• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಬೆಂಗಳೂರು: ಆರೆಸ್ಸೆಸ್ ನ ಹಿರಿಯ ಪ್ರಚಾರಕ ನ. ಕೃಷ್ಣಪ್ಪ ನಿಧನ

Vishwa Samvada Kendra by Vishwa Samvada Kendra
August 10, 2015
in News Digest
255
1
Senior RSS Pracharak Na Krishnappa passes away in Bengaluru
501
SHARES
1.4k
VIEWS
Share on FacebookShare on Twitter

ಕೇಶವಕೃಪ, ಬೆಂಗಳೂರು, ಆಗಸ್ಟ್ 10, 2015: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ನ. ಕೃಷ್ಣಪ್ಪ (83 ವರ್ಷಗಳು) ಅವರು ಇಂದು ಬೆಳಿಗ್ಗೆ 10.55ಕ್ಕೆ ಬೆಂಗಳೂರಿನಲ್ಲಿರುವ ಆರೆಸ್ಸೆಸ್‌ನ ರಾಜ್ಯ ಕೇಂದ್ರ ಕಛೇರಿ ಕೇಶವಕೃಪದಲ್ಲಿ ಇಹಲೋಕ ತ್ಯಜಿಸಿದ್ದಾರೆ.

1954 ರಿಂದ 61 ವರ್ಷಗಳ ಕಾಲ ಸಂಘದ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದ ನ. ಕೃಷ್ಣಪ್ಪ ಅವರು, ಕೆಲ ತಿಂಗಳುಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

KRISHNAPPA

ಕೇಶವಕೃಪದಲ್ಲಿ ಮಧ್ಯಾಹ್ನ 12.30 ರಿಂದ 4.00 ಗಂಟೆಯ ತನಕ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ದೇಹವನ್ನು ಕಿಮ್ಸ್ ಮೆಡಿಕಲ್ ಕಾಲೇಜಿ (KIMS)ಗೆ ದಾನವಾಗಿ ನೀಡಲಾಗಿದೆ.

1932 ರ ಕೃಷ್ಣಜನ್ಮಾಷ್ಟಮಿಯಂದು ನರಸಿಂಹಯ್ಯ ಮತ್ತು ಸಾವಿತ್ರಿಯಮ್ಮ ದಂಪತಿಯ ಎರಡನೇ ಮಗನಾಗಿ ಮೈಸೂರಿನಲ್ಲಿ ಜನಿಸಿದ ನ. ಕೃಷ್ಣಪ್ಪನವರು ಸಂಸ್ಕೃತದಲ್ಲಿ ಪದವಿ (BA Honors) ಶಿಕ್ಷಣ ಪಡೆದಿದ್ದಾರೆ.

ಕಾಲೇಜು ದಿನಗಳಲ್ಲಿಯೇ ಸಂಘದ ಸ್ವಯಂಸೇವಕರಾಗಿದ್ದ ಅವರು 1954 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರಟ ಅವರು ಚಾಮರಾಜನಗರದ ತಾಲೂಕು ಪ್ರಚಾರಕರಾಗಿ ನಿಯುಕ್ತಿಗೊಂಡರು.

1955-56ರಲ್ಲಿ ನ. ಕೃಷ್ಣಪ್ಪ ಅವರು ಶಿವಮೊಗ್ಗ ಜಿಲ್ಲಾ ಪ್ರಚಾರಕರಾದರು.

1959ರಲ್ಲಿ ಅವರು ಮಂಗಳೂರು ಜಿಲ್ಲಾ ಪ್ರಚಾರಕರಾದರು.

1960 ರಿಂದ 1962 ರ ತನಕ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಚಾರಕರಾಗಿದ್ದರು.

1962 ರಲ್ಲಿ ತುಮಕೂರು ವಿಭಾಗ ಪ್ರಚಾರಕರಾದರು.

1966 ರಲ್ಲಿ ಮಂಗಳೂರು ವಿಭಾಗ ಪ್ರಚಾರಕರಾಗಿ ನಿಯುಕ್ತಿಗೊಂಡರು. ನಂತರ ಆಗಿದ್ದ ಮಂಗಳೂರು ವಿಭಾಗ ಬಳ್ಳಾರಿಯ ತನಕ ವಿಸ್ತಾರಗೊಂಡಿದ್ದ ಪ್ರದೇಶವಾಗಿತ್ತು.

1975 ರಲ್ಲಿ ಮಂಗಳೂರು ವಿಭಾಗದಾದ್ಯಂತ ತುರ್ತುಪರಿಸ್ಥಿತಿ ವಿರುದ್ಧದ ಚಳವಳಿಯ ನೇತೃತ್ವ ವಹಿಸಿದರು. ಈ ಚಳವಳಿ ದೇಶದ ಪ್ರಭಾವೀ ಚಳವಳಿಗಳಲ್ಲಿ ಒಂದಾಗಿತ್ತು. ಈ ಸಂದರ್ಭದಲ್ಲಿ ಅವರು ಮಂಗಳೂರಿನ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸಿದರು.

1978ರಲ್ಲಿ ನ. ಕೃಷ್ಣಪ್ಪ ಅವರು ಪ್ರಾಂತ ಬೌದ್ಧಿಕ ಪ್ರಮುಖರಾಗಿ ನಿಯುಕ್ತಿಗೊಂಡರು.

1980ರಲ್ಲಿ ಕರ್ನಾಟಕ ಪ್ರಾಂತ ಪ್ರಚಾರಕರಾದರು.

1989 ರಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳನ್ನೊಳಗೊಂಡ ಕ್ಷೇತ್ರೀಯ ಪ್ರಚಾರಕರಾಗಿಯೂ ಬೆಂಗಳೂರು ಕೇಂದ್ರವಾಗಿರಿಸಿಕೊಂಡು ಕಾರ್ಯ ನಿರ್ವಹಿಸಿದರು.

2004 ರಿಂದ 2014 ರ ತನಕ ಅವರು ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯರಾಗಿದ್ದರು ಇದೇ ವೇಳೆ ಪ್ರರಿವಾರ ಪ್ರಬೋಧನ್ ಅದರ ಅಖಿಲ ಬಾರತೀಯ ಸಂಯೋಜಕರಾಗಿ ದೇಶದಾದ್ಯಂತ ಪ್ರವಾಸ ಕೈಗೊಂಡಿದದ್ರು.

2014 ರ ಮಾರ್ಚ್‌ನಿಂದ ಆರೋಗ್ಯ ಹದಗೆಟ್ಟ ಕಾರಣದಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆ ಪಡೆದರು.

ನ. ಕೃಷ್ಣಪ್ಪ ಅವರು ಹಿಂದೂ ಕುಟುಂಬ ಪದ್ಧತಿಯಲ್ಲಿನ ವೈಯಕ್ತಿಕ ಮೌಲ್ಯಗಳ ಕುರಿತು ಶಿಕ್ಷಣ ನೀಡುವ ’ಕುಟುಂಬ ಪ್ರಬೋಧನ’ ಕಲ್ಪನೆಯ ಹರಿಕಾರರೆಂದೇ ಖ್ಯಾತರಾಗಿದ್ದರು.

ನ. ಕೃಷ್ಣಪ್ಪನವರು ಕರ್ನಾಟಕದಲ್ಲಿ ಪ್ರಾರಂಭಗೊಂಡ ಸಂಘದ ಅನೇಕ ಹೊಸ ಚಿಂತನೆಗಳಿಗೆ ಮಾರ್ಗದರ್ಶಕರಾಗಿದ್ದರು.

ಹಿಂದು ಕುಟುಂಬಪದ್ಧತಿಯ ಮೌಲ್ಯಗಳನ್ನು ತಿಳಿಸುವ ಮನೆಯೇ ಮಾಂಗಲ್ಯ ಪುಸ್ತಕ ರಚನೆಗೆ ಪ್ರೋತ್ಸಾಹ.

ವೇದವಿಜ್ಞಾನ ಗುರುಕುಲ, ಪ್ರಭೋದಿನಿ ಗುರುಕುಲ, ಮೈತ್ರೇಯಿ ಗುರುಕುಲ ಮುಂತಾದ ಸಂಘಟನೆಗಳ ಹಾಗೂ ಕನ್ನಡದ ಖ್ಯಾತ ಸಂಘಪ್ರೇರಿತ ಮಾಸ ಪತ್ರಿಕೆ ’ಅಸಿಮಾ’ ಮುಂತಾದ ಪತ್ರಿಕೆಗಳ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಒಬ್ಬ ಉತ್ಕೃಷ್ಟ ಓದುಗರಾಗಿದ್ದ ಅವರು ಪ್ರಚಲಿತ ವಿಷಯಗಳ ಬಗೆಗೂ ಕರಾರುವಕ್ಕಾಗಿ ಮಾತನಾಡಬಲ್ಲವರಾಗಿದ್ದರು. ಅವರು ವೇದ ಸಂಬಂಧಿತ ತತ್ತ್ವಶಾಸ್ತ್ರಗಳ ಬಗೆಗೆ ಆಳ ಜ್ಞಾನ ಹೊಂದಿದ್ದರು.

ಖ್ಯಾತ ವಿದ್ವಾಂಸ ಹಾಗೂ ಕಾದಂಬರಿಕಾರ ಎಸ್.ಎಲ್. ಭೈರಪ್ಪರು ಅವರು  ನ. ಕೃಷ್ಣಪ್ಪ ಅವರ ಬಾಲ್ಯದ ಸ್ನೇಹಿತರಾಗಿದ್ದರು. ತಮ್ಮ ಮೊದಲ ಕಾದಂಬರಿ ’ಧರ್ಮಶ್ರೀ’ಯಲ್ಲಿ ಅವರು ’ಶಂಕರ’ ಎಂಬ ಹೆಸರಿನ ಮೂಲಕ ನ. ಕೃಷ್ಣಪ್ಪನವರ ವ್ಯಕ್ತಿತ್ವವನ್ನು ಪರಿಚಯಿಸಿದ್ದಾರೆ ಎಂಬುದು ಅನೇಕರ ಅಭಿಪ್ರಾಯ.

ನ .ಕೃಷ್ಣಪ್ಪ ಅವರು ದಕ್ಷಿಣ ಭಾರತದ ಆರೆಸ್ಸೆಸ್‌ನ ಸಾವಿರಾರು ಕಾರ್ಯಕರ್ತರನ್ನು ರೂಪಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಷಿ, ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಸಮಾಜದ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Na Krishnappa - Copy Na Krishnappa Mangalore Sanghik Feb-3-2013 (2) Na Krishnappa at Du-Gu-Lakshman-Abhinandan-VSK-1-8-2012-13

Nirmalanandanatha-Swamiji-Visit-to-Keshavakrupa July-24-2014
Nirmalanandanatha-Swamiji-Visit-to-Keshavakrupa July-24-2014
Na-Krishnappa-SitaramaKedilaya-Mai-Cha-Jayadev-Madanageri-November-21-2012
Na-Krishnappa-SitaramaKedilaya-Mai-Cha-Jayadev-Madanageri-November-21-2012
Na Krishnappa at ‘Vyasa Jayanti’ celebrated by Akhil Bharatiya Sahitya Parishat at Bangalore.
Na Krishnappa at ‘Vyasa Jayanti’ celebrated by Akhil Bharatiya Sahitya Parishat at Bangalore.

Na.Krishnappa

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Senior RSS Pracharak Na Krishnappa passes away in Bengaluru

Senior RSS Pracharak Na Krishnappa passes away in Bengaluru

Comments 1

  1. ಗುರುರಾವ ಕುಲಕರ್ಣಿ says:
    7 years ago

    “ಶರಣರ ಸಾವು ಮರಣದಲ್ಲಿ ಕಾಣು” ಎಂಬ ಉಕ್ತಿ ಇದೆ. ಕರ್ಮಯೋಗಿ ಮಾನನೀಯ ಕೃಷ್ಣಪ್ಪನವರ ಅಂತಿಮ ಘಳಿಗೆ ಇದಕ್ಕೆ ನಿದರ್ಶನ. ಕೊನೆ ಉಸಿರಿನವರೆಗೂ ದೇಶಕ್ಕಾಗಿ, ತಾಯಿ ಭಾರತಮಾತೆಯ ಸೇವೆಗಾಗಿ ಜೀವನವನ್ನು ಶ್ರೀಗಂಧದಂತೆ ತೇಯ್ದರು. ಉಸಿರು ನಿಂತ ಬಳಿಕ ನೇತ್ರದಾನ ಮತ್ತು ದೇಹದಾನ ಮಾಡಿದರು. ಅವರ ದೇಹದ ಅಣು ಅಣುವಿನಲ್ಲಿಯೂ “ಪರೋಪಕಾರಾರ್ಥಂ ಇದಂ ಶರೀರಂ” ಎಂಬ ಸೂಕ್ತಿ ಪ್ರತಿಧ್ವನಿಸಿದೆ.

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Gulbarga district

November 10, 2010

NEWS IN BRIEF – NOV 11, 2011

November 12, 2011
Why Congress MPs boycott tribute ceremony for Savarkar on his birth day?  writes LK ADVANI

ವಿಶೇಷ ಲೇಖನ : ಸಾವರ್ಕರ್ ಎಂಬ ಅತ್ಯದ್ಭುತ ಚೇತನ

February 26, 2021
‘RSS is not an Economic Fundamentalist’: says RSS functionary Ram Madhav

‘RSS is not an Economic Fundamentalist’: says RSS functionary Ram Madhav

May 30, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In