• Samvada
Thursday, May 26, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest Hindu Samajotsav

Malleshwaram, Bangalore

Vishwa Samvada Kendra by Vishwa Samvada Kendra
December 13, 2010
in Hindu Samajotsav
247
0
Malleshwaram, Bangalore
491
SHARES
1.4k
VIEWS
Share on FacebookShare on Twitter

It was a saffron flow in Garden City today evening as thousands of  people gathered to witness a mammoth Hindu Samajotasv at Malleshwaram play ground organized by Hanumath Shakti Jagaran Samiti, an Unit of RSS-VHP.

Addressing this massive audience Senoior RSS functionary Su. Ramana condemned the conspiracy of coining the term Hindu terrorism by few short sighted politicians. He blamed the Congress lead UPA government for the way it is dealing with Kashmir imbroglio. He strongly criticised  the home minister Chidhambaram’s comments regarding saffron terrorism. He urged the government to pass a bill which enables the construction of Ram Mandir at Ayodhya at the earliest.

READ ALSO

Mangalore

MANGALORE Samajotsav Office Inaugurated

“Like how Jhambhavantha had to make Hanumantha to realize his strength and power, it is time we Indians also know our strength to save our Dharma”,  said Putthige Mutt Suganendra Thirtha Swamiji. He was addressing a massive gathering , “Hindu Samajotsav”, of nine thousand people at Malleswaram ground today, at 4 pm. He also told that Hindu Society should be well prepared for both internal and external challenges.

Senior RSS functionary Su Ramanna addressing massive audience

Shri Sarpabushana Swamiji  warned people of non-Hindu faith for commenting on Hindu beliefs, and explained them as every much scientific.

Shri Malaya Shanthamuni Shivacharya Mahaswamy was of the view that the practice of the dharma means being Swadeshi and  practicing Swa Dharma.

Shri Mudhusudhanandha Swamiji gave the oath to the audience for dedicating themselves for the society.

Ramananda Swamiji of Geetha Mandira, Vidyaranyapura, Shripada Bhakthi Vedhantha Dhamdi Maharaja Swamiji of Ranganatha Goudeya Mutt, Shri Ramanujacharya Mahantha Swamiji of Rama Devara Mutt, Melukotte, Shri Narayanandha Saraswathi Swamiji of Shri Guru Gnana Kendra, Vijayanagar and Padmapadhacharya Swamiji of Shankar Mutt, Hoskote blessed the gathering.

Shri SuryaPrakash, eminent lawyer welcomed the gathering. Dr. Jai Prakash Coordinated the whole program.

There was 2 attractive procession before the Hindu Samajotsav programme, which enlightened the streets of Malleshwaram and drawn attractions of citizens. Slogans to imbue patriotic concerns were common during the procession.

“ಹಿಂದೂ ಬಿದ್ದರೆ ಕುಂಭಕರ್ಣನಂತೆ, ಎದ್ದರೆ ಆಂಜನೇಯನಂತೆ”: ಸು.ರಾಮಣ್ಣ

ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಹಿಂದೂಗಳಲ್ಲಿ ಹನುಮತ್ ಶಕ್ತಿಯ ಆವಾಹನೆಯಾಗಬೇಕಿದೆ ಎಂದು ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸು.ರಾಮಣ್ಣ ಆಶಿಸಿದರು. ಹನುಮತ್ ಶಕ್ತಿ ಜಾಗರಣ ಸಮಿತಿವತಿಯಿಂದ ಭಾನುವಾರ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಪಾಲ್ಗೊಂಡು ಅವರು ಮುಖ್ಯ ಭಾಷಣ ಮಾಡಿದರು. ಆಂದೋಲನದ ರೂಪದಲ್ಲಿ ಹಿಂದೂ ಸಮಾಜೋತ್ಸವ ಸದಾಕಾಲ ನಡೆಯಬೇಕಿದೆ ಎಂದ ಅವರು, ದುಷ್ಟರನ್ನು ಆಹುತಿ ಹಾಕಲು ಹಿಂದೂ ಸಮಾಜ ಸಿದಟಛಿವಾಗಬೇಕಿದೆ. ಈ ಮೂಲಕ ದುಷ್ಟರ ನಿಗ್ರಹ ಹಾಗೂ ಒಳ್ಳೆ ಸಂಗತಿಗಳ ಅನುಗ್ರಹವಾಗಲಿ ಎಂದು ಕರೆ ನೀಡಿದರು. ಮೂರು ರಾಷ್ಟ್ರೀಯ ಪ್ರಶ್ನೆಗಳಿಗೆ ಶಾಶ್ವತ ಉತ್ತರ ದೊರಕಬೇಕಿದೆ ಎಂದು ಆಗ್ರಹಿಸಿದ ಅವರು, ರಾಷ್ಟ್ರೀಯ ತೀರ್ಥಕ್ಷೇತ್ರವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ಜಾತ್ಯತೀತರಿಂದ ನಡೆಯುತ್ತಿರುವ ಹಿಂದೂ ಯತಿವರ್ಯರ ಅಪಮಾನ ತಪ್ಪಬೇಕು ಹಾಗೂ ಹಿಂದೂ ಸಮಾಜವನ್ನು ಅಪಮಾನಿಸಲು ಹುಟ್ಟು ಹಾಕಲಾಗಿರುವ ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಅಳಿಸಬೇಕು ಎಂದು ಆಗ್ರಹಿಸಿದರು. ಹಿಂದೂ ಬಿದ್ದರೆ ಕುಂಭಕರ್ಣನಂತೆ, ಎದ್ದರೆ ಆಂಜನೇಯನಂತೆ ಎಂದು ವಿಶ್ಲೇಷಿಸಿದ ರಾಮಣ್ಣ ಅವರು, ಮಲಗಿರುವವರನ್ನು ಎಬ್ಬಿಸುವ ಜವಾಬ್ದಾರಿ ಎದ್ದಿರುವ ಹಿಂದೂಗಳದ್ದಾಗಿದೆ ಎಂದು ಕಿವಿಮಾತು ಹೇಳಿದರು.

ಭಾರತ ಸ್ವರಾಜ್ಯವಾಗಿ ೬೦ ವರ್ಷಗಳೇ ಕಳೆದರೂ ಇನ್ನೂ ಕಾಶ್ಮೀರ ನಮ್ಮದು ಎಂದು ಹೇಳಬೇಕಾದ ದುರವಸ್ಥೆಯಲ್ಲಿದ್ದೇವೆ. ಇದು ತಪ್ಪಬೇಕು ಎಂದರು. ಕಾಶ್ಮೀರ ಸಮಸ್ಯೆಗೆ ಮೂಲ ಕಾರಣ ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಎಂದು ದೂಷಿಸಿದ ಅವರು, ಸುರಾಜ್ಯದ ವೇಳೆ ದೇಶದ ೫೦೦ಕ್ಕೂ ಹೆಚ್ಚು ಸಂಸ್ಥಾನಗಳು ಸ್ವಯಂ ಪ್ರೇರಿತವಾಗಿ ದೇಶದೊಂದಿಗೆ ವೀಲಿನಗೊಂಡವು. ಆದರೆ ಬ್ರಿಟೀಷರ ಕುತಂತ್ರದಿಂದ ಜುನಾಘಡ, ಜೋಧ್ ಪುರ್, ಹೈದರಾಬಾದ್ ಹಾಗೂ ಕಾಶ್ಮೀರಗಳು ವೀಲಿನಗೊಳ್ಳದೆ ಸಮಸ್ಯೆಯಾಗಿ ಉಳಿದವು. ಗೃಹ ಮಂತ್ರಿ ಸರ್ದಾರ್ ಪಟೇಲರ ದಿಟ್ಟತನದಿಂದ ಜುನಾಘಡ ಮತ್ತು ಜೋಧ್‌ಪುರ ದೇಶದಲ್ಲಿ ವಿಲೀನವಾದವು, ತಂಟೆ ತೆಗೆದ ಹೈದ್ರಾಬಾದ್ ನಿಜಾಮನಿಗೆ ಪ್ರಧಾನಿ ನೆಹರೂಗೆ ತಿಳಿಸದಯೇ ಪೊಲೀಸ್ ಬಲ ಬಳಸಿ ಹೈದ್ರಾಬಾದ್ ಸಂಸ್ಥಾನವನ್ನು ದೇಶದಲ್ಲಿ ವಿಲೀನ ಮಾಡಿದರು.

ಕಾಶ್ಮೀರ ಸಂಸ್ಥಾನದ ರಾಜ ಹರಿಸಿಂಗ್‌ರ ಬಳಿಗೆ ಸರ್ದಾರ್ ಪಟೇಲ್ ಆರೆಸ್ಸೆಸ್‌ನ ದ್ವಿತೀಯ ಸರಸಂಘ ಚಾಲಕ ಗುರೂಜಿಯವರನ್ನು ವಿಶೇಷ ವಿಮಾನದ ಮೂಲಕ ಕಾಶ್ಮೀರಕ್ಕೆ ಕಳುಹಿಸಿ ಮನವೊಲಿಕೆ ಮಾಡಿದ್ದರು. ಢೊಂಗೀ ಜಾತ್ಯತೀತವಾದಿಗಳು ಈ ವಿಷಯವನ್ನು ಮುಚ್ಚಿಟ್ಟಿದ್ದಾರೆ ಎಂದು ರಾಮಣ್ಣ ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆಗೆ ಕಾಶ್ಮೀರದ ಮೇಲೆ ಪಾಕ್ ಆಕ್ರಮಣ ಶುರುವಾಗಿತ್ತು. ಭಾರತದ ಸೈನಿಕರು ಕಾಶ್ಮೀರಕ್ಕೆ ತೆರಳಲು ಸಂಘದ ಸ್ವಯಂಸೇವಕರು ನೆರವಾದರು.ಆದರೆ, ಭಾರತದ ಸೈನಿಕರು ಇನ್ನೇನು ಕಾಶ್ಮೀರವನ್ನು ತನ್ನದಾಗಿಸಿಕೊಂಡರು ಎನ್ನುವಷ್ಟರಲ್ಲಿ ಜಾತ್ಯತೀತತೆಯ ಸುಂದರ ಪುಷ್ಟದ ಕನಸು ಕಾಣುತ್ತಿದ್ದ ನೆಹರು, ಯುದಟಛಿ ನಿಲ್ಲಿಸಿ ಇಂದಗೂ ಕಾಶ್ಮೀರದ ಐದನೇ ಒಂದು ಭಾಗ ಪಾಕ್ ವಶದಲ್ಲಿರಲು ಕಾರಣರಾದರಲ್ಲದೆ, ದೇಶದ ಆಂತರಿಕ ಸಮಸ್ಯೆಯಾದ ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ದು ಅಂತಾರಾಷ್ಟ್ರೀಯ ಸ್ವರೂಪ ಪಡೆಯಲು ಕಾರಣರಾದರು ಎಂದು ಜರಿದರು.

ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ ದುರ್ಬಲ ಮತ್ತು ಹೇಡಿತನದ ರಾಜನೀತಿ ಅನುಸರಿಸುತ್ತಿದೆ ಎಂದು ರಾಮಣ್ಣ ಇದೇ ಸಂದರ್ಭದಲ್ಲಿ ಕಿಡಿಕಾರಿದರು. ಕಾಶ್ಮೀರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವ ಪ್ರಧಾನಿ, ದಂಗೆಕೋರರ ಜತೆ ಮಾತುಕತೆಗೆ ಕುಳಿತು ಶಿಖಂಡಿ ರಾಜನೀತಿ ಅನುಸರಿಸುತ್ತಿದ್ದಾರೆ ಎಂದು ಜರಿದರು. ದೇಶದ ವಿರುದಟಛಿ ಮಾತನಾಡುವ ತಥಾಕಥಿಕ ಬುದಿಟಛಿಜೀವಿ ಅರುಂಧತಿ ರಾಯ್ ಭಾರತದಲ್ಲೇ ಇರಬೇಕಾದರೆ ಜೈಲಿಗೆ ಹಾಕಬೇಕು, ಇಲ್ಲವೆ ಪಾಕಿಸ್ಥಾನಕ್ಕೆ ಓಡಿಸಬೇಕು ಎಂದರು. ಕಾಶ್ಮೀರ ಭಾರತದ ಅಂಗ ಎಂದು ರಾಜ ಹರಿಸಿಂಗ್ ಸಹಿ ಹಾಕಿದ್ದಾರೆ. ಹೀಗಾಗಿ ಕಾಶ್ಮೀರ ನಮ್ಮದು ಎಂದು ಸಂಸತ್‌ನಲ್ಲಿ ನಿರ್ಣಯ ಅಂಗೀಕರಿಸುವ ಧೈರ್ಯವನ್ನು ಕೇಂದ್ರ ಸರ್ಕಾರ ತಾಳಬೇಕು. ಜತೆಗೆ ೩೭೧ನೇ ವಿಧಿಯನ್ನು ತೆಗೆದು ವಿಶೇಷ ಸವಲತ್ತು ನಿಲ್ಲಿಸಿದಲ್ಲಿ ಕಾಶ್ಮೀರ ಸರಿದಾರಿಗೆ ಬರಲಿದೆ ಎಂದರು. ಶ್ರೀ ರಾಮನ ಕುರಿತ ಹಿಂದೂಗಳ ಶ್ರದೆಟಛಿಯನ್ನು ಪ್ರಶ್ನಿಸುವ ಶ್ರದೆಟಛಿಯಿಲ್ಲದ ಬುದಿಟಛಿ ಜೀವಿಗಳು ದೇಶಕ್ಕೆ ಅಪಾಯಕಾರಿ ಎಂದು ರಾಮಣ್ಣ ಹರಿಹಾಯ್ದರು.

ಭಾರತ ದೇಶ ರಾವಣನ ಸಂತಾನವಲ್ಲ.ರಾಮನ ಸಂತಾನ. ಹೀಗಾಗಿ ರಾವಣನನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಅಲಹಾಬಾದ್ ಹೈಕೋರ್ಟ್ ದೇಶದ ಜನರ ಶದೆಟಛಿ ಗುರುತಿಸಿದೆ. ಜನರ ನಂಬಿಕೆ ಮೇಲೆ ಇದೀಗ ನ್ಯಾಯಾಲಯದ ಮುದ್ರೆಯೂ ಬಿದ್ದಿದೆ. ಹೀಗಾಗಿ ಈ ಬಗ್ಗೆ ವಿರೋಧ ವ್ಯಕ್ತಪಡಿಸುವ ಜಾತ್ಯತೀತವಾದಿಗಳಿಗೆ ಧಿಕ್ಕಾರವಿರಲಿ ಎಂದರು.ಹಿಂದಿ ಬಾರದ ಕೇಂದ್ರ ಗೃಹ ಮಂತ್ರಿ ಚಿದಂಬಂರಂ ಕೇಸರಿ ಭಯೋತ್ಪಾದನೆ ಎಂಬ ಹೊಸ ಪದ ಹುಟ್ಟು ಹಾಕಿದ್ದಾರೆ. ಆದರೆ, ದೇಶದಲ್ಲಿ ಈವರೆಗೆ ನಡೆದದ್ದು ಹಸಿರು ಭಯೋತ್ಪಾದನೆ ಎಂದು ಹೇಳುವ ಧೈರ್ಯ ಅವರಿಗಿದೆಯೇ ಎಂದು ಪ್ರಶ್ನಿಸಿದರು. ಕೇಸರಿ ಭಯೋತ್ಪಾದನೆ ಎಂಬ ಹೇಳಿಕೆ ವಿರುದಟಛಿ ನ.೧೧ರಂದು ದೇಶವ್ಯಾಪಿ ನಡೆದ ಪ್ರತಿಭಟನೆಯಿಂದ ಆರೆಸ್ಸೆಸ್‌ನ ಶಕ್ತಿ ಕೇಂದ್ರಕ್ಕೆ ಪರಿಚಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ತೆಪ್ಪಗಾಗಿದೆ ಎಂದು ಛೇಡಿಸಿದರು.

ಹಿಂದುಗಳು ಜಾಗೃತರಾಗುವುದೇ ಪರಿಹಾರ

ಹೆಬ್ಬಾವಿನಂತೆ ಮಲಗಿರುವ ಹಿಂದೂ ಸಮಾಜ ಎದ್ದು ಬುಸುಗುಟ್ಟಿದರೂ ಸಾಕು ಸಮಸ್ಯೆಗಳು ತಾನೇ ತಾನಾಗಿ ಪಲಾಯನ ಮಾಡುತ್ತವೆ ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಹನುಮತ್ ಶಕ್ತಿ ಜಾಗರಣ ಸಮಿತಿ ವತಿಯಿಂದ ಭಾನುವಾರ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಹಿಂದು ಸಮಾಜೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಹಿಂದು ಸಮಾಜ ಹೆಬ್ಬಾವಿನ ರೀತಿ ಮಲಗಿದೆ. ಹಾಗಾಗಿಯೇ ಸಣ್ಣ ಪುಟ್ಟವರೆಲ್ಲ ಕಲ್ಲು, ಕಸ ಬಿಸಾಡಿ ಕೆಣಕುತ್ತಿದ್ದಾರೆ, ಹೀಗಾಗಿ ಹಿಂದೂ ಜಾಗೃತನಾಗಬೇಕಿದೆ. ಆಗ ಮಾತ್ರ ಉಳಿದವರು ಪಲಾಯನವಾದ ಅನುಸರಿಸಲಿದ್ದಾರೆ ಎಂದರು. ರೋಗಾಣುವಿನಿಂದ ಮನುಷ್ಯನಿಗೆ ರೋಗ ಬರುವು ದಿಲ್ಲ. ಪ್ರತಿರೋಧ ಶಕ್ತಿ ಕಳೆದುಕೊಂಡಾಗ ಮಾತ್ರ ರೋಗ ಬರುತ್ತದೆ. ಆಂತೆಯೇ ಹಿಂದು ಸಮಾಜ ಪ್ರತಿರೋಧ ಶಕ್ತಿ ಕಳೆದುಕೊಂಡಿರುವುದರಿಂದ ಅನ್ಯಾಯ, ಅನಿಷ್ಟಗಳುಎದುರಾಗಿವೆ. ಇದಕ್ಕೆ ಬೇರೆ ಸಮಾಜವನ್ನು ದೂಷಿಸಿ ಪ್ರಯೋಜನವಿಲ್ಲ. ಹಿಂದುಗಳು ಜಾಗೃತರಾಗುವುದೇ ಇದಕ್ಕೆಲ್ಲ ಪರಿಹಾರ ಎಂದರು. ಹಿಂದು ಸಮಾಜ ಕಟ್ಟಿ ಹಾಕಿದ ಆಂಜನೇಯ ರೀತಿ ಇದೆ. ಆಂಜನೇಯನ ಬಾಲಕ್ಕೆ ಬೆಂಕಿ ಇಟ್ಟವರಿಗೆ ಮುಳುವಾದಂತೆ ಹಿಂದು ಸಮಾಜವನ್ನು ಕೆಣಕಿದವರಿಗೂ ಆದೇ ಗತಿ ಕಾದಿದೆ ಎಂದು ಹೇಳಿದರು. ಬಾಲಾಂಜನೇಯ, ತಟಸ್ಥ ಆಂಜನೇಯ ಹೀಗೆ ನಾನಾರೂಪದದಲ್ಲಿದೆ ಆದರೆ, ಸೀತಾನ್ವೇಷಣೆ ಮಾಡಿದ ತೃತೀಯ ಆಂಜನೇಯನ ಶಕ್ತಿ ಹಿಂದೂಗಳಲ್ಲಿ ಜಾಗೃತಬೇಕಿದೆ. ಹಿಂದು ಸಮಾಜಕ್ಕೆ ಆನ್ಯಾಯವಾದಾಗ ಕೈಕಟ್ಟಿ ಸಂಬಂಧವಿಲ್ಲದವರಂತೆ ದೂರ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದ್ದು ಇದು ತಪ್ಪ ಬೇಕಿದೆ ಎಂದರು.

ಪುತ್ತಿಗೇ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ,ಶಿವಗಂಗೆ ಮೇಲಣ ಗವಿ ಮಠದ ಶ್ರೀಶಾಂತಮುನಿ ಸ್ವಾಮೀಜಿ,ಮೇಲುಕೋಟೆ ರಾಮದೇವರ ಮಠದ eನೇಂದ್ರ ಮಠದ ಶ್ರೀನಾರಾಯಣಾನಂದ ಸರಸ್ವತಿ ಸ್ವಾಮೀಜಿ,ಹೊಸಕೋಟೆ ಶಂಕರ ಮಠದ ಶ್ರೀಪದ್ಮಪಾದಾಚಾರ್ಯ, ಗೀತಾ ಮಂದಿರದ ಶ್ರೀರಮಣಾನಂದ ಸ್ವಾಮೀಜಿ, ಸರ್ಪಭೂಷಣ ಮಠದ ಶ್ರೀಮಲ್ಲಿಕಾರ್ಜುನ ದೇವರು, ಓಂಕಾರ ಆಶ್ರಮದ ಶ್ರೀಮಧುಸೂದನಾಂದಪುರಿ ಸ್ವಾಮೀಜಿ ಹಾಗೂ ಶ್ರೀ ರಂಗನಾಥ ಗೌಡಿಯ ಮಠದ ಶ್ರೀ ಪಾದ ಭಕ್ತ ವೇದಾಂತ ದಂಡಿ ಮಹಾರಾಜ ಮೊದಲಾದವರು ಸಮಾಜೋತ್ಸವದಲ್ಲಿ ಉಪಸ್ಥಿತರಿದ್ದರು.

ಮುಗಿಲು ಮುಟ್ಟಿದ ಘೋಷಣೆ…

ಹಾರಾಡಿದ ಭಗವಾಧ್ವಜ… ಶಿಸ್ತು ಬದಟಛಿವಾಗಿ ಹರಿದು ಬಂದ ಕೇಸರಿ ಪಡೆ… ಇವು ಮಲ್ಲೇಶ್ವರಂನ ಹಿಂದು ಸಮಾಜೋತ್ಸವದಲ್ಲಿ ಕಂಡು ಬಂದ ದೃಶ್ಯಾವಳಿ.ಹನುಮತ್ ಶಕ್ತಿ ಜಾಗರಣ ಸಮಿತಿವತಿಯಿಂದ ಭಾನುವಾರ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಹಿಂದು ಸಮಾಜೋತ್ಸವದ ಹಿನ್ನೆಲೆಯಲ್ಲಿ ಶೇಷಾದ್ರಿಪುರಂನ ಜಕ್ಕರಾಯನ ಕೆರೆ ಆಟದ ಮೈದಾನದಿಂದ ಹಕ್ಕ-ಬುಕ್ಕ ಹಾಗೂ ಮಲ್ಲೇಶ್ವರಂನ ೧೮ನೇ ಕ್ರಾಸ್ ಆಟದ ಮೈದಾನದಿಂದ ಹೊರಟ ಬುದಟಛಿ-ಬಸವ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡ ಸಹಸ್ರಾರು ಹಿಂದುಗಳು ಎಲ್ಲಿಯೂ ಶಿಸ್ತು ಮಿರಲಿಲ್ಲ. ಹೀಗಾಗಿ ಸದಾ ಜನಜಂಗುಳಿಯಿಂದ ಕೂಡಿರುವ ಮಲ್ಲೇಶ್ವರಂನ ಸಂಪಿಗೆ ರಸ್ತೆ ಸೇರಿದಂತೆ ಆಸುಪಾಸಿನ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಹದಗೆಡದಿದ್ದುದು ಇಂದಿನ ವಿಶೇಷ. ಮಾತ್ರವಲ್ಲದೆ ಆರೆಸ್ಸೆಸ್‌ನ ಶಿಸ್ತು ಬದಟಛಿತೆಯನ್ನು ಶೋಭಾಯಾತ್ರೆ ಮೂಲಕ ಜನರಿಗೆ ಪರಿಚಯಿಸಿತು. ವಂದೇ ಮಾತರಂ, ಭಾರತ್ ಮಾತಾಕೀ ಜೈ, ನಾವೆಲ್ಲ ಒಂದು-ನಾವೆಲ್ಲ ಹಿಂದು ಮೊದಲಾದ ಘೋಷಣೆಗಳು ಶೋಭಾಯಾತ್ರೆ ವೇಳೆ ಮುಗಿಲು ಮುಟ್ಟಿದವು. ತಲೆಗೆ ಕೇಸರಿ ಪಟ್ಟಿ, ಪೇಟ ಧರಿಸಿ, ಕೈಯಲ್ಲಿ ಕೇಸರಿ ಧ್ವಜ ಹಿಡಿದಿದ್ದ ಸಹಸ್ರಾರು ಮಂದಿ ಮಹಿಳೆಯರು, ಮಕ್ಕಳೆನ್ನದೆ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಮಲ್ಲೇಶ್ವರಂ ಆಟದ ಮೈದಾನದಲ್ಲಿ ಶ್ರೀ ಹನುಮತ್ ಶಕ್ತಿ ಜಾಗರಣ ಯಜ್ಞ, ಪೂರ್ಣಾಹುತಿ ಬಳಿಕ ಪ್ರಸಾದ ವಿನಿಯೋಗ ನಡೆಯಿತು. ಸಹಸ್ರಾರು ಹಿಂದುಗಳು ಸೇರಿದ್ದ ಸಮಾಜೋತ್ಸವದಲ್ಲಿ ಉಳಿಸಲು ಬನ್ನಿ ದೇಶದ ಗಡಿ-ಕಟ್ಟಲು ಬನ್ನಿ ರಾಮನ ಗುಡಿ ಎಂಬ ಶೀರ್ಷಿಕೆಯ ವೇದಿಕೆಯಿಂದ ಹಲವಾರು ಸ್ವಾಮೀಜಿಗಳು, ಆರೆಸ್ಸೆಸ್‌ನ ಹಿರಿಯ ಪ್ರಚಾರಕ ಸು.ರಾಮಣ್ಣ ಮಾರ್ಗದರ್ಶನ ಮಾಡಿದರು. ಓಂಕಾರ ಆಶ್ರಮದ ಶ್ರೀ ಮಧುಸೂದನಾನಂದ ಸ್ವಾಮೀಜಿ ಸಂಕಲ್ಪ ಬೋಧನೆ ಮಾಡಿದರು.






  • email
  • facebook
  • twitter
  • google+
  • WhatsApp

Related Posts

Mangalore
Hindu Samajotsav

Mangalore

January 4, 2011
Mangalore Hindu Samjotsav Office Inauguration
Hindu Samajotsav

MANGALORE Samajotsav Office Inaugurated

December 25, 2010
BANTWALA
Hindu Samajotsav

BANTWALA

December 25, 2010
BELTHANGADY
Hindu Samajotsav

BELTHANGADY

December 25, 2010
Hindu Samajotsav

KATEEL

December 25, 2010
MOODABIDIRE
Hindu Samajotsav

MOODABIDIRE

December 25, 2010
Next Post
Shivamogga

Shivamogga

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 25, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

Day 1 ABPS, National RSS meet at Nagpur : Shakhas increasing year on year

Day 1 ABPS, National RSS meet at Nagpur : Shakhas increasing year on year

March 9, 2018
ನಾರದ ಜಯಂತಿ ನಿಮಿತ್ತದ  ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಂತೋಷ್ ತಮ್ಮಯ್ಯ ಹಾಗೂ ರೋಹಿತ್ ಚಕ್ರತೀರ್ಥಗೆ ಸನ್ಮಾನ

ನಾರದ ಜಯಂತಿ ನಿಮಿತ್ತದ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಸಂತೋಷ್ ತಮ್ಮಯ್ಯ ಹಾಗೂ ರೋಹಿತ್ ಚಕ್ರತೀರ್ಥಗೆ ಸನ್ಮಾನ

June 24, 2019
Ensuring no poor suffers of hunger: A peep into RSS Service activity in various parts of Karnataka

Ensuring no poor suffers of hunger: A peep into RSS Service activity in various parts of Karnataka

March 31, 2020
‘Charaiveti, the mantra which imbues journey of success’: RSS Sahasarakaryavaha Dattatreya Hosabale at Dr MK Sridhar’s felicitation prog

‘Charaiveti, the mantra which imbues journey of success’: RSS Sahasarakaryavaha Dattatreya Hosabale at Dr MK Sridhar’s felicitation prog

October 27, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Alapuzha – One arrested for provocative sloganeering during PFI rally
  • ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ
  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In