• Samvada
Sunday, May 22, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ನೇರನೋಟ: ‘ಪವಾಡಪುರುಷ’ ಬೆನ್ನಿಹಿನ್ ಮತ್ತೆ ಬೆಂಗಳೂರಿಗೆ! ಎಚ್ಚರ!!

Vishwa Samvada Kendra by Vishwa Samvada Kendra
December 30, 2013
in Articles, Nera Nota
250
0
ನೇರನೋಟ: ‘ಪವಾಡಪುರುಷ’ ಬೆನ್ನಿಹಿನ್ ಮತ್ತೆ ಬೆಂಗಳೂರಿಗೆ! ಎಚ್ಚರ!!
492
SHARES
1.4k
VIEWS
Share on FacebookShare on Twitter

 ಜನರಿಂದ ಕಿಕ್ಕಿರಿದು ತುಂಬಿದ ಸಭೆ. ಮಂದದೀಪ, ಮಾದಕ ಹಾಗೂ ಕಿವಿಗಡಚಿಕ್ಕುವ ಅಬ್ಬರದ ಸಂಗೀತ. ಜಗತ್ತಿಗೆ ಅಪಾಯವಿದೆ ಎಂಬ ಘೋಷಣೆ ತೆರೆಯ ಹಿಂದಿನಿಂದ. ಆಗ ಇದ್ದಕ್ಕಿದ್ದಂತೆ ವೇದಿಕೆಗೆ ದಿಢೀರನೆ ಒಬ್ಬ ವ್ಯಕ್ತಿ ಮೈಮೇಲೆ ದೆವ್ವ ಬಂದವನಂತೆ ಆವೇಶದಿಂದ ಬಂದು ತನ್ನ ಕೈಯೆತ್ತಿ ‘ಇಲ್ಲಿದೆ ಶಕ್ತಿ. ನೀವೆಲ್ಲ ಮುಕ್ತರು’ ಎಂದು ಘೋಷಿಸುತ್ತಾನೆ. ಜೊತೆಗೆ ಇನ್ನಷ್ಟು ಜೋರಾಗಿ ‘ಅಲ್ಲಿ ನೋಡಿ ದೆವ್ವಗಳು ಓಡಿ ಹೋಗುತ್ತಿವೆ. ಇಲ್ಲಿ ನೋಡಿ ಏಸುವಿನ ಆಗಮನ’ ಎಂದು ಚೀರುತ್ತಾ ನೆರಳು ಬೆಳಕಿನ ಮರೆಯಾಟದಲ್ಲಿ ಭ್ರಾಂತಿಯ ಲೋಕವನ್ನೇ ಸೃಷ್ಟಿಸುತ್ತಾನೆ. ಇಂತಹ ಭ್ರಾಂತಿಯ ಲೋಕದಲ್ಲಿ ಅಲ್ಲಿ ಸೇರಿದ ಕೆಲವರ ಖಾಯಿಲೆಗಳನ್ನೂ ಆತ ಗುಣಪಡಿಸುತ್ತಾನೆ. ಆತನ ಸ್ಪರ್ಶಮಾತ್ರದಿಂದ ಅನೇಕ ವರ್ಷಗಳ ಕಾಲ ಕ್ಯಾನ್ಸರ್‌ನಿಂದ ಬಳಲುತ್ತಿರುವವರು ಇದ್ದಕ್ಕಿಂದ್ದಂತೆ ಕ್ಯಾನ್ಸರ್‌ಮುಕ್ತರಾಗುತ್ತಾರೆ. ಕಿವುಡಿಯಾದ ಒಬ್ಬ ಮಹಿಳೆಗೆ ಇದ್ದಕ್ಕಿದ್ದಂತೆ ಕಿವಿ ಕೇಳುತ್ತದೆ. ಮಾತು ಬಾರದ ಯುವಕನೊಬ್ಬ ಇದ್ದಕ್ಕಿದ್ದಂತೆ ಪಟಪಟ ಮಾತನಾಡತೊಡಗುತ್ತಾನೆ.

Benny Hinn Training for Ministry Conference

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಇಂತಹ ‘ಪವಾಡ’ಗಳನ್ನು ಮಾಡುವ ವ್ಯಕ್ತಿಯೇ ಅಮೆರಿಕದ ಪಾದ್ರಿ ಬೆನ್ನಿಹಿನ್. ಆತ ೨೦೦೫ರ ಜನವರಿ ತಿಂಗಳಲ್ಲಿ ಬೆಂಗಳೂರಿನ ಜಕ್ಕೂರು ವಾಯುನೆಲೆ ಮೈದಾನದಲ್ಲಿ ‘ಇಂಡಿಯಾಕ್ಕಾಗಿ ಪ್ರಾರ್ಥಿಸಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ಇದೀಗ ಮುಂದಿನ ಜನವರಿ ೧೫ರಿಂದ ೧೯ರವರೆಗೆ ಯಲಹಂಕಾದ ಸೂಪರ್‌ನೋವಾ ಎರೆನಾದಲ್ಲಿ ನಡೆಯುವ ಪ್ರೇಯರ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದಾನೆ. ಈತನ ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಬೆಂಗಳೂರಿನಾದ್ಯಂತ ಭಾರೀ ಭಾರೀ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಕಾರ್ಯಕ್ರಮವನ್ನು ಏರ್ಪಡಿಸುತ್ತಿರುವುದು ಹೆಬ್ಬಾಳದ ಬೆಥೆಲ್ ಏಜಿ ಚರ್ಚ್.

ಬೆನ್ನಿಹಿನ್ ನಿಜವಾಗಿಯೂ ಪವಾಡ ಪುರುಷನಾಗಿದ್ದರೆ, ರೋಗರುಜಿನಗಳನ್ನು ಗುಣಪಡಿಸುವ ದೈವೀಶಕ್ತಿ ಹೊಂದಿದ್ದರೆ ಆತನಿಗೆ ರತ್ನಗಂಬಳಿ ಹಾಸಿ ಸ್ವಾಗತಿಸಲು ಯಾರz ಅಭ್ಯಂತರ ಇರುತ್ತಿರಲಿಲ್ಲ. ಆದರೆ ಅಸಲಿಗೆ ಆತ ಯಾವುದೇ ಪವಾಡವನ್ನು ಇದುವರೆಗೆ ಮಾಡಿಲ್ಲ. ಪವಾಡದ ಹೆಸರಿನಲ್ಲಿ ಆತ ಮಾಡುತ್ತಿರುವುದೆಲ್ಲವೂ ಬರೀ ನಯವಂಚನೆಯ ನಾಟಕ. ಕೋಟಿಕೋಟಿ ಹಣ ಸಂಗ್ರಹಿಸುವ ‘ಪವಾಡ’ ಮಾಡುವುದನ್ನು ಬಿಟ್ಟರೆ ಈತ ಮಾಡಿದ ಅದ್ಭುತ ಪವಾಡ ಯಾರೂ ಕಂಡಿಲ್ಲ. ಕ್ರೈಸ್ತ ಮತ, ಏಸುಕ್ರಿಸ್ತ, ಆತನ ಬೋಧನೆಗಳು… ಇವೆಲ್ಲ ಈತನಿಗೆ ಹಣ ಗಳಿಸುವ  ಸುಲಭದ ಸರಕುಗಳಾಗಿವೆ, ಅಷ್ಟೆ.

ಬೆನ್ನಿಹಿನ್ ಮೂಲತಃ ಪ್ಯಾಲೆಸ್ತೀನ್ ಪ್ರದೇಶದವನು. ತನಗೆ ಚಿಕ್ಕಂದಿನಿಂದಲೇ ದೈವೀ ಸಾಕ್ಷಾತ್ಕಾರವಾಗಿದೆ ಎಂದು ನಾಟಕವಾಡುವುದು ಈತನಿಗೆ ಕರಗತವಾದ ವಿದ್ಯೆ. ಏಸುಕ್ರಿಸ್ತನನ್ನು ತಾನು ಕಂಡಿರುವುದಾಗಿ ಹೇಳಿ, ಏಸುವಿನ ತೂಕ, ಎತ್ತರ, ಕೇಶ ಶೈಲಿ ಎಲ್ಲವನ್ನೂ ವರ್ಣಿಸಬಲ್ಲ ಮಹಾನ್ ಸುಳ್ಳುಗಾರ. ೧೯೭೬ರಲ್ಲಿ ತಾನು ಕ್ಯಾಥೋಲಿಕ್ ಶಾಲೆಯಲ್ಲಿ ಬೋಧಕನಾಗಿದ್ದೆನೆಂದು ಈತ ಹೇಳುತ್ತಾನಾದರೂ ಆ ಸಂಸ್ಥೆಯ ಅಧ್ಯಕ್ಷರೇ ಇದನ್ನು ಅಲ್ಲಗಳೆದಿದ್ದಾರೆ.

ಇನ್ನು ಈತ ಆಸ್ಪತ್ರೆಗಳಲ್ಲಿ ಪ್ರಾರ್ಥನೆಯಿಂದಲೇ ಎಲ್ಲ ರೋಗಿಗಳ ಖಾಯಿಲೆ ಗುಣಪಡಿಸುವುದಾಗಿ ಹೇಳಿಕೊಂಡಿದ್ದರೂ ಅದೆಲ್ಲವೂ ಸುಳ್ಳು ಎಂದು ಆತ ಪ್ರಾರ್ಥನೆ ಮಾಡಿದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಖಚಿತಪಡಿಸಿದ್ದಾರೆ. ಈತನಿಗಿರುವ ಪ್ಲಸ್ ಪಾಯಿಂಟ್‌ಗಳೆಂದರೆ – ಮೋಡಿ ಮಾತಿನ ಚಮತ್ಕಾರ, ಸಮೂಹ ಸನ್ನಿಗೆ ಜನರನ್ನು ಒಳಗಾಗಿಸುವ ಕೌಶಲ್ಯ, ಜನರಿಂದ ಹಣ ಕೀಳುವ ಚತುರತೆ. ಹೊರದೇಶಗಳಲ್ಲೇ ಈತನ ಪವಾಡಗಳೆಲ್ಲವೂ ಶುದ್ಧ ಸುಳ್ಳು ಎಂದು ಅಲ್ಲಿನ ಪತ್ರಿಕೆಗಳು, ಟಿ.ವಿ. ಚಾನೆಲ್‌ಗಳು ಸಾರಿ ಹೇಳಿವೆ.

ಬೆನ್ನಿಹಿನ್ ಯಶಸ್ಸಿರುವುದೇ ಆತ ಸೃಷ್ಟಿಸುವ ವಿಚಿತ್ರ ಸಮ್ಮೋಹಕ ವಾತಾವರಣದಲ್ಲಿ. ಮಂದವಾಗಿ ಉರಿಯುವ ದೀಪಗಳು, ಮಾದಕ, ಆವೇಶಭರಿತ ಸಂಗೀತದ ಹಿನ್ನೆಲೆ. ಜಗತ್ತಿಗೇ ಬಂದೆರಗಲಿರುವ ಅಪಾಯಗಳ ಬಗ್ಗೆ ಪೀಠಿಕೆಯ ಮಾತುಗಳ ಮೂಲಕ ಜನರನ್ನು ಸಮೂಹ ಸನ್ನಿಗೆ ಒಳಗಾಗಿಸಿ, ಇದ್ದಕ್ಕಿದ್ದಂತೆ ಆವೇಶಭರಿತನಾಗಿ ಮಾತನಾಡುತ್ತಾನೆ. ಜಗತ್ತು ಭಾರೀ ಬೆಂಕಿ ಮತ್ತು ಭೂಕಂಪದಿಂದ ನಾಶವಾಗಲಿರುವ ಬಗ್ಗೆ ದೇವರು ತನಗೆ ಸೂಚನೆ ನೀಡಿರುವುದಾಗಿ ಹೇಳಿ ಸಭೆಯಲ್ಲಿರುವ ಜನರಲ್ಲಿ ಭಯ ಹುಟ್ಟಿಸುತಾನೆ. ನಂತರ ಇದರಿಂದ ಮುಕ್ತರಾಗಲು ನಂಬಿಕೆಯ ಮಾರ್ಗ ಹಿಡಿಯಬೇಕೆಂದು ಕರೆ ನೀಡುತ್ತಾನೆ. ತನ್ನ ಕಾರ್ಯಕ್ಕಾಗಿ ಹಣ ನೀಡುವಂತೆ ಬೆನ್ನಿಹಿನ್ ಮನವಿ ಮಾಡುತ್ತಲೇ ಆತನ ಹಿಂಬಾಲಕರು ಹಣ ಸಂಗ್ರಹದಲ್ಲಿ ತೊಡಗುತ್ತಾರೆ.

ಬೆನ್ನಿಹಿನ್ ಹೀಗೆ ಈವರೆಗೆ ಗಳಿಸಿದ ಹಣ ಅದೆಷ್ಟು ಕೋಟಿ ಡಾಲರ್ ಎಂಬುದು ಚಿದಂಬರರಹಸ್ಯ. ಏಕೆಂದರೆ ಅದಕ್ಕೆ ಯಾವುದೇ ಲೆಕ್ಕವಿಟ್ಟಿಲ್ಲ. ಮತಾಂತರ ಉzಶದಿಂದಲೇ ತನ್ನ ಸಂಸ್ಥೆಯನ್ನು ನಡೆಸುತ್ತಿದ್ದರೂ ಈತನ ಸಂಸ್ಥೆಗೆ ಸದಸ್ಯತ್ವ ನೀಡಲಾಗಿಲ್ಲ. ಈತನ ಸಂಸ್ಥೆಯ ವಾರ್ಷಿಕ ಆದಾಯವೇ ೨೦೦೫ರಲ್ಲಿ ಸುಮಾರು ೧೦ ಕೋಟಿ ಡಾಲರ್. ಹೆಸರಿಗೆ ಧರ್ಮಬೋಧಕನಾದರೂ ಆತನ ಸುತ್ತ ಸದಾಕಾಲ ಅಂಗರಕ್ಷಕರ ಪಡೆ ಇz ಇರುತ್ತದೆ. ಆತ ನಿಜವಾದ ಪಾದ್ರಿಯೇ ಆಗಿದ್ದರೆ ಆತನ ರಕ್ಷಣೆಗೆ ಅಷ್ಟೊಂದು ಅಂಗರಕ್ಷಕರ ಅಗತ್ಯವಾದರೂ ಏನು? ಪವಾಡ ಮಾಡುತ್ತೇನೆಂದು ಬೊಗಳೆ ಬಿಡುವ ಆತನಿಗೆ ಜೀವ ಭಯವಿದೆ ಎಂಬುದು ಇದರಿಂದ ಯಾರಿಗಾದರೂ ಗೊತ್ತಾಗದೇ ಇದ್ದೀತೆ?

ಪವಾಡಗಳು ಪೊಳ್ಳು

ಬೆನ್ನಿಹಿನ್‌ನ ಪವಾಡಗಳು ಹಸೀ ಹಸಿ ಸುಳ್ಳು ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಕೆಲವು ಉದಾಹರಣೆಗಳು ಇಲ್ಲಿವೆ:

ಟಿ ಮೆದುಳಿನ ಖಾಯಿಲೆಯಿಂದ ಬಳಲುತ್ತಿದ್ದ ರೋಗಿಯನ್ನು ಗುಣಪಡಿಸಿದ್ದಾಗಿ ಈತ ಹೇಳಿಕೊಂಡಿದ್ದ. ನಂತರ ‘ಇನ್‌ಸೈಡ್ ಎಡಿಷನ್’ ಪತ್ರಿಕೆಯ ವರದಿಗಾರರು ತನಿಖೆ ಮಾಡಿದಾಗ ಆ ರೋಗಿಯಲ್ಲಿ ಮೆದುಳಿನ ಖಾಯಿಲೆ ಮುಂದುವರಿದೇ ಇತ್ತು.

ಟಿ ಕಿವುಡಿ ಎನ್ನಲಾದ ಮಹಿಳೆಗಾಗಿ ಪ್ರಾರ್ಥಿಸಿ ಆಕೆಯನ್ನು ಸ್ಪರ್ಶಮಾತ್ರದಿಂದಲೇ ಗುಣಪಡಿಸಿದೆ ಎಂದು ಹೇಳಿದ ನಂತರ ಗೊತ್ತಾದದ್ದು, ಆಕೆಗೆ ಕಿವುಡೇ ಇರಲಿಲ್ಲ ಎಂದು!

ಟಿ ಹ್ಯೂಸ್ಟನ್‌ನಲ್ಲಿ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಈತನ ಚಮತ್ಕಾರದಿಂದಾಗಿ ಸರಿ ಹೋಯಿತೆಂದು ಔಷಧಿ ತ್ಯಜಿಸಿದ ಎರಡೇ ತಿಂಗಳಲ್ಲಿ ಇಹಲೋಕವನ್ನೇ ತ್ಯಜಿಸಿದ್ದಳು!

ಟಿ ಘಾನಾದಲ್ಲಿ ಮೃತ ವ್ಯಕ್ತಿಯೊಬ್ಬರಿಗೆ ಪುನರ್ಜನ್ಮ ನೀಡಿರುವುದಾಗಿ ಈ ಕುರಿತಾದ ವೀಡಿಯೋ ತನ್ನಲ್ಲಿದೆ ಎಂದು ಬೋಂಗು ಬಿಟ್ಟಿದ್ದ. ಆದರೆ ಬೆನ್ನಿಹಿನ್ ಆ ವೀಡಿಯೋ ಮಾತ್ರ ಯಾರಿಗೂ ತೋರಿಸಿಲ್ಲ.

ಟಿ ಹೆಚ್‌ಬಿಓ ಚಾನೆಲ್‌ನಲ್ಲಿ ಪ್ರಸಾರವಾದ ಸಾಕ್ಷ್ಯ ಚಿತ್ರವೊಂದರಲ್ಲಿ ಬೆನ್ನಿಹಿನ್ ಗುಣಪಡಿಸಿದ ೭೬ ವ್ಯಕ್ತಿಗಳನ್ನು ನಂತರ ಭೇಟಿ ಮಾಡಿ ವಿಚಾರಿಸಲಾಯಿತು. ಆದರೆ ೭೬ ಪ್ರಕರಣಗಳ ಪೈಕಿ ಒಂದರಲ್ಲೂ ಈತನ ಪ್ರಾರ್ಥನೆಯಿಂದ ಖಾಯಿಲೆ ಗುಣವಾಗಿದ್ದು ಸಾಬೀತಾಗಲಿಲ್ಲ. ಈತನ ಪವಾಡದ ಬಗ್ಗೆ ಸಾಕ್ಷ್ಯ ಕೇಳಿದಾಗ ಕೇವಲ ೫ ಪ್ರಕರಣಗಳ ಸಾಕ್ಷ್ಯ ಮಾತ್ರ ದೊರೆಯಿತು. ಯಾವುದೇ ಪವಾಡವನ್ನು ನಿರೂಪಿಸಲಾಗಲಿಲ್ಲ.

ಟಿ ೮ ವರ್ಷದ ಅಂಧ ಬಾಲಕನಿಗೆ ಸ್ಪರ್ಶಮಾತ್ರದಿಂದಲೇ ದೃಷ್ಟಿ ನೀಡಿದ್ದಾಗಿ ಬೆನ್ನಿಹಿನ್ ಹೇಳಿಕೊಂಡಿದ್ದ. ತಾನು ಬೆನ್ನಿಯಿಂದ ಪ್ರಭಾವಿತನಾಗಿ ದೃಷ್ಟಿ ಮರಳಿ ಬಂದಿದ್ದಾಗಿ ಹೇಳಿದ್ದೆ ಎಂದು ಒಂದು ವರ್ಷದ ನಂತರ ಆ ಬಾಲಕನೇ ಟಿ.ವಿ. ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದ.

ಟಿ ಮನಃಶಾಸ್ತ್ರಜ್ಞರ ಪ್ರಕಾರವೂ ರೋಗಿಗಳ ವರ್ತನೆ ಬೆನ್ನಿಹಿನ್ ಸೃಷ್ಟಿಸುವ ಸಮೂಹ ಸನ್ನಿಯ ಪರಿಣಾಮವೇ ಹೊರತು ಬೇರೇನೂ ಅಲ್ಲ. ತೀವ್ರ ಅನಾರೋಗ್ಯಪೀಡಿತ ವ್ಯಕ್ತಿ ತಾನು ಉತ್ತಮ ಔಷಧಿ ತೆಗೆದುಕೊಳ್ಳುತ್ತಿzನೆ ಎಂದು ಭಾವಿಸಿದರೂ ಸಾಕು, ಆತನ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಸಾಧ್ಯ. ಹೀಗಿರುವಾಗ ಬೆನ್ನಿಹಿನ್ ಪವಾಡ ಕೇವಲ ವಂಚನೆ ಎನ್ನಲು ಇನ್ನೆಂತಹ ಪುರಾವೆಗಳು ಬೇಕು?

ಟಿ ಯಾರಿಗಾದರೂ ತನ್ನ ಕೈಚಳಕದಿಂದ ಖಾಯಿಲೆ ಗುಣವಾಗದಿದ್ದರೆ ಅದಕ್ಕೆ ದೇವರ ಮೇಲಿನ ನಂಬಿಕೆಯ ಕೊರತೆ ಕಾರಣ ಎನ್ನುವ ಈತ, ಖಾಯಿಲೆ ಗುಣವಾದರೆ ಮಾತ್ರ ತನ್ನ ಪ್ರಾರ್ಥನೆಯ ಪವಾಡ ಎನ್ನುತ್ತಾನೆ.

ಈತನ ಇಂತಹ ಎಲ್ಲ ಅತಿರೇಕಗಳನ್ನು ಗಮನಿಸುತ್ತಿರುವ ಕ್ರಿಶ್ಚಿಯನ್ ವಾಚ್‌ಡಾಗ್ ಆರ್ಗನೈಸೇಶನ್ ಅಧ್ಯಕ್ಷ ಅಂಥೋನಿ ವೋಲ್ ಪ್ರಕಾರ, ಬೆನ್ನಿಹಿನ್‌ಗೆ ೧೯೯೩ರಲ್ಲೇ ಅನೇಕ ಷರತ್ತುಗಳನ್ನು ವಿಧಿಸಲಾಗಿದೆ. ಪ್ರಾರ್ಥನಾ ಸಭೆಯ ನಂತರ ಗುಣಪಡಿಸಿದನೆನ್ನಲಾದವರಿಂದ ದೃಢೀಕರಣ ಪತ್ರ ಪಡೆಯಬೇಕು ಎನ್ನುವುದು ಅಂತಹ ಷರತ್ತುಗಳಲ್ಲಿ ಒಂದು. ಆದರೆ ಈತ ಯಾವುದೇ ಷರತ್ತುಗಳನ್ನು ಪಾಲಿಸದೆ ಭಾರತದಲ್ಲಿ ಮಂಕು ಬೂದಿ ಎರಚಲು ಕಾಲಿಡುತ್ತಿದ್ದಾನೆ. ಬೆನ್ನಿಹಿನ್ ಕ್ರಿಶ್ಚಿಯನ್ ಜಾತಿಗೇ ಒಂದು ಕಳಂಕ ಎಂದು ಹೀಗಳೆದವರು ಹಾಂಕಾಂಗ್‌ನ ಲೂಥರೆನ್ ಸೆಮಿನರಿಯಲ್ಲಿ ತತ್ತ್ವಶಾಸ್ತ್ರದ ಅಧ್ಯಾಪಕರಾಗಿರುವ ಜಾನ್ ಲಿಮಾಂಡ್.

೨೦೦೫ರಲ್ಲಿ ಬೆನ್ನಿಹಿನ್ ಬೆಂಗಳೂರಿಗೆ ಬಂದಿದ್ದಾಗ ಪ್ರಾರ್ಥನಾ ಸಭೆಯ ಕರಪತ್ರ ಹೀಗಿತ್ತು: ‘ಎಲ್ಲ ವಿಧವಾದ ವಿಗ್ರಹಾರಾಧನೆ, ವ್ಯಭಿಚಾರ, ಮಾಟ-ಮಂತ್ರ ಮತ್ತು ಒಡಕುತನದ ಆತ್ಮಗಳನ್ನು ಕಟ್ಟಿಹಾಕಿರಿ. ಜನರು ಏಸು ಸ್ವಾಮಿಯನ್ನು ಸ್ವೀಕರಿಸುವುದಕ್ಕಾಗಿ ಪ್ರಾರ್ಥಿಸಿರಿ’. ಇಲ್ಲಿ ವಿಗ್ರಹಾರಾಧಾನೆ ಎಂಬುದು ಹಿಂದೂ ಸಮುದಾಯವನ್ನು ನಿಂದಿಸಲು ಬಳಸಿದ ಶಬ್ದವೆನ್ನುವುದು ಯಾರಿಗಾದರೂ ವೇದ್ಯ.

ಲಕ್ಷಾಂತರ ಜನರು ಸೇರುವ ಸಭೆಯಲ್ಲಿ ಬೆನ್ನಿಹಿನ್ ಮತಾಂತರ ಕಾರ್ಯವನ್ನು ಅಷ್ಟು ಧೈರ್ಯವಾಗಿ, ಸಲೀಸಾಗಿ ಮಾಡಲು ಸಾಧ್ಯವೆ ಎಂದು ಕೆಲವು ವಿಚಾರವಾದಿಗಳು ಕ್ಯಾತೆ ತೆಗೆಯುವುದುಂಟು. ಬೆನ್ನಿಹಿನ್ ಅಷ್ಟು ದಡ್ಡನೇನಲ್ಲ. ಸಾವಿರಾರು ಜನರ ಸಮ್ಮುಖದಲ್ಲಿ ಮತಾಂತರ ಮಾಡಿದರೆ ಪರಿಣಾಮ ಏನಾಗಬಹುದು ಎಂಬುದು ಆತನಿಗೆ ಗೊತ್ತೇ ಇದೆ. ಆದರೆ ಆ ಸಭೆಯಲ್ಲಿ ಏಸು, ಕ್ರೈಸ್ತ ಧರ್ಮಗಳ ಬಗ್ಗೆ ಸಾಮಾನ್ಯರಲ್ಲಿ ಒಟ್ಟಾರೆ ಮೂಡುವ ವಿಶ್ವಾಸವನ್ನು ಕ್ರೈಸ್ತ ಮಿಷನರಿಗಳು ಮುಂದೆ ಮತಾಂತರಕ್ಕೆ ಬಳಸಿಕೊಳ್ಳುವ ಅವಕಾಶ ಸಿಗುತ್ತದೆ ಎಂಬುದೂ ಆತನಿಗೆ ಚೆನ್ನಾಗಿ ಗೊತ್ತು. ಮತಾಂತರ ಕಾರ್ಯಕ್ಕೆ ಹೀಗೆ ನೆಲವನ್ನು ಚೆನ್ನಾಗಿ ಹದಗೊಳಿಸುವುದೇ ಬೆನ್ನಿಹಿನ್ ನಡೆಸುವ ಪ್ರಾರ್ಥನಾ ಸಭೆಯ ರಹಸ್ಯ ಉzಶ!

ಭಾರೀ ಪ್ರತಿಭಟನೆ

ಕಳೆದ ಬಾರಿ ಬೆಂಗಳೂರಿನಲ್ಲಿ ನಡೆದ ಬೆನ್ನಿಹಿನ್ ಕಾರ್ಯಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹಿಂದೂ ಜಾಗರಣ ವೇದಿಕೆ ಆತನ ಪವಾಡ ಕಾರ್ಯಕ್ರಮಕ್ಕೆ ದೊಡ್ಡ ಸವಾಲನ್ನೇ ಎಸೆದಿತ್ತು. ಸ್ವಾಭಿಮಾನಿ ಹಿಂದು ವಕೀಲರು ನ್ಯಾಯಾಲಯದಲ್ಲಿ ಬೆನ್ನಿಹಿನ್ ಕಾರ್ಯಕ್ರಮದ ವಿರುದ್ಧ ಹೋರಾಟ ನಡೆಸಿದ್ದರು. ಉಚ್ಚ ನ್ಯಾಯಾಲಯದಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೂಡ ಸಲ್ಲಿಸಲಾಗಿತ್ತು. ಬೆನ್ನಿಹಿನ್ ಕಾರ್ಯಕ್ರಮಕ್ಕೆ ನ್ಯಾಯಾಲಯ ತಡೆ ಹಾಕದಿದ್ದರೂ ಆ ಕಾರ್ಯಕ್ರಮದಲ್ಲಿ ಆತನ ವರ್ತನೆ, ಸಮೂಹ ಸನ್ನಿ ವಾತಾವರಣ ಸೃಷ್ಟಿಸುವ ಕ್ರಿಯೆಗೆ ಕಡಿವಾಣ ಹಾಕುವ ಆದೇಶ ನೀಡಿತ್ತು. ಕಾರ್ಯಕ್ರಮಕ್ಕೆ ಮುನ್ನ ಪ್ರಾರ್ಥನಾ ಸಭೆಯಲ್ಲಿ ೧ ಕೋಟಿ ಜನ ಭಾಗವಹಿಸುತ್ತಾರೆಂದು ಪ್ರಚಾರ ಮಾಡಲಾಗಿತ್ತು. ಆದರೆ ಹಿಂದೂ ಜಾಗರಣ ವೇದಿಕೆ ಸಂಘಟಿಸಿದ ಭಾರೀ ಪ್ರತಿಭಟನೆಯ ಬಿಸಿ ತಾಗಿ, ಆ ಸಂಖ್ಯೆ ೫೦ ಲಕ್ಷಕ್ಕಿಳಿಯಿತು. ಅನಂತರ ಅದು ೧೫ ಲಕ್ಷ ಆಯಿತು. ಆಮೇಲೆ ೧೦ ಲಕ್ಷ, ೫ ಲಕ್ಷ… ಹೀಗೆ ಸಂಖ್ಯೆ ಇಳಿಯುತ್ತಾ ಹೋಗಿ ಬೆನ್ನಿಹಿನ್ ಪ್ರತ್ಯಕ್ಷ ವೇದಿಕೆಯ ಮೇಲೇರಿ ಘೋಷಿಸಿದ್ದು – ಇಲ್ಲಿ ೨ ಲಕ್ಷ ಜನ ಸೇರಿದ್ದಾರೆಂದು. ಪ್ರತ್ಯಕ್ಷವಾಗಿ ಅಲ್ಲಿ ಸೇರಿದ್ದವರ ಸಂಖ್ಯೆ ಕೇವಲ ೧.೨೫ ಲಕ್ಷ ಆಗಿತ್ತು! ಅದರಲ್ಲೂ ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಿಂದ ಬಸ್‌ಗಳಲ್ಲಿ ಕರೆತಂದ ಜನರೇ ಹೆಚ್ಚು. ಬೆಂಗಳೂರಿನ ಕೊಳೆಗೇರಿಗಳಿಂದ ಲಕ್ಷಾಂತರ ಕಡುಬಡವರನ್ನು ಆ ಕಾರ್ಯಕ್ರಮಕ್ಕೆ ಕರೆದೊಯ್ಯುವ ಸಂಘಟಕರ ಹುನ್ನಾರ ಮಾತ್ರ ಕೊನೆಗೂ ಫಲಿಸಲೇ ಇಲ್ಲ. ಜೊತೆಗೆ ವಿಗ್ರಹಾರಾಧನೆಯನ್ನು ಖಂಡಿಸಿದ್ದಕ್ಕೆ ಅದೇ ಸಭೆಯಲ್ಲಿ ಸಂಘಟಕರು ಹಿಂದುಗಳ ಕ್ಷಮೆ ಕೋರಿದ ಪ್ರಸಂಗವೂ ನಡೆಯಿತು. ಮಾಧ್ಯಮಗಳು ಕೂಡ ಆಗ ಬೆನ್ನಿಹಿನ್ ಪವಾಡ ಕಾರ್ಯಕ್ರಮದ ವಿರುದ್ಧ ಸಮರವನ್ನೇ ಸಾರಿದ್ದವು.

ಕಾನೂನು ಉಲ್ಲಂಘನೆ

ಬೆನ್ನಿಹಿನ್ ಭಾರತಕ್ಕೆ ಬರುತ್ತಿರುವುದು ಪ್ರವಾಸಿ ವೀಸಾದಲ್ಲಿ. ಪ್ರವಾಸೀ ವೀಸಾದಲ್ಲಿ ಆಗಮಿಸುವ ವ್ಯಕ್ತಿ ಈ ದೇಶದಲ್ಲಿ ಯಾವುದೇ ಸಭೆಗಳಲ್ಲಿ ಭಾಷಣ ಮಾಡುವಂತಿಲ್ಲ, ಉಪದೇಶ ನೀಡುವಂತಿಲ್ಲ. ಇದು ಈ ನೆಲದ ಕಾನೂನು. ಬೆನ್ನಿಹಿನ್‌ಗೆ ಪ್ರಾರ್ಥನಾ ಸಭೆಯಲ್ಲಿ ಮಾತನಾಡಲು ಸರ್ಕಾರ ಹೇಗೆ ಅವಕಾಶ ಕೊಟ್ಟಿದೆಯೋ ಗೊತ್ತಿಲ್ಲ. ಕಳೆದ ಬಾರಿ ರಾಜ್ಯದಲ್ಲಿ ಧರ್ಮಸಿಂಗ್ ಸರ್ಕಾರ ಕಾನೂನನ್ನು ಗಾಳಿಗೆ ತೂರಿ ಬೆನ್ನಿಗೆ ಇಂತಹ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಬಾರಿ ಸಿದ್ದರಾಮಯ್ಯ ಸರ್ಕಾರ ಮತ್ತೆ ಅಂತಹದೇ ಅವಕಾಶ ಕಲ್ಪಿಸಿಕೊಟ್ಟಿದೆ. ಚಾಮರಾಜಪೇಟೆಯ ಮೈದಾನದಲ್ಲಿ ಆರೆಸ್ಸೆಸ್‌ನ ಪಥಸಂಚಲನ ಆರಂಭವಾದರೆ ಅದನ್ನು ತಡೆಯಲು ಹೊರಡುವ ಪೊಲೀಸ್ ಅಧಿಕಾರಿಗಳು, ಬೆನ್ನಿಹಿನ್ ಕಾನೂನು ಉಲ್ಲಂಘಿಸಿ ಭಾಷಣ ಮಾಡಿದರೆ ಮಾತ್ರ ಏಕೆ ಆತನನ್ನು ತಡೆಯುವ ಧೈರ್ಯ ತೋರುತ್ತಿಲ್ಲ? ನೆಲದ ಕಾನೂನು ಎಲ್ಲರಿಗೂ ಒಂದೇ ಅಲ್ಲವೆ?

ಬೆನ್ನಿಹಿನ್ ಬಗ್ಗೆ ಅಮೆರಿಕ, ನ್ಯೂಜಿಲೆಂಡ್, ಯುರೋಪ್ ದೇಶಗಳಲ್ಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ೨೦೦೬ರಲ್ಲಿ ಫಿಜಿ ದೇಶಕ್ಕೆ ಆತ ಭೇಟಿ ನೀಡಿದಾಗ ಭಾರೀ ವಿರೋಧ ಎದ್ದಿತ್ತು. ಅಲ್ಲಿನ ಚರ್ಚ್ ಪ್ರಮುಖರೇ ಬೆನ್ನಿಹಿನ್‌ನ ನಕಲಿ ಪವಾಡಗಳನ್ನು ವಿರೋಧಿಸಿದ್ದರು. ಬೆನ್ನಿಹಿನ್‌ನಿಂದ ಗುಣಪಡಿಸಲಾಯಿತೆಂದು ಹೇಳಲಾದ ವ್ಯಕ್ತಿಗಳ ಖಾಯಿಲೆ ಹಾಗೆಯೇ ಉಳಿದಿತ್ತೆಂದು ರೇಡಿಯೋ ನ್ಯೂಜಿಲೆಂಡ್ ಅನಂತರ ಸುದ್ದಿ ಪ್ರಸಾರ ಮಾಡಿತ್ತು.

ಬೆನ್ನಿಹಿನ್ ಇದೀಗ ೩೦ ವರ್ಷ ತನ್ನೊಂದಿಗೆ ಬದುಕು ಹಂಚಿಕೊಂಡಿದ್ದ ತನ್ನ ಪತ್ನಿ ಸುಝಾನೆಗೆ ವಿಚ್ಛೇದನ ನೀಡಿ ವಿವಾದಕ್ಕೊಳಗಾಗಿದ್ದಾನೆ. ಬೇರೆಯವರ ಬದುಕನ್ನು ತನ್ನ ಉಪದೇಶದ ಮೂಲಕ ಸರಿಪಡಿಸುತ್ತೇನೆನ್ನುವ ಬೆನ್ನಿಹಿನ್ ತನ್ನ ಬದುಕನ್ನೇಕೆ ಹೀಗೆ ಮೂರಾಬಟ್ಟೆ ಮಾಡಿಕೊಂಡಿದ್ದಾನೆ ಎಂದು ಹಲವರು ಈಗಾಗಲೇ ಆತನಿಗೆ ಲೇವಡಿ ಮಾಡಿದ್ದಾರೆ.

ಬೆನ್ನಿಹಿನ್ ಹಾಗೂ ಆತನಂತಹ ಮತಪ್ರಚಾರವನ್ನೇ ದಂಧೆಯನ್ನಾಗಿ ಮಾಡಿಕೊಂಡಿರುವ ಮಾಫಿಯಾಗಳು ಅನೇಕ ರಾಷ್ಟ್ರಗಳನ್ನು ಗುರಿಯಾಗಿರಿಸಿ ಜಾಗತಿಕ ಕ್ರೈಸ್ತೀಕರಣದ ಸಂಚು ನಡೆಸಿವೆ. ವಿವಿಧ ರಾಷ್ಟ್ರಗಳ ಮೇಲೆ ಮಿಡತೆಗಳಂತೆ ದಾಳಿ ನಡೆಸಿವೆ. ಇಂಥ ಪಾಪಿಗಳ ಪಿತೂರಿಗೆ ಸಿಲುಕಿ ಈಶಾನ್ಯ ಭಾರತ ಪ್ರತ್ಯೇಕತಾವಾದದ ಕೂಗೆಬ್ಬಿಸಿ ದೇಶ ವಿರೋಧಿ ಬಂಡಾಯ ಬಾವುಟ ಹಾರಿಸಿರುವುದು ಬಹಿರಂಗ ಸತ್ಯ. ಇದೇ ರೀತಿ ಪರಿಶಿಷ್ಟ ಹಾಗೂ ಬುಡಕಟ್ಟು ಪಂಗಡದ ಜನರೇ ಹೆಚ್ಚಾಗಿರುವ ಮಧ್ಯಪ್ರದೇಶ, ಛತ್ತೀಸ್‌ಗಢ, ಝಾರ್ಖಂಡ್, ಒರಿಸ್ಸಾ, ಗುಜರಾತ್ ಹಾಗೂ ಕರ್ನಾಟಕವನ್ನು ಗುರಿಯಾಗಿಟ್ಟುಕೊಂಡು ಈ ಪಟಾಲಂ ಮತಾಂತರಕ್ಕಾಗಿ ಕೋಟ್ಯಂತರ ರೂ. ವಿದೇಶಿ ಹಣ ಸುರಿಯುತ್ತಿರುವುದು ರಹಸ್ಯವಲ್ಲ. ಭಾರತ ವಿರೋಧಿ ವಿದ್ರೋಹ ಚಟುವಟಿಕೆಗಳು ಈ ಭಾಗದಲ್ಲಿ ಬೆಳೆಯಲು ಕುಮ್ಮಕ್ಕು ನೀಡುತ್ತಿರುವುದು ಚರ್ಚ್‌ನ ಷಡ್ಯಂತ್ರಗಳಲ್ಲೊಂದು. ದಕ್ಷಿಣ ಭಾರತದಲ್ಲಿ ಮತಾಂತರದ ಹುಲುಸಾದ ಬೆಳೆ ತೆಗೆಯುವುದು ಬೆನ್ನಿಹಿನ್ ಭೇಟಿಯ ಹಿಂದಿರುವ ದುರುzಶ.

ದತ್ತಪೀಠ, ಅಯೋಧ್ಯೆ ರಾಮಮಂದಿರ ಮೊದಲಾದ ಆಂದೋಲನಗಳ ಸಂದರ್ಭದಲ್ಲಿ ಹಿಂದೂ ವಿರೋಧಿ ನಿಲುವು ತಾಳಿ ಆಕ್ರೋಶ ವ್ಯಕ್ತಪಡಿಸುವ, ಮೂಢನಂಬಿಕೆ, ಮೌಢ್ಯ ತೊಲಗಬೇಕೆಂದು ಹುಯಿಲೆಬ್ಬಿಸುವ ವಿಚಾರವಾದಿಗಳು ಬೆನ್ನಿಹಿನ್ ಪವಾಡ ಕಾರ್ಯಕ್ರಮ ನಡೆದಾಗ ಮಾತ್ರ ದೀರ್ಘ ಮೌನಕ್ಕೆ ಮೊರೆ ಹೋಗುತ್ತಾರೇಕೆ? ಕಳೆದ ಬಾರಿ ಕೂಡ ಬೆನ್ನಿಹಿನ್ ಕಾರ್ಯಕ್ರಮದ ಸಂದರ್ಭದಲ್ಲಿ ಅನಂತಮೂರ್ತಿ, ಕಾರ್ನಾಡ್, ಬರಗೂರು, ಗೌರಿ ಲಂಕೇಶ್ ಇತ್ಯಾದಿ ವಿಚಾರವಾದಿಗಳು ತುಟಿಬಿಚ್ಚದೆ ಮೌನವಾಗಿದ್ದರು. ಈ ಬಾರಿಯೂ ಈ ಮಂದಿಯ ನಿಲುವಿನಲ್ಲಿ ಯಾವುದೇ ಬದಲಾವಣೆ ಖಂಡಿತ ಇರಲಿಕ್ಕಿಲ್ಲ. ವಿಚಾರವಾದಿಗಳ ಕಣ್ಣಿಗೆ ಹಿಂದೂ ಸಮಾಜದ ಮೌಢ್ಯಗಳು ಮಾತ್ರ ಕಾಣುತ್ತವೆ. ಮುಸ್ಲಿಂ, ಕ್ರೈಸ್ತ ಸಮಾಜದ ಮೌಢ್ಯಗಳು ಕಾಣಿಸುವುದೇ ಇಲ್ಲ!

ಬೆನ್ನಿಹಿನ್ ಪ್ರಾರ್ಥನಾ ಸಭೆಯಿಂದ ಯಾವುದೇ ಪವಾಡ ಖಂಡಿತ ಆಗುವುದಿಲ್ಲ. ಆದರೆ ಒಂದು ಪವಾಡವಂತೂ ಆಗೇ ಆಗುತ್ತದೆ. ಬೆನ್ನಿಹಿನ್‌ನಂತಹ ನಯವಂಚಕ, ಮೋಸಗಾರ ಪಾದ್ರಿಯ ವಿರುದ್ಧ ನಮ್ಮ ವಿಚಾರವಾದಿಗಳು ತುಟಿ ಬಿಚ್ಚದಿರುವ ಪವಾಡ ಅದು!

ಏಸು ಕ್ರಿಸ್ತನನ್ನು ತಾನು ಕಂಡಿರುವುದಾಗಿ ಹೇಳಿ, ದೈವೀ ಸಾಕ್ಷಾತ್ಕಾರವಾಗಿದೆ ಎಂದು ಬೊಗಳೆ ಬಿಡುವ ಮಹಾನ್ ಸುಳ್ಳುಗಾರ, ಅಮೆರಿಕ ಪಾದ್ರಿ ಬೆನ್ನಿಹಿನ್ ಇದೀಗ ಮತ್ತೆ ಬೆಂಗಳೂರಿಗೆ ಬರುತ್ತಿದ್ದಾನೆ. ಆತನ ‘ಪವಾಡ’ಗಳು ಬರೀ ಸುಳ್ಳು ಎಂದು ವಿದೇಶಗಳಲ್ಲೇ ಟೀಕೆ ವ್ಯಕ್ತವಾಗಿದೆ. ಕ್ರೈಸ್ತ ಪ್ರಮುಖರೇ ಆತನ ನಯವಂಚನೆ ವಿರುದ್ಧ ಸಿಡಿದೆದ್ದಿದ್ದಾರೆ. ಹೀಗಿರುವಾಗ ಬೆಂಗಳೂರಿನಲ್ಲಿ ಆತನ ಕಾರ್ಯಕ್ರಮಕ್ಕೆ ಕುಮ್ಮಕ್ಕು ಕೊಟ್ಟವರಾರು? ಇದಕ್ಕೆ ಅವಕಾಶ ಏಕೆ ನೀಡಬೇಕು?

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ಸೇವಾ ಸಾಂಘಿಕ್: ಆರೆಸ್ಸೆಸ್ ಕಾರ್ಯಕರ್ತರಿಂದ ಸಾರಕ್ಕಿ ಕೆರೆ ಸ್ವಚ್ಛತೆ

ಸೇವಾ ಸಾಂಘಿಕ್: ಆರೆಸ್ಸೆಸ್ ಕಾರ್ಯಕರ್ತರಿಂದ ಸಾರಕ್ಕಿ ಕೆರೆ ಸ್ವಚ್ಛತೆ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Crores of Indians participates in Surya Namaskar Campaign across Nation; lead by RSS local units

Crores of Indians participates in Surya Namaskar Campaign across Nation; lead by RSS local units

April 7, 2013
‘Mahatma’s Assassination and the RSS’; writes RSS veteran MG Vaidya who witnessed 1948 Imbroglio

‘Mahatma’s Assassination and the RSS’; writes RSS veteran MG Vaidya who witnessed 1948 Imbroglio

March 18, 2014
RSS Sarasanghachalak Mohan Bhagwat addressed DHARMA SABHA at Denkanal, Odisha

RSS Sarasanghachalak Mohan Bhagwat addressed DHARMA SABHA at Denkanal, Odisha

February 24, 2016
Godse’s visit to RSS event? Vadiraj in his article throws more light on lies peddled

Godse’s visit to RSS event? Vadiraj in his article throws more light on lies peddled

March 7, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In