1971ರ ಡಿಸೆಂಬರ್ ವೇಳೆಯಲ್ಲಿ ಸೇನೆಯ  ಮುಖ್ಯಸ್ಥ ಮಾಣಿಕ್ ಷಾ ಅವರಿಗೆ ಪ್ರಧಾನಿ ಇಂದಿರಾ ಗಾಂಧಿಯಿಂದ ಬುಲಾವ್. ಅವರು ಬಂದೊಡನೆ ಆಕೆ ಕೇಳಿದ ಮೊದಲ ಪ್ರಶ್ನೆ: ‘ಈಗ ಯುದ್ಧ ಮಾಡಲು ಸೈನ್ಯ ಸಿದ್ಧವೇ?’ ಗುಂಡಿನಂತೆ ಬಂದ ಉತ್ತರ: “I am always ready, sweetie.” ಅವರು ಇಂದಿರಾ ಅವರನ್ನು ಮೇಡಂ ಎಂದು ಕರೆಯಲು ಒಪ್ಪುತ್ತಿರಲಿಲ್ಲ. ಹೀಗೆ ನೇರ ನಡೆಯ ಮುಕ್ತ ಮಾತಿನ ವ್ಯಕ್ತಿ ಮಾಣಿಕ್ ಷಾ ಆಗಿದ್ದರು. ಈ ಸಂಭಾಷಣೆಗೆ ಒಂದು […]

ಒಬ್ಬ ನಾಯಕ – ಆತ ಜನಸಾಮಾನ್ಯನಾಗಿರಲಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿರಲಿ – ಆತನ ಪ್ರಥಮ ಕರ್ತವ್ಯ ಸಮಾಜವನ್ನು ಪ್ರಗತಿಯೆಡೆಗೆ ಒಯ್ಯುವುದು. ಇದಕ್ಕೆ ’ಉತ್ತಮ ಆಡಳಿತ’ದ ವ್ಯಾಖ್ಯೆ, ಹಾಗೆಂದರೇನು ಎನ್ನುವುದರ ಅರಿವು ಇರುವುದು ಅವಶ್ಯ. ಉತ್ತಮ ಆಡಳಿತ ಒಂದು ಕಲ್ಪನೆ ಮಾತ್ರವಲ್ಲ, ಅದನ್ನು ವಾಸ್ತವದಲ್ಲೂ ಸಾಧ್ಯವಾಗಿಸಬಹುದು. ಪ್ರಜಾಕೇಂದ್ರಿತ ಅಭಿವೃದ್ಧಿಯೇ ಉತ್ತಮ ಆಡಳಿತದ ಮೂಲತತ್ತ್ವ. ಜನಸಾಮಾನ್ಯರನ್ನು ವಿಕಾಸದ ಕೇಂದ್ರವಾಗಿ, ಪಾಲುದಾರರನ್ನಾಗಿ ಮಾಡಿದಾಗಲೆಲ್ಲ ಆ ರಾಷ್ಟ್ರ ಸಫಲತೆಯ, ಸಮೃದ್ಧಿಯ ಉನ್ನತ ಎತ್ತರಕ್ಕೇರಿರುವುದು ಇತಿಹಾಸದಲ್ಲಿ ಸಾಬೀತಾಗಿದೆ. ಪ್ರಜೆಗಳ […]

ಪ್ರತಿಯೊಬ್ಬರಿಗೂ ಆಹಾರ, ಔಷದಿ,ಶಿಕ್ಷಣ ಇವಿಷ್ಟು ಉಚಿತವಾಗಿಯೇ ಸಿಗಬೇಕು ಎನ್ನುವುದು ನಮ್ಮ ಪರಂಪರೆ ಹೇಳಿಕೊಟ್ಟ ಪಾಠ. ಆದರೆ ಇಂದು ಅದೇ ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ಅತೀ ಹೆಚ್ಚು ಕೊಟ್ಟು ತಿನ್ನುವುದು ಅಂತಸ್ತಿನ ಪ್ರಶ್ನೆಯಾಗಿದೆ. ಇದೆಲ್ಲದರ ಮದ್ಯದಲ್ಲಿ 1 ರೂಪಾಯಿಗೆ ಇಡ್ಲಿ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ? ಖಂಡಿತಾ ನಂಬಲೇಬೇಕು. ಯಾಕಂದರೆ ತಮಿಳುನಾಡಿನ ಕೋಯಮತ್ತೂರು ಜಿಲ್ಲೆಯ ಕಮಲತ್ತಲ್ ಎನ್ನುವ ಅಜ್ಜಿಯೋರ್ವರು ಈ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಸರಕಾರದ ದುಡ್ಡಿನಲ್ಲಿ ಕ್ಯಾಂಟೀನ್ ತೆರೆದು ಅದರ ಸಾಧನೆಯನ್ನು […]

ಪೀಡಿತ ಗಿರಿಜನರ ಕಣ್ಣೀರು ಒರಿಸಿ ನೆರವಿಗೆ ನಿಂತ ಪೇಜಾವರ ಶ‍್ರೀಗಳು ಅತ್ಯಡ್ಕ ಒಡೇರಮಠದಲ್ಲಿ ಒಂದು ದಿನ, ಒಡೇರಮಠ ಎನ್‌ಕೌಂಟರ್ ಎಂದೇ ಪ್ರಸಿದ್ಧವಾದ ನಕ್ಸಲ್ ಎನ್‌ಕೌಂಟರ್‌ನಲ್ಲಿ ಐವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಶೃಂಗೇರಿ ಸಮೀಪದ ಮೆಣಸಿನಹಾಡ್ಯದ ದಟ್ಟ ಕಾಡಿನ ನಡುವಿನ ಅತ್ಯಡ್ಕದ ರಾಮೇಗೌಡರ ಒಂಟಿ ಮನೆಯಲ್ಲಿ ಅಂದು ಗೌತಮ್ ಎಂಬ ನಕ್ಸಲ್ ಯುವಕ ತಂಗಿದ್ದ. ಖಚಿತ ಮಾಹಿತಿ ತಿಳಿದ ಪೊಲೀಸ್ ಪಡೆಯೊಂದು ಬೆಳ್ಳಂಬೆಳಿಗ್ಗೆ ಅಲ್ಲಿಗೆ ಧಾವಿಸಿತ್ತು. ಮೇಲೆ ನೂರು ಅಡಿ ಮೇಲೆ ರಸ್ತೆಯಲ್ಲಿ […]

ಜಮ್ಮುವಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ತಿರುಪತಿ ದೇವಸ್ಥಾನ ಮಂಡಳಿಗೆ  ಜಮ್ಮು-ಕಾಶ್ಮೀರ ಸರ್ಕಾರ ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1ರಂದು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ದೇವಾಲಯ ನಿರ್ಮಾಣಕ್ಕೆ ತಿಮ್ಮಪ್ಪ ದೇವಾಲಯದ ಆಡಳಿತ ಮಂಡಳಿ ‘ತಿರುಮಲ ತಿರುಪತಿ ದೇವಸ್ಥಾನಂ’ (ಟಿಟಿಡಿ) ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಈ ಮೂಲಕ ದೇವಾಲಯ ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ನಿರ್ಮಿಸಲು ಜಮ್ಮು ಮತ್ತು […]

ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಮತ್ತು ಅಕ್ರಮ ಮತಾಂತರ ತಡೆಯುವ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ. ಭಾರತೀಯ ಜನತಾ ಪಕ್ಷವು ತಮಿಳುನಾಡಿನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಮತ್ತು ಅಕ್ರಮ ಮತಾಂತರವನ್ನು ತಡೆಯುವ ಭರವಸೆ ನೀಡಿರುವುದನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ.ಮತ್ತು ದೇಶಾದ್ಯಂತ ಸರ್ಕಾರದ ನಿಯಂತ್ರಣದಿಂದ ಎಲ್ಲಾ ದೇವಸ್ಥಾನಗಳನ್ನು ಮುಕ್ತ ಮಾಡಬೇಕೆಂದು ವಿಹಿಂಪ್ ಆಗ್ರಹಿಸುತ್ತದೆ. ವಿಹಿಂಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ […]

ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಸಿದ್ದಣ್ಣಗೌಡ ಗಡಿಗುಡಾಳರ (92) ನಿಧನಕ್ಕೆ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ. ನಾಗರಾಜ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಅಗಲಿರುವ ಹಿರಿಯ ಚೇತನ ಶ್ರೀ ಸಿದ್ದಣ್ಣಗೌಡ ಗಡಿಗುಡಾಳರು ಕರ್ನಾಟಕ ಉತ್ತರ ಪ್ರಾಂತದಲ್ಲಿ ಸಂಘಕಾರ್ಯ ಬೆಳಸುವಲ್ಲಿಪ್ರಮುಖ ಪಾತ್ರ ವಹಿಸಿದವರು.ಅವರ ಆತ್ಮೀಯತೆ, ಕಾರ್ಯದಲ್ಲಿನ ಕಳಕಳಿಅವರ, ಮನೆಯಲ್ಲಿನ ಆತಿಥ್ಯಸದಾ ಸ್ಮರಣೀಯ.ಅವರ ಚೇತನಕ್ಕೆ ಸಂಘದ ಶ್ರದ್ಧೆಯ ನಮನಗಳು. ವಿ. ನಾಗರಾಜ್, ಕ್ಷೇತ್ರೀಯ ಸಂಘಚಾಲಕ್, ಆರೆಸೆಸ್ಸ್ ನ ಹಿರಿಯ ಸ್ವಯಂಸೇವಕರು, […]

ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ ಕಾವಿಯುಡುಗೆಯನುಟ್ಟು ನಭವೇ ಕಿರಣಹಸ್ತವ ಚಾಚಿದೆ ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ – ಕವಿ ಜಿ.ಎಸ್. ಶಿವರುದ್ರಪ್ಪ ಹಿಂದುತ್ವದ ಪರಮಗುಣವಾದ ಸರ್ವಭೂತಗಳಲ್ಲೂ ತನ್ನನ್ನೇ ಕಾಣುವ, ಎಲ್ಲರೂ ತನ್ನವರೇ ಎನ್ನುವ ಐಕ್ಯಭಾವವೇ ಮೂರ್ತಿವೆತ್ತಂತೆ ಇದ್ದು ಮೆರೆದ ಸಿದ್ಧಗಂಗೆಯ ಪೀಠಾಧ್ಯಕ್ಷರಾದ ಶಿವೈಕ್ಯ ಪರಮಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಜೀ (ಏಪ್ರಿಲ್ 1, 1908 – ಜನವರಿ 21, 2019) […]

ದಕ್ವಿಣ ಭಾರತದ ಖ್ಯಾತ ನಟ ರಜನಿಕಾಂತ್​ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ 51ನೇ ಚಲನಚಿತ್ರ ಕಲಾವಿದ ಎಂಬ ಹೆಗ್ಗಳಿಕೆಗೆ ರಜನಿಕಾಂತ್​ ಪಾತ್ರರಾಗಿದ್ಧಾರೆ. ಗಾಯಕಿ ಆಶಾ ಭೋಸ್ಲೆ, ನಿರ್ದೇಶಕ ಸುಭಾಷ್‌ ಘಾಯ್‌, ನಟ ಮೋಹನ್‌ ಲಾಲ್‌, ಸಂಗೀತ ಸಂಯೋಜಕ ಶಂಕರ್‌ ಮಹದೇವನ್ ಅವರು 2020ನೇ ಸಾಲಿನ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. 2019ನೇ ಸಾಲಿನ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣ ಭಾರತದ ಖ್ಯಾತ […]