• Samvada
  • Videos
  • Categories
  • Events
  • About Us
  • Contact Us
Thursday, February 9, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ನೇರನೋಟ: ಅಮೆರಿಕದಲ್ಲಿ ಭಾರತೀಯರ ಪಾರುಪತ್ಯ

Vishwa Samvada Kendra by Vishwa Samvada Kendra
January 27, 2014
in Articles, Nera Nota
251
0
ನೇರನೋಟ: ಅಮೆರಿಕದಲ್ಲಿ ಭಾರತೀಯರ ಪಾರುಪತ್ಯ

Dr. Meyya Meyappan

492
SHARES
1.4k
VIEWS
Share on FacebookShare on Twitter

by Du Gu Lakshman

 Dr. Meyya Meyappan

Dr. Meyya Meyappan

ಇಡೀ ಜಗತ್ತಿನಲ್ಲಿ, ಅದು ಒಳ್ಳೆಯದಿರಲಿ ಅಥವಾ ಕೆಟ್ಟz ಆಗಿರಲಿ, ಅತಿ ಹೆಚ್ಚು ಸುದ್ದಿ ಮಾಡುತ್ತಿರುವ ದೇಶವೆಂದರೆ ಅಮೆರಿಕ. ಅಮೆರಿಕದ ಸುದ್ದಿಗೆ ಪ್ರಚಾರ ಸಿಕ್ಕಿದಷ್ಟು ಇನ್ನಾವ ದೇಶದ ಸುದ್ದಿಗೂ ಮಾಧ್ಯಮಗಳಲ್ಲಿ ಪ್ರಚಾರ ಸಿಗುವುದಿಲ್ಲ. ಅಮೆರಿಕ ಜಗತ್ತಿನ ‘ದೊಡ್ಡಣ್ಣ’ ದೇಶ ಎಂಬ ಹೆಗ್ಗಳಿಕೆ ಪಡೆದಿರುವುದು ಇದಕ್ಕೊಂದು ಕಾರಣವಿರಬಹುದು.

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಅದು ಅಮೆರಿಕ ದೇವಯಾನಿ ಖೋಬ್ರಗಡೆ ಬಂಧಿಸಿದ ಸುದ್ದಿ ಇರಲಿ, ಇರಾಕ್‌ಮೇಲೆ ಅಮೆರಿಕ ನಡೆಸಿದ ದಾಳಿಯಿರಲಿ ಅಥವಾ ಪಾಕಿಸ್ಥಾನದ ಅಬೊಟಾಬಾದ್‌ಗೆ ನುಗ್ಗಿ ಅಲ್ಲಡಗಿದ್ದ ಒಸಾಮಾ ಬಿನ್ ಲಾಡೆನ್ ಎಂಬ ನರ ರಾಕ್ಷಸನನ್ನು ಅಮೆರಿಕದ ಸೈನಿಕರು ಹೊಸಕಿ ಹಾಕಿದ ಸಾಹಸದ ಸುದ್ದಿಯೇ ಇರಲಿ… ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಪಡೆಯುವುದು ಮಾತ್ರ ಅಮೆರಿಕವೇ. ಇಡೀ ಜಗತ್ತಿನ ಮೇಲೆ ಅಮೆರಿಕ ಸಾಧಿಸಿರುವ ಹಿಡಿತವೂ ಇದಕ್ಕೆ ಕಾರಣವಿರಬಹುದು.

ಬಿಡಿ, ಈಗ ವಿಷಯ ಅದಲ್ಲ. ಭಾರತೀಯರು ಅಮೆರಿಕದ ಮೇಲೆ ಕ್ರಮೇಣ ಹಿಡಿತ ಸಾಧಿಸುತ್ತಿದ್ದಾರೆಯೆ ಎಂಬ ಬಗ್ಗೆ ಈಗ ಎಲ್ಲೆಡೆ ಚರ್ಚೆ, ಜಿಜ್ಞಾಸೆ ಶುರುವಿಟ್ಟುಕೊಂಡಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಆ ದೇಶದ ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರಭಾವೀ ಛಾಪು ಒತ್ತಿದ್ದಾರೆ. ಅಮೆರಿಕದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂಚೂಣಿಯಲ್ಲಿ ಮಿಂಚುತ್ತಿದ್ದಾರೆ. ಉದ್ಯಮದಿಂದ ಹಿಡಿದು ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳವರೆಗೆ, ಹೊಟೇಲ್ ಉದ್ಯಮದಿಂದ ಹಿಡಿದು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದವರೆಗೆ, ಕೊನೆಗೆ ‘ಮಿಸ್ ಅಮೆರಿಕ’ ಸ್ಪರ್ಧೆಯನ್ನೂ ಗೆಲ್ಲುವವರೆಗೆ ಈಗ ಅಮೆರಿಕದಲ್ಲಿ ಭಾರತೀಯರದೇ ಪಾರುಪತ್ಯ.

‘ನಾಸಾ’ದಲ್ಲಿ ಪಾರುಪತ್ಯ

ಅಮೆರಿಕದ ‘ನಾಸಾ’ (ರಾಷ್ಟ್ರೀಯ ವೈಮಾನಿಕ ಹಾಗೂ ಬಾಹ್ಯಾಕಾಶ ಆಡಳಿತ ಸಂಸ್ಥೆ)ದಲ್ಲಿರುವ ವಿಜ್ಞಾನಿಗಳಲ್ಲಿ ಶೇ.೩೬ರಷ್ಟು ಭಾರತೀಯರು ಎಂದು ಭಾರತ ಸರ್ಕಾರದ ೨೦೦೮ರ ಸಮೀಕ್ಷೆಯೊಂದು ತಿಳಿಸಿದೆ. ನಾಸಾದಲ್ಲಿರುವ ಪ್ರತಿ ಹತ್ತು ವಿಜ್ಞಾನಿಗಳಲ್ಲಿ ೪ ಮಂದಿ ಭಾರತೀಯರು. ಅಮೆರಿಕ ಮೂಲದ ಮೈಕ್ರೊಸಾಫ್ಟ್ ಕಂಪೆನಿಯಲ್ಲಿ ಭಾರತೀಯರ ಸಂಖ್ಯೆ ಶೇ.೩೪, ಐಬಿಎಂನಲ್ಲಿ ಶೇ.೨೮, ಇಂಟೆಲ್‌ನಲ್ಲಿ ಶೇ.೧೭ ಹಾಗೂ ಜೆರಾಕ್ಸ್ ಕಂಪೆನಿಯಲ್ಲಿ ಶೇ.೧೩. ನಾಸಾದ ಮಾಜಿ ಆಡಳಿತಗಾರ ಮೈಕ್ ಗ್ರಿಫಿನ್ ಒಮ್ಮೆ ಹೇಳಿದ್ದರು: India has extensive space related experience, capabilities and infrastructure, and will continue to be a welcome partner in NASA’s future space exploration activities.‘. ಸುನೀತಾ ವಿಲಿಯಮ್ಸ್ ಹೆಸರು ನೀವು ಕೇಳಿಯೇ ಇರುತ್ತೀರಿ. ನಾಸಾದಲ್ಲಿ ಆಕೆ ಬಾಹ್ಯಾಕಾಶ ವಿಭಾಗ ಕಚೇರಿಯ ಉಪ ಮುಖ್ಯಸ್ಥೆ. ಅತೀ ದೀರ್ಘ ದೂರ ಗಗನ ಯಾತ್ರೆ ಮಾಡಿದ ಸಾಹಸಿ. ಬಾಹ್ಯಾಕಾಶ ಯಾತ್ರೆ ಮಾಡಿ ಬಂದ ಭಾರತೀಯ ಮೂಲದ ಎರಡನೇ ಮಹಿಳೆ. ಮೊದಲನೆಯ ಮಹಿಳೆ ಕೂಡ (ಕಲ್ಪನಾ ಚಾವ್ಲಾ) ಭಾರತೀಯ ಮೂಲದವರೆ. ನಾಸಾದ ಹಿರಿಯ ವಿಜ್ಞಾನಿ ಡಾ. ಮೆಯ್ಯ ಮೆಯ್ಯಪ್ಪನ್, ಭೂಪರಿ ವೀಕ್ಷಣೆಯ ಮುಖ್ಯ ವಿಜ್ಞಾನಿ ಕಮಲೇಶ್ ಲುಲ್ಲಾ, ಇನ್ನೊಬ್ಬ ಮುಖ್ಯ ವಿಜ್ಞಾನಿ ಶರ್ಮಿಳಾ ಭಟ್ಟಾಚಾರ್ಯ, ಯೋಜನಾ ವಿಭಾಗದ ವಿಜ್ಞಾನಿ ಅಶ್ವಿನ್ ವಾಸವಾಡ… ಇವರೆಲ್ಲ ನಾಸಾದ ಉನ್ನತ ಸ್ಥಾನದಲ್ಲಿರುವ ಪ್ರಮುಖ ವಿಜ್ಞಾನಿಗಳು. ಇಂತಹ ಉನ್ನತ ಸ್ಥಾನಗಳನ್ನು ಇವರು ಅಲಂಕರಿಸಿರುವುದು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯದಿಂದಲೇ.

Dr.Vivek Hallgere Murthy
Dr.Vivek Hallgere Murthy

ಈಚೆಗೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತೀಯ ಮೂಲದ ಡಾ.ವಿವೇಕ್ ಹಳ್ಳಗೆರೆ ಮೂರ್ತಿ ಅವರನ್ನು ಅಮೆರಿಕದ ಸರ್ಜನ್ ಜನರಲ್ ಹುದ್ದೆಗೆ ನೇಮಕ ಮಾಡಿದರು. ಅದೊಂದು ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಪ್ರತಿಷ್ಠಿತ ಹುದ್ದೆ. ಡಾ.ಮೂರ್ತಿಯವರು ಅಮೆರಿಕದ ವೈದ್ಯ ಸಂಘದ ಅಧ್ಯಕ್ಷ ಹಾಗೂ ಸಹ ಸಂಸ್ಥಾಪಕರು. ಈ ಹುದ್ದೆಗೇರಿದ ಅತೀ ಚಿಕ್ಕ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆ ಕೂಡ ಅವರದಾಗಿದೆ. ಒಬಾಮ ಅವರ ಹೆಲ್ತ್‌ಕೇರ್ ಯೋಜನೆಗೆ ಮೂರ್ತಿಯವರ ಕೊಡುಗೆ ಸಾಕಷ್ಟಿದೆ.

Sunita_Williams
Sunita_Williams

ಕಳೆದ ನವೆಂಬರ್ ತಿಂಗಳಲ್ಲಿ ಕಲ್ಪೇನ್ ಸುರೇಶ್ ಮೋದಿ ಎಂಬ ಭಾರತೀಯ ಮೂಲದ ನಟನೊಬ್ಬನನ್ನು ಅಮೆರಿಕದ ಆರ್ಟ್ಸ್ ಆಂಡ್ ಹ್ಯುಮ್ಯಾನಿಟೀಸ್ ಸಮಿತಿಯ ಪ್ರಮುಖ ಹುದ್ದೆಗೆ ಒಬಾಮ ನೇಮಿಸಿದರು. ಅಮೆರಿಕದ ಥಿಂಕರ‍್ಸ್ – ೫೦ಯಲ್ಲಿ ಏಳು ಮಂದಿ ಭಾರತೀಯ ಮೂಲದವರಿದ್ದಾರೆ. ವಿವಿಧ ವಿಷಯಗಳ ಕುರಿತು ನೀತಿ ನಿರೂಪಣೆ, ಚಿಂತನೆ ನಡೆಸುವ ಅತ್ಯುನ್ನತ ಸಮಿತಿ ಇದು.

ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಪ್ರತಿಭಾವಂತರ ಯಶೋಗಾಥೆಗೆ ಕೊನೆಯೇ ಇಲ್ಲ. ರಾಜಕೀಯ ಮತ್ತು ಮಿಲಿಟರಿ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಒಬಾಮ ಇತ್ತೀಚೆಗೆ ನೇಮಿಸಿದ್ದು ಭಾರತೀಯ ಮೂಲದ ಪುನೀತ್ ತಲ್ವಾರ್ ಅವರನ್ನು. ಇದೂ ಕೂಡ ಅತ್ಯುನ್ನತ ಹುದ್ದೆ. ತಲ್ವಾರ್ ಆ ಹುದ್ದೆಯನ್ನು ಅಲಂಕರಿಸಿ, ಅಂತಾರಾಷ್ಟ್ರೀಯ ಭದ್ರತಾ ನೆರವು, ಮಿಲಿಟರಿ ನಿರ್ವಹಣೆ, ರಕ್ಷಣಾ ತಂತ್ರಗಾರಿಕೆ ಮೊದಲಾದ ವಿಷಯಗಳಲ್ಲಿ ನೀತಿ ನಿರೂಪಣೆ ನಿರ್ವಹಿಸಲಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಒಬಾಮ ಇನ್ನೊಂದು ನೇಮಕಾತಿಗೂ ಸಹಿ ಹಾಕಿದ್ದು ಭಾರತಕ್ಕೆ ಸಿಕ್ಕ ಇನ್ನೊಂದು ಗೌರವ. ಭಾರತೀಯ ಮೂಲದ ಗಾರ್ಗಿ ಘೋಷ್ ಅವರನ್ನು ಗ್ಲೋಬಲ್ ಡೆವಲಪ್‌ಮೆಂಟ್ ಕೌನ್ಸಿಲ್‌ಗೆ ಸದಸ್ಯರನ್ನಾಗಿ ನೇಮಿಸಿದರು. ಇದೊಂದು ಪ್ರಮುಖ ಹುದ್ದೆ. ಒಬಾಮ ಆಡಳಿತದಲ್ಲಿ ಭಾರತೀಯ ಮೂಲದ ಎರಡು ಡಜನ್‌ಗೂ ಹೆಚ್ಚು ಮಂದಿ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂಡೀಗಢ ಮೂಲದ ನ್ಯಾಯವಾದಿ ಶ್ರೀನಿವಾಸನ್ ಅಮೆರಿಕದ ನ್ಯಾಯಾಧೀಶರಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಘಟನೆ ಭಾರತದ ಹೆಮ್ಮೆಯ ಮುಕುಟಕ್ಕೆ ಪೋಣಿಸಿದ ಮತ್ತೊಂದು ಮಣಿ. ೪೬ರ ಹರೆಯದ ಶ್ರೀನಿವಾಸನ್ ಅಮೆರಿಕದ ಎರಡನೇ ಅತೀ ಪ್ರತಿಷ್ಠಿತ ನ್ಯಾಯಾಲಯಕ್ಕೆ ಈಗ ನ್ಯಾಯಾಧೀಶರು. ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಶ್ರೀನಿವಾಸನ್ ಅವರ ತಾಯಿ ಸರೋಜಾ ಶ್ರೀನಿವಾಸನ್ ಭಗವದ್ಗೀತೆಯ ಪ್ರತಿಯನ್ನು ಭಕ್ತಿಯಿಂದ ಕೈಯಲ್ಲಿ ಹಿಡಿದಿದ್ದರು. ಆ ಸಮಾರಂಭಕ್ಕೆ ನಮ್ಮ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಕೂಡ ಸಾಕ್ಷಿಯಾಗಿದ್ದರು. ಇದಕ್ಕೂ ಮೊದಲು ಶ್ರೀನಿವಾಸನ್ ಪ್ರಧಾನ ಡೆಪ್ಯೂಟಿ ಸಾಲಿಸಿಟರ್ ಜನರಲ್ ಆಗಿ ಅಮೆರಿಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆ ಹುದ್ದೆಯಲ್ಲಿ ಅವರಿಗಿಂತಲೂ ಮೊದಲಿದ್ದ ನೀಲ್ ಕುಮಾರ್ ಕತ್ಯಾಲ್ ಕೂಡ ಭಾರತೀಯ ಮೂಲದವರೇ.

ನಮ್ಮ ನೈನಾ ‘ಮಿಸ್ ಅಮೆರಿಕ’

Miss_America_Nina_Davuluri
Miss_America_Nina_Davuluri

ಈಗ ಇದಕ್ಕಿಂತಲೂ ಇನ್ನೊಂದು ಹೆಮ್ಮೆಯ ಹಾಗೂ ಅಚ್ಚರಿಯ ಸಂಗತಿ ಎಂದರೆ ಇತ್ತೀಚೆಗೆ ೨೦೧೪ರ ‘ಮಿಸ್ ಅಮೆರಿಕ’ ಆಗಿ ಆಯ್ಕೆಯಾಗಿರುವ ಮಹಿಳೆ ಅಮೆರಿಕದವರಲ್ಲ, ಆದರೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಸಂಜಾತೆ ನೈನಾ ದವುಲುರಿ. ಮಿಸ್ ಅಮೆರಿಕ ಒಂದು ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ. ಆ ಸ್ಪರ್ಧೆಯಲ್ಲಿ ಅಮೆರಿಕದ ಬಿಳಿ ತೊಗಲಿನ ಸುಂದರ ಯುವತಿಯರನ್ನು ಹೊರತುಪಡಿಸಿ ಭಾರತೀಯ ಮೂಲದ ಕಂದು ಬಣ್ಣದ ಯುವತಿಯೊಬ್ಬಳು ಆಯ್ಕೆಯಾಗುತ್ತಾಳೆಂದರೆ ಅದಕ್ಕಿಂತ ಅಚ್ಚರಿಯ ಸಂಗತಿ ಇನ್ನಾವುದು? ಬಿಳಿಯರ ಅಮೆರಿಕದಲ್ಲಿ ಇಂತಹದೊಂದು ಪ್ರತಿಷ್ಠಿತ ಸ್ಪರ್ಧೆಯಲ್ಲಿ ೫೨ ಸ್ಪರ್ಧಿಗಳನ್ನು ಹಿಂದಿಕ್ಕಿ ವಿಜೇತಳಾಗುವುದು ಸಣ್ಣ ಸಂಗತಿಯೇನಲ್ಲ. ಆದರೆ ನೈನಾ ಅಂತಹದೊಂದು ಸಾಧನೆ ಮಾಡಿ ಇತಿಹಾಸ ನಿರ್ಮಿಸಿದ್ದಾಳೆ. ನೈನಾ ದವುಲುರಿ ‘ಮಿಸ್ ಅಮೆರಿಕ’ ಆಗಿ ಕಿರೀಟ ಧರಿಸುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರಿಗೆ (ಅಷ್ಟೇಕೆ, ಭಾರತದಲ್ಲಿರುವವರಿಗೂ) ಅತ್ಯಂತ ಹೆಚ್ಚು ಸಂತಸವಾಗಿದ್ದರೆ, ಅತ್ತ ಅಮೆರಿಕದ ಕೆಲವು ಬಿಳಿಯರಿಗೆ ರೋಷವುಕ್ಕಿ ಬಂದಿದ್ದೂ  ನಿಜ. ಒಂದೆಡೆ ನೈನಾಗೆ ಶುಭಾಶಯಗಳ ಫೋನ್ ಕರೆ, ಮೆಸೇಜ್ ಬರುತ್ತಿದ್ದರೆ ಇನ್ನೊಂದೆಡೆ ಸಾಮಾಜಿಕ ಜಾಲ ತಾಣದಲ್ಲಿ ಆಕೆಯ ವಿರುದ್ಧ ಜನಾಂಗೀಯ ನಿಂದನೆಗಳ ಟ್ವಿಟರ್‌ಗಳು ಹರಿದಾಡುತ್ತಿದ್ದವು. ನೈನಾ ಮಾಡಿದ ತಪ್ಪಾದರೂ ಏನು? ಅವಳೇನೂ ಲಂಚ ಕೊಟ್ಟು ‘ಮಿಸ್ ಅಮೆರಿಕ’ ಆಗಿರಲಿಲ್ಲ. ಹಾಗೆಲ್ಲ ಲಂಚ ಕೊಟ್ಟು ಅಂತಹದೊಂದು ಪ್ರಮುಖ ಪ್ರಶಸ್ತಿ ಪಡೆಯುವುದು ಅಮೆರಿಕದಲ್ಲಿ ಸಾಧ್ಯವೂ ಇಲ್ಲ. ಭಾರತೀಯ ಮೂಲದ ಕಂದು ಬಣ್ಣದ ಸುಂದರಿಯೊಬ್ಬಳು ‘ಮಿಸ್ ಅಮೆರಿಕ’ ಆಗಿಬಿಟ್ಟಳಲ್ಲ ಎಂಬ ಆತಂಕವೇ ಅವಳ ಮೇಲೆ ಕೋಪದ ಟ್ವಿಟರ್‌ಗಳು ಹರಿದಾಡಲು ಕಾರಣ. ಸರಿಯಾಗಿ ೩೦ ವರ್ಷಗಳ ಹಿಂದೆ ವನೇಸಾ ವಿಲಿಯಮ್ಸ್ ಎಂಬ ನೀಗ್ರೋ ಯುವತಿಯೊಬ್ಬಳು ‘ಮಿಸ್ ಅಮೆರಿಕ’ ಕಿರೀಟ ಧರಿಸಿದ್ದಳು. ಸೌಂದರ್ಯ, ಬುದ್ಧಿವಂತಿಕೆ, ಪ್ರತಿಭೆ, ಅಂಗಸೌಷ್ಠವ… ಹೀಗೆ ಸೌಂದರ್ಯ ಸ್ಪರ್ಧೆ ಬೇಡುವ ಎಲ್ಲ ಅಂಶಗಳೂ ನೈನಾಳಲ್ಲಿದ್ದವು. ಭರತನಾಟ್ಯದಲ್ಲೂ ಪಾರಂಗತಳಾಗಿರುವ ಆಕೆ ಬಾಲಿವುಡ್ ಫ್ಯೂಷನ್ ಡ್ಯಾನ್ಸ್‌ನಲ್ಲೂ ಪಳಗಿದಾಕೆ. ‘ಇದೊಂದು ಅಚ್ಚರಿಯ ಸಂಗತಿಯೇನಲ್ಲ. ನನ್ನ ಮೊಮ್ಮಗಳ ದೃಢ ನಿರ್ಧಾರ ಹಾಗೂ ಪ್ರತಿಭೆಯಿಂದ ಇದು ಸಾಧ್ಯವಾಗಿದೆ’ ಎಂದು ನೈನಾಳ ಅಜ್ಜಿ ಕೋಟೇಶ್ವರಮ್ಮ ಚೌಧರಿ ಹೇಳಿದ್ದಾರೆ. ‘ಕೊನೆಗೂ ಅವಳ ಕನಸು ನನಸಾಗಿದೆ’ ಎಂದು ಅಜ್ಜಿ ಸಂತಸ ಪಟ್ಟಿದ್ದಾರೆ.

ನಾವೆಲ್ಲರೂ ವಿರೋಧಿಸುವ ಅಮೆರಿಕ ಮೂಲದ ಬಹುರಾಷ್ಟ್ರೀಯ ಪೆಪ್ಸಿ ಕೋಲಾ ಕಂಪೆನಿಯ ಚೇರ್‌ಮನ್ ಹಾಗೂ ಸಿಇಓ ಹುದ್ದೆಗೂ ಈಗ ಇಂದ್ರನೂಯಿ ಎಂಬ ಭಾರತೀಯ ಮಹಿಳೆ ನೇಮಕಗೊಂಡಿರುವುದು ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾರತೀಯರ ನಾಗಾಲೋಟಕ್ಕೆ ಸಂಕೇತ.

ಆಗ ನಿಂದನೆ, ಈಗ ಶ್ಲಾಘನೆ

ಒಂದು ಕಾಲವಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅಮೆರಿಕ ದೇಶದಲ್ಲಿ ಭಾರತದ ಬಗ್ಗೆ ಇದ್ದ ಭಾವನೆ ಅತ್ಯಂತ ಹೀನಾಯ ಹಾಗೂ ತುಚ್ಛ. ಭಾರತವೆಂದರೆ ಭಿಕ್ಷುಕರ ದೇಶ, ಹಾವು, ಚೇಳುಗಳ ನಾಡು. ಗಡ್ಡ ಬಿಟ್ಟ ಸನ್ಯಾಸಿಗಳು, ರಸ್ತೆಯಲ್ಲಿ ಅಂಡಲೆಯುವ ದನಕರುಗಳು, ಕಿತ್ತು ತಿನ್ನುವ ದಾರಿದ್ರ್ಯ… ಅಮೆರಿಕನ್ನರ ಕಣ್ಣಿನಲ್ಲಿ ಭಾರತದ ಕುರಿತು ಮೂಡಿದ್ದ ಚಿತ್ರಣ ಇದೊಂದೇ ಆಗಿತ್ತು. ಭಾರತವನ್ನು ತುಚ್ಛವಾಗಿ ಹೀಯಾಳಿಸಿ ಅಮೆರಿಕದ ಹಲವು ಲೇಖಕರು ಪುಸ್ತಕಗಳನ್ನೇ ಬರೆದಿದ್ದರು. ಸ್ವತಃ ಸ್ವಾಮಿ ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮೇಳನದಲ್ಲಿ ಭಾಷಣ ಮಾಡುವುದಕ್ಕೆ ಮುನ್ನ ಅವರ ಬಗ್ಗೆಯೂ ಅಲ್ಲೆಲ್ಲ ತಾತ್ಸಾರ ಭಾವನೆಯೇ ಹೆಪ್ಪುಗಟ್ಟಿತ್ತು. ಕಾವಿ ಬಟ್ಟೆಯ ಈ ದರಿದ್ರ ಸನ್ಯಾಸಿ ಅದೇನು ತಾನೆ ಧಾರ್ಮಿಕ ಉಪನ್ಯಾಸ ಮಾಡಿಯಾನು? ಹಿಂದೂ ಧರ್ಮದಲ್ಲಿ ಕ್ರೈಸ್ತ ಧರ್ಮಕ್ಕಿಂತ ಶ್ರೇಷ್ಠವಾಗಿದ್ದು ಇರಲು ಸಾಧ್ಯವೆ ಇತ್ಯಾದಿ ಟೀಕೆಗಳು ಅಮೆರಿಕದ ಪತ್ರಿಕೆಗಳಲ್ಲಿ ವ್ಯಕ್ತವಾಗಿತ್ತು. ಆದರೆ ವಿವೇಕಾನಂದರ ಮೊದಲನೆಯ ದಿನದ ಭಾಷಣವೇ ಇಡೀ ಅಮೆರಿಕವನ್ನು ದಂಗಾಗುವಂತೆ ಮಾಡಿದ್ದು ಈಗ ಇತಿಹಾಸ. ಅದಾದ ಮೇಲೆ ಅವರ ಭಾಷಣಕ್ಕೆ ಪ್ರತಿದಿನ ಪ್ರೇಕ್ಷಕರು ಇರುವೆಯಂತೆ ಮುತ್ತಿರುತ್ತಿದ್ದರು.

Sharmila Bhattacharya
Sharmila Bhattacharya

ವಿವೇಕಾನಂದರು ಅಮೆರಿಕ ಯಾತ್ರೆ ಮಾಡಿ ಬಂದ ಬಳಿಕವೂ ಭಾರತದ ಬಗ್ಗೆ ಉತ್ತಮ ಭಾವನೆಯೇನೂ ಅಷ್ಟಾಗಿ  ಮೂಡಿರಲಿಲ್ಲ. ಭಾರತವೆಂದರೆ ಆಷಾಢಭೂತಿ ರಾಜಕಾರಣಿಗಳ ತವರು ಎಂದು ಅಮೆರಿಕನ್ನರು ಟೀಕಿಸುತ್ತಿದ್ದುದುಂಟು. ಆದರೆ ೭೦ರ ದಶಕದ ಬಳಿಕ ಭಾರತದಿಂದ ಯುವ ವಿಜ್ಞಾನಿಗಳು, ತಂತ್ರಜ್ಞರು, ವೈದ್ಯರು, ಶಿಕ್ಷಣತಜ್ಞರು, ಉಪನ್ಯಾಸಕರು ಪ್ರವಾಹದೋಪಾದಿಯಲ್ಲಿ ಅಮೆರಿಕದತ್ತ ವಲಸೆ ಹೊರಟು, ಅಲ್ಲಿನ ನಾಗರಿಕರಾಗಿ ಗ್ರೀನ್ ಕಾರ್ಡ್ ಪಡೆದ ಬಳಿಕ ಭಾರತದ ಬಗೆಗಿನ ಅಮೆರಿಕದ ದೃಷ್ಟಿಯೇ ಸಂಪೂರ್ಣ ಬದಲಾಯಿತು. ೬೦ರ ದಶಕದಲ್ಲಿ ವಾಷಿಂಗ್ಟನ್‌ನಲ್ಲಿ ಭಾರತದ ರಾಯಭಾರಿಯಾಗಿದ್ದ ವಿಜಯಲಕ್ಷ್ಮೀ ಪಂಡಿತ್ (ಜವಾಹರಲಾಲ್ ನೆಹರೂರವರ ಸೋದರಿ) ಅವರಿಗೆ ಆಗಿನ ಅಮೆರಿಕ ಸರ್ಕಾರದ ಕಾರ್ಯದರ್ಶಿ ಜಾನ್ ಫಾಸ್ಟರ್ ಡಲಸ್ ಅಲಿಪ್ತ ನೀತಿಯನ್ನು ಪ್ರತಿಪಾದಿಸಿದ್ದಕ್ಕೆ ನೊಟೀಸ್ ನೀಡಿದ್ದರು. ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಆಗಿನ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಚಾಡಿ ಮಾತುಗಳನ್ನು ನಂಬಿ ನಮ್ಮ ಇಂದಿರಾಗಾಂಧಿಯವರನ್ನು Bitch’ ಎಂದು ಹೀಯಾಳಿಸಿದ್ದರು. ಭಾರತೀಯರನ್ನು ಹೀಗೆ ಅವಮಾನಿಸುವ ವಿದ್ಯಮಾನ ಈಗಲೂ ನಡೆಯುತ್ತಿದೆ. ಹಾಗಿಲ್ಲದಿದ್ದರೆ ನಮ್ಮ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ವಿಮಾನ ನಿಲ್ದಾಣದಲ್ಲಿ ಶರೀರ ತಪಾಸಣೆ ನಡೆಸಿ ಅವಮಾನಿಸಿzಕೆ? ಮಾಜಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೂ ಇಂತಹದೇ ಅವಮಾನಕರ ತಪಾಸಣೆ ಮಾಡಿzಕೆ? ಜನಪ್ರಿಯ ನಟ ಶಾರುಖ್ ಖಾನ್‌ಗೂ ಇಂತಹದೇ ‘ಟ್ರೀಟ್‌ಮೆಂಟ್’ ಅಮೆರಿಕದ ವಿಮಾನ ನಿಲ್ದಾಣದಲ್ಲಿ ದೊರಕಿದ್ದುದು ನಿಮಗೆ ಗೊತ್ತೇ ಇದೆ.

Shrinivasan Judge
Shrinivasan Judge

ಬದಲಾದ ಹೊಸ ಚಿತ್ರ

ಆದರೀಗ ಕಾಲಚಕ್ರ ಸಂಪೂರ್ಣ ಒಂದು ಸುತ್ತು ತಿರುಗಿದೆ. ಚಕ್ರ ತಿರುಗಿದಂತೆ ಅದು ಸೃಷ್ಟಿಸುವ ಚಿತ್ರಗಳೂ ಬದಲಾಗುತ್ತವೆ. ಇದಕ್ಕೆ ಅಮೆರಿಕದಲ್ಲಿ ಈಗ ಭಾರತೀಯರು ಪಡೆಯುತ್ತಿರುವ ಗೌರವದ ಹುದ್ದೆಗಳೇ ಸಾಕ್ಷಿ. ಒಬಾಮ ಆಡಳಿತ ಬಂದ ಮೇಲಂತೂ ಅಮೆರಿಕದಲ್ಲಿರುವ ಭಾರತೀಯರಿಗೆ ಶುಕ್ರ ದೆಸೆ ಪ್ರಾಪ್ತವಾದಂತಿದೆ. ವಿಶೇಷವಾಗಿ ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯರು ತಮ್ಮ ಹಿಡಿತ ಸಾಧಿಸಿದ್ದಾರೆ. ಮೊದಲ ದರ್ಜೆಯ ಭಾರತೀಯ ಮೂಲದ ಪ್ರಾಧ್ಯಾಪಕರಿಲ್ಲದ ಯಾವುದೇ ವಿಶ್ವವಿದ್ಯಾಲಯ ಪ್ರಾಯಶಃ ಅಮೆರಿಕದಲ್ಲಿ ಇರಲಿಕ್ಕಿಲ್ಲ. ಬಾಬಿ ಜಿಂದಾಲ್ ಸೇರಿದಂತೆ ಒಂದಿಬ್ಬರು ಭಾರತೀಯ ಮೂಲದವರು ಅಮೆರಿಕದ ವಿವಿಧ ಪ್ರಾಂತಗಳಿಗೆ ಗವರ್ನರ್ ಆಗಿಯೂ ನೇಮಕಗೊಂಡಿದ್ದಾರೆ.

ಅಮೆರಿಕದಲ್ಲಿ ನೆಲೆಸುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ೨೦೦೦-೨೦೧೦ರ ದಶಕದಲ್ಲಿ ಕೇವಲ ೧.೯ ದಶಲಕ್ಷದಷ್ಟಿದ್ದ ಸಂಖ್ಯೆ ಈಗ ೩.೧೯ ದಶಲಕ್ಷ ದಾಟಿದೆ. ಶೇ.೨.೮೪ ದಶಲಕ್ಷದಷ್ಟು ಹೆಚ್ಚಳವಾಗಿದೆ. ಚೈನಾ ಮೂಲದ ಅಮೆರಿಕನ್ನರು ೩.೭೯ ದಶಲಕ್ಷ, ಫಿಲಿಪೈನ್ ಮೂಲದ ಅಮೆರಿಕನ್ನರು ೩.೪೨ ದಶಲಕ್ಷ ಆಗಿದ್ದರೆ ಭಾರತೀಯ ಮೂಲದ ಅಮೆರಿಕನ್ನರು ೩ನೇ ಅತಿ ದೊಡ್ಡ ಏಷ್ಯಾ ಸಂಜಾತರಾಗಿದ್ದಾರೆ. ಏಷ್ಯನ್ ಅಮೆರಿಕನ್ ಫೌಂಡೇಶನ್ ನೀಡಿರುವ ಅಂಕಿ-ಸಂಖ್ಯೆ ಇದು. ಗ್ರೀನ್‌ಕಾರ್ಡ್ ಪಡೆದು ಅಮೆರಿಕದ ನಾಗರಿಕರಾಗಿರುವ, ಮತದಾನದ ಹಕ್ಕು ಪಡೆದಿರುವ ಭಾರತೀಯರ ಸಂಖ್ಯೆಯೇ ಈಗ ೧ ದಶಲಕ್ಷಕ್ಕೂ ಹೆಚ್ಚು. ಪಾಕಿಸ್ಥಾನಿ ಮೂಲದ ಅಮೆರಿಕನ್ನರ ಸಂಖ್ಯೆ ಭಾರತೀಯರಿಗಿಂತ ಹೆಚ್ಚಿದ್ದರೂ ಪ್ರತಿಷ್ಠಿತ ಹುದ್ದೆಗಳಲ್ಲಿ ಅವರಿಗೆ ಅವಕಾಶ ದೊರೆತಿಲ್ಲ. ಮತದಾನದ ಹಕ್ಕು ಕೂಡ ಹೆಚ್ಚಿನವರಿಗೆ ಸಿಕ್ಕಿಲ್ಲ.

ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯರು ಈಗ ತಮ್ಮ ಪಾರುಪತ್ಯ ನಡೆಸಿದ್ದಾರೆ. ಆದರೆ ತಾವು ನೆಲೆಸಿರುವ ಯಾವುದೇ ದೇಶದ ಹಿತಾಸಕ್ತಿಗಳಿಗೆ ಅವರು ಧಕ್ಕೆ ತಂದಿಲ್ಲ. ಆಯಾ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ. ಭಾರತದ ಮೇಲೆ ದಾಳಿ ನಡೆಸಿದ ಮೊಗಲರು, ಬ್ರಿಟಿಷರು, ಫ್ರೆಂಚರು ಇಲ್ಲಿನ ಧರ್ಮ ಸಂಸ್ಕೃತಿಗೆ ಧಕ್ಕೆ ತಂದರು. ಭಾರತದ ಅಸ್ಮಿತೆಗೇ ಕೊಡಲಿಯೇಟು ಇಟ್ಟರು. ಭಾರತೀಯರು ಮಾತ್ರ ಅಂತಹ ನೀಚವರ್ತನೆ ಎಲ್ಲೂ ತೋರಿಲ್ಲ. ಏಕೆಂದರೆ ಭಾರತೀಯ ಸಂಸ್ಕೃತಿಯೇ ಅಂತಹದು. ‘ಸರ್ವೇ ಜನಾಃ ಸುಖಿನೋ ಭವಂತು’ ಎಂದವರು ನಾವು. ‘ವಸುಧೈವ ಕುಟುಂಬಕಂ’ ಎಂಬ ವಿಶಾಲಗ್ರಹಿಕೆ ನಮ್ಮದು. ಇಡೀ ಜಗತ್ತನ್ನೇ ಒಂದು ಕುಟುಂಬ ಎಂದು ಭಾವಿಸಿದ ಶ್ರೇಷ್ಠ ಚಿಂತನೆ ನಮ್ಮದು. ಅದಕ್ಕೇ ಭಾರತೀಯರೆಂದರೆ ಈಗ ಎಲ್ಲ ದೇಶದವರಿಗೂ ಅಚ್ಚುಮೆಚ್ಚು.

ಈಗಾಗಲೇ ಅಮೆರಿಕದ ಒಂದೆರಡು ರಾಜ್ಯಗಳಲ್ಲಿ ಭಾರತೀಯ ಮೂಲದವರು ಗವರ್ನರ್ ಹುದ್ದೆಗಳಲ್ಲಿದ್ದಾರೆ. ಇನ್ನಷ್ಟು ರಾಜ್ಯಗಳಲ್ಲಿ ಭಾರತೀಯ ಮೂಲದವರು ಗವರ್ನರ್ ಹುದ್ದೆ ಅಲಂಕರಿಸುವಂತಾದರೆ, ವ್ಯಾಪಾರ, ವಾಣಿಜ್ಯ ಮತ್ತು ಉದ್ಯಮಗಳಲ್ಲಿ ಮತ್ತಷ್ಟು ಭಾರತೀಯರು ಮುಂಚೂಣಿ ಸ್ಥಾನಕ್ಕೆ ನೆಗೆದರೆ ಒಂದು ಶುಭದಿನ ಭಾರತೀಯ ಮೂಲದ ವ್ಯಕ್ತಿಯೊಬ್ಬ ಅಮೆರಿಕದ ಅಧ್ಯಕ್ಷರಾಗಿಯೂ ಆಯ್ಕೆಯಾಗಬಹುದು. ಅದೇನೂ ಅಸಂಭವವಲ್ಲ. ಹಾಗಾಗಲಿ ಎಂದು ನಾವೆಲ್ಲರೂ ಹಾರೈಸೋಣ. ಆಗ ಜೈ ಹಿಂದ್, ಜೈ ಭಾರತ್, ಜೈ ಇಂಡಿಯಾ – ಅಮೆರಿಕ ಎಂದು ಉಘೇ ಹೇಳುವ ಸರದಿ ನಮ್ಮೆಲ್ಲರದಾಗಬಹುದಲ್ಲವೆ?

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
RSS Republic Day Special – ‘Patha Sanchalan’ held at Hosadurg, Kanhangad

RSS Republic Day Special - 'Patha Sanchalan' held at Hosadurg, Kanhangad

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Sewa International –  Activity Report 2013-14

Sewa International – Activity Report 2013-14

July 16, 2015
RSS Sarasanghachalak Mohan Bhagwat releases book on VHP Veterean Ashok Singhal

RSS Sarasanghachalak Mohan Bhagwat releases book on VHP Veterean Ashok Singhal

October 3, 2015
www.organiser.org relaunched by Sureshji Soni, SahSarkaryavah, RSS

www.organiser.org relaunched by Sureshji Soni, SahSarkaryavah, RSS

October 8, 2011
ಕನ್ನಡದ ತೇರನೆಳೆಯೋಣ ಬನ್ನಿ

ಕನ್ನಡದ ತೇರನೆಳೆಯೋಣ ಬನ್ನಿ

November 1, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In