• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

‘Conversion is a matter of key Concern’: Mangesh Bhende at PARIVARTAN Samavesh Shivamogga

Vishwa Samvada Kendra by Vishwa Samvada Kendra
February 2, 2015
in News Digest
241
0
‘Conversion is a matter of key Concern’: Mangesh Bhende at PARIVARTAN Samavesh Shivamogga

Mangesh Bhende addressing

494
SHARES
1.4k
VIEWS
Share on FacebookShare on Twitter

Shivamogga Feb 01, 2015: In an unprecedented Sunday evening at NES Grounds at Shivamogga witnessed a massive gathering ‘PARIVARTANA’ by RSS youth Swayamsevaks, at  who pledged to bring a silent social transformation through the organisation.

The PARIVARTANA Samavesh was organised by RSS Shivamogga district Unit. Nearly 15,000 youth Swayamsevaks dressed in Sangh Ganavesh marched pride in streets of Shivamogga. In equal number, citizens of Shivamogga gathered to witness this spectacular show of  strength by RSS youth in the City.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Mangesh Bhende addressing
Mangesh Bhende addressing

Mangesh Bhende, RSS Akhil Bharatiya Sah Vyavatha Pramukh addressed the gathering. RSS Shivamogga Jilla Sanghachalak Benaka Bhat, RSS Karnataka Dakshin Pranth Karyavah N Thippeswamy were on the dias.

“To make India a superpower in the world, we need to make every Indian aware about their patriotic concerns. The society is facing severe challenges of conversion. Through Love Jihad, Hindu girls were forcefully converted. Meanwhile Christian Missionaries indulged in conversion in the name of social service activities. Mother Theresa prompted such massive conversions in India “, said Mangesh Bhende.

Top RSS functionaries, Sanghparivar  and BJP leaders including former Karnataka Chief Minister BS Yeddyurappa participated in the Parivartana Samavesh in Sangh Ganavesh.

rss ph (3)

rss ph (4)

ಪರಿವರ್ತನ ಜಿಲ್ಲಾ ತರುಣ ಸಮಾವೇಶದಲ್ಲಿ ಮಂಗೇಶ್ ಜೀ ಭೇಂಡೆ ಕರೆ

ಭಾರತೀಯ ಮೌಲ್ಯಗಳ ಪುನರ್ ಪ್ರತಿಷ್ಠಾಪನೆ ಅವಶ್ಯ

ಶಿವಮೊಗ್ಗ : ಜಗತ್ತು ಭಾರತದತ್ತ ದೃಷ್ಟಿ ಹರಿಸಿರುವ ಸಂದರ್ಭದಲ್ಲಿ ನಾವು ಭಾರತೀಯ ಮೌಲ್ಯಗಳನ್ನು ಪುನರ್ ಪ್ರತಿಷ್ಠಾಪನೆ ಮಾಡುವ ಅವಶ್ಯಕತೆ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ವ್ಯವಸ್ಥಾ ಪ್ರಮುಖ್ ಮತ್ತು ದಕ್ಷಿಣ – ಮಧ್ಯ ಕ್ಷೇತ್ರೀಯ ಪ್ರಚಾರಕ ಮಂಗೇಶ್ ಜೀ ಭೇಂಡೆ ಹೇಳಿದರು.

ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಸಂಜೆ ಆರ್‌ಎಸ್‌ಎಸ್ ಸಂಘಟಿಸಿದ್ದ ಪರಿವರ್ತನ ಜಿಲ್ಲಾ ತರುಣ ಸಮಾವೇಶದಲ್ಲಿ ಮಾತನಾಡಿದ ಅವರು, ಜಗತ್ತಿಗೆ ಶಾಂತಿಯನ್ನು ಕಲಿಸಿದ್ದು ಭಾರತ. ನೆಮ್ಮದಿ ಕೊಡುವ ತತ್ವಜ್ಞಾನ ಹಾಗೂ ಶ್ರೇಷ್ಠ ವಿಚಾರಧಾರೆಯನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತ. ಆದರೆ ನಮ್ಮ ಸ್ಥಿತಿ ಇಂದು ಹೇಗಿದೆ ಎಂದು ಅವಲೋಕನ ಮಾಡಿಕೊಂಡರೆ ನಾವು ಮೌಲ್ಯಗಳನ್ನು ಪುನರ್ ಸ್ತಾಪಿಸುವ ಅಗತ್ಯವಿದೆ ಅನ್ನಿಸುತ್ತದೆ ಎಂದರು.

ಯಾವ ದೇಶದಲ್ಲಿ ಪರಸ್ತ್ರೀಯನ್ನು ತಾಯಿಯಂತೆ ಕಾಣಲಾಗುತ್ತಿತ್ತೋ ಆದೇಶದಲ್ಲಿ ಇಂದು ಅತ್ಯಾಚಾರಗಳು ನಡೆಯುತ್ತಿವೆ. ಯಾವ ಜನರು ಪರರ ಧನವನ್ನು ಕಸಕ್ಕಿಂತಲೂ ಕಡೆ ಎಂದು ಭಾವಿಸುತ್ತಿದ್ದರೂ ಅವರೇ ಇಂದು ಭ್ರಷ್ಟರಾಗುತ್ತಿದ್ದಾರೆ.  ಹಾಗೆಂದು ಭಾರತದಲ್ಲಿ ಸಾಮರ್ಥ್ಯ ಸಂಪನ್ನರಿಗೆ ಕೊರತೆ ಇಲ್ಲ. ಇಲ್ಲಿ ದುರ್ಜನರೂ ಅನೇಕರಿಲ್ಲ. ಆದರೆ ಸಜ್ಜನರ ಮೌನ ಸಮಾಜಕ್ಕೆ ಮಾರಕವಾಗಿದೆ. ಇಂತಹ ಸಂದರ್ಭದಲ್ಲಿ ಸಮಾಜದ ಮಾನಸಿಕತೆಯಲ್ಲಿ ಪರಿವರ್ತನೆ ತರುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಭಾರತ ಹಿಂದು ರಾಷ್ಟ್ರ

ದೇಶದಲ್ಲಿಂದು ಒಂದೆಡೆ ಮುಸಲ್ಮಾನ ಹುಡುಗರು ಹಿಂದು ಹುಡುಗಿಯರನ್ನು ವರಿಸಿ ಲವ್‌ಜಿಹಾದ್ ಮೂಲಕ ಮತಾಂತರಕ್ಕೆ ಮುಂದಾಗಿದ್ದಾರೆ. ಇನ್ನೊಂದೆಡೆ ಕ್ರಿಶ್ಚಿಯನ್ ಧರ್ಮದವರು ಸೇವೆಯ ನೆಪದಲ್ಲಿ ಮತಾಂತರ ಮಾಡುತ್ತಿದ್ದಾರೆ. ಎರಡೂ ಧರ್ಮಗಳಿಗೂ ಭಾರತವನ್ನು ಇಸ್ಲಾಮೀಕರಣಗೊಳಿಸುವುದು ಮತ್ತು ಕ್ರೈಸ್ತೀಕರಣಗೊಳಿಸುವ ಉದ್ದೇಶವಿದೆ. ಈ ಷಡ್ಯಂತ್ರಕ್ಕೆ ನಾವು ಬಲಿಯಾಗಬಾರದು ಎಂದರೆ ಎಲ್ಲರಲ್ಲಿ ರಾಷ್ಟ್ರೀಯತೆಯ ಭಾವ ಜಾಗೃತಿಯಾಗಬೇಕು. ಭಾರತ ಹಿಂದು ರಾಷ್ಟ್ರ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ ಎಂದರು.

ಸಂಘ ಇಂದು ದೊಡ್ಡ ಶಕ್ತಿ

ಉಪಹಾಸ, ವಿರೋಧದ ನಡುವೆ ಆರಂಭವಾದ ಸಂಘ ಇಂದು ದೊಡ್ಡ ಶಕ್ತಿಯಾಗಿದೆ. ಜಗತ್ತೇ ಇಂದು ಸಂಘದತ್ತ ನೋಡುತ್ತಿದೆ. ಆರಂಭದಲ್ಲಿ ಸಂಘಕ್ಕೆ ಜನರ ಬೆಂಬಲ ಇರಲಿಲ್ಲ. ಸ್ವಾತಂತ್ರ್ಯಾ ನಂತರವಂತೂ ಆರ್‌ಎಸ್‌ಎಸ್‌ನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ನಡೆಯಿತು. ಆದರೆ ಆ ಎಲ್ಲ ಯತ್ನಗಳು ವಿಫಲವಾಗಿರುವುದು ಗಮನೀಯ ಎಂದರು.

ದೇಶದಲ್ಲಿ ೧.೬೬ ಲಕ್ಷ ಸೇವಾ ಚಟುವಟಿಕೆಯನ್ನು ನಡೆಸುತ್ತಿದೆ. ಜಗತ್ತಿನ ೪೨ ದೇಶದಲ್ಲಿ ಸಂಘದ ಶಾಖೆಗಳನ್ನು ಹೊಂದಿದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಸಂಘ ಮುಟ್ಟದ ಕ್ಷೇತ್ರವಿಲ್ಲ. ಸಮಾಜದ ಎಲ್ಲ ಕ್ಷೇತ್ರದಲ್ಲಿ ಸೇವಾ ಕಾರ್ಯದಲ್ಲಿ ಸಂಘ ತೊಡಗಿದೆ. ಈ ನಿಟ್ಟಿನಲ್ಲಿ ಸಂಘ ಕಾರ್ಯ ಚುರುಕುಗೊಳ್ಳಲು ಪ್ರತಿನಿತ್ಯ ಸ್ವಲ್ಪ ಸಮಯ ಮೀಸಲಿಟ್ಟು, ದೇಶಕ್ಕಾಗಿ ದುಡಿಯುವ ಸಂಕಲ್ಪ ಮಾಡಬೇಕಿದೆ. ಸ್ವಾರ್ಥ ಚಿಂತನೆ ದೂರವಾಗಬೇಕಿದೆ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಸಂಘ ಚಾಲಕರಾದ ಚಕ್ಕೋಡಬೈಲು ಬೆನಕ ಭಟ್, ದಕ್ಷಿಣ ಪ್ರಾಂತ ಕಾರ್ಯವಾಹ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಧರ್ಮಪ್ರಸಾದ್ ಸ್ವಾಗತಿಸಿದರು. ಗಿರೀಶ್ ಕಾರಂತ್ ವರದಿ ವಾಚಿಸಿದರು. ಸಚ್ಚಿದಾನಂದ ವಂದಿಸಿ, ಮಧುಕರ ನಿರೂಪಿಸಿದರು.

ಥೆರೇಸಾ ಮಾಡಿದ್ದು ಸೇವೆಯ ನೆಪದಲ್ಲಿ ಮತಾಂತರ

ಮದರ್ ಥೆರೆಸಾ ಬಗ್ಗೆ ದೇಶದಲ್ಲಿ ಗುಣಗಾನ ಮಾಡಲಾಗುತ್ತಿದೆ. ಕ್ರಿಶ್ಚಿಯನ್ನರು ಸೇವೆ ಮಾಡುತ್ತಾರೆ ಎಂಬ ಭ್ರಮೆ ನಮ್ಮ ಜನರಲ್ಲಿದೆ. ಆದರೆ ಮದರ್ ಥೆರೆಸಾ ನಡೆಸಿದ್ದು ಕೇವಲ ೫೦೦ ಸೇವಾ ಚಟುವಟಿಕೆ. ಅದಕ್ಕೆ ಅವರು ೧೭ ದೇಶಗಳಿಂದ ದುಡ್ಡು ತರಿಸಿಕೊಳ್ಳುತ್ತಿದ್ದರು. ಅಲ್ಲದೆ ಅವರ ಸಂಪರ್ಕಕ್ಕೆ ಬಂದವರನ್ನೆಲ್ಲಾ ಮತಾಂತರ ಮಾಡಿದರು. ಈಗ ಅವರ ಅನುಯಾಯಿಗಿರುವ ಸಿಸ್ಟರ್ ನಿರ್ಮಲ ಕೂಡಾ ಹಿಂದು ಧರ್ಮದಿಂದ ಮತಾಂತರಗೊಂಡವರೇ. ಆದರೆ ಸಂಘ ೧.೬೦ ಲಕ್ಷ ಸೇವಾ ಚಟುವಟಿಕೆಯನ್ನು ದೇಶಾದ್ಯಂತ ನಡೆಸುತ್ತಿದೆ. ಸಂಘದಿಂದ ಈವರೆಗೆ ಅನ್ಯ ಧರ್ಮೀಯರ ಮತಾಂತರ ಯತ್ನ ನಡೆದಿದೆ. ಸಂಘ ತಾನು ಮಾಡಿದ ಕೆಲಸವನ್ನು ಬೇರೆಯ ಕೆಲಸಗಳಿಗೆ ಬಳಸಿಕೊಂಡಿಲ್ಲ.

ಸತ್ಯ ಪ್ರತಿಪಾದಕನ ಶವದೆದುರು ದೊಡ್ಡ ಸುಳ್ಳು..!

ರಾಷ್ಟ್ರವಾದಿ ವಿಚಾರಧಾರೆ ಹೊಂದಿರುವ ಸಂಘಗಳನ್ನು ಒಗ್ಗೂಡಿಸಿ ದೇಶವನ್ನು ಕಟ್ಟಬೇಕಿದ್ದ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್‌ನ್ನು  ನಾಶ ಮಾಡಲು ಮುಂದಾದರು. ಜಗತ್ತಿಗೆ ಸತ್ಯದ ಪ್ರತಿಪಾದನೆ ಮಾಡಿದ ಗಾಂಧೀಜಿಯವರ ಶವದ ಎದುರೇ ಅಂದಿನ ಪ್ರಧಾನಿ ನೆಹರು ಆರ್‌ಎಸ್‌ಎಸ್ ಗಾಂಧೀಜಿ ಹತ್ಯೆ ಮಾಡಿತು ಎಂದು ದೊಡ್ಡ ಸುಳ್ಳನ್ನು ಹಬ್ಬಿಸಿದರು. ಅಂದಿನ ಸರಸಂಘಚಾಲಕರಾಗಿದ್ದ ಪರಮಪೂಜನೀಯ ಗುರೂಜಿ ಅವರನ್ನು ಬಂಧಿಸಲಾಗಿತ್ತು. ಅದಾದ ನಂತರ ಅವರ ಪುತ್ರಿ ಇಂದಿರಾ ಕೂಡಾ ಆರ್‌ಎಸ್‌ಎಸ್‌ನ್ನು ಮುಗಿಸಬೇಕೆಂದು ಪಣತೊಟ್ಟು ಸಂಘವನ್ನು ನಿಷೇಧಿಸಿದ್ದರು. ಆದರೆ ಅದರ ಪರಿಣಾಮವನ್ನು ಮರು ಚುನಾವಣೆಯಲ್ಲೇ ಎದುರಿಸಿದರು.

ಭಾರತೀಯ ವಿಚಾರಧಾರೆಗಳಿಗೆ ಗೌರವ: ಜಗತ್ತಿನಲ್ಲಿಯೇ ಇಂದು ಭಾರತೀಯ ವಿಚಾರಧಾರೆಗಳಿಗೆ ಮನ್ನಣೆ ದೊರೆಯುತ್ತಿದೆ.  ಜಗತ್ತು ಕೂಡಾ ಹಿಂದು ವಿಚಾರವನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತಿದೆ. ಪ್ರಪಂಚದ ೧೯೫ ದೇಶಗಳು ಯೋಗ ಶಾಸ್ತ್ರವನ್ನು ಒಪ್ಪಿಕೊಂಡಿವೆ. ಅಮೆರಿಕಾ ದೇಶವೊಂದರಲ್ಲೇ ೩.೭೫ ಕೋಟಿ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ.

ಪರಿವರ್ತನೆಯಾಗಲಿ: ಪರಿವರ್ತನ ಸಮಾಜದ ಮೂಲಕ ಸಮಾದಲ್ಲಿ ಪರಿವರ್ತನೆ ಆಗಬೇಕು. ಸಂಘ ಆರಂಭವಾಗಿದ್ದೇ ದೇಶದ ಮಾನಸಿಕತೆ ಪರಿವರ್ತನೆಗೆಂದು. ದೇಶವಿಂದು ಪರಿವರ್ತನೆಯ ಹಾದಿಯಲ್ಲಿದೆ. ಅದಕ್ಕೆ ಪೂರಕವಾಗಿ ನಾವೂ ನಮ್ಮ ಮಾನಸಿಕತೆಯನ್ನು ಪರಿವರ್ತನೆ ಮಾಡಿಕೊಳ್ಳಬೇಕು.

ಎಲ್ಲೆಲ್ಲೂ ಬೈಕ್ ರ‍್ಯಾಲಿ, ಭಾರತಾಂಬೆಯ ಪರ ಜಯಘೋಷ

ಶಿವಮೊಗ್ಗ : ಓಂ ಧ್ವಜದೊಂದಿಗೆ ಎಲ್ಲೆಲ್ಲೂ ಬೈಕ್ ರ‍್ಯಾಲಿ, ಭಾರತಾಂಬೆಯ ಪರ ಜಯಘೋಷ, ಸಿಂಗಾರಗೊಂಡ ರಸ್ತೆಗಳು, ಸಾರಿಸಿ ರಂಗೋಲಿಯಿಂದ ಥಳತಳಿಸುತ್ತಿದ್ದ ವೃತ್ತಗಳು, ಎಲ್ಲೆಲ್ಲೂ  ಗಣವೇಷಧಾರಿಗಳ ಸಂಚಾರ…ಇದು ನಗರದಲ್ಲಿ ಭಾನುವಾರ ಕಂಡು ಬಂದ ದೃಶ್ಯ.

ನಗರದ ನಾಲ್ಕು ಕಡೆಗಳಿಂದಲೂ ಪಥ ಸಂಚಲನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅದರಂತೆ ಪಥ ಸಂಚಲನ ಆರಂಭವಾಗುವ ಮುನ್ನವೇ ಗಣವೇಷಧಾರಿಗಳು ನಿಗದಿತ ಸ್ಥಳಕ್ಕೆ ಆಗಮಿಸಿದ್ದರು.ಪೂರ್ವ ನಿಗದಿಯಂತೆಯೇ ಶಿಸ್ತುಬದ್ಧವಾಗಿಯೇ ಊಟ ಮುಗಿಸಿದ ಗಣವೇಷಧಾರಿಗಳು ಶಿಸ್ತಿನ ಸೈನಿಕರಾಗಿ ದಂಡ ಹಿಡಿದು ಘೋಷ್ ನಾದಕ್ಕೆ ಹೆಜ್ಜೆ ಹಾಕುತ್ತಾ ಪಥ ಸಂಚಲನ ಆರಂಭಿಸಿದರು.

ಅದ್ಧೂರಿ ಸ್ವಾಗತ: ಪಥ ಸಂಚಲನ ಕ್ರಮಿಸುವ ರಸ್ತೆಯ ಮನೆಗಳ ಮುಂದೆ ನೀರು ಹಾಕಿ ಸಾರಿಸಿ ಬಣ್ಣಬಣ್ಣದ ರಂಗೋಲಿ ಹಾಕಲಾಗಿತ್ತು. ಮಂಗಳಾರತಿಯೊಂದಿಗೆ ಪಥಸಂಚಲನಕ್ಕೆ ಸ್ವಾಗತ ನೀಡಿ ಪುಷ್ಪಾರ್ಚನೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿನೋಬನಗರ, ಕುವೆಂಪು ರಸ್ತೆ, ಜೈಲ್ ಸರ್ಕಲ್, ಶಿವಪ್ಪನಾಯಕ ವೃತ್ತ, ಗೋಪಿ ಸರ್ಕಲ್, ಮಹಾವೀರ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಆಕರ್ಷಕ ಬೃಹತ್ ರಂಗೋಲಿಗಳನ್ನು ಹಾಕಲಾಗಿತ್ತು.  ಗೋಪಿ ವೃತ್ತದಲ್ಲಿ ಹಾಕಲಾಗಿದ್ದ ಬೃಹತ್ ರಂಗೋಲಿ ಜನಮನ ಸೂರೆಗೊಂಡಿದ್ದು, ನೋಡುಗರ ಮನಸೆಳೆಯಿತು.

ಕ್ಷೀರಾಭಿಷೇಕ: ಗೋಪಿ ವೃತ್ತದಲ್ಲಿ ಅಳವಡಿಸಲಾಗಿದ್ದ ಶಿವಾಜಿಯ ಭಾವಚಿತ್ರದ ಬೃಹತ್ ಕಟೌಟ್‌ಗೆ ಕ್ಷೀರಾಭಿಷೇಕ ಮಾಡುವ ಮೂಲಕ ಯುವಕರು ರಾಷ್ಟ್ರಭಕ್ತಿ ಸಮರ್ಪಿಸಿದರು. ಇನ್ನು ಕೆಲವರು ಶಿವಪ್ಪನಾಯಕ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದರು.

ಶಿವಪ್ಪನಾಯಕ ಪ್ರತಿಮೆ ಮುಂದೆ ಗಜಾಲಂಕಾರ ಹಾಗೂ ಥರಾವರಿಯ ಪುಷ್ಪಗಳಿಂದಲೂ ಮಂಟಪದ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು. ನೆಹರೂ ಕ್ರೀಡಾಂಗಣದಿಂದ ಹೊರಟ ಪಥಸಂಚಲನದಲ್ಲಿ ಆಟೋಗಳಿಗೆ ಗಜಾಲಂಕಾರ ಮಾಡುವ ಮೂಲಕ ಗಮನ ಸೆಳೆಯಲಾಯಿತು.

ಮೆರವಣಿಗೆಯಲ್ಲಿ ಮಾತೆಯರು: ಗಣವೇಷಧಾರಿಗಳ ಪಥ ಸಂಚಲನ ಮುಂದೆ ಸಾಗುತ್ತಿದ್ದಂತೆ ಮಾತೆಯರು ಕೂಡ ಮಾರ್ಗದಲ್ಲಿ ಮೆರವಣಿಗೆಯನ್ನು ಹಿಂಬಾಲಿಸಿದರು. ಬಹುತೇಕ ಮಹಿಳೆಯರು  ಅಂಬೇಡ್ಕರ್ ವೃತ್ತ, ಲಕ್ಷ್ಮೀ ಚಿತ್ರಮಂದಿರ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತ ಮೊದಲಾದ ಕಡೆಗಳಲ್ಲಿ ಜಮಾಯಿಸಿ ಸಾತ್ ನೀಡಿದರು.

ನಾಲ್ಕೂ ಕಡೆಗಳಿಂದ ಆಗಮಿಸಿದ ಪಥಸಂಚನ ಗೋಪಿವೃತ್ತದಲ್ಲಿ ಮಹಾ ಸಂಗಮವಾಗುತ್ತಿದ್ದಂತೆ ಗಣವೇಷಧಾರಿಗಳನ್ನು ನೋಡುವುದೇ ಒಂದು ಸಂಭ್ರಮವಾಗಿತ್ತು.ಸಂಸ್ಕೃತಿಯ ಪ್ರತೀಕವಾಗಿದ್ದ ಮನಮೋಹಕ ರಂಗೋಲೆ, ರಾಷ್ಟ್ರ ಭಕ್ತಿ ಬಿಂಬಿಸುತ್ತಿದ್ದ ಛತ್ರಪತಿ ಶಿವಾಜಿ ಫ್ಲೆಕ್ಸ್ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿತ್ತು.

ಗೋಪಿ ವೃತ್ತದಲ್ಲಿ ಬಸವಕೇಂದ್ರದ ಶ್ರೀ ಬಸವ ಮರುಸಿದ್ದಮಹಾಸ್ವಾಮೀಜಿ ಪಾಲ್ಗೊಂಡು ಪುಷ್ಪಾರ್ಚನೆ ಮಾಡಿದರು. ಪಥಸಂಚಲನದಲ್ಲಿ ಮಾಜಿ ಸಿಎಂ ಹಾಗೂ ಸಂಸದ ಬಿ.ಎಸ್.ಯಡಿಯೂರಪ್ಪ,ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಪರಿಷತ್ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಪಿ.ವಿ.ಕೃಷ್ಣಭಟ್, ಶಾಸಕರಾದ ಬಿ.ವೈ.ರಾಘವೇಂದ್ರ, ಸಿ.ಟಿ.ರವಿ ಹಾಗೂ ಪ್ರಮುಖರು ಪಾಲ್ಗೊಂಡಿದ್ದರು.

ಹೊಸಬರಲ್ಲೂ  ಕಂಡುಬಂದ ಸಾಮೂಹಿಕ ಶಿಸ್ತು ..

ಶಿವಮೊಗ್ಗ : ಅದು ಕೇವಲ ಆರೆಸ್ಸೆಸ್ಸ್ ಸ್ವಯಂಸೇವಕರ ಕಾರ್ಯಕ್ರಮದಂತೆ  ಕಾಣುತ್ತಲೇ ಇರಲಿಲ್ಲ. ಇಡೀ ಶಿವಮೊಗ್ಗ ನಗರದ ನಾಗರಿಕರು ತಮ್ಮದೇ ಉತ್ಸವ ಎಂಬಂತೆ ಪರಿವರ್ತನ ಸಮಾವೇಶಕ್ಕೆ  ಪ್ರತ್ಯಕ್ಷ ಸಾಕ್ಷಿಯಾದರು.ರಾಷ್ಟ್ರೀಯ ಸ್ವಯಂಸೇವಕ ಸಂಘವು ಆಯೋಜಿಸಿದ್ದ  ಶಿವಮೊಗ್ಗ ಜಿಲ್ಲೆಯ  ಸ್ವಯಂಸೇವಕರ ಪಥ ಸಂಚಲನವು  ಶಿವಮೊಗ್ಗ ನಗರದಲ್ಲಿ  ಸಂಘದ ಪರವಾದ ಭಾರೀ ಹವಾ ಸೃಷ್ಟಿ ಮಾಡುವಲ್ಲಿ  ಸಫಲವಾಯಿತು.

ಪಥಸಂಚಲನ ಸಾಗುವ ದಾರಿಯಲ್ಲಿ ಅಲಂಕಾರಕ್ಕೆ  ಸ್ವಯಂಸೇವಕರು ತಮ್ಮದೇ ವ್ಯವಸ್ಥೆ ರೂಪಿಸಿದ್ದರೂ  ಸಾರ್ವಜನಿಕರೂ ಕೂಡಾ ದಾರಿಯಲ್ಲಿ ರಂಗೋಲಿ ಹಾಕಿ, ಬ್ಯಾನರ್‌ಗಳ ಮೂಲಕ ಸ್ವಯಂಸೇವಕರನ್ನು  ಸ್ವಾಗತಿಸಿದ್ದು  ವಿಶೇಷವಾಗಿತ್ತು.ಆರ್‌ಎಸ್‌ಎಸ್ ನಿಜವಾದ ಹುಲಿ ಎನ್ನುವ  ಹುಲಿಯ ಚಿತ್ರವಿರುವ ಫ್ಲೆಕ್ಸ್ ಕೂಡಾ ಅಲ್ಲಲ್ಲಿ ಗಮನ ಸೆಳೆಯಿತು.

ಶಿಸ್ತಿಗೆ ಹೆಸರಾದ ಆರ್‌ಎಸ್‌ಎಸ್ ಸ್ವಯಂಸೇವಕರು ಸಾಗುವ ಮಾರ್ಗದಲ್ಲಿ  ಪಥಸಂಚಲನವನ್ನು  ಕಣ್ತುಂಬಿಕೊಳ್ಳಲು ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ   ರಸ್ತೆಯ ಇಕ್ಕೆಲಗಳಲ್ಲೂ  ನಿಂತು  ವೀಕ್ಷಿಸುತ್ತಿದ್ದುದು ಕಂಡುಬಂತು. ಪಥಸಂಚಲನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.

ನಾಲ್ಕು ಕಡೆಗಳಿಂದ ಹೊರಟ ಪಥಸಂಚಲನವು ಮೊದಲು ಎರಡೆರಡು ಒಂದಾಗಿ ನಂತರ ಗೋಪಿ ವೃತ್ತದಲ್ಲಿ ನಾಲ್ಕೂ ಕಡೆಗಳಿಂದ ಬಂದ ಸಂಚಲನವು ಒಂದಾಗುವಂತೆ ಮಾಡಿದ್ದ ಆರ್‌ಎಸ್‌ಎಸ್ ಪೂರ್ವ ತಯಾರಿಯ ಬಗ್ಗೆ ಎಲ್ಲರಿಂದಲೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು. ಗೋಪಿ ವೃತ್ತದಲ್ಲಿ ನಡೆದ ಮಹಾಸಂಗಮವಂತೂ ನೋಡುಗರ ಕಣ್ಣಿಗೆ ಹಬ್ಬದಂತಿತ್ತು. ನಿಗದಿತ ಸಮಯಕ್ಕೆ ನಿರ್ದಿಷ್ಟ ಸ್ಥಳಕ್ಕೆ  ಸಂಚಲನವು ತಲುಪಬೇಕಾದರೆ ಅದರ ನಿಖರ ಲೆಕ್ಕಾಚಾರ ಹಾಕಿ ಅದರಂತೆ ಸ್ವಯಂಸೇವಕರ ನಡಿಗೆಯ ವೇಗವನ್ನು  ನಿರ್ಧರಿಸಲಾಗಿತ್ತು ಎಂದರೆ ಅದೆಂತಹ ಅಪೂರ್ವ ಯತ್ನ ಎನ್ನುವುದು ಅರ್ಥವಾದೀತು.

ಪಥಸಂಚಲನವು ಎನ್‌ಇಎಸ್  ಮೈದಾನದಲ್ಲಿ  ಸಭಾ ಕಾರ್ಯಕ್ರಮವಾಗಿ ರೂಪುಗೊಳ್ಳುವಂತೆ ಆಯೋಜಿಸಿದ್ದರಿಂದ ಅಲ್ಲಿಗೆ ತಲುಪಿದ ಸ್ವಯಂಸೇವಕರು ತುಸು ವಿಶ್ರಾಂತಿ ಪಡೆದರು. ಎಲ್ಲಿಯೂ ಶಿಸ್ತಿನಲ್ಲಿ  ಲೋಪವಾಗದಂತೆ ಗಮನಿಸಲು ಕಾರ್ಯಕರ್ತರು ವಿಶೇಷ ಗಮನ ನೀಡಿದ್ದರು. ಇದರಿಂದಾಗಿ ಕಾರ್ಯಕ್ರಮದ ಕೊನೆಯವರೆಗೂ ಒಟ್ಟಾರೆ ಆರ್‌ಎಸ್‌ಎಸ್ ಎಂದರೆ ಶಿಸ್ತು ಎನ್ನುವುದನ್ನು  ಮತ್ತೊಮ್ಮೆ ಸಾಬೀತು ಮಾಡಿತು.

ಸಭಾ ಕಾರ್ಯಕ್ರಮದ ಭಾಗವಾಗಿ ಸಾವಿರಾರು ಸ್ವಯಂಸೇವಕರು ಕುಳಿತು ಮಾಡಿದ ಸರಳ ವ್ಯಾಯಾಮ ಕೂಡಾ  ವೀಕ್ಷಕರಿಗೆ ರೋಮಾಂಚನದ ಅನುಭವ ಉಂಟುಮಾಡಿತು. ಘೋಷ್ ವಾದ್ಯಗಳ ಹಿನ್ನೆಲೆಯಲ್ಲಿ, ಸಾವಿರಾರು ಸ್ವಯಂಸೇವಕರು  ಸಂಘಟಕರ ಸೂಚನೆಯನ್ನು  ಪಾಲಿಸುತ್ತಾ  ವ್ಯಾಯಾಮದಲ್ಲಿ  ಗಮನ ಕೇಂದ್ರೀಕರಿಸಿ ವೀಕ್ಷಕರ ಮನಸ್ಸು ಗೆದ್ದರು.

ಸಾಮೂಹಿಕ ಗೀತೆ ಗಾಯನ, ಬೌದ್ಧಿಕ್ ಮೊದಲು ಹಾಗೂ ನಂತರದ ಸೂಚನೆಗಳನ್ನು  ಪಾಲಿಸುವಲ್ಲಿ ಅನೇಕ ಹೊಸಬರು ಕೂಡಾ  ವಿಶೇಷ ಮುತುವರ್ಜಿ ವಹಿಸಿದ್ದರು. ಸಾಮೂಹಿಕವಾಗಿ ಪಾಲ್ಗೊಳ್ಳುವಾಗ  ಹೇಗೆ ಎಲ್ಲರಲ್ಲೂ  ಶಿಸ್ತು  ಎದ್ದುಕಾಣುವ ಅಂಶವಾಗುತ್ತದೆ ಎನ್ನುವುದು ಪರಿವರ್ತನ ತರುಣ ಸಮಾವೇಶದಲ್ಲಿ ಎದ್ದು ಕಂಡ ಮತ್ತೊಂದು ಸಂಗತಿ.

ಗಮನಸೆಳೆದ ಬೃಹತ್ ರಂಗೋಲಿಗಳು

ಸಮಾವೇಶದ ಅಂಗವಾಗಿ ಶಿವಮೊಗ್ಗ ನಗರದ ಗೋಪಿವೃತ್ತ, ಶಿವಪ್ಪ ನಾಯಕ ವೃತ್ತ ಹಾಗೂ ಸಮಾವೇಶದ ವೇದಿಕೆಯ ಮುಂಭಾಗ ಹಾಕಲಾಗಿದ್ದ ಬೃಹತ್ ರಂಗೋಲಿಗಳು ಗಮನಸೆಳೆದವು. ಹರಿಹರಪುರದ ಸುವರ್ಣಕ್ಕ ನೇತೃತ್ವದ ತಂಡ ಶನಿವಾರದಿಂದಲೇ ಈ ಕಾರ್ಯದಲ್ಲಿ ನಿರತವಾಗಿತ್ತು.  ಬೃಹದಾಕಾರದ ರಂಗೋಲಿಗಳನ್ನು ನೋಡಿ ಜನರು ನಿಜಕ್ಕೂ ಅಚ್ಚರಿಪಟ್ಟರು. ಸುವರ್ಣಕ್ಕವರೊಂದಿಗೆ ಈ ಕಾರ್ಯದಲ್ಲಿ ಸುಮಾರು ೨೦ ಜನರ ತಂಡ ಅವಿರತವಾಗಿ ಶ್ರಮಿಸಿದೆ. ಒಂದೊಂದು ರಂಗೋಲಿಯನ್ನು ಹಾಕಲು ಗಂಟೆಗಟ್ಟಲೆ ಶ್ರಮ ಹಾಕಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸುವರ್ಣಕ್ಕ ತಾಪಂ ಜನಪ್ರತಿನಿಧಿ. ಇವರು ಅಟಲ್ ಜೀ, ಆಡ್ವಾಣಿ ಅವರ ಬೃಹತ್ ಸಭಾ ಕಾರ್ಯಕ್ರಮದ ಸಂದರ್ಭದಲ್ಲೂ ಇವರ ರಂಗೋಲಿಗಳು ಜನಮನಸೂರೆಗೊಂಡಿವೆ.

೧೫ ಸಾವಿರ ಸ್ವಯಂಸೇವಕರು, ಅಷ್ಟೇ ಸಂಖ್ಯೆಯ ಸಾರ್ವಜನಿಕರು

ಪರಿವರ್ತನ ಜಿಲ್ಲಾ ತರುಣ ಸಮಾವೇಶದ ಪಥಸಂಚಲನದಲ್ಲಿ ಸುಮಾರು ೧೫ ಸಾವಿರ ಗಣವೇಷಧಾರೀ ಸ್ವಯಂಸೇವಕರು ಭಾಗವಹಿಸಿದ್ದರು. ಆ ಮೂಲಕ ಸಮಾವೇಶದ ಪೂರ್ವ ತಯಾರಿಯಂತೆ ಮತ್ತು ನಿಗದಿತ ಗುರಿಗಿಂತಲೂ ಸ್ವಯಂಸೇವಕರ ಜೋಡಣೆಯಲ್ಲಿ ಹೆಚ್ಚಿನ ಸಾಧನೆಯಾದಂತಾಗಿದೆ.

ಇನ್ನು ಸಾರ್ವಜನಿಕರು ಕೂಡಾ ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಪಥಸಂಚಲನ ನೋಡಲು ಹಾಗೂ ಸಂಚಲನಗಳ ಸಂಗಮ ಸ್ಥಳಗಳಲ್ಲಿ ಹಾಗೂ ಮಹಾಸಂಗಮವಾದ ಗೋಪಿ ವೃತ್ತದಲ್ಲಿ ಬಹುಮಹಡಿ ಕಟ್ಟಡಗಳನ್ನೇರಿ ಪಥಸಂಚಲನ ವೀಕ್ಷಿಸಿದರು. ೧೦ ರಿಂದ ೧೫ ಸಾವಿರದಷ್ಟು ಸಾರ್ವಜನಿಕರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುವಾರು ೫೦ ಸಾವಿರಕ್ಕೂ ಅಧಿಕ ಜನರು ಪಥಸಂಚಲನವನ್ನು ವೀಕ್ಷಿಸಿರಬಹುದೆಂದು ಅಂದಾಜಿಸಲಾಗಿದೆ.

  •  ಸಮಯಪಾಲನೆಯಲ್ಲಿ ಮತ್ತೆ ಸಾಟಿ ಇಲ್ಲ ಎಂಬುದನ್ನು ಸಾಬೀತು ಮಾಡಿದ ಆರ್‌ಎಸ್‌ಎಸ್.
  • ನಿಗದಿತ ಸಮಯಕ್ಕೆ ಸರಿಯಾಗಿ ಪಥಸಂಚಲನಗಳು ಆರಂಭ. ೩.೩೩ಕ್ಕೆ ಸರಿಯಾಗಿ ಗೋಪಿ ವೃತ್ತದಲ್ಲಿ ಮಹಾಸಂಗಮ.
  • ಸಂಜೆ ೫.೧೫ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭ. ಪೂರ್ವ ನಿಶ್ಚಿತ ಸಮಯಕ್ಕೇ ಮುಕ್ತಾಯ.
  • ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದ ಘೋಷ್ ವಾದನ. ಸುಮಾರು ೮೦೦ ಜನರ ೩೩ ತಂಡಗಳು ಇದರಲ್ಲಿ ಭಾಗಿ.
  • ಹೊರ ಊರಿನಿಂದ ಸಮಾವೇಶಕ್ಕೆ ಬಂದು ಗಣವೇಶಧಾರಿಗಳಾಗಿ ಪಥಸಂಚಲನದಲ್ಲಿ ಸ್ವಯಂಸೇವಕರು. ಸಮಾವೇಶ ನೋಡಲು ಹೊರ ಜಿಲ್ಲೆಗಳಿಂದಲೂ ಆಗಮಿಸಿದ ಸಾರ್ವಜನಿಕರು.
  •  ಶಿವಪ್ಪನಾಯಕ ವೃತ್ತದಲ್ಲಿ ಅಳವಡಿಸಲಾಗಿರುವ ಶಿವಾಜಿ ಮಹಾರಾಜರ ಬೃಹತ್ ಫ್ಲೆಕ್ಸ್‌ಗೆ ಪಥಸಂಚಲನ ಸಾಗುವ ಸಂದರ್ಭದಲ್ಲಿ ಹಾಲಿನ ಅಭಿಷೇಕ ನಡೆಯಿತು.
  • ಕೇಸರಿ ಬಣ್ಣದ ಬಲೂನುಗಳನ್ನು ಹಾರಿಬಿಡುವ ಮೂಲಕ ಪಥಸಂಚಲನವನ್ನು ಗೋಪಿವೃತ್ತದಲ್ಲಿ ಸ್ವಾಗತಿಸಲಾಯಿತು.
  • ಸಮಾವೇಶದ ವೇದಿಕೆ ಕಾರ್ಯಕ್ರಮದ ಮುಕ್ತಾಯವಾದ ಬಳಿಕ ಆಕಾಶ ಬುಟ್ಟಿಗಳನ್ನು ಹಾರಿ ಬಿಡಲಾಯಿತು. ಪಟಾಕಿ ಸಿಡಿಸಿ ಸಂತಪ ವ್ಯಕ್ತಪಡಿಸಲಾಯಿತು.

ಉಪಸ್ಥಿತರಿದ್ದ ಸಂಘದ ಹಿರಿಯ ಅಧಿಕಾರಿಗಳು…

ಪಟ್ಟಾಭಿರಾಮ್ – ಕರ್ನಾಟಕ ಪ್ರಾಂತ ಬೌದ್ಧಿಕ್ ಶಿಕ್ಷಣ ಪ್ರಮುಖ್

ಚಂದ್ರಶೇಖರ ಜಾಗೀರದಾರ್ –  ಪ್ರಾಂತ ಶಾರೀರಿಕ್ ಪ್ರಮುಖ್

ದ. ಮ. ರವೀಂದ್ರ –  ಹಿರಿಯ ಪ್ರಚಾರಕರು.

ದಿನೇಶ್ ಭಾರತೀಪುರ – ಶಿವಮೊಗ್ಗ ವಿಭಾಗ ಕಾರ್ಯವಾಹರು.

ದಿನೇಶ್ ಪೈ              –  ವಿಭಾಗ ಸಹಕಾರ್ಯವಾಹರು.

ಕೃಷ್ಣಪ್ರಸಾದ್ – ವಿಭಾಗ ಪ್ರಚಾರಕರು.

ಗಣವೇಶ ಧರಿಸಿದ್ದ ಭಾಜಪಾ ಪ್ರಮುಖರು…

ಬಿ.ಎಸ್. ಯಡಿಯೂರಪ್ಪ – ಭಾಜಪ ರಾಷ್ಟ್ರೀಯ ಉಪಾಧ್ಯಕ್ಷರು.

ಭಾನುಪ್ರಕಾಶ್ – ಭಾಜಪ ರಾಜ್ಯ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರು.

ಆಯನೂರು ಮಂಜುನಾಥ್ – ರಾಜ್ಯಸಭಾ ಸದಸ್ಯರು.

ಡಿ.ಹೆಚ್. ಶಂಕರಮೂರ್ತಿ- ವಿಧಾನ ಪರಿಷತ್ತಿನ ಸಭಾಧ್ಯಕ್ಷರು.

ಕೆ.ಎಸ್. ಈಶ್ವರಪ್ಪ – ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರು.

ಸಿ.ಟಿ. ರವಿ, ಭಾಜಪಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರು.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ – ವಿಧಾನಪರಿಷತ್‌ನ ವಿರೋಧಪಕ್ಷದ ಸಚೇತಕರು.

ಆರ್.ಕೆ. ಸಿದ್ಧರಾಮಣ್ಣ – ವಿಧಾನಪರಿಷತ್ ಸದಸ್ಯರು.

ಎಸ್. ದತ್ತಾತ್ರಿ – ಜಿಲ್ಲಾ ಬಿಜೆಪಿ ಅಧ್ಯಕ್ಷರು.

ಗಿರೀಶ್ ಪಟೇಲ್ – ಕಾಡಾ ಮಾಜಿ ಅಧ್ಯಕ್ಷರು.

ಪದ್ಮನಾಭ ಭಟ್ – ಎಂಎಡಿಬಿ ಮಾಜಿ ಅಧ್ಯಕ್ಷರು.

ಕೆ.ಜಿ. ಕುಮಾರಸ್ವಾಮಿ, ಆರಗ ಜ್ಞಾನೇಂದ್ರ – ಮಾಜಿ ಶಾಸಕರು.

ಪರಿವಾರ ಸಂಘಟನೆಗಳ ಪ್ರಮುಖರು…

ಡಿ.ಕೆ. ಸದಾಶಿವ – ಬಿಎಂಎಸ್ ಅಖಿಲ ಭಾರತೀಯ ಉಪಾಧ್ಯಕ್ಷರು.

ರಾ. ಶೇಷಾದ್ರಿ            – ಬಿಎಂಎಸ್ ರಾಜ್ಯ ಕಾರ್ಯಾಲಯ ಕಾರ್ಯದರ್ಶಿ.

ಜಿ.ಆರ್. ಜಗದೀಶ್ – ವಿದ್ಯಾ ಭಾರತಿ ಕ್ಷೇತ್ರ ಸಂಘಟನಾ ಕಾರ್ಯದರ್ಶಿ.

ಸುರೇಶ – ಹಿಂದು ಸೇವಾ ಪ್ರತಿಷ್ಠಾನದ ಸಂಚಾಲಕರು.

ಪಿ.ವಿ. ಕೃಷ್ಣಭಟ್ – ಪ್ರಜ್ಞಾಪ್ರವಾಹ ಪ್ರಮುಖರು ಹಾಗೂ ವಿಧಾನಪರಿಷತ್ ಸದಸ್ಯರು.

ಜಗದೀಶ್ – ಸ್ವದೇಶೀ ಜಾಗರಣ ಮಂಚ್‌ನ ರಾಜ್ಯ ಕಾರ್ಯದರ್ಶಿ.

ಮುನಿಯಪ್ಪ               – ಧರ್ಮ ಜಾಗರಣದ ಪ್ರಾಂತ ಪ್ರಮುಖ್.

ಶ್ರೀಮತಿ ಅಂಬಿಕಾ ನಾಗಭೂಷಣ  – ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಮಧ್ಯಕ್ಷೇತ್ರದ ಶಾರೀರಿಕ ಪ್ರಮುಖ್.

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Delegation from Yezidi Community meets RSS Sarasanghachalak Mohan Bhagwat at Mysuru

Delegation from Yezidi Community meets RSS Sarasanghachalak Mohan Bhagwat at Mysuru

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Photo of the week: ABVP activists hoist Tricolour near disputed land on Bangladesh border

Photo of the week: ABVP activists hoist Tricolour near disputed land on Bangladesh border

September 13, 2011
Imbuing the spirit of Gou-Samrakshan, ‘Gou Vandana’ held as a Pre-Fair event of upcoming HSSF-2016

Imbuing the spirit of Gou-Samrakshan, ‘Gou Vandana’ held as a Pre-Fair event of upcoming HSSF-2016

November 12, 2016
ಹಿಪ್ಪೋಕ್ರೇಟ್ ಶಪಥದಿಂದ ಚರಕ ಶಪಥದವರೆಗೆ….

ಹಿಪ್ಪೋಕ್ರೇಟ್ ಶಪಥದಿಂದ ಚರಕ ಶಪಥದವರೆಗೆ….

February 16, 2022
Kanupur: RSS Chief Mohan Bhagwat says ‘Govt should pass a bill on Ram Mandir in Ayodhya’.

Kanupur: RSS Chief Mohan Bhagwat says ‘Govt should pass a bill on Ram Mandir in Ayodhya’.

February 5, 2013

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In