• Samvada
  • Videos
  • Categories
  • Events
  • About Us
  • Contact Us
Friday, March 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ನೇರನೋಟ: ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!

Vishwa Samvada Kendra by Vishwa Samvada Kendra
May 4, 2014
in Articles, Nera Nota
250
0
ನೇರನೋಟ: ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!
492
SHARES
1.4k
VIEWS
Share on FacebookShare on Twitter

ನೇರನೋಟ: ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆ!

Cartoon businessman on his mobile phone

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಅದೊಂದು ಭಾನುವಾರದ ಸಂಜೆ. ಬಂಧುಗಳೊಬ್ಬರು ಮನೆಗೆ ಬರುವುದಾಗಿ ಫೋನ್ ಮಾಡಿ ಹೇಳಿದ್ದರು. ಬನ್ನಿ ಎಂದು ನಾನೂ ಸ್ವಾಗತಿಸಿದೆ. ಇಡೀ ವಾರ ಕಚೇರಿ ಕೆಲಸದ ಒತ್ತಡ, ಜೊತೆಗೆ ಮನೆಯ ಇನ್ನಿತರ ಅದೂ ಇದೂ ಕೆಲಸಗಳ ಭಾರದಿಂದ ಬಳಲಿದ ಯಾರಿಗೆ ಆದರೂ ಭಾನುವಾರವಾದರೂ ಕೊಂಚ ರಿಲ್ಯಾಕ್ಸ್ ಆಗಬೇಕೆಂದು ಅನಿಸುವುದು ಸಹಜವೇ. ಅದರಲ್ಲೂ ಆತ್ಮೀಯರ ಮನೆಗೆ ಹೋದರೆ, ಅಲ್ಲಿ ಅವರೊಡನೆ ಹರಟೆ ಹೊಡೆದರೆ ಮನಸ್ಸು ಹಗುರಾಗುತ್ತದೆಂಬುದು ಎಲ್ಲರ ಅನುಭವ.

ಬಂಧುಗಳು ನನಗೆ ಫೋನ್ ಮಾಡಿದ ಒಂದರ್ಧ ಗಂಟೆಯ ಬಳಿಕ ನಮ್ಮ ಮನೆಗೆ ಬಂದರು. ಅವರು ಇನ್ನೇನು ನಮ್ಮ ಮನೆಯೊಳಗೆ ಪ್ರವೇಶಿಸಿ ಕುರ್ಚಿಯಲ್ಲಿ ಕುಳಿತುಕೊಳ್ಳಬೇಕೆನ್ನುವಷ್ಟರಲ್ಲಿ ಅವರ ಮೊಬೈಲ್ ರಿಂಗಣಿಸತೊಡಗಿತು.  ಜೇಬಿನಿಂದ ಮೊಬೈಲ್ ಹೊರತೆಗೆದು ಬಂಧುಗಳು ಮಾತನಾಡತೊಡಗಿದರು. ಅವರು ಇತ್ತೀಚೆಗಷ್ಟೇ ತಮ್ಮ ಊರಿನಲ್ಲಿ ನಿವೇಶನವೊಂದನ್ನು ಖರೀದಿಸಿ ನೋಂದಣಿ ಮಾಡಿಸಿದ ಕುರಿತು ತಮ್ಮ ಸ್ನೇಹಿತರಿಗೆ ವಿವರಿಸುತ್ತಿದ್ದರು. ನಿವೇಶನ ಖರೀದಿಸಲು ತಗಲಿದ ಮೊತ್ತ, ನೋಂದಣಿಗೆ ಮಾಡಿದ ವೆಚ್ಚ – ಎಲ್ಲಾ ಸೇರಿ ಒಟ್ಟು ಎಷ್ಟಾಯಿತು ಇತ್ಯಾದಿ ವಿವರಗಳನ್ನು ತಿಳಿಸಿದರು. ಇದೆಲ್ಲ ಸುಮಾರು ೧೫ ನಿಮಿಷಗಳವರೆಗೆ ನಡೆಯಿತು. ಅಷ್ಟು ಹೊತ್ತು ನಾನು ಮೂಕ ಪ್ರೇಕ್ಷಕನಂತೆ ಸುಮ್ಮನೆ ಕುಳಿತಿರಬೇಕಾಯಿತು.

ಅದೆಲ್ಲ ಮುಗಿದು ಬಂಧುಗಳು ತಮ್ಮ ಮೊಬೈಲನ್ನು ಜೇಬಿನೊಳಗಿಟ್ಟರು. ಇನ್ನಾದರೂ ಇವರ ಬಳಿ ಲೋಕಾಭಿರಾಮ ಮಾತನಾಡೋಣವೆಂದು ನಾನು ಸಿದ್ಧವಾಗುತ್ತಿರುವಾಗಲೇ ಮತ್ತೆ ಅವರ ಮೊಬೈಲ್ ಹೊಡೆದುಕೊಳ್ಳತೊಡಗಿತು. ಪುನಃ ಇನ್ನೊಬ್ಬರಿಂದ ಕರೆ. ವಿಷಯವಾದರೋ ಅಂತಹ ಸೀರಿಯಸ್ ಏನಲ್ಲ. ಅದೇ ಸೈಟ್ ರಿಜಿಸ್ಟ್ರೇಶನ್‌ಗೆ ಸಂಬಂಧಿಸಿದ್ದು. ಅವರಿಗೂ ೧೫-೨೦ ನಿಮಿಷಗಳ ಕಾಲ ಅದನ್ನೆಲ್ಲ ಮೊಬೈಲ್‌ನಲ್ಲಿ ವಿವರಿಸಿದಾಗ ನಮ್ಮ ಮನೆಗೆ ಅವರು ಬಂದು ಅರ್ಧ ತಾಸಿಗಿಂತ ಹೆಚ್ಚು ಸಮಯವೇ ಕಳೆದು ಹೋಗಿತ್ತು. ಅವರ ಬಳಿ ಅಕ್ಷರಶಃ ನನಗೆ ಏನನ್ನೂ ಮಾತನಾಡಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಅವರ ಮೊಬೈಲ್ ನನ್ನ ಬಳಿ ಮಾತನಾಡದಂತೆ ಅವರನ್ನು ಹಿಡಿದಿಟ್ಟಿತ್ತು. ಆ ವೇಳೆಗೆ ನನ್ನ ಸಹನೆಯ ಕಟ್ಟೆಯೂ ಒಡೆದು ಹೋಗಿ, ‘ಸ್ವಲ್ಪ ಹೊತ್ತು ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡ್ತೀರಾ, ಪ್ಲೀಸ್’ ಎಂದೆ. ದುರ್ದಾನ ತೆಗೆದುಕೊಂಡವರಂತೆ ಅವರು ಸ್ವಿಚ್ ಆಫ್ ಮಾಡಿದರೋ ಅಥವಾ ಸೈಲೆಂಟ್ ಮೋಡ್‌ಗೆ ಬದಲಿಸಿದರೋ ಗೊತ್ತಾಗಲಿಲ್ಲ. ಆದರೆ ಅನಂತರ ಅವರ ಮೊಬೈಲ್‌ನಿಂದ ರಿಂಗ್‌ಟೋನ್‌ನ ಕರ್ಕಶ ನಾದವಂತೂ ಕೇಳಿ ಬರಲಿಲ್ಲ. ಆದರೂ ಅವರು ಆಗಾಗ ಜೇಬಿನಿಂದ ಮೊಬೈಲ್ ಹೊರತೆಗೆದು ನೋಡುತ್ತಲೇ, ನನ್ನ ಬಳಿ ಅನ್ಯಮನಸ್ಕರಾಗಿ ಮಾತನಾಡುತ್ತಿದ್ದುದನ್ನು ನಾನು ಗಮನಿಸುತ್ತಲೇ ಇದ್ದೆ.

ನಮ್ಮ ಮನೆಯಲ್ಲಿ ಅವರಿದ್ದಿz ಕೇವಲ ಒಂದೂವರೆ ಗಂಟೆಯ ಕಾಲ ಮಾತ್ರ. ಅದರಲ್ಲಿ ಅರ್ಧ ಗಂಟೆಗೂ ಹೆಚ್ಚು ಅವಧಿಯನ್ನು ಅವರ ಮೊಬೈಲ್ ಕಬಳಿಸಿಬಿಟ್ಟಿತ್ತು. ಅನಂತರ ಅವಸರ ಅವಸರವಾಗಿ ಅವರು ಊಟ ಮುಗಿಸಿ, ಲೇಟ್ ಆಯ್ತು, ಇನ್ನು ಮನೆಗೆ ಹೋಗಬೇಕೆಂದು ಕಾರು ಹತ್ತಿ ಹೊರಟೇ ಬಿಟ್ಟರು. ನಮ್ಮ ಮನೆಗೆ ಬರುವ ಮೊದಲು ಅವರು ಹೇಳಿದ್ದು – ಹೀಗೇ ಆತ್ಮೀಯವಾಗಿ ಮಾತನಾಡಲು ಬರುತ್ತೇವೆಂದು. ಆದರೆ ಆ ಆತ್ಮೀಯ ಮಾತುಕತೆ ನಡೆಯಲೇ ಇಲ್ಲ. ನಡೆಯಲು ಅವರ ಮೊಬೈಲ್ ಅವಕಾಶ ಕೊಟ್ಟಿದ್ದರೆ ತಾನೆ? ನಾನಂತೂ ಅವರೊಡನೆ ನಡೆಯುವ ಆತ್ಮೀಯ ಮಾತುಕತೆಗೆ ಅಡ್ಡಿಯಾಗದಿರಲೆಂದು ಆಗತಾನೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ನನ್ನಿಷ್ಟದ ಐಪಿಎಲ್ ಮ್ಯಾಚ್‌ನ ನೇರ ಪ್ರಸಾರವನ್ನು ವೀಕ್ಷಿಸದೆ ಟಿವಿ ಬಂದ್ ಮಾಡಿ ಕುಳಿತಿದ್ದೆ. ಹಾಗಿದ್ದರೂ ಆ ಬಂಧುವಿನೊಡನೆ ಆತ್ಮೀಯವಾಗಿ ಮಾತನಾಡಿ ಕಷ್ಟಸುಖ, ನೋವುನಲಿವುಗಳನ್ನು ಹಂಚಿಕೊಳ್ಳಲು ಸಾಧ್ಯವಾಗಲೇ ಇಲ್ಲ.

***

ಇನ್ನೊಂದು ದಿನ ಮತ್ತೊಬ್ಬ ಬಂಧು ಹೀಗೆಯೇ ತಮ್ಮ ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಆಗಮಿಸಿದ್ದರು. ಬೆಂಗಳೂರಿನಲ್ಲೇ ಅವರು ವಾಸವಾಗಿದ್ದರೂ ನಮ್ಮ ಮನೆಗೆ ಅವರು ಬರುತ್ತಿದ್ದುದು ವರ್ಷಕ್ಕೊಮ್ಮೆ ಅಥವಾ ತಪ್ಪಿದರೆ ೨ ಬಾರಿ. ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟು ನಡೆಸುತ್ತಿರುವ ಅವರಿಗೆ ಬಿಡುವು ಸಿಗುತ್ತಿದ್ದುದೇ ಅಪರೂಪ. ಆ ದಿನ ಹಾಗೂಹೀಗೂ ಬಿಡುವು ಮಾಡಿಕೊಂಡು ಮನೆಗೆ ಬಂದಿದ್ದರು. ಪರಸ್ಪರ ಉಭಯ ಕುಶಲೋಪರಿ ಮುಗಿದು ಇನ್ನೇನು ಮಾತುಕತೆ ಶುರುವಾಗುವ ವೇಳೆಗೆ ಅವರ ಮೊಬೈಲ್ ಕೂಡ ಗುನುಗುನಿಸತೊಡಗಿತು. ಅವರ ಮನೆಯೊಂದು ಖಾಲಿ ಇತ್ತು. ಯಾರೋ ಅಪರಿಚಿತರೊಬ್ಬರು ಆ ಮನೆ ತಮಗೆ ಬೇಕೆಂದೂ ಬಾಡಿಗೆ ಎಷ್ಟಾಗುತ್ತದೆಂದೂ ಅಡ್ವಾನ್ಸ್ ಯಾವಾಗ ಕೊಡಬೇಕೆಂದೂ ವಿಚಾರಿಸುತ್ತಿದ್ದರು. ನಮ್ಮ ಬಂಧು ಅದಕ್ಕೆ ಸಂಬಂಧಿಸಿದ ಮಾಹಿತಿಗಳೆಲ್ಲವನ್ನೂ ಕೊಡುತ್ತಿದ್ದರು. ತಮಾಷೆಯೆಂದರೆ ಅವರು ತಮ್ಮ ಮೊಬೈಲ್‌ನಲ್ಲಿ ಮಾತನಾಡುವಾಗ ಅದರ ಸ್ಪೀಕರ್ ಆನ್ ಮಾಡಿಕೊಂಡಿದ್ದರು. ಬೇಕೆಂದೇ ಆನ್ ಮಾಡಿಕೊಂಡಿದ್ದರೋ ಅಥವಾ ಅವರಿಗರಿವಿಲ್ಲದೇ ಸ್ಪೀಕರ್ ಆನ್ ಆಗಿತ್ತೋ ನನಗೆ ತಿಳಿಯದು. ಸ್ಪೀಕರ್ ಆನ್ ಆಗಿದ್ದರಿಂದ ಅವರಿಬ್ಬರ ನಡುವಿನ ಸಂಭಾಷಣೆಯನ್ನು ನಾನು ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಸಹಿಸಲೇಬೇಕಾಗಿತ್ತು. ನಮ್ಮ ಬಂಧುವಾದರೋ ಮೊದಲೇ ಗಟ್ಟಿಯಾಗಿ ಮಾತನಾಡುವ ಸ್ವಭಾವದವರು. ಮೊಬೈಲ್ ಸ್ಪೀಕರ್ ಬೇರೆ ಆನ್ ಆಗಿತ್ತು. ಹೀಗಿದ್ದ ಮೇಲೆ ಇನ್ನು ಕೇಳಬೇಕೆ? ಇಡೀ ಮನೆ ತುಂಬ ಅವರ ಮೊಬೈಲ್ ಸಂಭಾಷಣೆಯೇ ಮೊಳಗತೊಡಗಿತು. ಮನೆಯಲ್ಲಿ ಎಲ್ಲರೂ ತಮ್ಮ ಮಾತುಗಳನ್ನು ನಿಲ್ಲಿಸಿ ಆ ಸಂಭಾಷಣೆಯನ್ನೇ ಅನಿವಾರ್ಯವಾಗಿ ಆಲಿಸಬೇಕಾದ ಪರಿಸ್ಥಿತಿ. ಕೊನೆಗೂ ಆ ಸಂಭಾಷಣೆ ಮುಗಿದ ಬಳಿಕ ಅವರನ್ನು ಊಟಕ್ಕೆಬ್ಬಿಸಿದೆ. ಸದ್ಯ! ಊಟ ಮಾಡುವಾಗ ಮಾತ್ರ ಬೇರಾವುದೇ ಫೋನ್ ಕರೆ ಅವರಿಗೆ ಬರಲಿಲ್ಲ. ನಿಜಕ್ಕೂ ದೇವರು ದೊಡ್ಡವನು! ಹಾಗಾಗಿ ಊಟ ಮಾಡುತ್ತಾ ಒಂದಿಷ್ಟು ಹೊತ್ತು ಅವರೊಂದಿಗೆ ಆತ್ಮೀಯವಾಗಿ ಹರಟೆ ಹೊಡೆಯಲು ಸಾಧ್ಯವಾಯಿತು.

***

ನೀವು ಸಭೆ ಸಮಾರಂಭ, ಮದುವೆ ಮುಂಜಿ, ಪೂಜೆ, ಹೋಮ ಮತ್ತಿತರ ಕಾರ್ಯಕ್ರಮಗಳಿಗೆ ಹೋದಾಗ ಅಪರೂಪಕ್ಕೆ ಭೇಟಿಯಾಗುವ ಬಂಧುಗಳು, ಪರಿಚಿತರು, ಸ್ನೇಹಿತರೊಡನೆ. ಆತ್ಮೀಯವಾಗಿ ಮಾತನಾಡಬೇಕೆಂದು ಅಂದುಕೊಂಡಿರುತ್ತೀರಿ. ಆದರದು ಸಾಧ್ಯವಾಗುವುದೇ ಇಲ್ಲ. ಏಕೆಂದರೆ ಅವರೆಲ್ಲರೂ ತಮ್ಮ ಕಿವಿಗೆ ಮೊಬೈಲ್ ಅಂಟಿಸಿಕೊಂಡು ಸಂಭಾಷಣೆಯಲ್ಲಿ ನಿರತರಾಗಿರುತ್ತಾರೆ. ಅವರೊಮ್ಮೆ ಬಿಡುವಾಗಿದ್ದರೂ ನಿಮ್ಮ ಮೊಬೈಲ್ ನಿಮ್ಮ ಕಿವಿಗಂಟಿಕೊಂಡು ಯಾರ ಬಳಿಯೋ ಸಂಭಾಷಣೆಯಲ್ಲಿ ನಿರತವಾಗಿರುತ್ತದೆ. ನಿಮ್ಮ ಬಳಿ ಆತ್ಮೀಯವಾಗಿ ಮಾತನಾಡಬೇಕೆಂಬ ಆ ಬಂಧುಗಳ ಬಯಕೆಯೂ ಈಡೇರುವುದಿಲ್ಲ. ಕೊನೆಗೆ ಹಲೋ ಹಲೋ ಎಂಬ ಸಂಬೋಧನೆಗಷ್ಟೇ ಆತ್ಮೀಯತೆ ಸೀಮಿತವಾಗಿ ಬಿಡುತ್ತದೆ.

ಈಗೀಗ ಬ್ಲೂಟೂತ್ ಎಂಬ ಆಭರಣ ಹಲವರ ಕಿವಿಯ ಮೇಲೆ ವಿರಾಜಮಾನವಾಗಿರುತ್ತದೆ. ಹಿಂದೆಲ್ಲ ಕಿವಿಗೆ ಹೆಂಗಸರು ಹಾಗೂ ಗಂಡಸರು ಚಿನ್ನದ ಹರಳಿನ ಓಲೆ ಧರಿಸಿರುತ್ತಿದ್ದರು. ಈಗ ಓಲೆ ಧರಿಸುವವರೇ ಕಡಿಮೆ. ಹೆಂಗಸರೇ ಧರಿಸುತ್ತಿಲ್ಲ. ಇನ್ನು ಗಂಡಸರು ಧರಿಸುವ ಪ್ರಶ್ನೆಯಾದರೂ ಎಲ್ಲಿ? ಆದರೆ ಈಗ ಕಿವಿಯ ಓಲೆಯ ಜಾಗವನ್ನು ಬ್ಲೂಟೂತ್ ಎಂಬ ಆಭರಣ ಆಕ್ರಮಿಸಿದೆ. ಮದುವೆ ಮನೆಯ ಸಡಗರ ಸಂಭ್ರಮ ಅಥವಾ ಸಮಾರಂಭ ಒಂದರ ಸ್ವಾರಸ್ಯ ಸವಿಯಬೇಕಾದ ಮನಸ್ಸುಗಳು ಇನ್ನೆಲ್ಲೋ ಸಂಚರಿಸುತ್ತಿರುತ್ತವೆ. ದೇಹ ಮಾತ್ರ ಅಲ್ಲೇ ಇರುತ್ತದೆ.

ಬನಶಂಕರಿಯ ಚಿತಾಗಾರದ ಬಳಿ ನಡೆದ ಒಂದು ಘಟನೆ. ಪರಿಚಿತರೊಬ್ಬರು ತೀರಿ ಹೋಗಿದ್ದರು. ಇಡೀ ವಾತಾವರಣದಲ್ಲಿ ದುಃಖದ ಛಾಯೆ. ಅವರ ಶವ ಸಂಸ್ಕಾರದ ಮುನ್ನ ನಡೆಯುವ ಅಪರಕ್ರಿಯೆಗೆ ಪುರೋಹಿತರು ಸಿದ್ಧರಾಗಿದ್ದರು. ಅಪರಕ್ರಿಯೆ ಆರಂಭವಾದೊಡನೆ ಅವರಿಗೆ ಎಲ್ಲಿಂದಲೋ ಮೊಬೈಲ್ ಕರೆ. ಪುರೋಹಿತರು ಅಪರಕ್ರಿಯೆಯ ನಡುವೆಯೇ ಫೋನ್ ಎತ್ತಿಕೊಂಡು, ‘ನೀವು ಶವವನ್ನು ಚಿತಾಗಾರಕ್ಕೆ ತಂದು ಸಿದ್ಧವಾಗಿರಿ. ನಾನು ತುರ್ತಾಗಿ ಇಲ್ಲಿ ಅಪರಕ್ರಿಯೆ ಮುಗಿಸಿ ಅಲ್ಲಿಗೆ ಬರುವೆ’ ಎಂದು ಹೇಳಿ ಅಲ್ಲಿ ನಡೆಯುತ್ತಿದ್ದ ಅಪರಕ್ರಿಯೆಯನ್ನು ಮುಂದುವರಿಸಿದರು. ನಡುನಡುವೆ ಮತ್ತೆ ಅವರಿಗೆ ಫೋನ್ ಕರೆ ಬರುತ್ತಲೇ ಇತ್ತು. ಆ ಕರೆಗಳಿಗೆ ಅವರು ಉತ್ತರಿಸುತ್ತಲೇ ಇದ್ದರು. ಸಾಮಾನ್ಯವಾಗಿ ಅಪರಕ್ರಿಯೆಗಳನ್ನು ನಡೆಸುವ ಪುರೋಹಿತರು ಹಾಗೂ ಕರ್ತೃ ಅದನ್ನು ಶ್ರದ್ಧೆಯಿಂದ ಮನಸ್ಸಿಟ್ಟು ಮಾಡಬೇಕೆಂಬುದು ಅಪೇಕ್ಷೆ.  ಪುರೋಹಿತರಂತೂ ಏಕಾಗ್ರತೆಯಿಂದ ಮಾಡಬೇಕು. ಕರ್ತೃವಾದರೋ ಅಗಲಿದವರ ದುಃಖದಿಂದ ಬಳಲಿರುತ್ತಾರೆ. ಏಕಾಗ್ರತೆ ಅವರಿಂದ ಸಾಧ್ಯವಾಗದು. ಆದರೆ ಪುರೋಹಿತರಿಗೆ ಹಾಗಲ್ಲ. ಆದರೂ ಪುರೋಹಿತರು ಕಾಟಾಚಾರಕ್ಕೆಂದು ಅಪರಕ್ರಿಯೆ ನೆರವೇರಿಸಿದರೆ ಹೇಗಾಗಬಹುದು?

ಸತ್ಯನಾರಾಯಣ ಪೂಜೆಯೊಂದಕ್ಕೆ ಹೋಗಿದ್ದೆ. ಪೂಜೆಯ ನೇತೃತ್ವವಹಿಸಿದ್ದ ಆಚಾರ್ಯರು ಮಧ್ಯೆ ಮಧ್ಯೆ ಯಾರೊಡನೆಯೋ ಫೋನ್ ಸಂಭಾಷಣೆ ನಡೆಸುತ್ತಿದ್ದರು. ಕರ್ತೃಗಳಾದರೋ ಭಕ್ತಿಯಿಂದ ಕೈ ಮುಗಿದು ಕುಳಿತಿದ್ದರು.  ಆಚಾರ್ಯರು ಮಾತ್ರ ಕಾಟಾಚಾರಕ್ಕೆ ಮಂತ್ರ ಹೇಳುತ್ತಾ, ಇನ್ನಾರದೋ ಜೊತೆ ಫೋನ್ ಸಂಭಾಷಣೆ ಮುಂದುವರೆಸಿದ್ದರು. ಆ ಸಂಭಾಷಣೆಯನ್ನು ಸತ್ಯನಾರಾಯಣ ಪೂಜೆ ಮುಗಿದ ಬಳಿಕ ಮಾಡಬಹುದಿತ್ತು. ಸತ್ಯನಾರಾಯಣ ಪೂಜೆ ಮುಗಿಯುವ ತನಕ ತಮ್ಮ ಮೊಬೈಲ್‌ಗೆ ವಿಶ್ರಾಂತಿ ನೀಡಿದ್ದರೆ ಅಲ್ಲೊಂದು ಭಕ್ತಿಯ ವಾತಾವರಣ ನೆಲೆಸಿರುತ್ತಿತ್ತು. ಪೂಜೆ ನೆರವೇರಿಸಿದ್ದಕ್ಕೆ ಸಾರ್ಥಕತೆಯೂ ಇರುತ್ತಿತ್ತು.

ಮೊನ್ನೆ ನಡೆದ ಇನ್ನೊಂದು ಘಟನೆ ನಿಮಗೆ ಹೇಳಲೇ ಬೇಕು. ತಲೆ ಕ್ಷೌರಕ್ಕೆಂದು ಸಲೂನ್‌ಗೆ ಹೋಗಿದ್ದೆ. ನನ್ನ ಸರದಿ ಬಂದಾಗ ಖಾಲಿ ಕುರ್ಚಿಯಲ್ಲಿ ಹೋಗಿ ಕುಳಿತೆ. ಕ್ಷೌರಿಕ ತನ್ನ ಕೆಲಸ ಆರಂಭಿಸಿದ. ಸ್ವಲ್ಪ ಹೊತ್ತಿಗೇ ಆತನ ಮೊಬೈಲ್ ಗಂಟೆ ಬಾರಿಸತೊಡಗಿತು. ಒಂದು ಕೈಯಲ್ಲಿ ಮೊಬೈಲ್ ಹಿಡಿದು ಕಿವಿಗೆ ಅಂಟಿಸಿ ಮಾತನಾಡುತ್ತಾ ಇನ್ನೊಂದು ಕೈಯಲ್ಲಿ ಕತ್ತರಿ ಹಿಡಿದು ನನ್ನ ತಲೆಯ ಕೂದಲು ಕತ್ತರಿಸತೊಡಗಿದ. ನನಗೆ ಭಯವಾಯಿತು. ಆತ ಮಾತನಾಡುವ ಭರದಲ್ಲಿ ನನ್ನ ತಲೆಗೂದಲು ಕತ್ತರಿಸುತ್ತಾನೋ ಅಥವಾ ಕಿವಿಯನ್ನೇ ಕತ್ತರಿಸಿ ಬಿಡುತ್ತಾನೋ ಎಂಬ ಅಂಜಿಕೆ ಕಾಡತೊಡಗಿತು. ಸದ್ಯ ಮೊಬೈಲ್ ಸಂಭಾಷಣೆ ಬೇಗ ಮುಗಿದಿದ್ದರಿಂದ ನಾನು ನಿರಾಳನಾದೆ.

***

ವಾಹನಗಳು ಕಿಕ್ಕಿರಿದು ತುಂಬಿದ ರಸ್ತೆಗಳ ವೃತ್ತದಲ್ಲಿ , ಸಿಗ್ನಲ್‌ಗಳಲ್ಲಿ ಕಾಲೇಜಿಗೆ ಹೋಗುವ ಹುಡುಗ ಹುಡುಗಿಯರು ರಸ್ತೆ ದಾಟುವಾಗ ಮೊಬೈಲ್‌ಗೆ ಕಿವಿ ಹಚ್ಚಿ ಹೋಗುವುದನ್ನು ನೋಡಿದಾಗ ಅಯ್ಯೋ ದೇವರೇ ಎನಿಸುತ್ತದೆ. ಏಕೆಂದರೆ ಅವರ ಗಮನವೆಲ್ಲ ಮೊಬೈಲ್ ಸಂಭಾಷಣೆಯ ಕಡೆಗಿರುತ್ತದೆ. ಸಿಗ್ನಲ್‌ನ ಹಸಿರು ದೀಪ ಹತ್ತಿಕೊಂಡಿದ್ದು ಅಥವಾ ವಾಹನಗಳು ಶರವೇಗದಿಂದ ತಮ್ಮೆದುರಿನಿಂದ ಬರುತ್ತಿರುವುದು ಅವರ ಬುದ್ಧಿಗೆ ಗೋಚರವಾಗುವುದೇ ಇಲ್ಲ. ಅವಘಡ ಸಂಭವಿಸಿದಾಗಲಷ್ಟೇ ಅದು ಗೊತ್ತಾಗುತ್ತದೆ. ಆದರೆ ಆ ವೇಳೆಗೆ ಕಾಲ ಮಿಂಚಿರುತ್ತದೆ.

ಮೊದಲೆಲ್ಲ ಊರಿಗೆ ಹೊರಟವರು ಆ ಊರಿಗೆ ತಲುಪಿದ ಬಳಿಕ ತಾವು ತಲುಪಿzವೆಂದು ಸ್ಥಿರ ದೂರವಾಣಿ ಮೂಲಕ ತಿಳಿಸುತ್ತಿದ್ದರು. ಅದಕ್ಕೂ ಮೊದಲು ದೂರವಾಣಿ ಬಳಕೆಯೇ ಇಲ್ಲದಿದ್ದ ಕಾಲದಲ್ಲಿ ಅದೂ ಕೂಡ ಇರಲಿಲ್ಲ. ಊರಿಗೆ ಹೋದವರು ವಾಪಸ್ ಮನೆಗೆ ಬಂದ ಮೇಲೆಯೇ ಅವರು ಸುರಕ್ಷಿತವಾಗಿ ತಲುಪಿದ ಮಾಹಿತಿ ಗೊತ್ತಾಗುತ್ತಿತ್ತು. ಈಗ ಮಾತ್ರ ಹಾಗಲ್ಲ. ಮನೆಯಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ತಲುಪಿದ ಕೂಡಲೇ ಮನೆಗೆ ಕರೆ ಬರುತ್ತದೆ. ಸುರಕ್ಷಿತವಾಗಿ ಮೆಜೆಸ್ಟಿಕ್ ತಲುಪಿzವೆ ಎಂದು ಮೊಬೈಲ್ ಉಲಿಯುತ್ತದೆ. ಅನಂತರ ಬಸ್ ಹತ್ತಿ ಕುಳಿತ ಬಳಿಕ ಮನೆಗೆ ಮತ್ತೊಂದು ಕರೆ – ಬಸ್ಸಿನಲ್ಲಿ ಕುಳಿತಿzವೆ. ಇನ್ನೇನು ಈಗ ಹೊರಡಬಹುದು ಎಂಬ ಸಂದೇಶ. ಬಸ್ ಹೊರಟ ಮೇಲೆ ಮತ್ತೊಂದು ಕರೆ. ಇನ್ನು ಮರುದಿನ ಊರು ತಲುಪಿದ ಬಳಿಕವಂತೂ ಸುರಕ್ಷಿತವಾಗಿ ತಲುಪಿದ ಬಗ್ಗೆ ಮತ್ತೊಂದು ಕರೆ ಅಥವಾ ಸಂದೇಶ. ಸುರಕ್ಷಿತವಾಗಿ ತಲುಪದೆ ರಾತ್ರಿ ಎಲ್ಲಾದರೂ ಅಪಘಾತಕ್ಕೀಡಾದರೆ ಮಾತ್ರ ಕರೆ ಮಾಡುವ ಅವಕಾಶವೇ ಇರುವುದಿಲ್ಲ!

ಯಾವುದೇ ಕಚೇರಿಗಳಿಗೆ ಹೋದರೂ ಅಲ್ಲಿ ಸಿಬ್ಬಂದಿಗಳ ಕಿವಿಗೆ ಮೊಬೈಲ್ ಅಂಟಿಕೊಂಡಿರುತ್ತದೆ. ಕಚೇರಿಗೆ ಬಂದವರಿಗೆ ಕಣ್‌ಸನ್ನೆಯಲ್ಲೇ ಸ್ವಾಗತ. ಸಾಮಾಜಿಕ ಸಂಘಟನೆಗಳ ಕಾರ್ಯಾಲಯಗಳಲ್ಲೂ ಈಗ ಇಂತಹುದೇ ವಾತಾವರಣ. ಅಲ್ಲಿ ಎಲ್ಲರೂ ‘ಯಂತ್ರ ಮಾನವರು’! ಯಂತ್ರದೊಂದಿಗೇ ಅವರ ಮಾತುಕತೆ, ನಗು, ಹಾಸ್ಯ, ವ್ಯವಹಾರ. ಮಾನವರೊಂದಿಗೆ ನಗು, ಹಾಸ್ಯ, ಮಾತುಕತೆ ಕಂಡುಬರುವುದೇ ಇಲ್ಲ. ಕೆಲವೊಮ್ಮೆ ಅಂತಹ ಕಾರ್ಯಾಲಯಗಳಿಗೆ ಹೋದಾಗ, ಛೇ, ಇಲ್ಲಿ ಮನುಷ್ಯರೇ ಇಲ್ಲವಲ್ಲ ಎಂದು ಬೇಸರವಾಗುವುದೂ ಉಂಟು.

***

ಇಷ್ಟೆಲ್ಲವನ್ನೂ ನಿಮಗೆ ನಿವೇದಿಸಿದ ನಾನೇನೂ ಖಂಡಿತ ಮೊಬೈಲ್ ಫೋನ್ ವಿರೋಧಿಯಲ್ಲ. ಶರವೇಗದಲ್ಲಿ ಬದಲಾಗುತ್ತಿರುವ ಜೀವನಶೈಲಿಗೆ ಮೊಬೈಲ್‌ನ ಅನಿವಾರ್ಯತೆ ಎಷ್ಟೆಂಬುದು ನನಗೆ ತಿಳಿಯದೆಯೂ ಇಲ್ಲ. ಆದರೆ ನಾವೆಲ್ಲ ಸದಾಕಾಲಕ್ಕೂ ಮೊಬೈಲ್ ಫೋನ್‌ಗೆ ದಾಸರಾಗಿರಬೇಕೆ? ಈ ಪ್ರಶ್ನೆ ನನ್ನನ್ನು ಕಾಡುತ್ತಲೇ ಇರುತ್ತದೆ. ಮೊಬೈಲ್‌ಫೋನ್ ನಮ್ಮ ಗುಲಾಮನಾಗಿರಬೇಕೇ ಹೊರತು ನಾವೇ ಮೊಬೈಲ್‌ಫೋನ್‌ನ ಗುಲಾಮನಾಗಿದ್ದರೆ ಮಮತೆ, ಪ್ರೀತಿ, ಆತ್ಮೀಯತೆ, ವಿಶ್ವಾಸ ಮೊದಲಾದ ಮಾನವೀಯ ಭಾವನೆಗಳನ್ನೇ ಕಳೆದುಕೊಳ್ಳಬೇಕಾದೀತು. ಬಿಟ್ಟೆನೆಂದರೂ ಬಿಡದ ಈ ಮೊಬೈಲ್ ಮಾಯೆಯಿಂದ ನಾವೆಲ್ಲ ಹೊರಬರಲು ಸಾಧ್ಯವಿಲ್ಲವೆ?

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ವೆ.ಯಾ. ಸೋಮಯಾಜಲು ನಿಧನ

ವೆ.ಯಾ. ಸೋಮಯಾಜಲು ನಿಧನ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

‘HINDU’ is our Nationality: RSS Sarasanghachalak Mohan Bhagwat at Hindu Sammelan at Betul, MP

‘HINDU’ is our Nationality: RSS Sarasanghachalak Mohan Bhagwat at Hindu Sammelan at Betul, MP

February 9, 2017
೧೫ ಲಕ್ಷ ಸ್ವಯಂಸೇವಕರನ್ನು ಸಮಾಜ ಕಾರ್ಯದಲ್ಲಿ ತೊಡಗಿಸಲಿರುವ ಆರೆಸ್ಸೆಸ್ : ಅರುಣ್ ಕುಮಾರ್ #RSSABPS2020

RSS to activate it’s 15 lakh swayamsevaks to bring about positive changes in society : Arun Kumar #RSSABPS2020

March 13, 2020
RSS ABKM Resolution-2: Need for a Comprehensive National Security Policy vis-a-vis China

RSS ABKM Resolution-2: Need for a Comprehensive National Security Policy vis-a-vis China

November 4, 2012
Swayamsevaks must be the medium of social change in the country: Mohan ji Bhagwat

Swayamsevaks must be the medium of social change in the country: Mohan ji Bhagwat

August 21, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In