ಭಾರತೀಯ ಸೇನೆ ಎಂದಾಕ್ಷಣ ಎಂತವನಿಗಾದರೂ ರೋಮಾಂಚನವಾಗುತ್ತದೆ. ದೇಶ ಭಕ್ತಿಯ ಭಾವ ಸ್ಫುರಿಸುತ್ತದೆ. ಅದರಲ್ಲಿ ತಾನೂ ಕೆಲಸ ಮಾಡಬೇಕೆಂದು ಹಲವಾರು ಜನ ಕನಸು ಕಂಡು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೂ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಭಾರತೀಯ ಸೇನೆ ಯುದ್ಧಕ್ಕೆ ನಿಂತರೆ ಹೇಗೆ‌ ಸುಲಭದ ತುತ್ತಲ್ಲವೋ ಹಾಗೆ ಅದಕ್ಕೆ ಆಯ್ಕೆಯಾಗುವುದು ಕೂಡ ಸುಲಭದ ಮಾತಲ್ಲ. ಅನೇಕ ಪರೀಕ್ಷೆಗಳಿಗೆ ಮೈಮನಸ್ಸನ್ನು ಒಡ್ಡಿ ತೇರ್ಗಡೆಯಾಗುವುದು ಸುಲಭ ಸಾಧ್ಯವೂ ಅಲ್ಲ. ಆದರೆ ಉಡುಪಿ ಜಿಲ್ಲೆಯ […]

ಕೆಲವರ್ಷಗಳ ಹಿಂದೆ ನಾಗರಹೊಳೆ ಅಭಯಾರಣ್ಯದ ಅಧಿಕಾರಿಯೊಬ್ಬರು ನಡು ಮಧ್ಯಾನ್ಹ ಸೋಜಿಗವೊಂದನ್ನು ತೋರಿಸುವೆ ಎಂದು ಕರೆದುಕೊಂಡು ಹೋದರು. ತಿತಿಮತಿ ಎಂಬ ಪುಟ್ಟ ಪೇಟೆಯ ಕಾವಲು ಗೋಪುರದಿಂದ ಚೆನ್ನಂಗಿ ಕಾಡಿನ ದಾರಿಯತ್ತ ಹೊರಟ ಜೀಪು ಕಾಡಿನ ರಸ್ತೆಯೊಳಗೆ ತಿರುಗಿತು. ಅಧಿಕಾರಿ ಇದು ದೇವಮಚ್ಚಿ ಅರಣ್ಯ ಎಂದರು. ದೇವಮಚ್ಚಿ ಕಾಡಿನ ಹತ್ತಾರು ಕಿ.ಮೀ ಉದ್ದಕ್ಕೂ ಅಲ್ಲಲ್ಲಿ ಮರದ ಕೆಳಗೆ ಕಲ್ಲುಗಳು, ಅವುಗಳಿಗೆ ಮೆತ್ತಿದ ಕುಂಕುಮ, ಕೆಲವು ಕಡೆ ಶೂಲಗಳಿದ್ದವು. ಅಧಿಕಾರಿ ಇವೆಲ್ಲವೂ ಕಾಡಿನ ದೇವರು […]

ರಾಜ್ಯದಾದ್ಯಂತ ಮಾ.27ರಂದು  ನಡೆದ  ಮೆಗಾ ಲೋಕ ಅದಾಲತ್‌ ನಲ್ಲಿ ಒಂದೇ ದಿನ ಒಟ್ಟು 3.32 ಲಕ್ಷ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದ್ದು, 1,033 ಕೋಟಿ ರೂ. ಪರಿಹಾರ ಪಾವತಿಸಲಾಗಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆದ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಅರವಿಂದ ಕುಮಾರ್‌ ತಿಳಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟ ಸೇರಿದಂತೆ ರಾಜ್ಯದೆಲ್ಲೆಡೆಯ ಒಟ್ಟು 963 ನ್ಯಾಯಪೀಠಗಳಲ್ಲಿ ನಡೆದ ಈ ಲೋಕ ಅದಾಲತ್‌ ನಲ್ಲಿ […]

ಬೆಂಗಳೂರು: ರಾಜ್ಯದ 3.2 ಲಕ್ಷ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ಉದ್ದೇಶದಿಂದ ಏ.2 ರಿಂದ ಓದು-ಬರಹ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಓದು-ಬರಹ ಅಭಿಯಾನವು ಏ.2ರಿಂದ ಮೇ ವರೆಗೆ ಹಮ್ಮಿಕೊಳ್ಳಲಾಗುತ್ತಿದೆ. 15 ರಿಂದ 50 ವರ್ಷದ 2.4 ಲಕ್ಷ ಮಹಿಳೆಯರು ಮತ್ತು 80,000 ಪುರುಷ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ ಹೊಂದಲಾಗಿದೆ. ಕಲಿಕೆ ಪೂರ್ಣಗೊಂಡ ಬಳಿಕ ಪ್ರತಿಯೊಬ್ಬರಿಗೂ […]

ಪಶ್ಚಿಮ ಬಂಗಾಳದ ಚುನಾವಣೆ ನಡೆಯುತ್ತಿದ್ದು, ಆಢಳಿತದಲ್ಲಿರುವ  ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹತಾಶೆಯ ಇನ್ನೊಂದು ಮಗ್ಗುಲು ತಲಪಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ವಿರೋಧಿ ಪಕ್ಷ ಎಂಬ ಕಾರಣಕ್ಕೆ ಬಿಜೆಪಿ ಮುಖಂಡ, ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ 85 ವರ್ಷದ ವೃದ್ಧೆಯನ್ನು ಹತ್ಯೆ ಮಾಡಿದ್ದಾರೆ. ಬಿಜೆಪಿ ನಾಯಕ ಗೋಪಾಲ್ ಮಜುಂದಾರ್ ಅವರ 85 ವರ್ಷದ ತಾಯಿ ಶೋವಾ ಮಜುಂದಾರ್ ಅವರು ತೃಣಮೂಲ ಕಾಂಗ್ರೆಸ್ ಗೂಂಡಾಗಳು ನಡೆಸಿದ ಹಲ್ಲೆಯಿಂದಾಗಿ ಇಂದು ಸೋಮವಾರ […]

ಕೊರೋನಾ 2ನೇ ಅಲೆ ವ್ಯಾಪಿಸಿರುವುದರಿಂದ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸುವ ಸಲುವಾಗಿ ನೆರವು ನೀಡುವಂತೆ ಭಾರತದ ಕೊರೋನಾ ಲಸಿಕೆ ನಿರ್ಮಾಣ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ. ುತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಭಾರತದ ಕೊರೋನಾ ಲಸಿಕೆ ನಿರ್ಮಾಣ ಸಂಸ್ಥೆಗಳಾದ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆ  ರೂ. 100 ಕೋಟಿ  ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೋರಿದೆ. ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್‌  ಮೌಖಿಕವಾಗಿ ಬೇಡಿಕೆ ಸಲ್ಲಿಸಿದೆ. […]

ದಕ್ಷಿಣ ಕಾಶ್ಮೀರದ ಪ್ರಸಿದ್ಧ ಗುಹಾಂತರ ದೇವಾಲಯವಾದ ಅಮರನಾಥ ದೇಗುಲಕ್ಕೆ ಜಮ್ಮು-ಕಾಶ್ಮೀರ ಸರ್ಕಾರದ ವತಿಯಿಂದ ಪ್ರತೀ ವರ್ಷ ವಾರ್ಷಿಕ ಯಾತ್ರೆ ಕೈಗೊಳ್ಳಲಾಗುತ್ತದೆ. ಈ ವರ್ಷ ಕೈಗೊಳ್ಳಲು ಬರುವವರಿಗೆ ಏಪ್ರಿಲ್ 1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕೋವಿಡ್ ಸಂಕಷ್ಟ ಹಾಗೂ ಭದ್ರತೆಯ ಸವಾಲುಗಳ ನಡುವೆ ಕೂಡ ಹಿಂದುಗಳ ಧಾರ್ಮಿಕ ಪವಿತ್ರ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಜೂನ್ 28ರಿಂದ ಆಗಸ್ಟ್ 22ರವರೆಗೆ ಯಾತ್ರೆ ನಡೆಯಲಿದೆ. 3880 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಕಣಿವೆಯಲ್ಲಿರುವ ಪವಿತ್ರ ಹಿಮಲಿಂಗ […]

ಬೆಂಗಳೂರು, ಮಾರ್ಚ್ 27: ಪ್ರಾಚೀನ ಭಾರತೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿದ್ದ ತಪ್ಪು ಕಲ್ಪನೆಯನ್ನು ದೂರ ಮಾಡುವಲ್ಲಿ ಹಿರಿಯ ಗಾಂಧಿವಾದಿ, ಸಂಶೋಧಕ ಧರಂಪಾಲ್ ಅವರ ಸಂಶೋಧನೆ ಬಹಳ ಮಹತ್ತ್ವದ್ದು ಎಂದು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅಭಿಪ್ರಾಯಪಟ್ಟರು.  ಬೆಂಗಳೂರಿನ ಜೈನ್ ಕಾಲೇಜು ಮತ್ತು ಮಂಗಳೂರು ಲಿಟ್ ಫೆಸ್ಟ್ ಸಹಯೋಗದಲ್ಲಿ ಜಾಯನಗರದ ಜೈನ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ಭಾರತದಲ್ಲಿ ಕೆಲವು ಮೇಲುಜಾತಿಯವರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು, ಮಹಿಳೆಯರಿಗೆ […]

ಶಿವಮೊಗ್ಗ: ಸರ್ಕಾರೀ ಶಾಲೆಗಳ ಬಗೆಗೆ ಜನಸಾಮಾನ್ಯರ ಅಸಡ್ಡೆ, ಹಾಗೂ ಇನ್ನಿತರ ಕಾರಣಗಳಿಗಾಗಿ  ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವುದು ಇಂದು ಎಲ್ಲೆಡೆ ಕಂಡುಬರುವ ದೃಶ್ಯ. ಶಿಕ್ಷಕಿಯೊಬ್ಬರ ಪ್ರಯತ್ನದಿಂದ ವ್ಯವಸ್ಥೆಯ ಸುಧಾರಣೆ, ಬದಲಾವಣೆ ಕಷ್ಟವಲ್ಲ ಎಂಬುದಕ್ಕೆ  ರೇಖಾ ಪ್ರಭಾಕರ್‌ ಉದಾಹರಣೆಯಾಗಿದ್ದಾರೆ. ರೇಖಾ ಪ್ರಭಾಕರ್ ಮೂಲತಃ ಕುಂದಾಪುರ ತಾಲೂಕಿನ ಶಂಕರನಾರಾಯಣದವರು. ಪ್ರಸ್ತುತ ಹೊಸನಗರ ತಾಲೂಕಿನ ನೂಲಿಗ್ಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಐದಾರು ವರ್ಷಗಳ ಹಿಂದೆ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ […]