋಗೋ” ಹಾಡಿಗೆ ಕಣ್ಣೀರಾಗುತ್ತದೆ. ಇದೆಲ್ಲಾ ಒಂದೇ ದನಿಯ ಜಾದೂ.
ಸಾವಿರಾರು ಹಾಡುಗಳು ನಮ್ಮ ಜೀವನದ ಪ್ರತಿ ಕ್ಷಣಗಳನ್ನು ಆವರಿಸುತ್ತವೆ. ಪ್ರತೀ ಕನವರಿಕೆಗೂ ಒಂದೊಂದು ಸಾಲು, ನಾವು ಭಾರತೀಯರಿಗೆ ಹಾಗೆ ತುಂಬಾ ಭಾವುಕರು. ಅದರಲ್ಲೂ ಸಂಗೀತಕ್ಕೂ ನಮಗೂ, ಜೀವನಾನುಭಕ್ಕೂ ಅವಿನಾಭಾವ ಸಂಬಂಧ, ಕೇಳುಗರ ಕಿವಿಗೆ ಅಮೃತಧಾರೆ ಎರೆದ ಗಂಧರ್ವ ಗಾಯಕಿ , ಸಂಗೀತ ಕ್ಷೇತ್ರದ ದಂತಕಥೆ ಭಾರತದ ರತ್ನ ಮರೆಯಾಗಿದೆ. ಆದರೆ ಅವರು ಅಷ್ಟು ವರ್ಷ ಹರಿಸಿದ  ಸಂಗೀತದ ರಸದೌತಣ ಅಮರವಾಗಿದೆ. ಪ್ರತೀ ಪದವನ್ನೂ, ಭಾಷೆಯನ್ನು, ರಾಗವನ್ನು ಪಳಗಿಸಿಕೊಂಡು ಅಲ್ಲಲ್ಲ ಅರಗಿಸಿಕೊಂಡು ಇಡೀ ಜಗತ್ತಿನ ರಸಿಕರಿಗೆ ತನ್ನ ಗಾಯನದಿಂದ ಮೋಡಿ ಮಾಡಿದ ಸಂಗೀತ ಲೋಕದ ಸಾಮ್ರಾಜ್ಞೆ ಲತಾಜಿ ಅವರಿಗೆ ಹೃನ್ಮನದ ನುಡಿ ನಮನ.

S.D.ಬರ್ಮನಿಂದ A.R.ರೆಹಮಾನ್ ವರೆಗೆ ಮಧುಬಾಲರಿಂದ ಮಾಧುರಿಯವರೆಗೆ ನಾಲ್ಕು ಪೀಳಿಗೆಗಳ ಕಲಾವಿದರಿಗೂ ಬೇಕಾದ ಅವರ್ಣನೀಯ ವ್ಯಕ್ತಿತ್ವ. ಆಯೆಗಾ ಆನೆವಾಲಾ ಇಂದ, ಮಿಲೌ ಸುರ್ ಮೇರಾ ತುವ್ಯಾರಾವರೆಗೆ, ವೈಷ್ಣವ ಜನತೊ ಇಂದ ವಂದೇ ಮಾತರಂ ವರೆಗೂ. ಅಬ್ಬಾಬ್ಬಾ ಅದೆಷ್ಟು ಬಗೆಯ ಸಂಗೀತದ ಪ್ರಕಾರಗಳಿವೆಯೊ ಅಷ್ಟು ರೀತಿಯಲ್ಲಿ ಹಾಡಿದ ಕೋಗಿಲೆ. ಸಿನಿಮಾ ಸಂಗೀತ, ಭಕ್ತಿ ಸಂಗೀತ, ಗಜಲ್ಸ್, ಭಜನ್ಸ್ , ಲಾವಣಿ ಶಾಸ್ತ್ರೀಯ , ಡಿಸ್ಕೋ , ಪಾಪ್ ಏನೆಲ್ಲಾ ವೈವಿಧ್ಯತೆ!

ಈ ಮಹಾನ್ ಗಾಯಕಿ ಜನಿಸಿದ್ದೆಲ್ಲಿ? ಇವರಿಗೆ ಜನ್ಮ ನೀಡಿದ ಪುಣ್ಯಾತ್ಮ ತಂದೆ ತಾಯಿ ಯಾರು? . ಮಧ್ಯಪ್ರದೇಶದ ಇದೋರ್ ನಲ್ಲಿ 28ನೇ ಸೆಪ್ಟೆಂಬರ್ 1920ರಲ್ಲಿ ಸಂಗೀತ ಲೋಕದ ದೃವತಾರೆ ಲತಾ ಜನನ. ರಂಗಭೂಮಿಯ ನಟ, ಸಂಗೀತಗಾರ ದೀನನಾಥ ಮಂಗೇಶ್ಕರ್, ಸೇವಂತಿಯರ ಪುತ್ರಿ, ಹೇಮಾಳಿಂದ ಲತಾ ಆಗಿದ್ದು ತಂದೆಯವರ ಒಂದು ನಾಟಕದಿಂದ “ ಭವ, ಬಂಧನ ನಾಟಕ”ದ ಪಾತ್ರ ವಹಿಸಲು ಲತರಾ ತಂದೆಗೆ ಬಹುಪ್ರಿಯ ಹಾಗಾಗಿ “ಲತಾ” ನಾಮಕರಣವಾಯ್ತು , ಮೀನಾ, ಆಶಾ, ಉಷಾ ಮತ್ತು ಹೃದಯನಾಥ್ ಅವರಿಗೆಲ್ಲ ಹಿರಿಯಕ್ಕ ಲತಾರವರು, 5ವರ್ಷದಲ್ಲೇ ವೇದಿಕೆಯಲ್ಲಿ ಆರಂಭವಾಗಿತ್ತು ಪುಟ್ಟ ಲತಾ ವೃತ್ತಿ ಜೀವನ , ಮರಾಠಿ ನಾಟಕಗಳ ಮೂಲಕ ಶಾಲೆಗೆ ಹೋದ ಮೊದಲ ದಿನವೇ ಎಲ್ಲರಿಗೂ ಹಾಡು ಹೇಳಿಕೊಟ್ಟ ಅನುಭವವಾಗಿತ್ತು, ತಂಗಿ ಆಶಾಳನ್ನು ಜೊತೆಯಲ್ಲಿ ಕೃದೊಯದ್ದಕ್ಕೆ ಶಿಕ್ಷೆಯೂ ಆಗಿತ್ತು. 13ನೇ ವರ್ಷದಲ್ಲಿ ತಂದೆ ವಿಧಿವಶರಾಗಿ ಕುಟುಂಬದ ಜವಾಬ್ದಾರಿ ಪೂರ್ತಿ ಲತಾ ಮೇಲೆ ಬಿತ್ತು. ತಂದೆಯ ಸ್ನೇಹಿತರಿಂದ ಸಹಾಯ ಪಡೆದು 1942ರಲ್ಲಿ ಮರಾಠಿ ಚಿತ್ರದಲ್ಲಿ ಮೊದಲಬಾರಿಗೆ ನಟನೆ ಆರಂಭ. 1945ರಲ್ಲ್ಲಿ ಮುಂಬೈಗೆ ಬಂದು ಉಸ್ತಾದ್ ಅಮಾನತ್ ಅಲಿ ಖಾನ್ ಬಳಿ ಹಿಂದೂಸ್ತಾನಿ ಕಲಿಕೆ.
1948ರಲ್ಲಿ ಸಂಗೀತ ನಿರ್ದೇಶಕರೊಬ್ಬರು ಲತಾಜಿ ಕಂಠ ತುಂಬಾ ಕೀರಲು ಅಂತ ವಾಪಸ್ ಕಳಿಸ್ದರಂತೆ. ಇದೇ ದನಿ ಜಗತ್ತಿಗೆ ಮೋಡಿ ಮಾಡಿರೋದು ಈಗ ಇತಿಹಾಸ ಸಂಗೀತ ನಿರ್ದೇಶಕ ಗುಲಾಲ್ ಹೈದರ್ ಅವರ ಮಾರ್ಗದರ್ಶನದಲ್ಲಿ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದರು, ಮರಾಠಿ ಉರ್ದು ಸೇರಿದ ಉಚ್ಚಾರಣೆ ಅಂತ ಅನೇಕರು ಹೀಗೆಳಿದ್ದು ಉಂಟು ನಂತರ ಉರ್ದು ಕಲಿತು ಅವರೆಲ್ಲರ ಬಾಯಿ ಮುಚ್ಚಿಸಿದರು. 1949 ರಲ್ಲಿ ಮಹಲ್ ಚಿತ್ರದ ನಾಯಕಿ ಮಾಧುಬಾಲ, ಖೇಮ್ ಚಂದ್ ಪ್ರಕಾಶ್ ಅವರ ಸಂಗೀತ ನಿರ್ದೇಶನದಲ್ಲಿ “ಆಯೇಗಾ ಆನೆವಾಲ” ಹಾಡಿದರು, ಅದಾದ ನಂತರ ಹಿಂತಿರುಗಿ ನೋಡಲೇ ಇಲ್ಲ. ಎಲ್ಲಾ ದಿಗ್ಗಜ ಸಂಯೋಜಕರೊಂದಿಗೆ ಕೆಲಸ ಮಾಡಿದ್ದ ಲತಾ ಅವರು 36 ಭಾಷೆಗಳಲ್ಲಿ ಹಾಡಿದ್ದಾರೆ. 1947 ರಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರಕ್ಕಾಗಿ ಕನ್ನಡದಲ್ಲಿ ಒಂದು ಹಾಡನ್ನೂ ಹಾಡಿದ್ದಾರೆ. ಸಂಗೀತ ಲೋಕದಲ್ಲಿ ಪ್ರಜ್ವಲಿಸುತ್ತಿದ್ದ ಲತಾಜೀಗೆ ಒಮ್ಮೆ ವಿಷಪ್ರಾಶನವಾಗಿತ್ತು 1962ರಲ್ಲಿ ಮೂರು ದಿನ ಪ್ರಜ್ಞೆ ಇರಲಿಲ್ಲ ನಂತರ ಮೂರು ತಿಂಗಳ ವಿಶ್ರಾಂತಿ ನಂತರ ಬಹಳ ಜಾಗರೂಕತೆ ವಹಿಸಬೇಕಾಗಿತ್ತು.
1963ರ ಜನವರಿ 27ರಂದು ಲತಾಜಿ ಹಾಡಿದ “ಏ ಮೇರೆ ವತನ್ ಕೆ ಲೋಗೊ” ಇವತ್ತಿಗೂ ಎಲ್ಲರ ಹೃದಯದಲ್ಲಿ ದೇಶಪ್ರೇಮ ಉಕ್ಕಿ ಸುತ್ತಲೇ ಇದೆ. ಎಲ್ಲಾ ಗಾಯಕರ ಜೊತೆಯಲ್ಲಿ ಹಾಡಿದ್ದಾರೆ ಲತಾಜಿ, ಮುಖೇಶ್ , ಮನ್ನಾಡೆ,  ಉಪೇಂದ್ರ ಕಪೂರ್, ಎಸ್ಪಿಬಿ ಕಿಶೋರ್ ಕುಮಾರ್ ಉದಿತ್ ನಾರಾಯಣ್ ಹೀಗೆ ಅನೇಕರ ಜೊತೆ ಹಾಡಿದ್ದಾರೆ.

ಆನಂದ ಘನ ಹೆಸರಿನಲ್ಲಿ 5 ಚಿತ್ರಗಳಿಗೆ ಮರಾಠಿ ಭಾಷೆಯಲ್ಲಿ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ ಅವರ ಸಂಗೀತ ಸಂಯೋಜನೆಗೆ ಮಹಾರಾಷ್ಟ್ರ ಸರ್ಕಾರದ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಕೂಡ ಪಡೆದಿದ್ದಾರೆ.

1970 ರಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ದಾಖಲೆಯಾಗಿತ್ತು ಮೂವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ನಮಗಾಗಿ ಕೊಟ್ಟು ಹೋಗಿದ್ದಾರೆ.
ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ ಫಲ್ಕೆ ಪ್ರಶಸ್ತಿ, 4 ನ್ಯಾಷನಲ್ ಫಿಲಂ ಪ್ರಶಸ್ತಿ, 12 ಬಂಗಾಳಿ ಪ್ರಶಸ್ತಿ , ಹಾಗೂ ಭಾರತ ರತ್ನ ಪ್ರಶಸ್ತಿ ಕೋಗಿಲೆಯನ್ನು ಅರಸಿ ಬಂದಿದೆ. 2001 ರಲ್ಲಿ ಭಾರತ ರತ್ನ ಪಡೆದ ಲತಾಜಿ “ಸ್ವರ್ಣ ಅಂಜಲಿ” ಹೆಸರಿನಲ್ಲಿ ಆಭರಣ ವಿನ್ಯಾಸ ಕೂಡ ಮಾಡಿದ್ದಾರೆ. ತಂದೆ ಹೆಸರಿನಲ್ಲಿ ಆಸ್ಪತ್ರೆ ತೆರೆದು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಸಮರ್ಪಣೆ, ತ್ಯಾಗ, ನಿಷ್ಠೆ, ಶ್ರದ್ಧೆ, ನಿರಂತರ ಸಾಧನೆಯ ಚೆಲುವೆ ನಮ್ಮ ಲತಾಜಿ. ಕೇಳುಗರ ಹೃದಯ ಸಿಂಹಾಸನದಲ್ಲಿ ಸದಾ ರಾರಾಜಿಸುವ ಸಂಗೀತ ಸರಸ್ವತಿಗೆ ಭಾವಪೂರ್ಣ ಶ್ರದ್ಧಾಂಜಲಿ.

READ ALSO

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

  • email
  • facebook
  • twitter
  • google+
  • WhatsApp
Tags: Lata mangeshkarmusic

Related Posts

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
Blog

ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!

September 6, 2022
Blog

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ

August 15, 2022
ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
Blog

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

August 15, 2022
ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
Blog

ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ

August 14, 2022
Blog

Amrit Mahotsav – Over 200 tons sea coast garbage removed in 20 days

July 29, 2022
Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Next Post
RSS Sarasanghachalak Dr Mohan Bhagwat paid tributes to Usha Tayi Chati at Hubballi

ಪರಿಸರ - ನಮ್ಮ ದೃಷ್ಟಿಕೋನ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

Day-88: Bharat Parikrama Yatra at Vadeyara Hobli

Day-88: Bharat Parikrama Yatra at Vadeyara Hobli

November 4, 2012
धर्म परिवर्तन का मुद्दा जिस प्रकार मीडीया में चल रहा है, यह उचित नहीं है : मनमोहनजी वैध

धर्म परिवर्तन का मुद्दा जिस प्रकार मीडीया में चल रहा है, यह उचित नहीं है : मनमोहनजी वैध

January 7, 2015
‘Common Man has potentiality to bring Social Transformation’: RSS Chief Bhagwat at Alappuzha

‘Common Man has potentiality to bring Social Transformation’: RSS Chief Bhagwat at Alappuzha

September 25, 2012
ಸಾರಸ್ವತ ಲೋಕದ ಉಜ್ವಲ ನಕ್ಷತ್ರ: ನಾಡೋಜ ಎಸ್.ಆರ್. ರಾಮಸ್ವಾಮಿ

ಸಾರಸ್ವತ ಲೋಕದ ಉಜ್ವಲ ನಕ್ಷತ್ರ: ನಾಡೋಜ ಎಸ್.ಆರ್. ರಾಮಸ್ವಾಮಿ

March 10, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In