ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಮಟ್ಟದಕಬಡ್ಡಿ ಸ್ಪರ್ಧೆ 31.01.2016 ರಂದು ಬಂಟ್ವಾಳ ತಾಲೂಕಿನ ಕೊಡ್ಮಾಣ್ ನಲ್ಲಿ ನಡೆಯಿತು. ಕಬಡ್ಡಿ ಸ್ಪರ್ಧೆಯ ಉದ್ಘಾಟನೆಯನ್ನು ಬಂಟ್ವಾಳ ತಾಲೂಕಿನ ಮಾನ್ಯ ಸಂಘಚಾಲಕರಾದ ಶ್ರೀ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ನಡೆಸಿದರು. ವಿಭಾಗ ಸಹಾರ್ಯವಾಹ ಶ್ರೀ ನ. ಸೀತಾರಾಮ ಅವರು ಉದ್ಘಾಟನೆಯ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ಪರ್ಧಾಳುಗಳನ್ನುದ್ದೇಶಿಸಿ ಮಾತನಾಡಿದ ಅವರು ‘ಹೊಸತನ್ನು ಸ್ಥಾಪಿಸಿದ ಅನೇಕ ಸಂಘಟನೆಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದೆ.ಸಂಘ ಹೊಸತನವನ್ನುಸೃಷ್ಟಿಸುವುದಿಲ್ಲ. ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವ ಕಾರ್ಯಶೈಲಿ ನಮ್ಮದು.ಆದರೆ ಅದರಲ್ಲೇ ಹೊಸತನ ಇದೆ,ಅದು ನಿತ್ಯ ನೂತನ ಹಾಗೂ ನಿರಂತರ. ಸಂಘ ಕಾರ್ಯ ಹಿಂದುತ್ವ ಹಾಗೂ ಭಗವಾಧ್ವಜದ ಆಧಾರದಲ್ಲಿ ನಿಂತಿದೆ. ನಮ್ಮ ಕಾರ್ಯಪ್ರವೃತ್ತಿಯು ಎಂದೆಂದಿಗೂ ಅಭೇಧ್ಯವಾಗಿದೆ’ ಎಂದರು. “ಸಂಘದ ಶಾಖೆಗಳಲ್ಲಿ ಬೌಧ್ಧಿಕ ಚಿಂತನೆಗಳ ಜೊತೆಗೆ ಆಟಗಳಿಗೂ ಬಹಳ ಪ್ರಾಮುಖ್ಯತೆ ನೀಡಲಾಗಿದೆ. ಸಂಘದ ಶಾಖೆಗಳ ಮೂಲಕ ಕಬಡ್ಡಿ ಇಂದಿಗೂ ಉಳಿದಿದೆ.
ಬೌದ್ಧಿಕ ವಿಕಾಸದ ಜೊತೆಗೆ ಶಾರೀರಿಕ ಕ್ಷಮತೆಯೂ ನಮ್ಮಲ್ಲಿರಬೇಕು ಮತ್ತು ಅದನ್ನು ಸಮತೋಲನದಲ್ಲಿ ಇಡಬೇಕು. ಅದು ಸಂಘದ ಶಾಖೆಯಲ್ಲಿ ನಡೆಯುವ ಕಬಡ್ಡಿಯಂತಹ ಆಟಗಳ ಮೂಲಕ ದೊರೆಯುತ್ತದೆ “ಎಂಬುದಾಗಿ ಹೇಳಿದರು.
ಉದ್ಘಾಟನೆ ಬಂಟ್ವಾಳ ತಾಲೂಕಿನ ಮಾನ್ಯ ಸಂಘಚಾಲಕರಾದ ಶ್ರೀ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ನಡೆಸುತ್ತಿರುವುದು
ಕಳೆದ ಸುಮಾರು ಎರಡು ತಿಂಗಳುಗಳಿಂದ ಸಂಘದ ತಾಲೂಕು ಮಟ್ಟ, ಜಿಲ್ಲಾ ಮಟ್ಟಗಳಲ್ಲಿ ಕ್ರಮವಾಗಿ ಕಬಡ್ಡಿ ಸ್ಪರ್ಧೆಗಳು ನಡೆದಿದ್ದವು.
ಇದರಲ್ಲಿ ಎಲ್ಲಾ ತಾಲೂಕುಗಳಿಂದ ಒಟ್ಟು 519 ತಂಡಗಳು ಭಾಗವಹಿಸಿದ್ದವು. ಇಲ್ಲಿ ನಡೆದ ವಿಭಾಗ ಮಟ್ಟದ ಕಬಡ್ಡಿ ಸ್ಪರ್ಧೆಯ ತರುಣ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ಜಿಲ್ಲೆಯ ಮಹಾದೇವಿ ಶಾಖೆ,ಕಬಕ ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲೆಯ ಬಗಂಬಿಲೇಶ್ವರ ಶಾಖೆ,ಪಡೆಯಿತು.
ಹಾಗೂ ಬಾಲಕರ ವಿಭಾಗದಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲೆಯ ಬೇರಿಕೆ ಶಾಖೆ,ಪ್ರಥಮ ಸ್ಥಾನ ಪಡೆದರೆ ದ್ವಿತೀಯಸ್ಥಾನವನ್ನು ಪುತ್ತೂರು ಜಿಲ್ಲೆಯ ವ್ಯಾಘ್ರೇಶ್ವರಿ ಶಾಖೆ, ತೇವುಕಾಡು ಪಡೆದುಕೊಂಡಿತು. ಕಬಡ್ಡಿ ಸ್ಪರ್ಧೆಯ ಸಮಾರೋಪ ಸಭೆಯಲ್ಲಿ ಬಂಟ್ವಾಳ ತಾಲೂಕಿನ ಮಾನ್ಯ ಸಂಘಚಾಲಕರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಹಾಗೂ ಮಾನ್ಯ ಪ್ರಾಂತ ಸಹಸಂಘಚಾಲಕ್ ಡಾ.ವಾಮನ ಶೆಣೈ, ಉಪಸ್ಥಿತರಿದ್ದರು. ಡಾ.ವಾಮನ ಶೆಣೈ, ಮಾನ್ಯ ಪ್ರಾಂತ ಸಹಸಂಘಚಾಲಕ್ ಅವರು ಕಬಡ್ಡಿ ಸ್ಪರ್ಧೆಯ ವಿಜೇತರಿಗೆ “ಮನೆ ಮನೆಗೆ ಜೋಳಿಗೆ ಪುಸ್ತಕ” ಎಂಬ ಸೇವಾ ಯೋಜನೆಯಡಿಯಲ್ಲಿ ಪುಸ್ತಕದ ಚೀಲಗಳನ್ನು ವಿತರಿಸಿದರು , ಈ ಮೂಲಕ ತಮ್ಮ ಗ್ರಾಮಗಳಲ್ಲಿ ಸಂಘದ ಸೇವಾಕಾರ್ಯವನ್ನು ಬೆಳೆಸಲು ಅವರು ಕರೆ ನೀಡಿದರು ಕಬಡ್ಡಿ ಸ್ಪರ್ಧೆಯ ನಿರ್ವಹಣೆಯನ್ನು ವಿಭಾಗ ಶಾರೀರಿಕ ಶಿಕ್ಷಣ ಪ್ರಮುಖ್ ಸತೀಶ್ ಕುತ್ಯಾರು ನಡೆಸಿದರು.